ಡಿಜಿಟಲ್ ಮೂಲ ನಿಯಮಗಳನ್ನು ಹೊಂದಿಸಲು ನಿಮಗೆ ಸಹಾಯ ಮಾಡುವ ಕುರಿತು

ನಿಮ್ಮ ಕಿರಿಯ ಮತ್ತು ಹಿರಿಯ ಮಕ್ಕಳು ಆನ್‌ಲೈನ್‌‌ನಲ್ಲಿ ಹೇಗೆ ಎಕ್ಸ್‌ಪ್ಲೋರ್ ಮಾಡುತ್ತಾರೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಅದರೊಂದಿಗೆ ಅವರ ಖಾತೆಗಳು ಮತ್ತು ಹೊಂದಾಣಿಕೆಯ ಸಾಧನಗಳನ್ನು ನಿರ್ವಹಿಸಲು Family Link ನಿಮಗೆ ಸಹಾಯ ಮಾಡಬಹುದು. ಆ್ಯಪ್‌ಗಳನ್ನು ನಿರ್ವಹಿಸುವ ಮೂಲಕ, ವೀಕ್ಷಣಾ ಅವಧಿಯ ಮೇಲೆ ಕಣ್ಣಿಡುವ ಮೂಲಕ, ನಿಮ್ಮ ಮಗುವಿನ ಸಾಧನಕ್ಕೆ ಮಲಗುವ ಸಮಯವನ್ನು ಹೊಂದಿಸುವ ಮೂಲಕ ಹಾಗೂ ಇನ್ನೂ ಹೆಚ್ಚಿನವುಗಳ ಮೂಲಕ ನಿಮ್ಮ ಕುಟುಂಬಕ್ಕೆ ಸರಿಹೊಂದುವಂತಹ ಬಳಕೆಯ ಮಿತಿಗಳನ್ನು ನೀವು ಹೊಂದಿಸಬಹುದು.

Family Link ಮೂಲಕ ನಿಮ್ಮ ಕುಟುಂಬಕ್ಕೆ ಆನ್‌ಲೈನ್ ​​ಬಳಕೆಯ ಮಿತಿಗಳನ್ನು ಸ್ಥಾಪಿಸಿ

 • ವೀಕ್ಷಣಾ ಅವಧಿಯ ಮೇಲೆ ಒಂದು ಕಣ್ಣಿಡಿ

  ನಿಮ್ಮ ಮಗುವಿಗೆ ಸರಿಯಾದ ವೀಕ್ಷಣಾ ಅವಧಿಯನ್ನು ನೀವು ನಿರ್ಧರಿಸಿ. ಇದು ಅವರು ಪುಸ್ತಕವನ್ನು ಓದಲು, ವೀಡಿಯೊಗಳನ್ನು ವೀಕ್ಷಿಸಲು ಅಥವಾ ಆಟಗಳನ್ನು ಆಡಲು ತಮ್ಮ ಸಾಧನಗಳನ್ನು ಬಳಸುತ್ತಿದ್ದಾರೆಯೇ ಎಂಬುದನ್ನು ಅವಲಂಬಿಸಿರುತ್ತದೆ. ನಿಮ್ಮ ಮಗು ಹೆಚ್ಚಾಗಿ ಯಾವ ಆ್ಯಪ್ ಬಳಸುತ್ತಿದೆ ಎಂಬುದನ್ನು ನೋಡಲು ನೀವು Family Link ನ ಆ್ಯಪ್ ಚಟುವಟಿಕೆಯನ್ನು ಬಳಸಬಹುದು.

