ಹುಡುಕಾಟ ನಡೆಸಲು ಸುರಕ್ಷಿತ ವಿಧಾನ

ಕಳೆದ 20 ವರ್ಷಗಳಲ್ಲಿ, ತಮ್ಮ ಪ್ರಶ್ನೆಗಳ ಮೂಲಕ ಕೋಟ್ಯಂತರ ಮಂದಿ Google Search ಮೇಲೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವಾಸಾರ್ಹವಾದ ಮಾಹಿತಿ ನೀಡುವುದು ಮತ್ತು ಬಿಲ್ಟ್ ಇನ್ ಭದ್ರತೆ ತಂತ್ರಜ್ಞಾನವನ್ನು ಬಳಸಿ ನಿಮ್ಮ ಗೌಪ್ಯತೆ ರಕ್ಷಣೆ ಮಾಡುವ ಮೂಲಕ ಆ ವಿಶ್ವಾಸವನ್ನು ಗಳಿಸಿಕೊಳ್ಳಲು ನಾವು ಪ್ರತಿ ದಿನವೂ ಕೆಲಸ ಮಾಡುತ್ತೇವೆ.

ಹುಡುಕಾಟ ಎಂಬುದು ಮೂಲದಲ್ಲಿಯೇ ಗೌಪ್ಯವಾದುದು

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತು ಪ್ರತಿ ಹುಡುಕಾಟವನ್ನೂ ಎನ್‌ಕ್ರಿಪ್ಟ್‌ ಮಾಡುವ ಮೂಲಕ ನಿಮ್ಮ ಡೇಟಾಗೆ ನಾವು ರಕ್ಷಣೆ ನೀಡುತ್ತೇವೆ. ನಾವು ನಿಯಂತ್ರಣಗಳನ್ನು ನಿರ್ಮಿಸುತ್ತೇವೆ. ಇದರಿಂದ, ನೀವು ನಿಮಗೆ ಸೂಕ್ತವಾದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಾವು ಎಂದಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡುವುದಿಲ್ಲ.

ಡೇಟಾ ಭದ್ರತೆ

ನಿಮ್ಮ ಡೇಟಾವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು, ವಿಶ್ವದಲ್ಲೇ ಕೆಲವು ಅತ್ಯಂತ ಸುಧಾರಿತ ಭದ್ರತಾ ಮೂಲಸೌಕರ್ಯವನ್ನು ನಿರ್ಮಿಸಿದ್ದೇವೆ. ಈ ಮೂಲಸೌಕರ್ಯವು, ನಿಮ್ಮ ಡೇಟಾ ನಿಮ್ಮ ಸಾಧನ ಮತ್ತು ನಮ್ಮ ಡೇಟಾ ಸೆಂಟರುಗಳ ನಡುವೆ ಸಾಗುವಾಗ ಅದನ್ನು ಗೌಪ್ಯವಾಗಿ ಮತ್ತು ಸುರಕ್ಷಿತವಾಗಿಡುತ್ತದೆ. ನಿಮ್ಮ ಹುಡುಕಾಟ ಇತಿಹಾಸವನ್ನು ನಿಮ್ಮ Google ಖಾತೆಯಲ್ಲಿ ಉಳಿಸಿದರೆ, ನೀವು ರಚಿಸುವ ಡೇಟಾ ನಿಮ್ಮ ಸಾಧನ, Google ಸೇವೆಗಳು ಮತ್ತು ನಮ್ಮ ಡೇಟಾ ಸೆಂಟರುಗಳ ಮಧ್ಯೆ ಓಡಾಡುತ್ತದೆ. HTTPS ಮತ್ತು ಉಳಿದೆಡೆ ಎನ್‌ಕ್ರಿಪ್ಷನ್‌ನಂತಹ ಮುಂಚೂಣಿಯಲ್ಲಿರುವ ಎನ್‌ಕ್ರಿಪ್ಷನ್ ತಂತ್ರಜ್ಞಾನ ಸೇರಿದಂತೆ ಹಲವು ಹಂತಗಳುಳ್ಳ ಭದ್ರತೆಯೊಂದಿಗೆ ಈ ಡೇಟಾವನ್ನು ನಾವು ರಕ್ಷಣೆ ಮಾಡುತ್ತೇವೆ.

ಡೇಟಾ ಜವಾಬ್ದಾರಿ

ನಿಮ್ಮ ಡೇಟಾವನ್ನು ರಕ್ಷಿಸುವ ಮತ್ತು ಗೌರವಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ. ಇದೇ ಕಾರಣಕ್ಕೆ, ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳುವುದೇ ಇಲ್ಲ.

