ಕುಟುಂಬ-ಸ್ನೇಹಿ ಅನುಭವಗಳನ್ನು ನಿರ್ಮಿಸುವ ಕುರಿತು

ನಿಮ್ಮ ಕುಟುಂಬಕ್ಕೆ ಹೆಚ್ಚು ಆನಂದದಾಯಕವನ್ನಾಗಿ ಮಾಡುವ ಸಲುವಾಗಿ – ನಮ್ಮ ಹಲವಾರು ಉತ್ಪನ್ನಗಳಲ್ಲಿ – ಸ್ಮಾರ್ಟ್ ಫಿಲ್ಟರ್‌ಗಳು, ಸೈಟ್ ಬ್ಲಾಕರ್‌ಗಳು ಮತ್ತು ವಿಷಯ ರೇಟಿಂಗ್‌ಗಳ ರೀತಿಯ ವಿಶೇಷ ವೈಶಿಷ್ಟ್ಯಗಳನ್ನು ನಾವು ನಿರ್ಮಿಸುತ್ತೇವೆ.

ಮಕ್ಕಳಿಗಾಗಿ ವಿಷಯ ಮತ್ತು ಅನುಭವಗಳನ್ನು ಹುಡುಕುವ ಕುರಿತು

 • YouTube ಕಿಡ್ಸ್ ಜೊತೆಗೆ ಕಲಿಕೆಯ ಮತ್ತು ಮೋಜಿನ ಜಗತ್ತನ್ನು ಅನ್ವೇಷಿಸಿ

  ಆನ್‌ಲೈನ್‌ ​​ವೀಡಿಯೊಗಳ ಮೂಲಕ ತಮ್ಮ ಆಸಕ್ತಿಗಳನ್ನು ಎಕ್ಸ್‌ಫ್ಲೋರ್ ಮಾಡಲು ಪ್ರಪಂಚದಾದ್ಯಂತದ ಮಕ್ಕಳಿಗಾಗಿ ನಾವು YouTube ಕಿಡ್ಸ್ ಅನ್ನು ಸುರಕ್ಷಿತ ಪರಿಸರವನ್ನಾಗಿ ರಚಿಸಿದ್ದೇವೆ. ಪೋಷಕರ ನಿಯಂತ್ರಣಗಳ ಕೂಟವೊಂದರ ಮೂಲಕ ನಿಮಗೆ ಖುಷಿ ಕೊಡುವ ಕೌಟುಂಬಿಕ ಅನುಭವಗಳನ್ನು ರೂಪಿಸುವುದನ್ನು ನಾವು ಸುಲಭವಾಗಿಸುತ್ತೇವೆ:

  • ವೀಡಿಯೊಗಳನ್ನು ವೀಕ್ಷಿಸಲು ನಿಮ್ಮ ಮಕ್ಕಳು ಎಷ್ಟು ಸಮಯ ವ್ಯಯಿಸುತ್ತಾರೆ ಎಂಬುದರ ಮೇಲೆ ಮಿತಿಗಳನ್ನು ಇರಿಸಲು, ಟೈಮರ್ ಹೊಂದಿಸಿ.
  • ವಿಶ್ವಾಸಾರ್ಹ ಮೂರನೇ ವ್ಯಕ್ತಿಗಳು ಅಥವಾ YouTube ಕಿಡ್ಸ್ ತಂಡವು ಆಯ್ಕೆ ಮಾಡಿದ ಚಾನಲ್‌ಗಳ ಸಂಗ್ರಹವನ್ನು ಮಾತ್ರ ವೀಕ್ಷಿಸಲು ನಿಮ್ಮ ಮಕ್ಕಳಿಗೆ ಅನುಮತಿಸಿ.
  • ನಿಮ್ಮ ಮಕ್ಕಳು ಇತ್ತೀಚೆಗೆ "ಮತ್ತೆ ವೀಕ್ಷಿಸಿ" ಎಂಬಲ್ಲಿ ಏನು ವೀಕ್ಷಿಸಿದ್ದಾರೆ ಎಂಬುದರ ಮೇಲೆ ನಿಗಾ ಇಡಿ.
  • YouTube ಕಿಡ್ಸ್ ತಂಡವು ಪರಿಶೀಲಿಸಿದ ಚಾನಲ್‌ಗಳ ಹೆಚ್ಚಿನ ಅನುಭವಕ್ಕಾಗಿ ಹುಡುಕಾಟವನ್ನು ಆಫ್ ಮಾಡಿ.
  • ವೀಡಿಯೊಗಳನ್ನು ಅಥವಾ ಚಾನಲ್‌ಗಳನ್ನು ನಿಮ್ಮ ಮಕ್ಕಳ ಆ್ಯಪ್‌‌ನಲ್ಲಿ ಕಾಣಿಸಿಕೊಳ್ಳದಂತೆ ನಿರ್ಬಂಧಿಸಿ.
  • ಆ್ಯಪ್‌‌ನಲ್ಲಿರಬಾರದು ಎಂದು ನೀವು ಭಾವಿಸುವ ವೀಡಿಯೊಗಳನ್ನು ವಿಮರ್ಶೆಗಾಗಿ ಫ್ಲ್ಯಾಗ್ ಮಾಡಿ.

