ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಯಾರಿಗೂ ಮಾರಾಟ ಮಾಡುವುದಿಲ್ಲ

Google ಉತ್ಪನ್ನಗಳಲ್ಲಿ, ಪಾಲುದಾರರ ವೆಬ್‌ಸೈಟ್‌ಗಳಲ್ಲಿ, ಮತ್ತು ಮೊಬೈಲ್ ಆ್ಯಪ್‌ಗಳಲ್ಲಿ ನಿಮಗೆ ಸೂಕ್ತವಾದ ಜಾಹೀರಾತುಗಳನ್ನು ಒದಗಿಸಲು ನಾವು ಡೇಟಾವನ್ನು ಬಳಸುತ್ತೇವೆ. ಈ ಜಾಹೀರಾತುಗಳು ನಮ್ಮ ಸೇವೆಗಳಿಗೆ ಧನ ಸಹಾಯ ಮಾಡಿ, ಸೇವೆಗಳನ್ನು ಎಲ್ಲರಿಗೂ ಉಚಿತವಾಗಿಸುತ್ತವೆಯಾದರೂ, ನಿಮ್ಮ ವೈಯಕ್ತಿಕ ಮಾಹಿತಿಯು ಮಾರಾಟಕ್ಕಾಗಿ ಅಲ್ಲ. ಅಲ್ಲದೆ, ನಾವು ನಿಮಗೆ ಪ್ರಬಲವಾದ ಜಾಹೀರಾತು ಸೆಟ್ಟಿಂಗ್‌ಗಳನ್ನು ಸಹ ಒದಗಿಸುವುದರಿಂದ, ನೀವು ನೋಡುವ ಜಾಹೀರಾತುಗಳನ್ನು ನೀವೇ ಉತ್ತಮವಾಗಿ ನಿಯಂತ್ರಿಸಬಹುದು.

Google ಜಾಹೀರಾತುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವಿಕೆ

 • ಜಾಹೀರಾತುಗಳನ್ನು ನಿಮಗೆ ಹೆಚ್ಚು ಸೂಕ್ತವಾಗಿಸಲು ಮತ್ತು ಉಪಯುಕ್ತವಾಗಿಸಲು, ನಾವು ಡೇಟಾವನ್ನು ಬಳಸುತ್ತೇವೆ

  ನಮ್ಮ ಸೇವೆಗಳನ್ನು ಹೆಚ್ಚು ಪ್ರಯೋಜನಕಾರಿಯಾಗಿಸಲು ಮತ್ತು ಸೂಕ್ತ ಜಾಹೀರಾತುಗಳನ್ನು ತೋರಿಸಲು ನಾವು ಡೇಟಾವನ್ನು ಬಳಸುತ್ತೇವೆ, ಇದು ನಮ್ಮ ಸೇವೆಗಳನ್ನು ಪ್ರತಿಯೊಬ್ಬರಿಗೂ ಉಚಿತವಾಗಿಸಲು ಸಹಾಯ ಮಾಡುತ್ತದೆ. ಜಾಹೀರಾತುದಾರರು ಅಥವಾ ಇತರ ಮೂರನೇ ವ್ಯಕ್ತಿಗಳಿಗೆ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸದೆಯೇ, ನಿಮ್ಮ ಹುಡುಕಾಟಗಳು ಮತ್ತು ಸ್ಥಳ, ನೀವು ಬಳಸಿದ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳು, ನೀವು ನೋಡಿದ ವೀಡಿಯೊಗಳು ಮತ್ತು ಜಾಹೀರಾತುಗಳು ಹಾಗೂ ನೀವು ನಮಗೆ ನೀಡಿರುವ ನಿಮ್ಮ ವಯಸ್ಸಿನ ಮಾಹಿತಿ ಮತ್ತು ಪುರುಷ/ಸ್ತ್ರೀ ಮಾಹಿತಿಯಂತಹ ಸಾಮಾನ್ಯ ಮಾಹಿತಿಯನ್ನು ನಾವು ಬಳಸಿಕೊಳ್ಳಬಹುದು.

  ನಿಮ್ಮ ಜಾಹೀರಾತು ಸೆಟ್ಟಿಂಗ್‌ಗಳನ್ನು ಆಧರಿಸಿ ಮತ್ತು ನೀವು ಸೈನ್ ಇನ್ ಮಾಡಿದ್ದರೆ, ಈ ಡೇಟಾವು ನಿಮ್ಮ ಸಾಧನಗಳಾದ್ಯಂತ ಮತ್ತು ಜಾಹೀರಾತುಗಳನ್ನು ತೋರಿಸಲು ನಮ್ಮೊಂದಿಗೆ ಪಾಲುದಾರರಾಗಿರುವ ಸೈಟ್‌ಗಳಾದ್ಯಂತ ನೀವು ನೋಡುವ ಜಾಹೀರಾತುಗಳಿಗೆ ಮಾಹಿತಿ ನೀಡುತ್ತದೆ. ಹೀಗಾಗಿ, ನಿಮ್ಮ ಕಚೇರಿಯಲ್ಲಿಯ ಕಂಪ್ಯೂಟರ್‌ನಲ್ಲಿ ಪ್ರವಾಸದ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದರೆ, ಆ ತರುವಾಯ ನಿಮ್ಮ ಫೋನ್‌ನಲ್ಲಿ ಪ್ಯಾರಿಸ್‌ಗೆ ಹೋಗಲು ವಿಮಾನದರಗಳ ಕುರಿತ Google ನ ಇತರ ಜಾಹೀರಾತುಗಳನ್ನು ನೀವು ನೋಡಬಹುದು.

