ನಿಮ್ಮ ಮಾಹಿತಿಯನ್ನು
ಖಾಸಗಿಯಾಗಿ, ಸುರಕ್ಷಿತವಾಗಿ ಹಾಗೂ ಭದ್ರವಾಗಿರಿಸಲು Google Assistant ಅನ್ನು ನಿರ್ಮಿಸಲಾಗಿದೆ.
ನೀವು Google Assistant ಅನ್ನು ಬಳಸುವಾಗ, ನಿಮ್ಮ ಡೇಟಾವನ್ನು ನೀಡುವ ಮೂಲಕ ನೀವು ನಮ್ಮನ್ನು ನಂಬುತ್ತೀರಿ ಮತ್ತು ಅದನ್ನು ರಕ್ಷಿಸುವುದು ಮತ್ತು ಗೌರವಿಸುವುದು ನಮ್ಮ ಜವಾಬ್ದಾರಿಯಾಗಿದೆ. ಗೌಪ್ಯತೆ ಎಂಬುದು ವೈಯಕ್ತಿಕ ಸಂಗತಿ. ಅದಕ್ಕಾಗಿಯೇ, ನಿಮಗೆ ಸೂಕ್ತವಾದದ್ದನ್ನು ಆಯ್ಕೆಮಾಡುವುದಕ್ಕೆ ಸಹಾಯ ಮಾಡಲು ನಾವು ಸರಳವಾದ ಗೌಪ್ಯತೆ ನಿಯಂತ್ರಣಗಳನ್ನು ನಿರ್ಮಿಸಿದ್ದೇವೆ. Google Assistant ಹೇಗೆ ಕಾರ್ಯನಿರ್ವಹಿಸುತ್ತದೆ, ನಿಮ್ಮ ಬಿಲ್ಟ್-ಇನ್ ಗೌಪ್ಯತೆ ನಿಯಂತ್ರಣಗಳು, ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳು ಮತ್ತು ಇತ್ಯಾದಿಗಳ ಕುರಿತು ಇನ್ನಷ್ಟು ತಿಳಿಯಲು ಈ ಪುಟವನ್ನು ನೋಡಿ.
ಸ್ಟ್ಯಾಂಡ್‌ಬೈನಲ್ಲಿ ಪ್ರಾರಂಭವಾಗುತ್ತದೆ
"Ok Google" ಎಂದು ಹೇಳಿದ್ದು ಕೇಳಿಸುವಂತಹ ಸಕ್ರಿಯಗೊಳಿಸುವಿಕೆಯನ್ನು ಪತ್ತೆಹಚ್ಚುವವರೆಗೆ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಕಾಯಲು Google Assistant ಅನ್ನು ವಿನ್ಯಾಸಗೊಳಿಸಲಾಗಿದೆ. ಸ್ಟ್ಯಾಂಡ್‌ಬೈ ಮೋಡ್‌ನಲ್ಲಿರುವಾಗ, ನೀವು ಏನು ಹೇಳುತ್ತಿದ್ದೀರಿ ಎಂಬುದನ್ನು ನಿಮ್ಮ Assistant, Google ಗೆ ಅಥವಾ ಬೇರೆ ಯಾರಿಗೂ ಕಳುಹಿಸುವುದಿಲ್ಲ.
Google Assistant ಸಕ್ರಿಯಗೊಳಿಸುವಿಕೆಯನ್ನು ಪತ್ತೆಹಚ್ಚಿದ ನಂತರ, ಅದು ಸ್ಟ್ಯಾಂಡ್‌ಬೈ ಮೋಡ್‌ನಿಂದ ನಿರ್ಗಮಿಸುತ್ತದೆ ಮತ್ತು ನಿಮ್ಮ ವಿನಂತಿಯನ್ನು Google ಸರ್ವರ್‌ಗಳಿಗೆ ಕಳುಹಿಸುತ್ತದೆ. "Ok Google" ಅಥವಾ ಅನಪೇಕ್ಷಿತ ಹಸ್ತಚಾಲಿತ ಸಕ್ರಿಯಗೊಳಿಸುವಿಕೆಯಂತಹ ಶಬ್ದಗಳಿದ್ದರೂ ಸಹ ಇದು ಸಂಭವಿಸಬಹುದು.
ಆಡಿಯೋ ರೆಕಾರ್ಡಿಂಗ್‌ಗಳನ್ನು Google Assistant ಹೇಗೆ ನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ, ವೆಬ್ ಮತ್ತು ಆ್ಯಪ್ ಚಟುವಟಿಕೆ, ಮತ್ತು ಜಾಹೀರಾತುಗಳ ವೈಯಕ್ತೀಕರಣ.
ನಾನು ಹೇಳುವ ಎಲ್ಲವನ್ನೂ Google Assistant ರೆಕಾರ್ಡ್ ಮಾಡುತ್ತದೆಯೇ?
ಇಲ್ಲ. "Ok Google" ಎಂದು ಕೇಳಿದಾಗ ಅದು ಸಕ್ರಿಯಗೊಳಿಸುವಿಕೆಯನ್ನು ಪತ್ತೆಹಚ್ಚುವವರೆಗೆ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಕಾಯಲು Google Assistant ಅನ್ನು ವಿನ್ಯಾಸಗೊಳಿಸಲಾಗಿದೆ. ಸ್ಟ್ಯಾಂಡ್‌ಬೈ ಮೋಡ್‌ನಲ್ಲಿರುವಾಗ, ನೀವು ಏನು ಹೇಳುತ್ತಿದ್ದೀರಿ ಎಂಬುದನ್ನು ನಿಮ್ಮ Assistant Google ಗೆ ಅಥವಾ ಬೇರೆಯವರಿಗೆ ಕಳುಹಿಸುವುದಿಲ್ಲ. Google Assistant ಸಕ್ರಿಯಗೊಳಿಸುವಿಕೆಯನ್ನು ಪತ್ತೆಹಚ್ಚಿದ ನಂತರ, ಅದು ಸ್ಟ್ಯಾಂಡ್‌ಬೈ ಮೋಡ್‌ನಿಂದ ನಿರ್ಗಮಿಸುತ್ತದೆ ಮತ್ತು ನಿಮ್ಮ ವಿನಂತಿಯನ್ನು Google ಸರ್ವರ್‌ಗಳಿಗೆ ಕಳುಹಿಸುತ್ತದೆ. "Ok Google" ಅಥವಾ ಅನಪೇಕ್ಷಿತ ಹಸ್ತಚಾಲಿತ ಸಕ್ರಿಯಗೊಳಿಸುವಿಕೆಯಂತಹ ಶಬ್ದಗಳಿದ್ದರೂ ಸಹ ಇದು ಸಂಭವಿಸಬಹುದು.
ನನ್ನ Google Assistant ಅನ್ನು ನಾನು ಹೇಗೆ ಸಕ್ರಿಯಗೊಳಿಸಬಹುದು?
ನಿಮ್ಮ ಸಾಧನವನ್ನು ಅವಲಂಬಿಸಿ ನಿಮ್ಮ Assistant ಅನ್ನು ನೀವು ಕೆಲವು ವಿಧಾನಗಳಲ್ಲಿ ಸಕ್ರಿಯಗೊಳಿಸಬಹುದು. ಉದಾಹರಣೆಗೆ, ನೀವು "Ok Google" ಎಂದು ಹೇಳಬಹುದು ಅಥವಾ ನಿಮ್ಮ ಫೋನ್‌ನ ಪವರ್ ಬಟನ್ ಅಥವಾ ಹೋಮ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅದನ್ನು ಹಸ್ತಚಾಲಿತವಾಗಿ ಸಕ್ರಿಯಗೊಳಿಸಬಹುದು.
