ನಾವು ಯಾವ ಡೇಟಾವನ್ನು ಸಂಗ್ರಹಿಸುತ್ತೇವೆ ಮತ್ತು ಏಕೆ ಸಂಗ್ರಹಿಸುತ್ತೇವೆ ಎಂಬುದರ ಕುರಿತು ಸ್ಪಷ್ಟತೆ

ನೀವು Google ಸೇವೆಗಳನ್ನು ಬಳಸುವಾಗ, ನಮ್ಮ ಮೇಲೆ ವಿಶ್ವಾಸವಿಟ್ಟು ನಿಮ್ಮೆಲ್ಲಾ ಡೇಟಾವನ್ನು ನಮಗೆ ಸಲ್ಲಿಸುತ್ತೀರಿ. ನಮ್ಮ ಸೇವೆಗಳನ್ನು ನಿಮಗಾಗಿ ಉತ್ತಮಗೊಳಿಸುವ ನಿಟ್ಟಿನಲ್ಲಿ, ನಾವು ಸಂಗ್ರಹಿಸುವ ಡೇಟಾ ಮತ್ತು ಅದನ್ನು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಪಾರದರ್ಶಕವಾಗಿರುವುದು ನಮ್ಮ ಜವಾಬ್ದಾರಿಯಾಗಿದೆ.

ನಮ್ಮ ಡೇಟಾ ಬಳಕೆಯ ಕುರಿತು ಪಾರದರ್ಶಕತೆ

 • ನಮ್ಮ ಸೇವೆಗಳನ್ನು ನೀವು ಬಳಸುತ್ತಾ ಹೋದಂತೆ, ನಾವು ಸಂಗ್ರಹಿಸುವ ಮಾಹಿತಿ

  ನಮ್ಮ ಸೇವೆಗಳನ್ನು ನೀವು ಬಳಸುವಾಗ — ಉದಾಹರಣೆಗೆ, Google ನಲ್ಲಿ ಹುಡುಕಾಟ ಮಾಡುವುದು, ನಕ್ಷೆಗಳಲ್ಲಿ ನಿರ್ದೇಶನಗಳನ್ನು ಪಡೆಯುವುದು ಅಥವಾ YouTube ನಲ್ಲಿ ವೀಡಿಯೊ ವೀಕ್ಷಿಸುವುದು — ಈ ಸೇವೆಗಳನ್ನು ನಿಮಗಾಗಿ ಉತ್ತಮಗೊಳಿಸಲು, ನಾವು ಡೇಟಾವನ್ನು ಸಂಗ್ರಹಿಸುತ್ತೇವೆ. ಅದು ಈ ಕೆಳಗಿನವುಗಳನ್ನು ಒಳಗೊಳ್ಳಬಹುದು:

  • ನೀವು ಹುಡುಕುವ ವಿಷಯಗಳು
  • ನೀವು ವೀಕ್ಷಿಸುವ ವೀಡಿಯೊಗಳು
  • ನೀವು ನೋಡುವ ಅಥವಾ ಕ್ಲಿಕ್ ಮಾಡುವ ಜಾಹೀರಾತುಗಳು
  • ನಿಮ್ಮ ಸ್ಥಳ
  • ನೀವು ಭೇಟಿ ನೀಡುವ ವೆಬ್‌ಸೈಟ್‌ಗಳು
  • Google ಸೇವೆಗಳನ್ನು ಪ್ರವೇಶಿಸಲು ನೀವು ಬಳಸುವ ಆ್ಯಪ್‌ಗಳು, ಬ್ರೌಸರ್‌ಗಳು ಮತ್ತು ಸಾಧನಗಳು
 • ನೀವು ರಚಿಸುವ ಅಥವಾ ನಮಗೆ ಒದಗಿಸುವ ಮಾಹಿತಿ

