ನಿಮ್ಮ ಗೌಪ್ಯತೆಯನ್ನು ಗೌರವಿಸುವ ಜಾಹೀರಾತುಗಳು.

“ನಿಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಿಕೊಳ್ಳುವುದೇ ನಮಗೆ ಅತಿಮುಖ್ಯವಾಗಿದೆ. ಡೀಫಾಲ್ಟ್ ಆಗಿ ಸುರಕ್ಷಿತವಾಗಿರುವ ಉತ್ಪನ್ನಗಳನ್ನು ನಿರ್ಮಿಸುವ ಮೂಲಕ, ವಿನ್ಯಾಸದಲ್ಲಿ ಗೌಪ್ಯತೆಯನ್ನು ರಚಿಸುವ ಮೂಲಕ ಮತ್ತು ಅವುಗಳನ್ನು ನಿಮ್ಮ ನಿಯಂತ್ರಣದಲ್ಲಿರಿಸುವ ಮೂಲಕ, ನೀವು ಪ್ರತಿದಿನ Google ನೊಂದಿಗೆ ಸುರಕ್ಷಿತವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.”

- ಜೆನ್ ಫಿಟ್ಜ್‌ಪ್ಯಾಟ್ರಿಕ್, ಹಿರಿಯ ಉಪಾಧ್ಯಕ್ಷರು, Google ನ ಕೋರ್ ಸಿಸ್ಟಮ್ಸ್ ಮತ್ತು ಎಕ್ಸ್‌ಪೀರಿಯನ್ಸಸ್‌

ಜವಾಬ್ದಾರಿಯುತ ಜಾಹೀರಾತು ಸೇವೆ ನೀಡುವ ಕುರಿತು ನಮ್ಮ ಬದ್ಧತೆ.

ಇಂಟರ್ನೆಟ್ ಅನ್ನು ಮುಕ್ತವಾಗಿರಿಸುವುದು, ಖಾಸಗಿಯಾಗಿರಿಸುವುದು ಮತ್ತು ಸುರಕ್ಷಿತವಾಗಿರಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಜಾಹೀರಾತುಗಳನ್ನು ಜವಾಬ್ದಾರಿಯುತವಾಗಿ ತಲುಪಿಸಲು ನಾವು ಬದ್ಧರಾಗಿದ್ದೇವೆ. Google ನ ಗೌಪ್ಯತೆ ತತ್ವಗಳು ಜಾಹೀರಾತುಗಳಿಗೆ ಹೇಗೆ ಅನ್ವಯಿಸುತ್ತವೆ ಎಂಬುದು ಇಲ್ಲಿದೆ:

ನಾವು ಎಂದಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಮಾರಾಟ ಮಾಡುವುದಿಲ್ಲ.

ಜಾಹೀರಾತು ಉದ್ದೇಶಗಳಿಗಾಗಿಯೂ ಸೇರಿದಂತೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಯಾರಿಗೂ ಮಾರಾಟ ಮಾಡುವುದಿಲ್ಲ.

ನಾವು ಯಾವ ಡೇಟಾವನ್ನು ಸಂಗ್ರಹಿಸುತ್ತೇವೆ ಮತ್ತು ಅದನ್ನು ಏಕೆ ಸಂಗ್ರಹಿಸುತ್ತೇವೆ ಎಂಬುದರ ಕುರಿತು ನಾವು ಪಾರದರ್ಶಕವಾಗಿರುತ್ತೇವೆ.

ನಿರ್ದಿಷ್ಟ ಜಾಹೀರಾತುಗಳನ್ನು ಏಕೆ ತೋರಿಸಲಾಗಿದೆ, ಯಾವ ಮಾಹಿತಿಯನ್ನು ಬಳಸಲಾಗಿದೆ ಮತ್ತು ನಿಮ್ಮ Google ಆ್ಯಡ್ಸ್ ಅನುಭವವನ್ನು ನೀವು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ನಾವು ನಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಜಾಹೀರಾತುಗಳು ಮತ್ತು ಪ್ರಾಯೋಜಿತ ಕಂಟೆಂಟ್ ಅನ್ನು ಸ್ಪಷ್ಟವಾಗಿ ಲೇಬಲ್ ಮಾಡುತ್ತೇವೆ.

ಉದಾಹರಣೆಗೆ, Search, YouTube ಮತ್ತು Discover ಮೂಲಕ, ನನ್ನ ಜಾಹೀರಾತು ಕೇಂದ್ರ ಜಾಹೀರಾತುಗಳಿಗಾಗಿ ಬಳಸಿದ ಮಾಹಿತಿಯನ್ನು ನಿಮಗೆ ತೋರಿಸುತ್ತದೆ ಮತ್ತು ಅದನ್ನು ಸುಲಭವಾಗಿ ನಿರ್ವಹಿಸಲು ನಿಮಗೆ ಅನುಮತಿಸುತ್ತದೆ ಇದರಿಂದ ನೀವು ನಿಮಗೆ ಸೂಕ್ತವಾದ ಅನುಭವವನ್ನು ಪಡೆಯುತ್ತೀರಿ.

