ನಮ್ಮ ಗೌಪ್ಯತೆ ಮತ್ತು ಭದ್ರತೆಯ ಮೂಲತತ್ವಗಳು

ಎಲ್ಲರಿಗೂ ಹೊಂದುವಂತಹ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ. ಈ ಜವಾಬ್ದಾರಿಯು, ಎಲ್ಲರಿಗೂ ಉಚಿತವಾದ ಮತ್ತು ಎಲ್ಲರೂ ಪಡೆಯಬಹುದಾದ ಉತ್ಪನ್ನಗಳು ಹಾಗೂ ಸೇವೆಗಳನ್ನು ರಚಿಸುವುದರೊಂದಿಗೆ ಬರುತ್ತದೆ. ತಂತ್ರಜ್ಞಾನವು ಮುಂದುವರೆದಂತೆ ಮತ್ತು ಗೌಪ್ಯತೆಯ ಅಗತ್ಯತೆಗಳು ವಿಕಸನಗೊಂಡಂತೆ ಇದು ವಿಶೇಷವಾಗಿ ಬಹುಮುಖ್ಯವಾಗಿರುತ್ತದೆ. ನಮ್ಮ ಬಳಕೆದಾರರ ಡೇಟಾವನ್ನು ಖಾಸಗಿಯಾಗಿ, ಸುರಕ್ಷಿತವಾಗಿ ಮತ್ತು ಸುಭದ್ರವಾಗಿರಿಸುವ ಸಲುವಾಗಿ ನಮ್ಮ ಉತ್ಪನ್ನಗಳು, ನಮ್ಮ ಪ್ರಕ್ರಿಯೆಗಳು ಮತ್ತು ನಮ್ಮ ಜನರಿಗೆ ಮಾರ್ಗದರ್ಶನ ನೀಡಲು ನಾವು ಈ ಮೂಲತತ್ವಗಳತ್ತ ಗಮನಹರಿಸುತ್ತೇವೆ.

 1. 1. ನಮ್ಮ ಬಳಕೆದಾರರನ್ನು ಗೌರವಿಸುವುದು. ಅವರ ಗೌಪ್ಯತೆಯನ್ನು ಗೌರವಿಸುವುದು.

  ಈ ವಿಚಾರಗಳು ಬೇರ್ಪಡಿಸಲಾಗದವು ಎಂದು ನಾವು ನಂಬುತ್ತೇವೆ. ಒಟ್ಟಿಗೆ, ನಾವು ಮೊದಲನೇ ದಿನದಿಂದ ಇಲ್ಲಿಯವರೆಗೆ ಮಾಡಿದ ಎಲ್ಲವುಗಳ ಮೇಲೂ, ಹಾಗೆಯೇ ನಾವು ಮುಂದೆ ಮಾಡಬಹುದಾದ ಎಲ್ಲಾ ಸಂಗತಿಗಳ ಮೇಲೂ ಪ್ರಭಾವ ಬೀರುವ ಏಕೈಕ, ಪ್ರಮುಖ ನಂಬಿಕೆಯನ್ನು ಅವು ಪ್ರತಿನಿಧಿಸುತ್ತವೆ. ಜನರು ನಮ್ಮ ಉತ್ಪನ್ನಗಳನ್ನು ಬಳಸುವಾಗ, ಅವರ ಮಾಹಿತಿಯ ಬಗೆಗೆ ನಮ್ಮನ್ನು ನಂಬುತ್ತಾರೆ ಮತ್ತು ಅವರೊಂದಿಗೆ ಸರಿಯಾಗಿ ನಡೆದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಇದರರ್ಥ, ನಾವು ಯಾವ ಡೇಟಾವನ್ನು ಬಳಸುತ್ತೇವೆ, ಅದನ್ನು ಹೇಗೆ ಬಳಸುತ್ತೇವೆ, ಮತ್ತು ಹೇಗೆ ರಕ್ಷಿಸುತ್ತೇವೆ ಎಂಬುದರ ಕುರಿತು ಯಾವಾಗಲೂ ಚಿಂತನಶೀಲರಾಗಿರುವುದಾಗಿದೆ.

