ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ರಕ್ಷಣೆ ನೀಡುವ ಕುರಿತು

ಜಗತ್ತಿನ ಅತ್ಯಂತ ಸುಧಾರಿತ ಭದ್ರತೆ ಮೂಲಸೌಕರ್ಯಗಳಲ್ಲೊಂದರಿಂದ Google ಸೇವೆಗಳು ನಿರಂತರವಾಗಿ ರಕ್ಷಿಸಲ್ಪಡುತ್ತವೆ. ಈ ಅಂತರ್ನಿರ್ಮಿತ ಭದ್ರತೆಯು, ಆನ್‌ಲೈನ್ ​​ಬೆದರಿಕೆಗಳನ್ನು ಪತ್ತೆಹಚ್ಚುತ್ತದೆ ಮತ್ತು ತಡೆಯುತ್ತದೆ. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿಯು ಸುರಕ್ಷಿತವಾಗಿದೆಯೆಂದು ನೀವು ವಿಶ್ವಾಸವಿಡಬಹುದು.

ನಿರಂತರವಾಗಿ ಅಪ್‌ಡೇಟ್‌ ಮಾಡಲಾದ ಭದ್ರತಾ ತಂತ್ರಜ್ಞಾನಗಳ ಮೂಲಕ ನಿಮ್ಮನ್ನು ಸುರಕ್ಷಿತವಾಗಿರಿಸುವ ಕುರಿತು

 • ಡೇಟಾವನ್ನು ರವಾನೆ ಮಾಡುವಾಗ ಎನ್‌ಕ್ರಿಪ್ಶನ್‌ ಅದನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿ ಇರಿಸುತ್ತದೆ

  ಎನ್‌ಕ್ರಿಪ್ಶನ್‌ ನಮ್ಮ ಸೇವೆಗಳಿಗೆ ಉನ್ನತ ಮಟ್ಟದ ಭದ್ರತೆ ಮತ್ತು ಗೌಪ್ಯತೆಯನ್ನು ಒದಗಿಸುತ್ತದೆ. ನೀವು ಇಮೇಲ್ ಕಳುಹಿಸುವುದು, ವೀಡಿಯೊ ಹಂಚಿಕೊಳ್ಳುವುದು, ವೆಬ್‌ಸೈಟ್‌ಗೆ ಭೇಟಿ ನೀಡುವುದು ಅಥವಾ ನಿಮ್ಮ ಫೋಟೋಗಳನ್ನು ಸಂಗ್ರಹಿಸುವಂತಹ ಕಾರ್ಯಗಳನ್ನು ಮಾಡಿದಾಗ, ನೀವು ರಚಿಸುವ ಡೇಟಾವು ನಿಮ್ಮ ಸಾಧನ, Google ಸೇವೆಗಳು ಮತ್ತು ನಮ್ಮ ಡೇಟಾ ಕೇಂದ್ರಗಳ ನಡುವೆ ಚಲಿಸುತ್ತದೆ. HTTPS ಮತ್ತು ವರ್ಗಾವಣೆ ಲೇಯರ್ ಭದ್ರತೆಯಂತಹ ಪ್ರಮುಖ ಎನ್‌ಕ್ರಿಪ್ಶನ್‌ ತಂತ್ರಜ್ಞಾನ ಸೇರಿದಂತೆ, ನಾವು ಈ ಡೇಟಾವನ್ನು ಬಹು ಲೇಯರ್‌ಗಳ ಭದ್ರತೆಯ ಮೂಲಕ ರಕ್ಷಿಸುತ್ತೇವೆ.