  ಒಟ್ಟಾಗಿ, ನಾವು YouTube ಕಿಡ್ಸ್‌ನಲ್ಲಿ ವೀಡಿಯೊಗಳನ್ನು ಕುಟುಂಬ-ಸ್ನೇಹಿಯಾಗಿ ಇರಿಸಿಕೊಳ್ಳಲು, ಫಿಲ್ಟರ್‌ಗಳು, ಬಳಕೆದಾರರ ಪ್ರತಿಕ್ರಿಯೆ ಮತ್ತು ಜನರ ವಿಮರ್ಶೆಗಳನ್ನು ಬಳಸುತ್ತೇವೆ. ಯಾವುದೇ ಸಿಸ್ಟಂ ಪರಿಪೂರ್ಣವಲ್ಲ, ಮತ್ತು ಸೂಕ್ತವಲ್ಲದ ವೀಡಿಯೊಗಳು ಯಾವಾಗ ಬೇಕಾದರೂ ಒಳನುಸುಳಬಹುದಾದ ಕಾರಣ, ನಾವು ನಮ್ಮ ಸುರಕ್ಷತೆಗಳನ್ನು ಸುಧಾರಿಸುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಇನ್ನಷ್ಟು ಪೋಷಕರ ನಿಯಂತ್ರಣಗಳನ್ನು ಒದಗಿಸುತ್ತಿದ್ದೇವೆ.

 • Google Play ನಲ್ಲಿ ಕುಟುಂಬಗಳಿಗೆ ಸುರಕ್ಷಿತ ಸ್ಥಳವನ್ನು ರಚಿಸುವ ಬಗೆ

  ನಿಮ್ಮ ಮಗುವಿಗೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸುವಲ್ಲಿ ನಿಮಗೆ ಸಹಾಯ ಮಾಡಲು, ವಿಮರ್ಶೆಗಳನ್ನು ಓದಿ ಮತ್ತು ಆ್ಯಪ್‌ಗಳು ಹಾಗೂ ಆಟಗಳಲ್ಲಿ ಕುಟುಂಬದ ಸ್ಟಾರ್ ಬ್ಯಾಡ್ಜ್ ಮೇಲೆ ಕಣ್ಣಾಡಿಸಿ. ಈ ವಿಷಯವನ್ನು ಬಹಳ ಎಚ್ಚರಿಕೆಯಿಂದ ಪರಾಮರ್ಶಿಸಲಾಗಿದೆ ಮತ್ತು ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ವಿಷಯವನ್ನು ಅಭಿವೃದ್ದಿಪಡಿಸಲಾಗಿದೆ ಎಂಬುದನ್ನು ಸ್ಟಾರ್ ಬ್ಯಾಡ್ಜ್ ಸೂಚಿಸುತ್ತದೆ. ವಿಷಯಕ್ಕೆ ಸೂಚಿಸಲಾದ ವಯಸ್ಸಿನ ವ್ಯಾಪ್ತಿಯನ್ನು ಇದು ಒಳಗೊಂಡಿರುತ್ತದೆ.