 2. 2. ನಾವು ಯಾವ ಡೇಟಾವನ್ನು ಸಂಗ್ರಹಿಸುತ್ತೇವೆ ಮತ್ತು ಏಕೆ ಸಂಗ್ರಹಿಸುತ್ತೇವೆ ಎಂಬುದರ ಕುರಿತು ಸ್ಪಷ್ಟತೆ.

  ಜನರು Google ಉತ್ಪನ್ನಗಳನ್ನು ಹೇಗೆ ಬಳಸಬಹುದು ಎನ್ನುವುದರ ಕುರಿತು ಅವರು ತಿಳುವಳಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸಹಾಯ ಮಾಡಲು, ನಾವು ಯಾವ ಡೇಟಾವನ್ನು ಸಂಗ್ರಹಿಸುತ್ತೇವೆ, ಅದನ್ನು ಹೇಗೆ ಮತ್ತು ಏಕೆ ಬಳಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಸುಲಭಗೊಳಿಸಿದ್ದೇವೆ. ಪಾರದರ್ಶಕವಾಗಿರುವುದು ಅಂದರೆ ಈ ಮಾಹಿತಿಯನ್ನು ಸುಲಭವಾಗಿ ಲಭ್ಯವಾಗುವಂತೆ, ಅರ್ಥವಾಗುವಂತೆ ಮತ್ತು ಕಾರ್ಯಗತಗೊಳಿಸುವಂತೆ ಮಾಡುವುದು ಎಂದರ್ಥ.

 3. 3. ನಮ್ಮ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ, ಎಂದಿಗೂ ಮಾರಾಟ ಮಾಡಕೂಡದು.

  ಹುಡುಕಾಟ ಮತ್ತು ನಕ್ಷೆಗಳಂತಹ Google ಉತ್ಪನ್ನಗಳನ್ನು ಸಾಧ್ಯವಾದಷ್ಟು ಉಪಯುಕ್ತವಾಗುವಂತೆ ಮಾಡಲು, ನಾವು ಡೇಟಾವನ್ನು ಬಳಸುತ್ತೇವೆ. ಹೆಚ್ಚು ಸೂಕ್ತವಾದ ಜಾಹೀರಾತುಗಳನ್ನು ಪೂರೈಸಲು ಸಹ ನಾವು ಡೇಟಾವನ್ನು ಬಳಸುತ್ತೇವೆ. ಈ ಜಾಹೀರಾತುಗಳು ನಮ್ಮ ಸೇವೆಗಳಿಗೆ ಧನ ಸಹಾಯ ಮಾಡಿ, ಸೇವೆಗಳನ್ನು ಎಲ್ಲರಿಗೂ ಉಚಿತವಾಗಿಸುತ್ತವೆಯಾದರೂ, ನಮ್ಮ ಬಳಕೆದಾರರ ವೈಯಕ್ತಿಕ ಮಾಹಿತಿಯು ಮಾತ್ರ ಮಾರಾಟಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸುವುದು ಮುಖ್ಯವಾಗಿದೆ.

 4. 4. ಜನರು ತಮ್ಮ ಗೌಪ್ಯತೆಯನ್ನು ಸುಲಭವಾಗಿ ನಿಯಂತ್ರಿಸುವಂತೆ ಮಾಡುವುದು.

