ಉಪಯುಕ್ತವಾದ ಮನೆಯು ಖಾಸಗಿ ಮನೆಯಾಗಿರುತ್ತದೆ.

ನಿಮ್ಮ ಮನೆಯು ವಿಶೇಷ ಸ್ಥಳವಾಗಿದೆ. ನೀವು ಮನೆಗೆ ತರಲು ಬಯಸುವ ವಸ್ತುಗಳಲ್ಲಿ ವಿಶ್ವಾಸ ಇರಿಸಲು ಬಯಸುತ್ತೀರಿ. ಹೀಗಾಗಿ ಮನೆಯಲ್ಲಿರುವ ಜನರ ಮತ್ತು ಸುತ್ತಮುತ್ತಲಿನ ಪರಿಸರದ ಕುರಿತು ಕಾಳಜಿ ತೆಗೆದುಕೊಳ್ಳುವಂತಹ ಮನೆಯನ್ನು ನಿಮ್ಮದಾಗಿಸಲು ಸಹಾಯ ಮಾಡುವಂತಹ ಸಾಧನಗಳು ಮತ್ತು ಸೇವೆಗಳ ಮೂಲಕ ನಾವು ಆ ವಿಶ್ವಾಸವನ್ನು ಗಳಿಸಲು ಬದ್ಧರಾಗಿದ್ದೇವೆ.

ಗೌಪ್ಯತೆ ಮತ್ತು ಭದ್ರತೆ ಗೆ ನಮ್ಮ ಬದ್ಧತೆಗಳು

Google ನ ಎಲ್ಲಾ ಕೆಲಸಕ್ಕೆ ಮಾರ್ಗದರ್ಶನ ನೀಡುವ ಅದೇ ಮೂಲ ಗೌಪ್ಯತೆ ಮತ್ತು ಭದ್ರತಾ ತತ್ವಗಳು ಅನ್ನು ಪಾಲಿಸುತ್ತೇವೆ. ಈ ಮಾರ್ಗಸೂಚಿಯು ನಾವು ಹೇಗೆ ನಿಮ್ಮ ಗೌಪ್ಯತೆಯನ್ನು ಗೌರವಿಸುತ್ತೇವೆ ಮತ್ತು ನಿಮ್ಮ ಕನೆಕ್ಟ್ ಆಗಿರುವ ಮನೆ ಸಾಧನಗಳು ಹಾಗೂ ಸೇವೆಗಳನ್ನು ಸುರಕ್ಷಿತವಾಗಿ ಇರಿಸುತ್ತೇವೆ ಎಂಬುದನ್ನು ವಿವರಿಸುತ್ತದೆ.

ಈ ಬದ್ಧತೆಗಳು ಯಾವ ಸಾಧನಗಳು ಮತ್ತು ಸೇವೆಗಳಿಗೆ ಅನ್ವಯಿಸುತ್ತವೆ?

ಮನೆಯಲ್ಲಿನ ಗೌಪ್ಯತೆಗೆ ನಮ್ಮ ಬದ್ಧತೆ – ಈ ಮಾರ್ಗದರ್ಶಿಯಲ್ಲಿ ವಿವರಿಸಲಾಗಿದೆ – Google ಖಾತೆಗಳನ್ನು ಬಳಸುವ ಮತ್ತು Google Nest, Google Home, Nest, Google WiFi ಅಥವಾ Chromecast ಬ್ರ್ಯಾಂಡ್ ಅನ್ನು ತೆಗೆದುಕೊಂಡ ಹೋಗುವ ನಮ್ಮ ಸಂಪರ್ಕಿತ ಮನೆ ಸಾಧನಗಳು ಹಾಗೂ ಸೇವೆಗಳು ಗೆ ಅನ್ವಯಿಸುತ್ತದೆ. ಇದರರ್ಥ, ಲಭ್ಯವಿರುವಲ್ಲಿ ಇದು Nest ಖಾತೆಗಳಿಂದ Google ಖಾತೆಗಳಿಗೆ ವರ್ಗಾವಣೆ ಮಾಡುವ ಜನರಿಗೂ ಸಹ ಅನ್ವಯಿಸುತ್ತದೆ. ಇದರ ಜೊತೆಗೆ, ಮೇಲೆ ಪಟ್ಟಿ ಮಾಡಲಾದ ಸಾಧನಗಳು ಮತ್ತು ಸೇವೆಗಳಿಗೆ Google ನ ಗೌಪ್ಯತೆ ನೀತಿ ಸಹ ಅನ್ವಯಿಸುತ್ತದೆ; ಉದಾಹರಣೆಗೆ, ನಾವು ಸೇವೆ ಒದಗಿಸುವವರನ್ನು ಹೇಗೆ ಬಳಸುತ್ತೇವೆ, ವೈಯಕ್ತಿಕವಾಗಿ ಗುರುತಿಸಲಾಗದ ಮಾಹಿತಿಯನ್ನು ನಾವು ಹೇಗೆ ಹಂಚಿಕೊಳ್ಳಬಹುದು ಮತ್ತು ಕಾನೂನು ಕಾರಣಗಳಿಗಾಗಿ ನಿಮ್ಮ ಮಾಹಿತಿಯನ್ನು ನಾವು ಹೇಗೆ ಮತ್ತು ಯಾವಾಗ ಸಂಗ್ರಹಿಸಬಹುದು ಮತ್ತು ಹಂಚಿಕೊಳ್ಳಬಹುದು ಎಂಬುದನ್ನು ಇದು ವಿವರಿಸುತ್ತದೆ - ಇವುಗಳಲ್ಲಿ ಯಾವುದೂ ಕೆಳಗಿನ ಬದ್ಧತೆಗಳಿಂದ ಪ್ರಭಾವಿತವಾಗುವುದಿಲ್ಲ. ಹಾಗೆಯೇ, ಲಭ್ಯವಿರುವಲ್ಲಿ ನಿಮ್ಮ ಕನೆಕ್ಟ್ ಮಾಡಿದ ಮನೆ ಸಾಧನಗಳಾದ YouTube, Google Maps ಮತ್ತು Google Duo ಗಳೊಂದಿಗೆ ನೀವು ಇತರ ಅನೇಕ Google ಸೇವೆಗಳನ್ನು ಬಳಸಬಹುದು ಎಂಬುದನ್ನು ಗಮನಿಸಿ. ನೀವು ಈ ಇತರ Google ಸೇವೆಗಳನ್ನು ಬಳಸುವಾಗ, ಆ ಸೇವೆಗಳು ಯಾವ ಡೇಟಾವನ್ನು ಸಂಗ್ರಹಿಸುತ್ತವೆ ಮತ್ತು ಆ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಆ ಪ್ರತ್ಯೇಕ ಸೇವೆಗಳ ನಿಯಮಗಳು ಮತ್ತು Google ನ ಗೌಪ್ಯತೆ ನೀತಿ ನಿರ್ಧರಿಸುತ್ತದೆ.

ನಾವು ನಿಮಗೆ ಈ ಭರವಸೆಗಳನ್ನು ಏಕೆ ನೀಡುತ್ತೇವೆ?