Google Assistant ಸಕ್ರಿಯಗೊಂಡಿರುವುದು ನನಗೆ ಹೇಗೆ ತಿಳಿಯುತ್ತದೆ?
ಸ್ಕ್ರೀನ್ ಮೇಲಿನ ಸೂಚಕ ಅಥವಾ ನಿಮ್ಮ ಸಾಧನದ ಮೇಲಿರುವ ಫ್ಲ್ಯಾಶಿಂಗ್ LED ಗಳಂತಹ ನಿಮ್ಮ ಸಾಧನದಲ್ಲಿರುವ ಸ್ಥಿತಿ ಸೂಚಕ, Google Assistant ಅನ್ನು ಯಾವಾಗ ಸಕ್ರಿಯಗೊಳಿಸಲಾಗಿದೆ ಎಂಬುದನ್ನು ನಿಮಗೆ ತಿಳಿಸುತ್ತದೆ.
ಕೆಲವೊಮ್ಮೆ ನಾನು Google Assistant ಅನ್ನು ಸಕ್ರಿಯಗೊಳಿಸದಿದ್ದರೂ ಅದು ಏಕೆ ಸಕ್ರಿಯಗೊಳ್ಳುತ್ತದೆ?
ನೀವು Google Assistant ಅನ್ನು ಸಕ್ರಿಯಗೊಳಿಸದಿದ್ದರೂ ಅದು ಸಕ್ರಿಯಗೊಳ್ಳುತ್ತದೆ, ಏಕೆಂದರೆ ನೀವು ಅದರ ಸಹಾಯವನ್ನು ಬಯಸಿದ್ದೀರಿ ಎಂದು ಅದು ತಪ್ಪಾಗಿ ತಿಳಿದುಕೊಂಡಿರುತ್ತದೆ - ಉದಾಹರಣೆಗೆ "Ok Google" ನಂತಹ ಶಬ್ದ ಇದ್ದಾಗ ಅಥವಾ ನೀವು ಆಕಸ್ಮಿಕವಾಗಿ ಅದನ್ನು ಹಸ್ತಚಾಲಿತವಾಗಿ ಸಕ್ರಿಯಗೊಳಿಸಿದಾಗ.
ಇದು ಸಂಭವಿಸಿದಲ್ಲಿ ಮತ್ತು ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆಯನ್ನು ಆನ್ ಮಾಡಿದರೆ, "Ok Google, ಅದು ನಿನಗಾಗಿ ಅಲ್ಲ" ಎಂದು ನೀವು ಹೇಳಬಹುದು ಮತ್ತು ನಿಮ್ಮ Assistant ನನ್ನ ಚಟುವಟಿಕೆ ಯಿಂದ ನೀವು ಹೇಳಿದ್ದನ್ನು ಅಳಿಸುತ್ತದೆ. ನೀವು ಯಾವುದೇ ಸಮಯದಲ್ಲಿ ನನ್ನ ಚಟುವಟಿಕೆಯಲ್ಲಿ ನಿಮ್ಮ Assistant ಸಂವಾದಗಳನ್ನು ಸಹ ಪರಿಶೀಲಿಸಬಹುದು ಮತ್ತು ಅಳಿಸಬಹುದು. ನೀವು Google Assistant ಅನ್ನು ಸಕ್ರಿಯಗೊಳಿಸದಿದ್ದರೂ ಅದು ಸಕ್ರಿಯಗೊಂಡರೆ ಮತ್ತು ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ, ನಿಮ್ಮ Assistant ಸಂವಹನವನ್ನು ನನ್ನ ಚಟುವಟಿಕೆಯಲ್ಲಿ ಸಂಗ್ರಹಿಸಲಾಗುವುದಿಲ್ಲ. ಆದಾಗ್ಯೂ, ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆ ಸೆಟ್ಟಿಂಗ್ ಆನ್ ಆಗಿದ್ದರೆ, ಯಾವುದೇ ಅನಗತ್ಯ ಸಕ್ರಿಯಗೊಳಿಸುವಿಕೆಗಳನ್ನು ಒಳಗೊಂಡಂತೆ ನಿಮ್ಮ Assistant ಸಂವಹನಗಳನ್ನು ನನ್ನ ಚಟುವಟಿಕೆಯಲ್ಲಿ ಸಂಗ್ರಹಿಸಲಾಗುತ್ತದೆ ಹಾಗೂ ಅವುಗಳನ್ನು ಸಾಮಾನ್ಯ ಸಕ್ರಿಯಗೊಳಿಸುವಿಕೆಗಳು ಎಂಬುದಾಗಿ ಪರಿಗಣಿಸಲಾಗುತ್ತದೆ. ನನ್ನ ಚಟುವಟಿಕೆಯಲ್ಲಿನ ನಿಮ್ಮ ಡೇಟಾವನ್ನು Google ನ ಗೌಪ್ಯತೆ ನೀತಿಯಲ್ಲಿ ವಿವರಿಸಿದಂತೆ Google ಸೇವೆಗಳನ್ನು (ಅನಗತ್ಯ ಸಕ್ರಿಯಗೊಳಿಸುವಿಕೆಗಳನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುವ ತಂತ್ರಜ್ಞಾನಗಳನ್ನು ಒಳಗೊಂಡಂತೆ) ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಬಳಸಲಾಗುತ್ತದೆ. ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆ ಸೆಟ್ಟಿಂಗ್ ಅನ್ನು ಆಫ್ ಮಾಡುವ ಮೂಲಕ ನೀವು ಯಾವಾಗಲೂ ಚಟುವಟಿಕೆ ಸೇವ್ ಆಗದಂತೆ ತಡೆಯಬಹುದು.
ನಿಮಗೆ ಸೂಕ್ತವಾಗುವ ರೀತಿಯಲ್ಲಿ Google Assistant ಅನ್ನು ಉತ್ತಮವಾಗಿ ಹೊಂದಿಸಲು, ನೀವು ("Ok Google" ನಂತಹ) ಸ್ಮಾರ್ಟ್ ಸ್ಪೀಕರ್‌ಗಳು ಮತ್ತು ಸ್ಮಾರ್ಟ್ ಡಿಸ್‌ಪ್ಲೇಗಳಿಗಾಗಿ Google Home ಆ್ಯಪ್ ಮೂಲಕ ಎಷ್ಟು ಸೂಕ್ಷ್ಮ ಎಂಬುದನ್ನು ಹೊಂದಿಸಿ ಎಂಬುದನ್ನು ಸಕ್ರಿಯಗೊಳಿಸುವ ಪದಗಳಿಗೆ ನಿಮ್ಮ Assistant ಎಷ್ಟು ಸೂಕ್ಷ್ಮವಾಗಿರುತ್ತದೆ ಎಂಬುದನ್ನು ಹೊಂದಿಸಬಹುದು.
ಅನಗತ್ಯ ಸಕ್ರಿಯಗೊಳಿಸುವಿಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಬಿಲ್ಡಿಂಗ್ ತಂತ್ರಜ್ಞಾನಗಳನ್ನು ಒಳಗೊಂಡಂತೆ ನಮ್ಮ ಸಿಸ್ಟಂಗಳನ್ನು ಎಲ್ಲರಿಗೂ ಉತ್ತಮಗೊಳಿಸಲು ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.
Google Assistant ಸ್ಟ್ಯಾಂಡ್‌ಬೈ ಮೋಡ್‌ನಲ್ಲಿರುವಾಗ ಅದು ಏನು ಮಾಡುತ್ತದೆ?