 • ನಾವು ಜಾಹೀರಾತುಗಳನ್ನು ನಿಯೋಜಿಸುವುದರಿಂದ ಜಾಹೀರಾತುದಾರರು ನಮಗೆ ಹಣ ಪಾವತಿಸುತ್ತಾರೆ

  ನಮ್ಮ ಸೇವೆಗಳಲ್ಲಿ ಮತ್ತು ಸೈಟ್‌ಗಳಲ್ಲಿ ಹಾಗೆಯೇ ನಮ್ಮೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ಆ್ಯಪ್‌ಗಳಲ್ಲಿ, ಜಾಹೀರಾತಿನ ಮೂಲಕ ನಾವು ಹೇಗೆ ಹಣಗಳಿಸುತ್ತೇವೆ ಎಂಬುದರ ಕುರಿತು ನಾವು ಪಾರದರ್ಶಕವಾಗಿರಲು ಬಯಸುತ್ತೇವೆ. ಕೆಲವು ರೀತಿಯ ಜಾಹೀರಾತುಗಳಿಗೆ, ಜಾಹೀರಾತುದಾರರು ಆ ಜಾಹೀರಾತುಗಳನ್ನು ನಿಯೋಜಿಸುವುದಕ್ಕೆ ಮಾತ್ರವೇ ನಮಗೆ ಹಣ ಪಾವತಿಸುತ್ತಾರೆ ಮತ್ತು ಇತರ ಪ್ರಕಾರದ ಜಾಹೀರಾತುಗಳಿಗೆ, ಅವುಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಆಧಾರದ ಮೇಲೆ ನಮಗೆ ಹಣ ಪಾವತಿಸುತ್ತಾರೆ. ಅಂದರೆ, ಯಾರಾದರೂ ಪ್ರತಿಬಾರಿ ಜಾಹೀರಾತನ್ನು ವೀಕ್ಷಿಸುವುದು ಅಥವಾ ಟ್ಯಾಪ್ ಮಾಡುವುದು, ಅಥವಾ ಆ ಜಾಹೀರಾತನ್ನು ನೋಡಿ ಆ್ಯಪ್‌ ಒಂದನ್ನು ಡೌನ್‌ಲೋಡ್ ಮಾಡುವುದು ಅಥವಾ ವಿನಂತಿ ಫಾರ್ಮ್ ಭರ್ತಿ ಮಾಡುವ ಕ್ರಿಯೆಗಳನ್ನು ಅದು ಒಳಗೊಂಡಿರಬಹುದು.

 • ಜಾಹೀರಾತು ಪ್ರಚಾರಗಳು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸಿವೆ ಎಂಬುದನ್ನು ಜಾಹೀರಾತುದಾರರಿಗೆ ತೋರಿಸುತ್ತೇವೆ

  ನಾವು ಜಾಹೀರಾತುದಾರರಿಗೆ ಅವರ ಜಾಹೀರಾತಿನ ಕಾರ್ಯನಿರ್ವಹಣೆಗೆ ಸಂಬಂಧಪಟ್ಟ ಡೇಟಾವನ್ನು ನೀಡುತ್ತೇವೆ, ಆದರೆ ಹಾಗೆ ಮಾಡುವಾಗ ನಿಮ್ಮ ಯಾವುದೇ ವೈಯಕ್ತಿಕವಾದ ಮಾಹಿತಿಯನ್ನು ಅವರಿಗೆ ಬಹಿರಂಗಪಡಿಸುವುದಿಲ್ಲ. ನಿಮಗೆ ಜಾಹೀರಾತುಗಳನ್ನು ತೋರಿಸುವ ಪ್ರಕ್ರಿಯೆಯ ಪ್ರತಿ ಸಂದರ್ಭದಲ್ಲಿಯೂ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ರಕ್ಷಿಸುತ್ತೇವೆ ಮತ್ತು ಖಾಸಗಿಯಾಗಿ ಇರಿಸುತ್ತೇವೆ.

ನಿಮ್ಮ Google ಜಾಹೀರಾತಿನ ಅನುಭವದ ಮೇಲೆ ನಿಮಗೆ ನಿಯಂತ್ರಣ ನೀಡುವಿಕೆ

 • ವೈಯಕ್ತೀಕರಿಸಿದ ಜಾಹೀರಾತುಗಳನ್ನು ನಿಮಗೆ ತೋರಿಸಲು Google ಯಾವ ಮಾಹಿತಿಯನ್ನು ಬಳಸುತ್ತದೆ ಎಂಬುದನ್ನು ನಿಯಂತ್ರಿಸಿ