  ಗೌಪ್ಯತೆಯ ವಿಷಯ ಬಂದಾಗ, ಒಂದೇ ಗಾತ್ರವು ಎಲ್ಲರಿಗೂ ಸರಿಹೊಂದುವುದಿಲ್ಲ ಎಂದು ನಮಗೆ ತಿಳಿದಿದೆ. ಪ್ರತಿಯೊಂದು Google ಖಾತೆಯನ್ನು ಆನ್/ಆಫ್ ಡೇಟಾ ನಿಯಂತ್ರಣಗಳ ಮೂಲಕ ರಚಿಸಲಾಗಿರುತ್ತದೆ, ಹೀಗಾಗಿ ನಮ್ಮ ಬಳಕೆದಾರರು ಅವರಿಗೆ ಸೂಕ್ತವಾದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಆರಿಸಿಕೊಳ್ಳಬಹುದು. ಮತ್ತು ತಂತ್ರಜ್ಞಾನವು ವಿಕಸನಗೊಂಡಂತೆಲ್ಲಾ ನಮ್ಮ ಗೌಪ್ಯತೆ ನಿಯಂತ್ರಣಗಳು ಕೂಡ ವಿಕಸನಗೊಳ್ಳುತ್ತವೆ, ಈ ಮೂಲಕ ಗೌಪ್ಯತೆಯು ಯಾವಾಗಲೂ ಬಳಕೆದಾರರಿಗೆ ಸಂಬಂಧಿಸಿದ ವೈಯಕ್ತಿಕ ಆಯ್ಕೆಯಾಗಿದೆ ಎಂದು ಖಚಿತಪಡಿಸುತ್ತದೆ.

 5. 5. ತಮ್ಮ ಡೇಟಾವನ್ನು ಪರಿಶೀಲಿಸಲು, ವರ್ಗಾಯಿಸಲು, ಅಥವಾ ಅಳಿಸಲು ಜನರಿಗೆ ಅಧಿಕಾರ ನೀಡುವುದು.

  ಯಾವುದೇ ಸಮಯವಾಗಿರಲಿ ಮತ್ತು ಏನೇ ಕಾರಣವಿರಲಿ - ಪ್ರತಿಯೊಬ್ಬ ಬಳಕೆದಾರರು ನಮ್ಮೊಂದಿಗೆ ಹಂಚಿಕೊಳ್ಳುವ ಅವರ ವೈಯಕ್ತಿಕ ಮಾಹಿತಿಗೆ ಪ್ರವೇಶವನ್ನು ಹೊಂದಿರಬೇಕು ಎಂದು ನಾವು ನಂಬುತ್ತೇವೆ. ಅದಕ್ಕಾಗಿಯೇ, ಜನರು ತಮ್ಮ ಡೇಟಾವನ್ನು ಪ್ರವೇಶಿಸುವ ಮತ್ತು ಪರಿಶೀಲಿಸುವ, ಡೌನ್‌ಲೋಡ್ ಮಾಡಿಕೊಳ್ಳುವ ಮತ್ತು ತಮಗೆ ಬೇಕೆಂದರೆ, ಅದನ್ನು ಮತ್ತೊಂದು ಸೇವೆಗೆ ವರ್ಗಾಯಿಸುವ ಇಲ್ಲವೇ ಸಂಪೂರ್ಣವಾಗಿ ಅಳಿಸಿಹಾಕುವ ಕಾರ್ಯಗಳನ್ನು ಸುಲಭಗೊಳಿಸುವಲ್ಲಿ ಕಾರ್ಯಮಗ್ನರಾಗಿದ್ದೇವೆ.

 6. 6. ನಮ್ಮ ಉತ್ಪನ್ನಗಳಲ್ಲಿ ಪ್ರಬಲವಾದ ಭದ್ರತಾ ತಂತ್ರಜ್ಞಾನಗಳನ್ನು ನಿರ್ಮಿಸುವುದು.