ನಿಮ್ಮ ವೈಯಕ್ತಿಕ ಮಾಹಿತಿ ನಿಯಂತ್ರಿಸುವುದನ್ನು ನಾವು ಸುಲಭಗೊಳಿಸುತ್ತೇವೆ .

ನಿಮ್ಮ ಮಾಹಿತಿ ಮತ್ತು ಜಾಹೀರಾತಿಗಾಗಿ ಅದನ್ನು ಬಳಸುವ ವಿಧಾನವು ನಿಮ್ಮ ನಿಯಂತ್ರಣದಲ್ಲಿರುತ್ತದೆ. Google ನಲ್ಲಿನ ನಿಮ್ಮ ಚಟುವಟಿಕೆಯನ್ನು, ಉದಾಹರಣೆಗೆ, ನೀವು ಭೇಟಿ ನೀಡುವ ಸೈಟ್‌ಗಳು ಮತ್ತು ನೀವು ಹುಡುಕುವ ವಿಷಯಗಳನ್ನು, ನಿಮ್ಮ ಆದ್ಯತೆಗಳ ಆಧಾರದ ಮೇಲೆ ಜಾಹೀರಾತುಗಳನ್ನು ಒಳಗೊಂಡಂತೆ ನಮ್ಮ ಎಲ್ಲಾ ಉತ್ಪನ್ನಗಳಾದ್ಯಂತ ಉತ್ತಮ ಮತ್ತು ಹೆಚ್ಚು ಉಪಯುಕ್ತ ಅನುಭವಗಳನ್ನು ಒದಗಿಸಲು ಬಳಸಲಾಗುತ್ತದೆ.

ನನ್ನ ಜಾಹೀರಾತು ಕೇಂದ್ರ ನಿಮಗೆ Google Search, Discover ಮತ್ತು YouTube ನಲ್ಲಿ ನಿಮ್ಮ ಜಾಹೀರಾತು ಅನುಭವಗಳನ್ನು ಕಸ್ಟಮೈಸ್ ಮಾಡಲು ನಿಮಗೆ ಅನುಮತಿಸುತ್ತದೆ, ಇದರಿಂದ ನೀವು ಇಷ್ಟಪಡುವ ಬ್ರ್ಯಾಂಡ್‌ಗಳು ಮತ್ತು ವಿಷಯಗಳ ಜಾಹೀರಾತುಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ ಮತ್ತು ನೀವು ಇಷ್ಟಪಡದ ಬ್ರ್ಯಾಂಡ್‌ಗಳು ಮತ್ತು ವಿಷಯಗಳ ಜಾಹೀರಾತುಗಳು ಕಡಿಮೆ ಕಾಣಿಸಿಕೊಳ್ಳುತ್ತವೆ. ಆಲ್ಕೋಹಾಲ್, ಡೇಟಿಂಗ್, ಜೂಜು, ಗರ್ಭಧಾರಣೆ ಮತ್ತು ಪೋಷಕತ್ವ ಮತ್ತು ತೂಕ ನಷ್ಟದಂತಹ ಕೆಲವು ಸೂಕ್ಷ್ಮ ಆ್ಯಡ್ ವಿಷಯಗಳ ಕುರಿತ ಜಾಹೀರಾತುಗಳು ಕಡಿಮೆ ಬಾರಿ ಕಾಣಿಸಿಕೊಳ್ಳಲು ಸಹ ನೀವು ಆಯ್ಕೆ ಮಾಡಬಹುದು.

ನೀವು ಡೇಟಾ ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳ ಮೂಲಕ ಯಾವಾಗ ಬೇಕಾದರೂ ಜಾಹೀರಾತುಗಳ ವೈಯಕ್ತೀಕರಣವನ್ನು ಸಂಪೂರ್ಣವಾಗಿ ಆಫ್ ಮಾಡಬಹುದು ಮತ್ತು ನಿಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ ಚಟುವಟಿಕೆ ಡೇಟಾವನ್ನು ಶಾಶ್ವತವಾಗಿ ಅಳಿಸಬಹುದು.

ನಿಮ್ಮ ಗೌಪ್ಯತೆಯನ್ನು ಇನ್ನಷ್ಟು ಸುರಕ್ಷಿತವಾಗಿರಿಸಲು ನಾವು ಬಳಸುವ ಡೇಟಾವನ್ನು ಕಡಿಮೆಗೊಳಿಸುತ್ತೇವೆ .

ನಿಮಗೆ ಸರಿಹೊಂದುವ ಜಾಹೀರಾತುಗಳನ್ನು ಒದಗಿಸಲು ಆರೋಗ್ಯ, ಜನಾಂಗ, ಧರ್ಮ, ಅಥವಾ ಲೈಂಗಿಕ ದೃಷ್ಟಿಕೋನದಂತಹ ಸೂಕ್ಷ್ಮವಾದ ಮಾಹಿತಿಯನ್ನು ಎಂದಿಗೂ ಬಳಸುವುದಿಲ್ಲ.

