ನಿಮ್ಮ ಎಲ್ಲಾ ಆನ್ಲೈನ್ ಖಾತೆಗಳಿಗೆ ಸೈನ್ ಇನ್ ಮಾಡುವ ಸುರಕ್ಷಿತ ವಿಧಾನ.
ನಿಮ್ಮ ಎಲ್ಲಾ ಆನ್ಲೈನ್ ಖಾತೆಗಳಾದ್ಯಂತ, ಸೈನ್ ಇನ್ ಮಾಡುವಿಕೆಯು ನಿಮ್ಮ ವೈಯಕ್ತಿಕ ಮಾಹಿತಿಯ ಮುಖ್ಯದ್ವಾರವಾಗಿರುತ್ತದೆ. ಅದು ಅಪಾಯಗಳ ಪ್ರಾಥಮಿಕ ಪ್ರವೇಶದ್ವಾರವೂ ಆಗಿರುತ್ತದೆ, ಅದ್ದರಿಂದ ಅದನ್ನು ರಕ್ಷಿಸುವುದು ಮುಖ್ಯವಾಗುತ್ತದೆ.
Google ಮತ್ತು ನಿಮ್ಮ ಎಲ್ಲಾ ಆ್ಯಪ್ಗಳಿಗೆ ಸೈನ್ ಇನ್ ಮಾಡುವ ಪ್ರಕ್ರಿಯೆಯನ್ನು ನಾವು ಡೀಫಾಲ್ಟ್ ಆಗಿ ಸುರಕ್ಷಿತವಾಗಿಸುತ್ತೇವೆ. ಹೊಸ ಸಾಧನದಿಂದ Google ಖಾತೆಯನ್ನು ಪ್ರವೇಶಿಸುತ್ತಿರುವಾಗ ಕಳುಹಿಸುವ ಅಲರ್ಟ್ಗಳಂತಹ ಸ್ವಯಂಚಾಲಿತ ರಕ್ಷಣೆಗಳು ಮತ್ತು ಬಿಲ್ಟ್ ಇನ್ ಪರಿಕರಗಳ ಮೂಲಕ ಸುರಕ್ಷಿತವಾಗಿ ಸೈನ್ ಇನ್ ಮಾಡುವ ಪ್ರಕ್ರಿಯೆಯನ್ನು ನಾವು ತ್ವರಿತ ಮತ್ತು ಸರಳಗೊಳಿಸುತ್ತೇವೆ.
-
ಸದೃಢ ಪಾಸ್ವರ್ಡ್ಗಳು ಸುರಕ್ಷಿತವಾಗಿರಲು ನಿಮಗೆ ಸಹಾಯ ಮಾಡುತ್ತವೆ
ನಿಮ್ಮ ಆನ್ಲೈನ್ ಖಾತೆಗಳಿಗಾಗಿ ಸದೃಢ, ಅನನ್ಯ ಪಾಸ್ವರ್ಡ್ಗಳನ್ನು ಆಯ್ಕೆಮಾಡುವುದು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಖಾಸಗಿಯಾಗಿಡುವಲ್ಲಿ ಒಂದು ಪ್ರಮುಖವಾದ ಹಂತವಾಗಿದೆ, ಆದರೆ ಬಹುತೇಕ ಜನರು ಅನೇಕ ಸೈಟ್ಗಳಾದ್ಯಂತ ಒಂದೇ ರೀತಿಯ, ದುರ್ಬಲ ಪಾಸ್ವರ್ಡ್ ಬಳಸುವುದಾಗಿ ಹೇಳುತ್ತಾರೆ, ಇದು ಆ ಖಾತೆಗಳನ್ನು ಹೆಚ್ಚು ದುರ್ಬಲವಾಗಿಸುತ್ತದೆ.