ಬಳಕೆಗೆ ಸುಲಭವಾದ ನಿಯಂತ್ರಣಗಳು

ಹುಡುಕಾಟವು ಗೌಪ್ಯತೆ ನಿಯಂತ್ರಣಗಳನ್ನು ಒದಗಿಸುತ್ತದೆ. ಹೀಗಾಗಿ, ಏನನ್ನು Google ಖಾತೆಗೆ ಉಳಿಸಬೇಕು ಎಂಬುದನ್ನು ನೀವು ನಿರ್ಧಾರ ಮಾಡಬಹುದು. ನಿರಂತರವಾಗಿ ನಿಮ್ಮ ಡೇಟಾವನ್ನು ಸ್ವಯಂಚಾಲಿತವಾಗಿ ಅಳಿಸುವುದಕ್ಕಾಗಿ ಸ್ವಯಂ ಅಳಿಸುವಿಕೆ ಅನ್ನೂ ಕೂಡ ನೀವು ಆನ್‌ ಮಾಡಬಹುದು.

ನಿಮ್ಮ ಹುಡುಕಾಟ ಇತಿಹಾಸಕ್ಕೆ ಗೌಪ್ಯತೆ ರಕ್ಷಣೆ

ನೀವು ಒಂದು ಸಾಧನವನ್ನು ಹಂಚಿಕೊಂಡರೆ, ಇದನ್ನು ಬಳಸುವ ಇತರರು ನಿಮ್ಮ 'ನನ್ನ ಚಟುವಟಿಕೆ' ವಿಭಾಗಕ್ಕೆ ಹೋಗಬಾರದು ಮತ್ತು ಅಲ್ಲಿ ಉಳಿಸಿರುವ ಹುಡುಕಾಟ ಇತಿಹಾಸವನ್ನು ನೋಡಬಾರದು ಎಂದು ನೀವು ಬಯಸಬಹುದು. ನನ್ನ ಚಟುವಟಿಕೆಗೆ ಹೆಚ್ಚುವರಿ ಪರಿಶೀಲನೆ ಅಗತ್ಯವನ್ನು ನೀವು ಈಗ ಆಯ್ಕೆ ಮಾಡಿಕೊಳ್ಳಬಹುದು. ಈ ಸೆಟ್ಟಿಂಗ್‌ನಲ್ಲಿ ನೀವು ನಿಮ್ಮ ಪಾಸ್‌ವರ್ಡ್‌ ಅಥವಾ ಎರಡು ಅಂಶದ ದೃಢೀಕರಣದಂತಹ ಹೆಚ್ಚುವರಿ ಮಾಹಿತಿಯನ್ನು, ನಿಮ್ಮ ಸಂಪೂರ್ಣ ಇತಿಹಾಸವನ್ನು ನೋಡುವುದಕ್ಕೂ ಮೊದಲು ನೀವು ಒದಗಿಸಬೇಕಾಗುತ್ತದೆ.

ನೀವು ಹುಡುಕಾಟ ನಡೆಸುವಾಗ Google ನಿಮ್ಮನ್ನು ರಕ್ಷಿಸುತ್ತದೆ

Google Search ಹುಡುಕಾಟ ನಡೆಸುವುದಕ್ಕೆ ಅತ್ಯಂತ ಸುರಕ್ಷಿತ ವಿಧಾನವಾಗಿದೆ. ಪ್ರತಿ ದಿನವೂ ಹುಡುಕಾಟ ಫಲಿತಾಂಶಗಳಿಂದ 40 ಬಿಲಿಯನ್‌ ಸ್ಪ್ಯಾಮ್‌ ಸೈಟ್‌ಗಳನ್ನು ಹುಡುಕಾಟವು ನಿರ್ಬಂಧಿಸುತ್ತದೆ. ಇದರಿಂದ ನೀವು ಸುರಕ್ಷಿತವಾಗಿ ಹುಡುಕಾಟ ನಡೆಸಬಹುದಾಗಿದೆ ಮತ್ತು ನಿಮ್ಮ ಎಲ್ಲ ಹುಡುಕಾಟಗಳನ್ನು ಎನ್‌ಕ್ರಿಪ್ಟ್‌ ಮಾಡುವ ಮೂಲಕ ಸಕ್ರಿಯವಾಗಿ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಹುಡುಕಾಟಗಳ ಬಗ್ಗೆ ಇನ್ನಷ್ಟನ್ನು ತಿಳಿಯಲು ಮತ್ತು ನಿಮ್ಮ ಹುಡುಕಾಟ ಅನುಭವದ ನಿಯಂತ್ರಣ ಹೊಂದಲು ಪರಿಕರಗಳನ್ನು ಕೂಡ ಹುಡುಕಾಟವು ನೀಡುತ್ತದೆ.

