Chrome ನಲ್ಲಿ ನಿಮ್ಮದೇ ಆದ ಸ್ಪೇಸ್
Chrome ಬ್ರೌಸರ್‌ನಲ್ಲಿ ನೈಜ-ಜೀವನವು ಹೇಗೆ ಪ್ರೇರಿತ ಆವಿಷ್ಕಾರವನ್ನು ಬಳಸುತ್ತದೆ. Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರದಿಂದ ಸಬೈನ್ ಬೋರ್ಸೆ ಮತ್ತು ಡೇವಿಡ್ ರೋಜರ್ ಅವರು ಹೊಸ Chrome ಪ್ರೊಫೈಲ್‌ಗಳ ಫೀಚರ್‌ಗೆ ಸಂಬಂಧಿಸಿದಂತೆ ತಮ್ಮ ಸಹಯೋಗದ ಪ್ರಯತ್ನಗಳನ್ನು ವಿವರಿಸುತ್ತಾರೆ.
“ನನ್ನ ಇಡೀ ಕುಟುಂಬವು ಇದೀಗ ಕೆಲವು ಸಮಯದಿಂದ ಹಂಚಿಕೊಂಡ ಕಂಪ್ಯೂಟರ್‌ನಲ್ಲಿ Chrome ಬ್ರೌಸರ್ ಅನ್ನು ಬಳಸುತ್ತಿದೆ,” ಎಂದು ಪ್ಯಾರಿಸ್‌ನಲ್ಲಿನ Google ನಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುವ ಡೇವಿಡ್ ರೋಜರ್ ವಿವರಿಸುತ್ತಾರೆ. “ಕೆಲವೊಮ್ಮೆ, ನಾವು ಒಂದೇ ಸಮಯದಲ್ಲಿ ಸುಮಾರು 50 ವೆಬ್‌ಸೈಟ್‌ಗಳನ್ನು ತೆರೆಯುತ್ತೇವೆ. ಉದಾಹರಣೆಗೆ, ನಾನು ಇತ್ತೀಚೆಗೆ ನೋಡಿದ YouTube ವೀಡಿಯೊವನ್ನು ಹುಡುಕಲು ಪ್ರಯತ್ನಿಸುತ್ತಿರುವಾಗ, ಹುಡುಕಾಟ ಇತಿಹಾಸದಲ್ಲಿ ನಾನು Minecraft ವೀಡಿಯೊ ಕ್ಲಿಪ್‌ಗಳನ್ನು ಸಹ ನೋಡುತ್ತೇನೆ – ಇದು ಒಂದು ರೀತಿಯ ಅವ್ಯವಸ್ಥೆಯಾಗಿದೆ.” ಡೇವಿಡ್ ಈ ಸಮಸ್ಯೆಯನ್ನು ಅನುಭವಿಸುತ್ತಿರುವ ಏಕೈಕ ವ್ಯಕ್ತಿಯಾಗಿರಲು ಸಾಧ್ಯವೇ ಇಲ್ಲ. ಕುಟುಂಬಗಳು ಒಂದೇ ಕಂಪ್ಯೂಟರ್ ಮತ್ತು ಒಂದೇ Chrome ಬ್ರೌಸರ್ ಅನ್ನು ಹಂಚಿಕೊಳ್ಳುವುದು ಅಸಾಮಾನ್ಯ ಸಂಗತಿಯಲ್ಲ. ಕೊರೋನಾ ವೈರಸ್ ಸಾಂಕ್ರಾಮಿಕವಾದ ಸಮಯದಲ್ಲಿ ಇದು ವಿಶೇಷವಾಗಿ ಕಂಡುಬಂದಿದೆ. ಪೋಷಕರು, ಆರೈಕೆ ಮಾಡುವವರು ಮತ್ತು ಅವರ ಮಕ್ಕಳು ಎಲ್ಲರೂ ಒಂದೇ ಸಮಯದಲ್ಲಿ ಓದುತ್ತಿದ್ದಾರೆ, ಸಂಶೋಧನೆ ಮಾಡುತ್ತಿದ್ದಾರೆ ಮತ್ತು ಮನರಂಜನೆಯ ಮೂಲಗಳನ್ನು ಹುಡುಕುತ್ತಿದ್ದಾರೆ. ವೈಯಕ್ತಿಕ ಸೆಟ್ಟಿಂಗ್‌ಗಳು ಕಳೆದುಹೋದಾಗ ಅಥವಾ ಹುಡುಕಾಟ ಇತಿಹಾಸಗಳು ಮಿಶ್ರಣಗೊಂಡಾಗ ಗೊಂದಲ ಉಂಟಾಗಬಹುದು.