  ಆ್ಯಪ್‌ನ ಪ್ರಬುದ್ಧತೆಯನ್ನು ಅರ್ಥಮಾಡಿಕೊಳ್ಳಲು ವಿಷಯ ರೇಟಿಂಗ್‌ಗಳನ್ನು ಪರಿಶೀಲಿಸಿ ಮತ್ತು ಆ ರೇಟಿಂಗ್‌ಗಳನ್ನು ಆಧರಿಸಿ, ನಿಮ್ಮ ಮಗುವಿಗೆ ಸೂಕ್ತವಾಗಿರುವ ವಿಷಯಗಳನ್ನು ನಿರ್ಧರಿಸಲು ಫಿಲ್ಟರ್‌ಗಳನ್ನು ಹೊಂದಿಸಿ. ನೀವು ಜಾಹೀರಾತುಗಳು, ಆ್ಯಪ್‌ನಲ್ಲಿನ ಖರೀದಿಗಳನ್ನು ಆ್ಯಪ್ ಒಳಗೊಂಡಿದೆಯೇ ಎಂಬುದನ್ನು ತಿಳಿಯಲು ಬಯಸಿದರೆ ಅಥವಾ ಸಾಧನದ ಅನುಮತಿಗಳು ಅಗತ್ಯವಿದ್ದರೆ, ಆ್ಯಪ್ ಸ್ಟೋರ್ ಪುಟದಲ್ಲಿರುವ ಹೆಚ್ಚುವರಿ ಮಾಹಿತಿ ವಿಭಾಗವನ್ನು ನೀವು ಪರಿಶೀಲಿಸಬಹುದು.

 • Google ಅಸಿಸ್ಟೆಂಟ್ ಬಳಸಿಕೊಂಡು ನಿಮ್ಮ ಕುಟುಂಬದ ಜೊತೆಗೆ ಆನಂದಿಸಲು ಅನುಭವಗಳನ್ನು ಹುಡುಕಿ

  ನಿಮ್ಮ ಅಸಿಸ್ಟೆಂಟ್ ಬಳಿ ನಿಮ್ಮ ಇಡೀ ಕುಟುಂಬವನ್ನು ಮನರಂಜಿಸುವಷ್ಟು ಚಟುವಟಿಕೆಗಳಿವೆ – ಕುಟುಂಬಗಳು ರಾತ್ರಿ ಹೊತ್ತು ಕಾಲ ಕಳೆಯಲು ಆಡುವ ಕ್ರೀಡೆಗಳಿಗೆ ಸಹಾಯ ಮಾಡುವುದರಿಂದ ಹಿಡಿದು, ಮ್ಯೂಸಿಕಲ್ ಚೇರ್ ಆಡುವವರೆಗೆ ಎಲ್ಲವನ್ನೂ ಇದು ಹೊಂದಿದೆ. ಪ್ರಸ್ತುತವಾಗಿ, ಕುಟುಂಬಗಳ ಕಾರ್ಯಕ್ರಮಕ್ಕಾಗಿ ಅಸಿಸ್ಟೆಂಟ್‌ನಲ್ಲಿ 50 ಕ್ಕೂ ಹೆಚ್ಚಿನ ಆಟಗಳು, ಚಟುವಟಿಕೆಗಳು ಮತ್ತು ಕಥೆಗಳಿವೆ. ಈ ಪ್ರತಿಯೊಂದು ಚಟುವಟಿಕೆಗಳನ್ನು ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡವು ವಿಮರ್ಶಿಸಿದೆ ಮತ್ತು ಅಂಗೀಕರಿಸಿದೆ, ಆದ್ದರಿಂದ ಅವುಗಳು ಕುಟುಂಬ-ಸ್ನೇಹಿ ಎಂಬುದನ್ನು ನೀವು ತಿಳಿಯಬಹುದು.