ಫಲಿತಾಂಶಗಳಲ್ಲಿನ ವೆಬ್‌ಸ್ಪ್ಯಾಮ್‌ ಅನ್ನು ಹುಡುಕಾಟವು ಸಕ್ರಿಯವಾಗಿ ನಿರ್ಬಂಧಿಸುತ್ತದೆ

ಫಲಿತಾಂಶಗಳಲ್ಲಿನ ವೆಬ್‌ಸ್ಪ್ಯಾಮ್‌ ಅನ್ನು ಹುಡುಕಾಟವು ಸಕ್ರಿಯವಾಗಿ ನಿರ್ಬಂಧಿಸುತ್ತದೆ

ವೈಯಕ್ತಿಕ ಮಾಹಿತಿ ಅಥವಾ ನಿಮ್ಮ ಗುರುತು ಕಳೆದುಹೋಗಬಹುದಾದ ದುರುದ್ದೇಶಪೂರ್ವಕ ವೆಬ್‌ಸೈಟ್‌ಗಳಿಂದ ನಿಮ್ಮನ್ನು ರಕ್ಷಿಸಲು ಹುಡುಕಾಟವು ಸಹಾಯ ಮಾಡುತ್ತದೆ. ಪ್ರತಿ ದಿನವೂ ನಾವು ಹುಡುಕಾಟ ಫಲಿತಾಂಶಗಳಿಂದ 40 ಬಿಲಿಯನ್ ಪುಟಗಳನ್ನು ಗುರುತಿಸಿ ನಿರ್ಬಂಧಿಸುತ್ತೇವೆ. ಮಾಲ್‌ವೇರ್ ಹೊಂದಿರುವ ಸೈಟ್‌ಗಳು ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಳ್ಳತನ ಮಾಡಲು ದುರುದ್ದೇಶಪೂರ್ವಕವಾಗಿ ರಚಿಸಿದ ಸೈಟ್‌ಗಳೂ ಇದರಲ್ಲಿ ಒಳಗೊಂಡಿವೆ.

ಸುರಕ್ಷಿತ ಬ್ರೌಸಿಂಗ್‌

ಸುರಕ್ಷಿತ ಬ್ರೌಸಿಂಗ್‌

Google ಸುರಕ್ಷಿತ ಬ್ರೌಸಿಂಗ್‌ ನಾಲ್ಕು ಬಿಲಿಯನ್‌ಗೂ ಹೆಚ್ಚು ಸಾಧನಗಳನ್ನು ರಕ್ಷಿಸುತ್ತದೆ ಮತ್ತು ನೀವು ಪ್ರವೇಶಿಸಲು ಪ್ರಯತ್ನಿಸುತ್ತಿರುವ ಸೈಟ್‌ ಸುರಕ್ಷಿತವಾಗಿಲ್ಲದಿರಬಹುದು ಎಂಬುದನ್ನು ನಿಮಗೆ ತಿಳಿಸಲು ಎಚ್ಚರಿಕೆ ಸಂದೇಶಗಳನ್ನು, Chrome ನಲ್ಲಿ ನೀವು ಸಕ್ರಿಯಗೊಳಿಸಿದಾಗ ತೋರಿಸುತ್ತದೆ. ಸಂಭಾವ್ಯ ಮಾಲ್‌ವೇರ್‌ ಮತ್ತು ಫಿಶಿಂಗ್‌ ಸ್ಕ್ಯಾಮ್‌ಗಳಿಂದ ನಿಮ್ಮನ್ನು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಈ ಎಚ್ಚರಿಕೆಗಳು ಸಹಾಯಮಾಡುತ್ತವೆ.

ಎಲ್ಲ ಹುಡುಕಾಟಗಳನ್ನು ಎನ್‌ಕ್ರಿಪ್ಷನ್ ಬಳಸಿ ಸುರಕ್ಷಿತಗೊಳಿಸಲಾಗಿದೆ

Google.com ಮತ್ತು Google ಆ್ಯಪ್‌ನಲ್ಲಿನ ಎಲ್ಲ ಹುಡುಕಾಟಗಳನ್ನು ಡೀಫಾಲ್ಟ್‌ ಆಗಿ ಎನ್‌ಕ್ರಿಪ್ಟ್‌ ಮಾಡಲಾಗಿರುತ್ತದೆ. ಇದರಿಂದ ಈ ಡೇಟಾವನ್ನು ಮಧ್ಯಪ್ರವೇಶಿಸಲು ಯಾರಾದರೂ ಬಯಸಿದರೆ, ಅವರಿಂದ ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸುತ್ತದೆ.