 • ನಮ್ಮ ಕ್ಲೌಡ್ ಅಡಿವ್ಯವಸ್ಥೆಯು ಡೇಟಾವನ್ನು 24/7 ರಕ್ಷಿಸುತ್ತದೆ

  ಕಸ್ಟಮ್ ವಿನ್ಯಾಸಗೊಳಿಸಿದ ಡೇಟಾ ಕೇಂದ್ರಗಳಿಂದ ಹಿಡಿದು ಖಂಡಗಳ ನಡುವೆ ಡೇಟಾವನ್ನು ವರ್ಗಾಯಿಸುವ ಸಮುದ್ರದೊಳಗಿನ ಫೈಬರ್ ಕೇಬಲ್‌ಗಳವರೆಗೆ, ವಿಶ್ವದ ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕ್ಲೌಡ್ ಅಡಿವ್ಯವಸ್ಥೆಗಳಲ್ಲಿ ಒಂದನ್ನು ನಾವು ನಿರ್ವಹಿಸುತ್ತೇವೆ. ಮತ್ತು ನಿಮ್ಮ ಡೇಟಾವನ್ನು ರಕ್ಷಿಸಲು ಮತ್ತು ನಿಮಗೆ ಇದರ ಅಗತ್ಯವಿರುವಾಗ ಲಭ್ಯವಿರುವಂತೆ ಮಾಡಲು, ಅದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ವಾಸ್ತವವಾಗಿ, ನಾವು ಡೇಟಾವನ್ನು ಬಹು ಡೇಟಾ ಕೇಂದ್ರಗಳಾದ್ಯಂತ ವಿತರಿಸುತ್ತೇವೆ, ಇದರಿಂದ ಬೆಂಕಿ ಅನಾಹುತ ಅಥವಾ ಪ್ರಕೃತಿ ವಿಕೋಪವೊಂದು ಸಂಭವಿಸಿದಾಗ, ಡೇಟಾವನ್ನು ಸ್ವಯಂಚಾಲಿತವಾಗಿ ಮತ್ತು ಸಲೀಸಾಗಿ ಸ್ಥಿರವಾದ ಮತ್ತು ಸುರಕ್ಷಿತವಾದ ಸ್ಥಳಗಳಿಗೆ ವರ್ಗಾಯಿಸಬಹುದು.

 • ಸಂಶಯಾಸ್ಪದ ಇಮೇಲ್‌ಗಳಿಂದ Gmail ನಿಮ್ಮನ್ನು ರಕ್ಷಿಸುತ್ತದೆ ಮತ್ತು ಅಪಾಯಗಳ ಕುರಿತು ಮುನ್ನೆಚ್ಚರಿಕೆ ನೀಡುತ್ತದೆ

  ಹಲವಾರು ಮಾಲ್‌ವೇರ್ ಮತ್ತು ಫಿಶಿಂಗ್ ಆಕ್ರಮಣಗಳು ಇಮೇಲ್‌ನಿಂದಲೇ ಪ್ರಾರಂಭವಾಗುತ್ತವೆ. ಸ್ಪ್ಯಾಮ್, ಫಿಶಿಂಗ್ ಮತ್ತು ಮಾಲ್‌ವೇರ್‌ನಿಂದ Gmail ನಿಮ್ಮನ್ನು ಇತರ ಯಾವುದೇ ಇಮೇಲ್ ಸೇವೆಗಿಂತಲೂ ಉತ್ತಮವಾಗಿ ರಕ್ಷಿಸುತ್ತದೆ. ಬಳಕೆದಾರರು ಸ್ಪ್ಯಾಮ್ ಎಂದು ಗುರುತಿಸಿದ ಇಮೇಲ್‌ಗಳ ಗುಣಲಕ್ಷಣಗಳನ್ನು ಪತ್ತೆಹಚ್ಚಲು, ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿವಂತಿಕೆಯನ್ನು ಬಳಸಿಕೊಂಡು Gmail ಕೋಟ್ಯಾಂತರ ಸಂದೇಶಗಳ ಮಾದರಿಗಳನ್ನು ವಿಶ್ಲೇಷಿಸುತ್ತದೆ ಮತ್ತು 99.9 ಪ್ರತಿಶತದಷ್ಟು ಅನುಮಾನಾಸ್ಪದ ಅಥವಾ ಅಪಾಯಕಾರಿ ಇಮೇಲ್‌ಗಳು ನಿಮ್ಮನ್ನು ತಲುಪುವ ಮೊದಲೇ ನಿರ್ಬಂಧಿಸಲು ಆ ಗುರುತುಗಳನ್ನು ಬಳಸುತ್ತದೆ.