 • ದೈನಂದಿನ ಪ್ರವೇಶವನ್ನು ಮಿತಿಗೊಳಿಸಿ

  ದೈನಂದಿನ ಮಿತಿಯನ್ನು ಹೊಂದಿಸಿ - ನಿಮ್ಮ ಮಗುವಿನ Android ಸಾಧನದಲ್ಲಿ ದೈನಂದಿನ ವೀಕ್ಷಣಾ ಅವಧಿಯ ಮಿತಿಯನ್ನು ಹೊಂದಿಸಲು ಮತ್ತು ಮಲಗುವ ಸಮಯವಾಗಿದ್ದಾಗ ಅವರ ಸಾಧನವನ್ನು ಲಾಕ್ ಮಾಡಿ, ನಿದ್ರಾ ಸಮಯವನ್ನು ಹೊಂದಿಸಲು Family Link ನಿಮಗೆ ಅನುಮತಿಸುತ್ತದೆ.

 • ನಿಮ್ಮ ಮಗುವಿನ ಸಾಧನವನ್ನು ದೂರದಿಂದಲೇ ಲಾಕ್ ಮಾಡಿ

  ಆಡುವ, ಓದುವ, ಅಥವಾ ನಿದ್ರಿಸುವ ಸಮಯವಾದಾಗ, ಅವರ ಸಾಧನಗಳನ್ನು ನಿರ್ವಹಿಸಿ ಅಥವಾ ನಿರ್ದಿಷ್ಟ ಆ್ಯಪ್‌ಗಳನ್ನು ಮರೆಮಾಡಿ.

ನಿಮ್ಮ ಮಕ್ಕಳು ಆನ್‌ಲೈನ್‌‌ನಲ್ಲಿ ಏನೆಲ್ಲಾ ಹುಡುಕುತ್ತಾರೆ ಎಂಬುದಕ್ಕೆ ಪ್ರವೇಶವನ್ನು ನಿರ್ವಹಿಸಿ

 • Google ಅಸಿಸ್ಟೆಂಟ್‌ನಲ್ಲಿ ನಿಮ್ಮ ಮಗುವಿನ ಖಾತೆಯ ಸೆಟ್ಟಿಂಗ್‌ಗಳನ್ನು ಬಳಸಿ

  Family Link ಮೂಲಕ ನಿರ್ವಹಿಸಲ್ಪಟ್ಟ ತಮ್ಮ ಸ್ವಂತ ಖಾತೆಯನ್ನು ಬಳಸಿಕೊಂಡು ಅಸಿಸ್ಟೆಂಟ್-ಸಕ್ರಿಯಗೊಳಿಸಿದ ಸಾಧನಗಳಿಗೆ ಮಕ್ಕಳು ಲಾಗ್ ಇನ್ ಮಾಡಬಹುದು. ಅವರು ತಮ್ಮ ಸ್ವಂತದ ವೈಯಕ್ತೀಕರಿಸಿದ ಅಸಿಸ್ಟೆಂಟ್ ಅನುಭವವನ್ನು ಪಡೆಯುತ್ತಾರೆ ಮತ್ತು ಕುಟುಂಬಗಳಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಆಟಗಳು, ಚಟುವಟಿಕೆಗಳು ಮತ್ತು ಕಥೆಗಳಿಗೆ ಪ್ರವೇಶಿಸುತ್ತಾರೆ. ವಹಿವಾಟುಗಳನ್ನು ನಡೆಸದಂತೆ ಮಕ್ಕಳಿಗೆ ನಿರ್ಬಂಧ ಹೇರಲಾಗುತ್ತದೆ ಮತ್ತು ತಮ್ಮ ಮಕ್ಕಳು ಅಸಿಸ್ಟೆಂಟ್‌ನಲ್ಲಿ ಮೂರನೇ ವ್ಯಕ್ತಿಯ ಅನುಭವಗಳಿಗೆ ಪ್ರವೇಶಿಸಬೇಕೇ, ಬೇಡವೇ ಎಂಬುದನ್ನು ಪೋಷಕರು ನಿರ್ಧರಿಸಬಹುದು.

