ಉದ್ಯಮದ ಅತ್ಯುತ್ತಮ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್ಲೈನ್ನಲ್ಲಿ ರಕ್ಷಿಸುತ್ತೇವೆ.
ನಾವು ಮಾಡುವ ಪ್ರತಿಯೊಂದನ್ನೂ ಸಹ ಪ್ರಬಲವಾದ ಅಂತರ್ನಿರ್ಮಿತ ಭದ್ರತಾ ತಂತ್ರಜ್ಞಾನಗಳಿಂದ ರಕ್ಷಿಸಲಾಗಿದೆ. ಇವು ಸ್ಪ್ಯಾಮ್, ಮಾಲ್ವೇರ್ ಮತ್ತು ವೈರಸ್ಗಳಂತಹ ಬೆದರಿಕೆಗಳನ್ನು ಪತ್ತೆಹಚ್ಚಲು ಹಾಗೂ ಅವುಗಳು ನಿಮ್ಮನ್ನು ತಲುಪದಂತೆ ತಡೆಯಲು ಸಹಾಯ ಮಾಡುತ್ತವೆ. ಮತ್ತು ಎಲ್ಲರೂ ಆನ್ಲೈನ್ನಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುವ ಉದ್ಯಮದ ಗುಣಮಟ್ಟಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ, ನಾವು ಈ ಭದ್ರತೆ ತಂತ್ರಜ್ಞಾನಗಳನ್ನು ಪಾಲುದಾರರೊಂದಿಗೆ ಮತ್ತು ಸ್ಪರ್ಧಿಗಳೊಂದಿಗೆ ಸಮಾನವಾಗಿ ಹಂಚಿಕೊಳ್ಳುತ್ತೇವೆ.
ಬಿಲ್ಟ್-ಇನ್ ಸಂರಕ್ಷಣೆ
ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಸಂರಕ್ಷಣೆ ನೀಡುವ ಕುರಿತು
ಜಗತ್ತಿನ ಅತ್ಯಂತ ಸುಧಾರಿತ ಭದ್ರತೆ ಮೂಲಸೌಕರ್ಯಗಳಲ್ಲೊಂದರಿಂದ Google ಸೇವೆಗಳು ನಿರಂತರವಾಗಿ ರಕ್ಷಿಸಲ್ಪಡುತ್ತವೆ. ಈ ಅಂತರ್ನಿರ್ಮಿತ ಭದ್ರತೆಯು, ಆನ್ಲೈನ್ ಬೆದರಿಕೆಗಳನ್ನು ಪತ್ತೆಹಚ್ಚುತ್ತದೆ ಮತ್ತು ತಡೆಯುತ್ತದೆ. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿಯು ಸುರಕ್ಷಿತವಾಗಿದೆಯೆಂದು ನೀವು ವಿಶ್ವಾಸವಿಡಬಹುದು.
ಭದ್ರತಾ ನಾಯಕತ್ವ
ಇಂಟರ್ನೆಟ್ನಾದ್ಯಂತ ಭದ್ರತೆಯನ್ನು ಬಲಪಡಿಸಲು ಸಹಭಾಗಿತ್ವ
ಜಗತ್ತಿನೆಲ್ಲೆಡೆ ಇರುವ ತನ್ನ ಪಾಲುದಾರರು, ಪ್ರತಿಸ್ಪರ್ಧಿಗಳು ಮತ್ತು ಸಂಸ್ಥೆಗಳ ಜೊತೆಗೆ ನಮ್ಮ ಭದ್ರತಾ ಕಲಿಕೆಗಳು, ಅನುಭವಗಳು ಮತ್ತು ತಂತ್ರಜ್ಞಾನಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಸುದೀರ್ಘ ಇತಿಹಾಸವನ್ನು Google ಹೊಂದಿದೆ. ಮತ್ತು ಭದ್ರತಾ ಬೆದರಿಕೆಗಳು ವಿಕಸನಗೊಂಡಂತೆ, ಬಳಕೆದಾರರನ್ನು ರಕ್ಷಿಸಲು ಮತ್ತು ಒಟ್ಟಾಗಿ ಹೆಚ್ಚು ಸುರಕ್ಷಿತ ಇಂಟರ್ನೆಟ್ ಅನ್ನು ರಚಿಸುವಂತೆ ಸಹಾಯ ಮಾಡಲು, ಈ ನಿರಂತರ ಉದ್ಯಮ-ವ್ಯಾಪಕ ಸಹಯೋಗವು ಮಹತ್ವದ್ದಾಗಿರುತ್ತದೆ.
ಭದ್ರತಾ ಸಲಹೆಗಳು
ಆನ್ಲೈನ್ನಲ್ಲಿ ಹೆಚ್ಚು ಸುರಕ್ಷಿತವಾಗಿರಲು ನಿಮಗೆ ಸಹಾಯ ಮಾಡುವ ಸಲಹೆಗಳು
ನೀವು ಪ್ರಬಲ ಪಾಸ್ವರ್ಡ್ಗಳನ್ನು ರಚಿಸಲು, ನಿಮ್ಮ ಸಾಧನಗಳನ್ನು ರಕ್ಷಿಸಿಕೊಳ್ಳಲು, ಫಿಶಿಂಗ್ ಪ್ರಯತ್ನಗಳಿಂದ ತಪ್ಪಿಸಿಕೊಳ್ಳಲು ಮತ್ತು ಇಂಟರ್ನೆಟ್ ಅನ್ನು ಸುರಕ್ಷಿತವಾಗಿ ಬ್ರೌಸ್ ಮಾಡಲು ನಾವು ಕೆಲವು ತ್ವರಿತ ಸಲಹೆಗಳನ್ನು ಹಾಗೂ ಅತ್ಯುತ್ತಮ ಅಭ್ಯಾಸಗಳನ್ನು ನಿಮಗಾಗಿ ಒಟ್ಟಾಗಿ ಸೇರಿಸಿದ್ದೇವೆ.