ಇಂಟರ್ನೆಟ್ ಅನ್ನು ಎಲ್ಲರಿಗಾಗಿ ಸುರಕ್ಷಿತವಾಗಿಸಲು Google ಪ್ರತಿದಿನ ಕೆಲಸ ಮಾಡುತ್ತದೆ

ನಮ್ಮ ಕೊಡುಗೆಗಳನ್ನು ನೋಡಿ
ನಮ್ಮ ಅಪ್ರೋಚ್

ಜನರು, ವ್ಯಾಪಾರಗಳು ಮತ್ತು ಸರ್ಕಾರಗಳನ್ನು ರಕ್ಷಿಸಿ

ಸೆಕ್ಯುರಿಟಿಯು ನಮ್ಮ ಉತ್ಪನ್ನ ತಂತ್ರದ ಮೂಲಾಧಾರವಾಗಿದೆ. ಅದಕ್ಕಾಗಿಯೇ ನಮ್ಮ ಎಲ್ಲಾ ಉತ್ಪನ್ನಗಳು ಡೀಫಾಲ್ಟ್ ಆಗಿ ಸುರಕ್ಷಿತವಾಗಿರಿಸುವ ಅಂತರ್ನಿರ್ಮಿತ ರಕ್ಷಣೆಗಳನ್ನು ಹೊಂದಿವೆ.

ಇನ್ನಷ್ಟು ತಿಳಿಯಿರಿ

ಸೈಬರ್‌ಸೆಕ್ಯೂರಿಟಿಯ ಅಪಾಯಗಳನ್ನು ಪರಿಹರಿಸಲು ಸಮಾಜವನ್ನು ಸಬಲೀಕರಿಸಿ

ಓಪನ್ ಸೋರ್ಸ್ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಲು ನಾವು ಸಮಾಜಗಳಿಗೆ ಅಧಿಕಾರ ನೀಡುತ್ತೇವೆ ಮತ್ತು ಇಕೊಸಿಸ್ಟಂಗಳನ್ನು ಸುರಕ್ಷಿತವಾಗಿಡಲು ಉದ್ಯಮದ ಜೊತೆಗೆ ನಮ್ಮ ಜ್ಞಾನ ಮತ್ತು ಪರಿಣತಿಯನ್ನು ಪಾರದರ್ಶಕವಾಗಿ ಹಂಚಿಕೊಳ್ಳುತ್ತೇವೆ.

ಇನ್ನಷ್ಟು ತಿಳಿಯಿರಿ

ಭವಿಷ್ಯದ ತಂತ್ರಜ್ಞಾನಗಳನ್ನು ಸುಧಾರಿಸಿ

ಮುಂದಿನ ಪೀಳಿಗೆಯ ಸೈಬರ್ ಬೆದರಿಕೆಗಳಿಂದ ಸಮಾಜಗಳನ್ನು ರಕ್ಷಿಸಲು ನಾವು ಬಯಸುತ್ತೇವೆ. ನಮ್ಮ AI ಪರಿಣತಿಯನ್ನು ನಿರ್ಮಿಸುವ ಮೂಲಕ, ಭದ್ರತಾ ಆವಿಷ್ಕಾರದ ಗಡಿಗಳನ್ನು ಮುಂದೆ ತಳ್ಳಲು ನಾವು ಮುಂದಿನ ವೇವ್ ಆರ್ಕಿಟೆಕ್ಚರ್‌ಗಳನ್ನು ವಿನ್ಯಾಸಗೊಳಿಸುತ್ತಿದ್ದೇವೆ.