ನೀವು, ನಿಮ್ಮ ಕುಟುಂಬ ಮತ್ತು ನಿಮ್ಮ ಅತಿಥಿಗಳು ಈ ಸಾಧನಗಳು ಹಾಗೂ ಸೇವೆಗಳನ್ನು ಬಳಸುವುದರಿಂದ ಆರಾಮವಾಗಿರಬೇಕು ಎಂದು ನಾವು ಬಯಸುತ್ತೇವೆ, ಏಕೆಂದರೆ ಅವರ ಉದ್ದೇಶವು ಸಹಾಯ ಮಾಡುವುದು ಮತ್ತು ಮಾನಸಿಕ ಶಾಂತಿಯನ್ನು ನೀಡುವುದಾಗಿದೆ. ನಾವು ನಿಮ್ಮ ಮನೆಯಲ್ಲಿ ಅತಿಥಿಯಾಗಿದ್ದೇವೆ ಎಂಬುದನ್ನು ನಾವು ಗುರುತಿಸುತ್ತೇವೆ ಹಾಗೂ ಆ ಆಹ್ವಾನವನ್ನು ನಾವು ಗೌರವಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ. ಮನೆಯಲ್ಲಿನ ತಂತ್ರಜ್ಞಾನವು ಬದಲಾಗುತ್ತಾ ಇರುತ್ತದೆ ಮತ್ತು ವಿಕಾಸಗೊಳ್ಳುತ್ತಿರುತ್ತದೆ, ಆದ್ದರಿಂದ ನಾವು ನಮ್ಮ ಕೆಲಸವನ್ನು ನಮ್ರತೆ, ಅನೇಕ ದೃಷ್ಟಿಕೋನಗಳನ್ನು ಹುಡುಕುವ ಬದ್ಧತೆ ಹಾಗೂ ಕಲಿಯುವ ಮತ್ತು ಹೊಂದಿಕೊಳ್ಳುವ ಉತ್ಸಾಹದಿಂದ ಮಾಡುತ್ತೇವೆ.

ಬದ್ಧತೆ

ತಾಂತ್ರಿಕ ಸ್ಪೆಸಿಮನ್‌ಗಳ ಪಾರದರ್ಶಕತೆ

ಕ್ಯಾಮರಾಗಳು, ಮೈಕ್ರೊಫೋನ್‌ಗಳು ಅಥವಾ ಪರಿಸರ ಅಥವಾ ಚಟುವಟಿಕೆ ಸೆನ್ಸರ್‌ಗಳನ್ನು ಒಳಗೊಂಡಂತೆ ನಮ್ಮ ಕನೆಕ್ಟ್ ಆಗಿರುವ ಮನೆ ಸಾಧನಗಳು ನಿಮ್ಮ ಮನೆ ಪರಿಸರದ ಕುರಿತು ಮಾಹಿತಿಯನ್ನು ಪತ್ತೆಹಚ್ಚಿದಾಗ ಈ ಹಾರ್ಡ್‌ವೇರ್ ಫೀಚರ್‌ಗಳು ಸಕ್ರಿಯವಾಗಿರಲಿ, ಇಲ್ಲದೆ ಇರಲಿ, ಅವುಗಳನ್ನು ಸಾಧನದ ತಾಂತ್ರಿಕ ಸ್ಪೆಸಿಮನ್‌ಗಳಲ್ಲಿ ಪಟ್ಟಿ ಮಾಡುತ್ತೇವೆ.

ಬದ್ಧತೆ

ಪ್ರಕಟಿತ ಸೆನ್ಸರ್‌ಗಳ ಮಾರ್ಗಸೂಚಿ

ಈ ಸೆನ್ಸರ್‌ಗಳು Google ಗೆ ಯಾವ ವಿಧಗಳ ಮಾಹಿತಿಯನ್ನು ಕಳುಹಿಸುತ್ತವೆ ಮತ್ತು ಅವುಗಳ ಉದ್ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಾವು ಆ ಮಾಹಿತಿಯನ್ನು ನಮ್ಮ ಸೆನ್ಸರ್‌ಗಳ ಮಾರ್ಗಸೂಚಿ ಯಲ್ಲಿ ಹೇಗೆ ಬಳಸುತ್ತೇವೆ ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತೇವೆ ಜೊತೆಗೆ ಉದಾಹರಣೆಗಳನ್ನೂ ಕೊಡುತ್ತೇವೆ.

ಪರಿಶೀಲಿಸುತ್ತಿರುವ ಎಲ್ಲ ಸೆಟ್ಟಿಂಗ್‌ಗಳನ್ನು Google ಖಾತೆ ಮೊಬೈಲ್‌ ಮೆನು ತೋರಿಸುವುದು

ಬದ್ಧತೆ

ಜವಾಬ್ದಾರಿಯುತ ಜಾಹೀರಾತು ಕಾರ್ಯವಿಧಾನಗಳು

ನಮ್ಮ ಎಲ್ಲಾ ಕನೆಕ್ಟ್ ಆಗಿರುವ ಮನೆ ಸಾಧನಗಳು ಮತ್ತು ಸೇವೆಗಳಿಗಾಗಿ, ನಾವು ನಿಮ್ಮ ವೀಡಿಯೊ ದೃಶ್ಯಾವಳಿ, ಆಡಿಯೊ ರೆಕಾರ್ಡಿಂಗ್‌ಗಳು ಮತ್ತು ಮನೆ ಪರಿಸರ ಸೆನ್ಸರ್ ರೀಡಿಂಗ್‌ಗಳನ್ನು ಜಾಹೀರಾತಿನಿಂದ ಪ್ರತ್ಯೇಕವಾಗಿ ಇರಿಸುತ್ತೇವೆ ಮತ್ತು ನಾವು ಈ ಡೇಟಾವನ್ನು ಜಾಹೀರಾತು ವೈಯಕ್ತೀಕರಣಕ್ಕಾಗಿ ಬಳಸುವುದಿಲ್ಲ. ನಿಮ್ಮ Assistant ಜೊತೆಗೆ ನೀವು ಸಂವಹನ ನಡೆಸಿದಾಗ, ಜಾಹೀರಾತು ವೈಯಕ್ತೀಕರಣಕ್ಕಾಗಿ ನಿಮ್ಮ ಆಸಕ್ತಿಗಳನ್ನು ತಿಳಿಸಲು ನಾವು ಆ ಸಂವಹನಗಳನ್ನು ಬಳಸಬಹುದು. ಉದಾಹರಣೆಗೆ, “Ok Google, ಹವಾಯಿಯಲ್ಲಿ ಜುಲೈನ ಹವಾಮಾನ ಹೇಗಿರುತ್ತದೆ?” ಎಂದು ನೀವು ಕೇಳಿದರೆ, ನಿಮಗೆ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸಲು ನಾವು ಆ ಧ್ವನಿ ಸಂವಾದದ ಪಠ್ಯವನ್ನು ಬಳಸಬಹುದು (ಆದರೆ ಆಡಿಯೊ ರೆಕಾರ್ಡಿಂಗ್ ಅನ್ನು ಅಲ್ಲ). ಜಾಹೀರಾತು ವೈಯಕ್ತೀಕರಣದಿಂದ ಸಂಪೂರ್ಣವಾಗಿ ಹೊರಗುಳಿಯುವುದನ್ನು ಒಳಗೊಂಡಂತೆ ನೀವು ನೋಡುವ ಜಾಹೀರಾತುಗಳನ್ನು ನಿಯಂತ್ರಿಸಲು, ನಿಮ್ಮ Google ಸೆಟ್ಟಿಂಗ್‌ಗಳನ್ನು ನೀವು ಯಾವಾಗ ಬೇಕಾದರೂ ಪರಿಶೀಲಿಸಬಹುದು. Google Assistant ಮತ್ತು ನಿಮಗೆ ಲಭ್ಯವಿರುವ ಆಯ್ಕೆಗಳ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.

