ನಿಮ್ಮ ಗೌಪ್ಯತೆಯನ್ನು
ಜವಾಬ್ದಾರಿಯುತ ಡೇಟಾ ನಿರ್ವಹಣಾ ವಿಧಾನಗಳ ಮೂಲಕ ರಕ್ಷಿಸಲಾಗಿದೆ.

ನೀವು ಪ್ರತಿದಿನ ಬಳಸುವ ಉತ್ಪನ್ನಗಳು ಮತ್ತು ಸೇವೆಗಳನ್ನು ಹೆಚ್ಚು ಸಹಾಯಕವಾಗಿಸಲು ಡೇಟಾ ಪ್ರಮುಖ ಪಾತ್ರ ವಹಿಸುತ್ತದೆ. ಆ ಡೇಟಾವನ್ನು ಜವಾಬ್ದಾರಿಯುತವಾಗಿ ಪರಿಗಣಿಸಲು ಮತ್ತು ಕಟ್ಟುನಿಟ್ಟಾದ ಪ್ರೊಟೊಕಾಲ್‌ಗಳನ್ನು ಹಾಗೂ ನವೀನ ಗೌಪ್ಯತೆ ತಂತ್ರಜ್ಞಾನಗಳ ಜೊತೆಗೆ ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಬದ್ಧರಾಗಿದ್ದೇವೆ.

ಡೇಟಾ ಕಡಿಮೆಗೊಳಿಸುವಿಕೆ

ಬಳಸಿದ ಮತ್ತು ಉಳಿಸಿದ ವೈಯಕ್ತಿಕ ಮಾಹಿತಿಯನ್ನು ಮಿತಿಗೊಳಿಸುವುದು

ಉತ್ಪನ್ನಗಳು ನಿಮ್ಮ ಮಾಹಿತಿಯನ್ನು ನಿಮಗೆ ಉಪಯುಕ್ತವಾಗುವವರೆಗೆ ಮತ್ತು ಸಹಾಯಕವಾಗುವವರೆಗೆ ಮಾತ್ರ ಇರಿಸಿಕೊಳ್ಳಬೇಕು ಎಂಬುದನ್ನು ನಾವು ನಂಬುತ್ತೇವೆ – ಉದಾಹರಣೆಗೆ, Maps ನಲ್ಲಿ ನಿಮ್ಮ ಮೆಚ್ಚಿನ ಸ್ಥಳಗಳನ್ನು ಹುಡುಕಲು ಅದಕ್ಕೆ ಸಾಧ್ಯವಾಗುತ್ತದೆಯೇ ಅಥವಾ YouTube ನಲ್ಲಿ ಏನನ್ನು ವೀಕ್ಷಿಸಬೇಕು ಎಂಬುದರ ಕುರಿತು ಶಿಫಾರಸುಗಳನ್ನು ಪಡೆಯುತ್ತದೆಯೇ.

ನೀವು ಮೊದಲ ಬಾರಿಗೆ ಸ್ಥಳ ಇತಿಹಾಸವನ್ನು ಆನ್ ಮಾಡಿದಾಗ (ಅದು ಡೀಫಾಲ್ಟ್ ಆಗಿ ಆಫ್ ಆಗಿರುತ್ತದೆ) ನಿಮ್ಮ ಸ್ವಯಂ-ಅಳಿಸುವ ಆಯ್ಕೆಯನ್ನು ಡೀಫಾಲ್ಟ್ ಆಗಿ 18 ತಿಂಗಳುಗಳಿಗೆ ಹೊಂದಿಸಲಾಗುತ್ತದೆ. ವೆಬ್ ಮತ್ತು ಆ್ಯಪ್ ಚಟುವಟಿಕೆ ಸ್ವಯಂ-ಅಳಿಸುವಿಕೆಯು ಸಹ ಹೊಸ ಖಾತೆಗಳಿಗಾಗಿ 18 ತಿಂಗಳುಗಳಿಗೆ ಡೀಫಾಲ್ಟ್ ಆಗಿರುತ್ತದೆ. ಇದರರ್ಥ ನಿಮ್ಮ ಚಟುವಟಿಕೆಯ ಡೇಟಾವನ್ನು ನೀವು ಅಳಿಸಲು ಆಯ್ಕೆಮಾಡುವವರೆಗೆ 18 ತಿಂಗಳುಗಳ ನಂತರ ಸ್ವಯಂಚಾಲಿತವಾಗಿ ಮತ್ತು ನಿರಂತರವಾಗಿ ಅಳಿಸಲಾಗುತ್ತದೆ. ನೀವು ಯಾವಾಗ ಬೇಕಾದರೂ ಈ ಸೆಟ್ಟಿಂಗ್‌ಗಳನ್ನು ಆಫ್ ಮಾಡಬಹುದು ಅಥವಾ ಯಾವುದೇ ಸಮಯದಲ್ಲಿ ನಿಮ್ಮ ಸ್ವಯಂ-ಅಳಿಸುವ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು.