  ಸಂಭಾವ್ಯ ಅಪಾಯಕಾರಿ ಇಮೇಲ್ ಒಂದು ಬಂದಾಗ, ಎಚ್ಚರಿಕೆಗಳನ್ನು ಕಳುಹಿಸುವಂತಹ, ಅನುಮಾನಾಸ್ಪದ ಇಮೇಲ್‌ಗಳಿಗಾಗಿ ನೀವು ಕೈಯಾರೆ "ಸ್ಪ್ಯಾಮ್ ವರದಿ" ಮಾಡುವಂತಹ ಮತ್ತು ಗೌಪ್ಯತೆ ಮೋಡ್‌ನಂತಹ ಇತರ ರಕ್ಷಣೆಗಳನ್ನು Gmail ನಿಮಗೆ ಒದಗಿಸುತ್ತದೆ. ಗೌಪ್ಯತೆ ಮೋಡ್ ಎಂದರೆ ನಿಮ್ಮ ಸಂದೇಶಗಳನ್ನು ನಿಗದಿಪಡಿಸಲಾದ ಸಮಯದ ನಂತರ ಅವಧಿ ಮುಗಿಯುವಂತೆ ಮಾಡುವ ಹಾಗೂ ನಿಮ್ಮ ಸಂದೇಶವನ್ನು ಫಾರ್ವರ್ಡ್ ಮಾಡುವ, ನಕಲಿಸುವ, ಡೌನ್‌ಲೋಡ್ ಮಾಡುವ ಅಥವಾ ಮುದ್ರಿಸುವ ಆಯ್ಕೆಯನ್ನು ಸ್ವೀಕರಿಸುವವರಿಂದ ತೆಗೆದುಹಾಕುವ ಒಂದು ರಕ್ಷಣೆಯಾಗಿದೆ

 • ಸ್ವಯಂಚಾಲಿತ Chrome ಅಪ್‌ಡೇಟ್‌ಗಳು ನಿಮ್ಮನ್ನು ಮಾಲ್‌ವೇರ್‌ ಹಾಗೂ ವಂಚಿಸುವ ಸೈಟ್‌ಗಳಿಂದ ರಕ್ಷಿಸುತ್ತವೆ

  ಭದ್ರತಾ ತಂತ್ರಜ್ಞಾನಗಳು ಯಾವಾಗಲೂ ಬದಲಾಗುತ್ತಿರುವುದರಿಂದ, ನೀವು ಬಳಸುತ್ತಿರುವ ಬ್ರೌಸರ್‌ನ ಆವೃತ್ತಿಯು ಅಪ್ ಟು ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಲು Chrome ನಿಯಮಿತವಾಗಿ ಪರಿಶೀಲಿಸುತ್ತದೆ. ಇದು ಇತ್ತೀಚಿನ ಭದ್ರತಾ ಪರಿಹಾರಗಳು, ಮಾಲ್‌ವೇರ್ ಹಾಗೂ ವಂಚಿಸುವ ಸೈಟ್‌ಗಳಿಂದ ರಕ್ಷಣೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ. ಮತ್ತು ಇದು ಸ್ವಯಂಚಾಲಿತವಾಗಿ ಅಪ್‌ಡೇಟ್‌ ಆಗುತ್ತದೆ, ಹಾಗಾಗಿ ಇತ್ತೀಚಿನ Chrome ಭದ್ರತಾ ತಂತ್ರಜ್ಞಾನದಿಂದ ರಕ್ಷಣೆ ಪಡೆಯುವುದು ಬಹಳ ಸುಲಭ.

 • ದುರುದ್ದೇಶಪೂರಿತ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನಿಮ್ಮ ಮೇಲೆ ಪ್ರಭಾವ ಬೀರುವ ಮೊದಲೇ ನಿರ್ಬಂಧಿಸುವಿಕೆ

