ನಿಯಂತ್ರಣ ನಿಮ್ಮ ಕೈಲಿದೆ

ಗೌಪ್ಯತೆಯ ವಿಷಯ ಬಂದಾಗ, ಒಂದೇ ಗಾತ್ರವು ಎಲ್ಲರಿಗೂ ಸರಿಹೊಂದುವುದಿಲ್ಲ ಎಂದು ನಮಗೆ ತಿಳಿದಿದೆ. ಆದ್ದರಿಂದ ನಾವು ನಿಮ್ಮ Google ಖಾತೆಯೊಳಗೆ ಪ್ರಬಲವಾದ, ಬಳಸಲು ಸುಲಭವಾದ ಗೌಪ್ಯತಾ ಪರಿಕರಗಳನ್ನು ನಿರ್ಮಿಸುತ್ತೇವೆ. ಅವು, ನಿಮಗೆ ಸೂಕ್ತವಾಗಿರುವ ಗೌಪ್ಯತಾ ಸೆಟ್ಟಿಂಗ್‌ಗಳಿಗೆ ಹಾಗೂ ನಮ್ಮ ಸೇವೆಗಳಾದ್ಯಂತ ನಾವು ಯಾವ ರೀತಿಯ ಡೇಟಾವನ್ನು ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂಬುದರ ಮೇಲೆ ನಿಮಗೆ ನಿಯಂತ್ರಣ ನೀಡುತ್ತವೆ.

Google ನಾದ್ಯಂತ ಡೇಟಾವನ್ನು ಹೇಗೆ ಬಳಸುವುದು ಎಂಬುದನ್ನು ನಿಯಂತ್ರಿಸಿ

 • ನಿಮ್ಮ Google ಖಾತೆಯಲ್ಲಿ ಉಳಿಸಿರುವ ಡೇಟಾವನ್ನು ನಿಯಂತ್ರಿಸಿ

  ನಿಮ್ಮ ಮಾಹಿತಿ, ಗೌಪ್ಯತೆ ಮತ್ತು ಸುರಕ್ಷತೆ ಸೆಟ್ಟಿಂಗ್‌ಗಳೆಲ್ಲವನ್ನೂ ಒಂದೇ ಸ್ಥಳದಲ್ಲಿ ನೀವು ಕಾಣಬಹುದು – ಅದುವೇ ನಿಮ್ಮ Google ಖಾತೆ. ನಾವು ಡ್ಯಾಶ್‌ಬೋರ್ಡ್ ಮತ್ತು ನನ್ನ ಚಟುವಟಿಕೆಯಂತಹ ಸುಲಭ ಬಳಕೆಯ ಪರಿಕರಗಳನ್ನು ರಚಿಸಿದ್ದು, ಇವುಗಳು Google ಸೇವೆಗಳಾದ್ಯಂತ ನಡೆಸುವ ನಿಮ್ಮ ಚಟುವಟಿಕೆಗಳಿಂದ ಸಂಗ್ರಹಿಸಲಾದ ಡೇಟಾ ಕುರಿತಾಗಿ ನಿಮಗೆ ಪಾರದರ್ಶಕತೆಯನ್ನು ನೀಡುತ್ತವೆ. ಜೊತೆಗೆ, ಚಟುವಟಿಕೆ ನಿಯಂತ್ರಣಗಳು ಮತ್ತು ಜಾಹೀರಾತು ಸೆಟ್ಟಿಂಗ್‌ಗಳಂತಹ ಪ್ರಬಲ ಗೌಪ್ಯತಾ ನಿಯಂತ್ರಣಗಳೂ ಇವೆ ಮತ್ತು ಇವು, Google ನ ಎಲ್ಲಾ ಸೇವೆಗಳು ನಿಮಗಾಗಿ ಉತ್ತಮವಾಗಿ ಹೇಗೆ ಕಾರ್ಯನಿರ್ವಹಿಸಬಲ್ಲವು ಎಂಬುದನ್ನು ನಿರ್ಧರಿಸಲು, ಡೇಟಾ ಸಂಗ್ರಹಣೆ ಮತ್ತು ಡೇಟಾ ಬಳಕೆಯನ್ನು ಸಕ್ರಿಯಗೊಳಿಸಲು ಇಲ್ಲವೇ ನಿಷ್ಕ್ರಿಯಗೊಳಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ.