-
Google ನ ಪಾಸ್ವರ್ಡ್ ನಿರ್ವಾಹಕವು ಸದೃಢ ಪಾಸ್ವರ್ಡ್ಗಳನ್ನು ರಚಿಸಲು ನಿಮಗೆ ಸಹಾಯ ಮಾಡುತ್ತದೆ
ನಿಮ್ಮ ಉಳಿಸಿದ ಪಾಸ್ವರ್ಡ್ಗಳನ್ನು ನಿರ್ವಹಿಸಿChrome ಮತ್ತು Android ನಲ್ಲಿ ಬಿಲ್ಟ್ ಇನ್ ಆಗಿರುವ Google ನ ಪಾಸ್ವರ್ಡ್ ನಿರ್ವಾಹಕವು, ನಿಮ್ಮ ಎಲ್ಲಾ ಆನ್ಲೈನ್ ಖಾತೆಗಳಿಗಾಗಿ ಪಾಸ್ವರ್ಡ್ಗಳನ್ನು ರಚಿಸುತ್ತದೆ, ಸುರಕ್ಷಿತವಾಗಿ ಉಳಿಸುತ್ತದೆ ಮತ್ತು ಭರ್ತಿಮಾಡುತ್ತದೆ.
-
ಸ್ವಯಂಚಾಲಿತ ಪಾಸ್ವರ್ಡ್ ಅಲರ್ಟ್ಗಳು ನಿಮ್ಮ ಪಾಸ್ವರ್ಡ್ಗಳನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತವೆ
ಪ್ರತಿ ದಿನ, ಹೊಸ ಡೇಟಾ ಉಲ್ಲಂಘನೆಗಳು ಲಕ್ಷಾಂತರ ಬಳಕೆದಾರರ ಹೆಸರುಗಳು ಮತ್ತು ಪಾಸ್ವರ್ಡ್ಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತವೆ. ಪಾಸ್ವರ್ಡ್ಗಳು ಅಪಾಯಕ್ಕೀಡಾಗಿವೆಯೇ ಎಂಬುದನ್ನು Google ಮೌಲ್ಯಮಾಪನ ಮಾಡುತ್ತದೆ, ಹಾಗಾಗಿ ನೀವು ಉಳಿಸಿರುವ ಯಾವುದೇ ಪಾಸ್ವರ್ಡ್ಗಳು ಡೇಟಾ ಉಲ್ಲಂಘನೆಗೆ ಒಳಪಟ್ಟಿರುವುದು ಕಂಡುಬಂದರೆ, ನಾವು ಸ್ವಯಂಚಾಲಿತವಾಗಿ ನಿಮ್ಮನ್ನು ಎಚ್ಚರಿಸುತ್ತೇವೆ.
-
Google Assistant ಬಳಸಿ ನಿಮ್ಮ ಪಾಸ್ವರ್ಡ್ಗಳನ್ನು ಅಪ್ಡೇಟ್ ಮಾಡಿ
ಶೀಘ್ರದಲ್ಲೇ ಬರಲಿದೆಅಪಾಯಕ್ಕೀಡಾಗಿರುವ ಪಾಸ್ವರ್ಡ್ಗಳನ್ನು ಸರಿಪಡಿಸುವ ವಿಚಾರದಲ್ಲಿ, ವೇಗ ಮುಖ್ಯವಾಗುತ್ತದೆ. Chrome ತ್ವರಿತ ಪರಿಹಾರ ಒದಗಿಸುವ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡುತ್ತಿದೆ. ಅದು ನಿಮ್ಮ ಆಪಾಯಕ್ಕೀಡಾಗಿರುವ ಪಾಸ್ವರ್ಡ್ಗಳನ್ನು ಫ್ಲ್ಯಾಗ್ ಮಾಡಬಲ್ಲದು ಮತ್ತು Google Assistant ಸಹಾಯದಿಂದ ಅವುಗಳನ್ನು ಒಂದೇ ಟ್ಯಾಪ್ ಮೂಲಕ ಬದಲಾಯಿಸಬಲ್ಲದು.