ನಿಮ್ಮ ಕುಟುಂಬದ ಆನ್‌ಲೈನ್ ಅನುಭವವನ್ನು ನಿರ್ವಹಿಸಲು ನಿಮಗೆ ಪರಿಕರಗಳನ್ನು ಒದಗಿಸುವ ಕುರಿತು

 • Google ಹುಡುಕಾಟದಲ್ಲಿ ಸುರಕ್ಷಿತ ಹುಡುಕಾಟದ ಫಿಲ್ಟರ್‌ಗಳನ್ನು ಬಳಸಿಕೊಂಡು ವಯಸ್ಕ ಸೈಟ್‌ಗಳನ್ನು ನಿರ್ಬಂಧಿಸಿ

  ಅಶ್ಲೀಲತೆ ಮತ್ತು ಕಣ್ಣಿಗೆ ಅಹಿತವನ್ನು ಉಂಟು ಮಾಡುವ ಹಿಂಸಾಚಾರವನ್ನು ತಪ್ಪಿಸುವ ನಿಟ್ಟಿನಲ್ಲಿ, Google ಹುಡುಕಾಟದ ಫಲಿತಾಂಶಗಳಿಂದ ಸುಸ್ಪಷ್ಟ ಚಿತ್ರಗಳು, ವೀಡಿಯೊಗಳು ಮತ್ತು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಸುರಕ್ಷಿತ ಹುಡುಕಾಟದ ಸೆಟ್ಟಿಂಗ್ ಅನ್ನು ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ, ಇದು ಪರಿಪೂರ್ಣ ಉಪಕರಣವಲ್ಲ ಮತ್ತು ನೀವು ಇನ್ನೂ ಸುಸ್ಪಷ್ಟ ಫಲಿತಾಂಶಗಳನ್ನು ಕಾಣಬಹುದು. ಅಂತಹ ಸಂದರ್ಭಗಳಲ್ಲಿ, ನೀವು ಅದನ್ನು ವರದಿ ಮಾಡಬಹುದು – ಸುರಕ್ಷಿತ ಹುಡುಕಾಟದ ಸೆಟ್ಟಿಂಗ್ ಅನ್ನು ಎಲ್ಲರಿಗೂ ಉತ್ತಮವಾಗಿಸುವಲ್ಲಿ ಆ ರೀತಿಯ ಪ್ರತಿಕ್ರಿಯೆಯು ನಮಗೆ ಸಹಾಯ ಮಾಡುತ್ತದೆ.

 • ನಿರ್ಬಂಧಿತ ಮೋಡ್ ಬಳಸಿಕೊಂಡು YouTube ನಲ್ಲಿ ವಯಸ್ಕರ ವೀಡಿಯೊಗಳನ್ನು ನಿರ್ಬಂಧಿಸಿ

  YouTube ನಿರ್ಬಂಧಿತ ಮೋಡ್ ಸೆಟ್ಟಿಂಗ್ ಆನ್ ಮಾಡುವ ಮೂಲಕ, ನಿಮ್ಮ ಹದಿಹರೆಯದವರು ನೋಡಬಾರದೆಂದು ನೀವು ಬಯಸುವ ಸಂಭವನೀಯ ವಯಸ್ಕರ ವಿಷಯವನ್ನು ಅಸ್ಪಷ್ಟಗೊಳಿಸಲು ನಾವು ಸಹಾಯ ಮಾಡಬಲ್ಲೆವು. ನಮ್ಮ ವಿಮರ್ಶಕರ ತಂಡವು ವಯಸ್ಸಿನ-ನಿರ್ಬಂಧಿತ ವೀಡಿಯೊಗಳನ್ನು ಫಿಲ್ಟರ್ ಮಾಡುವುದರ ಜೊತೆಗೆ, ನಮ್ಮ ಸ್ವಯಂಚಾಲಿತ ವ್ಯವಸ್ಥೆಯು ವೀಡಿಯೊದ ಮೆಟಾಡೇಟಾ, ಶೀರ್ಷಿಕೆ ಮತ್ತು ವೀಡಿಯೊದಲ್ಲಿ ಬಳಸಿರುವ ಭಾಷೆಗಳಂತಹ ಸಂಕೇತಗಳ ಮೇಲೂ ಕಣ್ಣಿಡುತ್ತದೆ. ನಿರ್ಬಂಧಿತ ಮೋಡ್ ಸಕ್ರಿಯಗೊಂಡಿರುವಾಗ, ಯಾವುದೇ ಅನಗತ್ಯ ಚರ್ಚೆಯನ್ನು ತಪ್ಪಿಸಲು ನೀವು ವೀಕ್ಷಿಸುವ ವೀಡಿಯೊಗಳಲ್ಲಿನ ಕಾಮೆಂಟ್‌ಗಳನ್ನು ನೋಡಲು ಕೂಡ ನಿಮಗೆ ಸಾಧ್ಯವಾಗುವುದಿಲ್ಲ.