 • ನಿಮ್ಮ ಗೌಪ್ಯತೆ ಪರಿಶೀಲನೆಗೆ ಸೂಕ್ತವೆನಿಸುವ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಆರಿಸಿಕೊಳ್ಳಿ

  ಕೆಲವೇ ನಿಮಿಷಗಳಲ್ಲಿ, ನಾವು ಸಂಗ್ರಹಿಸುವ ಡೇಟಾ ಪ್ರಕಾರಗಳನ್ನು ನೀವು ನಿರ್ವಹಿಸಬಹುದು, ನೀವು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಅಥವಾ ಸಾರ್ವಜನಿಕಗೊಳಿಸುವ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದು ಮತ್ತು ನಾವು ನಿಮಗೆ ತೋರಿಸಲು ಬಯಸುವ ಜಾಹೀರಾತುಗಳ ಪ್ರಕಾರಗಳನ್ನು ಸರಿಹೊಂದಿಸಬಹುದು. ನೀವು ಬಯಸಿದಾಗಲೆಲ್ಲಾ ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು ಮತ್ತು ನಿಮ್ಮ ಪ್ರಸ್ತುತ ಸೆಟ್ಟಿಂಗ್‌ಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಸಹಾಯ ಮಾಡಲು ನಿಯಮಿತ ರಿಮೈಂಡರ್‌ಗಳನ್ನು ಕಳುಹಿಸುವಂತೆ ಕೂಡ ಆಯ್ಕೆ ಮಾಡಿಕೊಳ್ಳಬಹುದು.

 • ಸರಳ ಆನ್/ಆಫ್ ನಿಯಂತ್ರಣಗಳು ನಿಮ್ಮ ಖಾತೆಗೆ ಯಾವ ಡೇಟಾವನ್ನು ಉಳಿಸಬೇಕೆಂಬ ಆಯ್ಕೆ ಮಾಡಲು ನಿಮಗೆ ಅವಕಾಶ ನೀಡುತ್ತವೆ

  ನಕ್ಷೆಗಳಲ್ಲಿನ ಉತ್ತಮ ಪ್ರಯಾಣದ ಆಯ್ಕೆಗಳಿಂದ ಹಿಡಿದು ಹುಡುಕಾಟದಲ್ಲಿನ ತ್ವರಿತ ಫಲಿತಾಂಶಗಳವರೆಗೆ, ನಿಮ್ಮ ಖಾತೆಯಲ್ಲಿ ನಾವು ಉಳಿಸುವ ಡೇಟಾವು Google ಸೇವೆಗಳನ್ನು ನಿಮಗೆ ಇನ್ನಷ್ಟು ಉಪಯುಕ್ತವನ್ನಾಗಿಸಬಹುದು. ಚಟುವಟಿಕೆ ನಿಯಂತ್ರಣಗಳನ್ನು ಬಳಸಿಕೊಂಡು, Google ಸೇವೆಗಳಾದ್ಯಂತ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸುವ ನಿಟ್ಟಿನಲ್ಲಿ ನಿಮ್ಮ ಖಾತೆಯೊಂದಿಗೆ ಯಾವ ಪ್ರಕಾರದ ಚಟುವಟಿಕೆಗಳು ಸಂಯೋಜಿತವಾಗಿರುತ್ತವೆ ಎಂಬುದನ್ನು ನೀವು ನಿರ್ಧರಿಸಬಹುದು ಮತ್ತು ನಿರ್ದಿಷ್ಟ ಡೇಟಾ ಪ್ರಕಾರಗಳನ್ನು – ಅಂದರೆ, ನಿಮ್ಮ ಹುಡುಕಾಟ ಮತ್ತು ಬ್ರೌಸಿಂಗ್ ಚಟುವಟಿಕೆ, ಸ್ಥಳ ಇತಿಹಾಸ ಮತ್ತು ನಿಮ್ಮ ಫೋನ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ನಿಂದ ಮಾಹಿತಿಯನ್ನು ಸಂಗ್ರಹಿಸದಂತೆ ನೀವು ವಿರಾಮಗೊಳಿಸಬಹುದು.