ಸುರಕ್ಷಿತ ಹುಡುಕಾಟ

Google ಹುಡುಕಾಟದಲ್ಲಿ ಪೋರ್ನೋಗ್ರಫಿ ಮತ್ತು ಗ್ರಾಫಿಕ್ ಹಿಂಸೆಯಂತಹ ಆಕ್ಷೇಪಾರ್ಹ ಕಂಟೆಂಟ್ ಪತ್ತೆ ಮಾಡುವುದಕ್ಕಾಗಿ ಸುರಕ್ಷಿತ ಹುಡುಕಾಟವನ್ನು ವಿನ್ಯಾಸ ಮಾಡಲಾಗಿದೆ. ನಿಮ್ಮ ಹುಡುಕಾಟ ಫಲಿತಾಂಶಗಳಲ್ಲಿ ಆಕ್ಷೇಪಾರ್ಹ ಕಂಟೆಂಟ್ ನೋಡಲು ನೀವು ಬಯಸದಿದ್ದರೆ, ಪತ್ತೆಯಾದ ಯಾವುದೇ ಆಕ್ಷೇಪಾರ್ಹ ಕಂಟೆಂಟ್ ಅನ್ನು ನಿರ್ಬಂಧಿಸಲು ನೀವು ಫಿಲ್ಟರ್‌ ಅಥವಾ ಆಕ್ಷೇಪಾರ್ಹ ವಿಷಯವನ್ನು ಬ್ಲರ್ ಮಾಡಲು ಬ್ಲರ್‌ ಆಯ್ಕೆ ಮಾಡಬಹುದು. ನೀವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿರಬಹುದು ಎಂದು Google ಸಿಸ್ಟಮ್‌ಗಳು ಪತ್ತೆ ಮಾಡಿದಾಗ ಸುರಕ್ಷಿತ ಹುಡುಕಾಟವು ಸ್ವಯಂಚಾಲಿತವಾಗಿ ಫಿಲ್ಟರ್‌ ಗೆ ಸೆಟ್ ಆಗುತ್ತದೆ.

ನಿಮ್ಮ ಖಾತೆಯಿಂದ ಹುಡುಕಾಟ ಇತಿಹಾಸವನ್ನು ಅಳಿಸುವುದು ತುಂಬಾ ಸುಲಭ ಅಥವಾ ಉಳಿಸದೇ ಇರುವುದಕ್ಕೆ ಆಯ್ಕೆ ಮಾಡಬಹುದು

ನಿಮ್ಮ Google ಖಾತೆಗೆ ನಿಮ್ಮ ಹುಡುಕಾಟ ಇತಿಹಾಸವನ್ನು ಹೇಗೆ ಉಳಿಸಬೇಕು ಎಂಬುದನ್ನು ನಿಯಂತ್ರಿಸುವುದು ತುಂಬಾ ಸುಲಭ. ನೀವು ಉಳಿಸದೆಯೇ ಇರುವುದಕ್ಕೂ ಆಯ್ಕೆ ಮಾಡಿಕೊಳ್ಳಬಹುದು.

ನನ್ನ ಚಟುವಟಿಕೆ' ಯಲ್ಲಿ ನಿಮ್ಮ ಹುಡುಕಾಟ ಇತಿಹಾಸವನ್ನು ಅಳಿಸಿ

"ವೆಬ್‌ ಮತ್ತು ಆ್ಯಪ್‌ ಚಟುವಟಿಕೆ ಆನ್ ಮಾಡಿದಾಗ Google ನಲ್ಲಿ ನೀವು ಹುಡುಕಾಟ ನಡೆಸಿದರೆ, ನಿಮ್ಮ Google ಖಾತೆಗೆ ನಿಮ್ಮ ಹುಡುಕಾಟ ಇತಿಹಾಸದಂತಹ ಚಟುವಟಿಕೆಯನ್ನು Google ಉಳಿಸುತ್ತದೆ. ಆಪ್ ಮತ್ತು ಕಂಟೆಂಟ್ ಶಿಫಾರಸುಗಳಂತಹ ಇನ್ನಷ್ಟು ವೈಯಕ್ತಿಕ ಅನುಭವಗಳನ್ನು ಒದಗಿಸಲು Google ಸೇವೆಗಳಾದ್ಯಂತ ನಿಮ್ಮ ಉಳಿಸಿದ ಚಟುವಟಿಕೆಯನ್ನು ನಾವು ಬಳಸುತ್ತೇವೆ. ನಿಮ್ಮ Google ಖಾತೆಯಲ್ಲಿ ಉಳಿಸಿರುವ ಕೆಲವು ಅಥವಾ ಎಲ್ಲ ಹುಡುಕಾಟ ಇತಿಹಾಸವನ್ನು ಅಳಿಸಲು ‘ನನ್ನ ಚಟುವಟಿಕೆ’ ವಿಭಾಗಕ್ಕೆ ನೀವು ಹೋಗಬಹುದು ಮತ್ತು Google ಯಾವ ಚಟುವಟಿಕೆಯನ್ನು ಉಳಿಸುತ್ತದೆ ಮತ್ತು ನೀವು ಉಳಿಸಿದ ಚಟುವಟಿಕೆಯನ್ನು ಯಾವಾಗ Google ಸ್ವಯಂ ಆಗಿ ಅಳಿಸುತ್ತದೆ ಎಂಬಂತಹ ಸೆಟ್ಟಿಂಗ್‌ಗಳನ್ನು ನೀವು ನಿರ್ವಹಿಸಬಹುದು.