ಸಕ್ರಿಯಗೊಳಿಸುವಿಕೆಯನ್ನು ಪತ್ತೆಹಚ್ಚುವವರೆಗೆ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ನಿರೀಕ್ಷಿಸಲು Google Assistant ಅನ್ನು ವಿನ್ಯಾಸಗೊಳಿಸಲಾಗಿದೆ. ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ, ನೀವು “Ok Google” ಎಂದು ಹೇಳುವಂತಹ ಸಕ್ರಿಯಗೊಳಿಸುವಿಕೆಯನ್ನು ಪತ್ತೆಹಚ್ಚಲು ಸಾಧನವು ಆಡಿಯೊದ ಚಿಕ್ಕ ತುಣುಕುಗಳನ್ನು (ಕೆಲವು ಸೆಕೆಂಡುಗಳು) ಪ್ರಕ್ರಿಯೆಗೊಳಿಸುತ್ತದೆ. ಯಾವುದೇ ಸಕ್ರಿಯಗೊಳಿಸುವಿಕೆ ಪತ್ತೆಯಾಗದಿದ್ದರೆ, ಆ ಆಡಿಯೊ ತುಣುಕುಗಳನ್ನು Google ಗೆ ಕಳುಹಿಸಲಾಗುವುದಿಲ್ಲ ಅಥವಾ ಉಳಿಸಲಾಗುವುದಿಲ್ಲ.
Google Assistant ಸಕ್ರಿಯಗೊಳಿಸುವಿಕೆಯನ್ನು ಪತ್ತೆಹಚ್ಚಿದಾಗ ಏನಾಗುತ್ತದೆ?
ಒಮ್ಮೆ ಅದು ಸಕ್ರಿಯಗೊಳಿಸುವಿಕೆಯನ್ನು ಪತ್ತೆ ಹಚ್ಚಿದರೆ, ನಿಮ್ಮ Assistant ಸ್ಟ್ಯಾಂಡ್‌ಬೈ ಮೋಡ್‌ನಿಂದ ನಿರ್ಗಮಿಸುತ್ತದೆ - ಇದು ಅನಪೇಕ್ಷಿತ ಹಸ್ತಚಾಲಿತ ಸಕ್ರಿಯಗೊಳಿಸುವಿಕೆ ಅಥವಾ "Ok Google" ಎಂದು ಹೇಳುವ ಶಬ್ದವನ್ನು ಒಳಗೊಂಡಿರುತ್ತದೆ. ನಿಮ್ಮ ಸಾಧನವು ಕೇಳುವುದನ್ನು ರೆಕಾರ್ಡ್ ಮಾಡುತ್ತದೆ ಮತ್ತು ನಿಮ್ಮ ವಿನಂತಿಯನ್ನು ಪೂರೈಸಲು ಆಡಿಯೊ ರೆಕಾರ್ಡಿಂಗ್ ಅನ್ನು Google ಸರ್ವರ್‌ಗಳಿಗೆ ಕಳುಹಿಸುತ್ತದೆ. ನಿಮ್ಮ ಸಂಪೂರ್ಣ ವಿನಂತಿಯನ್ನು ಕಂಡುಹಿಡಿಯಲು ಸಕ್ರಿಯಗೊಳಿಸುವ ಮೊದಲು ರೆಕಾರ್ಡಿಂಗ್ ಕೆಲವು ಸೆಕೆಂಡ್‌ಗಳನ್ನು ಒಳಗೊಂಡಿರಬಹುದು.
Google ಸರ್ವರ್‌ಗಳಿಗೆ ಕಳುಹಿಸಲಾದ ಯಾವುದೇ ಆಡಿಯೊ ರೆಕಾರ್ಡಿಂಗ್‌ಗಳನ್ನು ನಂತರ ನಿಮ್ಮ Google ಖಾತೆಗೆ ಉಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಯಾವಾಗಲೂ ನಿಯಂತ್ರಣದಲ್ಲಿರುತ್ತೀರಿ. ಡೀಫಾಲ್ಟ್ ಆಗಿ, ನಿಮ್ಮ ಆಡಿಯೊ ರೆಕಾರ್ಡಿಂಗ್‌ಗಳನ್ನು ನಾವು ಉಳಿಸುವುದಿಲ್ಲ. ವೆಬ್ ಮತ್ತು ಆ್ಯಪ್ ಚಟುವಟಿಕೆ ಸೆಟ್ಟಿಂಗ್ ಅಡಿಯಲ್ಲಿನ “ಧ್ವನಿ ಮತ್ತು ಆಡಿಯೊ ರೆಕಾರ್ಡಿಂಗ್‌ಗಳನ್ನು ಸೇರಿಸಿ” ಚೆಕ್‌ಬಾಕ್ಸ್ ಅನ್ನು ವೀಕ್ಷಿಸುವ ಮೂಲಕ ನಿಮ್ಮ ಪ್ರಸ್ತುತ ಸೆಟ್ಟಿಂಗ್ ಅನ್ನು ನೀವು ಪರಿಶೀಲಿಸಬಹುದು.
ಗೌಪ್ಯತೆಗಾಗಿ ವಿನ್ಯಾಸಗೊಳಿಸಲಾಗಿದೆ
ಡೀಫಾಲ್ಟ್ ಆಗಿ, ನಿಮ್ಮ Google Assistant ಆಡಿಯೊ ರೆಕಾರ್ಡಿಂಗ್‌ಗಳನ್ನು ನಾವು ಉಳಿಸಿಕೊಳ್ಳುವುದಿಲ್ಲ. Google Assistant ನಿಮಗಾಗಿ ಕೆಲಸ ಮಾಡಲು ನಿಮ್ಮ ಡೇಟಾವನ್ನು ಹೇಗೆ ಬಳಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು “Google Assistant ನಲ್ಲಿನ ನಿಮ್ಮ ಡೇಟಾಗೆ” ಭೇಟಿ ನೀಡಿ.
Google Assistant ನನ್ನ ಡೇಟಾವನ್ನು ಹೇಗೆ ಬಳಸುತ್ತದೆ?
ನಿಮ್ಮ ಅನುಭವವನ್ನು ವೈಯಕ್ತೀಕರಿಸುವುದು ಸೇರಿದಂತೆ, ಅರ್ಥಮಾಡಿಕೊಳ್ಳಲು ಮತ್ತು ನಿಮಗೆ ಪ್ರತಿಕ್ರಿಯಿಸಲು ನಿಮ್ಮ ಲಿಂಕ್ ಮಾಡಲಾದ ಸಾಧನಗಳು ಮತ್ತು ಸೇವೆಗಳಿಂದ ನಿಮ್ಮ ಪ್ರಶ್ನೆಗಳು ಮತ್ತು ಮಾಹಿತಿಯನ್ನು Assistant ಬಳಸುತ್ತದೆ. ನಿಮ್ಮ ಲಿಂಕ್ ಮಾಡಲಾದ ಸಾಧನಗಳು ಮತ್ತು ಸೇವೆಗಳಿಂದ ಮಾಹಿತಿಯ ಉದಾಹರಣೆಗಳು ಸ್ಥಳ, ಸಂಪರ್ಕಗಳು, ಸಾಧನದ ಹೆಸರುಗಳು, ಕಾರ್ಯಗಳು, ಈವೆಂಟ್‌ಗಳು, ಅಲಾರಾಂಗಳು, ಇನ್‌ಸ್ಟಾಲ್ ಮಾಡಲಾದ ಆ್ಯಪ್‌ಗಳು ಮತ್ತು ಪ್ಲೇಪಟ್ಟಿಗಳನ್ನು ಒಳಗೊಂಡಿವೆ.