  ಮಾಲ್‌ವೇರ್‌ ಹೊಂದಿರುವ, ನೀವು ನೋಡಲು ಬಯಸುವ ವಿಷಯವನ್ನು ಮರೆಮಾಡುವ, ನಕಲಿ ವಸ್ತುಗಳನ್ನು ಪ್ರಚಾರ ಮಾಡುವ ಅಥವಾ ಅನ್ಯಥಾ ನಮ್ಮ ಜಾಹೀರಾತು ನೀತಿಗಳನ್ನು ಉಲ್ಲಂಘಿಸುವ ಜಾಹೀರಾತುಗಳಿಂದ ನಿಮ್ಮ ಸುರಕ್ಷತಾ ಮತ್ತು ಆನ್‌ಲೈನ್‌ ಅನುಭವದ ಮೇಲೆ ಪರಿಣಾಮಗಳಾಗಿರಬಹುದು. ನಾವು ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಲೈವ್ ವಿಮರ್ಶಕರು ಹಾಗೂ ಅತ್ಯಾಧುನಿಕ ಸಾಫ್ಟ್‌ವೇರ್‌ ಬ್ಲಾಕ್‌ಗಳ ಸಂಯೋಜನೆಯ ಮೂಲಕ - ಸರಾಸರಿ, ಸೆಕೆಂಡಿಗೆ 100 ರಂತೆ - ನಾವು ಪ್ರತಿ ವರ್ಷ ನಾವು ಕೋಟ್ಯಾಂತರ ಕಳಪೆ ಗುಣಮಟ್ಟದ ಜಾಹೀರಾತುಗಳನ್ನು ನಿರ್ಬಂಧಿಸುತ್ತೇವೆ. ಆಕ್ಷೇಪಾರ್ಹ ಜಾಹೀರಾತುಗಳನ್ನು ವರದಿ ಮಾಡಲು ಮತ್ತು ನೀವು ನೋಡಲು ಬಯಸುವ ಜಾಹೀರಾತುಗಳ ಪ್ರಕಾರಗಳನ್ನು ನಿಯಂತ್ರಿಸಲು, ನಾವು ನಿಮಗೆ ಪರಿಕರಗಳನ್ನು ಸಹ ನೀಡುತ್ತೇವೆ. ಮತ್ತು ಇಂಟರ್ನೆಟ್ ಅನ್ನು ಎಲ್ಲರಿಗಾಗಿ ಸುರಕ್ಷಿತವನ್ನಾಗಿಸುವಂತೆ ಸಹಾಯ ಮಾಡಲು, ನಮ್ಮ ಒಳನೋಟಗಳನ್ನು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ನಾವು ಸಕ್ರಿಯವಾಗಿ ಪ್ರಕಟಿಸುತ್ತೇವೆ.

 • ಡೇಟಾಕ್ಕೆ ನೇರವಾದ ಪ್ರವೇಶವನ್ನು ನಾವು ಯಾವ ಸರ್ಕಾರಗಳಿಗೂ ನೀಡುವುದಿಲ್ಲ

  ಬಳಕೆದಾರರ ಡೇಟಾ, ನಮ್ಮ ಪುಟಗಳಲ್ಲಿ ಬಳಕೆದಾರರು ಕಳೆವ ಸಮಯದ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿರುವ ನಮ್ಮ ಸರ್ವರ್‌ಗಳಿಗೆ ಅಥವಾ ಬಳಕೆದಾರರ ಮಾಹಿತಿಗೆ ನಾವು ಯಾರಿಗೂ "ಹಿಂಬದಿಯ ಬಾಗಿಲಿನಿಂದ ಪ್ರವೇಶವನ್ನು ಒದಗಿಸುವುದಿಲ್ಲ". ಇದರರ್ಥ ಅಮೇರಿಕಾವಾಗಲಿ ಅಥವಾ ಇನ್ನಿತರ ದೇಶದ ಸರ್ಕಾರಗಳಾಗಲೀ ನಮ್ಮ ಬಳಕೆದಾರರ ಮಾಹಿತಿಗೆ ನೇರ ಪ್ರವೇಶವನ್ನು ಹೊಂದಿರುವುದಿಲ್ಲ. ಬಳಕೆದಾರರ ಮಾಹಿತಿಯನ್ನು ಕೋರಿ ಬರುವ ಯಾವುದೇ ಮಾಹಿತಿಗಳನ್ನು ನಾವು ಪರಿಶೀಲಿಸುತ್ತೇವೆ. ಒಂದು ವೇಳೆ ಆ ವಿನಂತಿಯು ವ್ಯಾಪಕವಾದ ಸಮಯವಾಕಶವನ್ನು ಬೇಡಿದಲ್ಲಿ ಅದನ್ನು ನಾವು ಹಿಂದಕ್ಕೆ ಕಳುಹಿಸುತ್ತೇವೆ ಹೊಂದಿದ್ದಲ್ಲಿ ಮತ್ತು ವಿನಂತಿ ಸಲ್ಲಿಸಿದವರಿಗೆ ಡೇಟಾ ವಿನಂತಿಗಳ ಕುರಿತು ನಮ್ಮ ಪಾರದರ್ಶಕತೆ ವರದಿ ಕುರಿತು ತಿಳಿಸುತ್ತೇವೆ.