-
2-ಹಂತದ ಪರಿಶೀಲನೆಯು ಎರಡನೇ ಸುತ್ತಿನ ಸೈನ್ ಇನ್ ಸುರಕ್ಷತೆಯನ್ನು ಒದಗಿಸುತ್ತದೆ
2-ಹಂತದ ಪರಿಶೀಲನೆಯನ್ನು ಆನ್ ಮಾಡಿನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಸಾಮಾನ್ಯವಾಗಿ ಪಾಸ್ವರ್ಡ್ಗಳು ಅಪಾಯಕ್ಕೀಡಾಗುತ್ತವೆ. ಒಂದು ಹೆಚ್ಚುವರಿ ಪ್ರಕಾರದ ಪ್ರಮಾಣೀಕರಣವನ್ನು ಹೊಂದಿಸುವುದು ನಿಮ್ಮ ಖಾತೆಯನ್ನು ರಕ್ಷಿಸುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. 2-ಹಂತದ ಪರಿಶೀಲನೆಯು ನಿಮ್ಮ ಪಾಸ್ವರ್ಡ್ ಅನ್ನು ನಮೂದಿಸಿದ ನಂತರ ಎರಡನೇ ಹಂತದ ಸುರಕ್ಷತೆಯನ್ನು ಒದಗಿಸುವ ಮೂಲಕ, ನಿಮ್ಮ ಖಾತೆಗೆ ಪ್ರವೇಶ ಹೊಂದಿರಬಾರದ ಯಾವುದೇ ವ್ಯಕ್ತಿಯನ್ನು ಹೊರಗಿಡಲು ಸಹಾಯ ಮಾಡುತ್ತದೆ.
-
ಫೋನ್ ಆಧಾರಿತ ಪ್ರಮಾಣೀಕರಣ ಸರಳ ಮತ್ತು ಸುರಕ್ಷಿತವಾಗಿದೆ
ನಿಮ್ಮ ಆನ್ಲೈನ್ ಖಾತೆಗಳಿಗೆ ಸೈನ್ ಇನ್ ಮಾಡುವಾಗ ನಿಮ್ಮ ಪೋನ್ನಂತಹ ಭೌತಿಕ ಸ್ವರೂಪದ ಪ್ರಮಾಣೀಕರಣವನ್ನು ಬಳಸುವುದು, ಸುಲಭವಾಗಿ ಅಪಾಯಕ್ಕೀಡಾಗಬಹುದಾದ ಪಾಸ್ವರ್ಡ್ಗಿಂತ ತುಂಬಾ ಹೆಚ್ಚು ಸುರಕ್ಷಿತ ಎಂದು ಸಾಬೀತಾಗಿದೆ. ಇದೇ ಕಾರಣದಿಂದ, ಪ್ರಮಾಣೀಕರಣದ ಪರ್ಯಾಯ ಮೋಡ್ಗಳನ್ನು ಸುಧಾರಿಸುವುದಕ್ಕಾಗಿ ನಾವು ಮಾಡುತ್ತಿರುವುದಕ್ಕಿಂತ ಹೆಚ್ಚಿನ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ. Google ಪ್ರಾಂಪ್ಟ್ ಸಹಾಯದಿಂದ ಒಂದು ಸರಳ ಟ್ಯಾಪ್ನಿಂದ ನಿಮ್ಮ ಖಾತೆಯನ್ನು ಪ್ರಮಾಣೀಕರಿಸಬಹುದು.
-
ಖಾತೆಯ ಸುರಕ್ಷತೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಅನುಕೂಲಕರವಾಗಿಸುವುದು
ಪ್ರಮಾಣೀಕರಣ ಪ್ರಕ್ರಿಯೆಯನ್ನು ಪಾಸ್ವರ್ಡ್ಗಿಂತ ಇನ್ನಷ್ಟು ಹೆಚ್ಚು ಅನುಕೂಲಕರ ಮತ್ತು ಸುರಕ್ಷಿತವಾಗಿಸಲು ನಾವು ಸಾಧನಗಳಲ್ಲಿ ಸುಧಾರಿತ ಭದ್ರತಾ ತಂತ್ರಜ್ಞಾನಗಳನ್ನು ಅಳವಡಿಸುತ್ತಿದ್ದೇವೆ – ಉದಾಹರಣೆಗೆ Android ನಲ್ಲಿನ ಭದ್ರತೆ ಕೀಗಳು ಮತ್ತು iOS ನಲ್ಲಿನ Google Smart Lock ಆ್ಯಪ್. ಶೀಘ್ರದಲ್ಲೇ, ತಮ್ಮ ಖಾತೆಗಳಲ್ಲಿ ಮರುಪ್ರಾಪ್ತಿ ಫೋನ್ ಸಂಖ್ಯೆ ಅಥವಾ ಇಮೇಲ್ ಅನ್ನು ಹೊಂದಿರುವ ಬಳಕೆದಾರರನ್ನು 2-ಹಂತದ ಪರಿಶೀಲನೆಗೆ ಸ್ವಯಂಚಾಲಿತವಾಗಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸುತ್ತೇವೆ. ನಿಮ್ಮ ಖಾತೆಯನ್ನು ಭದ್ರತಾ ಪರಿಶೀಲನೆಯ ಮೂಲಕ ಪರಿಶೀಲಿಸಿ.