ಯಾವುದೇ ಜಾಹೀರಾತು ಉದ್ದೇಶಗಳಿಗಾಗಿ Drive, Gmail ಮತ್ತು Photos ನಂತಹ ಆ್ಯಪ್‌ಗಳಲ್ಲಿ ನೀವು ರಚಿಸುವ ಮತ್ತು ಸಂಗ್ರಹಿಸುವ ಕಂಟೆಂಟ್ ಅನ್ನು ನಾವು ಎಂದಿಗೂ ಬಳಸುವುದಿಲ್ಲ. ಹೆಚ್ಚುವರಿಯಾಗಿ, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಇನ್ನಷ್ಟು ಸುರಕ್ಷಿತವಾಗಿರಿಸಲು, ಪ್ರಮುಖ ಚಟುವಟಿಕೆ ಸೆಟ್ಟಿಂಗ್‌ಗಳಲ್ಲಿ ಸ್ವಯಂಚಾಲಿತ ಅಳಿಸುವಿಕೆ ಕಾರ್ಯವನ್ನು ಡೀಫಾಲ್ಟ್ ಆಗಿ ಸೆಟ್ ಮಾಡಲಾಗಿದೆ. ಇದರರ್ಥ ನಿಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ ಚಟುವಟಿಕೆ ಡೇಟಾವನ್ನು ನೀವು ಅಳಿಸುವವರೆಗೆ ಇರಿಸಿಕೊಳ್ಳುವ ಬದಲು 18 ತಿಂಗಳುಗಳ ನಂತರ ಸ್ವಯಂಚಾಲಿತವಾಗಿ ಹಾಗೂ ನಿರಂತರವಾಗಿ ಅಳಿಸಲಾಗುತ್ತದೆ.

ಮಕ್ಕಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು ನಾವು ಯಾವಾಗಲೂ ಮಾರ್ಗಗಳನ್ನು ಹುಡುಕುತ್ತಿರುತ್ತೇವೆ ಹಾಗೂ ಮಕ್ಕಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ನಮಗೆ ತಿಳಿದಿರುವಾಗ ಜಾಹೀರಾತು ವೈಯಕ್ತೀಕರಣವನ್ನು ನಾವು ಅನುಮತಿಸುವುದಿಲ್ಲ.

ಡಿಫಾಲ್ಟ್ ಆಗಿ ಸುರಕ್ಷಿತವಾಗಿರುವ ಉತ್ಪನ್ನಗಳನ್ನು ನಿರ್ಮಿಸುವ ಮೂಲಕ ನಾವು ನಿಮ್ಮನ್ನು ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದು ಮತ್ತು ನಿಮ್ಮ ಡೇಟಾವನ್ನು ಸುರಕ್ಷಿತಗೊಳಿಸುವುದು Google ನ ಮುಖ್ಯ ಕೆಲಸವಾಗಿದೆ. ಇದಕ್ಕಾಗಿಯೇ ಎಲ್ಲಾ Google ಉತ್ಪನ್ನಗಳನ್ನು ನಿರಂತರವಾಗಿ ಪ್ರಮುಖ ಮೂಲಸೌಕರ್ಯದಿಂದ ರಕ್ಷಿಸಲಾಗುತ್ತಿದೆ, ಇದು ವಿಶ್ವದ ಅತ್ಯಂತ ಸುಧಾರಿತ ಭದ್ರತಾ ಮೂಲಸೌಕರ್ಯಗಳಲ್ಲಿ ಒಂದಾಗಿದೆ. ಈ ಬಿಲ್ಟ್-ಇನ್ ಭದ್ರತೆಯು ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸುವುದಕ್ಕಾಗಿ ಸಹಾಯ ಮಾಡಲು, ವಂಚನೆಯ ಜಾಹೀರಾತುಗಳ ಮೂಲಕ ವೈಯಕ್ತಿಕ ಮಾಹಿತಿಯನ್ನು ಪಡೆಯುವ ಸ್ಕ್ಯಾಮ್‌ಗಳು ಮತ್ತು ಪ್ರಯತ್ನಗಳಂತಹ ಹೆಚ್ಚುತ್ತಿರುವ ಆನ್‌ಲೈನ್ ಬೆದರಿಕೆಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಸಹಾಯ ಮಾಡುತ್ತದೆ.