  ಜಾಹೀರಾತು ಸೆಟ್ಟಿಂಗ್‌ಗಳಲ್ಲಿ, ನಿಮಗೆ ಜಾಹೀರಾತುಗಳನ್ನು ವೈಯಕ್ತೀಕರಿಸಲು ನಾವು ಯಾವ ಡೇಟಾವನ್ನು ಬಳಸುತ್ತೇವೆ ಎಂಬುದರ ನಿಯಂತ್ರಣವನ್ನು ನಾವು ಸುಲಭಗೊಳಿಸುತ್ತೇವೆ. ಇದು ನಿಮ್ಮ Google ಖಾತೆಗೆ ನೀವು ಸೇರಿಸುವ ಮಾಹಿತಿಯನ್ನು, ನಿಮ್ಮ ಚಟುವಟಿಕೆಗಳ ಆಧಾರದ ಮೇಲೆ ನಿಮ್ಮ ಆಸಕ್ತಿಗಳ ಕುರಿತಾಗಿ ನಾವು ಊಹಿಸುವ ಮಾಹಿತಿಯನ್ನು ಮತ್ತು ಜಾಹೀರಾತುಗಳನ್ನು ತೋರಿಸಲು ನಮ್ಮೊಂದಿಗೆ ಪಾಲುದಾರರಾಗಿರುವ ಇತರ ಜಾಹೀರಾತುದಾರರ ಜೊತೆಗಿನ ಸಂವಹನಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುತ್ತದೆ.

  ನಿಮ್ಮ ಚಟುವಟಿಕೆಯು ನಾವು ತೋರಿಸುವುದರ ಮೇಲೆ ಪ್ರಭಾವ ಬೀರುತ್ತದೆ, ಆದರೆ ನಿಯಂತ್ರಣ ಯಾವಾಗಲೂ ನಿಮ್ಮ ಕೈಲಿರುತ್ತದೆ. ಉದಾಹರಣೆಗೆ, YouTube ನಲ್ಲಿ ಇತ್ತೀಚಿನ ಸಾಕರ್ ಪಂದ್ಯದ ಹೈಲೈಟ್‌ಗಳನ್ನು ನೀವು ವೀಕ್ಷಿಸಿರುವ ಕಾರಣ ಅಥವಾ Google ಹುಡುಕಾಟದಲ್ಲಿ “ನನಗೆ ಹತ್ತಿರದಲ್ಲಿರುವ ಸಾಕರ್ ಕ್ರೀಡೆಯ ಮೈದಾನಗಳು” ಎಂದು ಹುಡುಕಾಟ ನಡೆಸಿರುವ ಕಾರಣ, ನೀವು ಓರ್ವ ಸಾಕರ್ ಅಭಿಮಾನಿ ಎಂದು ನಾವು ಭಾವಿಸಬಹುದು. ಮತ್ತು ಪಾಲುದಾರ ಜಾಹೀರಾತುದಾರರ ಸೈಟ್‌ನಲ್ಲಿ ನೀವು ಸಮಯವನ್ನು ಕಳೆದಿದ್ದರೆ, ಆ ಭೇಟಿಯ ಆಧಾರದ ಮೇಲೆ ನಾವು ಜಾಹೀರಾತುಗಳನ್ನು ಸೂಚಿಸಬಹುದು.

  ಜಾಹೀರಾತು ವೈಯಕ್ತೀಕರಣವು ಆನ್ ಆಗಿರುವಾಗ, ನೀವು ಯಾವುದೇ ಮಾಹಿತಿಯನ್ನು ಆರಿಸಿಕೊಳ್ಳಬಹುದು – ಅಂದರೆ, ವಯಸ್ಸು ಮತ್ತು ಪುರುಷ/ಸ್ತ್ರೀ ಮಾಹಿತಿ, ಊಹಿಸಲ್ಪಟ್ಟ ಆಸಕ್ತಿ ಅಥವಾ ಜಾಹೀರಾತುದಾರರ ಜೊತೆಗೆ ಈ ಹಿಂದೆ ನಡೆಸಿರುವ ಸಂವಹನದ ಮಾಹಿತಿ – ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಏಕೆ ಬಳಸಲಾಗುತ್ತಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ, ಅದನ್ನು ಸಂಪೂರ್ಣವಾಗಿ ಆಫ್ ಮಾಡಿ ಅಥವಾ ನಿಷ್ಕ್ರಿಯಗೊಳಿಸಿ. ನಿಮಗೆ ಇನ್ನೂ ಜಾಹೀರಾತುಗಳು ಕಾಣಿಸುತ್ತವೆ, ಆದರೆ ಅವುಗಳು ಅಷ್ಟೇನು ಸಂಬಂಧಿತವಾಗಿರುವುದಿಲ್ಲ.