ಪ್ರವೇಶ ನಿರ್ಬಂಧಿಸುವಿಕೆ

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಎಂದಿಗೂ ಮಾರಾಟ ಮಾಡುವುದಿಲ್ಲ ಹಾಗೂ ಯಾರಿಗೆ ಪ್ರವೇಶವಿದೆ ಎಂಬುದರ ಕುರಿತು ನಿಮಗೆ ನಿಯಂತ್ರಣಗಳನ್ನು ನೀಡುತ್ತೇವೆ

ಥರ್ಡ್-ಪಾರ್ಟಿಗಳಿಂದ ನಿಮ್ಮ ಡೇಟಾವನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಆದ್ದರಿಂದ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಯಾರಿಗೂ ಮಾರಾಟ ಮಾಡುವುದಿಲ್ಲ ಎಂಬುದು ನಮ್ಮ ಕಟ್ಟುನಿಟ್ಟಿನ ನೀತಿಯಾಗಿದೆ. ನೀವು ವಿನಂತಿಸಿಕೊಳ್ಳದ ಹೊರತು, ನಿಮ್ಮ ಹೆಸರು ಅಥವಾ ಇಮೇಲ್‌ನಂತಹ, ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ನಾವು ಜಾಹೀರಾತುದಾರರೊಂದಿಗೆ ಹಂಚಿಕೊಳ್ಳುವುದಿಲ್ಲ. ಉದಾಹರಣೆಗೆ, ನೀವು ಸಮೀಪದ ಹೂವಿನಂಗಡಿಯ ಜಾಹೀರಾತನ್ನು ನೋಡಿ “ಕರೆ ಮಾಡಲು ಟ್ಯಾಪ್ ಮಾಡಿ” ಬಟನ್ ಅನ್ನು ಆಯ್ಕೆಮಾಡಿದರೆ, ನಿಮ್ಮ ಕರೆಯನ್ನು ನಾವು ಸಂಪರ್ಕಿಸುತ್ತೇವೆ ಮತ್ತು ಹೂವಿನಂಗಡಿಯೊಂದಿಗೆ ನಿಮ್ಮ ಫೋನ್ ಸಂಖ್ಯೆಯನ್ನು ನಾವು ಹಂಚಿಕೊಳ್ಳಬಹುದು. ನೀವು Android ಸಾಧನವನ್ನು ಬಳಸುತ್ತಿದ್ದರೆ, ನಿಮ್ಮ ಫೋಟೋಗಳು, ಸಂಪರ್ಕಗಳು ಅಥವಾ ಸ್ಥಳದಂತಹ ಕೆಲವು ರೀತಿಯ ಡೇಟಾವನ್ನು ಪ್ರವೇಶಿಸುವುದಕ್ಕಾಗಿ ನಿಮ್ಮ ಅನುಮತಿಯನ್ನು ಕೇಳಲು ನಮಗೆ ಥರ್ಡ್ ಪಾರ್ಟಿ ಆ್ಯಪ್‌‌ಗಳು ಬೇಕಾಗುತ್ತವೆ.