ಇದರ ಜೊತೆಗೆ, ನಿಮ್ಮನ್ನು ಸುರಕ್ಷಿತವಾಗಿರಿಸುವುದಕ್ಕಾಗಿ ಸಹಾಯ ಮಾಡಲು, ನಾವು ಪ್ರಪಂಚದಾದ್ಯಂತದ ಜಾಹೀರಾತುದಾರರನ್ನು ಪರಿಶೀಲಿಸುತ್ತೇವೆ ಹಾಗೂ ವಂಚಕರನ್ನು ಪತ್ತೆಹಚ್ಚಲು ಮತ್ತು ತಮ್ಮನ್ನು ತಪ್ಪಾಗಿ ನಿರೂಪಿಸಿಕೊಳ್ಳುವ ಅವರ ಪ್ರಯತ್ನಗಳನ್ನು ಮಿತಿಗೊಳಿಸಲು ಕೆಲಸ ಮಾಡುತ್ತೇವೆ. Ads Transparency Center ಗೆ ಭೇಟಿ ನೀಡುವ ಮೂಲಕ ನೀವು ಇನ್ನಷ್ಟು ತಿಳಿದುಕೊಳ್ಳಬಹುದು, ಇದು ದೃಢೀಕೃತ ಜಾಹೀರಾತುದಾರರು ಒದಗಿಸುವ ಎಲ್ಲಾ ಜಾಹೀರಾತುಗಳ ಹುಡುಕಬಹುದಾದ ಕೇಂದ್ರವಾಗಿದೆ.

ನಾವು ಸುಧಾರಿತ ಗೌಪ್ಯತೆ ತಂತ್ರಜ್ಞಾನಗಳನ್ನು ನಿರ್ಮಿಸುತ್ತೇವೆ ಹಾಗೂ ಅವುಗಳನ್ನು ಇತರರ ಜೊತೆ ಹಂಚಿಕೊಳ್ಳುತ್ತೇವೆ.

ಯಾವ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಮತ್ತು ಯಾರಿಂದ ಸಂಗ್ರಹಿಸಲಾಗುತ್ತದೆ ಎಂಬುದರ ಕುರಿತು ಚಿಂತಿಸದೆ ನಿಮ್ಮ ಆನ್‌ಲೈನ್ ಅನುಭವವನ್ನು ಆನಂದಿಸಲು ನಿಮಗೆ ಸಾಧ್ಯವಾಗಬೇಕು. ಅದಕ್ಕಾಗಿಯೇ Google ನಲ್ಲಿನ ವಿವಿಧ ತಂಡಗಳು ಆನ್‌ಲೈನ್‌ನಲ್ಲಿ ಜನರ ಗೌಪ್ಯತೆಯನ್ನು ಸುಧಾರಿಸಲು ಉದ್ಯಮದ ಭಾಗವಾಗಿರುವ ಇತರ ಕಂಪನಿಗಳೊಂದಿಗೆ ಕೊಲಾಬೊರೇಟ್ ಮಾಡುತ್ತಿವೆ. ಇದು ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಉಪಕ್ರಮವನ್ನು ಕಾರ್ಯಗತಗೊಳಿಸುವುದು ಮತ್ತು ಬಳಕೆದಾರರ ಮಾಹಿತಿಯನ್ನು ರಕ್ಷಿಸುವ ಜೊತೆಗೆ, ಗ್ರಾಹಕರನ್ನು ತಲುಪಲು ಮತ್ತು ಅವರ ಆ್ಯಡ್ ಅಭಿಯಾನಗಳ ಪ್ರಭಾವವನ್ನು ಅಳೆಯಲು ವ್ಯಾಪಾರಗಳನ್ನು ಸಕ್ರಿಯಗೊಳಿಸುವ confidential computing ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದನ್ನು ಒಳಗೊಂಡಿದೆ.

ನಿಮಗೆ ಸೂಕ್ತವಾಗುವ ಜಾಹೀರಾತು ಅನುಭವವನ್ನು ಆಯ್ಕೆಮಾಡಿ
.
ನಿಮ್ಮ ಜಾಹೀರಾತು ಅನುಭವವನ್ನು ಕಸ್ಟಮೈಸ್ ಮಾಡಲು ಕಂಟ್ರೋಲ್‌ಗಳೊಂದಿಗೆ, ನನ್ನ ಜಾಹೀರಾತು ಕೇಂದ್ರದ ಹಬ್ ಪುಟದ ಅಣಕು

Google ನಲ್ಲಿ ಆ್ಯಡ್ ಕಂಟ್ರೋಲ್‌ಗಳು

ನನ್ನ ಜಾಹೀರಾತು ಕೇಂದ್ರದ ಮೂಲಕ, Google Search, YouTube ಮತ್ತು Discover ನಾದ್ಯಂತ ನೀವು ನೋಡುವ ಜಾಹೀರಾತುಗಳನ್ನು ನಿಯಂತ್ರಿಸುವುದು ಹಿಂದೆಂದಿಗಿಂತಲೂ ಸುಲಭವಾಗಿದೆ.