 • ನಿಮಗೆ ಜಾಹೀರಾತುಗಳನ್ನು ತೋರಿಸಲು ಯಾವ ಡೇಟಾವನ್ನು ನಾವು ಬಳಸುತ್ತೇವೆ ಎಂಬುದನ್ನು ನೋಡಿ

  ನಿಮಗೆ ಜಾಹೀರಾತುಗಳನ್ನು ತೋರಿಸಲು ನಾವು ಬಳಸುವ ಡೇಟಾವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವಲ್ಲಿ ನಿಮಗೆ ಸಹಾಯ ಮಾಡಲು ನಾವು ಬಯಸುತ್ತೇವೆ. "ಏಕೆ ಈ ಜಾಹೀರಾತು" ಎಂಬುದು ಒಂದು ವೈಶಿಷ್ಟ್ಯವಾಗಿದ್ದು, ಅದು ನಿರ್ಧಿಷ್ಟ ಜಾಹೀರಾತನ್ನು ನೀವು ಏಕೆ ನೋಡುತ್ತಿರುವಿರಿ ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನೀವು ಕ್ಯಾಮರಾಗಳನ್ನು ಹುಡುಕಿರುವ ಕಾರಣ, ಫೋಟೋಗ್ರಫಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿರುವ ಕಾರಣ ಅಥವಾ ಈ ಹಿಂದೆ ಕ್ಯಾಮರಾಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಕ್ಲಿಕ್ ಮಾಡಿರುವ ಕಾರಣ, ನೀವು ಆ ಜಾಹೀರಾತನ್ನು ನೋಡುತ್ತಿರಬಹುದು. ಅಥವಾ ನೀವು ರೆಸ್ಟೋರೆಂಟ್ ಕುರಿತಾದ ಜಾಹೀರಾತನ್ನು ನೋಡಿದಾಗ, ನಿಮ್ಮ ಸ್ಥಳದ ಅಥವಾ ನಿಮ್ಮ ಮೊಬೈಲ್ ಆ್ಯಪ್ ಚಟುವಟಿಕೆಯ ಕಾರಣದಿಂದಾಗಿ ನೀವು ಅದನ್ನು ಅನ್ವೇಷಿಸಬಹುದು. ನಿಮಗೆ ಉಪಯುಕ್ತವಿರುವ ವಿಷಯಗಳ ಕುರಿತು ನಿಮಗೆ ಜಾಹೀರಾತು ತೋರಿಸಲು ಈ ಪ್ರಕಾರದ ಡೇಟಾ ನಮಗೆ ಸಹಾಯ ಮಾಡುತ್ತದೆ. ಆದರೆ ನೆನಪಿಡಿ, ನಾವು ಈ ತರಹದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಜಾಹೀರಾತುದಾರರ ಜೊತೆಗೆ ಹಂಚಿಕೊಳ್ಳುವುದಿಲ್ಲ.

  ಹುಡುಕಾಟ, YouTube, Gmail, Play ಮತ್ತು ಶಾಪಿಂಗ್‌ನಂತಹ ನಮ್ಮ ಸೇವೆಗಳಲ್ಲಿನ ಮಾಹಿತಿ ಐಕಾನ್ ಮೂಲಕ ನೀವು ಈ ವೈಶಿಷ್ಟ್ಯವನ್ನು ಪ್ರವೇಶಿಸಬಹುದು. ನಮ್ಮ ಸೇವೆಗಳನ್ನು ಬಳಸುವಂತಹ ಪಾಲುದಾರ ಸೈಟ್‌ಗಳು ಅಥವಾ ಆ್ಯಪ್‌ಗಳಲ್ಲಿ ನೀವು ನೋಡುವ ಹೆಚ್ಚಿನ ಜಾಹೀರಾತುಗಳಿಗಾಗಿ, ಅದೇ ರೀತಿಯ ಐಕಾನ್ ಮೂಲಕ “ಏಕೆ ಈ ಜಾಹೀರಾತು” ವೈಶಿಷ್ಟ್ಯವನ್ನು ಪ್ರವೇಶಿಸಬಹುದು.

 • ನೀವು ನೋಡಲು ಬಯಸದ ಜಾಹೀರಾತುಗಳನ್ನು ತೆಗೆದುಹಾಕಿ

  ನಮ್ಮ ಪಾಲುದಾರ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳ ಮೂಲಕ ನಾವು ತೋರಿಸುವ ಬಹುತೇಕ ಜಾಹೀರಾತುಗಳನ್ನು ನೀವು ನೋಡಿದ ಕೂಡಲೇ ತೆಗೆದುಹಾಕಬಹುದು. ಜಾಹೀರಾತಿನಲ್ಲಿ ಮೂಲೆಯಲ್ಲಿರುವ X ಆಯ್ಕೆ ಮಾಡುವ ಮೂಲಕ, ನಿಮಗೆ ಇನ್ನು ಮುಂದೆ ಸಂಬಂಧವಿಲ್ಲದ ಜಾಹೀರಾತುಗಳನ್ನು ತೆಗೆದುಹಾಕಬಹುದು. ಉದಾಹರಣೆಗೆ, ನೀವು ಹೊಸ ಕಾರನ್ನು ಖರೀದಿಸಲೆಂದು ಆಸಕ್ತಿ ಹೊಂದಿರುವಾಗ ಕಾರು ಜಾಹೀರಾತುಗಳು ಪ್ರಯೋಜನಕಾರಿಯಾಗಿರಬಹುದು. ಆದರೆ ಒಮ್ಮೆ ನೀವು ಹೊಸ ಕಾರಿನಲ್ಲಿ ಕೂತು ಜಾಲಿ ರೈಡ್‌ ಮಾಡಿದ ಮೇಲೆ, ಬಹುಶಃ ನೀವು ಖರೀದಿಸಿದ ಆ ಕಾರಿನ ಕುರಿತಾಗಿ Google ನಿಂದ ಇನ್ನಷ್ಟು ಜಾಹೀರಾತುಗಳನ್ನು ನೋಡಲು ನಿಮಗೆ ಇಷ್ಟವಾಗದೇ ಇರಬಹುದು.