ಗೌಪ್ಯತೆ ಆವಿಷ್ಕಾರ

ಸುಧಾರಿತ ಗೌಪ್ಯತೆ ತಂತ್ರಜ್ಞಾನಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಖಾಸಗಿಯಾಗಿರಿಸಲು ಸಹಾಯ ಮಾಡುತ್ತವೆ

ನಮ್ಮ ಉತ್ಪನ್ನಗಳಲ್ಲಿನ ನಿಮ್ಮ ಅನುಭವಗಳಿಗೆ ಧಕ್ಕೆಯಾಗದಂತೆ ನಿಮ್ಮ ಖಾಸಗಿ ಮಾಹಿತಿಯನ್ನು ರಕ್ಷಿಸುವ ಹೊಸ ತಂತ್ರಜ್ಞಾನಗಳನ್ನು ನಾವು ನಿರಂತರವಾಗಿ ನಾವೀನ್ಯಗೊಳಿಸುತ್ತಿದ್ದೇವೆ.

ಫೆಡರೇಟೆಡ್ ಲರ್ನಿಂಗ್ ಎನ್ನುವುದು Google ನಲ್ಲಿ ಪ್ರವರ್ತಕವಾದ ಡೇಟಾ ಕಡಿಮೆಗೊಳಿಸುವಿಕೆ ತಂತ್ರಜ್ಞಾನವಾಗಿದ್ದು, ನಿಮ್ಮ ಸಾಧನದಲ್ಲಿಯೇ ಪದ ಮುನ್ನೋಟಗಳಂತಹ ನಮ್ಮ ಅನೇಕ ಉಪಯುಕ್ತ ವೈಶಿಷ್ಟ್ಯಗಳಿಗೆ ಪವರ್ ನೀಡುವ ಮಷಿನ್ ಲರ್ನಿಂಗ್ ಮಾದರಿಗಳಿಗೆ ತರಬೇತಿ ನೀಡುತ್ತದೆ. ನಿಮ್ಮ ಸಾಧನಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಇರಿಸಿಕೊಂಡು, ನಮ್ಮ ಉತ್ಪನ್ನಗಳಾದ್ಯಂತ ಉಪಯುಕ್ತವಾದ ಅನುಭವಗಳನ್ನು ನೀಡುವ ಮೂಲಕ ನಿಮ್ಮ ಗೌಪ್ಯತೆಯನ್ನು ಕಾಪಾಡಲು ಈ ಹೊಸ ವಿಧಾನವು ಸಹಾಯ ಮಾಡುತ್ತದೆ.

ನಮ್ಮ ಸೇವೆಗಳು ನಿಮಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವಾಗ, ನಿಮ್ಮ ಡೇಟಾವನ್ನು ರಕ್ಷಿಸಲು ನಾವು ಪ್ರಮುಖ ಅನಾಮಧೇಯಗೊಳಿಸುವಿಕೆ ತಂತ್ರಗಳನ್ನು ಬಳಸುತ್ತೇವೆ. ಉದಾಹರಣೆಗೆ, ನಿಮ್ಮನ್ನು ವೇಗವಾಗಿ ಮನೆಗೆ ತಲುಪಿಸುವ ಬದಲಿ ಮಾರ್ಗಗಳನ್ನು ಸೂಚಿಸಲು ನಾವು ಲಕ್ಷಾಂತರ ಬಳಕೆದಾರರಿಂದ ಡೇಟಾವನ್ನು ಒಟ್ಟುಗೂಡಿಸುತ್ತೇವೆ ಮತ್ತು ಅನಾಮಧೇಯಗೊಳಿಸುತ್ತೇವೆ.

Maps ನಲ್ಲಿ ಸ್ಥಳ ಕಾರ್ಯನಿರತತೆಯಂತಹ ವೈಶಿಷ್ಟ್ಯಗಳನ್ನು ಒದಗಿಸಲು, ನಿಮ್ಮ ಮಾಹಿತಿಗೆ ಧ್ವನಿಯನ್ನು ಸೇರಿಸುವ ಭೇದ ತೋರಿಸುವ ಗೌಪ್ಯತೆ ಎಂದು ಕರೆಯಲಾಗುವ ಸುಧಾರಿತ ಅನಾಮಧೇಯಗೊಳಿಸುವಿಕೆ ತಂತ್ರಜ್ಞಾನವನ್ನು ಅನ್ವಯಿಸುತ್ತೇವೆ, ಇದರಿಂದ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲು ಇದನ್ನು ಬಳಸಲು ಸಾಧ್ಯವಾಗುವುದಿಲ್ಲ.