ನನ್ನ ಜಾಹೀರಾತು ಕೇಂದ್ರವು ನಿಮಗೆ ಜಾಹೀರಾತುಗಳನ್ನು ತೋರಿಸಲು ಬಳಸುವ ಮಾಹಿತಿಯನ್ನು ನಿಯಂತ್ರಿಸುವುದನ್ನು ಸುಲಭಗೊಳಿಸುತ್ತದೆ. ಇದು ನಿಮ್ಮ Google ಖಾತೆಯೊಂದಿಗೆ ಸಂಯೋಜನೆಗೊಂಡಿರುವ ಮಾಹಿತಿ ಮತ್ತು ನಿಮ್ಮ ಚಟುವಟಿಕೆಯನ್ನು ಆಧರಿಸಿದ ನಿಮ್ಮ ಆಸಕ್ತಿಗಳನ್ನು ಕುರಿತು ನಾವು ಅಂದಾಜಿಸುವುದನ್ನು ಒಳಗೊಂಡಿರುತ್ತದೆ. ನಿಮ್ಮ ಜಾಹೀರಾತು ಅನುಭವವನ್ನು ಕಸ್ಟಮೈಸ್ ಮಾಡಲು ಸಹ ನೀವು ನನ್ನ ಜಾಹೀರಾತು ಕೇಂದ್ರವನ್ನು ಬಳಸಬಹುದು, ಹಾಗಾಗಿ ನೀವು ಇಷ್ಟಪಡುವ ಬ್ರ್ಯಾಂಡ್‌ಗಳನ್ನು ಇನ್ನಷ್ಟು ನೋಡುತ್ತೀರಿ ಮತ್ತು ನೀವು ಇಷ್ಟಪಡದ ಬ್ರ್ಯಾಂಡ್‌ಗಳನ್ನು ಮಿತಿಗೊಳಿಸುತ್ತೀರಿ. ನಿಮ್ಮ ಖಾತೆಗೆ ಸಂಯೋಜನೆಗೊಂಡಿರುವ ಚಟುವಟಿಕೆ ಡೇಟಾವನ್ನು ನೀವು ಯಾವುದೇ ಸಮಯದಲ್ಲಿ ಶಾಶ್ವತವಾಗಿ ಸಹ ಅಳಿಸಬಹುದು.




Google ನಲ್ಲಿ ಸೂಕ್ಷ್ಮ ವಿಷಯಗಳನ್ನು ಕುರಿತ ಜಾಹೀರಾತುಗಳನ್ನು ಮಿತಿಗೊಳಿಸಿ

ನನ್ನ ಜಾಹೀರಾತು ಕೇಂದ್ರದ ಮೂಲಕ ನೀವು ಮದ್ಯಪಾನ, ಡೇಟಿಂಗ್, ಗ್ಯಾಂಬ್ಲಿಂಗ್, ಗರ್ಭಧಾರಣೆ ಹಾಗೂ ಪೇರೆಂಟಿಂಗ್ ಮತ್ತು ವೇಯ್ಟ್ ಲಾಸ್ ಸೇರಿದಂತೆ ನಿಮಗೆ ಅಹಿತಕರವೆನಿಸುವ ಕೆಲವು ವಿಷಯಗಳ ಕುರಿತು ನೀವು ನೋಡುವ ಜಾಹೀರಾತುಗಳನ್ನು ಮಿತಿಗೊಳಿಸಬಹುದು. ಸೂಕ್ಷ್ಮ ಜಾಹೀರಾತು ವರ್ಗಗಳನ್ನು ಮಿತಿಗೊಳಿಸುವುದು ಇದರ ಕುರಿತು ಇನ್ನಷ್ಟು ತಿಳಿಯಿರಿ.

ನೀವು ಯಾವಾಗ ಬೇಕಾದರೂ ವೈಯಕ್ತೀಕರಿಸಿದ ಜಾಹೀರಾತುಗಳನ್ನು ಆಫ್ ಮಾಡಬಹುದು

ವೈಯಕ್ತೀಕರಿಸಿದ ಜಾಹೀರಾತುಗಳನ್ನು ನೀವು ಸಂಪೂರ್ಣವಾಗಿ ಆಫ್ ಮಾಡಬಹುದು. ನಿಮಗೆ ಆಗಲೂ ಜಾಹೀರಾತುಗಳು ಕಾಣಿಸುತ್ತವೆ, ಆದರೆ ಅವು ನಿಮ್ಮ ಆಸಕ್ತಿಗಳಿಗೆ ಸೂಕ್ತವಾಗಿರುವ ಸಾಧ್ಯತೆ ತೀರಾ ಕಡಿಮೆಯಿರುತ್ತದೆ. ನಿಮ್ಮ Google ಖಾತೆಯ ಮೂಲಕ ನೀವು ಸೈನ್ ಇನ್ ಮಾಡಿರುವ ಎಲ್ಲೆಡೆ ನಿಮ್ಮ ಸೆಟ್ಟಿಂಗ್‌ಗಳು ಅನ್ವಯವಾಗುತ್ತವೆ.

ನಿಮಗೆ ಕಾಣಿಸುವ
ಜಾಹೀರಾತುಗಳ
ಬಗ್ಗೆ ಇನ್ನಷ್ಟನ್ನು ತಿಳಿದುಕೊಳ್ಳಿ.

