ಎಲ್ಲರಿಗಾಗಿ ತಂತ್ರಜ್ಞಾನವನ್ನು ರಚಿಸುವುದು ಎಂದರೆ, ಅದನ್ನು ಬಳಸುವ ಎಲ್ಲರನ್ನೂ ರಕ್ಷಿಸುವುದು ಎಂದರ್ಥ.

Google ಯಾವಾಗಲೂ ತಾನು ಮಾಡುವ ಪ್ರತಿಯೊಂದು ಕಾರ್ಯವೂ ಸಹ ಬಳಕೆದಾರರನ್ನು ಗೌರವಿಸಬೇಕು ಎಂಬ ಉದ್ದೇಶದಿಂದಲೇ ಮಾಡುತ್ತದೆ ಮತ್ತು ಆ ನಂಬಿಕೆಯ ಮೇಲೆಯೇ ಇದು ಸ್ಥಾಪಿತವಾಗಿದೆ. ಅಂದರೆ, ಇಂಟರ್‌ನೆಟ್ ವಿಕಸನಗೊಂಡಂತೆ, ನಿರಂತರವಾಗಿ ನಮ್ಮ ಭದ್ರತೆ ತಂತ್ರಜ್ಞಾನಗಳನ್ನು, ಹಾಗೂ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು ಸಹಾಯ ಮಾಡಲು ಗೌಪ್ಯತೆ ಪರಿಕರಗಳನ್ನು ಸುಧಾರಿಸುವುದು ಎಂದರ್ಥ.

ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆ ಸಹಾಯ ಮಾಡಲು ನಾವು ಏನು ಮಾಡುತ್ತೇವೆ ಎಂಬುದನ್ನು ಅನ್ವೇಷಿಸಿ.

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ರಕ್ಷಿಸುತ್ತೇವೆ

ನಾವು ಮಾಡುವ ಪ್ರತಿಯೊಂದನ್ನೂ ಸಹ ಪ್ರಬಲವಾದ ಅಂತರ್ನಿರ್ಮಿತ ಭದ್ರತಾ ತಂತ್ರಜ್ಞಾನಗಳಿಂದ ರಕ್ಷಿಸಲಾಗಿದೆ. ಇವು ಸ್ಪ್ಯಾಮ್, ಮಾಲ್‌ವೇರ್‌ ಮತ್ತು ವೈರಸ್‌ಗಳಂತಹ ಬೆದರಿಕೆಗಳನ್ನು ಪತ್ತೆಹಚ್ಚಲು ಹಾಗೂ ಅವುಗಳು ನಿಮ್ಮನ್ನು ತಲುಪದಂತೆ ತಡೆಯಲು ಸಹಾಯ ಮಾಡುತ್ತವೆ. ಎಲ್ಲರೂ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುವ ಉದ್ಯಮದ ಗುಣಮಟ್ಟಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ, ನಾವು ಈ ಭದ್ರತೆ ತಂತ್ರಜ್ಞಾನಗಳನ್ನು ಪಾಲುದಾರರೊಂದಿಗೆ ಮತ್ತು ಸ್ಪರ್ಧಿಗಳೊಂದಿಗೆ ಸಮಾನವಾಗಿ ಹಂಚಿಕೊಳ್ಳುತ್ತೇವೆ.

ಇನ್ನಷ್ಟು ತಿಳಿಯಿರಿ

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವಂತಹ ಗೌಪ್ಯತೆಯನ್ನು ನಾವು ನಿರ್ಮಿಸುತ್ತೇವೆ.

ಡೇಟಾವು Google ಸೇವೆಗಳನ್ನು ಹೆಚ್ಚು ಉಪಯುಕ್ತ ಮತ್ತು ಸೂಕ್ತವಾಗಿಸುತ್ತದೆ, ಆದರೆ ಈ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಎಂಬುದು ನಿಮಗೆ ಸೇರಿದ ವೈಯಕ್ತಿಕ ಆಯ್ಕೆಯಾಗಿದೆ. ನಾವು ಯಾವ ಡೇಟಾವನ್ನು ಸಂಗ್ರಹಿಸುತ್ತೇವೆ, ಅದನ್ನು ಹೇಗೆ ಮತ್ತು ಏಕೆ ಬಳಸಲಾಗುತ್ತದೆ ಎಂಬುದರ ಕುರಿತು ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ಮತ್ತು ನಿಮ್ಮ Google ಖಾತೆಯಲ್ಲಿ ನಾವು ಪ್ರಬಲವಾದ ಡೇಟಾ ನಿಯಂತ್ರಣಗಳನ್ನು ನಿರ್ಮಿಸುತ್ತೇವೆ, ಇದರಿಂದಾಗಿ ನಿಮಗೆ ಸರಿಯಾದ ಗೌಪ್ಯತಾ ಸೆಟ್ಟಿಂಗ್‌ಗಳನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು.

ಇನ್ನಷ್ಟು ತಿಳಿಯಿರಿ

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಇಂದಿನ ಮಕ್ಕಳು ತಂತ್ರಜ್ಞಾನದೊಂದಿಗೇ ಬೆಳೆಯುತ್ತಿದ್ದಾರೆ, ಹಿಂದಿನ ತಲೆಮಾರುಗಳಂತೆ ತಂತ್ರಜ್ಞಾನದ ಅಭಿವೃದ್ಧಿಯ ಪರಿಣಾಮದಿಂದ ಬೆಳೆಯುತ್ತಿಲ್ಲ. ಆದ್ದರಿಂದ, ನಿಮ್ಮ ಕುಟುಂಬಕ್ಕೆ ಸೂಕ್ತವಾದ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗಡಿಗಳನ್ನು ಹೊಂದಿಸುವಂತೆ ನಿಮಗೆ ಸಹಾಯ ಮಾಡಲು, ನಾವು ನೇರವಾಗಿ ತಜ್ಞರು ಮತ್ತು ಶಿಕ್ಷಕರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ.

ಇನ್ನಷ್ಟು ತಿಳಿಯಿರಿ