-
ನಿಮ್ಮ ಮೆಚ್ಚಿನ ಆ್ಯಪ್ಗಳು ಮತ್ತು ಸೇವೆಗಳಿಗೆ ಸೈನ್ ಇನ್ ಮಾಡುವ ಸುರಕ್ಷಿತ ವಿಧಾನ
ನಿಮ್ಮ ಆನ್ಲೈನ್ ಖಾತೆಗಳಿಗೆ ಸೈನ್ ಇನ್ ಮಾಡುವಾಗ ನಿಮ್ಮ ಸೌಕರ್ಯಕ್ಕಾಗಿ ಸುರಕ್ಷತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಹಾಗಾಗಬಾರದು. ಪಾರದರ್ಶಕವಾದ ಗೌಪ್ಯತೆಯ ಆಯ್ಕೆಗಳನ್ನು ಒಂದೇ ಸ್ಥಳದಲ್ಲಿ ನಿರ್ವಹಿಸುತ್ತಾ, ವೆಬ್ನಾದ್ಯಂತದ ಸಾವಿರಾರು ಸೈಟ್ಗಳು ಮತ್ತು ಸೇವೆಗಳಿಗೆ ಹೆಚ್ಚು ಸುರಕ್ಷಿತವಾಗಿ ಮತ್ತು ಸುಲಭವಾಗಿ ಸೈನ್ ಇನ್ ಮಾಡಲು ನಿಮ್ಮ Google ಖಾತೆಯನ್ನು ನೀವು ಬಳಸಬಹುದು.
-
ಕೇವಲ ಒಂದು ಟ್ಯಾಪ್ ಮೂಲಕ ಎಲ್ಲಿ ಬೇಕಾದರೂ ಸುರಕ್ಷಿತವಾಗಿ ಸೈನ್ ಇನ್ ಮಾಡಿ
ಇತರ ಖಾತೆಗಳಲ್ಲಿನ ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡುವುದಕ್ಕಾಗಿ ನಾವು Google ನ, ಉದ್ಯಮದಲ್ಲಿಯೇ ಮುಂಚೂಣಿಯಲ್ಲಿರುವ ಭದ್ರತೆ ಮತ್ತು ಪರಿಪೂರ್ಣ ಸೌಕರ್ಯವನ್ನು ಒಂದುಗೂಡಿಸುತ್ತೇವೆ. Google ಖಾತೆ ಬಳಸಿಕೊಂಡು ಸೈನ್ ಇನ್ ಮಾಡುವ ವೈಶಿಷ್ಟ್ಯವು ಪ್ರತಿ ಸೇವೆಗಾಗಿ ನಿಮ್ಮನ್ನು ವಿಶಿಷ್ಟವಾಗಿ ಪ್ರಮಾಣೀಕರಿಸುತ್ತದೆ. ಹಾಗಾಗಿ, ನೀವು ಬಳಸುವ ಯಾವುದೇ ಸೈಟ್ಗಳು ಮತ್ತು ಸೇವೆಗಳಲ್ಲಿ ಡೇಟಾ ಉಲ್ಲಂಘನೆ ಉಂಟಾದರೂ ಸಹ, ಇತರ ಎಲ್ಲಾ ಖಾತೆಗಳಲ್ಲಿನ ನಿಮ್ಮ ವೈಯಕ್ತಿಕ ಮಾಹಿತಿಯು ಹ್ಯಾಕರ್ಗಳಿಂದ ಸುರಕ್ಷಿತವಾಗಿರುತ್ತದೆ.