ಬದ್ಧತೆ

ಸ್ವತಂತ್ರ ಭದ್ರತಾ ಮೌಲ್ಯಮಾಪನ

2019 ಅಥವಾ ನಂತರ ಬಿಡುಗಡೆಯಾಗಿರುವ Google Nest ಕನೆಕ್ಟ್ ಆಗಿರುವ ಮನೆ ಸಾಧನಗಳನ್ನು ಥರ್ಡ್ ಪಾರ್ಟಿ, ಉದ್ಯಮ-ಮಾನ್ಯತೆ ಪಡೆದ ಭದ್ರತಾ ಮಾನದಂಡಗಳನ್ನು ಬಳಸಿ ಮೌಲ್ಯೀಕರಿಸಲಾಗುವುದು ಮತ್ತು ನಾವು ಮೌಲ್ಯಮಾಪನ ಫಲಿತಾಂಶಗಳನ್ನುಪ್ರಕಟಿಸುತ್ತೇವೆ.

ಬದ್ಧತೆ

ಭದ್ರತಾ ಸಂಶೋಧನೆಯಲ್ಲಿ ಹೂಡಿಕೆ ಮಾಡಿ

Google Nest Google ದೋಷ ಬಹುಮಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತದೆ.

ಇದು ಏಕೆ ಮುಖ್ಯ
ಈ ಉದ್ಯಮ ಚಟುವಟಿಕೆಯು Nest Secure ತಂಡಕ್ಕೆ ದೋಷಗಳನ್ನು ಪ್ರಕಟಿಸುವ ಬಾಹ್ಯ ಭದ್ರತಾ ಸಂಶೋಧಕರಿಗೆ ನಗದು ಬಹುಮಾನಗಳು ಮತ್ತು ಸಾರ್ವಜನಿಕ ಮಾನ್ಯತೆಯನ್ನು ಒದಗಿಸುತ್ತದೆ. ನಮ್ಮ ಉತ್ಪನ್ನಗಳನ್ನು ಪರೀಕ್ಷಿಸಲು ಜವಾಬ್ದಾರಿಯುತ ಭದ್ರತಾ ಸಂಶೋಧಕರು ನಮಗೆ ಬೇಕು ಮತ್ತು ಪ್ರಕಟಿಸಿದ ದೋಷಗಳನ್ನು ಸರಿಪಡಿಸಿದ ನಂತರವೇ ನಾವು ನಗದು ಪ್ರಶಸ್ತಿಗಳನ್ನು ನೀಡುತ್ತೇವೆ. ಈ ಕಾರ್ಯಕ್ರಮದ ಮೂಲಕ Nest Secure ತಂಡವು ದೋಷಗಳ ಕುರಿತು ತಿಳಿದುಕೊಳ್ಳುತ್ತದೆ ಮತ್ತು ಅವುಗಳು ದುರ್ಬಳಕೆ ಆಗುವ ಮೊದಲೇ ಸರಿಪಡಿಸುತ್ತದೆ.

ಇದು Nest ಸಾಧನಗಳನ್ನು ಹೇಗೆ ಇನ್ನಷ್ಟು ಸುರಕ್ಷಿತಗೊಳಿಸುತ್ತದೆ?

Google ನ ಹೊರಗಿನವರು ನಮ್ಮ ಸಾಧನಗಳಲ್ಲಿನ ಯಾವುದಾದರೂ ಒಂದರಲ್ಲಿ ಭದ್ರತಾ ದೋಷವನ್ನು ಕಂಡುಹಿಡಿದರೆ, ನಾವು ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇವೆ. ನಗದು ಹಣದ ಪ್ರಶಸ್ತಿಗೆ ಅರ್ಹತೆ ಹೊಂದಲು, ಬೇರೆ ಯಾರಿಗಾದರೂ ಈ ದೋಷವನ್ನು ಪ್ರಕಟಿಸುವ ಮೊದಲು Google ಈ ದೋಷವನ್ನು ಸರಿಪಡಿಸುವವರೆಗೂ ಸಂಶೋಧಕ ಕಾಯಬೇಕು. ಈ ಕಾರ್ಯಕ್ರಮವು ನಮ್ಮ ಸಾಧನಗಳನ್ನು ಇನ್ನಷ್ಟು ಸುರಕ್ಷಿತಗೊಳಿಸುವುದಕ್ಕೆ ಸಹಾಯ ಮಾಡಲು ವಿಶ್ವದಾದ್ಯಂತ ಇರುವ ಭದ್ರತಾ ಸಂಶೋಧಕರಿಗೆ ಒಂದು ಉತ್ತೇಜಕವನ್ನು ಸೃಷ್ಟಿಸುತ್ತದೆ.

ಬೇರೆ ಯಾವ ರೀತಿಯಲ್ಲಿ ಭದ್ರತಾ ದೋಷಗಳನ್ನು Google ಕಂಡುಹಿಡಿಯುತ್ತದೆ?

ಪ್ರತಿಯೊಂದು ಸಾಧನವು ಸಾರ್ವಜನಿಕರಿಗೆ ದೊರೆಯುವ ಮೊದಲು ಅದರ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ವಿಶ್ಲೇಷಿಸಲು ನಾವು ಸಮರ್ಪಿತ ಭದ್ರತಾ ತಂಡಗಳನ್ನು ಹೊಂದಿದ್ದೇವೆ ಮತ್ತು ನಮ್ಮ ಸಾಧನಗಳು ಸುರಕ್ಷಿತ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಅತ್ಯುತ್ತಮವಾದುದನ್ನು ಮಾಡುತ್ತೇವೆ. ಆರಂಭಿಕ ಪರಿಶೀಲನೆ ಮಾಡಿದ ನಂತರ, ಸಾಧನಗಳನ್ನು ಪರಿಚಯಿಸಿದ ನಂತರ ಅಪಾಯಗಳ ಮತ್ತು ಭದ್ರತಾ ಬೆದರಿಕೆಗಳ ಕುರಿತು ವಿಶ್ಲೇಷಣೆ ಮಾಡುವುದನ್ನು ಸಹ ಮುಂದುವರಿಸುತ್ತೇವೆ ಮತ್ತು ಸ್ವಯಂಚಾಲಿತ, ನಿರ್ಣಾಯಕ ಭದ್ರತಾ ಅಪ್‌ಡೇಟ್‌ಗಳನ್ನು, US Google ಸ್ಟೋರ್‌ನಲ್ಲಿ ಸಾಧನವು ಮೊದಲ ಬಾರಿಗೆ ಲಭ್ಯವಾದಾಗಿನಿಂದ ಪ್ರಾರಂಭಿಸಿ ಕನಿಷ್ಠ 5 ವರ್ಷಗಳ ತನಕ ಒದಗಿಸುತ್ತೇವೆ.

ಸಂಶಯಾಸ್ಪದ ಚಟುವಟಿಕೆ ಎಂದರೇನು?