  ನೀವು Google ಖಾತೆಗೆ ಸೈನ್ ಅಪ್ ಮಾಡಿದಾಗ, ನೀವು ನಮಗೆ ವೈಯಕ್ತಿಕ ಮಾಹಿತಿಯನ್ನು ಒದಗಿಸುತ್ತೀರಿ. ನೀವು ಸೈನ್ ಇನ್ ಮಾಡಿದ್ದರೆ, ನಮ್ಮ ಸೇವೆಗಳನ್ನು ನೀವು ಬಳಸುತ್ತಿರುವಾಗ ನೀವು ರಚಿಸುವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ ಮತ್ತು ರಕ್ಷಿಸುತ್ತೇವೆ. ಅದು ಇವುಗಳನ್ನು ಒಳಗೊಳ್ಳಬಹುದು:

  • ನಿಮ್ಮ ಹೆಸರು, ಜನ್ಮದಿನಾಂಕ, ಮತ್ತು ಪುರುಷ/ಸ್ತ್ರೀ ಮಾಹಿತಿ
  • ನಿಮ್ಮ ಪಾಸ್‌ವರ್ಡ್ ಮತ್ತು ಫೋನ್ ಸಂಖ್ಯೆ
  • Gmail ನಲ್ಲಿ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಇಮೇಲ್‌ಗಳು
  • ನೀವು ಉಳಿಸುವ ಫೋಟೋಗಳು ಮತ್ತು ವೀಡಿಯೊಗಳು
  • ಡ್ರೈವ್‌ನಲ್ಲಿ ನೀವು ರಚಿಸುವ ಡಾಕ್ಸ್, ಶೀಟ್‌ಗಳು, ಮತ್ತು ಸ್ಲೈಡ್‌ಗಳು
  • YouTube ನಲ್ಲಿ ನೀವು ಮಾಡುವ ಕಾಮೆಂಟ್‌ಗಳು
  • ನೀವು ಸೇರಿಸುವ ಸಂಪರ್ಕಗಳು
  • ಕ್ಯಾಲೆಂಡರ್ ಈವೆಂಟ್‌ಗಳು

Google ಸೇವೆಗಳನ್ನು ನಿಮಗಾಗಿ ಇನ್ನಷ್ಟು ಉಪಯುಕ್ತವಾಗಿಸಲು ಡೇಟಾ ಬಳಸುವಿಕೆ

 • ತ್ವರಿತಗತಿಯಲ್ಲಿ ನಿಮ್ಮ ಸ್ಥಳಗಳನ್ನು ಹುಡುಕಲು Google ನಕ್ಷೆಗಳು ಸಹಾಯ ಮಾಡುವ ಬಗೆ

  ನೀವು Google ನಕ್ಷೆಗಳು ಆ್ಯಪ್‌ ಬಳಸುವಾಗ, ನಿಮ್ಮ ಸ್ಥಳದ ಕುರಿತ ಅನಾಮಧೇಯ ಡೇಟಾದ ಅಂಶಗಳನ್ನು ನಿಮ್ಮ ಫೋನ್ Google ಗೆ ಮರಳಿ ಕಳುಹಿಸುತ್ತದೆ. ಟ್ರಾಫಿಕ್‌ ಮಾದರಿಗಳನ್ನು ಗುರುತಿಸಲು ನಿಮ್ಮ ಸುತ್ತಲಿನ ಜನರ ಡೇಟಾದ ಜೊತೆಗೆ ಇದನ್ನು ಸಂಯೋಜಿಸಲಾಗುತ್ತದೆ. ಉದಾಹರಣೆಗೆ, ಒಂದೇ ರಸ್ತೆಯ ಉದ್ದಕ್ಕೂ ಬಹಳಷ್ಟು ವಾಹನಗಳು ನಿಧಾನವಾಗಿ ಚಲಿಸುತ್ತಿರುವುದನ್ನು ನಕ್ಷೆಗಳು ಪತ್ತೆಹಚ್ಚಬಹುದು ಮತ್ತು ಅಧಿಕ ಟ್ರಾಫಿಕ್ ಇದೆ ಎಂದು ನಿಮಗೆ ತಿಳಿಸಬಹುದು. ಹೀಗಾಗಿ, ಮುಂದಿನ ಬಾರಿ ನಕ್ಷೆಗಳು ನಿಮಗೆ ಅಪಘಾತದ ಬಗ್ಗೆ ಎಚ್ಚರಿಸಿದಾಗ ಮತ್ತು ಅತೀ ವೇಗದ ಮಾರ್ಗವೊಂದರ ಕುರಿತು ಸಲಹೆ ನೀಡಿದಾಗ, ಆ ಶಾರ್ಟ್‌ಕಟ್‌ಗಾಗಿ ಧನ್ಯವಾದವನ್ನು ನೀವು ನಿಮ್ಮ ಸಹ ಚಾಲಕರು ಒದಗಿಸಿದ ಡೇಟಾಕ್ಕೆ ಹೇಳಬಹುದು.