  ನೀವು ಸೈನ್‌ ಇನ್ ಮಾಡಿದ್ದರೆ ಮತ್ತು ಜಾಹೀರಾತು ಸೆಟ್ಟಿಂಗ್‌ಗಳನ್ನು ಆಧರಿಸಿ, ಈ ನಿಯಂತ್ರಣಗಳು ನಮ್ಮೊಂದಿಗೆ ಪಾಲುದಾರರಾದ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿ ನೀವು ಸೈನ್-ಇನ್ ಮಾಡಿದ ಸಾಧನಗಳಾದ್ಯಂತ ಪರಿಣಾಮ ಬೀರುತ್ತವೆ. Chrome ಮತ್ತು ಇತರ ಕೆಲವು ಬ್ರೌಸರ್‌ಗಳಲ್ಲಿ ಪಾಪ್-ಅಪ್ ಜಾಹೀರಾತುಗಳನ್ನು ಆಫ್ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ.

 • ನಿರ್ದಿಷ್ಟ ಜಾಹೀರಾತುದಾರರ ಜಾಹೀರಾತುಗಳನ್ನು ಆಫ್ ಮಾಡಿ

  ನೀವು Google ಉತ್ಪನ್ನಗಳು ಮತ್ತು ಇಂಟರ್‌ನೆಟ್‌ನಾದ್ಯಂತ ನಿಮ್ಮ ಜಾಹೀರಾತುಗಳ ಅನುಭವದ ಮೇಲೆ ನಿಯಂತ್ರಣವನ್ನು ಹೊಂದಿರುತ್ತೀರಿ. ಕೆಲವೊಮ್ಮೆ, ನೀವು ಜಾಹೀರಾತುದಾರರ ಸೈಟ್‌ಗಳಿಗೆ ಭೇಟಿ ನೀಡಿದಾಗ ಅವರು ನಿಮಗೆ ಜಾಹೀರಾತುಗಳನ್ನು ತೋರಿಸುತ್ತಾರೆ ಹಾಗೂ ಮತ್ತೆ ಭೇಟಿ ನೀಡುವಂತೆ ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ - ಉದಾಹರಣೆಗೆ, ನೀವು ಈ ಹಿಂದೆ ಶಾಪಿಂಗ್ ಮಾಡಿದ್ದ ಶೂಗಳ ಜಾಹೀರಾತುಗಳನ್ನು ನೀವು ನೋಡಿದಾಗ. ನೀವು ಯಾವುದೇ ಕಾರಣಕ್ಕೂ ಅವುಗಳನ್ನು ಇನ್ನು ಮುಂದೆ ನೋಡಲು ಬಯಸದಿದ್ದರೆ, ಹುಡುಕಾಟ, YouTube ಮತ್ತು Gmail ನಂತಹ ನಮ್ಮ Google ಸ್ವತ್ತುಗಳಾದ್ಯಂತ ನಿಮ್ಮನ್ನು ಅನುಸರಿಸುವ ನಿರ್ದಿಷ್ಟ ಜಾಹೀರಾತುದಾರರು ತೋರಿಸುವ ಜಾಹೀರಾತುಗಳನ್ನು ನೀವು ಆಫ್ ಮಾಡಬಹುದು. ಇಂಟರ್‌ನೆಟ್‌ನಾದ್ಯಂತ ನೀವು ನೋಡುವ ಜಾಹೀರಾತುಗಳಿಗೂ ಸಹ ಈ ಸೆಟ್ಟಿಂಗ್ ಅನ್ವಯವಾಗುತ್ತದೆ, ನಿರ್ದಿಷ್ಟವಾಗಿ, ನಿಮಗೆ ಜಾಹೀರಾತುಗಳನ್ನು ತೋರಿಸುವ ಸಲುವಾಗಿ ನಮ್ಮೊಂದಿಗೆ ಪಾಲುದಾರರಾಗಿರುವ ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿ.

  ಸೈನ್ ಇನ್ ಆಗಿದ್ದು ನಿಮ್ಮ ಜಾಹೀರಾತು ಸೆಟ್ಟಿಂಗ್‌ಗಳಲ್ಲಿರುವಾಗ, Google ಸೇವೆಗಳಲ್ಲಿ ಜಾಹೀರಾತುಗಳನ್ನು ತೋರಿಸುವಂತಹ ನಿರ್ದಿಷ್ಟ ಜಾಹೀರಾತುದಾರರ ಜಾಹೀರಾತುಗಳನ್ನು ಸಹ ನೀವು ಆಫ್ ಮಾಡಬಹುದು.

ಜಾಹೀರಾತುಗಳನ್ನು ನಿಮಗೆ ಇನ್ನಷ್ಟು ಉಪಯುಕ್ತವಾಗಿಸಲು ಡೇಟಾ ಬಳಸುವಿಕೆ

 • ನಿಮಗೆ ಇನ್ನಷ್ಟು ವೈಯಕ್ತಿಕವಾಗಿ ಸೂಕ್ತವಾಗಿರಲು, ಹುಡುಕಾಟ ಜಾಹೀರಾತುಗಳು ನಿಮ್ಮ ಚಟುವಟಿಕೆಯನ್ನು ಬಳಸುತ್ತವೆ

