ಕುಟುಂಬ-ಸ್ನೇಹಿ
ಅನುಭವಗಳನ್ನು ನಿರ್ಮಿಸುವುದು.

ನಮ್ಮ ಹಲವು ಪ್ರಾಡಕ್ಟ್‌ಗಳಲ್ಲಿ ನಾವು – ಸ್ಮಾರ್ಟ್ ಫಿಲ್ಟರ್‌ಗಳು, ಸೈಟ್ ಬ್ಲಾಕರ್‌ಗಳು ಮತ್ತು ವಿಷಯ ರೇಟಿಂಗ್‌ಗಳಂತಹ – ವಿಶೇಷ ಫೀಚರ್‌ಗಳನ್ನು ನಿರ್ಮಿಸಿದ್ದೇವೆ. ನಿಮ್ಮ ಕುಟುಂಬದ ಪಾಲಿಗೆ ಅವು ಖುಷಿ ಕೊಡುವುದು ಶತಸಿದ್ಧ!.

ಅನ್ವೇಷಿಸಲು, ರಚಿಸಲು ಮತ್ತು ಬೆಳೆಯಲು*
ಮಕ್ಕಳಿಗೆ ಸಹಾಯ ಮಾಡುವ ವಿಷಯ
ಹೊಂದಿರುವ ಟ್ಯಾಬ್ಲೆಟ್ ಅನುಭವ.
ಮಗುವಿನ ಕಾರ್ಟೂನ್ ಪಾತ್ರವಿರುವ Google Kids Space ಮತ್ತು ಜಂಪಿಂಗ್ ಕ್ರಿಟ್ಟರ್ ಜೊತೆಗೆ ಫೀಚರ್ ಮಾಡಲಾಗಿರುವ ಕ್ಯುರೇಟ್ ಮಾಡಿದ ಆ್ಯಪ್ ಅನ್ನು ಪ್ರದರ್ಶಿಸುತ್ತಿರುವ ಸ್ಕ್ರೀನ್.
ಕುಟುಂಬಗಳಿಗಾಗಿ ವಿನ್ಯಾಸ ಮಾಡಿರುವ
ನಿಮ್ಮ ಮೆಚ್ಚಿನ ಪ್ರಾಡಕ್ಟ್‌ಗಳು.
YouTube Kids ನಿಂದ ಮಕ್ಕಳು ಆಯ್ಕೆಮಾಡಬಹುದಾದ ವಿವಿಧ ವೀಡಿಯೊಗಳನ್ನು ಪ್ರದರ್ಶಿಸುವ ಸ್ಕ್ರೀನ್

YouTube Kids

YouTube Kids ಮೂಲಕ ಕಲಿಕೆಯ ಮತ್ತು ಮೋಜಿನ ಜಗತ್ತನ್ನು ಅನ್ವೇಷಿಸಿ

ಆನ್‌ಲೈನ್ ವೀಡಿಯೊಗಳ ಮೂಲಕ ತಮ್ಮ ಆಸಕ್ತಿಗಳನ್ನು ಎಕ್ಸ್‌ಪ್ಲೋರ್ ಮಾಡಲು ಮಕ್ಕಳಿಗಾಗಿ ಸುರಕ್ಷಿತ ಪರಿಸರವನ್ನು ಒದಗಿಸಲು ನಾವು YouTube Kids ಅನ್ನು ರಚಿಸಿದ್ದೇವೆ. ನೀವು YouTube Kids ಆ್ಯಪ್ ಅನ್ನು ಡೌನ್‌ಲೋಡ್ ಮಾಡಿದರೂ, ವೆಬ್‌ನಲ್ಲಿ ನಮ್ಮ ಸೈಟ್‌ಗೆ ಭೇಟಿ ನೀಡಿದರೂ ಅಥವಾ ನಿಮ್ಮ ಸ್ಮಾರ್ಟ್ ಟಿವಿಯಲ್ಲಿ YouTube Kids ಅನ್ನು ವೀಕ್ಷಿಸಿದರೂ, ನಿಮ್ಮ ಎಲ್ಲಾ ಸಾಧನಗಳಾದ್ಯಂತ ನೀವು ವಿಭಿನ್ನ ವಿಷಯಗಳಿಗೆ ಸಂಬಂಧಿಸಿದ ಕುಟುಂಬ-ಸ್ನೇಹಿ ವೀಡಿಯೊಗಳನ್ನು ಹುಡುಕಬಹುದು.