 • ನಿಮ್ಮ ಹುಡುಕಾಟಗಳನ್ನು Google ಸ್ವಯಂಪೂರ್ಣಗೊಳಿಸುವ ಬಗೆ

  ನೀವು ಏನನ್ನಾದರೂ ಹುಡುಕುವಾಗ ಅದರಲ್ಲಿ ಕಾಗುಣಿತ ತಪ್ಪು ಮಾಡಿದರೂ — ನಿಮಗೇನು ಬೇಕು ಎಂಬುದನ್ನು Google ಹೇಗೆ ಅರ್ಥ ಮಾಡಿಕೊಳ್ಳುತ್ತದೆ ಎಂಬುದು ನಿಮಗೆ ಗೊತ್ತೇ? ನಮ್ಮ ಕಾಗುಣಿತ ಸರಿಪಡಿಸುವಿಕೆ ಮಾದರಿಯು ನಿಮಗಾಗಿ ಅದನ್ನು ಸರಿಪಡಿಸಲು, ಈ ಹಿಂದೆ ಅದೇ ತಪ್ಪನ್ನು ಮಾಡಿದ್ದ ಜನರ ಡೇಟಾವನ್ನು ಬಳಸುತ್ತದೆ. ಇದರಿಂದಾಗಿಯೇ ನೀವು “ಬರ್ಸಲೋನಾ” ಎಂದು ಟೈಪ್ ಮಾಡಿದರೂ, ನೀವು ಹುಡುಕುತ್ತಿರುವುದು “ಬಾರ್ಸಿಲೋನಾ” ಎಂದು ನಾವು ತಿಳಿದುಕೊಳ್ಳುತ್ತೇವೆ.

  ನಿಮ್ಮ ಹುಡುಕಾಟಗಳನ್ನು ಸ್ವಯಂಪೂರ್ಣಗೊಳಿಸಲು ನಿಮ್ಮ ಹುಡುಕಾಟ ಇತಿಹಾಸ ಕೂಡಾ ಸಹಾಯ ಮಾಡುತ್ತದೆ. ಉದಾಹರಣೆಗೆ,ನೀವು ಈ ಹಿಂದೆ “ಬಾರ್ಸಿಲೋನಾ ವಿಮಾನಗಳು” ಎಂದು ಹುಡುಕಿದ್ದರೆ, ನೀವು ಅದನ್ನು ಟೈಪ್ ಮಾಡಿ ಮುಗಿಸುವ ಮೊದಲೇ ನಾವು ಇದನ್ನು ಹುಡುಕಾಟ ಬಾಕ್ಸ್‌ನಲ್ಲಿ ಸೂಚಿಸಬಹುದು. ಅಥವಾ ನೀವು ಸಾಕರ್ ತಂಡವೊಂದರ ಅಭಿಮಾನಿಯಾಗಿದ್ದರೆ ಮತ್ತು ಹೆಚ್ಚಾಗಿ “ಬಾರ್ಸಿಲೋನಾ ಸ್ಕೋರ್‌ಗಳು” ಎಂದು ಹುಡುಕುತ್ತಿದ್ದರೆ, ನಾವು ತಕ್ಷಣವೇ ಅದನ್ನು ಸೂಚಿಸಬಹುದು.