ನೀವು ನಿರ್ವಹಿಸಿಲ್ಲ ಎಂದು ತೋರುವ ಚಟುವಟಿಕೆಗಾಗಿ Google ಹುಡುಕುತ್ತದೆ. ಉದಾಹರಣೆಗೆ, ಗುರುತಿಸಲಾಗದ ಸಾಧನದಿಂದ ನಿಮ್ಮ ಖಾತೆಗೆ ಸೈನ್‌ಇನ್ ಆಗುವ ಪ್ರಯತ್ನ ನಡೆದಿರುವುದು.

2-ಹಂತದ ಪರಿಶೀಲನೆಯು ನನ್ನ ಖಾತೆಯನ್ನು ಹೇಗೆ ರಕ್ಷಿಸುತ್ತದೆ?

ಯಾರಾದರೂ ನಿಮ್ಮ ಪಾಸ್‌ವರ್ಡ್‌ ಅನ್ನು ಹೊಂದಿದ್ದರೂ ಸಹ, ನಿಮ್ಮ ಖಾತೆಗೆ ಅವರು ಸೈನ್‌ಇನ್ ಆಗುವುದನ್ನು 2-ಹಂತದ ಪರಿಶೀಲನೆಯು ಕಠಿಣಗೊಳಿಸುತ್ತದೆ. 2-ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಿದಾಗ ಯಾರಾದರೂ ನಿಮ್ಮ ಖಾತೆಗೆ ಸೈನ್‌ಇನ್ ಆಗಬೇಕೆಂದರೆ ಸೈನ್‌ಇನ್ ಆಗುವ ಮೊದಲು ನಿಮ್ಮ ಖಾತೆಯು ಎರಡನೇ ಹಂತ ಅಥವಾ “ಅಂಶ” ವನ್ನು ಪೂರ್ಣಗೊಳಿಸಬೇಕು. ಪಠ್ಯ ಸಂದೇಶ, Google ಅಥೆಂಟಿಕೇಟರ್ ಆ್ಯಪ್‌ನಿಂದ ಕೋಡ್ ಅಥವಾ ಇನ್‌ಸ್ಟಾಲ್ ಆಗಿರುವ Google ಆ್ಯಪ್‌ನಿಂದ ಅಧಿಸೂಚನೆಯನ್ನು ಒಳಗೊಂಡಂತೆ ಬಹುವಿಧದ ಎರಡನೇ ಅಂಶಗಳಿಂದ ನೀವು ಆರಿಸಬಹುದು.

ನಾನು Nest ಖಾತೆಯನ್ನು ಹೊಂದಿದ್ದೇನೆ ಮತ್ತು Nest ಆ್ಯಪ್‌ಗೆ ಸೈನ್ ಇನ್ ಆಗಲು ಅದನ್ನೇ ಬಳಸುತ್ತಿದ್ದೇನೆ. ನಾನು Google ಖಾತೆಗೆ ಏಕೆ ಬದಲಿಸಬೇಕು?

Google ಖಾತೆಗೆ ಬದಲಾಗುವುದರಿಂದ ನೀವು :

  • ಸ್ವಯಂಚಾಲಿತ ಭದ್ರತಾ ಸುರಕ್ಷತೆಗಳಾದ ಸಂಶಯಾಸ್ಪದ ಚಟುವಟಿಕೆ ಪತ್ತೆಹಚ್ಚುವಿಕೆ, 2-ಹಂತದ ಪರಿಶೀಲನೆ ಮತ್ತು ಭದ್ರತಾ ಪರಿಶೀಲನೆ
  • ಯಂತಹ ಹೊಸ ಪ್ರಯೋಜನಗಳನ್ನು ಪಡೆಯುತ್ತೀರಿ
  • ನಿಮ್ಮ Google Nest ಸಾಧನಗಳು ಮತ್ತು ಸೇವೆಗಳು ಜೊತೆಯಾಗಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ನೀವು Nest Cam ಮತ್ತು Chromecast ಹೊಂದಿದ್ದರೆ, ಯಾವುದೇ ಸೆಟಪ್ ಇಲ್ಲದೇ ನಿಮ್ಮ ಕ್ಯಾಮರಾವನ್ನು ನಿಮ್ಮ ಟಿವಿಯಲ್ಲಿ ಬಿತ್ತರಿಸಲು “Ok Google, ನನಗೆ ಹಿಂಬದಿಯ ಕ್ಯಾಮರಾ ತೋರಿಸು” ಎಂದು ಹೇಳಿ ಸಾಕು.
  • Nest ಮತ್ತು Google Home ಆ್ಯಪ್‌ಗಳು ಎರಡಕ್ಕೂ ಸೈನ್ ಇನ್ ಮಾಡಲು ಒಂದೇ ಖಾತೆ.
  • ನಿಮ್ಮ ಮನೆಗಳು ಮತ್ತು ಮನೆಯ ಸದಸ್ಯರನ್ನು Nest ಮತ್ತು Google Home ಆ್ಯಪ್‌ಗಳಾದ್ಯಂತ ಒಟ್ಟುಗೂಡಿಸಸಲಾಗಿದೆ.


ಅಸ್ತಿತ್ವದಲ್ಲಿರುವ Nest ಖಾತೆ ಹೊಂದಿರುವ ಯಾರು ಬೇಕಿದ್ದರೂ Google ಖಾತೆಗೆ ವರ್ಗಾಯಿಸಬಹುದು. ನಿಮ್ಮ ಖಾತೆಯನ್ನು ವರ್ಗಾಯಿಸಲು, Nest ಆ್ಯಪ್ನಲ್ಲಿ, ಖಾತೆ ಸೆಟ್ಟಿಂಗ್‌ಗಳುಗೆ ಹೋಗಿ, ಮತ್ತು ನಂತರ Google ಖಾತೆಗೆ ವರ್ಗಾಯಿಸಿ ಅನ್ನು ಆಯ್ಕೆ ಮಾಡಿ.

ಬದ್ಧತೆ

ಸ್ವಯಂಚಾಲಿತ ಭದ್ರತಾ ಅಪ್‌ಡೇಟ್‌ಗಳು

ನಾವು ಸ್ವಯಂಚಾಲಿತ, ನಿರ್ಣಾಯಕ ಭದ್ರತಾ ಅಪ್‍ಡೇಟ್‍ಗಳನ್ನು Google Nest ಸಾಧನಗಳಿಗಾಗಿ, US Google ಸ್ಟೋರ್‌ನಲ್ಲಿ ಸಾಧನವು ಮೊದಲ ಬಾರಿಗೆ ಲಭ್ಯವಾದಾಗಿನಿಂದ ಕನಿಷ್ಠ ಐದು ವರ್ಷಗಳ ತನಕ ಒದಗಿಸುತ್ತೇವೆ.

ಇದು ಏಕೆ ಮುಖ್ಯ
ಬಳಕೆದಾರರನ್ನು ಸುರಕ್ಷಿತವಾಗಿರಿಸಲು ನಾವು ಬಹುಪದರದ ರಕ್ಷಣೆಗಳನ್ನು ಬಳಸುತ್ತೇವೆ; ಆದರೂ, ತಂತ್ರಜ್ಞಾನ ಬದಲಾಗುತ್ತದೆ ಮತ್ತು ಹೊಸ ಬೆದರಿಕೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ, Google Nest ಗಾಗಿ ತಿಳಿದಿರುವ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವ ಸ್ವಯಂಚಾಲಿತ ಸಾಫ್ಟ್‌ವೇರ್ ಭದ್ರತಾ ಅಪ್‍ಡೇಟ್‍ಗಳನ್ನು ಒದಗಿಸಲು ನಾವು ಬದ್ದವಾಗಿದ್ದೇವೆ. ನಾವು ಸಾಧನಗಳ ಪಟ್ಟಿಯನ್ನು ಮತ್ತು ಅವುಗಳಿಗೆ ನಾವು ಎಲ್ಲಿಯವರೆಗೆ ಅಪ್‌ಡೇಟ್‌ಗಳನ್ನು ಒದಗಿಸಲು ಬದ್ಧರಾಗಿರುತ್ತೇವೆ ಎಂಬುದನ್ನು ಪ್ರಕಟಿಸುತ್ತೇವೆ.