  ನೀವು Google ಹುಡುಕಾಟವನ್ನು ಬಳಸುವಾಗ, ಸಂಬಂಧಿತ ಹುಡುಕಾಟ ಫಲಿತಾಂಶಗಳ ಜೊತೆಯಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ನೀವು ಆಗಷ್ಟೇ ನಡೆಸಿದ್ದ ಹುಡುಕಾಟಗಳು ಮತ್ತು ನಿಮ್ಮ ಸ್ಥಳದ ಮಾಹಿತಿಗಳು ಈ ಜಾಹೀರಾತುಗಳನ್ನು ಪ್ರಾಂಪ್ಟ್‌ ಮಾಡುತ್ತವೆ. ಉದಾಹರಣೆಗೆ, ನೀವು "ಬೈಕ್‌ಗಳು" ಎಂದು ಹುಡುಕಿದಾಗ, ನಿಮ್ಮ ಹತ್ತಿರದಲ್ಲಿ ಮಾರಾಟಕ್ಕಿರುವ ಬೈಸಿಕಲ್‌‌ಗಳ ಜಾಹೀರಾತುಗಳನ್ನು ನೀವು ನೋಡಬಹುದು.

  ಇತರ ಸಂದರ್ಭಗಳಲ್ಲಿ, ಇನ್ನಷ್ಚು ಉಪಯುಕ್ತ ಜಾಹೀರಾತುಗಳನ್ನು ನೀಡಲು ನಾವು ನಿಮ್ಮ ಹಿಂದಿನ ಹುಡುಕಾಟಗಳು ಅಥವಾ ನೀವು ಭೇಟಿ ನೀಡಿದ ಸೈಟ್‌ಗಳಂತಹ ಹೆಚ್ಚುವರಿ ಡೇಟಾವನ್ನು ಬಳಸಿಕೊಳ್ಳುತ್ತೇವೆ. ನೀವು ಈಗಾಗಲೇ “ಬೈಕ್‌ಗಳು” ಎಂದು ಹುಡುಕಿದ್ದರಿಂದ, ಈಗ ನೀವು “ರಜಾದಿನಗಳು” ಎಂದು ಹುಡುಕಿದರೆ, ನೀವು ರಜಾದಿನಗಳಲ್ಲಿ ಬೈಕಿಂಗ್‌ಗೆ ಹೋಗುವ ಸೂಕ್ತ ಸ್ಥಳಗಳ ಜಾಹಿರಾತುಗಳನ್ನು ನೋಡಬಹುದು.

 • Gmail ಜಾಹೀರಾತುಗಳು ನಿಮ್ಮ ಚಟುವಟಿಕೆಯನ್ನು ಆಧರಿಸಿವೆ

  ನೀವು Gmail ನಲ್ಲಿ ವೀಕ್ಷಿಸಿದ ಜಾಹೀರಾತುಗಳು ನಿಮ್ಮ Google ಖಾತೆಗೆ ಸಂಬಂಧಿಸಿದ ಡೇಟಾವನ್ನು ಆಧರಿಸಿವೆ. ಉದಾಹರಣೆಗೆ, Google ನ ಇತರ ಸೇವೆಗಳಲ್ಲಿನ ನಿಮ್ಮ YouTube ಅಥವಾ ಹುಡುಕಾಟದಂತಹ ಚಟುವಟಿಕೆಗಳು, Gmail ನಲ್ಲಿ ನೀವು ನೋಡುವ ಜಾಹೀರಾತುಗಳ ಮೇಲೆ ಪರಿಣಾಮ ಬೀರಬಹುದು. ನಿಮಗೆ ಜಾಹೀರಾತುಗಳನ್ನು ತೋರಿಸಲು, Google ನಿಮ್ಮ ಇನ್‌ಬಾಕ್ಸ್‌ನಲ್ಲಿರುವ ಕೀವರ್ಡ್‌ಗಳು ಅಥವಾ ಸಂದೇಶಗಳನ್ನು ಬಳಕೆಮಾಡುವುದಿಲ್ಲ. ನಿಮಗೆ ಜಾಹೀರಾತುಗಳನ್ನು ತೋರಿಸುವ ಸಲುವಾಗಿ ಬೇರಾರೂ ನಿಮ್ಮ ಇಮೇಲ್‌ಗಳನ್ನು ಓದುವುದಿಲ್ಲ.

 • Google Play ಜಾಹೀರಾತುಗಳು ನಿಮಗೆ ಇಷ್ಟವಾಗಬಹುದಾದ ಆ್ಯಪ್‌ಗಳನ್ನು ಅನ್ವೇಷಿಸಲು ನಿಮಗೆ ಸಹಾಯ ಮಾಡುತ್ತವೆ