“ಆಲೋಚನೆಗಳು ಉತ್ಪನ್ನಕ್ಕೆ ಸಂಬಂಧಿಸಿದ ಜನರಿಂದ ಹೆಚ್ಚಾಗಿ ಬರುತ್ತವೆ.”
ಡೇವಿಡ್ ರೋಜರ್, ಸಾಫ್ಟ್‌ವೇರ್ ಡೆವಲಪರ್.
ಡೇವಿಡ್ ರೋಜರ್ ಅವರು ಏನು ಮಾತನಾಡುತ್ತಿದ್ದಾರೆಂದು ಸಬೈನ್ ಬೋರ್ಸೆ ಅವರಿಗೆ ತಿಳಿದಿದೆ. ಅವರು ಮ್ಯೂನಿಚ್‌ನಲ್ಲಿರುವ ಗೌಪ್ಯತೆ ಮತ್ತು ಇಂಟರ್ನೆಟ್ ಸುರಕ್ಷತೆಗಾಗಿ Google ನ ಜಾಗತಿಕ ಅಭಿವೃದ್ಧಿ ಕೇಂದ್ರವಾದ Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರದಲ್ಲಿ (GSEC) ಪ್ರಾಡಕ್ಟ್ ಮ್ಯಾನೇಜರ್ ಆಗಿದ್ದಾರೆ. ಅವರು ಈ ನಿರ್ದಿಷ್ಟ ಸಮಸ್ಯೆಯನ್ನು GSEC ಯ ಟೆಕ್ ದಿನಗಳಲ್ಲೊಂದರಲ್ಲಿ ಪ್ರಸ್ತುತಪಡಿಸಿದರು, ಇದನ್ನು ಅತ್ಯಾಕರ್ಷಕ ಸವಾಲುಗಳ ಶ್ರೇಣಿಯಲ್ಲಿ ಕ್ರಾಸ್-ಫಂಕ್ಷನಲ್ ತಂಡಗಳು ಒಟ್ಟಾಗಿ ಕೆಲಸ ಮಾಡುವುದಕ್ಕೆ ಅನುವು ಮಾಡಿಕೊಡಲು ಸಂಘಟಿಸಲಾಗಿದೆ. ವೈಯಕ್ತಿಕ Chrome ಪ್ರೊಫೈಲ್‌ಗಳನ್ನು ರಚಿಸುವ ಆಲೋಚನೆಯನ್ನು ಈ ದಿನಗಳಲ್ಲಿ ಒಂದು ದಿನ ಆಲೋಚಿಸಲಾಗಿದೆ. ಈ ಫೀಚರ್ ಇದೀಗ Chrome ನಲ್ಲಿ ಲಭ್ಯವಿದೆ ಮತ್ತು ಪ್ರತಿ ಬಾರಿ ಬ್ರೌಸರ್ ಅನ್ನು ತೆರೆದಾಗ ಆಯ್ಕೆಮಾಡಬಹುದಾದ ವೈಯಕ್ತೀಕರಿಸಿದ ಪ್ರೊಫೈಲ್ ಅನ್ನು ರಚಿಸಲು ಪ್ರತಿಯೊಬ್ಬ ಬಳಕೆದಾರರಿಗೆ ಇದು ಅನುಮತಿಸುತ್ತದೆ. ಉದಾಹರಣೆಗೆ, ನೀವು ಹಿನ್ನೆಲೆ ಬಣ್ಣಗಳನ್ನು ಬದಲಾಯಿಸಬಹುದು ಮತ್ತು ಬುಕ್‌ಮಾರ್ಕ್‌ಗಳು ಹಾಗೂ ಪಾಸ್‌ವರ್ಡ್‌ಗಳನ್ನು ಪ್ರತ್ಯೇಕವಾಗಿ ಸಂಘಟಿಸಬಹುದು ಮತ್ತು ಉಳಿಸಬಹುದು.