ಇನ್ನಷ್ಟು ತಿಳಿಯಿರಿ
ಜನರು, ವ್ಯಾಪಾರಗಳು ಮತ್ತು ಸರ್ಕಾರಗಳನ್ನು ರಕ್ಷಿಸಿ

ನಮ್ಮ ಉತ್ಪನ್ನ ಅಭಿವೃದ್ಧಿ ಮತ್ತು ಕ್ಲೌಡ್ ಮೂಲಸೌಕರ್ಯದ ಪ್ರತಿಯೊಂದು ಹಂತಕ್ಕೂ ನಾವು ಸುಧಾರಿತ ಸೆಕ್ಯುರಿಟಿಯನ್ನು ನಿರ್ಮಿಸುತ್ತೇವೆ. ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಮತ್ತು ಇಂಟರ್ನೆಟ್ ಅನ್ನು ಸುರಕ್ಷಿತವಾಗಿ ಆ್ಯಕ್ಸೆಸ್ ಮಾಡಲು ಸಹಾಯ ಮಾಡುವಾಗ ತಮ್ಮ IT ಸೆಕ್ಯುರಿಟಿಯನ್ನು ಆಧುನೀಕರಿಸಲು ಮತ್ತು ಬಲಪಡಿಸಲು ಇದು ಸಂಸ್ಥೆಗಳಿಗೆ ಅವಕಾಶ ನೀಡುತ್ತದೆ.

ಸೈಬರ್‌ಸೆಕ್ಯೂರಿಟಿಯ ಅಪಾಯಗಳನ್ನು ಪರಿಹರಿಸಲು ಸಮಾಜವನ್ನು ಸಬಲೀಕರಿಸಿ

ಬಳಕೆದಾರರ ರಕ್ಷಣೆಗೆ ಆದ್ಯತೆ ನೀಡುವ ಜಾಗತಿಕ ಮಾನದಂಡಗಳನ್ನು ಮುನ್ನಡೆಸಲು, ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ಹಾಗೂ ಇಂಟರ್ನೆಟ್ ಅನ್ನು ಎಲ್ಲರಿಗಾಗಿ ಮುಕ್ತವಾಗಿ ಮತ್ತು ಸುರಕ್ಷಿತವಾಗಿರಿಸಲು ಬೆದರಿಕೆ ಗುಪ್ತಚರವನ್ನು ಹಂಚಿಕೊಳ್ಳಲು ನಾವು ಸೈಬರ್ ಸೆಕ್ಯುರಿಟಿ ನಾಯಕರು, ಸರ್ಕಾರಗಳು ಮತ್ತು ಸೆಕ್ಯುರಿಟಿ ಸಮುದಾಯಗಳ ಜೊತೆಗೆ ಪಾಲುದಾರರಾಗುತ್ತಿದ್ದೇವೆ.

ಭವಿಷ್ಯದ ತಂತ್ರಜ್ಞಾನಗಳನ್ನು ಸುಧಾರಿಸಿ

AI, ಹಾರ್ಡ್‌ವೇರ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ಗಾಗಿ ಅಂತರಾಷ್ಟ್ರೀಯ ಮಾನದಂಡಗಳನ್ನು ಚಾಲನೆ ಮಾಡುವ ಜೊತೆಗೆ ಅವರ ಗೌಪ್ಯತೆಯನ್ನು ರಕ್ಷಿಸುವ ಮೂಲಕ ದುರ್ಬಲ ಬಳಕೆದಾರರನ್ನು ಆನ್‌ಲೈನ್ ದಾಳಿಗಳಿಂದ ರಕ್ಷಿಸಲು ನಾವು ಕೆಲಸ ಮಾಡುತ್ತೇವೆ.

ಇಂಟರ್ನೆಟ್ ಅನ್ನು ಎಲ್ಲರಿಗಾಗಿ ಸುರಕ್ಷಿತ ಸ್ಥಳವನ್ನಾಗಿ ಮಾಡಲು ಸಹಯೋಗಗಳು

ಸೈಬರ್‌ ಸೆಕ್ಯುರಿಟಿಯು ತಂಡದ ಕ್ರೀಡೆಯಾಗಿದೆ ಮತ್ತು ನಾವು ಒಟ್ಟಿಗೆ ಕೆಲಸ ಮಾಡಿದಾಗ, ನಾವು ಆವಿಷ್ಕಾರಗಳನ್ನು ಉತ್ತೇಜಿಸಬಹುದು ಮತ್ತು ಈ ಸಂಕೀರ್ಣ, ವೇಗವಾಗಿ ವಿಕಸಿಸುವ ಲ್ಯಾಂಡ್‌ಸ್ಕೇಪ್‌ನಲ್ಲಿ ಎಲ್ಲರಿಗೂ ಪ್ರಯೋಜನವನ್ನು ನೀಡುವ ಅತ್ಯುತ್ತಮ ಅಭ್ಯಾಸಗಳನ್ನು ಮುನ್ನಡೆಸಬಹುದು.