 • ನನ್ನ ಚಟುವಟಿಕೆಯಲ್ಲಿ, ನಿಮ್ಮ ಖಾತೆಗೆ ಯಾವ ಡೇಟಾವನ್ನು ಉಳಿಸಲಾಗಿದೆ ಎಂಬುದನ್ನು ನೋಡಿ ಮತ್ತು ನಿಯಂತ್ರಿಸಿ

  ನನ್ನ ಚಟುವಟಿಕೆ ಎಂಬುದು ನೀವು ನಮ್ಮ ಸೇವೆಗಳನ್ನು ಬಳಸಿಕೊಂಡು ಹುಡುಕಿದ, ನೋಡಿದ ಮತ್ತು ವೀಕ್ಷಿಸಿದ ಎಲ್ಲಾ ಸಂಗತಿಗಳನ್ನು ಒಳಗೊಂಡ ಕೇಂದ್ರ ಸ್ಥಳವಾಗಿದೆ. ನಿಮ್ಮ ಕಳೆದ ಆನ್‌ಲೈನ್ ಚಟುವಟಿಕೆಯನ್ನು ಸುಲಭವಾಗಿ ಮರುಪಡೆಯುವಂತೆ ಮಾಡಲು, ನಾವು ನಿಮಗೆ ವಿಷಯ, ದಿನಾಂಕ, ಮತ್ತು ಉತ್ಪನ್ನದ ಮೂಲಕ ಹುಡುಕಲು ಉಪಕರಣಗಳನ್ನು ನೀಡುತ್ತೇವೆ. ನಿಮ್ಮ ಖಾತೆಯೊಂದಿಗೆ ನೀವು ಸಂಯೋಜಿಸಲು ಬಯಸದ ಸಂಪೂರ್ಣ ವಿಷಯಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳನ್ನು ನೀವು ಶಾಶ್ವತವಾಗಿ ಅಳಿಸಬಹುದು.

 • ನಿಮ್ಮ Google ಖಾತೆಯಲ್ಲಿರುವ ಮಾಹಿತಿಯನ್ನು ಡ್ಯಾಶ್‌ಬೋರ್ಡ್‌ನಲ್ಲಿ ನೋಡಿ ಮತ್ತು ನಿರ್ವಹಿಸಿ

  ನೀವು ಬಳಸುವ Google ಉತ್ಪನ್ನಗಳ ಅವಲೋಕನ ಮತ್ತು ಪ್ರತಿಯೊಂದು ಉತ್ಪನ್ನಗಳಲ್ಲಿನ ಡೇಟಾವನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಲು ನಾವು ಸುಲಭಗೊಳಿಸುತ್ತೇವೆ. ಕಳೆದ ತಿಂಗಳಿನ ನಿಮ್ಮ Google ಚಟುವಟಿಕೆಯನ್ನು ನೀವು ಪರಿಶೀಲಿಸಬಹುದು; ನೀವು ಎಷ್ಟು ಇಮೇಲ್‌ಗಳು, ಡಾಕ್ಯುಮೆಂಟ್‌ಗಳು, ಮತ್ತು ಫೋಟೋಗಳನ್ನು ಹೊಂದಿರುವಿರಿ ಎಂಬುದನ್ನು ನೋಡಬಹುದು; ಮತ್ತು Gmail ಸೆಟ್ಟಿಂಗ್‌ಗಳ ಕುರಿತ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬಹುದು. ನಿಮಗೆ ಸಂಬಂಧಿತ ಉತ್ಪನ್ನದ ಸೆಟ್ಟಿಂಗ್‌ಗಳು ಮತ್ತು ಸಂಬಂಧಿತ ಸಹಾಯ ಕೇಂದ್ರದ ಲೇಖನಗಳ ಅಗತ್ಯವಿದ್ದರೆ, ನೀವು ಅವುಗಳಿಗೆ ತ್ವರಿತ ಪ್ರವೇಶವನ್ನು ಸಹ ಹೊಂದಿರುತ್ತೀರಿ.