ಆರಂಭಿಕ ಆಲೋಚನೆಯಿಂದ ಅಂತಿಮ ಅನುಷ್ಠಾನದವರೆಗೆ Chrome ಪ್ರೊಫೈಲ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ಆಳವಾಗಿ ತಿಳಿದುಕೊಳ್ಳುವುದು ಆಸಕ್ತಿದಾಯಕವಾಗಿದೆ. ಸಬೈನ್ ಬೋರ್ಸೆ ಅವರಂತಹ ಪ್ರಾಡಕ್ಟ್ ಮ್ಯಾನೇಜರ್, Chrome ಬ್ರೌಸರ್‌ನಂತಹ ನಿರ್ದಿಷ್ಟ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಪ್ರತಿದಿನ ಕೆಲಸ ಮಾಡುತ್ತಾರೆ. “ಮುಂದಿನ ಕೆಲವು ವರ್ಷಗಳಲ್ಲಿ Chrome ಅನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದನ್ನು ನಾವು ಪರಿಗಣಿಸುತ್ತೇವೆ. ನಾವು ಯಾವ ರೀತಿಯ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ಪರಿಹಾರಗಳನ್ನು ಹೇಗೆ ಸಂಯೋಜಿಸಬೇಕು ಎಂಬುದರ ಕುರಿತು ಸಹ ನಾವು ಯೋಚಿಸುತ್ತೇವೆ,” ಎಂದು ಸಬೈನ್ ವಿವರಿಸಿದರು. “ನಮ್ಮ ಹೆಚ್ಚಿನ ಕೆಲಸವು ನಮ್ಮ ಜೀವನದಲ್ಲಿ ನಾವು ಎದುರಿಸುವ ವಿಷಯಗಳನ್ನು ಆಧರಿಸಿದೆ,” ಎಂದು ಡೇವಿಡ್ ರೋಜರ್ ಒಪ್ಪುತ್ತಾರೆ. “Google ನಲ್ಲಿ ನಮ್ಮ ಹಲವು ಪ್ರಾಜೆಕ್ಟ್‌ಗಳು ಈ ರೀತಿಯಲ್ಲಿ ಪ್ರಾರಂಭವಾಗುತ್ತವೆ ಮತ್ತು ಆಲೋಚನೆಗಳು ಉತ್ಪನ್ನಕ್ಕೆ ಸಂಬಂಧಿಸಿದ ಜನರಿಂದ ಹೆಚ್ಚಾಗಿ ಬರುತ್ತವೆ.”