 • ನೀವು ವೀಕ್ಷಿಸಲು ಬಯಸುವ ವೀಡಿಯೊಗಳನ್ನು YouTube ಹುಡುಕುವ ಬಗೆ

  ನೀವು ಈ ಹಿಂದೆ ವೀಕ್ಷಿಸಿರುವ ಮತ್ತು ಒಂದೇ ರೀತಿಯ ವೀಕ್ಷಣೆ ಇತಿಹಾಸಗಳನ್ನು ಹೊಂದಿರುವ ಇತರೆ ಜನರು ಈ ಹಿಂದೆ ಏನೆಲ್ಲಾ ವೀಕ್ಷಿಸಿದ್ದಾರೆ ಎಂಬುದನ್ನು ಆಧರಿಸಿ, ನಿಮಗೆ ಇಷ್ಟವಾಗಬಹುದಾದ ವೀಡಿಯೊಗಳನ್ನು YouTube ಶಿಫಾರಸು ಮಾಡುತ್ತದೆ. ಜನರು ಹೆಚ್ಚಾಗಿ ವೀಕ್ಷಿಸುವುದನ್ನು ಆಧರಿಸಿ ಯಾವುದು ಜನಪ್ರಿಯ ಮತ್ತು ಟ್ರೆಂಡಿಂಗ್‌‌ ಆಗಿದೆ ಎಂಬುದರ ಕುರಿತು ನಾವು ಸುಳಿವುಗಳನ್ನು ಪಡೆದುಕೊಳ್ಳುತ್ತೇವೆ. ಇದು ವಿವಿಧ ಶೈಲಿಯ ವೀಡಿಯೊಗಳ ಕುರಿತು ಸೂಚಿಸಲು ನಮಗೆ ಸಹಾಯ ಮಾಡುತ್ತದೆ – ಅಂದರೆ, ಪ್ರಮುಖ ಸಂಗೀತದ ಟ್ರ್ಯಾಕ್‌ಗಳು, ಹೇಗೆ ಮಾಡುವುದು ಟ್ಯುಟೋರಿಯಲ್‌ಗಳು ಮತ್ತು ಸುದ್ದಿಗಳು – ಆಯ್ಕೆ ನಿಮಗೆ ಬಿಟ್ಟಿದ್ದು.

 • ನಿಮಗಾಗಿ ಫಾರ್ಮ್‌ಗಳನ್ನು Chrome ಸ್ವಯಂಭರ್ತಿ ಪೂರ್ಣಗೊಳಿಸುವ ಬಗೆ

  ಪ್ರತಿ ಬಾರಿ ನೀವು ಖಾತೆಗಾಗಿ ಖರೀದಿ ಅಥವಾ ಸೈನ್ ಅಪ್ ಮಾಡಿದಾಗ, ಫಾರ್ಮ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಭರ್ತಿ ಮಾಡಲು ನೀವು ಸಮಯ ವ್ಯಯಿಸುತ್ತೀರಿ. ನೀವು Chrome ಬಳಸಿದಾಗ, ನಾವು ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಪಾವತಿ ಮಾಹಿತಿಯಂತಹ ವಿಷಯಗಳನ್ನು ಉಳಿಸಬಹುದು. ಅದನ್ನೇ ಬಳಸಿಕೊಂಡು ನಿಮ್ಮ ಫಾರ್ಮ್‌ಗಳನ್ನು ನಾವು ಸ್ವಯಂಪೂರ್ಣಗೊಳಿಸಬಹುದು. ನೀವು ಯಾವಾಗಲೂ ನಿರ್ದಿಷ್ಟ ಸ್ವಯಂ ಭರ್ತಿ ಕ್ಷೇತ್ರಗಳನ್ನು ಎಡಿಟ್ ಮಾಡಬಹುದು ಅಥವಾ ಈ ಸೆಟ್ಟಿಂಗ್ ಅನ್ನು ಒಟ್ಟಾರೆಯಾಗಿ ನಿಷ್ಕ್ರಿಯಗೊಳಿಸಬಹುದು.