ಗೌಪ್ಯತೆ ವಿಮರ್ಶೆಗಳು


ಪ್ರತಿ ಉತ್ಪನ್ನದ ಅಭಿವೃದ್ಧಿಯಾದ್ಯಂತ ಕಟ್ಟುನಿಟ್ಟಾದ ಗೌಪ್ಯತೆ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತದೆ

ನಮ್ಮ ಉತ್ಪನ್ನಗಳನ್ನು ನಾವು ಹೇಗೆ ನಿರ್ಮಿಸುತ್ತೇವೆ ಎಂಬುದಕ್ಕೆ ಗೌಪ್ಯತೆಯು ಮುಖ್ಯವಾಗಿದೆ, ಕಠಿಣ ಗೌಪ್ಯತೆ ಮಾನದಂಡಗಳು ಉತ್ಪನ್ನ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲಿಯೂ ಮಾರ್ಗದರ್ಶನ ನೀಡುತ್ತವೆ. ಪ್ರತಿಯೊಂದು ಉತ್ಪನ್ನ ಮತ್ತು ವೈಶಿಷ್ಟ್ಯವು ಈ ಗೌಪ್ಯತೆ ಮಾನದಂಡಗಳಿಗೆ ಬದ್ಧವಾಗಿರುತ್ತವೆ, ಇವುಗಳನ್ನು ಸಮಗ್ರ ಗೌಪ್ಯತೆ ವಿಮರ್ಶೆಗಳ ಮೂಲಕ ಜಾರಿಗೊಳಿಸಲಾಗುತ್ತದೆ. ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ.

ಡೇಟಾ ಪಾರದರ್ಶಕತೆ

ನಿಮ್ಮ ಡೇಟಾವನ್ನು ವೀಕ್ಷಿಸಲು ಮತ್ತು ಅಳಿಸಲು ಸುಲಭವಾಗಿಸುತ್ತದೆ

ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದು ನಿಮ್ಮ ವೈಯಕ್ತಿಕ ಆಯ್ಕೆಯಾಗಿದೆ. ಯಾವ ಡೇಟಾವನ್ನು ಉಳಿಸಬೇಕು, ಹಂಚಿಕೊಳ್ಳಬೇಕು ಅಥವಾ ಅಳಿಸಬೇಕು ಎಂಬುದರ ಕುರಿತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುವುದಕ್ಕಾಗಿ ಯಾವ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಏಕೆ ಎಂದು ಅರ್ಥಮಾಡಿಕೊಳ್ಳುವುದನ್ನು ನಾವು ಸುಲಭಗೊಳಿಸುತ್ತೇವೆ.

ಉದಾಹರಣೆಗೆ, ಡ್ಯಾಶ್‌ಬೋರ್ಡ್‌ನೊಂದಿಗೆ ನೀವು ಬಳಸುವ Google ಉತ್ಪನ್ನಗಳ ಅವಲೋಕನ ಮತ್ತು ನಿಮ್ಮ ಇಮೇಲ್‌ಗಳು ಹಾಗೂ ಫೋಟೋಗಳಂತಹ ನೀವು ಸಂಗ್ರಹಿಸುವ ವಿಷಯಗಳನ್ನೂ ನೀವು ನೋಡಬಹುದು. ಮತ್ತು ನನ್ನ ಚಟುವಟಿಕೆಯ ಜೊತೆಗೆ ನೀವು ಹುಡುಕಿದ, ವೀಕ್ಷಿಸಿದ ಮತ್ತು ನೋಡಿದ ವಿಷಯಗಳು ಸೇರಿದಂತೆ, Google ಸೇವೆಗಳಾದ್ಯಂತ ನಿಮ್ಮ ಚಟುವಟಿಕೆಯಿಂದ ಸಂಗ್ರಹಿಸಿದ ಡೇಟಾವನ್ನು ನೋಡುವುದು ಅಥವಾ ಅಳಿಸುವುದು ಸುಲಭ.