ಒಮ್ಮೆ ಸಬೈನ್ ಅವರು Chrome ಪ್ರೊಫೈಲ್‌ಗಳ ಕುರಿತು ಕೆಲಸ ಮಾಡಲು ಹಸಿರು ನಿಶಾನೆಯನ್ನು ಪಡೆದ ನಂತರ, ಅವರು ಡೇವಿಡ್ ರೋಜರ್ ಅವರ ತಂಡದ ಬಳಕೆದಾರರ ಅನುಭವ ತಜ್ಞರು ಮತ್ತು ಡೆವಲಪರ್‌ಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿನ ಹತ್ತು ಜನರ ತಂಡವನ್ನು ಒಟ್ಟುಗೂಡಿಸಿದರು. ಡೇವಿಡ್ ಅವರು ಹತ್ತಕ್ಕಿಂತ ಹೆಚ್ಚಿನ ವರ್ಷಗಳಿಂದ Chrome ನ ಅಭಿವೃದ್ಧಿಯ ಕುರಿತು ಕೆಲಸ ಮಾಡುತ್ತಿದ್ದಾರೆ ಮತ್ತು ಬಳಕೆದಾರ ಇಂಟರ್‌ಫೇಸ್ ವಿನ್ಯಾಸ ಸೇರಿದಂತೆ ವಿವಿಧ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ತಂಡವು Chrome ಪ್ರೊಫೈಲ್‌ಗಳ ಮೂಲಮಾದರಿಯನ್ನು ನಿರ್ಮಿಸಿದೆ, ಇದನ್ನು ವಿಶೇಷವಾಗಿ ಆಯ್ಕೆಮಾಡಿದ ಬಳಕೆದಾರರ ಗುಂಪಿನಿಂದ ಪರೀಕ್ಷಿಸಲಾಯಿತು.
ಈ ಮಧ್ಯೆ, ಸಬೈನ್ ಅವರು ಖಾಸಗಿಯಾಗಿ, ಕೆಲಸದಲ್ಲಿ ಅಥವಾ ಇತರ ಬಳಕೆದಾರರೊಂದಿಗೆ Chrome ಅನ್ನು ಬಳಸುವ ಜನರ ಗುಂಪನ್ನು ಗುರುತಿಸಲು ಬಳಕೆದಾರರ ಕುರಿತಾದ ಅಧ್ಯಯನದ ತಜ್ಞರೊಂದಿಗೆ ಕೆಲಸ ಮಾಡಿದರು. “ಈ ಜನರ ಅನುಭವಗಳ ಕುರಿತು ಈ ಅವರನ್ನು ಮುಖಾಮುಖಿ ಸಂದರ್ಶಿಸುವುದರ ಜೊತೆಗೆ, ಅವರು ಎರಡು ತಿಂಗಳ ಕಾಲ Chrome ಪ್ರೊಫೈಲ್‌ಗಳನ್ನು ಹೇಗೆ ಬಳಸಿದ್ದಾರೆ ಎಂಬುದರ ಡೈರಿಯನ್ನು ಇರಿಸಿಕೊಳ್ಳಲು ನಾವು ಅವರನ್ನು ಕೇಳಿದ್ದೇವೆ.” ಪ್ರೊಫೈಲ್‌ಗಳ ತಂಡವು, ಬಳಕೆದಾರರಿಗೆ ಅರ್ಥವಾಗದ ಅಪ್ಲಿಕೇಶನ್‌ನ ಭಾಗಗಳನ್ನು ಎದುರಿಸಿದಾಗ ಏನಾಯಿತು ಎಂಬುದನ್ನು ವಿವರಿಸಲು ಕೇಳಿದೆ.
“ಮುಂದಿನ ಕೆಲವು ವರ್ಷಗಳಲ್ಲಿ Chrome ಅನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದನ್ನು ನಾವು ಪರಿಗಣಿಸುತ್ತೇವೆ.”