  ನಮ್ಮ Google Play ಸ್ಟೋರ್‌ನಲ್ಲಿ Google ಹಾಗೂ ಇತರ ಡೆವಲಪರ್‌ಗಳ ಲಕ್ಷಾಂತರ ಆ್ಯಪ್‌ಗಳನ್ನು ನೀವು ಕಾಣಬಹುದು. ನೀವು Android ಸಾಧನದಲ್ಲಿ ಬ್ರೌಸ್ ಮಾಡಿದಾಗ, ನಿಮ್ಮ ಹುಡುಕಾಟದ ಪದಗಳು, ನೀವು ಇನ್‌ಸ್ಟಾಲ್ ಮಾಡಿರುವ ಅಥವಾ ಬಳಸುತ್ತಿರುವ ಆ್ಯಪ್‌ಗಳು, ಅಥವಾ ನೀವು ಬಳಸುತ್ತಿರುವ ಆ್ಯಪ್ ಅನ್ನು ಹೋಲುವ ಆ್ಯಪ್‌ಗಳ ಆಧಾರದಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳಬಹುದು. ಉದಾಹರಣೆಗೆ, ನೀವು “ಪ್ರಯಾಣದ ಆ್ಯಪ್‌ಗಳು” ಎಂದು ಹುಡುಕಿದರೆ, ಪ್ರಯಾಣ ಯೋಜನೆಯೊಂದರ ಆ್ಯಪ್ ಜಾಹೀರಾತನ್ನು ನೀವು ಕಾಣಬಹುದು.

 • ನಿಮಗೆ ಇನ್ನಷ್ಟು ಸೂಕ್ತವಾಗಿರಲು, YouTube ಜಾಹೀರಾತುಗಳು ನಿಮ್ಮ ಹುಡುಕಾಟ ಮತ್ತು ವೀಕ್ಷಣಾ ಚಟುವಟಿಕೆಯನ್ನು ಬಳಸುತ್ತವೆ

  ನೀವು YouTube ನಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ, ವೀಡಿಯೊ ಪುಟದಲ್ಲಿ ವೀಡಿಯೊ ಪ್ಲೇ ಆಗುವುದಕ್ಕೂ ಮೊದಲು ಅಥವಾ ಮುಖಪುಟದಲ್ಲಿ ಸಂಬಂಧಿತ ವೀಡಿಯೊಗಳಂತೆ ಜಾಹೀರಾತುಗಳು ಪ್ಲೇ ಆಗುವುದನ್ನು ನೀವು ನೋಡಬಹುದು. ನೀವು ವೀಕ್ಷಿಸಿದ ವೀಡಿಯೊಗಳು, ನೀವು ಹುಡುಕಿದ ಸಂಗತಿಗಳು ಅಥವಾ ಸ್ಥಳಗಳು, ಅಥವಾ ನೀವು ಬಳಸುವ ಆ್ಯಪ್‌ಗಳನ್ನು ಜಾಹೀರಾತುಗಳು ಆಧರಿಸಿರಬಹುದು.

  ಉದಾಹರಣೆಗೆ, ನೀವು “ಮನೆ ಅಲಂಕಾರ” ಎಂದು ಹುಡುಕಿದರೆ ಅಥವಾ ನೀವೇ ಅಲಂಕರಿಸಿ ಎಂಬ ವೀಡಿಯೊಗಳನ್ನು ವೀಕ್ಷಿಸಿದರೆ, ಮನೆ ಸುಧಾರಣೆ ಸರಣಿಯ ಜಾಹೀರಾತನ್ನು ನೀವು ನೋಡಬಹುದು. ಈ ಜಾಹೀರಾತುಗಳು, ನೀವು ವೀಕ್ಷಿಸಿದ ವೀಡಿಯೊಗಳ ರಚನೆಕಾರರಿಗೆ ಬೆಂಬಲಿಸುವಲ್ಲಿ ಸಹಾಯ ಮಾಡುತ್ತವೆ.

  ನೀವು ವೀಕ್ಷಿಸಲು ಬಯಸದಿದ್ದರೆ ಅನೇಕ YouTube ಜಾಹೀರಾತುಗಳನ್ನು ನೀವು ಸ್ಕಿಪ್ ಮಾಡಬಹುದು ಅಥವಾ ಜಾಹೀರಾತು ಮುಕ್ತ YouTube ಆನಂದಿಸಲು YouTube ಪ್ರೀಮಿಯಂಗೆ ಸಬ್‌ಸ್ಕ್ರೈಬ್ ಮಾಡಬಹುದು.

 • ನೀವು ಹುಡುಕುತ್ತಿರುವುದನ್ನು ಕಂಡುಕೊಳ್ಳಲು ಶಾಪಿಂಗ್ ಜಾಹೀರಾತುಗಳು ನಿಮಗೆ ಸಹಾಯ ಮಾಡುತ್ತವೆ

  ನೀವು Google ಹುಡುಕಾಟದಲ್ಲಿ ಒಂದು ಉತ್ಪನ್ನವನ್ನು ಹುಡುಕುತ್ತಿರುವಾಗ, ಕೆಲವೊಮ್ಮೆ ಸಂಬಂಧಿತ ಹುಡುಕಾಟ ಫಲಿತಾಂಶಗಳ ಜೊತೆಗೆ ಶಾಪಿಂಗ್ ಜಾಹೀರಾತುಗಳನ್ನು ನಾವು ನಿಮಗೆ ತೋರಿಸುತ್ತೇವೆ. ನೀವು ಹುಡುಕುತ್ತಿರುವ ಉತ್ಪನ್ನವನ್ನು ತ್ವರಿತವಾಗಿ ಕಂಡುಕೊಳ್ಳಲು ಮತ್ತು ಆನ್‌ಲೈನ್‌ನಲ್ಲಿ ಇಲ್ಲವೇ ಹತ್ತಿರದ ಮಳಿಗೆಯಲ್ಲಿ ಖರೀದಿಸಲು ನಿಮಗೆ ಸುಲಭಗೊಳಿಸುವ ನಿಟ್ಟಿನಲ್ಲಿ, ಅಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಗಳು ಶಾಪಿಂಗ್ ಜಾಹೀರಾತುಗಳನ್ನು ಬಳಸುತ್ತವೆ. ಈ ಜಾಹೀರಾತುಗಳು ನೀವು ಆಗಷ್ಟೇ ಹುಡುಕಿದ ಉತ್ಪನ್ನ, ನಿಮ್ಮ ಸ್ಥಳ ಮತ್ತು ನೀವು ಈ ಹಿಂದೆ ಬ್ರೌಸ್ ಮಾಡಿದ್ದ ಆನ್‌ಲೈನ್ ಸ್ಟೋರ್‌ಗಳನ್ನು ಆಧರಿಸಿರುತ್ತವೆ.

