ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಇಂದಿನ ಮಕ್ಕಳು ಹಿಂದಿನ ತಲೆಮಾರುಗಳಂತೆ ಬೆಳೆಯುತ್ತಿಲ್ಲ, ಬದಲಾಗಿ ತಂತ್ರಜ್ಞಾನದೊಂದಿಗೆ ಬೆಳೆಯುತ್ತಿದ್ದಾರೆ. ಆದ್ದರಿಂದ, ನಿಮ್ಮ ಕುಟುಂಬಕ್ಕೆ ಸೂಕ್ತವಾದ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಬಳಕೆಯ ಮಿತಿಗಳನ್ನು ಹೊಂದಿಸುವಂತೆ ನಿಮಗೆ ಸಹಾಯ ಮಾಡಲು, ನಾವು ನೇರವಾಗಿ ತಜ್ಞರು ಮತ್ತು ಶಿಕ್ಷಕರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ.

ಪೋಷಕರ ಮೇಲ್ವಿಚಾರಣೆ

ಡಿಜಿಟಲ್ ಮೂಲ ನಿಯಮಗಳನ್ನು ಹೊಂದಿಸಲು ನಿಮಗೆ ಸಹಾಯ ಮಾಡುವ ಕುರಿತು

ನಿಮ್ಮ ಕಿರಿಯ ಮತ್ತು ಹಿರಿಯ ಮಕ್ಕಳು ಆನ್‌ಲೈನ್‌‌ನಲ್ಲಿ ಹೇಗೆ ಎಕ್ಸ್‌ಪ್ಲೋರ್ ಮಾಡುತ್ತಾರೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಅದರೊಂದಿಗೆ ಅವರ ಖಾತೆಗಳು ಮತ್ತು ಹೊಂದಾಣಿಕೆಯ ಸಾಧನಗಳನ್ನು ನಿರ್ವಹಿಸಲು Family Link ನಿಮಗೆ ಸಹಾಯ ಮಾಡಬಹುದು. ಆ್ಯಪ್‌ಗಳನ್ನು ನಿರ್ವಹಿಸುವ ಮೂಲಕ, ವೀಕ್ಷಣಾ ಅವಧಿಯ ಮೇಲೆ ಕಣ್ಣಿಡುವ ಮೂಲಕ, ನಿಮ್ಮ ಮಗುವಿನ ಸಾಧನಕ್ಕೆ ಮಲಗುವ ಸಮಯವನ್ನು ಹೊಂದಿಸುವ ಮೂಲಕ ಹಾಗೂ ಇನ್ನೂ ಹೆಚ್ಚಿನವುಗಳ ಮೂಲಕ ನಿಮ್ಮ ಕುಟುಂಬಕ್ಕೆ ಸರಿಹೊಂದುವಂತಹ ಬಳಕೆಯ ಮಿತಿಗಳನ್ನು ನೀವು ಹೊಂದಿಸಬಹುದು.

ಇನ್ನಷ್ಟು ತಿಳಿಯಿರಿ

ಕುಟುಂಬ-ಸ್ನೇಹಿ ಅನುಭವಗಳು

ಕುಟುಂಬ-ಸ್ನೇಹಿ ಅನುಭವಗಳನ್ನು ನಿರ್ಮಿಸುವ ಕುರಿತು

ನಿಮ್ಮ ಕುಟುಂಬಕ್ಕೆ ಹೆಚ್ಚು ಆನಂದದಾಯಕವನ್ನಾಗಿ ಮಾಡುವ ಸಲುವಾಗಿ – ನಮ್ಮ ಹಲವಾರು ಉತ್ಪನ್ನಗಳಲ್ಲಿ – ಸ್ಮಾರ್ಟ್ ಫಿಲ್ಟರ್‌ಗಳು, ಸೈಟ್ ಬ್ಲಾಕರ್‌ಗಳು ಮತ್ತು ವಿಷಯ ರೇಟಿಂಗ್‌ಗಳ ರೀತಿಯ ವಿಶೇಷ ವೈಶಿಷ್ಟ್ಯಗಳನ್ನು ನಾವು ನಿರ್ಮಿಸುತ್ತೇವೆ.

ಇನ್ನಷ್ಟು ತಿಳಿಯಿರಿ

ಕುಟುಂಬಗಳಿಗಾಗಿ ಸಲಹೆಗಳು

ಆನ್‌ಲೈನ್ ​​ಜಗತ್ತಿನ ಚುರುಕಾದ, ಆತ್ಮವಿಶ್ವಾಸದಿಂದ ಕೂಡಿದ ಅನ್ವೇಷಕರಾಗಲು ಮಕ್ಕಳಿಗೆ ಸಹಾಯ ಮಾಡುವ ಕುರಿತು

ಆನ್‌ಲೈನ್‌‌ನಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಕ್ಕಳಿಗೆ ಕಲಿಸಲು, ಅವರು ಬುದ್ಧಿವಂತ ಮತ್ತು ಚತುರ ಡಿಜಿಟಲ್ ನಾಗರೀಕರಾಗುವಂತೆ ಸಹಾಯ ಮಾಡಲು, ನಾವು ಸಂಪನ್ಮೂಲಗಳು ಮತ್ತು ಸಲಹೆಗಳನ್ನು ರಚಿಸಿದ್ದೇವೆ.

ಇನ್ನಷ್ಟು ತಿಳಿಯಿರಿ

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.