ನನ್ನ ಸಾಧನವು ಅಪ್‌ಡೇಟ್‌ಗಳನ್ನು ಪಡೆಯುತ್ತಿದೆ ಎಂಬುದು ನನಗೆ ಹೇಗೆ ತಿಳಿಯುತ್ತದೆ?

ನಾವು ನಿರ್ಣಾಯಕ ಭದ್ರತಾ ಅಪ್‌ಡೇಟ್‌ಗಳಿಗಾಗಿ ಕನಿಷ್ಠ ಬದ್ಧತೆಯ ದಿನಾಂಕ ವ್ಯಾಪ್ತಿಯನ್ನು ತೋರಿಸುವ Google ಸಾಧನಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ.

ಭದ್ರತಾ ಅಪ್‌ಡೇಟ್‌ಗಳ ವ್ಯಾಪ್ತಿ ಮೀರಿ ಮತ್ತೆ ಏನಿದೆ?

ಸಾಧನವು ಉದ್ದೇಶಿತ ಬಳಕೆಯ ವಿಧಾನ ಬಿಟ್ಟು ಬೇರೆ ರೀತಿಯಲ್ಲಿ ಬಳಕೆಯಾದಾಗ ಅಥವಾ ಅದು ತನ್ನ ಭದ್ರತೆಯನ್ನು ರಾಜಿ ಮಾಡಿಕೊಂಡಾಗ ಉಂಟಾಗುವ ದೋಷಗಳನ್ನು ಭದ್ರತಾ ಅಪ್‌ಡೇಟ್‌ಗಳು ಪರಿಹರಿಸುವುದಿಲ್ಲ. ಉದಾಹರಣೆಗೆ:

  • ಬೇರೆ ಯಾರಿಗಾದರೂ ಸಾಧನವನ್ನು ಕೊಡುವ ಮೊದಲು ಸೂಕ್ತವಾದ ಫ್ಯಾಕ್ಟರಿ ರೀಸೆಟ್ ಮಾಡದೇ ಇರುವುದು
  • ಖಾತೆಗಳು 2-ಹಂತದ ಪರಿಶೀಲನೆಯನ್ನು ಬಳಸದೇ ಇರುವುದು
  • ಇತರ ತಯಾರಕರು ತಯಾರಿಸಿದ ಸಾಧನಗಳು Google ನಿಂದ ಮೌಲ್ಯಮಾಪನಗೊಂಡಿರುವುದಿಲ್ಲ ಹಾಗೂ ಅವುಗಳು ನಿಮ್ಮ ನೆಟ್‌ವರ್ಕ್‌ ಮತ್ತು Google Nest ಸಾಧನಗಳಿಗೆ ಪ್ರವೇಶ ಪಡೆದಿರಬಹುದು

ಬದ್ಧತೆ

ದೃಢೀಕರಿಸಿದ ಸಾಫ್ಟ್‌ವೇರ್

ಹಾಗಾಗಿ Google Nest ಸಾಧನಗಳು ಯಾವ ಸಾಫ್ಟ್‌ವೇರ್ ಅನ್ನು ರನ್ ಮಾಡಬೇಕೋ ಅದನ್ನು ಮಾತ್ರ ರನ್ ಮಾಡುತ್ತವೆ, ಸಾಫ್ಟ್‌ವೇರ್ ಇನ್‌ಸ್ಟಾಲ್ ಆಗುವ ಮೊದಲು ನಾವು ಅದನ್ನು ಪರಿಶೀಲಿಸುತ್ತೇವೆ. 2019 ರಲ್ಲಿ ಅಥವಾ ನಂತರ ಬಿಡುಗಡೆಯಾದ ನಮ್ಮ ಎಲ್ಲಾ ಸಾಧನಗಳು ದೃಢೀಕರಿಸಿದ ಬೂಟ್ ಬಳಸುತ್ತವೆ.

ಇದು ಏಕೆ ಮುಖ್ಯ
Google Nest ಸಾಧನಗಳಲ್ಲಿ ದುರುದ್ದೇಶಪ್ರೇರಿತ ಸಾಫ್ಟ್‌ವೇರ್ ಇನ್‌ಸ್ಟಾಲ್ ಆಗುವುದನ್ನು ತಡೆಯುವುದಕ್ಕೆ ಸಹಾಯ ಮಾಡಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ನಿಮ್ಮ ಅನುಮತಿ ಇಲ್ಲದೆ ಯಾರೊಬ್ಬರೂ ಸಹ ನಿಮ್ಮ ಖಾತೆಗೆ ಪ್ರವೇಶಿಸುವುದು ಅಥವಾ ನಿಮ್ಮ ಸಾಧನಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದನ್ನು ಇದು ಖಚಿತಪಡಿಸಲು ಇದು ಸಹಾಯ ಮಾಡುತ್ತದೆ.

ಸಾಧನವೊಂದರಲ್ಲಿ ದುರುದ್ದೇಶಪ್ರೇರಿತ ಸಾಫ್ಟ್‌ವೇರ್ ರನ್ ಆಗುವುದನ್ನು ನೀವು ಹೇಗೆ ತಡೆಯುವಿರಿ?

ಮೊದಲು, ಕ್ರಿಪ್ಟೋಗ್ರಾಫಿಕ್ ಶಾಸ್ತ್ರದ ಪ್ರಕಾರ ಸಾಫ್ಟ್‌ವೇರ್ ಅನ್ನು ಪರಿಶೀಲಿಸಿ, ಇನ್‌ಸ್ಟಾಲ್ ಆಗುವ ಮೊದಲು ಅದಕ್ಕೆ Google ನಿಂದ ಸಹಿ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಎರಡನೇಯದಾಗಿ, 2019 ರ ನಂತರ ಬಿಡುಗಡೆಯಾಗಿರುವ ನಮ್ಮ ಹಾರ್ಡ್‌ವೇರ್, ಪ್ರತಿ ಬಾರಿ ಸಾಧನವು ಮರುಪ್ರಾರಂಭವಾದಾಗ ಅದು ಸರಿಯಾದ ಸಾಫ್ಟ್‌ವೇರ್ ಅನ್ನು ರನ್ ಮಾಡುತ್ತದೆಯೇ ಎಂಬುದನ್ನು ಪರಿಶೀಲಿಸಲು ದೃಢೀಕರಿಸಿದ ಬೂಟ್ ಅನ್ನು ಬಳಸುತ್ತದೆ.

ಬದ್ಧತೆ

ಸಾಧನ ಪಾರದರ್ಶಕತೆ

ನಿಮ್ಮ Google Home ಆ್ಯಪ್‌ನಲ್ಲಿ ಕಂಡುಬರುವ Google Nest ಸಾಧನಗಳನ್ನು ನಿಮ್ಮ Google ಖಾತೆ ಸಾಧನ ಚಟುವಟಿಕೆ ಪುಟ ಪಟ್ಟಿ ಮಾಡುತ್ತದೆ.