 • Chrome ಮೂಲಕ ವೆಬ್‌ಸೈಟ್‌ಗಳಿಗೆ ನಿಮ್ಮ ಮಗುವಿನ ಪ್ರವೇಶವನ್ನು ನಿರ್ವಹಿಸಿ

  ನಿಮ್ಮ ಮಗುವು ತಮ್ಮ Android ಅಥವಾ ChromeOS ಸಾಧನದಲ್ಲಿ Chrome ಬ್ರೌಸರ್ ಬಳಸುತ್ತಿರುವಾಗ ಅವರು ವೆಬ್‌ಸೈಟ್‌ಗಳಿಗೆ ಪ್ರವೇಶಿಸುವ ಸಾಧ್ಯತೆಗಳನ್ನು ನೀವು ನಿರ್ವಹಿಸಬಹುದು. ನಿಮಗೆ ಸೂಕ್ತವೆನಿಸುವ ವೆಬ್‌ಸೈಟ್‌ಗಳಿಗೆ ಮಾತ್ರವೇ ನಿಮ್ಮ ಮಗುವಿನ ಪ್ರವೇಶವನ್ನು ಸೀಮಿತಗೊಳಿಸಬಹುದು ಮತ್ತು ಅವರು ಭೇಟಿ ನೀಡಬಾರದೆಂದು ನೀವು ಬಯಸುವ ನಿರ್ದಿಷ್ಟ ಸೈಟ್‌ಗಳನ್ನು ನಿರ್ಬಂಧಿಸಬಹುದು.

 • Google ಹುಡುಕಾಟದಲ್ಲಿ ಸುರಕ್ಷಿತ ಹುಡುಕಾಟದ ಫಿಲ್ಟರ್‌ಗಳನ್ನು ಬಳಸಿಕೊಂಡು ವಯಸ್ಕ ಸೈಟ್‌ಗಳನ್ನು ನಿರ್ಬಂಧಿಸಿ

  Family Link ನ ಭಾಗವಾಗಿ, ನೀವು ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಸುರಕ್ಷಿತ ಹುಡುಕಾಟ ಸೆಟ್ಟಿಂಗ್ ಬಳಸಬಹುದು. ಅಶ್ಲೀಲತೆ ಮತ್ತು ಕಣ್ಣಿಗೆ ಕಟ್ಟುವ ಹಿಂಸಾಚಾರವನ್ನು ತಪ್ಪಿಸುವ ನಿಟ್ಟಿನಲ್ಲಿ, Google ಹುಡುಕಾಟದ ಫಲಿತಾಂಶಗಳಿಂದ ಸುಸ್ಪಷ್ಟ ಚಿತ್ರಗಳು, ವೀಡಿಯೊಗಳು ಮತ್ತು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಈ ಸೆಟ್ಟಿಂಗ್ ಅನ್ನು ವಿನ್ಯಾಸಗೊಳಿಸಲಾಗಿದೆ, ಆದರೂ ಇದು 100% ನಿಖರವಾಗಿರುವುದಿಲ್ಲ. Family Link ಮೂಲಕ ನಿರ್ವಹಿಸುವ ಖಾತೆಗಳನ್ನು ಹೊಂದಿರುವ 13 ವರ್ಷಕ್ಕಿಂತ ಕೆಳಗಿನ (ಅಥವಾ ನಿಮ್ಮ ದೇಶದಲ್ಲಿ ಅನ್ವಯವಾಗುವ ವಯಸ್ಸು) ಸೈನ್-ಇನ್ ಮಾಡಿದ ಬಳಕೆದಾರರಿಗೆ ಸುರಕ್ಷಿತ ಹುಡುಕಾಟ ಸೆಟ್ಟಿಂಗ್ ಡೀಫಾಲ್ಟ್ ಆಗಿ ಸಕ್ರಿಯಗೊಂಡಿರುತ್ತದೆ, ಪೋಷಕರು ಅದನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಬಹುದು.

ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಆ್ಯಪ್‌ಗಳನ್ನು ಹುಡುಕಿ

 • ನಿಮ್ಮ ಮಗು ಬಳಸಬಹುದಾದ ಆ್ಯಪ್‌ಗಳನ್ನು ನಿರ್ವಹಿಸಲು Family Link ಬಳಸಿ

  ಎಲ್ಲಾ ಆ್ಯಪ್‌ಗಳು ಎಲ್ಲಾ ಮಕ್ಕಳಿಗೂ ಸೂಕ್ತವಾಗಿರುವುದಿಲ್ಲ. Family Link ಸಹಾಯದಿಂದ, ನಿಮ್ಮ ಮಗುವಿಗೆ ಸೂಕ್ತವಾದ ಆ್ಯಪ್ ಎಂದು ನೀವು ಭಾವಿಸುವ ಉತ್ತಮ ರೇಟಿಂಗ್ ಒಳಗೊಂಡ ಆ್ಯಪ್‌ಗಳನ್ನು ಮಾತ್ರವೇ ಬ್ರೌಸ್ ಮಾಡುವಂತೆ ಅವರಿಗೆ ಅನುಮತಿಸಲು Google Play ಸ್ಟೋರ್‌ನಲ್ಲಿ ಆ್ಯಪ್‌ಗಳನ್ನು ನೀವು ಫಿಲ್ಟರ್ ಮಾಡಬಹುದು. ನಿಮ್ಮ ಮಗು Google Play ಸ್ಟೋರ್‌ನಿಂದ ಡೌನ್‌ಲೋಡ್ ಮಾಡಲು ಬಯಸುವ ಆ್ಯಪ್‌ಗಳನ್ನು ಅನುಮೋದಿಸಲು ಅಥವಾ ನಿರ್ಬಂಧಿಸಲು ನಿಮಗೆ ಅವಕಾಶ ನೀಡುವ ಅಧಿಸೂಚನೆಯನ್ನು ಸಹ ನಿಮ್ಮ ಸಾಧನದಲ್ಲಿ ನೀವು ಪಡೆಯಬಹುದು.

  ನಿಮ್ಮ ಮಗುವಿಗೆ ಯಾವೆಲ್ಲಾ ವಿಷಯಗಳು ಮತ್ತು ಮನರಂಜನೆ ಕಾರ್ಯಕ್ರಮಗಳು ಸೂಕ್ತವಾಗಿರಬಹುದು ಎಂದು ನಿರ್ಧರಿಸುವುದಕ್ಕೆ ನಿಮಗೆ ಸಹಾಯ ಮಾಡಲು, Google Play ನಲ್ಲಿ ಕುಟುಂಬದ ಸ್ಟಾರ್ ಬ್ಯಾಡ್ಜ್ ಅನ್ನು ಹುಡುಕಿ. ಅವುಗಳನ್ನು ಬಹಳ ಎಚ್ಚರಿಕೆಯಿಂದ ಪರಾಮರ್ಶಿಸಲಾಗಿದೆ ಮತ್ತು ಕುಟುಂಬಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂಬುದನ್ನು ಕುಟುಂಬದ ಸ್ಟಾರ್ ಸೂಚಿಸುತ್ತದೆ. ಅದರ ವಿಷಯದ ರೇಟಿಂಗ್‌ಗಳು, ಅನುಮತಿಗಳು ಮತ್ತು ಅದು ಜಾಹೀರಾತುಗಳನ್ನು ಅಥವಾ ಆ್ಯಪ್‌ನಲ್ಲಿನ ಖರೀದಿಗಳನ್ನು ಒಳಗೊಂಡಿದೆಯೇ ಎಂಬುದನ್ನು ಸಹ ನೀವು ಪರಿಶೀಲಿಸಬಹುದು.

  ಕೇವಲ ವೀಕ್ಷಣಾ ಅವಧಿಯ ಪ್ರಮಾಣವನ್ನಷ್ಟೇ ಅಲ್ಲ, ವೀಕ್ಷಣಾ ಅವಧಿಯ ಗುಣಮಟ್ಟವನ್ನು ಸಹ ನಿರ್ವಹಿಸಲು ಪೋಷಕರಿಗೆ ನಾವು ಸಹಾಯ ಮಾಡಲು ಬಯಸುತ್ತೇವೆ. ಅದಕ್ಕಾಗಿಯೇ ನಾವು Family Link ನಲ್ಲಿ ಅಂತರ್ನಿರ್ಮಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಸಂಬಂಧಪಟ್ಟ ಶಿಕ್ಷಕರ ಶಿಫಾರಸುಗಳ ಮೇರೆಗೆ ಉಪಯುಕ್ತ ವಿಷಯವನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಮಕ್ಕಳು ನಿಮಗೆ ಸರಿಯೆನಿಸುವ ಗುಣಮಟ್ಟದ ವಿಷಯಗಳನ್ನು ನೋಡಿ ಆನಂದಿಸಬಹುದು.

ನಿಮ್ಮ ಮಗುವಿಗೆ ಸೂಕ್ತವಾದ ವಿಷಯವನ್ನು ಆರಿಸಿಕೊಳ್ಳಲು ಖಾತೆಯ ಸೆಟ್ಟಿಂಗ್‌ಗಳನ್ನು ಬಳಸುವ ಕುರಿತು

 • ನಿಮ್ಮ ಮಗುವಿನ ಖಾತೆಯನ್ನು ನಿರ್ವಹಿಸುವುದು ಮತ್ತು ಭದ್ರಪಡಿಸುವುದು

  Family Link ನ ಮೂಲಕ, ನಿಮ್ಮ ಮಗುವಿನ ಚಟುವಟಿಕೆ ನಿಯಂತ್ರಣಗಳು - ಒಮ್ಮೆ ನಿಮಗೆ ಲಭ್ಯವಾದಾಗ - ನಿಮ್ಮ ಮಗು ನಮ್ಮ ಸೇವೆಗಳನ್ನು ಬಳಸಿದಾಗ ಅವರ ಯಾವ ಚಟುವಟಿಕೆಯನ್ನು ಉಳಿಸಬೇಕು ಮತ್ತು ಅವರ Google ಖಾತೆಯನ್ನು ಯಾರು ನಿರ್ವಹಿಸುತ್ತಾರೆ ಎಂಬುದನ್ನು ನಿರ್ಧರಿಸಲು ಅವು ಅನುಮತಿಸುತ್ತವೆ.

  ನಿಮ್ಮ ಮಗು ತಮ್ಮ ಪಾಸ್‌ವರ್ಡ್ ಮರೆತಾಗ, ಒಬ್ಬ ಪೋಷಕರಾಗಿ ನೀವು ಅದನ್ನು ಬದಲಾಯಿಸಲು ಅಥವಾ ಮರುಹೊಂದಿಸಲು ಸಹಾಯ ಮಾಡಬಹುದು. ನಿಮ್ಮ ಮಗುವಿನ ವೈಯಕ್ತಿಕ ಮಾಹಿತಿಯನ್ನು ಸಹ ನೀವು ಎಡಿಟ್ ಮಾಡಬಹುದು ಅಥವಾ ಅಗತ್ಯವೆನಿಸಿದರೆ, ಅವರ ಖಾತೆಯನ್ನು ಕೂಡ ಅಳಿಸಿಹಾಕಬಹುದು. ನಿಮ್ಮ ಅನುಮತಿಯಿಲ್ಲದೆ ಅವರು ತಮ್ಮ ಖಾತೆಗೆ ಅಥವಾ ಸಾಧನಕ್ಕೆ ಇನ್ನೊಂದು ಪ್ರೊಫೈಲ್ ಅನ್ನು ಸೇರಿಸಲಾಗುವುದಿಲ್ಲ. ಅಂತಿಮವಾಗಿ, ಅವರ Android ಸಾಧನದ ಸ್ಥಳವನ್ನು ನೋಡಲು ಪರಿಶೀಲಿಸಬಹುದು (ಸಾಧನವು ಆನ್ ಆಗಿದ್ದರೆ, ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೆ ಮತ್ತು ಇತ್ತೀಚೆಗೆ ಸಕ್ರಿಯವಾಗಿದ್ದರೆ).

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.