 • ನಿಮ್ಮ ಸ್ವಂತ ಮಾಹಿತಿ ಹುಡುಕಲು Google ಹುಡುಕಾಟ ನಿಮಗೆ ಸಹಾಯ ಮಾಡುವ ಬಗೆ

  Google ಹುಡುಕಾಟವು Gmail, Google ಫೋಟೋಗಳು, ಕ್ಯಾಲೆಂಡರ್ ಹಾಗೂ ಇನ್ನೂ ಹೆಚ್ಚಿನವುಗಳಿಂದ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ನಿಮ್ಮ ಖಾಸಗಿ ಹುಡುಕಾಟದ ಫಲಿತಾಂಶಗಳಲ್ಲಿ ತೋರಿಸಬಹುದು, ಹೀಗಾಗಿ ನೀವೇ ಹುಡುಕಾಟ ಮಾಡುವ ಅಗತ್ಯವಿರುವುದಿಲ್ಲ. “ನನ್ನ ದಂತವೈದ್ಯರೊಂದಿಗಿನ ಪೂರ್ವನಿಗದಿತ ಭೇಟಿ”, “ಸಮುದ್ರತೀರದಲ್ಲಿನ ನನ್ನ ಫೋಟೋಗಳನ್ನು ನನಗೆ ತೋರಿಸು” ಅಥವಾ “ನನ್ನ ಹೋಟೆಲ್ ಕಾಯ್ದಿರಿಸುವಿಕೆ ಎಲ್ಲಿದೆ” ಇಂತಹ ವಿಷಯಗಳಿಗಾಗಿ ಹುಡುಕಿ ನೋಡಿ. ಎಲ್ಲಿಯವರೆಗೆ ನೀವು ಸೈನ್ ಇನ್ ಆಗಿರುತ್ತೀರೋ ಅಲ್ಲಿಯವರೆಗೆ ನಾವು ಈ ಮಾಹಿತಿಯನ್ನು ಇತರ Google ಸೇವೆಗಳಿಂದ ಪಡೆದುಕೊಳ್ಳುತ್ತೇವೆ ಮತ್ತು ಕೇವಲ ಒಂದೇ ಹಂತದಲ್ಲಿ ಅದನ್ನು ನಿಮಗೆ ನೀಡುತ್ತೇವೆ.