Google ನ ಗೌಪ್ಯತೆ ನೀತಿಯಲ್ಲಿ ವಿವರಿಸಿದಂತೆ Google ಉತ್ಪನ್ನಗಳು ಮತ್ತು ಸೇವೆಗಳು ಹಾಗೂ ಮಷಿನ್ ಲರ್ನಿಂಗ್ ತಂತ್ರಜ್ಞಾನಗಳನ್ನು (ಅನಗತ್ಯ ಸಕ್ರಿಯಗೊಳಿಸುವಿಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ತಂತ್ರಜ್ಞಾನಗಳನ್ನು ಒಳಗೊಂಡಂತೆ) ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಸಹ ನಿಮ್ಮ ಡೇಟಾವನ್ನು ಬಳಸಲಾಗುತ್ತದೆ. ಗುಣಮಟ್ಟವನ್ನು ನಿರ್ಣಯಿಸಲು ಮತ್ತು Assistant ಅನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು, ಮಾನವ ರಿವ್ಯೂವರ್‌ಗಳು (ಥರ್ಡ್ ಪಾರ್ಟಿಗಳ ಸಹಿತ) ನಿಮ್ಮ Assistant ಪ್ರಶ್ನೆಗಳು ಮತ್ತು ಸಂಬಂಧಿತ ಮಾಹಿತಿಯ ಪಠ್ಯವನ್ನು ಓದುತ್ತಾರೆ, ಟಿಪ್ಪಣಿ ಮಾಡುತ್ತಾರೆ ಮತ್ತು ಪ್ರಕ್ರಿಯೆಗೊಳಿಸುತ್ತಾರೆ. ಈ ಪ್ರಕ್ರಿಯೆಯ ಭಾಗವಾಗಿ ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ವಿಮರ್ಶಕರು ಅವುಗಳನ್ನು ನೋಡುವ ಅಥವಾ ಟಿಪ್ಪಣಿ ಮಾಡುವ ಮೊದಲು ನಿಮ್ಮ Google ಖಾತೆಯಿಂದ ನಿಮ್ಮ ಪ್ರಶ್ನೆಗಳ ಬೇರ್ಪಡಿಸುವಿಕೆಯನ್ನು ಇದು ಒಳಗೊಂಡಿರುತ್ತದೆ.
ನಿಮ್ಮ ಡೇಟಾ ಜೊತೆಗೆ Google Assistant ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ. Google ನಿಮ್ಮ ಡೇಟಾವನ್ನು ಹೇಗೆ ರಕ್ಷಿಸುತ್ತದೆ ಮತ್ತು ಬಳಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಲು Google ನ ಗೌಪ್ಯತೆ ನೀತಿ ಗೆ ಭೇಟಿ ನೀಡಿ.
Google Assistant ನನ್ನ ಆಡಿಯೊ ರೆಕಾರ್ಡಿಂಗ್‌ಗಳನ್ನು ಉಳಿಸಿಕೊಳ್ಳುತ್ತದೆಯೇ?
ಡೀಫಾಲ್ಟ್ ಆಗಿ, ನಿಮ್ಮ ಆಡಿಯೊ ರೆಕಾರ್ಡಿಂಗ್‌ಗಳನ್ನು ಉಳಿಸಲಾಗುವುದಿಲ್ಲ. ವೆಬ್ ಮತ್ತು ಆ್ಯಪ್ ಚಟುವಟಿಕೆ ಸೆಟ್ಟಿಂಗ್ ಅಡಿಯಲ್ಲಿ “ಆಡಿಯೊ ರೆಕಾರ್ಡಿಂಗ್‌ಗಳನ್ನು ಸೇರಿಸಿ” ಅನ್ನು ಚೆಕ್ ಮಾಡುವ ಮೂಲಕ ನಿಮ್ಮ ಆಡಿಯೊ ರೆಕಾರ್ಡಿಂಗ್‌ಗಳನ್ನು ನೀವು ಉಳಿಸಬಹುದು.
ನನ್ನ ಆಡಿಯೊ ರೆಕಾರ್ಡಿಂಗ್‌ಗಳನ್ನು ನನ್ನ Google ಖಾತೆಯಲ್ಲಿ ಸೇವ್ ಮಾಡುವುದರ ಪ್ರಯೋಜನವೇನು?
ಪ್ರತಿಯೊಬ್ಬರಿಗೂ ನಮ್ಮ ಆಡಿಯೋ ಗುರುತಿಸುವಿಕೆ ತಂತ್ರಜ್ಞಾನವನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು ನೀವು ಬಯಸಿದರೆ, ಎಲ್ಲರಿಗೂ ಉದ್ದೇಶಿಸದ ಸಕ್ರಿಯಗೊಳಿಸುವಿಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ತಂತ್ರಜ್ಞಾನಗಳು ಸೇರಿದಂತೆ, ನಿಮ್ಮ ಆಡಿಯೊ ರೆಕಾರ್ಡಿಂಗ್‌ಗಳನ್ನು ಸುರಕ್ಷಿತವಾಗಿ ಉಳಿಸಿಟ್ಟುಕೊಳ್ಳಲು ಮತ್ತು ನಮ್ಮ ಮಾತು ಸುಧಾರಣಾ ಸಿಸ್ಟಂಗಳಿಗೆ ಲಭ್ಯವಾಗುವಂತೆ ನೀವು ಆಯ್ಕೆ ಮಾಡಬಹುದು. ಇದು Google Assistant ನಂತಹ ಪ್ರಾಡಕ್ಟ್‌ಗಳು ಭವಿಷ್ಯದಲ್ಲಿ ಭಾಷೆಯನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ತಿಳಿಯಿರಿ.
ನನ್ನ ಹೊರತಾಗಿ ಬೇರೆ ಯಾರಿಗಾದರೂ ನಾನು ಸೇವ್ ಮಾಡಿದ ಆಡಿಯೊ ರೆಕಾರ್ಡಿಂಗ್‌ಗಳನ್ನು ಕೇಳಲು ಸಾಧ್ಯವಿದೆಯೇ?
ನಿಮ್ಮ ಆಡಿಯೊ ರೆಕಾರ್ಡಿಂಗ್‌ಗಳನ್ನು ಸೇವ್ ಮಾಡಲು ನೀವು ನಿರ್ಧರಿಸಿದರೆ, ಪ್ರತಿಯೊಬ್ಬರಿಗೂ ಅನಗತ್ಯ ಸಕ್ರಿಯಗೊಳಿಸುವಿಕೆಗಳನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುವ ತಂತ್ರಜ್ಞಾನಗಳನ್ನು ಒಳಗೊಂಡಂತೆ, ನಮ್ಮ ಆಡಿಯೊ ಗುರುತಿಸುವಿಕೆ ತಂತ್ರಜ್ಞಾನಗಳನ್ನು ಸುಧಾರಿಸುವುದಕ್ಕಾಗಿ ನಮಗೆ ಸಹಾಯ ಮಾಡುವಂತಹ ಕೆಲವು ಭಾಗಗಳನ್ನು ನಾವು ರಿವ್ಯೂ ಮಾಡಬಹುದು.