ಸ್ಕೈಸ್ಕ್ರೇಪರ್‌ನ ಹೊರಗೆ Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರದ ಬಿಲ್‌ಬೋರ್ಡ್.
Google ಸುರಕ್ಷತೆ ಮತ್ತು ಇಂಜಿನಿಯರಿಂಗ್ ಕೇಂದ್ರಗಳು

ನಮ್ಮ ತಂಡಗಳು ಪ್ರಪಂಚದಾದ್ಯಂತ ಗೌಪ್ಯತೆ, ಸೆಕ್ಯುರಿಟಿ, ಕಂಟೆಂಟ್ ಜವಾಬ್ದಾರಿ ಮತ್ತು ಕುಟುಂಬದ ಸುರಕ್ಷತೆಯಾದ್ಯಂತ ಕಾರ್ಯನಿರ್ವಹಿಸುತ್ತವೆ. ಅನುಭವಿ ಇಂಜಿನಿಯರ್‌ಗಳು, ನೀತಿ ತಜ್ಞರು ಮತ್ತು ವಿಷಯ ತಜ್ಞರ ನೇತೃತ್ವದಲ್ಲಿ ನಮ್ಮ GSEC ಗಳು ಈ ಕೆಲಸಕ್ಕೆ ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತವೆ.

ಡೆವಲಪರ್ ಸಂಕೇತಗಳ ಕೊಲಾಜ್ ಅನ್ನು ತೋರಿಸುವ Google Bug Hunters ಮುಖಪುಟದ ಪೂರ್ವವೀಕ್ಷಣೆ.
Google Bug Hunters

ನಮ್ಮ ಜಾಗತಿಕ ಸಮುದಾಯವು ನಮ್ಮ ಉತ್ಪನ್ನಗಳನ್ನು ಅವರು ಉದ್ದೇಶಿಸಿರುವ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಮತ್ತು ಇಂಟರ್ನೆಟ್ ಅನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು Bug Hunter ಗಳು ಅದರ ಅಡಿಯಲ್ಲಿ ಇಣುಕಿ ನೋಡುತ್ತಾರೆ.

ಮೂರು ವೃತ್ತಿಪರರು ಕಂಪ್ಯೂಟರ್ ಮುಂದೆ ಸಹಕರಿಸುತ್ತಿದ್ದಾರೆ, ಅವರಲ್ಲಿ ಒಬ್ಬರು ತಮ್ಮ ಇಬ್ಬರು ಸಹೋದ್ಯೋಗಿಗಳಿಗೆ ಸೈಬರ್‌ಸೆಕ್ಯುರಿಟಿಯನ್ನು ಪ್ರದರ್ಶಿಸುತ್ತಾರೆ.
Google ಸೈಬರ್‌ಸೆಕ್ಯುರಿಟಿ ಕ್ರಮದ ತಂಡ

ಸರ್ಕಾರಗಳು, ನಿರ್ಣಾಯಕ ಮೂಲಸೌಕರ್ಯ, ಉದ್ಯಮಗಳು ಮತ್ತು ಸಣ್ಣ ವ್ಯಾಪಾರಗಳ ಸೆಕ್ಯುರಿಟಿ ಮತ್ತು ಡಿಜಿಟಲ್ ಪರಿವರ್ತನೆಯನ್ನು ಬೆಂಬಲಿಸಲು ನಾವು ಪ್ರಪಂಚದ ಪ್ರಮುಖ ಸೆಕ್ಯುರಿಟಿ ಸಲಹಾ ತಂಡವನ್ನು ನಿಯೋಜಿಸುತ್ತೇವೆ.

ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು
ಸಹಾಯ ಮಾಡುವ ಮಾರ್ಗಗಳನ್ನು ಎಕ್ಸ್‌ಪ್ಲೋರ್ ಮಾಡಿ.