ಇದು ಏಕೆ ಮುಖ್ಯ
ನೀವು ಸೈನ್ ಇನ್ ಆಗುವ ಎಲ್ಲಾ ಸಾಧನಗಳು ನಿಮ್ಮ Google ಖಾತೆ ಸಾಧನ ಚಟುವಟಿಕೆ ಪುಟದಲ್ಲಿ ಕಾಣಿಸಿಕೊಳ್ಳುತ್ತವೆ. ಈ ವಿಧಾನದಲ್ಲಿ, ನಿಮ್ಮ ಖಾತೆಯು ಯಾವ ಸಾಧನಗಳಿಗೆ ಸಂಪರ್ಕಗೊಳ್ಳಬೇಕೋ ಅವುಗಳಿಗೆ ಮಾತ್ರ ಸಂಪರ್ಕ ಹೊಂದಿದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು.

ನನ್ನ Google ಖಾತೆಗೆ ಸಾಧನವೊಂದು ಹೇಗೆ ಸಂಪರ್ಕ ಹೊಂದುತ್ತದೆ?

ಯಾವುದೇ ಸಮಯದಲ್ಲಿ ಫೋನ್, ಕಂಪ್ಯೂಟರ್, ಆ್ಯಪ್ ಅಥವಾ ಸಂಪರ್ಕಿತ ಮನೆ ಸಾಧನಕ್ಕೆ ಸೈನ್ ಇನ್ ಆಗಲು ನಿಮ್ಮ Google ಖಾತೆಯನ್ನು ನೀವು ಬಳಸುತ್ತೀರಿ, ಆಗ ಅವು ಸಂಪರ್ಕ ಹೊಂದುತ್ತವೆ. ನಿಮ್ಮ ಮಾಲೀಕತ್ವ ಹೊಂದಿರದ ಅಥವಾ ನಿಯಂತ್ರಣವಿಲ್ಲದ ಸಾಧನಗಳಿಂದ ಸೈನ್ ಔಟ್ ಆಗಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ನೀವು ಗುರುತಿಸಲಾಗದ ಸಾಧನಗಳಿಗಾಗಿ ನಿಮ್ಮ Google ಖಾತೆಯನ್ನು ಪರಿಶೀಲಿಸಿ.

ನನ್ನ ಖಾತೆಯಲ್ಲಿ ನಾನು ಗುರುತಿಸಲಾಗದ ಸಾಧನವನ್ನು ನೋಡಿದರೆ ಏನಾಗುತ್ತದೆ?

ಪ್ರವೇಶ ಮರಳಿ ಪಡೆಯಲು ಸಾಧನದಿಂದ ಅಥವಾ ಹೋಮ್‌ನಿಂದ ಸೈನ್ ಔಟ್ ಆಗಿ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ಬದಲಿಸಿ.

ಕ್ಯಾಮರಾಗಳು

ನೆನಪುಗಳನ್ನು ಕ್ಯಾಪ್ಚರ್ ಮಾಡುವುದು, ಪ್ರೀತಿಪಾತ್ರರ ಜೊತೆ ಸಂಪರ್ಕ ಸಾಧಿಸುವುದು ಮತ್ತು ಸುರಕ್ಷಿತವಾಗಿರಲು ನಿಮಗೆ ಸಹಾಯ ಮಾಡುವ ಮೂಲಕ ಕ್ಯಾಮರಾಗಳನ್ನು ಮನೆಯಲ್ಲಿ ಹಲವಾರು ಕಾರಣಗಳಿಗಾಗಿ ಬಳಸಲಾಗುತ್ತದೆ. Nest Cam ನಂತಹ ಸಾಧನಗಳು ನಿಮ್ಮ ಮನೆಯ ಮೇಲೆ ಕಣ್ಣಿಡಲು ಮತ್ತು ನೀವು ಇಲ್ಲದಿರುವಾಗ ಏನಾದರೂ ಜರುಗಿದರೆ ನಿಮ್ಮನ್ನು ಎಚ್ಚರಿಸುವುದಕ್ಕೆ ಸಹಾಯ ಮಾಡಲು ವೀಡಿಯೊವನ್ನು ಬಳಸುತ್ತವೆ.

ಕ್ಯಾಮರಾಗಳೊಂದಿಗಿನ ನಮ್ಮ ಎಲ್ಲಾ ಕನೆಕ್ಟ್ ಆಗಿರುವ ಮನೆ ಸಾಧನಗಳಿಗಾಗಿ, ನಾವು ನಿಮಗೆ ಬದ್ಧರಾಗಿದ್ದೇವೆ:

ನೀವು ಅಥವಾ ನಿಮ್ಮ ಮನೆಯಲ್ಲಿರುವ ಯಾರಾದರೂ ಕ್ಯಾಮರಾವನ್ನು ಸುಸ್ಪಷ್ಟವಾಗಿ ಆನ್ ಮಾಡಿದರೆ ಅಥವಾ ಅಗತ್ಯವಿರುವ ಫೀಚರ್ ಅನ್ನು ಸಕ್ರಿಯಗೊಳಿಸಿದರೆ ಮಾತ್ರ (ಉದಾಹರಣೆಗೆ, Nest Cam ಮೇಲ್ವಿಚಾರಣೆ), ನಿಮ್ಮ ಕ್ಯಾಮರಾ ವೀಡಿಯೊ ದೃಶ್ಯಾವಳಿಯನ್ನು Google ಗೆ ಕಳುಹಿಸುತ್ತದೆ. ನೀವು ಯಾವಾಗ ಬೇಕಾದರೂ ಕ್ಯಾಮರಾವನ್ನು ಆಫ್ ಮಾಡಬಹುದು.

ನಿಮ್ಮ ಕ್ಯಾಮರಾ ಆನ್ ಆಗಿರುವಾಗ ಮತ್ತು ವೀಡಿಯೊ ದೃಶ್ಯಾವಳಿಯನ್ನು Google ಗೆ ಕಳುಹಿಸಿದಾಗ, ನಾವು ಸ್ಪಷ್ಟ ವಿಷುವಲ್ ಸೂಚಕವನ್ನು ಒದಗಿಸುತ್ತೇವೆ (ಉದಾಹರಣೆಗೆ, ನಿಮ್ಮ ಸಾಧನದಲ್ಲಿನ ಹಸಿರು ದೀಪ).

ವೀಡಿಯೊ ದೃಶ್ಯಾವಳಿಯನ್ನು ನಿಮ್ಮ Google ಖಾತೆಯ ಜೊತೆಗೆ ಸಂಗ್ರಹಿಸಿದಾಗ (ಉದಾಹರಣೆಗೆ, Nest Aware ಗೆ ಸಬ್‌ಸ್ಕ್ರಿಪ್ಶನ್ ಮೂಲಕ), ನೀವು ಯಾವುದೇ ಸಮಯದಲ್ಲಾದರೂ ಈ ದೃಶ್ಯಾವಳಿಯನ್ನು ಪ್ರವೇಶಿಸಬಹುದು, ಪರಿಶೀಲಿಸಬಹುದು ಮತ್ತು ಅಳಿಸಬಹುದು.