 • ಕಾರ್ಯಗಳನ್ನು ಪೂರ್ಣಗೊಳಿಸಲು Google ಅಸಿಸ್ಟೆಂಟ್ ನಿಮಗೆ ಸಹಾಯ ಮಾಡುವ ಬಗೆ

  ನೀವು ಮನೆಯಲ್ಲಿರಲಿ ಅಥವಾ ಪ್ರಯಾಣಿಸುತ್ತಿರಲಿ, ನಿಮ್ಮ ಅಸಿಸ್ಟೆಂಟ್ ಯಾವಾಗಲೂ ಸಹಾಯಕ್ಕೆ ಸಿದ್ಧವಿರುತ್ತದೆ. ನಿಮ್ಮ ಅಸಿಸ್ಟೆಂಟ್‌ಗೆ ನೀವು ಪ್ರಶ್ನೆಯೊಂದನ್ನು ಕೇಳಿದಾಗ ಅಥವಾ ಏನು ಮಾಡಬೇಕೆಂದು ಹೇಳಿದಾಗ, ನಿಮಗೆ ಬೇಕಾಗಿರುವುದನ್ನು ಪಡೆಯಲು ಅದು ಬೇರೆ Google ಸೇವೆಗಳಿಂದ ಡೇಟಾವನ್ನು ಬಳಸುತ್ತದೆ. ಉದಾಹರಣೆಗೆ, “ಹತ್ತಿರದಲ್ಲಿ ಯಾವ ಕಾಫಿ ಶಾಪ್‌‌ಗಳು ಇವೆ?” ಅಥವಾ “ನಾಳೆ ನನಗೆ ಛತ್ರಿಯ ಅಗತ್ಯವಿದೆಯೇ?” ಎಂದು ನೀವು ಕೇಳಿದರೆ ನಿಮಗೆ ಅತ್ಯಂತ ಸೂಕ್ತವಾದ ಉತ್ತರವನ್ನು ನೀಡಲು, ನಕ್ಷೆಗಳು ಮತ್ತು ಹುಡುಕಾಟ, ಹಾಗೆಯೇ ನಿಮ್ಮ ಸ್ಥಳ, ಆಸಕ್ತಿ ಮತ್ತು ಆದ್ಯತೆಗಳ ಮಾಹಿತಿಯನ್ನು ನಿಮ್ಮ ಅಸಿಸ್ಟೆಂಟ್ ಬಳಸುತ್ತದೆ. ನಿಮ್ಮ ಅಸಿಸ್ಟೆಂಟ್ ಜೊತೆಗೆ ನೀವು ನಡೆಸುವ ಸಂವಹನಗಳಿಂದ ಸಂಗ್ರಹಿಸಲಾದ ಡೇಟಾವನ್ನು ವೀಕ್ಷಿಸಲು ಅಥವಾ ಅಳಿಸಲು, ನಿಮ್ಮ Google ಖಾತೆಯಲ್ಲಿನ ನನ್ನ ಚಟುವಟಿಕೆ ಪರಿಕರಕ್ಕೆ ನೀವು ಯಾವಾಗ ಬೇಕಾದರೂ ಭೇಟಿ ನೀಡಬಹುದು.

ನಿಮ್ಮ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳನ್ನು ನಿರ್ಮಿಸುವಿಕೆ

 • ನಮ್ಮ ಉತ್ಪನ್ನ ಅಭಿವೃದ್ಧಿಯಲ್ಲಿ ಗೌಪ್ಯತಾ ಪರಿಶೀಲನೆಯು ಪ್ರಮುಖ ಹಂತವಾಗಿದೆ

  ಯಾವುದೇ ಹೊಸ ಉತ್ಪನ್ನದ ಬಿಡುಗಡೆಗಾಗಿ, ನಾವು ನಮ್ಮ ಆಂತರಿಕ ಗೌಪ್ಯತೆ ತಂಡವನ್ನು ಮತ್ತು ಸಮಗ್ರವಾದ ವಿಮರ್ಶೆ ಪ್ರಕ್ರಿಯೆಯನ್ನು ಅವಲಂಬಿಸಿರುತ್ತೇವೆ. ಉತ್ಪನ್ನ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲೂ ನಮ್ಮನ್ನು ಸಮರ್ಪಿಸಿಕೊಂಡಿರುತ್ತೇವೆ. ಈ ಮೂಲಕ ಇಂಜಿನಿಯರಿಂಗ್ ಕಾರ್ಯದಿಂದ ಹಿಡಿದು ಉತ್ಪನ್ನ ನಿರ್ವಹಣೆಯವರೆಗೆ ಗೌಪ್ಯತೆಯನ್ನು ಪ್ರಮುಖ ಪರಿಗಣನೆ ಅಂಶವನ್ನಾಗಿಸುತ್ತೇವೆ. ಜನರು ತಾವು ಪ್ರತಿದಿನವೂ ಬಳಸುವ Google ಉತ್ಪನ್ನಗಳನ್ನು ನಂಬಬಹುದೆಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.