 • ಸಾಧನದ ಸಮಯಗಳನ್ನು ಹೊಂದಿಸಿ ಮತ್ತು Google Wifi ಮೂಲಕ ಅನುಚಿತ ವಿಷಯವನ್ನು ನಿರ್ಬಂಧಿಸಿ

  ನಿಮ್ಮ ಮಕ್ಕಳು ಸರಿಯಾದ ವಿಷಯವನ್ನು ನೋಡುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು Google Wifi ನಿಮಗೆ ಸಹಾಯ ಮಾಡುತ್ತದೆ. ಕೆಟ್ಟ ಸಂಗತಿಗಳನ್ನು ತಪ್ಪಿಸುವುದಕ್ಕೆ ಸಹಾಯ ಮಾಡಲು, ಅಶ್ಲೀಲ ಅಥವಾ ಗ್ರಾಫಿಕ್ ಹಿಂಸೆಯನ್ನು ಹೊಂದಿರುವಂತಹ ಸೈಟ್‌ಗಳ ರೀತಿಯ ಮಿಲಿಯನ್‌ಗಟ್ಟಲೆ ಸ್ಪಷ್ಟ ವೆಬ್‌ಸೈಟ್‌ಗಳನ್ನು ನಿಮ್ಮ ಮಕ್ಕಳ ಸಾಧನಗಳಲ್ಲಿ ಸ್ವಯಂಚಾಲಿತವಾಗಿ ನಿರ್ಬಂಧಿಸಲು, Google Wifi ಸುಧಾರಿತ ಸೈಟ್ ನಿರ್ಬಂಧಿಸುವಿಕೆ ವೈಶಿಷ್ಟ್ಯವನ್ನು ಒದಗಿಸುತ್ತದೆ. ಮನೆಕೆಲಸದ ಸಮಯ, ಹೊರಗಡೆ ಕಾಲ ಕಳೆಯುವ ಸಮಯ ಅಥವಾ ನಿದ್ರಾ ಸಮಯದ ರೀತಿಯ ಪ್ರಮುಖ ಸಂದರ್ಭಗಳಲ್ಲಿ ವೈ-ಫೈ ವಿರಾಮವನ್ನು ನೀವು ನಿಗದಿಪಡಿಸಬಹುದು. Google Wifi ಜೊತೆಗೆ ಬರುವ ಲೇಬಲ್‌ಗಳ ವೈಶಿಷ್ಟ್ಯವನ್ನು ಬಳಸಿಕೊಂಡು, ನೀವು ನಿಮ್ಮ ನೆಟ್‌ವರ್ಕ್‌ನಲ್ಲಿ ಪ್ರತಿಯೊಂದು ಸಾಧನಕ್ಕೂ ವಿವಿಧ ಫಿಲ್ಟರ್‌ಗಳು ಮತ್ತು ವಿರಾಮಗಳನ್ನು ಸಹ ಅನ್ವಯಿಸಬಹುದು.

ಸುರಕ್ಷಿತ, ಸುಭದ್ರ ಆನ್‌ಲೈನ್ ಕಲಿಕೆಗಾಗಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪರಿಕರಗಳನ್ನು ನೀಡುವ ಕುರಿತು