ಈ ಜಾಹೀರಾತು ಏಕೆ

ಜಾಹೀರಾತುಗಳನ್ನು ತೋರಿಸಲು ಯಾವ ಡೇಟಾವನ್ನು ನಾವು ಬಳಸುತ್ತೇವೆ ಎಂಬುದನ್ನು ನೋಡಿ

"ಈ ಜಾಹೀರಾತು ಏಕೆ" ಎಂಬ ಫೀಚರ್, ನೀಡಿದ ಜಾಹೀರಾತು ನಿಮಗೆ ಏಕೆ ಕಾಣಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಉದಾಹರಣೆಗೆ, ನೀವು ಕ್ಯಾಮೆರಾಗಳಿಗಾಗಿ ಹುಡುಕಿದ್ದಕ್ಕೆ, ಫೋಟೋಗ್ರಫಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದಕ್ಕೆ ಅಥವಾ ಈ ಹಿಂದೆ ಕ್ಯಾಮೆರಾಗಳಿಗಾಗಿ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿದ್ದಕ್ಕಾಗಿ ನಿಮಗೆ ಕ್ಯಾಮೆರಾ ಜಾಹೀರಾತು ಕಾಣಿಸುತ್ತಿದೆ ಎಂದು ನೀವು ಕಂಡುಕೊಳ್ಳಬಹುದು.

ನೀಡಿದ ಜಾಹೀರಾತಿಗೆ ಜಾಹೀರಾತುದಾರರು ಎಷ್ಟು ಪಾವತಿ ಮಾಡಿದ್ದಾರೆ ಎಂಬುದನ್ನು ತೋರಿಸುವ ನನ್ನ ಜಾಹೀರಾತು ಕೇಂದ್ರದೊಳಗಿನ "ಈ ಜಾಹೀರಾತಿಗೆ ಯಾರು ಪಾವತಿ ಮಾಡಿದ್ದಾರೆ" ಪುಟದ ಅಣಕು

ಜಾಹೀರಾತುದಾರರ ಗುರುತು ಪರಿಶೀಲನೆ

ನಿಮಗೆ ಕಾಣಿಸುವ ಜಾಹೀರಾತುಗಳ ಹಿಂದಿನ ಜಾಹೀರಾತುದಾರರ ಬಗ್ಗೆ ತಿಳಿಯಿರಿ

ನಿಮಗೆ ಯಾರು ಜಾಹೀರಾತುಗಳನ್ನು ಒದಗಿಸುತ್ತಿದ್ದಾರೆ ಎಂಬುದರ ಕುರಿತು ನಿಮಗೆ ಇನ್ನಷ್ಟು ಮಾಹಿತಿ ಒದಗಿಸಲು, ನಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿನ ಜಾಹೀರಾತುದಾರರ ಗುರುತನ್ನು ದೃಢೀಕರಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಈ ಉಪಕ್ರಮದ ಭಾಗವಾಗಿ, ಜಾಹೀರಾತುದಾರರು Google ನಲ್ಲಿ ಜಾಹೀರಾತುಗಳನ್ನು ಖರೀದಿಸಲು ದೃಢೀಕರಣ ಪ್ರೋಗ್ರಾಂ ಅನ್ನು ಪೂರ್ಣಗೊಳಿಸಬೇಕು ಮತ್ತು ಜಾಹೀರಾತುದಾರರ ಹೆಸರು ಮತ್ತು ದೇಶವನ್ನು ಪಟ್ಟಿ ಮಾಡುವ ಜಾಹೀರಾತು ಪ್ರಕಟಣೆಗಳು ನಿಮಗೆ ಕಾಣಿಸುತ್ತವೆ.

ನಿರ್ದಿಷ್ಟ ಪ್ರದೇಶದಲ್ಲಿ ಯಾವ ಜಾಹೀರಾತುಗಳನ್ನು ತೋರಿಸಲಾಗಿದೆ ಅಥವಾ ತೋರಿಸಲಾದ ಜಾಹೀರಾತುಗಳ ಫಾರ್ಮ್ಯಾಟ್ ಯಾವುದು ಎಂಬಂತಹ ವಿಷಯಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನೀವು ಬಯಸಿದರೆ, ನೀವು Ads Transparency Center ಗೆ ಭೇಟಿ ನೀಡಬಹುದು, ಇದು YouTube, Search ಮತ್ತು Display ಆದ್ಯಂತ ಕಂಡುಬರುವ ದೃಢೀಕೃತ ಜಾಹೀರಾತುದಾರರು ಒದಗಿಸಿದ ಎಲ್ಲಾ ಜಾಹೀರಾತುಗಳನ್ನು ಹುಡುಕಬಹುದಾದ ಕೇಂದ್ರವಾಗಿದೆ. ನೀವು ನೇರವಾಗಿ Ads Transparency Center ಅನ್ನು ಆ್ಯಕ್ಸೆಸ್ ಮಾಡಬಹುದು ಅಥವಾ ನೀವು ನೋಡುವ ಜಾಹೀರಾತುಗಳ ಪಕ್ಕದಲ್ಲಿರುವ ಮೂರು-ಚುಕ್ಕೆ ಮೆನು ಮೂಲಕ ನನ್ನ ಜಾಹೀರಾತು ಕೇಂದ್ರಕ್ಕೆ ಭೇಟಿ ನೀಡಬಹುದು.