 • ‘ನಿಮ್ಮ ಡೇಟಾವನ್ನು ಡೌನ್‌ಲೋಡ್‌ ಮಾಡಿ’ ಮೂಲಕ ನಿಮ್ಮ ವಿಷಯವನ್ನು ಎಲ್ಲಿಗಾದರೂ ಕೊಂಡೊಯ್ಯಿರಿ

  ನಿಮ್ಮ ಫೋಟೋಗಳು. ನಿಮ್ಮ ಇಮೇಲ್‌ಗಳು. ನಿಮ್ಮ ಸಂಪರ್ಕಗಳು. ನಿಮ್ಮ ಬುಕ್‌ಮಾರ್ಕ್‌ಗಳೂ ಸಹ. ನಿಮ್ಮ Google ಖಾತೆಯಲ್ಲಿ ಉಳಿಸಲಾಗಿರುವ ಡೇಟಾವು ನಿಮ್ಮ ನಿಯಂತ್ರಣದಲ್ಲಿರುತ್ತದೆ. ಅದಕ್ಕಾಗಿಯೇ ನಾವು ‘ನಿಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಿ’ ಅನ್ನು ನಾವು ರಚಿಸಿದ್ದೇವೆ - ಇದರಿಂದ ನೀವು ಡೇಟಾವನ್ನು ನಕಲಿಸಬಹುದು, ಬ್ಯಾಕಪ್ ಮಾಡಬಹುದು ಅಥವಾ ಮತ್ತೊಂದು ಸೇವೆಗೆ ವರ್ಗಾಯಿಸಬಹುದು.

  Google ಫೋಟೋಗಳು, ಡ್ರೈವ್, ಕ್ಯಾಲೆಂಡರ್ ಮತ್ತು Gmail ಸೇರಿದಂತೆ, Google ಸೇವೆಗಳಿಂದ ನೀವು ಬಹು ಫಾರ್ಮ್ಯಾಟ್‌ಗಳಲ್ಲಿ ಡೇಟಾವನ್ನು ಡೌನ್‌ಲೋಡ್ ಮಾಡಬಹುದು. ಇಲ್ಲವೇ ಆ ಡೇಟಾವನ್ನು ಡ್ರಾಪ್‌ಬಾಕ್ಸ್, Microsoft OneDrive ಮತ್ತು Box ಒಳಗೊಂಡ ಸೇವೆಗಳಿಗೆ ನೇರವಾಗಿ ರಫ್ತು ಮಾಡಬಹುದು.

 • ಇತರ ವ್ಯಕ್ತಿಗಳು ಸಂಪರ್ಕದಲ್ಲಿರಲು ಸುಲಭವಾಗುವಂತೆ ಯಾವೆಲ್ಲಾ ಮೂಲಭೂತ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಕೆಂದು ನಿರ್ಧರಿಸಿ

  Hangouts, Gmail ಮತ್ತು ಫೋಟೋಗಳಂತಹ Google ಸೇವೆಗಳಲ್ಲಿ ನಿಮ್ಮನ್ನು ಹುಡುಕಲು ಮತ್ತು ಸಂಪರ್ಕಿಸಲು ಇತರರಿಗೆ ಸಹಾಯ ಮಾಡುವುದಕ್ಕೆ, ನಿಮ್ಮ ಹೆಸರು, ಇಮೇಲ್ ಮತ್ತು ಫೋನ್ ಸಂಖ್ಯೆಯ ರೀತಿಯ ವೈಯಕ್ತಿಕ ಮಾಹಿತಿಯನ್ನು ನೀವು ನಿರ್ವಹಿಸಬಹುದು.