ಉದಾಹರಣೆಗೆ, ಆಡಿಯೊ ರೆಕಾರ್ಡಿಂಗ್‌ಗಳನ್ನು Google ನ ಆಡಿಯೊ ಪರಿಶೀಲನೆಯ ಪ್ರಕ್ರಿಯೆಗೆ ಬಳಸಬಹುದು. ಈ ಪ್ರಕ್ರಿಯೆಯಲ್ಲಿ, ಯಂತ್ರ-ಆಯ್ಕೆ ಮಾಡಿದ ಆಡಿಯೊ ಸ್ನಿಪ್ಪೆಟ್‌ಗಳ ಮಾದರಿಯನ್ನು ಅವರ Google ಖಾತೆಗಳಿಂದ ಬೇರ್ಪಡಿಸಲಾಗುತ್ತದೆ. ನಂತರ ತರಬೇತಿ ಪಡೆದ ರಿವ್ಯೂವರ್‌ಗಳು (ಥರ್ಡ್ ಪಾರ್ಟಿಗಳನ್ನು ಒಳಗೊಂಡ) ರೆಕಾರ್ಡಿಂಗ್ ಅನ್ನು ಟಿಪ್ಪಣಿ ಮಾಡಲು ಆಡಿಯೊವನ್ನು ವಿಶ್ಲೇಷಿಸಬಹುದು ಮತ್ತು ಹೇಳಲಾದ ಪದಗಳನ್ನು Google ನ ಆಡಿಯೊ ಗುರುತಿಸುವಿಕೆ ತಂತ್ರಜ್ಞಾನಗಳು ನಿಖರವಾಗಿ ಅರ್ಥಮಾಡಿಕೊಂಡಿವೆಯೇ ಎಂದು ಪರಿಶೀಲಿಸಬಹುದು. ಇದು Google Assistant ನಂತಹ ಪ್ರಾಡಕ್ಟ್ ಭವಿಷ್ಯದಲ್ಲಿ ಭಾಷೆಯನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ನನ್ನ ಆಡಿಯೊ ರೆಕಾರ್ಡಿಂಗ್‌ಗಳನ್ನು ಸರ್ಕಾರವು ಆ್ಯಕ್ಸೆಸ್ ಮಾಡಬಹುದೇ?
ಬಳಕೆದಾರರ ಡೇಟಾವನ್ನು ವಿನಂತಿಸುವ ಸರ್ಕಾರಿ ಏಜೆನ್ಸಿಗಳಿಗೆ Google ಕಾನೂನು ಪ್ರಕ್ರಿಯೆಗಳನ್ನು ನೀಡಬಹುದು. ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿ ನಾವು ಪ್ರತಿ ವಿನಂತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ. ವಿನಂತಿಯಲ್ಲಿ ಹೆಚ್ಚಿನ ಮಾಹಿತಿ ಕೇಳಿದ್ದರೆ ನಾವು ಅದನ್ನು ಸಂಕ್ಷಿಪ್ತಗೊಳಿಸಬಹುದು ಅಥವಾ ವಿನಂತಿಸಿದ ಡೇಟಾವನ್ನು ಒದಗಿಸಲು ನಾವು ನಿರಾಕರಿಸಬಹುದು. ನಮ್ಮ ಪಾರದರ್ಶಕತೆ ವರದಿಯಲ್ಲಿ, ನಾವು ಸ್ವೀಕರಿಸುವ ವಿನಂತಿಗಳ ಸಂಖ್ಯೆ ಮತ್ತು ಪ್ರಕಾರಗಳನ್ನು ನಾವು ಹಂಚಿಕೊಳ್ಳುತ್ತೇವೆ. ಇನ್ನಷ್ಟು ತಿಳಿಯಿರಿ
ನೀವು ನನ್ನ ಆಡಿಯೊ ರೆಕಾರ್ಡಿಂಗ್ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡುತ್ತೀರಾ?
ನಿಮ್ಮ ಆಡಿಯೊ ರೆಕಾರ್ಡಿಂಗ್‌ಗಳನ್ನು ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು Google ಎಂದಿಗೂ ಮಾರಾಟ ಮಾಡುವುದಿಲ್ಲ.
ಬಳಸಲು ಸುಲಭವಾದ ಗೌಪ್ಯತಾ ನಿಯಂತ್ರಣಗಳು
ಯಾವ ಸಂವಾದಗಳನ್ನು ಸಂಗ್ರಹಿಸಲಾಗಿದೆ ಎಂಬುದನ್ನು ನಿಯಂತ್ರಿಸಲು, "Ok Google, ನಾನು ಈ ವಾರ ಹೇಳಿದ್ದನ್ನು ಅಳಿಸಿ" ಎಂದು ಹೇಳಿ ಹಾಗೂ Google Assistant ಆ ಸಂವಾದಗಳನ್ನು "ನನ್ನ ಚಟುವಟಿಕೆ" ಯಲ್ಲಿ ಅಳಿಸುತ್ತದೆ.
ನನ್ನ ಗೌಪ್ಯತೆ ನಿಯಂತ್ರಣಗಳನ್ನು ನಾನು ಎಲ್ಲಿ ನೋಡಬಹುದು?
ಗೌಪ್ಯತೆ ಮತ್ತು ಸುರಕ್ಷತೆಯ ಕುರಿತಾದ ಸರ್ವೆ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು, Google Assistant ಬಳಿ “ನನ್ನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಾನು ಎಲ್ಲಿ ಬದಲಾಯಿಸಬಹುದು?” ಎಂಬ ರೀತಿಯ ಪ್ರಶ್ನೆಗಳನ್ನು ಕೇಳಿ. ನಿಮ್ಮ ಗೌಪ್ಯತೆ ನಿಯಂತ್ರಣಗಳನ್ನು ಪ್ರವೇಶಿಸಲು, ನೀವು ಯಾವಾಗ ಬೇಕಾದರೂ “Assistant ನಲ್ಲಿರುವ ನಿಮ್ಮ ಡೇಟಾಗೆ” ನೇರವಾಗಿ ಭೇಟಿ ನೀಡಬಹುದು.
ನನ್ನ ಚಟುವಟಿಕೆಯಲ್ಲಿ ನನ್ನ Assistant ಸಂವಾದಗಳನ್ನು ನಾನು ಅಳಿಸಬಹುದು ಎಂದು ನೀವು ಹೇಳಿದ್ದೀರಿ. ಅದು ಹೇಗೆ?
ನನ್ನ ಚಟುವಟಿಕೆಯಿಂದ ನಿಮ್ಮ Assistant ಸಂವಾದಗಳನ್ನು ನೀವು ಪರಿಶೀಲಿಸಬಹುದು ಮತ್ತು ಅಳಿಸಬಹುದು ಅಥವಾ "Ok Google, ನಾನು ಈ ವಾರ ಹೇಳಿದ್ದನ್ನು ಅಳಿಸಿ" ಎಂದು ಹೇಳುವ ಮೂಲಕ ಅಳಿಸಬಹುದು. ಹೆಚ್ಚುವರಿ ನಿಯಂತ್ರಣಗಳನ್ನು ಪ್ರವೇಶಿಸಲು ನಿಮ್ಮ Assistant ಸೆಟ್ಟಿಂಗ್‌ಗಳು ಗೆ ಭೇಟಿ ನೀಡಿ.
ನನ್ನ ಡೇಟಾವನ್ನು ನಾನು ಸ್ವಯಂ-ಅಳಿಸುವಿಕೆಗೆ ಹೊಂದಿಸಬಹುದೇ?
ಹೌದು, ನನ್ನ ಚಟುವಟಿಕೆ ನಿಂದ ನಿಮ್ಮ ಚಟುವಟಿಕೆಯ ಡೇಟಾವನ್ನು ನೀವು ಸ್ವಯಂ-ಅಳಿಸುವಿಕೆಯನ್ನು ಹೊಂದಬಹುದು. ನಿಮ್ಮ ಚಟುವಟಿಕೆಯ ಡೇಟಾವನ್ನು ಎಷ್ಟು ಸಮಯದವರೆಗೆ ಉಳಿಸಬೇಕೆಂದು ನೀವು ಬಯಸುತ್ತೀರಿ – 3, 18 ಅಥವಾ 36 ತಿಂಗಳುಗಳು – ಮತ್ತು ಅದಕ್ಕಿಂತ ಹಳೆಯದಾದ ಯಾವುದೇ ಡೇಟಾವನ್ನು ನನ್ನ ಚಟುವಟಿಕೆಯಿಂದ ಸ್ವಯಂಚಾಲಿತವಾಗಿ ಸಮಯಕ್ಕೆ ಅನುಗುಣವಾಗಿ ಅಳಿಸಲಾಗುತ್ತದೆ.