Ads Transparency Center ಗೆ ಭೇಟಿ ನೀಡಿ.

ಆ್ಯಡ್‌ಗಳ ಕುರಿತು ಜನರು ಕೇಳುತ್ತಿರುವ ಪ್ರಶ್ನೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ಆ್ಯಡ್‌ಗಳಿಗಾಗಿ Google ಯಾವ ಡೇಟಾವನ್ನು ಬಳಸುತ್ತದೆ?

ಆ್ಯಡ್‌‌ಗಳೂ ಸೇರಿದಂತೆ ನಮ್ಮ ಉತ್ಪನ್ನಗಳಾದ್ಯಂತ ಇನ್ನಷ್ಟು ಉತ್ತಮವಾದ ಮತ್ತು ಹೆಚ್ಚು ಉಪಯುಕ್ತವಾದ ಅನುಭವಗಳನ್ನು ಒದಗಿಸುವುದಕ್ಕಾಗಿ Google ನಲ್ಲಿನ ನಿಮ್ಮ ಚಟುವಟಿಕೆಯನ್ನು ನಾವು ಬಳಸುತ್ತೇವೆ – ಉದಾಹರಣೆಗೆ, ನೀವು ಭೇಟಿ ನೀಡುವ ಸೈಟ್‌ಗಳು, ನೀವು ಬಳಸುವ ಆ್ಯಪ್‌ಗಳು, ಮತ್ತು ನೀವು ಹುಡುಕಿದ ಸಂಗತಿಗಳು ಮತ್ತು ಸ್ಥಳದಂತಹ ಸಂಬಂಧಿತ ಮಾಹಿತಿ.

ನಿಮಗೆ ಸೂಕ್ತವಾದ ಆ್ಯಡ್‌‌ಗಳನ್ನು ತೋರಿಸಲು ನಾವು ಆರೋಗ್ಯ, ಜನಾಂಗ, ಧರ್ಮ ಅಥವಾ ಲೈಂಗಿಕ ಮನೋಭಾವದಂತಹ ಸೂಕ್ಷ್ಮವಾದ ಮಾಹಿತಿಯನ್ನು ಎಂದಿಗೂ ಬಳಸುವುದಿಲ್ಲ. ಹಾಗೂ ನಾವು ಆ್ಯಡ್‌ಗಳಿಗಾಗಿ Drive, Gmail ಮತ್ತು Photos ನಲ್ಲಿರುವ ಡೇಟಾವನ್ನು ಕೂಡ ಬಳಸುವುದಿಲ್ಲ.

ನನ್ನ ಜಾಹೀರಾತು ಕೇಂದ್ರದ ಮೂಲಕ, ಆ್ಯಡ್‌‌ಗಳನ್ನು ವೈಯಕ್ತೀಕರಿಸಲು ಯಾವ ಮಾಹಿತಿಯನ್ನು ಬಳಸಲಾಗುತ್ತದೆ ಎಂಬುದನ್ನು ನೀವು ನಿಯಂತ್ರಿಸಬಹುದು ಮತ್ತು ನಿಮ್ಮ ಆ್ಯಡ್‌ಗಳ ಆದ್ಯತೆಗಳನ್ನು ನಿರ್ವಹಿಸಬಹುದು.

Google ನನ್ನ ಮಾಹಿತಿಯನ್ನು ಜಾಹೀರಾತಿಗಾಗಿ ಏಕೆ ಬಳಸುತ್ತದೆ?

ನಿಮ್ಮ ಚಟುವಟಿಕೆಗಳನ್ನು ಆಧರಿಸಿ ನಿಮ್ಮ ಆಸಕ್ತಿಗಳಿಗೆ ಸೂಕ್ತವೆಂದು ನಮಗನಿಸುವ ಆ್ಯಡ್‌ಗಳನ್ನು ನಿಮಗೆ ತೋರಿಸಲು ಅಥವಾ ಏನಾದರೂ ಹೊಸತನ್ನು ಅನ್ವೇಷಿಸಲು ನಿಮಗೆ ಸಹಾಯ ಮಾಡಲು Google ನಿಮ್ಮ ಮಾಹಿತಿಯನ್ನು ಬಳಸುತ್ತದೆ.