ನೀವು ಅಥವಾ ನಿಮ್ಮ ಮನೆಯ ಸದಸ್ಯರು ನಮಗೆ ಸುಸ್ಪಷ್ಟವಾಗಿ ಅನುಮತಿ ನೀಡಿದರೆ, ನಮ್ಮ ಸಾಧನಗಳ ಜೊತೆಗೆ ಕಾರ್ಯನಿರ್ವಹಿಸುವ ಥರ್ಡ್ ಪಾರ್ಟಿ ಆ್ಯಪ್‌ಗಳು ಮತ್ತು ಸೇವೆಗಳೊಂದಿಗೆ ಮಾತ್ರ ನಾವು ನಿಮ್ಮ ವೀಡಿಯೊ ದೃಶ್ಯಾವಳಿಯನ್ನು ಹಂಚಿಕೊಳ್ಳುತ್ತೇವೆ.

ಲಭ್ಯವಿರುವಲ್ಲಿ, Nest Hub Max ನಿಮಗೆ ಆನ್-ಡಿವೈಸ್ ಕ್ಯಾಮರಾ ಸೆನ್ಸಿಂಗ್ ವೈಶಿಷ್ಟ್ಯಗಳನ್ನು ಒದಗಿಸುತ್ತದೆ, ಇದು ಕ್ಯಾಮರಾ ಏನನ್ನು ನೋಡುತ್ತದೆ ಎಂಬುದನ್ನು ಆಧರಿಸಿ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು ಮತ್ತು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ, ಉದಾಹರಣೆಗೆ ಫೇಸ್ ಮ್ಯಾಚ್ (ನಿಮ್ಮನ್ನು ಗುರುತಿಸಲು ನಿಮ್ಮ ಸಾಧನಕ್ಕೆ ಸಹಾಯ ಮಾಡುತ್ತದೆ) ಮತ್ತು ಕ್ವಿಕ್ ಗೆಶ್ಚರ್ಸ್ (ನಿಮ್ಮ ಸಾಧನವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ). ಸಕ್ರಿಯಗೊಳಿಸಿದ ಮೇಲೆ, ಈ ಆನ್-ಡಿವೈಸ್ ಕ್ಯಾಮರಾ ಸೆನ್ಸಿಂಗ್ ವೈಶಿಷ್ಟ್ಯಗಳು ನಿಮ್ಮ Nest Hub Max ನಿಂದ Google ಗೆ ವೀಡಿಯೊ ಅಥವಾ ಚಿತ್ರಗಳನ್ನು ಕಳುಹಿಸುವುದಿಲ್ಲ.

ನನ್ನ ಸಂಗ್ರಹಿಸಿದ ವೀಡಿಯೊ ದೃಶ್ಯಾವಳಿಯನ್ನು ನಾನು ಹೇಗೆ ಪರಿಶೀಲಿಸಬಹುದು ಮತ್ತು ಅಳಿಸಬಹುದು?

ಸಂಗ್ರಹಿಸಿದ ಆಡಿಯೊ ರೆಕಾರ್ಡಿಂಗ್‌ಗಳನ್ನು ನೀವು Nest ಆ್ಯಪ್ ಮೂಲಕ (Nest Cam ರೆಕಾರ್ಡಿಂಗ್‌ನ ಸಂದರ್ಭದಲ್ಲಿ) ಅಥವಾ ನನ್ನ ಚಟುವಟಿಕೆ (Google Assistant ಜೊತೆಗಿನ ಸಂವಹನಕ್ಕಾಗಿ) ಪರಿಶೀಲಿಸಬಹುದು ಮತ್ತು ಅಳಿಸಬಹುದು.

Nest Hub Max ನ ಕ್ಯಾಮರಾ ಸೆನ್ಸಿಂಗ್ ಫೀಚರ್‌ಗಳು ಎಂದಾದರೂ ನನ್ನ ಮನೆಯಿಂದ ವೀಡಿಯೊ ಅಥವಾ ಚಿತ್ರಗಳನ್ನು Google ‌ಗೆ ಕಳುಹಿಸುತ್ತವೆಯೇ?

ಹೌದು, ಆದರೆ Face Match ಸೆಟಪ್ ಪ್ರಕ್ರಿಯೆಯ ಭಾಗವಾಗಿ ಮಾತ್ರ ಹಾಗೂ ನೀವು ಸೆಟಪ್ ಪೂರ್ಣಗೊಳಿಸಿದ ನಂತರ ಅಲ್ಲ. ನಿಮ್ಮ Nest Hub Max ನಲ್ಲಿ ನೀವು Face Match ಅನ್ನು ಸೆಟಪ್ ಮಾಡಿದಾಗ, ನಿಮ್ಮ ಮುಖದ ವಿಶಿಷ್ಟ ಮಾದರಿಯನ್ನು ರಚಿಸುವುದಕ್ಕಾಗಿ ಹಲವಾರು ಫೋಟೋಗಳನ್ನು ಕ್ಯಾಪ್ಚರ್ ಮಾಡಲು ನಿಮ್ಮ ಫೋನ್ ಅನ್ನು ನೀವು ಬಳಸುತ್ತೀರಿ. ಈ ಫೋಟೋಗಳನ್ನು Google ಗೆ ಕಳುಹಿಸಲಾಗುತ್ತದೆ ಮತ್ತು ನೀವು ನನ್ನ ಚಟುವಟಿಕೆಗೆ ಭೇಟಿ ನೀಡುವ ಮೂಲಕ ಅವುಗಳನ್ನು ಯಾವ ಸಮಯದಲ್ಲಾದರೂ ಪರಿಶೀಲಿಸಬಹುದು ಅಥವಾ ಅಳಿಸಬಹುದು. ಈ ಸೆಟಪ್ ಪ್ರಕ್ರಿಯೆಯ ನಂತರ Face Match ಯಾವುದೇ ವೀಡಿಯೊ ಅಥವಾ ಚಿತ್ರಗಳನ್ನು Google ಗೆ ಕಳುಹಿಸುವುದಿಲ್ಲ. ಮತ್ತು ಕ್ವಿಕ್ ಗೆಸ್ಚರ್‌ಗಳಿಗೆ ಯಾವುದೇ ವೀಡಿಯೊ ಅಥವಾ ಚಿತ್ರಗಳನ್ನು Google ಗೆ ಕಳುಹಿಸುವ ಅಗತ್ಯವಿಲ್ಲ. ಹೆಚ್ಚುವರಿಯಾಗಿ, ಈ ಫೀಚರ್‌ಗಳಿಗೆ ಪವರ್ ನೀಡುವ ವೀಡಿಯೊ ಹಾಗೂ ಚಿತ್ರಗಳನ್ನು ನಾವು ಜಾಹೀರಾತಿನಿಂದ ಪ್ರತ್ಯೇಕವಾಗಿರಿಸುತ್ತೇವೆ ಮತ್ತು ಜಾಹೀರಾತು ವೈಯಕ್ತೀಕರಣಕ್ಕಾಗಿ ಅವುಗಳನ್ನು ಬಳಸುವುದಿಲ್ಲ.

ನನ್ನ ವೀಡಿಯೊ ದೃಶ್ಯಾವಳಿಯನ್ನು ಥರ್ಡ್-ಪಾರ್ಟಿ ಆ್ಯಪ್‌ಗಳು ಮತ್ತು ಸೇವೆಗಳ ಜೊತೆಗೆ ಹಂಚಿಕೊಂಡ ಉದಾಹರಣೆ ಏನು?