-
ನಿಮ್ಮ ಖಾತೆಗಳು ಮತ್ತು ಸಂಪರ್ಕಗಳ ಮೇಲೆ ಹೆಚ್ಚಿನ ನಿಯಂತ್ರಣ
Google ಖಾತೆ ಬಳಸಿಕೊಂಡು ಸೈನ್ ಇನ್ ಮಾಡಿ ಅನ್ನು ಆನ್ ಮಾಡಿನೀವು Google ಖಾತೆ ಬಳಸಿಕೊಂಡು ಸೈನ್ ಇನ್ ಮಾಡಿ ವೈಶಿಷ್ಟ್ಯವನ್ನು ಹೇಗೆ ಬಳಸುತ್ತೀರಿ ಎಂಬುದನ್ನು ನಿಮ್ಮ Google ಖಾತೆಯಲ್ಲೇ ವೀಕ್ಷಿಸಬಹುದು ಮತ್ತು ನಿರ್ವಹಿಸಬಹುದು. ಅದು ಯಾವುದೇ ಸಂಪರ್ಕಿತ ಖಾತೆಯನ್ನು ನಿರ್ವಹಿಸಲು ಅಥವಾ ಅದರ ಪ್ರವೇಶವನ್ನು ಹಿಂತೆಗೆದುಕೊಳ್ಳಲು ನಿಮಗೆ ಅನುಮತಿಸುತ್ತದೆ — ಇದೆಲ್ಲವನ್ನೂ ಒಂದೇ ಸ್ಥಳದಲ್ಲಿ ಮಾಡಬಹುದು — ಅದರಿಂದ ಸಂಪೂರ್ಣ ನಿಯಂತ್ರಣ ನಿಮ್ಮ ಕೈಯಲ್ಲಿರುತ್ತದೆ.
ಭದ್ರತಾ ಪರಿಶೀಲನೆಗೆ ಒಳಪಡುವ ಮೂಲಕ ನಿಮ್ಮ Google ಖಾತೆಯನ್ನು ರಕ್ಷಿಸಿ. ನಿಮ್ಮ Google ಖಾತೆಯ ಭದ್ರತೆಯನ್ನು ಬಲಪಡಿಸಲು ಸಹಾಯ ಮಾಡುವುದಕ್ಕಾಗಿ ಈ ಹಂತ-ಹಂತದ ಪರಿಕರವು ನಿಮಗೆ ವೈಯಕ್ತಿಕಗೊಳಿಸಿದ ಮತ್ತು ಕ್ರಿಯಾತ್ಮಕ ಶಿಫಾರಸುಗಳನ್ನು ನೀಡುತ್ತದೆ.
ನಿಮ್ಮನ್ನು ಆನ್ಲೈನ್ನಲ್ಲಿ ಸುರಕ್ಷಿತವಾಗಿರಿಸಿಕೊಳ್ಳುವ ಹೆಚ್ಚಿನ ಮಾರ್ಗಗಳನ್ನು ಎಕ್ಸ್ಪ್ಲೋರ್ ಮಾಡಿ.
-
ಗೌಪ್ಯತಾ ನಿಯಂತ್ರಣಗಳುನಿಮಗೆ ಸೂಕ್ತವಾಗಿರುವಂತಹ ಗೌಪ್ಯತೆ ಸೆಟ್ಟಿಂಗ್ಗಳನ್ನು ಆಯ್ಕೆಮಾಡಿಕೊಳ್ಳಿ.
-
ಡೇಟಾ ನಿರ್ವಹಣಾ ಅಭ್ಯಾಸಗಳುಜವಾಬ್ದಾರಿಯುತ ಡೇಟಾ ನಿರ್ವಹಣಾ ಅಭ್ಯಾಸಗಳ ಮೂಲಕ ನಾವು ನಿಮ್ಮ ಗೌಪ್ಯತೆಯನ್ನು ಹೇಗೆ ಗೌರವಿಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
-
ಭದ್ರತಾ ಸಲಹೆಗಳುಆನ್ಲೈನ್ನಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುವ ತ್ವರಿತ ಸಲಹೆಗಳು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಅನ್ವೇಷಿಸಿ.
-
ಜಾಹೀರಾತುಗಳು ಮತ್ತು ಡೇಟಾನಮ್ಮ ಪ್ಲ್ಯಾಟ್ಫಾರ್ಮ್ಗಳಲ್ಲಿ ನಿಮಗೆ ಕಾಣಿಸುವ ಜಾಹೀರಾತುಗಳ ಕುರಿತು ಇನ್ನಷ್ಟು ತಿಳಿಯಿರಿ.