Google Play ನಲ್ಲಿ ಶಿಕ್ಷಕರು ಅನುಮೋದಿಸಿರುವ ವಿಷಯವನ್ನು ಹೊಂದಿರುವ ಮಕ್ಕಳ ಟ್ಯಾಬ್ ಅನ್ನು ಫೀಚರ್ ಮಾಡಿರುವ ಫೋನ್

Google Play

ನಿಮ್ಮ ಮಗುವಿಗಾಗಿ Google Play ನಲ್ಲಿನ "ಶಿಕ್ಷಕರು ಅನುಮೋದಿಸಿರುವ" ವಿಷಯ

ನಿಮ್ಮ ಮಗುವಿಗೆ ಸರಿಹೊಂದುವ ವಿಷಯವನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡಲು ನಾವು ದೇಶದೆಲ್ಲೆಡೆಯ ಶೈಕ್ಷಣಿಕ ತಜ್ಞರು ಮತ್ತು ಶಿಕ್ಷಕರ ಜೊತೆಗೂಡಿದ್ದೇವೆ. ಕಲಿಕೆಯನ್ನು ಸಮೃದ್ಧಗೊಳಿಸುವ ಮತ್ತು ಮನರಂಜಿಸುವ "ಶಿಕ್ಷಕರು ಅನುಮೋದಿಸಿದ" ಆ್ಯಪ್‌ಗಳನ್ನು ಹುಡುಕಲು Google Play ಸ್ಟೋರ್‌ನಲ್ಲಿನ ನಮ್ಮ ಮಕ್ಕಳ ಟ್ಯಾಬ್ ಅನ್ನು ಬ್ರೌಸ್ ಮಾಡಿ. ಆ್ಯಪ್ ವಿವರಗಳು ಪುಟದಲ್ಲಿ, ಶಿಕ್ಷಕರು ಆ್ಯಪ್‌ಗಳಿಗೆ ಹೆಚ್ಚಿನ ರೇಟಿಂಗ್ ಏಕೆ ನೀಡುತ್ತಾರೆ ಎಂಬುದನ್ನು ನೀವು ನೋಡಬಹುದು ಮತ್ತು ಆ್ಯಪ್ ವಯಸ್ಸಿಗೆ ಸೂಕ್ತವಾಗಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಷಯ ರೇಟಿಂಗ್‌ಗಳನ್ನು ಪರಿಶೀಲಿಸಬಹುದು. ಆ್ಯಪ್ ಜಾಹೀರಾತುಗಳನ್ನು ಒಳಗೊಂಡಿದೆಯೇ, ಆ್ಯಪ್‌ನಲ್ಲಿನ ಖರೀದಿಗಳನ್ನು ಅನುಮತಿಸುತ್ತದೆಯೇ ಅಥವಾ ಅದಕ್ಕೆ ಸಾಧನದ ಅನುಮತಿಗಳು ಬೇಕಾಗುತ್ತವೆಯೇ ಎಂಬುದನ್ನು ಸಹ ನೀವು ನೋಡಬಹುದು.

ನಮ್ಮ Play ಸ್ಟೋರ್‌ಗೆ ಸಂಬಂಧಿಸಿದ ಡೆವಲಪರ್ ಕಾರ್ಯನೀತಿಗಳ ಮೂಲಕ ಮಕ್ಕಳಿಗಾಗಿ ಆ್ಯಪ್‌ಗಳನ್ನು ನಿರ್ಮಿಸುವ ಡೆವಲಪರ್‌ಗಳು ಅತ್ಯುನ್ನತ ಮಾನದಂಡಗಳನ್ನು ಪಾಲಿಸುವಂತೆ ನಾವು ನೋಡಿಕೊಳ್ಳುತ್ತೇವೆ.

ಸ್ಪೀಚ್ ಬಬಲ್‌ಗಳನ್ನು ಹೊಂದಿರುವ Google Home: "Ok Google, ನನಗೊಂದು ಕಥೆ ಹೇಳಿ" ಎಂದು ಯಾರೋ ಹೇಳುತ್ತಾರೆ. "ಖಂಡಿತ, ಇದು Google ಪ್ಲೇಬುಕ್‌ಗಳಲ್ಲಿನ Storynory ಯ "ನರಿ ಮತ್ತು ಕಾಗೆ"ಯ ಕುರಿತಾದ ಕಥೆಯಾಗಿದೆ..." ಎಂದು Google Assistant ಪ್ರತಿಕ್ರಿಯಿಸುತ್ತದೆ