  ಉದಾಹರಣೆಗೆ, ನೀವು “ಚರ್ಮದ ಸುಖಾಸನ” ಎಂದು ಹುಡುಕಿದಾಗ, ಚರ್ಮದ ಸುಖಾಸನಗಳ ಚಿತ್ರಗಳು, ಬೆಲೆಗಳು ಮತ್ತು ನಿಮ್ಮ ಹತ್ತಿರದಲ್ಲಿ ಸುಖಾಸನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿ ಮಳಿಗೆಯ ಸ್ಥಳಗಳ ಜಾಹೀರಾತುಗಳನ್ನು ನೀವು ನೋಡಬಹುದು.

 • ಪಾಲುದಾರ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳು ನಿಮಗೆ ಇನ್ನಷ್ಟು ಉಪಯುಕ್ತವಾದ ಜಾಹೀರಾತುಗಳನ್ನು ರಚಿಸಲು ನಿಮ್ಮ ಆನ್‌ಲೈನ್ ಚಟುವಟಿಕೆಯನ್ನು ಬಳಸುತ್ತವೆ

  ಹಲವಾರು ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಆ್ಯಪ್‌ಗಳು ಜಾಹೀರಾತುಗಳನ್ನು ತೋರಿಸಲು ನಮ್ಮೊಂದಿಗೆ ಪಾಲುದಾರರಾಗಿದ್ದಾರೆ. ನಾವು ಈ ಪಾಲುದಾರರ ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿ ಜಾಹೀರಾತುಗಳನ್ನು ತೋರಿಸುವಾಗ, ಅವುಗಳು ನೀವು ಓದುತ್ತಿರುವ ಅಥವಾ ವೀಕ್ಷಿಸುತ್ತಿರುವ ಸಂಗತಿಗಳನ್ನು, ನಮ್ಮ ಬಳಕೆದಾರರು ನಮ್ಮೊಂದಿಗೆ ಹಂಚಿಕೊಂಡ ವೈಯಕ್ತಿಕ ಮಾಹಿತಿಯನ್ನು ಆಧರಿಸಿದ ಪ್ರೇಕ್ಷಕರ "ಪ್ರಕಾರಗಳು" ಮತ್ತು ನಿಮ್ಮ ಆನ್‌ಲೈನ್ ಚಟುವಟಿಕೆಗಳ ಕುರಿತಾಗಿ ನಾವು ಸಂಗ್ರಹಿಸುವ ಡೇಟಾವನ್ನು ಆಧರಿಸಿರುತ್ತವೆ: ಉದಾಹರಣೆಗೆ, “ಪ್ರಯಾಣಿಸಲು ಆಸಕ್ತಿ ಹೊಂದಿರುವ 35- ರಿಂದ 44- ವರ್ಷ ವಯಸ್ಸಿನ ಮಹಿಳೆಯರು.”

  ನಿಮ್ಮ Google ಖಾತೆಗೆ ಲಾಗಿನ್ ಮಾಡಿದಾಗ ನೀವು ಭೇಟಿ ನೀಡುವ ಸೈಟ್‌ಗಳು ಅಥವಾ ನಿಮ್ಮ Chrome ಬ್ರೌಸಿಂಗ್ ಚಟುವಟಿಕೆಯ ಆಧಾರದ ಮೇಲೆಯೂ ಸಹ ನಾವು ನಿಮಗೆ ಜಾಹೀರಾತುಗಳನ್ನು ತೋರಿಸಬಹುದು. ಉದಾಹರಣೆಗೆ, ನಿಮ್ಮ ಆನ್‌ಲೈನ್ ಶಾಪಿಂಗ್ ಕಾರ್ಟ್‌ಗೆ ನೀವು ಸೇರಿಸಿರುವ ಆದರೆ ಖರೀದಿಸುವುದು ಬೇಡವೆಂದು ನಿರ್ಧರಿಸಿದ ಕಾಲ್ನಡಿಗೆಯ ಶೂಗಳ ಜಾಹೀರಾತುಗಳನ್ನು ನೀವು ನೋಡಬಹುದು. ಹಾಗಿದ್ದರೂ, ನಾವು ನಿಮ್ಮ ಹೆಸರು, ಇಮೇಲ್ ವಿಳಾಸ ಅಥವಾ ಬಿಲ್ಲಿಂಗ್ ಮಾಹಿತಿಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸದೆಯೇ ಇದನ್ನು ಮಾಡುತ್ತೇವೆ.

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.