ಉದಾಹರಣೆಗೆ, ನೀವು ಹೊಸ ಕಾರ್‌ಗಳ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದ್ದರೆ, ಬಾಲ್ಕನಿ ಪೀಠೋಪಕರಣ ಅಥವಾ ಸಾಕುಪ್ರಾಣಿ ಆಹಾರದ ಸಾಮಾನ್ಯ ಆ್ಯಡ್‌ಗಳನ್ನು ನೋಡುವ ಬದಲು ಸ್ಥಳೀಯ ಕಾರ್ ಡೀಲರ್‌ಗಳ ಪ್ರಚಾರಗಳನ್ನು ಫೀಚರ್ ಮಾಡುವ ಆ್ಯಡ್‌ಗಳನ್ನು ನೋಡಿದರೆ ಹೆಚ್ಚು ಉಪಯೋಗವಾಗುತ್ತದೆ.

ಬಳಸಲು ಸುಲಭವಾದ ಗೌಪ್ಯತಾ ಟೂಲ್‌ಗಳ ಮೂಲಕ ನಿಮ್ಮ ಡೇಟಾ ಯಾವಾಗಲೂ ನಿಮ್ಮ ನಿಯಂತ್ರಣದಲ್ಲಿರುತ್ತದೆ ಮತ್ತು Google ಜೊತೆ ಮಾಹಿತಿ ಹಂಚಿಕೊಳ್ಳುವುದು ಮತ್ತು ಜಾಹೀರಾತಿಗಾಗಿ ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿರ್ಧರಿಸುವುದು ಯಾವಾಗಲೂ ನಿಮ್ಮದೇ ಆಯ್ಕೆಯಾಗಿರುತ್ತದೆ.

ನನಗೆ ಆ್ಯಡ್‌ಗಳನ್ನು ತೋರಿಸಲು Google ನನ್ನ ಇಮೇಲ್‌ಗಳನ್ನು ಓದುತ್ತದೆಯೇ ಅಥವಾ ನನ್ನ ಫೋನ್ ಕರೆಗಳನ್ನು ಆಲಿಸುತ್ತದೆಯೇ?

ಇಲ್ಲ. ನಿಮ್ಮ ಇಮೇಲ್ ಮತ್ತು ನಿಮ್ಮ ಸಂಭಾಷಣೆಗಳು ವೈಯಕ್ತಿಕ ಮತ್ತು ಖಾಸಗಿಯಾಗಿವೆ. ನಿಮ್ಮ ಇಮೇಲ್‌ಗಳಲ್ಲಿ ನೀವು ಏನು ಬರೆಯುತ್ತೀರಿ, ಫೋನ್‌ನಲ್ಲಿ ನೀವು ಏನು ಹೇಳುತ್ತೀರಿ ಅಥವಾ Google Drive ನಂತಹ ಸೇವೆಗಳಲ್ಲಿ ನೀವು ಏನು ಸಂಗ್ರಹಿಸುತ್ತೀರಿ ಎಂಬುದನ್ನು ಆಧರಿಸಿ ನಾವು ಎಂದಿಗೂ ನಿಮಗೆ ಆ್ಯಡ್‌ಗಳನ್ನು ತೋರಿಸುವುದಿಲ್ಲ.

Google ನನ್ನ ಮಾಹಿತಿಯನ್ನು ಜಾಹೀರಾತುದಾರರಿಗೆ ಮಾರಾಟ ಮಾಡುತ್ತದೆಯೇ?

ಇಲ್ಲ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಎಂದಿಗೂ ಯಾರಿಗೂ ಮಾರಾಟ ಮಾಡುವುದಿಲ್ಲ.

ನಾನು ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಸಂಪೂರ್ಣವಾಗಿ ಆಫ್ ಮಾಡಬಹುದೇ?

ಹೌದು. ನಿಮ್ಮ ಆದ್ಯತೆಗಳನ್ನು ಅಪ್‌ಡೇಟ್ ಮಾಡಲು ಅಥವಾ ಆ್ಯಡ್‌ಗಳ ವೈಯಕ್ತೀಕರಣವನ್ನು ಆಫ್ ಮಾಡಲು ನೀವು ನನ್ನ ಜಾಹೀರಾತು ಕೇಂದ್ರಕ್ಕೆ ಭೇಟಿ ನೀಡಬಹುದು.

ನೀವು ವೈಯಕ್ತೀಕರಿಸಿದ ಆ್ಯಡ್‌ಗಳನ್ನು ನೋಡದಿರುವ ಆಯ್ಕೆಯನ್ನು ಮಾಡಿದರೆ, ನಿಮಗೆ ಈಗಲೂ ಆ್ಯಡ್‌ಗಳು ಕಾಣಿಸುತ್ತವೆ, ಆದರೆ ಅವು ಹೆಚ್ಚು ಸೂಕ್ತವಾಗಿರುವುದಿಲ್ಲ.

ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು
ಬಳಸುವ ಇನ್ನಷ್ಟು ವಿಧಾನಗಳನ್ನು ಎಕ್ಸ್‌ಪ್ಲೋರ್ ಮಾಡಿ.