 • ವೈಯಕ್ತೀಕರಿಸಿದ ಜಾಹೀರಾತುಗಳನ್ನು ನಿಮಗೆ ತೋರಿಸಲು Google ಯಾವ ಮಾಹಿತಿಯನ್ನು ಬಳಸುತ್ತದೆ ಎಂಬುದನ್ನು ನಿಯಂತ್ರಿಸಿ

  ಜಾಹೀರಾತು ಸೆಟ್ಟಿಂಗ್‌ಗಳಲ್ಲಿ, ನಿಮಗೆ ಜಾಹೀರಾತುಗಳನ್ನು ವೈಯಕ್ತೀಕರಿಸಲು ನಾವು ಯಾವ ಡೇಟಾವನ್ನು ಬಳಸುತ್ತೇವೆ ಎಂಬುದರ ನಿಯಂತ್ರಣವನ್ನು ನಾವು ಸುಲಭಗೊಳಿಸುತ್ತೇವೆ. ಇದು ನಿಮ್ಮ Google ಖಾತೆಗೆ ನೀವು ಸೇರಿಸುವ ಮಾಹಿತಿಯನ್ನು, ನಿಮ್ಮ ಚಟುವಟಿಕೆಗಳ ಆಧಾರದ ಮೇಲೆ ನಿಮ್ಮ ಆಸಕ್ತಿಗಳ ಕುರಿತಾಗಿ ನಾವು ಊಹಿಸುವ ಮಾಹಿತಿಯನ್ನು ಮತ್ತು ಜಾಹೀರಾತುಗಳನ್ನು ತೋರಿಸಲು ನಮ್ಮೊಂದಿಗೆ ಪಾಲುದಾರರಾಗಿರುವ ಇತರ ಜಾಹೀರಾತುದಾರರ ಜೊತೆಗಿನ ಸಂವಹನಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುತ್ತದೆ.

  ನಿಮ್ಮ ಚಟುವಟಿಕೆಯು ನಾವು ತೋರಿಸುವುದರ ಮೇಲೆ ಪ್ರಭಾವ ಬೀರುತ್ತದೆ, ಆದರೆ ನಿಯಂತ್ರಣ ಯಾವಾಗಲೂ ನಿಮ್ಮ ಕೈಲಿರುತ್ತದೆ. ಉದಾಹರಣೆಗೆ, YouTube ನಲ್ಲಿ ಇತ್ತೀಚಿನ ಸಾಕರ್ ಪಂದ್ಯದ ಹೈಲೈಟ್‌ಗಳನ್ನು ನೀವು ವೀಕ್ಷಿಸಿರುವ ಕಾರಣ ಅಥವಾ Google ಹುಡುಕಾಟದಲ್ಲಿ “ನನಗೆ ಹತ್ತಿರದಲ್ಲಿರುವ ಸಾಕರ್ ಕ್ರೀಡೆಯ ಮೈದಾನಗಳು” ಎಂದು ಹುಡುಕಾಟ ನಡೆಸಿರುವ ಕಾರಣ, ನೀವು ಓರ್ವ ಸಾಕರ್ ಅಭಿಮಾನಿ ಎಂದು ನಾವು ಭಾವಿಸಬಹುದು. ಮತ್ತು ಪಾಲುದಾರ ಜಾಹೀರಾತುದಾರರ ಸೈಟ್‌ನಲ್ಲಿ ನೀವು ಸಮಯವನ್ನು ಕಳೆದಿದ್ದರೆ, ಆ ಭೇಟಿಯ ಆಧಾರದ ಮೇಲೆ ನಾವು ಜಾಹೀರಾತುಗಳನ್ನು ಸೂಚಿಸಬಹುದು.