ನನ್ನ ಅನುಭವವನ್ನು ವೈಯಕ್ತಿಕಗೊಳಿಸಲು Google Assistant ಡೇಟಾವನ್ನು ಹೇಗೆ ಬಳಸುತ್ತದೆ?
ನಿಮ್ಮ Google ಖಾತೆಯಲ್ಲಿನ ಡೇಟಾ ನಿಮ್ಮ Google Assistant ಅನುಭವವನ್ನು ವೈಯಕ್ತಿಕಗೊಳಿಸುತ್ತದೆ ಮತ್ತು ನಿಮ್ಮ Assistant ಅನ್ನು ನಿಮಗೆ ಹೆಚ್ಚು ಉಪಯುಕ್ತವಾಗುವಂತೆ ಮಾಡುತ್ತದೆ.
ಕೆಲವು ಪ್ರಶ್ನೆಗಳ ಕುರಿತು ಸಹಾಯ ಮಾಡಲು Google Assistant ಗೆ ನಿಮ್ಮ ಡೇಟಾದ ಅಗತ್ಯವಿರುತ್ತದೆ. ಉದಾಹರಣೆಗೆ, “ನನ್ನ ಅಮ್ಮನ ಜನ್ಮದಿನ ಯಾವಾಗ?” ಎಂದು ನೀವು ಕೇಳಿದರೆ, “ಅಮ್ಮ” ಯಾರೆಂದು ತಿಳಿಯಲು ಮತ್ತು ಅವರ ಜನ್ಮದಿನವನ್ನು ನೋಡಲು ನಿಮ್ಮ Assistant ಗೆ ನಿಮ್ಮ ಸಂಪರ್ಕಗಳನ್ನು ಉಲ್ಲೇಖಿಸುವ ಅಗತ್ಯವಿರುತ್ತದೆ. ಅಥವಾ “ನಾಳೆ ನನಗೆ ಕೊಡೆಯ ಅಗತ್ಯವಿದೆಯೇ?” ಎಂದು ಕೇಳಿದರೆ, ನಿಮಗೆ ಹೆಚ್ಚು ನಿಖರವಾದ ಉತ್ತರವನ್ನು ನೀಡಲು ನಿಮ್ಮ Assistant ಗೆ ನಿಮ್ಮ ಪ್ರಸ್ತುತ ಸ್ಥಳದ ಮಾಹಿತಿ ಇರಬೇಕಾಗುತ್ತದೆ.
ಕ್ರಿಯಾಶೀಲ ಸಲಹೆಗಳನ್ನು ನಿಮಗೆ ಒದಗಿಸಲು ಸಹ Google Assistant ಡೇಟಾವನ್ನು ಬಳಸುತ್ತದೆ. ಉದಾಹರಣೆಗೆ, ನಿಮ್ಮ ಸ್ಥಳದ ಮಾಹಿತಿಯನ್ನು ಬಳಸಿಕೊಂಡು ನೀವು ದಿನನಿತ್ಯ ಸಂಚರಿಸುವ ಮಾರ್ಗಗಳಲ್ಲಿ ಟ್ರಾಫಿಕ್ ಇದ್ದಾಗ ನಿಮ್ಮ Assistant ನಿಮಗೆ ತಿಳಿಸುತ್ತದೆ.
ನಿಮ್ಮ Google ಖಾತೆಯಲ್ಲಿನ ಚಟುವಟಿಕೆಯನ್ನು ಬಳಸಿಕೊಂಡು Google Assistant ನಿಮ್ಮ ಫಲಿತಾಂಶಗಳನ್ನು ಸುಧಾರಿಸುತ್ತದೆ. ಉದಾಹರಣೆಗೆ, “ನಾನು ಇಂದು ರಾತ್ರಿ ಊಟಕ್ಕೆ ಏನು ಮಾಡಲಿ?” ಎಂದು ನೀವು ಕೇಳಿದರೆ, ವೈಯಕ್ತಿಕಗೊಳಿಸಿದ ರೆಸಿಪಿಯ ಶಿಫಾರಸುಗಳನ್ನು ಒದಗಿಸಲು ನಿಮ್ಮ Assistant ಹಿಂದಿನ ಹುಡುಕಾಟ ಇತಿಹಾಸವನ್ನು ಬಳಸುತ್ತದೆ.
ನಿಮ್ಮ ಡೇಟಾವನ್ನು ವೀಕ್ಷಿಸಲು ಅಥವಾ ಅಳಿಸಲು, ನಿಮ್ಮ ಪ್ರಸ್ತುತ ಸೆಟ್ಟಿಂಗ್‌ಗಳನ್ನು ಪರಿಶೀಲಿಸಲು ಮತ್ತು ಲಭ್ಯವಿರುವ ನಿಯಂತ್ರಣಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನೀವು ಯಾವಾಗ ಬೇಕಾದರೂ “Google Assistant ನಲ್ಲಿರುವ ನಿಮ್ಮ ಡೇಟಾಗೆ” ಭೇಟಿ ನೀಡಬಹುದು.
ನಿಮ್ಮ ಡೇಟಾವನ್ನು Google ಹೇಗೆ ರಕ್ಷಿಸುತ್ತದೆ ಮತ್ತು ಬಳಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು Google ನ ಗೌಪ್ಯತೆ ನೀತಿಗೆ ಭೇಟಿ ನೀಡಿ.
ನಿಮ್ಮ ಡೇಟಾ ಮೂಲಕ Google Assistant ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
Google Assistant ನನಗೆ ವೈಯಕ್ತಿಕಗೊಳಿಸಿದ ಫಲಿತಾಂಶಗಳನ್ನು ನೀಡಿದರೆ ನಾನು ನಿಯಂತ್ರಿಸಬಹುದೇ?
ಹೌದು. ಹಲವಾರು ಬಳಕೆದಾರರು, ಹಂಚಿಕೊಂಡ ಸಾಧನದಲ್ಲಿ ಪ್ರತಿಯೊಬ್ಬರೂ ವೈಯಕ್ತಿಕಗೊಳಿಸಿದ ಅನುಭವ ಪಡೆಯುವುದನ್ನು Google Assistant ಸುಲಭವಾಗಿಸುತ್ತದೆ. ವೈಯಕ್ತಿಕ ಫಲಿತಾಂಶಗಳನ್ನು ಸ್ವೀಕರಿಸಲು - ಉದಾಹರಣೆಗೆ, ಕೆಲಸದ ಸ್ಥಳವನ್ನು ತಲುಪಲು ನಿರ್ದೇಶನಗಳು ಅಥವಾ ವೈಯಕ್ತಿಕಗೊಳಿಸಿದ ರೆಸಿಪಿ ಶಿಫಾರಸುಗಳು - ನಿಮ್ಮ Assistant ನಿಮ್ಮ ಧ್ವನಿಯನ್ನು ಗುರುತಿಸಿದಾಗ ಮಾತ್ರ, ಈ ಹಂತಗಳನ್ನು ಅನುಸರಿಸುವ ಮೂಲಕ Voice Match ಸೆಟಪ್ ಮಾಡಿ. ಈ ಹಂತಗಳನ್ನು ಅನುಸರಿಸುವ ಮೂಲಕ Family Link ಬಳಕೆದಾರರು ಸಹ Google Assistant ನಿಂದ ವೈಯಕ್ತಿಕ ಫಲಿತಾಂಶಗಳನ್ನು ಪಡೆಯಬಹುದು.