  ನಮ್ಮ ಬಳಕೆದಾರರ ಗೌಪ್ಯತೆಯನ್ನು ಗೌರವಿಸುವುದು ಎಂದರೆ ಅವರು ನಮ್ಮ ಮೇಲೆ ವಿಶ್ವಾಸವಿಟ್ಟು ಸಲ್ಲಿಸಿದ ಡೇಟಾವನ್ನು ರಕ್ಷಿಸುವುದು ಎಂದರ್ಥ. ನಮ್ಮ ಬಳಕೆದಾರರಿಗೆ Google ನ ಪ್ರತಿಯೊಂದು ಉತ್ಪನ್ನ ಮತ್ತು ಸೇವೆಯನ್ನು ಸುರಕ್ಷಿತವಾಗಿರಿಸಲು, ಜಗತ್ತಿನಲ್ಲಿಯೇ ಅತ್ಯಾಧುನಿಕ ಭದ್ರತಾ ಮೂಲಸೌಕರ್ಯಗಳಲ್ಲಿ ಒಂದನ್ನು ನಾವು ರಚಿಸುತ್ತೇವೆ ಮತ್ತು ಬಳಸುತ್ತೇವೆ. ಇದರರ್ಥ, ವಿಕಸಿಸುತ್ತಿರುವ ಆನ್‌ಲೈನ್ ಬೆದರಿಕೆಗಳು ನಮ್ಮ ಬಳಕೆದಾರರನ್ನು ತಲುಪುವ ಮೊದಲೇ ಅವುಗಳನ್ನು ಪತ್ತೆಹಚ್ಚಿ, ಅವುಗಳ ವಿರುದ್ಧ ರಕ್ಷಿಸಲು ನಮ್ಮ ಅಂತರ್ನಿರ್ಮಿತ ಭದ್ರತಾ ತಂತ್ರಜ್ಞಾನಗಳನ್ನು ನಿರಂತರವಾಗಿ ಬಲಪಡಿಸುವುದು ಎಂದಾಗಿದೆ.

 7. 7. ಎಲ್ಲರಿಗೂ ಆನ್‌ಲೈನ್‌ ​​ಭದ್ರತೆಯನ್ನು ಹೆಚ್ಚಿಸಲು, ಮಾದರಿಯಾಗಿ ಮುನ್ನಡೆಯುತ್ತಾ ಮಾರ್ಗದರ್ಶನ ನೀಡುವುದು.

  ಆನ್‌ಲೈನ್‌ನಲ್ಲಿ ಬಳಕೆದಾರರನ್ನು ಸುರಕ್ಷಿತವಾಗಿರಿಸಿಕೊಳ್ಳುವುದು Google ಗಷ್ಟೇ ಸೀಮಿತವಾಗಿಲ್ಲ – ಅದು ಸಂಪೂರ್ಣ ಇಂಟರ್ನೆಟ್‌ಗೆ ವಿಸ್ತರಿಸುತ್ತದೆ. ನಾವೆಲ್ಲರೂ ಇಂದು ಬಳಸುತ್ತಿರುವ ಬಹುತೇಕ ಭದ್ರತಾ ಮಾನದಂಡಗಳನ್ನು ರಚಿಸಿದ ಮೊಟ್ಟ ಮೊದಲ ಕಂಪನಿ Google ಆಗಿದೆ, ಮತ್ತು ಪ್ರತಿಯೊಬ್ಬರೂ ಬಳಸಬಹುದಾದ ಹೊಸ ಭದ್ರತಾ ತಂತ್ರಜ್ಞಾನಗಳ ಆವಿಷ್ಕಾರವನ್ನು ನಾವು ಮುಂದುವರೆಸುತ್ತೇವೆ. ಜಗತ್ತಿನಾದ್ಯಂತ ಪಾಲುದಾರರು, ಸಂಸ್ಥೆಗಳು, ಮತ್ತು ಸ್ಪರ್ಧಿಗಳೊಂದಿಗೆ ನಾವು ನಮ್ಮ ಭದ್ರತಾ ಕಲಿಕೆಗಳು, ಅನುಭವಗಳು ಮತ್ತು ಪರಿಕರಗಳನ್ನು ಹಂಚಿಕೊಳ್ಳುತ್ತೇವೆ, ಏಕೆಂದರೆ, ಇಂಟರ್ನೆಟ್-ವ್ಯಾಪಕ ಭದ್ರತೆಗೆ ಉದ್ಯಮ-ವ್ಯಾಪಕ ಸಹಭಾಗಿತ್ವದ ಬೇಡಿಕೆಯಿದೆ.

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.