ಸಬೈನ್ ಬೋರ್ಸೆ, ಪ್ರಾಡಕ್ಟ್ ಮ್ಯಾನೇಜರ್
ಪ್ಯಾರಿಸ್‌ನಲ್ಲಿ, ಡೇವಿಡ್ Chrome ಬೀಟಾ ಬಳಕೆದಾರರ ಡೇಟಾವನ್ನು ವಿಶ್ಲೇಷಿಸಿದ್ದಾರೆ. Chrome ಬೀಟಾದ ಬಳಕೆದಾರರಿಗೆ ಇತರ ಬಳಕೆದಾರರಿಗಿಂತ ಮೊದಲು ಹೊಸ ಫೀಚರ್‌ಗಳನ್ನು ಪ್ರಯತ್ನಿಸಲು ಅನುಮತಿಸಲಾಗಿದೆ ಮತ್ತು ಅವರು ಉತ್ಪನ್ನ ಅಭಿವೃದ್ಧಿ ಉದ್ದೇಶಗಳಿಗಾಗಿ Google ಗೆ ಬಳಕೆಯ ಡೇಟಾವನ್ನು ಸಲ್ಲಿಸಲು ಒಪ್ಪಿಕೊಂಡಿದ್ದಾರೆ. ಲಕ್ಷಾಂತರ Chrome ಬೀಟಾ ಬಳಕೆದಾರರಿಂದ ಸಂಗ್ರಹಿಸಿದ ಮಾಹಿತಿಯು Chrome ಪ್ರೊಫೈಲ್‌ಗಳ ಅಭಿವೃದ್ಧಿಯ ಉದ್ದಕ್ಕೂ ಸಹಾಯ ಮಾಡಿದೆ. ಉದಾಹರಣೆಗೆ, ಕೆಲವು ಜನರು ನಿರ್ದಿಷ್ಟ ಬಟನ್ ಅನ್ನು ಕ್ಲಿಕ್ ಮಾಡುವಾಗ ತೊಂದರೆ ಅನುಭವಿಸಿದರು, ಆದರೆ ಇತರರಿಗೆ ವಿವರಣಾತ್ಮಕ ಪಠ್ಯದ ತುಣುಕೊಂದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ರೀತಿಯ ಪ್ರತಿಕ್ರಿಯೆಯ ಆಧಾರದ ಮೇಲೆ ಉತ್ಪನ್ನದಲ್ಲಿ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ಮಾಡಬಹುದು ಮತ್ತು ಡಿಜಿಟಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಾಗ ಪುನರಾವರ್ತಿತ ಕೆಲಸದ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತದೆ ಎಂದು ಡೇವಿಡ್ ವಿವರಿಸುತ್ತಾರೆ. ಬಳಕೆದಾರರಿಗೆ ಮೂಲಮಾದರಿಯ ಪ್ರವೇಶವನ್ನು ನೀಡಲಾಗುತ್ತದೆ ಮತ್ತು ಅವರು ಸಂಭಾವ್ಯ ಸಮಸ್ಯೆಗಳ ಕುರಿತು ಪ್ರತಿಕ್ರಿಯೆಯನ್ನು ನೀಡುತ್ತಾರೆ. ಡೆವಲಪರ್‌ಗಳು ನಂತರ ಉತ್ಪನ್ನವನ್ನು ಮಾರ್ಪಡಿಸುತ್ತಾರೆ ಮತ್ತು ಅದನ್ನು ಮರು-ಪರೀಕ್ಷೆಗಾಗಿ ಸಲ್ಲಿಸುತ್ತಾರೆ.