ಮೊಬೈಲ್‌ನಲ್ಲಿ ಮತ್ತು ಸ್ಪೀಕರ್‌ಗಳಂತಹ ಹಂಚಿಕೊಂಡ ಸಾಧನಗಳಲ್ಲಿ, ನಿಮ್ಮ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ನೀವು ವೈಯಕ್ತಿಕ ಫಲಿತಾಂಶಗಳಿಗೆ ಪ್ರವೇಶವನ್ನು ನಿಯಂತ್ರಿಸಬಹುದು. ಮತ್ತು ಮೊಬೈಲ್‌ನಲ್ಲಿ, ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ವೈಯಕ್ತಿಕ ಫಲಿತಾಂಶಗಳು ಹೇಗೆ ಕಾಣಿಸಬೇಕು ಎಂಬುದನ್ನು ನೀವು ನಿಯಂತ್ರಿಸಬಹುದು.
ಕುಟುಂಬಗಳಿಗಾಗಿ ನಿರ್ಮಿಸಲಾಗಿದೆ
ನಿಮ್ಮ ಇಡೀ ಕುಟುಂಬವನ್ನು ಮನರಂಜಿಸಲು ಮತ್ತು ಟ್ರ್ಯಾಕ್‌ನಲ್ಲಿರಿಸಲು, Google Assistant ಹಲವಾರು ಮಾರ್ಗಗಳನ್ನು ನೀಡುತ್ತದೆ. Family Link ನಂತಹ ಪರಿಕರಗಳು Assistant ಜೊತೆಗೆ ನಿಮ್ಮ ಕುಟುಂಬವು ಹೇಗೆ ಸಂವಹನ ನಡೆಸುತ್ತದೆ ಎಂಬದನ್ನು ನಿರ್ವಹಿಸುವುದಕ್ಕೆ ನಿಮಗೆ ಸಹಾಯ ಮಾಡಬಹುದು.
Google Assistant ಕುಟುಂಬ ಸ್ನೇಹಿ ಕಂಟೆಂಟ್ ಅನ್ನು ಹೇಗೆ ಒದಗಿಸುತ್ತದೆ?
ಥರ್ಡ್-ಪಾರ್ಟಿ ಡೆವಲಪರ್‌ಗಳ ಮೂಲಕ ಒದಗಿಸಲಾದ ಕೆಲವು ಕಂಟೆಂಟ್ ಒಳಗೊಂಡಂತೆ, ಮಕ್ಕಳು ಮತ್ತು ಕುಟುಂಬಗಳಿಗಾಗಿ ಕಥೆಗಳಿಂದ ಹಿಡಿದು ಗೇಮ್‌ಗಳು ಹಾಗೂ ಕಲಿಕೆಯ ಪರಿಕರಗಳವರೆಗೆ ವಿವಿಧ ಬಗೆಯ ಚಟುವಟಿಕೆಗಳನ್ನು Google Assistant ಒದಗಿಸುತ್ತದೆ. ಈ ಡೆವಲಪರ್‌ಗಳು ಶಿಕ್ಷಕರು ಅನುಮೋದಿಸಿದ ಆ್ಯಪ್ ಮೂಲಕ Assistant ನಲ್ಲಿ ಕುಟುಂಬಗಳಿಗಾಗಿ ಕಂಟೆಂಟ್ ಅನ್ನು ಪ್ರಕಟಿಸಲು ಅಥವಾ ತಮ್ಮ ಕುಟುಂಬ ಸ್ನೇಹಿ ಕ್ರಿಯೆಗಾಗಿ Google ಜೊತೆಗೆ ಪಾಲುದಾರಿಕೆ ಒಪ್ಪಂದವನ್ನು ಮಾಡಿಕೊಳ್ಳುವ ಮೂಲಕ ಅರ್ಹತೆ ಪಡೆಯಬೇಕು. ಥರ್ಡ್-ಪಾರ್ಟಿ ಡೆವಲಪರ್‌ಗಳು ಒದಗಿಸುವ, ಮಕ್ಕಳಿಗಾಗಿ ಉದ್ದೇಶಿಸಲಾದ ಯಾವುದೇ ಕ್ರಿಯೆಗಳು ನಮ್ಮ ಕುಟುಂಬಗಳಿಗೆ ಸಂಬಂಧಿಸಿದ ಕ್ರಿಯೆಗಳ ಪ್ರೋಗ್ರಾಂನ ನಿರ್ದಿಷ್ಟ ಅವಶ್ಯಕತೆಗಳನ್ನು ನಮ್ಮ ಪ್ರಮಾಣಿತ ಕ್ರಿಯೆಗಳಿಗೆ ಹೆಚ್ಚುವರಿಯಾಗಿ ನೀತಿಗಳನ್ನು ಪೂರೈಸಬೇಕು. Google Assistant ನಲ್ಲಿ ಅವುಗಳು ಸಾಮಾನ್ಯವಾಗಿ ಲಭ್ಯವಾಗುವ ಮೊದಲು, ನಮ್ಮ ನೀತಿಗಳು ಮತ್ತು ಅವಶ್ಯಕತೆಗಳು ಈ ಕ್ರಿಯೆಗಳೊಂದಿಗೆ ಅನುಸರಣೆಯಲ್ಲಿದೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ.
Google Assistant ಮೂಲಕ ನನ್ನ ಕುಟುಂಬದ ಸದಸ್ಯರು ಯಾವ ಕಂಟೆಂಟ್ ಅನ್ನು ಪಡೆಯುತ್ತಾರೆ ಎಂಬುದನ್ನು ನಾನು ಹೇಗೆ ನಿರ್ವಹಿಸಬಹುದು?
Google Home ಆ್ಯಪ್‌ನಲ್ಲಿ ಡಿಜಿಟಲ್ ಯೋಗಕ್ಷೇಮದ ನಿಯಂತ್ರಣಗಳನ್ನು ಬಳಸಿಕೊಂಡು ಸ್ಮಾರ್ಟ್ ಡಿಸ್‌ಪ್ಲೇಗಳಂತಹ ನಿಮ್ಮ ಮನೆಯಲ್ಲಿ ಹಂಚಿಕೊಂಡ ಸಾಧನಗಳಿಗಾಗಿ ನೀವು ಕಂಟೆಂಟ್ ನಿಯಂತ್ರಣಗಳನ್ನು ಸೆಟ್ ಮಾಡಬಹುದು. ಈ ಸೆಟ್ಟಿಂಗ್‌ಗಳ ಮೂಲಕ ನೀವು ಡೌನ್‌ಟೈಮ್ ಶೆಡ್ಯೂಲ್‌ಗಳು, ಕಂಟೆಂಟ್ ಫಿಲ್ಟರ್ ಮಾಡುವ ಸೆಟ್ಟಿಂಗ್‌ಗಳನ್ನು ನಿರ್ವಹಿಸಬಹುದು ಹಾಗೂ ಫೋನ್ ಕರೆಗಳಂತಹ ಕೆಲವು ಚಟುವಟಿಕೆಗಳನ್ನು ಸೀಮಿತಗೊಳಿಸಬಹುದು. Family Link ಬಳಸಿಕೊಂಡು ಅತಿಥಿಗಳು ಮತ್ತು ಮೇಲ್ವಿಚಾರಣೆ ಮಾಡಿದ ಖಾತೆಗಳಿಗೆ ಅಥವಾ ಆ ಸಾಧನದ ಎಲ್ಲಾ ಬಳಕೆದಾರರಿಗೆ ಈ ಸೆಟ್ಟಿಂಗ್‌ಗಳು ಅನ್ವಯಿಸುತ್ತವೆಯೇ ಎಂಬುದನ್ನು ಸಹ ನೀವು ನಿರ್ಧರಿಸಬಹುದು.