Google Assistant

Google Assistant ನ ಸಹಾಯದಿಂದ ಸಂಪೂರ್ಣ ಕುಟುಂಬಕ್ಕೆ ಆನಂದ

ಸಂಪೂರ್ಣ ಕುಟುಂಬ ಒಟ್ಟಾಗಿ ಆನಂದಿಸಬಹುದಾದ ಮನರಂಜನೆಯನ್ನು ಕಂಡುಕೊಳ್ಳುವುದನ್ನು ನಿಮ್ಮ Assistant ಸುಲಭಗೊಳಿಸುತ್ತದೆ. ನಮ್ಮ ಅಕ್ಷನ್ಸ್ ಫಾರ್ ಫ್ಯಾಮಿಲೀಸ್ ಪ್ರೋಗ್ರಾಮ್ ಎಂಬ ಕಾರ್ಯಕ್ರಮದ ಮೂಲಕ ರಚಿಸಲಾಗಿರುವ ಕುಟುಂಬ-ಸ್ನೇಹಿ ಗೇಮ್‌ಗಳು ಮತ್ತು ಚಟುವಟಿಕೆಗಳನ್ನು ಅನ್ವೇಷಿಸಿ, ಅಥವಾ ನಿಮಗೊಂದು ಕಥೆ ಹೇಳುವಂತೆ Assistant ಗೆ ಹೇಳುವ ಮೂಲಕ ಮಲಗುವ ಮೊದಲು ನಿಮ್ಮ ಮೆಚ್ಚಿನ ಕಥೆಗಳನ್ನು ಕೇಳಿ. ನೀವು ಫಿಲ್ಟರ್‌ಗಳನ್ನು ಸೆಟಪ್ ಮಾಡಿದ ನಂತರ ಸಂಪೂರ್ಣ ಕುಟುಂಬ ಆನಂದಿಸಬಹುದಾದ ಸಂಗೀತವನ್ನು ಆಲಿಸಿ ಮತ್ತು ಅನ್‌ಪ್ಲಗ್ ಮಾಡಲು ಹಾಗೂ ಕುಟುಂಬದ ಜೊತೆಗಿನ ಸಮಯದ ಸಂಪೂರ್ಣ ಪ್ರಯೋಜನ ಪಡೆಯಲು ನಿಮ್ಮ ಸಾಧನದಲ್ಲಿನ ಸ್ಥಗಿತಕಾಲವನ್ನು ಬಳಸಿ. ನಮ್ಮ ಅಕ್ಷನ್ಸ್ ಫಾರ್ ಫ್ಯಾಮಿಲೀಸ್ ಪ್ರೋಗ್ರಾಮ್ ಚಟುವಟಿಕೆಗಳು ಕುಟುಂಬ ಸ್ನೇಹಿಯಾಗಿವೆಯೇ ಎಂಬುದನ್ನು ಮನುಷ್ಯ ವಿಮರ್ಶಕರು ಪರಿಶೀಲಿಸಿದ್ದಾರೆ, ಆದರೆ ಯಾವ ವ್ಯವಸ್ಥೆಯೂ ಪರಿಪೂರ್ಣವಾಗಿರುವುದಿಲ್ಲ. ಅನುಚಿತವಾದ ಕಂಟೆಂಟ್ ಒಳನುಸುಳಬಹುದಾದ ಕಾರಣ ನಮ್ಮ ರಕ್ಷಣಾ ಕ್ರಮಗಳನ್ನು ಸುಧಾರಿಸಲು ನಾವು ಯಾವಾಗಲೂ ಕಾರ್ಯಪ್ರವೃತ್ತರಾಗಿರುತ್ತೇವೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸುರಕ್ಷಿತ ಆನ್‌ಲೈನ್ ಕಲಿಕೆಯ ಪರಿಕರಗಳನ್ನು ನೀಡುವುದು.
Google Workspace ನ ಭಾಗವಾಗಿರುವ ವಿಭಿನ್ನ Google ಪ್ರಾಡಕ್ಟ್‌ಗಳನ್ನು ಫೀಚರ್ ಮಾಡುವ ಲ್ಯಾಪ್‌ಟಾಪ್