  ಜಾಹೀರಾತು ವೈಯಕ್ತೀಕರಣವು ಆನ್ ಆಗಿರುವಾಗ, ನೀವು ಯಾವುದೇ ಮಾಹಿತಿಯನ್ನು ಆರಿಸಿಕೊಳ್ಳಬಹುದು – ಅಂದರೆ, ವಯಸ್ಸು ಮತ್ತು ಪುರುಷ/ಸ್ತ್ರೀ ಮಾಹಿತಿ, ಊಹಿಸಲ್ಪಟ್ಟ ಆಸಕ್ತಿ ಅಥವಾ ಜಾಹೀರಾತುದಾರರ ಜೊತೆಗೆ ಈ ಹಿಂದೆ ನಡೆಸಿರುವ ಸಂವಹನದ ಮಾಹಿತಿ – ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಏಕೆ ಬಳಸಲಾಗುತ್ತಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ, ಅದನ್ನು ಸಂಪೂರ್ಣವಾಗಿ ಆಫ್ ಮಾಡಿ ಅಥವಾ ನಿಷ್ಕ್ರಿಯಗೊಳಿಸಿ. ನಿಮಗೆ ಇನ್ನೂ ಜಾಹೀರಾತುಗಳು ಕಾಣಿಸುತ್ತವೆ, ಆದರೆ ಅವುಗಳು ಅಷ್ಟೇನು ಸಂಬಂಧಿತವಾಗಿರುವುದಿಲ್ಲ.

 • ಅದೃಶ್ಯ ಮೋಡ್ ಮೂಲಕ ಖಾಸಗಿಯಾಗಿ ಇಂಟರ್‌ನೆಟ್ ಬ್ರೌಸ್ ಮಾಡಿ

  ನಿಮ್ಮ ಹುಡುಕಾಟದ ಫಲಿತಾಂಶಗಳನ್ನು ಇನ್ನಷ್ಟು ಉಪಯುಕ್ತವನ್ನಾಗಿಸಲು ನಿಮ್ಮ ಆನ್‌ಲೈನ್ ಇತಿಹಾಸವು ಸಹಾಯ ಮಾಡುತ್ತದೆ, ಆದರೆ ಕೆಲವೊಮ್ಮೆ ನೀವು ಖಾಸಗಿಯಾಗಿ ಬ್ರೌಸ್ ಮಾಡಬಹುದು. ಉದಾಹರಣೆಗೆ, ನಿಮ್ಮ ಸಂಗಾತಿಯೊಂದಿಗೆ ನೀವು ಕಂಪ್ಯೂಟರ್ ಹಂಚಿಕೊಂಡರೆ, ಅವರಿಗೆ ಕೊಡಬೇಕೆಂದು ನೀವು ಹುಡುಕುತ್ತಿದ್ದ ಹುಟ್ಟುಹಬ್ಬದ ಉಡುಗೊರೆಯನ್ನು ಬಹಿರಂಗಗೊಳಿಸಿ, ಅದರ ಸರ್‌ಪ್ರೈಸ್‌ ಅನ್ನು ನಿಮ್ಮ ಬ್ರೌಸಿಂಗ್ ಇತಿಹಾಸವು ಹಾಳು ಮಾಡುವುದನ್ನು ನೀವು ಸುತಾರಾಂ ಬಯಸುವುದಿಲ್ಲ. ಇಂತಹ ಕ್ಷಣಗಳಿಗಾಗಿ, ನಿಮ್ಮ ಬ್ರೌಸಿಂಗ್ ಇತಿಹಾಸ Google Chrome ನಲ್ಲಿ ಉಳಿಯಬಾರದು ಎಂದಾದರೆ ನಿಮ್ಮ ಕಂಪ್ಯೂಟರ್, ಮೊಬೈಲ್‌ನಲ್ಲಿ ಅದೃಶ್ಯ ವಿಂಡೋ ತೆರೆಯಿರಿ.

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.