ಪರೀಕ್ಷೆಯ ಸಮಯದಲ್ಲಿ ನಿರ್ದಿಷ್ಟ ಸಮಸ್ಯೆಗಳನ್ನು ಫ್ಲ್ಯಾಗ್ ಮಾಡಲಾಗಿದೆ, ಉದಾಹರಣೆಗೆ Chrome ನಿಧಾನವಾಗಿ ಪ್ರಾರಂಭವಾಗುತ್ತದೆ. ಇದು ಡೇವಿಡ್ ಅವರಿಗೆ ತಮ್ಮ ಡೆವಲಪರ್‌ಗಳನ್ನು ಹ್ಯಾಕಥಾನ್‌ಗಾಗಿ ಒಟ್ಟುಗೂಡಿಸಲು ಪ್ರೇರೇಪಿಸಿತು. “ಬ್ರೌಸರ್ ಅನ್ನು ಮತ್ತೆ ವೇಗಗೊಳಿಸಲು ನಾವು ಇಡೀ ವಾರ ನಮ್ಮ ಎಲ್ಲಾ ಶಕ್ತಿಯನ್ನು ಗಮನ ಹರಿಸುವುದರ ಮೇಲೆ ಕೇಂದ್ರೀಕರಿಸಿದ್ದೇವೆ.” ತಂಡವು ಹಲವಾರು ಸಂಭವನೀಯ ವಿಧಾನಗಳನ್ನು ಪರಿಗಣಿಸಿದೆ. “ನಾವು ಅಂತಿಮವಾಗಿ ಹಲವಾರು ವಿಭಿನ್ನ ತಂತ್ರಜ್ಞಾನಗಳನ್ನು ಗುರುತಿಸಿದ್ದೇವೆ, ಅದನ್ನು ಮ್ಯೂನಿಚ್‌ನಲ್ಲಿರುವ ನಮ್ಮ ಸಹೋದ್ಯೋಗಿಗಳಿಗೆ ಪ್ರಸ್ತುತಪಡಿಸಿದ್ದೇವೆ,” ಎಂದು ಡೇವಿಡ್ ಹೇಳಿದರು.
ಪ್ರಾಜೆಕ್ಟ್‌ನ ಈ ಹಂತದ ಬಗ್ಗೆ ಸಬೈನ್ ಅವರಿಗೆ ಸವಿನೆನಪುಗಳಿವೆ. “ನಾವು ಸ್ಟಾರ್ಟ್‌ಅಪ್‌ನಂತೆ ಕೆಲಸ ಮಾಡುವಾಗಿನ ಸಮಯಗಳಂತಹ ನೆನಪುಗಳು. ನಾವು ಬಹಳಷ್ಟು ವಿಷಯಗಳನ್ನು ಪ್ರಯತ್ನಿಸುತ್ತೇವೆ, ಪ್ರತಿದಿನ ಪರಸ್ಪರ ಮಾತನಾಡುತ್ತೇವೆ ಮತ್ತು ಉತ್ತಮ ಪರಿಹಾರದ ಗುರಿ ಹೊಂದಿದ್ದೇವೆ.” ವಿಭಿನ್ನ Chrome ಪ್ರೊಫೈಲ್‌ಗಳನ್ನು ಬಳಸುವ ಸಾಮರ್ಥ್ಯವು ಇತ್ತೀಚೆಗೆ ಲೈವ್ ಆಗಿದೆ, ಆದರೆ ಸಬೈನ್ ಬೋರ್ಸೆ ಮತ್ತು ಡೇವಿಡ್ ರೋಜರ್ ನೇತೃತ್ವದ ತಂಡಕ್ಕೆ ಮಾಡಬೇಕಾದ ಕೆಲಸವು ಹೆಚ್ಚಿದೆ. ಅವರು ಪ್ರತಿಕ್ರಿಯೆ ಮತ್ತು ಸುಧಾರಣೆಗೆ ಸಲಹೆಗಳನ್ನು ಬಳಸಿಕೊಂಡು ಉತ್ಪನ್ನದ ಮೇಲೆ ಕೆಲಸ ಮಾಡುವುದನ್ನು ಮುಂದುವರೆಸುತ್ತಿದ್ದಾರೆ, ಇದರಲ್ಲಿ ತಮ್ಮದೇ ಆದ ವೈಯಕ್ತಿಕ Chrome ಪ್ರೊಫೈಲ್‌ಗಳನ್ನು ಹೊಂದಿರುವ ಡೇವಿಡ್ ಅವರ ಕುಟುಂಬದವರೂ ಸೇರಿದ್ದಾರೆ.
ಫೋಟೋಗಳು: ಸ್ಟೆಫನಿ ಫ್ಯೂಸೆನಿಚ್ (4), ಫ್ಲೋರಿಯನ್ ಜೆನೆರೊಟ್ಜ್ಕಿ (3).
ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು
ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.
ಇನ್ನಷ್ಟು ತಿಳಿಯಿರಿ