ನಿಮ್ಮ ಹುಡುಕಾಟ ಇತಿಹಾಸವನ್ನು ನಿಮ್ಮ Google ಖಾತೆಯಲ್ಲಿ ಉಳಿಸಿರದಿದ್ದರೂ ಅಥವಾ ನನ್ನ ಚಟುವಟಿಕೆ ವಿಭಾಗದಿಂದ ಅದನ್ನು ಅಳಿಸಿದರೂ, ನಿಮ್ಮ ಬ್ರೌಸರ್‌ ಅದನ್ನು ಇನ್ನೂ ಶೇಖರಿಟ್ಟಿರಬಹುದು ಎಂಬುದನ್ನು ಗಮನದಲ್ಲಿಡಿ. ನಿಮ್ಮ ಬ್ರೌಸರ್ ಇತಿಹಾಸವನ್ನು ಅಳಿಸುವುದು ಹೇಗೆ ಎಂಬ ಬಗ್ಗೆ ನಿರ್ದೇಶನಗಳಿಗಾಗಿ ನಿಮ್ಮ ಬ್ರೌಸರ್‌ನ ಸೂಚನೆಗಳನ್ನು ನೋಡಿ."

ಸ್ವಯಂ ಅಳಿಸುವ ನಿಯಂತ್ರಣಗಳನ್ನು ಬಳಸಿ

ಸ್ವಯಂ ಅಳಿಸುವ ನಿಯಂತ್ರಣಗಳನ್ನು ಬಳಸಿ

ಇತರ ವೆಬ್ ಮತ್ತು ಆ್ಯಪ್‌ ಚಟುವಟಿಕೆಯ ಜೊತೆಗೆ ನಿಮ್ಮ ಹುಡುಕಾಟ ಇತಿಹಾಸವನ್ನು ನಿಮ್ಮ ಖಾತೆಯಿಂದ ಮೂರು, 18 ಅಥವಾ 36 ತಿಂಗಳುಗಳ ನಂತರ Google ಸ್ವಯಂಚಾಲಿತವಾಗಿ ಮತ್ತು ನಿರಂತರವಾಗಿ ಅಳಿಸಲು ನೀವು ಆಯ್ಕೆ ಮಾಡಬಹುದು. ಹೊಸ ಖಾತೆಗಳಿಗೆ, ವೆಬ್ ಮತ್ತು ಆ್ಯಪ್‌ ಚಟುವಟಿಕೆಗೆ ಡೀಫಾಲ್ಟ್ ಸ್ವಯಂ ಅಳಿಸುವ ಆಯ್ಕೆಯು 18 ತಿಂಗಳುಗಳಾಗಿವೆ. ಆದರೆ, ನೀವು ಬಯಸಿದರೆ ಯಾವಾಗ ಬೇಕಾದರೂ ನಿಮ್ಮ ಸೆಟ್ಟಿಂಗ್ಸ್‌ ಅನ್ನು ನೀವು ಬದಲಿಸಿಕೊಳ್ಳಬಹುದು.


Google Search ಬಗ್ಗೆ ಇನ್ನಷ್ಟು ತಿಳಿಯಿರಿ
ನಾವು ತಯಾರಿಸುವ ಪ್ರತಿಯೊಂದು ಪ್ರೊಡಕ್ಟ್‌ನಲ್ಲೂ
ಸುರಕ್ಷತೆಯನ್ನು ಹೇಗೆ ನಿರ್ಮಿಸಲಾಗಿದೆ ಎಂದು ತಿಳಿಯಿರಿ.