Google Workspace

ತರಗತಿಗಳಿಗಾಗಿ ಹೆಚ್ಚು ಸುರಕ್ಷಿತವಾದ ಕಲಿಕೆಯ ಪರಿಸರವನ್ನು ನಿರ್ಮಿಸುವುದು

Google Workspace for Education ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಾಧನಗಳಾದ್ಯಂತ ಸುರಕ್ಷಿತವಾಗಿ ಸಂವಹನ ನಡೆಸಲು ಸಹಾಯ ಮಾಡುತ್ತದೆ. ಅದರ ಪ್ರಧಾನ ಸೇವೆಗಳಲ್ಲಿ ಜಾಹೀರಾತುಗಳಿರುವುದಿಲ್ಲ ಮತ್ತು ಕೇಂದ್ರೀಕೃತ ಜಾಹೀರಾತುಗಳನ್ನು ಒದಗಿಸಲು ಪ್ರಾಥಮಿಕ ಮತ್ತು ದ್ವಿತೀಯ ದರ್ಜೆಯ (K–12) ಶಾಲೆಗಳಲ್ಲಿನ ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಬಳಸುವುದಿಲ್ಲ. ಸೂಕ್ತ ಚಟುವಟಿಕೆಗಳಿಗೆ ಸಂಬಂಧಿಸಿದ ನೀತಿಗಳನ್ನು ಹೊಂದಿಸಲು ಆಡಳಿತಾಧಿಕಾರಿಗಳಿಗೆ ಸಹಾಯ ಮಾಡಲು ಮತ್ತು ತಮ್ಮ ಶಾಲೆಯ Google ಖಾತೆಗಳನ್ನು ಬಳಸುವ ವಿದ್ಯಾರ್ಥಿಗಳನ್ನು ರಕ್ಷಿಸಲು ಸಹಾಯ ಮಾಡುವ ಪರಿಕರಗಳನ್ನು ಸಹ ನಾವು ಒದಗಿಸುತ್ತೇವೆ. ತಮ್ಮ ವಿದ್ಯಾರ್ಥಿಗಳು ಬಳಸುವ Google Workspace for Education ಸೇವೆಗಳಿಗೆ ಸಂಬಂಧಿಸಿದಂತೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಾಲೆಗಳಿಗೆ ಅಗತ್ಯವಿರುವ ಪರಿಕರಗಳ ಮತ್ತು ಸಂಪನ್ಮೂಲಗಳನ್ನು ಒದಗಿಸಲು ನಾವು ಬದ್ಧರಾಗಿರುತ್ತೇವೆ.

ಎರಡು Chromebook ಗಳು, ಒಂದರ ಹಿಂದೆ ಮತ್ತೊಂದು.

Chromebook ಗಳು

ತರಗತಿಗಳನ್ನು ಸುರಕ್ಷಿತವಾಗಿಸುವುದು

ಲಕ್ಷಾಂತರ ವಿದ್ಯಾರ್ಥಿಗಳು ತರಗತಿಗಳಲ್ಲಿ Chromebook ಗಳು – Google ಲ್ಯಾಪ್‌ಟಾಪ್‌ಗಳನ್ನು – ಬಳಸುತ್ತಾರೆ. ಆಡಳಿತಾಧಿಕಾರಿಗಳು ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಸಾಧ್ಯವಾದಷ್ಟು ಹೆಚ್ಚು ಅಥವಾ ಸಾಧ್ಯವಾದಷ್ಟು ಕಡಿಮೆ ಕಾರ್ಯಚಟುವಟಿಕೆ ಅಥವಾ ಪ್ರವೇಶವನ್ನು ಒದಗಿಸಲು ಗುಂಪು ಸೆಟ್ಟಿಂಗ್‌ಗಳನ್ನು ನಿರ್ವಹಿಸಬಹುದು. ನಮ್ಮ ಗೌಪ್ಯತೆ ಮತ್ತು ಸುರಕ್ಷತೆಯ ವೈಶಿಷ್ಟ್ಯಗಳು ಮಗುವಿನ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡುತ್ತವೆ ಮತ್ತು ಯುಎಸ್‌ನ K-12 ಶಾಲೆಗಳು ಮತ್ತು ಇತರೆ ದೇಶಗಳಲ್ಲಿನ ಅನೇಕ ಶಾಲೆಗಳಲ್ಲಿ Chromebook ಗಳನ್ನು ಉನ್ನತ ಆಯ್ಕೆಯನ್ನಾಗಿ ಮಾಡಲು ಸಹಾಯ ಮಾಡಿವೆ.

ಪೋಷಕರ ನಿಯಂತ್ರಣಗಳು

ಡಿಜಿಟಲ್ ಸಾಮಾನ್ಯ ನಿಯಮಗಳನ್ನು ಸೆಟ್ ಮಾಡಲು ಮತ್ತು ಆನ್‌ಲೈನ್‌ನಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ರೂಪಿಸಲು ಕುಟುಂಬಗಳಿಗೆ Google ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಿರಿ.