ಎಲ್ಲರಿಗಾಗಿ ಇಂಟರ್ನೆಟ್
ಅನ್ನು ಸುರಕ್ಷಿತವಾಗಿರಿಸಲು
ಉದ್ಯಮದ ಗುಣಮಟ್ಟವನ್ನು ಹೆಚ್ಚಿಸುವುದು.

ನಮ್ಮ ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಯನ್ನು ಕಾಪಾಡುವುದು ನಾವು ಮಾಡುವ ಎಲ್ಲದರ ಮತ್ತು ನಾವು ನಿರ್ಮಿಸುವ ಪ್ರತಿಯೊಂದು ಪ್ರಾಡಕ್ಟ್ ಮೂಲ ಉದ್ದೇಶವಾಗಿದೆ. ಎಲ್ಲರಿಗಾಗಿ ಉದ್ಯಮದ ಗುಣಮಟ್ಟವನ್ನು ಹೆಚ್ಚಿಸುವ ಸುರಕ್ಷತಾ ತಂತ್ರಜ್ಞಾನಗಳನ್ನು ರಚಿಸುವ ಮತ್ತು ಹಂಚಿಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡು ನಾವು ಉದ್ಯಮವನ್ನು ಮುನ್ನಡೆಸುತ್ತೇವೆ.

ನಮ್ಮ
ಬಳಕೆದಾರರನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು ಸದಾ ಹೊಸತನ್ನು ಹುಟ್ಟು ಹಾಕುತ್ತಿರುತ್ತೇವೆ.

ಹೊಸ ಅಪಾಯಗಳು ಉದ್ಭವಿಸಿದಂತೆ ಮತ್ತು ಬಳಕೆದಾರರ ಅಗತ್ಯತೆಗಳು ವಿಕಸನಗೊಂಡಂತೆ, ನಮ್ಮ ಎಲ್ಲಾ ಪ್ರಾಡಕ್ಟ್ಗಳಾದ್ಯಂತ ಪ್ರತಿಯೊಬ್ಬ ಬಳಕೆದಾರರ ಖಾಸಗಿ ಮಾಹಿತಿಯನ್ನು ಪ್ರತಿ ಅಪಾಯದ ಮಟ್ಟದಲ್ಲಿ ಸ್ವಯಂಚಾಲಿತವಾಗಿ ರಕ್ಷಿಸಲು ನಾವು ನಿರಂತರವಾಗಿ ಆವಿಷ್ಕಾರಗಳನ್ನು ಮಾಡುತ್ತಿರುತ್ತೇವೆ.

ಸುಧಾರಿತ ರಕ್ಷಣಾ ಪ್ರೋಗ್ರಾಂ

ಹೆಚ್ಚು ಅಗತ್ಯವಿರುವವರಿಗಾಗಿ,
Google ನ ಪ್ರಬಲ ಭದ್ರತೆ

ಸುಧಾರಿತ ರಕ್ಷಣಾ ಪ್ರೋಗ್ರಾಂ Google ನ ಪ್ರಬಲವಾದ ಖಾತೆಯ ಸುರಕ್ಷತೆಯ ಕೊಡುಗೆಯಾಗಿದೆ ಮತ್ತು ಇದು ನೀತಿ ನಿರ್ವಾಹಕರು, ಅಭಿಯಾನದ ತಂಡಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ವ್ಯಾಪಾರ ಮುಖಂಡರಂತಹ ಉದ್ದೇಶಿತ ಆನ್‌ಲೈನ್ ದಾಳಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅಪಾಯದಲ್ಲಿರುವವರ ವೈಯಕ್ತಿಕ ಮತ್ತು ಎಂಟರ್ಪ್ರೈಸ್ Google ಖಾತೆಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಉದ್ಯಮದ ಮೊದಲ ಉಚಿತ ಪ್ರೋಗ್ರಾಂ ಆಗಿದೆ. ಈ ಪ್ರೋಗ್ರಾಂ, ವ್ಯಾಪಕ ಶ್ರೇಣಿಯ ಅಪಾಯಗಳ ವಿರುದ್ಧ ಸಮಗ್ರ ಖಾತೆಯ ಸುರಕ್ಷತೆಯನ್ನು ಒದಗಿಸುತ್ತದೆ ಮತ್ತು ಹೊಸ ರಕ್ಷಣೆಗಳನ್ನು ಸೇರಿಸಲು ನಿರಂತರವಾಗಿ ವಿಕಸನಗೊಳ್ಳುತ್ತದೆ.

ಸುಧಾರಿತ ರಕ್ಷಣೆಯನ್ನು ಎಕ್ಸ್‌ಪ್ಲೋರ್ ಮಾಡಿ

ಡೇಟಾ ಕಡಿಮೆಗೊಳಿಸುವಿಕೆ

ಬಳಸಿದ ಮತ್ತು ಉಳಿಸಿದ ವೈಯಕ್ತಿಕ ಮಾಹಿತಿಯನ್ನು ಮಿತಿಗೊಳಿಸುವುದು

ಪ್ರಾಡಕ್ಟ್‌ಗಳು ನಿಮ್ಮ ಮಾಹಿತಿಯನ್ನು ನಿಮಗೆ ಉಪಯುಕ್ತವಾಗುವವರೆಗೆ ಮತ್ತು ಸಹಾಯಕವಾಗುವವರೆಗೆ ಮಾತ್ರ ಇರಿಸಿಕೊಳ್ಳಬೇಕು ಎಂಬುದನ್ನು ನಾವು ನಂಬುತ್ತೇವೆ – ಉದಾಹರಣೆಗೆ, Maps ನಲ್ಲಿ ನಿಮ್ಮ ಮೆಚ್ಚಿನ ಸ್ಥಳಗಳನ್ನು ಹುಡುಕಲು ಅದಕ್ಕೆ ಸಾಧ್ಯವಾಗಿರಬಹುದು ಅಥವಾ YouTube ನಲ್ಲಿ ಏನನ್ನು ವೀಕ್ಷಿಸಬೇಕು ಎಂಬುದರ ಕುರಿತು ಶಿಫಾರಸುಗಳನ್ನು ಪಡೆಯುವುದಾಗಿರಬಹುದು.

ನೀವು ಮೊದಲ ಬಾರಿಗೆ ಸ್ಥಳ ಇತಿಹಾಸವನ್ನು ಆನ್ ಮಾಡಿದಾಗ (ಅದು ಡೀಫಾಲ್ಟ್ ಆಗಿ ಆಫ್ ಆಗಿರುತ್ತದೆ) ನಿಮ್ಮ ಸ್ವಯಂ-ಅಳಿಸುವ ಆಯ್ಕೆಯನ್ನು ಡೀಫಾಲ್ಟ್ ಆಗಿ 18 ತಿಂಗಳುಗಳಿಗೆ ಹೊಂದಿಸಲಾಗುತ್ತದೆ. ವೆಬ್ ಮತ್ತು ಆ್ಯಪ್ ಚಟುವಟಿಕೆ ಸ್ವಯಂ-ಅಳಿಸುವಿಕೆಯು ಸಹ ಹೊಸ ಖಾತೆಗಳಿಗಾಗಿ 18 ತಿಂಗಳುಗಳಿಗೆ ಡೀಫಾಲ್ಟ್ ಆಗಿರುತ್ತದೆ. ಇದರರ್ಥ ನಿಮ್ಮ ಚಟುವಟಿಕೆಯ ಡೇಟಾವನ್ನು ನೀವು ಅಳಿಸಲು ಆಯ್ಕೆಮಾಡುವವರೆಗೆ 18 ತಿಂಗಳುಗಳ ನಂತರ ಸ್ವಯಂಚಾಲಿತವಾಗಿ ಮತ್ತು ನಿರಂತರವಾಗಿ ಅಳಿಸಲಾಗುತ್ತದೆ. ನೀವು ಯಾವಾಗ ಬೇಕಾದರೂ ಈ ಸೆಟ್ಟಿಂಗ್‌ಗಳನ್ನು ಆಫ್ ಮಾಡಬಹುದು ಅಥವಾ ಯಾವುದೇ ಸಮಯದಲ್ಲಿ ನಿಮ್ಮ ಸ್ವಯಂ-ಅಳಿಸುವ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು.

ಯಾರೋ "ಹಾಯ್" ಎಂದು ಸಂದೇಶ ಕಳುಹಿಸುತ್ತಿರುವುದು ಮತ್ತು ಅದನ್ನು Google "ಹಲೋ" ಎಂದು ಸ್ವಯಂ-ಊಹಿಸುವಿಕೆಯನ್ನು ಒಳಗೊಂಡಿರುವ ಫೋನ್

ಫೆಡರೇಟೆಡ್ ಲರ್ನಿಂಗ್

ಕಡಿಮೆ ಡೇಟಾವನ್ನು ಬಳಸಿ ಉಪಯುಕ್ತ ಪ್ರಾಡಕ್ಟ್‌ಗಳನ್ನು ನಿರ್ಮಿಸುವುದು

ಫೆಡರೇಟೆಡ್ ಲರ್ನಿಂಗ್ ಎನ್ನುವುದು Google ನಲ್ಲಿ ಮುಂಚೂಣಿ ಇರುವ ಡೇಟಾ ಕಡಿಮೆಗೊಳಿಸುವಿಕೆ ತಂತ್ರಜ್ಞಾನವಾಗಿದ್ದು, ಅದು ಮಷಿನ್ ಲರ್ನಿಂಗ್ (ML) ಬುದ್ಧಿವಂತಿಕೆಯನ್ನು ನಿಮ್ಮ ಸಾಧನಕ್ಕೆ ತರುತ್ತದೆ. ಈ ಹೊಸ ವಿಧಾನವು ML ಮಾಡೆಲ್‌ಗಳಿಗೆ ತರಬೇತಿ ನೀಡಲು ವಿವಿಧ ಸಾಧನಗಳಿಂದ ಅನಾಮಧೇಯಗೊಳಿಸಿದ ಮಾಹಿತಿಯನ್ನು ಸಂಯೋಜಿಸುತ್ತದೆ. ಫೆಡರೇಟೆಡ್ ಲರ್ನಿಂಗ್, ನಿಮ್ಮ ಸಾಧನದಲ್ಲಿ ಸಾಧ್ಯವಾದಷ್ಟು ವೈಯಕ್ತಿಕ ಮಾಹಿತಿಯನ್ನು ಇಟ್ಟುಕೊಳ್ಳುವ ಮೂಲಕ ನಿಮ್ಮ ಗೌಪ್ಯತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.

ಅನಾಮಧೇಯಗೊಳಿಸುವಿಕೆ

ಅನಾಮಧೇಯಗೊಳಿಸುವಿಕೆಯ ಮೂಲಕ ಗೌಪ್ಯತೆ ರಕ್ಷಣೆಗಳನ್ನು ಬಲಪಡಿಸುವುದು

ನಮ್ಮ ಸೇವೆಗಳು ನಿಮಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವಾಗ ನಿಮ್ಮ ಡೇಟಾವನ್ನು ರಕ್ಷಿಸಲು ನಾವು ಪ್ರಮುಖ ಅನಾಮಧೇಯಗೊಳಿಸುವಿಕೆ ತಂತ್ರಗಳನ್ನು ಬಳಸುತ್ತೇವೆ. ನಾವು ಲಕ್ಷಾಂತರ ಬಳಕೆದಾರರಿಂದ ಡೇಟಾವನ್ನು ಒಟ್ಟುಗೂಡಿಸುತ್ತೇವೆ ಮತ್ತು ಅದನ್ನು ಅನಾಮಧೇಯಗೊಳಿಸುತ್ತೇವೆ, ಹೀಗಾಗಿ ನೀವು ಅಲ್ಲಿಗೆ ಹೋಗುವ ಮೊದಲು ಸ್ಥಳವು ಎಷ್ಟರ ಮಟ್ಟಿಗೆ ಭರ್ತಿಯಾಗಿದೆ ಎಂಬುದನ್ನು ನೀವು ನೋಡಬಹುದು.

ವರ್ಧಿತ ಸುರಕ್ಷಿತ ಬ್ರೌಸಿಂಗ್

ನೀವು ಬ್ರೌಸ್ ಮಾಡುವಾಗ ನಿಮ್ಮನ್ನು ರಕ್ಷಿಸುತ್ತದೆ

ವರ್ಧಿತ ಸುರಕ್ಷಿತ ಬ್ರೌಸಿಂಗ್ ನಮ್ಮ ಅಸ್ತಿತ್ವದಲ್ಲಿರುವ ಸುರಕ್ಷಿತ ಬ್ರೌಸಿಂಗ್ ರಕ್ಷಣೆಗಳನ್ನು ಮೀರಿ ಹೆಚ್ಚು ಪೂರ್ವಭಾವಿಯಾಗಿದೆ ಮತ್ತು ನಿಮ್ಮ ವೈಯಕ್ತಿಕ ಅಗತ್ಯಗಳಿಗೆ ಸೂಕ್ತವಾಗಿದೆ. Chrome ನಲ್ಲಿ ವರ್ಧಿತ ಸುರಕ್ಷಿತ ಬ್ರೌಸಿಂಗ್ ಅನ್ನು ಸಕ್ರಿಯಗೊಳಿಸಲು ಆಯ್ಕೆಮಾಡುವವರಿಗೆ, ಫಿಶಿಂಗ್, ಮಾಲ್‌ವೇರ್ ಮತ್ತು ಇತರ ವೆಬ್-ಆಧಾರಿತ ಅಪಾಯಗಳಿಂದ ಹೆಚ್ಚು ಪೂರ್ವಭಾವಿಯಾಗಿ ಮತ್ತು ಸೂಕ್ತವಾದ ರಕ್ಷಣೆಗಳನ್ನು ಒದಗಿಸಲು ವೆಬ್‌ನಲ್ಲಿ ನೀವು ಎದುರಿಸುತ್ತಿರುವ ಅಪಾಯಗಳು ಮತ್ತು ನಿಮ್ಮ Google ಖಾತೆಯ ಮೇಲಿನ ದಾಳಿಗಳ ಸಮಗ್ರ ನೋಟವನ್ನು Google ಸ್ವಯಂಚಾಲಿತವಾಗಿ ಮೌಲ್ಯಮಾಪನ ಮಾಡುತ್ತದೆ. ವರ್ಧಿತ ಸುರಕ್ಷಿತ ಬ್ರೌಸಿಂಗ್ ಕುರಿತು ಇನ್ನಷ್ಟು ತಿಳಿಯಿರಿ.

ಸಹಯೋಗದ ಮೂಲಕ ಪ್ರತಿಯೊಬ್ಬರನ್ನು
ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸುವುದು.

ಎಲ್ಲರಿಗಾಗಿ ವೆಬ್ ಅನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ. ಇದನ್ನು ಮಾಡುವುದಕ್ಕೆ ಸಹಾಯ ಮಾಡಲು, ನಮ್ಮ ಅನೇಕ ತಂತ್ರಜ್ಞಾನಗಳನ್ನು ನಾವು ಓಪನ್ ಸೋರ್ಸ್ ಮಾಡಿದ್ದೇವೆ ಮತ್ತು ಡೆವಲಪರ್‌ಗಳು ಹಾಗೂ ಸಂಸ್ಥೆಗಳು ನಮ್ಮ ಮಾಹಿತಿಯ ಮೂಲಗಳಿಗೆ ಪ್ರವೇಶಿಸುವಂತೆ ಮಾಡುತ್ತೇವೆ.

ಕನೆಕ್ಷನ್ ಸುರಕ್ಷಿತವಾಗಿಲ್ಲ ಎಂಬ ಅಧಿಸೂಚನೆಯನ್ನು ಒಳಗೊಂಡಿರುವ ಫೋನ್

HTTPS ಎನ್‌ಕ್ರಿಪ್ಶನ್

ಎನ್‌ಕ್ರಿಪ್ಶನ್ ಮೂಲಕ ವೆಬ್‌ನಾದ್ಯಂತದ ಸೈಟ್‌ಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವುದು

ನಮ್ಮ ಸೇವೆಗಳನ್ನು HTTPS ಎನ್‌ಕ್ರಿಪ್ಶನ್ ಬೆಂಬಲಿಸುವುದರಿಂದ, ನೀವು ಸುರಕ್ಷಿತವಾಗಿ ಸೈಟ್‌ಗಳಿಗೆ ಭೇಟಿ ನೀಡಬಹುದು ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಗಳಂತಹ ನಿಮ್ಮ ಖಾಸಗಿ ಮಾಹಿತಿಯನ್ನು ನಮೂದಿಸಬಹುದು, ಯಾರೊಬ್ಬರಿಗೂ ನಿಮ್ಮ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಸೈಟ್‌ಗಳು ಮತ್ತು ಸೇವೆಗಳು ಡೀಫಾಲ್ಟ್ ಆಗಿ ಆಧುನಿಕ HTTPS ಅನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಹೂಡಿಕೆಯನ್ನು ಮುಂದುವರಿಸುತ್ತೇವೆ ಮತ್ತು ಎಲ್ಲಾ ಡೆವಲಪರ್‌ಗಳಿಗೆ ಪರಿಕರಗಳು ಮತ್ತು ಮಾಹಿತಿಯ ಮೂಲಗಳನ್ನು ಒದಗಿಸುವ ಮೂಲಕ ಉಳಿದ ವೆಬ್‌ಗಳು HTTPS ‌ಗೆ ವರ್ಗಾಯಿಸಲು ಸಹಾಯ ಮಾಡುತ್ತೇವೆ.

ಮೋಸ ಮಾಡುವ ವೆಬ್‌ಸೈಟ್ ಕುರಿತು Google Chrome ನಿಂದ ಎಚ್ಚರಿಕೆಯ ಅಧಿಸೂಚನೆಯನ್ನು ಒಳಗೊಂಡಿರುವ ಫೋನ್

ಸುರಕ್ಷಿತ ಬ್ರೌಸಿಂಗ್

ವೆಬ್‌ನಾದ್ಯಂತ ಇರುವ ಅಪಾಯಕಾರಿ ಸೈಟ್‌ಗಳು, ಆ್ಯಪ್‌ಗಳು ಮತ್ತು ಜಾಹೀರಾತುಗಳಿಂದ ನಿಮ್ಮನ್ನು ರಕ್ಷಿಸುತ್ತದೆ

ವೆಬ್ ಬಳಕೆದಾರರು ಅಪಾಯಕಾರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಪ್ರಯತ್ನಿಸಿದಾಗ, ಅವರಿಗೆ ಎಚ್ಚರಿಕೆಯನ್ನು ನೀಡುವ ಮೂಲಕ ಮಾಲ್‌ವೇರ್ ಮತ್ತು ಫಿಶಿಂಗ್ ಪ್ರಯತ್ನಗಳಿಂದ ಅವರನ್ನು ರಕ್ಷಿಸಲು ನಾವು ನಮ್ಮ ಸುರಕ್ಷಿತ ಬ್ರೌಸಿಂಗ್ ತಂತ್ರಜ್ಞಾನವನ್ನು ನಿರ್ಮಿಸಿದ್ದೇವೆ. ಸುರಕ್ಷಿತ ಬ್ರೌಸಿಂಗ್ ಕೇವಲ Chrome ಬಳಕೆದಾರರನ್ನಷ್ಟೇ ಅಲ್ಲ, ಇತರರನ್ನೂ ಸಂರಕ್ಷಿಸುತ್ತದೆ – ಪ್ರತಿಯೊಬ್ಬರಿಗೂ ಇಂಟರ್ನೆಟ್ ಬಳಕೆಯನ್ನು ಸುರಕ್ಷಿತವಾಗಿಸಲು, ನಾವು ಈ ತಂತ್ರಜ್ಞಾನವನ್ನು Apple ನ Safari ಮತ್ತು Mozilla ದ Firefox ಸೇರಿದಂತೆ, ಇತರ ಕಂಪನಿಗಳು ತಮ್ಮ ಬ್ರೌಸರ್‌ಗಳಲ್ಲಿ ಉಚಿತವಾಗಿ ಬಳಸುವಂತೆ ಮಾಡಿದ್ದೇವೆ. ಇಂದು, 4 ಬಿಲಿಯನ್‌ಗಿಂತ ಹೆಚ್ಚಿನ ಸಾಧನಗಳನ್ನು ಸುರಕ್ಷಿತ ಬ್ರೌಸಿಂಗ್‌ನ ಮೂಲಕ ರಕ್ಷಿಸಲಾಗಿದೆ. ವೆಬ್‌ಸೈಟ್ ಮಾಲೀಕರ ಸೈಟ್‌ಗಳಲ್ಲಿ ಸುರಕ್ಷತೆಯ ದೋಷಗಳಿದ್ದರೆ, ಅವರನ್ನು ಸಹ ನಾವು ಎಚ್ಚರಿಸುತ್ತೇವೆ ಹಾಗೂ ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಲು ಉಚಿತ ಪರಿಕರಗಳನ್ನು ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡುತ್ತೇವೆ.

Covid-19 ಅಂಕಿಅಂಶಗಳ ವಿವಿಧ ಪ್ರಾತಿನಿಧ್ಯಗಳನ್ನು ತೋರಿಸುವ ಫೋನ್

Google ನ COVID-19 ಸಮುದಾಯ ಸಂಚಾರ ವರದಿಗಳು ಬಳಕೆದಾರರ ಡೇಟಾವನ್ನು ಖಾಸಗಿಯಾಗಿ, ಸುರಕ್ಷಿತವಾಗಿ ಮತ್ತು ಭದ್ರವಾಗಿರಿಸಲು, ಅನನ್ಯ ಗೌಪ್ಯತೆ ಸೇರಿದಂತೆ ವಿಶ್ವ ದರ್ಜೆಯ ಅನಾಮಧೇಯಗೊಳಿಸುವಿಕೆ ತಂತ್ರಜ್ಞಾನವನ್ನು ಬಳಸುತ್ತವೆ.

ಓಪನ್ ಸೋರ್ಸ್ ಗೌಪ್ಯತೆ ತಂತ್ರಜ್ಞಾನಗಳು

ನಮ್ಮ ಗೌಪ್ಯತೆ ರಕ್ಷಣೆಗಳು ಮತ್ತು ಆವಿಷ್ಕಾರಗಳನ್ನು ಹಂಚಿಕೊಳ್ಳಲಾಗುತ್ತಿದೆ

ನಾವು ನೀಡುವ ಗೌಪ್ಯತೆ ರಕ್ಷಣೆಗಳನ್ನು ನಿರಂತರವಾಗಿ ಸುಧಾರಿಸಲು ಮತ್ತು ಈ ಸುಧಾರಣೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಅದಕ್ಕಾಗಿಯೇ, ಅನನ್ಯ ಗೌಪ್ಯತೆ, ಫೆಡರೇಟೆಡ್ ಲರ್ನಿಂಗ್ ಮತ್ತು ಖಾಸಗಿ ಸೇರ್ಪಡೆ ಮತ್ತು ಕಂಪ್ಯೂಟ್‌ನಂತಹ ನಮ್ಮ ಸುಧಾರಿತ ಅನಾಮಧೇಯಗೊಳಿಸುವಿಕೆ ಮತ್ತು ಡೇಟಾ ಕಡಿಮೆಗೊಳಿಸುವಿಕೆ ತಂತ್ರಜ್ಞಾನಗಳನ್ನು ನಾವು ಓಪನ್ ಸೋರ್ಸ್ ಮಾಡುತ್ತೇವೆ. ಈ ಓಪನ್ ಸೋರ್ಸ್ ಪರಿಕರಗಳು ವೈಯಕ್ತಿಕ ಗೌಪ್ಯತೆಯನ್ನು ರಕ್ಷಿಸುವುದರ ಜೊತೆಗೆ ಎಲ್ಲರಿಗೂ ಪ್ರಯೋಜನವಾಗುವಂತಹ ಒಳನೋಟಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ ಎಂದು ನಾವು ಆಶಿಸುತ್ತೇವೆ.

ಕ್ರಾಸ್-ಅಕೌಂಟ್ ಪ್ರೊಟೆಕ್ಷನ್
ನಿಮ್ಮ Google ಖಾತೆಯನ್ನು ಮೀರಿ ಸುರಕ್ಷತೆಯ ರಕ್ಷಣೆಗಳನ್ನು ವಿಸ್ತರಿಸುವುದು

ಕ್ರಾಸ್-ಅಕೌಂಟ್ ಪ್ರೊಟೆಕ್ಷನ್ ನಿಮ್ಮ Google ಖಾತೆಯಲ್ಲಿ ನಾವು ಹೊಂದಿರುವ ಸುರಕ್ಷತಾ ರಕ್ಷಣೆಗಳನ್ನು Google ಸೈನ್-ಇನ್ ಮೂಲಕ ನೀವು ಸೈನ್ ಇನ್ ಮಾಡುವ ಆ್ಯಪ್‌ಗಳು ಮತ್ತು ಸೈಟ್‌ಗಳಿಗೆ ವಿಸ್ತರಿಸುತ್ತದೆ. ಆ್ಯಪ್‌ಗಳು ಮತ್ತು ಸೈಟ್‌ಗಳು ಕ್ರಾಸ್-ಅಕೌಂಟ್ ಪ್ರೊಟೆಕ್ಷನ್ ಅನ್ನು ಕಾರ್ಯಗತಗೊಳಿಸಿದಾಗ, ಭದ್ರತೆಯ ಈವೆಂಟ್‌ಗಳ ಬಗ್ಗೆ ಮಾಹಿತಿಯನ್ನು ನಾವು ಕಳುಹಿಸಲು ಸಾಧ್ಯವಾಗುತ್ತದೆ – ಉದಾಹರಣೆಗೆ, ಖಾತೆ ಹೈಜಾಕ್ ಮಾಡುವಿಕೆ – ಅವರು ನಿಮ್ಮನ್ನು ಸಹ ರಕ್ಷಿಸಬಹುದು. ಈ ಪ್ರಮುಖ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು, ಎಲ್ಲಾ ಆ್ಯಪ್‌ಗಳು ಸುಲಭವಾಗಿ ಕಾರ್ಯಗತಗೊಳಿಸುವಂತೆ ಮಾಡಲು ನಾವು ಇತರ ಪ್ರಮುಖ ತಂತ್ರಜ್ಞಾನ ಕಂಪನಿಗಳು ಮತ್ತು ಮಾನದಂಡಗಳ ಸಮುದಾಯದ ಜೊತೆಗೆ ಕೆಲಸ ಮಾಡುತ್ತಿದ್ದೇವೆ.

ದೌರ್ಬಲ್ಯ ಪುರಸ್ಕಾರಗಳು
ಭದ್ರತೆಯ ದೌರ್ಬಲ್ಯಗಳನ್ನು ಬಹಿರಂಗಪಡಿಸಲು ಉದ್ಯಮದ ಪಾಲುದಾರರನ್ನು ಪ್ರೋತ್ಸಾಹಿಸುವುದು

Google ನಲ್ಲಿ, ನಮ್ಮ ಸೇವೆಗಳಲ್ಲಿನ ದೌರ್ಬಲ್ಯಗಳನ್ನು ಕಂಡುಹಿಡಿಯಲು ಸ್ವತಂತ್ರ ಸಂಶೋಧಕರಿಗೆ ಪಾವತಿಸುವ, ದೌರ್ಬಲ್ಯ ಪುರಸ್ಕಾರ ಪ್ರೋಗ್ರಾಂಗಳನ್ನು ನಾವು ಪ್ರಾರಂಭಿಸಿದ್ದೇವೆ. ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ಎಲ್ಲಾ ಅತ್ಯಾಧುನಿಕ ಬಾಹ್ಯ ಕೊಡುಗೆಗಳಿಗೆ ಪುರಸ್ಕಾರ ನೀಡಲು, ನಾವು ಪ್ರತಿವರ್ಷ ಸಂಶೋಧನಾ ಅನುದಾನಗಳು ಮತ್ತು ಬಗ್ ಬೌಂಟಿಗಳಲ್ಲಿ ಲಕ್ಷಾಂತರ ಡಾಲರ್‌ಗಳ ಪುರಸ್ಕಾರವನ್ನು ನೀಡುತ್ತೇವೆ. ಪ್ರಸ್ತುತ Chrome ಮತ್ತು Android ಸೇರಿದಂತೆ, ನಮ್ಮ ಹಲವಾರು ಉತ್ಪನ್ನಗಳಿಗೆ ದೌರ್ಬಲ್ಯ ಪುರಸ್ಕಾರಗಳನ್ನು ನಾವು ನೀಡುತ್ತೇವೆ.

ಸ್ವತಂತ್ರ ಸಂಶೋಧಕರನ್ನು ತೊಡಗಿಸಿಕೊಳ್ಳುವುದರ ಜೊತೆಗೆ, ನಾವು ಪ್ರಾಜೆಕ್ಟ್ ಝೀರೋ ಎಂಬ ಹೆಸರಿನ ಆಂತರಿಕ ಇಂಜಿನಿಯರ್‌ಗಳ ತಂಡವೊಂದನ್ನು ಕೂಡಾ ಹೊಂದಿದ್ದೇವೆ, ಇದು ಕೂಡ ಇಂಟರ್ನೆಟ್‌ನಾದ್ಯಂತ ಬಳಸಲಾಗುವ ಸಾಫ್ಟ್‌ವೇರ್‌ನಲ್ಲಿನ ಭದ್ರತೆಯ ನ್ಯೂನತೆಗಳನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಅವುಗಳನ್ನು ಪರಿಹರಿಸುತ್ತದೆ.

ದೃಢೀಕರಣ ಮಾನದಂಡಗಳು
ನಿಮ್ಮನ್ನು ಸುರಕ್ಷಿತವಾಗಿರಿಸಲು ದೃಢೀಕರಣ ಮಾನದಂಡಗಳನ್ನು ಹೆಚ್ಚಿಸುವುದು

ವೆಬ್‌ನಲ್ಲಿ ಸಾಧ್ಯವಾದಷ್ಟು ಪ್ರಬಲವಾದ ಸೈನ್-ಇನ್ ಮತ್ತು ದೃಢೀಕರಣ ಮಾನದಂಡಗಳನ್ನು ಸಹ-ರಚಿಸಲು ಅಥವಾ ಅಳವಡಿಸಿಕೊಳ್ಳಲು ನಾವು ಯಾವಾಗಲೂ ಮುಂಚೂಣಿಯಲ್ಲಿದ್ದೇವೆ. ಕೇಂದ್ರೀಕೃತವಾದ ವೆಬ್ ಮಾನದಂಡಗಳನ್ನು ಅಭಿವೃದ್ಧಿಪಡಿಸುವ ಮೂಲಕ, ನಾವು ಉದ್ಯಮದಾದ್ಯಂತ ಸಹಯೋಗ ನೀಡುತ್ತೇವೆ ಮತ್ತು ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತೇವೆ. ಲಾಭರಹಿತ ಸಂಸ್ಥೆ FIDO Alliance ಜೊತೆಗಿನ ಒಂದು ಪಾಲುದಾರಿಕೆಯು, ಬಳಕೆದಾರರು, ಕಂಪನಿಗಳು ಮತ್ತು ಅದರಲ್ಲಿನ ಉದ್ಯೋಗಿಗಳು ಉದ್ಯಮದ ಹೊಸ ಮಾನದಂಡಗಳನ್ನು ಬಳಸಲು, ಅವುಗಳನ್ನು ಹೊಂದಿಸಲು ಮತ್ತು ನಿಯೋಜಿಸಲು ಕೆಲಸ ಮಾಡುತ್ತದೆ ಹಾಗೂ ಎಲ್ಲರಿಗಾಗಿ ಸುರಕ್ಷಿತ ಖಾತೆ ಪ್ರವೇಶವನ್ನು ಖಾತ್ರಿಪಡಿಸುತ್ತದೆ.

ಓಪನ್ ಸೋರ್ಸ್ ಭದ್ರತೆ
ಭದ್ರತೆಯ ಪರಿಕರಗಳನ್ನು ಡೆವಲಪರ್‌ಗಳಿಗೆ ಲಭ್ಯವಾಗುವಂತೆ ಮಾಡುವುದರಿಂದ ಅವುಗಳು ಭದ್ರತೆಯ ಅಪಾಯಗಳನ್ನು ತಡೆಯಲು ಸಹಾಯ ಮಾಡುತ್ತವೆ

ನಮ್ಮ ಭದ್ರತಾ ತಂತ್ರಜ್ಞಾನವು ಇತರರಿಗೆ ಭದ್ರತೆಯನ್ನು ಒದಗಿಸುತ್ತದೆ ಎಂದು ನಮಗೆ ಅನಿಸಿದಾಗಲೆಲ್ಲಾ ನಾವು ಅದನ್ನು ಹಂಚಿಕೊಳ್ಳುತ್ತೇವೆ. ಉದಾಹರಣೆಗೆ, ನಮ್ಮ Google Cloud ವೆಬ್ ಭದ್ರತಾ ಸ್ಕ್ಯಾನರ್ ಅನ್ನು ಡೆವಲಪರ್‌ಗಳಿಗೆ ಉಚಿತವಾಗಿ ಲಭ್ಯವಾಗುವಂತೆ ನಾವು ಮಾಡುತ್ತೇವೆ, ಇದರಿಂದಾಗಿ ಅವರು ಭದ್ರತೆಯ ದೋಷಗಳಿಗೆ ಸಂಬಂಧಿಸಿದ ಅವರ ವೆಬ್ ಅಪ್ಲಿಕೇಶನ್‌ಗಳನ್ನು ಸ್ಕ್ಯಾನ್ ಮಾಡಬಹುದು ಮತ್ತು ವಿಶ್ಲೇಷಿಸಬಹುದು. ಇತರರು ಬಳಸಲು, ಓಪನ್ ಸೋರ್ಸ್ ಪ್ರಾಜೆಕ್ಟ್‌ಗಳಾಗಿ ನಾವು ಆಂತರಿಕವಾಗಿ ಅಭಿವೃದ್ಧಿಪಡಿಸಿದ ಬಹು ಭದ್ರತಾ ಪರಿಕರಗಳನ್ನು ಕೊಡುಗೆ ನೀಡಿದ್ದೇವೆ.

Google ಟ್ರಸ್ಟ್ ಮತ್ತು ಸುರಕ್ಷತಾ ತಜ್ಞರು, ಗೌಪ್ಯತೆ ಮತ್ತು ಸುರಕ್ಷತಾ ಸಲಹೆಗಳನ್ನು ವಾಷಿಂಗ್ಟನ್, DC ಯ ಫೆಡರಲ್ ಟ್ರಿಯಾಂಗಲ್‌ನಲ್ಲಿ ಹಂಚಿಕೊಳ್ಳುತ್ತಾರೆ.

ಆನ್‌ಲೈನ್ ಭದ್ರತೆಯ ತರಬೇತಿ
ಎಲ್ಲರಿಗೂ ಉತ್ತಮ ಸುರಕ್ಷತೆಯನ್ನು ಒದಗಿಸಲು, ಔಟ್‌ರೀಚ್ ಮತ್ತು ಆನ್‌ಲೈನ್ ಭದ್ರತೆಯ ತರಬೇತಿಯನ್ನು ನೀಡುವುದು

ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರುವುದು ಹೇಗೆ ಎಂದು ತಿಳಿಯಲು ವಿಶ್ವದಾದ್ಯಂತದ ಜನರಿಗೆ ಸಹಾಯ ಮಾಡಲು ನಾವು ಶೈಕ್ಷಣಿಕ ಸಾಮಗ್ರಿಗಳು, ತರಬೇತಿ ಮತ್ತು ಸಾಧನಗಳನ್ನು ಒದಗಿಸುತ್ತೇವೆ. ನಮ್ಮ ಔಟ್‌ರೀಚ್ ತಂಡವು ಆನ್‌ಲೈನ್ ಭದ್ರತೆಯ ಮಾಹಿತಿಯ ಮೂಲಗಳು ಮತ್ತು ತರಬೇತಿಯ ಮೂಲಕ – ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಹಿರಿಯರು ಮತ್ತು ವಿಕಲಾಂಗ ವ್ಯಕ್ತಿಗಳು ಸೇರಿದಂತೆ – ವಾರ್ಷಿಕವಾಗಿ 100 ದಶಲಕ್ಷಕ್ಕೂ ಹೆಚ್ಚು ಜನರನ್ನು ತಲುಪುತ್ತದೆ.

ಪ್ರಾಜೆಕ್ಟ್ ಶೀಲ್ಡ್
ಸುದ್ದಿ ವೆಬ್‌ಸೈಟ್‌ಗಳನ್ನು ಮುಚ್ಚದಂತೆ ರಕ್ಷಿಸುವುದು

ಪ್ರಾಜೆಕ್ಟ್ ಶೀಲ್ಡ್ ಎನ್ನುವುದು ನಮ್ಮ ಭದ್ರತಾ ತಂತ್ರಜ್ಞಾನವನ್ನು ಬಳಸುವ ಒಂದು ಸೇವೆಯಾಗಿದ್ದು, ಅದು ಸುದ್ದಿ, ಮಾನವ ಹಕ್ಕುಗಳ ಸಂಸ್ಥೆಗಳು, ಚುನಾವಣಾ ತಾಣಗಳು, ರಾಜಕೀಯ ಸಂಸ್ಥೆಗಳು ಮತ್ತು ಪ್ರಚಾರಗಳು ಮತ್ತು ಅಭ್ಯರ್ಥಿಗಳನ್ನು ವಿತರಣೆಯ ನಿರಾಕರಣೆ ಸೇವೆಯ (DDoS) ದಾಳಿಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಈ ದಾಳಿಗಳು ವೆಬ್‌ಸೈಟ್‌ಗಳನ್ನು ತೆಗೆದುಹಾಕುವ ಪ್ರಯತ್ನಗಳಾಗಿರುತ್ತವೆ ಮತ್ತು ಹೆಚ್ಚಿನ ಪ್ರಮಾಣದ ನಕಲಿ ಟ್ರಾಫಿಕ್‌ನ ಮೂಲಕ ಬಳಕೆದಾರರು ಪ್ರಮುಖ ಮಾಹಿತಿಯನ್ನು ಪ್ರವೇಶಿಸದಂತೆ ತಡೆಗಟ್ಟುತ್ತವೆ. ವೆಬ್‌ಸೈಟ್‌ನ ಗಾತ್ರ ಅಥವಾ ದಾಳಿಯ ಪ್ರಮಾಣ ಏನೇ ಇರಲಿ, ಪ್ರಾಜೆಕ್ಟ್ ಶೀಲ್ಡ್ ಯಾವಾಗಲೂ ಉಚಿತವಾಗಿರುತ್ತದೆ.

ಡೇಟಾ ಪೋರ್ಟೆಬಿಲಿಟಿ
ಡೇಟಾ ಪೋರ್ಟೆಬಿಲಿಟಿಯಲ್ಲಿನ ಪ್ರಮುಖ ಗೌಪ್ಯತೆ ಮತ್ತು ಭದ್ರತೆಯ ಆವಿಷ್ಕಾರಗಳು

ನಾವು ಓಪನ್ ಸೋರ್ಸ್ ಡೇಟಾ ಪೋರ್ಟೆಬಿಲಿಟಿ ಪ್ಲ್ಯಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದ್ದೇವೆ ಮತ್ತು ಜನರು ತಮ್ಮ ಡೇಟಾವನ್ನು ವೆಬ್‌ನಾದ್ಯಂತ ವರ್ಗಾಯಿಸಲು ಮತ್ತು ಹೊಸ ಆನ್‌ಲೈನ್ ಸೇವಾ ಪೂರೈಕೆದಾರರನ್ನು ಸುಲಭವಾಗಿ ಬಳಸುವುದಕ್ಕೆ ಅವರಿಗೆ ಸಹಾಯ ಮಾಡಲು Apple, Microsoft, Facebook ಮತ್ತು Twitter ನಂತಹ ಕಂಪನಿಗಳೊಂದಿಗೆ ಸಹಯೋಗವನ್ನು ಮುಂದುವರಿಸುತ್ತೇವೆ.

ಗೌಪ್ಯತೆ ಸಹಯೋಗ
ಎಲ್ಲರಿಗಾಗಿ ಹೆಚ್ಚು ಖಾಸಗಿ ವೆಬ್ ಅನ್ನು ನಿರ್ಮಿಸುವುದು

ಗೌಪ್ಯತೆ ಸ್ಯಾಂಡ್‌ಬಾಕ್ಸ್‌ನಂತಹ ಸಹಯೋಗದ ಸ್ಥಳಗಳನ್ನು ರಚಿಸಲು ಮತ್ತು ವೆಬ್‌ನಾದ್ಯಂತ ಉಚಿತ, ಪ್ರವೇಶಿಸಬಹುದಾದ ವಿಷಯವನ್ನು ಬೆಂಬಲಿಸುವಾಗ ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುವ ಮುಕ್ತ ಮಾನದಂಡಗಳ ಗುಂಪನ್ನು ಅಭಿವೃದ್ಧಿಪಡಿಸಲು ವೆಬ್ ಸಮುದಾಯದ ಜೊತೆಗೆ ಕಾರ್ಯನಿರ್ವಹಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಮಾಹಿತಿಯ ಮೂಲಗಳು ಮತ್ತು ಪ್ಲ್ಯಾಟ್‌ಫಾರ್ಮ್‌ಗಳನ್ನು ಹಂಚಿಕೊಳ್ಳುವ ಮೂಲಕ, ಹೆಚ್ಚು ಖಾಸಗಿ ವೆಬ್‌ನತ್ತ ಪ್ರಗತಿಯನ್ನು ಪ್ರೋತ್ಸಾಹಿಸಲು ನಾವು ಆಶಿಸುತ್ತೇವೆ.

ಕಾಂಟ್ಯಾಕ್ಟ್ ಟ್ರೇಸಿಂಗ್

COVID-19 ವಿರುದ್ಧ ಹೋರಾಡುವ ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ
ಸಹಾಯ ಮಾಡುವಾಗ ಬಳಕೆದಾರರ ಗೌಪ್ಯತೆಯನ್ನು ಕಾಪಾಡುತ್ತದೆ

COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸರ್ಕಾರಗಳಿಗೆ ಸಹಾಯ ಮಾಡಲು, Google ಮತ್ತು Apple ಜಂಟಿಯಾಗಿ ಎಕ್ಸ್‌ಪೋಶರ್ ಅಧಿಸೂಚನೆಗಳ ವ್ಯವಸ್ಥೆಯಂತಹ ಕಾಂಟ್ಯಾಕ್ಟ್ ಟ್ರೇಸಿಂಗ್ ತಂತ್ರಜ್ಞಾನಗಳನ್ನು ಗೌಪ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಿವೆ. ಡೆವಲಪರ್‌ಗಳು, ಸರ್ಕಾರಗಳು ಮತ್ತು ಸಾರ್ವಜನಿಕ ಆರೋಗ್ಯ ಪೂರೈಕೆದಾರರೊಂದಿಗಿನ ನಿಕಟ ಸಹಕಾರ ಮತ್ತು ಸಹಯೋಗದ ಮೂಲಕ, ಬಳಕೆದಾರರ ಗೌಪ್ಯತೆಯ ಉನ್ನತ ಗುಣಮಟ್ಟವನ್ನು ರಕ್ಷಿಸುವುದರ ಜೊತೆಗೆ ಜಾಗತಿಕ ಸಮಸ್ಯೆಗಳಿಗೆ ಪರಿಹರಿಸುವುದನ್ನು ಮುಂದುವರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂದು ನಾವು ಭಾವಿಸುತ್ತೇವೆ.

ಎಂಜಿನಿಯರಿಂಗ್ ಕೇಂದ್ರ

ಆನ್‌ಲೈನ್ ಸುರಕ್ಷತೆಯ ಭವಿಷ್ಯಕ್ಕಾಗಿ Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರವು ಹೇಗೆ ವಿನ್ಯಾಸಗೊಳಿಸುತ್ತಿದೆ ಎಂಬುದನ್ನು ತಿಳಿಯಿರಿ.