Family Link ನಲ್ಲಿ ನೀಡಲಾದ ಪೋಷಕ ನಿಯಂತ್ರಣಗಳನ್ನು ಬಳಸಿಕೊಂಡು ಮಕ್ಕಳಿಗೆ ನೀವು ಪ್ರತ್ಯೇಕ ಮಿತಿಗಳನ್ನು ಅಳವಡಿಸಬಹುದು. ಹಂಚಿಕೊಂಡ ಸಾಧನಗಳಲ್ಲಿ, Voice Match ಬಳಸಿಕೊಂಡು ಸಾಧನಕ್ಕೆ ನಿಮ್ಮ ಮಗುವಿನ ಖಾತೆಯನ್ನು ನೀವು ಲಿಂಕ್ ಮಾಡಬಹುದು, ಇದರಿಂದ Assistant ಅವರನ್ನು ಗುರುತಿಸಬಹುದು. ನಿಮ್ಮ ಮಗುವನ್ನು ನೋಂದಾಯಿಸಿದ ನಂತರ, ಅವರು “ಕುಟುಂಬಗಳಿಗಾಗಿ” ಬ್ಯಾಡ್ಜ್‌ನೊಂದಿಗೆ ಮಾತ್ರ Google ಅಲ್ಲದ ಕ್ರಿಯೆಗಳನ್ನು ಪ್ರವೇಶಿಸಬಹುದು ಮತ್ತು Assistant ಮೂಲಕ ಖರೀದಿಗಳನ್ನು ಮಾಡುವಂತಹ ಕೆಲವು ಕ್ರಮಗಳನ್ನು ತೆಗೆದುಕೊಳ್ಳದಂತೆ ಅವರನ್ನು ತಡೆಯಲಾಗುತ್ತದೆ. ಈ ಮಿತಿಗಳು ಅವರು ನೋಂದಾಯಿಸಿದ ಯಾವುದೇ Google Assistant ಸಾಧನಗಳಲ್ಲಿ ಅನ್ವಯವಾಗುತ್ತವೆ. Google Home ಮತ್ತು Assistant ಜೊತೆಗೆ Family Link ಖಾತೆ ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತು ಹೆಚ್ಚಿನ ಮಾಹಿತಿಗಾಗಿ, Google for Families ಸಹಾಯವನ್ನು ನೋಡಿ.
ಮಕ್ಕಳ ವೈಯಕ್ತಿಕ ಮಾಹಿತಿಯನ್ನು Google Assistant ಹೇಗೆ ರಕ್ಷಿಸುತ್ತದೆ?
ನಿಮ್ಮ ಮಗುವಿನ ಹೆಸರು, ಇಮೇಲ್ ವಿಳಾಸ, ಧ್ವನಿ ರೆಕಾರ್ಡಿಂಗ್ ಅಥವಾ ನಿರ್ದಿಷ್ಟ ಸ್ಥಳದಂತಹ ವೈಯಕ್ತಿಕ ಮಾಹಿತಿಯನ್ನು Google ಕುಟುಂಬಗಳಿಗೆ ಸಂಬಂಧಿಸಿದ ಕ್ರಿಯೆಗಳ ಪೂರೈಕೆದಾರರ ಜೊತೆ ಹಂಚಿಕೊಳ್ಳುವುದಿಲ್ಲ. ಈ ಪೂರೈಕೆದಾರರು ತಮ್ಮ Google Assistant ಸಂಭಾಷಣೆಗಳಲ್ಲಿ ಬಳಕೆದಾರರಿಂದ ವೈಯಕ್ತಿಕ ಮಾಹಿತಿಯನ್ನು ಮನವಿ ಮಾಡದಿರಲು ಸಹ ಸಮ್ಮತಿಸುತ್ತಾರೆ. ಈ ನೀತಿಗಳನ್ನು ಉಲ್ಲಂಘಿಸುವ ಯಾವುದೇ ಕ್ರಿಯೆಗಳು ನಮಗೆ ಕಂಡುಬಂದರೆ, ನಾವು ಕ್ರಮ ತೆಗೆದುಕೊಳ್ಳುತ್ತೇವೆ.
ಮಕ್ಕಳ ಫೀಚರ್‌ಗಳಿಂದ ಆಡಿಯೊ ರೆಕಾರ್ಡಿಂಗ್‌ಗಳನ್ನು Google Assistant ಉಳಿಸುತ್ತದೆಯೇ?
ಆಡಿಯೋ ರೆಕಾರ್ಡಿಂಗ್‌ಗಳನ್ನು ಸೇರಿಸಲು ಆಯ್ಕೆಮಾಡಿದ Family Link ಮೂಲಕ ನಿರ್ವಹಿಸುವ Google ಖಾತೆ ಗಾಗಿ ನಾವು ಒಪ್ಪಿಗೆಯನ್ನು ಹೊಂದಿರದ ಹೊರತು ಕುಟುಂಬಗಳಿಗೆ ಸಂಬಂಧಿಸಿದ ಕ್ರಿಯೆಗಳ ಚಟುವಟಿಕೆಗಳು ಅಥವಾ YouTube Kids ವೀಡಿಯೊಗಳಂತಹ ಮಕ್ಕಳ ವೈಶಿಷ್ಟ್ಯಗಳೊಂದಿಗೆ ಸಂವಾದಗಳಿಂದ ಆಡಿಯೋ ರೆಕಾರ್ಡಿಂಗ್‌ಗಳನ್ನು ನಾವು ಉಳಿಸುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ, ನಮ್ಮ ಗೌಪ್ಯತೆ ಸೂಚನೆಯನ್ನು ನೋಡಿ.
ನನ್ನ ಮಗುವಿನ Google Assistant ಚಟುವಟಿಕೆಗಳಿಂದ ಯಾವುದೇ ಡೇಟಾವನ್ನು ನಾನು ತೆಗೆದುಹಾಕಬಹುದೇ?
ಹೌದು. Family Link ಬಳಸಿಕೊಂಡು ನಿರ್ವಹಿಲ್ಪಡುವ ಅವರ ಖಾತೆಗೆ ಸೈನ್ ಇನ್ ಮಾಡುವ ಮೂಲಕ ನಿಮ್ಮ ಮಗುವಿನ ಉಳಿಸಲಾದ ಚಟುವಟಿಕೆಯನ್ನು ನೀವು ಪ್ರವೇಶಿಸಬಹುದು, ರಫ್ತು ಮಾಡಬಹುದು ಮತ್ತು ಅಳಿಸಬಹುದು. Family Link ಆ್ಯಪ್ ಬಳಸಿಕೊಂಡು ಅಥವಾ families.google.com ಗೆ ಭೇಟಿ ನೀಡುವ ಮೂಲಕ ಹಾಗೂ ಮಗುವಿನ ಪ್ರೊಫೈಲ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಮಗುವಿನ ಚಟುವಟಿಕೆಯ ಸೆಟ್ಟಿಂಗ್‌ಗಳನ್ನು ಸಹ ನೀವು ನಿರ್ವಹಿಸಬಹುದು. ಹೆಚ್ಚಿನ ವಿವರಗಳಿಗಾಗಿ, g.co/childaccounthelp ಗೆ ಭೇಟಿ ನೀಡಿ.