ಡೇಟಾ ಪೋರ್ಟೆಬಿಲಿಟಿ

ನಿಮ್ಮ ಡೇಟಾವನ್ನು ನಿಮ್ಮೊಂದಿಗೆ ಇರಿಸಿಕೊಳ್ಳಲು ನಿಮಗೆ ಅಧಿಕಾರ ನೀಡಲಾಗುತ್ತಿದೆ

ಪ್ರತಿ ಬಳಕೆದಾರರು ನಮ್ಮೊಂದಿಗೆ ಹಂಚಿಕೊಂಡಿರುವ ತಮ್ಮ ಕಂಟೆಂಟ್‌ಗೆ ಪ್ರವೇಶವನ್ನು ಹೊಂದಿರಬೇಕು ಎಂದು ನಾವು ನಂಬುತ್ತೇವೆ - ಯಾವುದೇ ಸಮಯದಲ್ಲಿ, ಯಾವುದೇ ಕಾರಣಕ್ಕಾಗಿ. ಅದಕ್ಕಾಗಿಯೇ ನಾವು ‘ನಿಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಿ’ ಅನ್ನು ರಚಿಸಿದ್ದೇವೆ - ಇದರಿಂದ ನಿಮ್ಮ ಫೋಟೋಗಳು, ಇಮೇಲ್‌ಗಳು, ಸಂಪರ್ಕಗಳು ಹಾಗೂ ಬುಕ್‌ಮಾರ್ಕ್‌ಗಳನ್ನು ನೀವು ಡೌನ್‌ಲೋಡ್ ಮಾಡಬಹುದು. ನಿಮ್ಮ ಡೇಟಾದ ಪ್ರತಿಯನ್ನು ತೆಗೆದುಕೊಳ್ಳುವುದು, ಅದನ್ನು ಬ್ಯಾಕಪ್ ಮಾಡುವುದು ಅಥವಾ ಅದನ್ನು ಮತ್ತೊಂದು ಸೇವೆಗೆ ಸರಿಸುವುದು ನಿಮ್ಮ ಆಯ್ಕೆಯಾಗಿದೆ.

ನಿಮ್ಮ Google ಖಾತೆಯಲ್ಲಿ ಉಳಿಸಲಾದ ಡೇಟಾದ ನಿಯಂತ್ರಣವನ್ನು ನೀವು ಯಾವಾಗಲೂ ಹೊಂದಿರುತ್ತೀರಿ. ಇಲ್ಲಿ ಇನ್ನಷ್ಟು ತಿಳಿಯಿರಿ.


ಅನ್ವಯವಾಗುವ ಡೇಟಾ ರಕ್ಷಣಾ ಕಾನೂನುಗಳ ಪಾಲನೆಗೆ ನಾವು ಬದ್ಧರಾಗಿದ್ದೇವೆ

ಅನ್ವಯವಾಗುವ ಗೌಪ್ಯತೆ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ನಾವು ಯಾವಾಗಲೂ ಕೆಲಸ ಮಾಡುತ್ತೇವೆ. ಹಲವು ವರ್ಷಗಳಿಂದ ನಾವು ಪ್ರಪಂಚದಾದ್ಯಂತದಿಂದ ಡೇಟಾ ರಕ್ಷಣಾ ಅಧಿಕಾರಿಗಳ ಜೊತೆಗೆ ನಿಕಟವಾಗಿ ಕೆಲಸ ಮಾಡಿದ್ದೇವೆ ಮತ್ತು ಅವರ ಮಾರ್ಗದರ್ಶನವನ್ನು ಪ್ರತಿಬಿಂಬಿಸುವ ಪ್ರಬಲವಾದ ಗೌಪ್ಯತೆ ರಕ್ಷಣೆಗಳನ್ನು ಜಾರಿಗೆ ತಂದಿದ್ದೇವೆ. ಹಾಗೂ ಗೌಪ್ಯತೆ ಕಾನೂನುಗಳು ಪ್ರಪಂಚದಾದ್ಯಂತ ಜಾರಿಗೆ ಬಂದಿರುವುದರಿಂದ ನಮ್ಮ ಸಿಸ್ಟಂಗಳು ಮತ್ತು ನೀತಿಗಳನ್ನು ಅಪ್‌ಗ್ರೇಡ್ ಮಾಡಲು ನಾವು ಗಮನಾರ್ಹವಾಗಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ.

ಇನ್ನಷ್ಟು ತಿಳಿಯಿರಿ
ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಿಕೊಳ್ಳುವ
ಹೆಚ್ಚಿನ ಮಾರ್ಗಗಳನ್ನು ಎಕ್ಸ್‌ಪ್ಲೋರ್ ಮಾಡಿ.