 • Google Play ರಕ್ಷಣೆಯ ಮೂಲಕ ನಿಮ್ಮ Android ಸಾಧನ, ಆ್ಯಪ್‌ಗಳು ಮತ್ತು ಡೇಟಾವನ್ನು ಸುರಕ್ಷಿತವಾಗಿರಿಸುವುದು

  Google Play ರಕ್ಷಣೆ, ಇದು ನಿಮ್ಮ Android ಸಾಧನದಲ್ಲಿ ಬಿಲ್ಟ್ ಇನ್ ಆಗಿದೆ ಮತ್ತು ನಿಮ್ಮ ಸಾಧನ, ಡೇಟಾ ಮತ್ತು ಆ್ಯಪ್‌ಗಳನ್ನು ಸುರಕ್ಷಿತವಾಗಿರಿಸಲು ನಿರಂತರವಾಗಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು ಆ್ಯಪ್‌ಗಳಲ್ಲಿ ಎಲ್ಲಿಂದ ಡೌನ್‌ಲೋಡ್ ಮಾಡುತ್ತಿರುವಿರಿ ಎಂಬುದನ್ನು ಲೆಕ್ಕಿಸದೆಯೇ – ಡೌನ್‌ಲೋಡ್ ಮಾಡುವ ಮೊದಲು, ನಡುವೆ ಮತ್ತು ನಂತರದ ಸಮಯದಲ್ಲಿ ಅವುಗಳನ್ನು ನಾವು ಸ್ಕ್ಯಾನ್ ಮಾಡುತ್ತೇವೆ.

 • ವೈಯಕ್ತೀಕರಿಸಿದ ಭದ್ರತಾ ಅಧಿಸೂಚನೆಗಳು ನಿಮ್ಮನ್ನು ಸಂಭಾವ್ಯ ಸಮಸ್ಯೆಗಳ ಬಗೆಗೆ ಎಚ್ಚರಿಸುತ್ತವೆ ಮತ್ತು ನೀವು ಸುರಕ್ಷಿತವಾಗಿರಲು ಸಹಾಯ ಮಾಡುತ್ತವೆ

  ಅನುಮಾನಾಸ್ಪದ ಲಾಗಿನ್ ಅಥವಾ ದುರುದ್ದೇಶಪೂರಿತ ವೆಬ್‌ಸೈಟ್, ಫೈಲ್ ಅಥವಾ ಆ್ಯಪ್‌ನಂತಹ ನೀವು ತಿಳಿದಿರಲೇಬೇಕು ಎಂದು ನಾವು ಭಾವಿಸುವ ಏನನ್ನಾದರೂ ನಾವು ಪತ್ತೆಹಚ್ಚಿದರೆ, ಪೂರ್ವಭಾವಿಯಾಗಿ ನಿಮಗೆ ಸೂಚಿಸುತ್ತೇವೆ ಮತ್ತು ನಿಮ್ಮ ಉತ್ತಮ ಸಂರಕ್ಷಣೆಗಾಗಿ ಮಾರ್ಗದರ್ಶನವನ್ನು ನೀಡಿ ನಿಮಗೆ ಸಹಾಯ ಮಾಡುತ್ತೇವೆ. ಉದಾಹರಣೆಗೆ, Gmail ನಲ್ಲಿ, ನಿಮ್ಮ ಭದ್ರತೆಯನ್ನು ಅಪಾಯದಲ್ಲಿರಿಸಬಹುದಾದ ಲಗತ್ತೊಂದನ್ನು ನೀವು ಡೌನ್‌ಲೋಡ್‌ ಮಾಡುವ ಮೊದಲು ಅಥವಾ ನಿಮಗೆ ಸಂಬಂಧಿಸದ ಸಾಧನದಿಂದ ನಿಮ್ಮ ಖಾತೆಗೆ ಯಾರಾದರೂ ಪ್ರವೇಶಿಸಿದರೆ ನಾವು ನಿಮ್ಮನ್ನು ಎಚ್ಚರಿಸುತ್ತೇವೆ. ನಿಮ್ಮ ಖಾತೆಯಲ್ಲಿ ಏನಾದರೂ ಅನುಮಾನಾಸ್ಪದ ಚಟುವಟಿಕೆಯನ್ನು ನಾವು ಪತ್ತೆಹಚ್ಚಿದಾಗ, ನಿಮ್ಮ ಇನ್‌ಬಾಕ್ಸ್‌ಗೆ ಅಥವಾ ಫೋನ್‌ಗೆ ಅಧಿಸೂಚನೆಯೊಂದನ್ನು ಕಳುಹಿಸುತ್ತೇವೆ, ಇದರಿಂದ ನೀವು ನಿಮ್ಮ ಖಾತೆಯನ್ನು ಒಂದೇ ಕ್ಲಿಕ್‌ನಲ್ಲಿ ರಕ್ಷಿಸಿಕೊಳ್ಳಬಹುದು.

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.