 • ಶಿಕ್ಷಣಕ್ಕಾಗಿ G ಸ್ಯೂಟ್‌ಗೆ ಭದ್ರತೆಯನ್ನು ನಿರ್ಮಿಸುವಿಕೆ

  ಶಿಕ್ಷಣಕ್ಕಾಗಿ G ಸ್ಯೂಟ್, ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಾಧನಗಳಾದ್ಯಂತ ಸುರಕ್ಷಿತವಾಗಿ ಸಂವಹನ ನಡೆಸಲು ಸಹಾಯ ಮಾಡುತ್ತದೆ. ಶಿಕ್ಷಣಕ್ಕಾಗಿ G ಸ್ಯೂಟ್‌ನ ಪ್ರಧಾನ ಸೇವೆಗಳಲ್ಲಿ ಯಾವುದೇ ಜಾಹೀರಾತುಗಳಿರುವುದಿಲ್ಲ ಮತ್ತು ಪ್ರಾಥಮಿಕ ಹಾಗೂ ದ್ವಿತೀಯಕ (K-12) ಶಾಲೆಗಳಲ್ಲಿನ ಶಿಕ್ಷಣಕ್ಕಾಗಿ G ಸ್ಯೂಟ್ ಬಳಕೆದಾರರಿಗೆ ಜಾಹೀರಾತುಗಳನ್ನು ಗುರಿಯಾಗಿರಿಸಲು ನಾವು ಯಾವುದೇ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಬಳಸುವುದಿಲ್ಲ. ಸೂಕ್ತ ಚಟುವಟಿಕೆಗಳಿಗೆ ನೀತಿಗಳನ್ನು ಹೊಂದಿಸುವಲ್ಲಿ ಆಡಳಿತಾಧಿಕಾರಿಗಳಿಗೆ ಸಹಾಯ ಮಾಡಲು ಮತ್ತು ವಿದ್ಯಾರ್ಥಿಗಳ ಶಾಲೆಯ Google ಖಾತೆಗಳನ್ನು ಬಳಸಿಕೊಂಡು ಅವರನ್ನು ರಕ್ಷಿಸಲು ನಾವು ಪರಿಕರಗಳನ್ನು ಸಹ ಒದಗಿಸುತ್ತೇವೆ. ಶಾಲೆಗಳಲ್ಲಿ ತಮ್ಮ ವಿದ್ಯಾರ್ಥಿಗಳು ಬಳಸುವ ಶಿಕ್ಷಣಕ್ಕಾಗಿ G ಸ್ಯೂಟ್ ಬಗೆಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಹಾಯ ಮಾಡಲು, ಶಾಲೆಗಳಿಗೆ ಅಗತ್ಯವಿರುವ ಪರಿಕರಗಳು ಹಾಗೂ ಸಂಪನ್ಮೂಲಗಳನ್ನು ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ.

 • ತರಗತಿಯಲ್ಲಿ Chromebook ಗಳು ಸುರಕ್ಷಿತವಾಗಿರುತ್ತವೆ ಎಂದು ಖಚಿತಪಡಿಸಿಕೊಳ್ಳುವುದು

  ಲಕ್ಷಾಂತರ ವಿದ್ಯಾರ್ಥಿಗಳು ತರಗತಿಗಳಲ್ಲಿ Chromebook ಗಳು – Google ಲ್ಯಾಪ್‌ಟಾಪ್‌ಗಳನ್ನು – ಬಳಸುತ್ತಾರೆ. ಶಾಲೆಯ ಆಯ್ಕೆಯಂತೆ, ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಹೆಚ್ಚು ಅಥವಾ ಕಡಿಮೆ ಕಾರ್ಯಚಟುವಟಿಕೆ ಇಲ್ಲವೇ ಪ್ರವೇಶವನ್ನು ಒದಗಿಸುವ ನಿಟ್ಟಿನಲ್ಲಿ, ಗುಂಪು ಸೆಟ್ಟಿಂಗ್‌ಗಳನ್ನು ನಿರ್ವಹಿಸಲು ನಾವು ಆಡಳಿತಾಧಿಕಾರಿಗಳಿಗೆ ಅವಕಾಶ ಮಾಡಿಕೊಡುತ್ತೇವೆ. ನಮ್ಮ ಗೌಪ್ಯತೆ ಮತ್ತು security ವೈಶಿಷ್ಟ್ಯಗಳು ಮಗುವಿನ ವೈಯಕ್ತಿಕ ಡೇಟಾವನ್ನು ಸಂರಕ್ಷಿಸಲು ಸಹಾಯ ಮಾಡುತ್ತವೆ ಮತ್ತು ಕಳೆದ ನಾಲ್ಕು ವರ್ಷಗಳಿಂದ, ಅಮೆರಿಕಾದ K-12 ಶಾಲೆಗಳು ಮತ್ತು ಇತರೆ ದೇಶಗಳಲ್ಲಿನ ಅನೇಕ ಶಾಲೆಗಳಲ್ಲಿ Chromebook ಗಳನ್ನು ಉನ್ನತ ಆಯ್ಕೆಯನ್ನಾಗಿ ಪರಿಗಣಿಸಲು ಸಹಾಯ ಮಾಡಿವೆ.

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.