ಇದಕ್ಕೆ ಒಂದು ಉದಾಹರಣೆಯೆಂದರೆ, ನಿಮ್ಮ ಮನೆ ಭದ್ರತಾ ಸೇವೆಯ ಜೊತೆಗೆ Nest Cam ನಿಂದ ವೀಡಿಯೊ ಕ್ಲಿಪ್‌ಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ನಾವು ನೀಡಬಹುದು, ಆದ್ದರಿಂದ ಅವುಗಳು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತವೆ. ಹಾಗೆಯೇ, ನಿಮ್ಮ ಸಾಧನದ ಕ್ಯಾಮರಾವನ್ನು ಇತರ Google ಸೇವೆಗಳೊಂದಿಗೆ (ಲಭ್ಯವಿರುವಲ್ಲಿ, YouTube ಗೆ ವೀಡಿಯೊ ಅಪ್‌ಲೋಡ್ ಮಾಡುವುದು ಅಥವಾ Google Duo ಮೂಲಕ ವೀಡಿಯೊ ಕರೆ ಮಾಡುವುದು) ಬಳಸಬಹುದು ಎಂಬುದನ್ನು ನೆನಪಿಡಿ ಹಾಗೂ ನೀವು ಇದನ್ನು ಮಾಡಿದಾಗ, Google ನ ಗೌಪ್ಯತೆ ನೀತಿ ಅನ್ವಯಿಸುತ್ತದೆ.

ವಿಷುವಲ್ ಇಂಡಿಕೇಟರ್‌ಗಳು ಇಲ್ಲದೆಯೇ Google ಸರ್ವರ್‌ಗಳಿಗೆ ವೀಡಿಯೊ ದೃಶ್ಯಾವಳಿ ಕಳುಹಿಸಿದ ಸಂದರ್ಭಗಳಿವೆಯೇ?

ನಮ್ಮ ಕ್ಯಾಮರಾಗಳ ಕೆಲವು ಮಾದರಿಗಳು ಆಫ್‌ಲೈನ್‌ನಲ್ಲಿ ವೀಡಿಯೊ ದೃಶ್ಯಾವಳಿ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ. ಈ ಕ್ಯಾಮರಾಗಳಿಗೆ, ವೀಡಿಯೊ ದೃಶ್ಯಾವಳಿಯ ರೆಕಾರ್ಡಿಂಗ್ ಆದ ನಂತರ, ಕ್ಯಾಮರಾ ಆನ್‌ಲೈನ್‌ಗೆ ಹಿಂದಿರುಗಿದಾಗ ವೀಡಿಯೊ ದೃಶ್ಯಾವಳಿ ಅಪ್‌ಲೋಡ್ ಆಗುತ್ತದೆ. ಅಂದರೆ ನಿಮ್ಮ ಕ್ಯಾಮರಾ ನಮ್ಮ ಸರ್ವರ್‌ಗಳಿಗೆ ವೀಡಿಯೊ ದೃಶ್ಯಾವಳಿಯನ್ನು ಕಳುಹಿಸುವಾಗ ನೀವು ವಿಷುವಲ್ ಇಂಡಿಕೇಟರ್‌ಗಳನ್ನು ನೋಡದೇ ಇರಬಹುದು -- ಆದರೆ ಅಂತಹ ಸಂದರ್ಭಗಳಲ್ಲಿ, ಕ್ಯಾಮರಾವು ವಾಸ್ತವವಾಗಿ ವೀಡಿಯೊ ದೃಶ್ಯಾವಳಿಯನ್ನು ರೆಕಾರ್ಡ್ ಮಾಡುವಾಗ ವಿಷುವಲ್ ಇಂಡಿಕೇಟರ್‌ ಕಾಣಿಸುತ್ತದೆ.

ಮೈಕ್ರೊಫೋನ್‌ಗಳು

ನಿಮ್ಮ ಧ್ವನಿಯನ್ನು ಮಾತ್ರ ಬಳಸಿ ನಿಮ್ಮ ಮನೆಯಾದ್ಯಂತ ಸಾಧನಗಳನ್ನು ನಿಯಂತ್ರಿಸಲು ನಿಮಗೆ ಅವಕಾಶ ನೀಡುವುದು, ನೀವು ಮನೆಯಲ್ಲಿ ಇಲ್ಲದಿರುವಾಗ ನಿಮ್ಮ ಮನೆಯಲ್ಲಿ ಅನಿರೀಕ್ಷಿತ ಚಟುವಟಿಕೆಯನ್ನು ಪತ್ತೆಹಚ್ಚುವುದು ಮತ್ತು ಸ್ಮಾರ್ಟ್ ಸ್ಪೀಕರ್ ಅಥವಾ ಡಿಸ್‌ಪ್ಲೇ ಅನ್ನು ಬಳಸಿಕೊಂಡು ಧ್ವನಿ ಕರೆ ಮಾಡುವಂತಹ ಮನೆಯಲ್ಲಿನ ವಿವಿಧ ಉದ್ದೇಶಗಳನ್ನು ಮೈಕ್ರೋಫೋನ್‌ಗಳು ಪೂರೈಸುತ್ತವೆ.

ಮೈಕ್ರೊಫೋನ್‌ಗಳೊಂದಿಗಿನ ನಮ್ಮ ಎಲ್ಲಾ ಸಂಪರ್ಕಿತ ಮನೆ ಸಾಧನಗಳಿಗಾಗಿ, ನಾವು ನಿಮಗೆ ಬದ್ಧರಾಗಿದ್ದೇವೆ:

ನೀವು ಅಥವಾ ನಿಮ್ಮ ಮನೆಯಲ್ಲಿರುವ ಯಾರಾದರೂ ನಿಮ್ಮ Assistant ಜೊತೆಗೆ ಸಂವಹನ ನಡೆಸುತ್ತಿದ್ದೀರಿ ಎಂಬುದನ್ನು ನಾವು ಪತ್ತೆಹಚ್ಚಿದರೆ, (ಉದಾಹರಣೆಗೆ, “Ok Google” ಎಂದು ಹೇಳುವ ಮೂಲಕ) ಅಥವಾ ನೀವು ಅಗತ್ಯವಿರುವ ಫೀಚರ್‌ಗಳನ್ನು ಬಳಸಿದರೆ (ಉದಾಹರಣೆಗೆ, ಲಭ್ಯವಿರುವಲ್ಲಿ, Nest Cam ನಲ್ಲಿ ಸೌಂಡ್ ಅಲರ್ಟ್‌ಗಳು ಅಥವಾ ಆಡಿಯೊವನ್ನು ಸಕ್ರಿಯಗೊಳಿಸಿದ Nest Cam ವೀಡಿಯೊ ರೆಕಾರ್ಡಿಂಗ್‌ನಲ್ಲಿ). ನೀವು ಯಾವಾಗ ಬೇಕಾದರೂ ಮೈಕ್ರೊಫೋನ್‌ ಅನ್ನು ಆಫ್ ಮಾಡಬಹುದು.

ನಿಮ್ಮ ಮೈಕ್ರೊಫೋನ್ ಅನ್ನು ಆನ್ ಮಾಡಿದಾಗ ಮತ್ತು ಆಡಿಯೊವನ್ನು Google ಗೆ ಕಳುಹಿಸಿದಾಗ, ನಾವು ಸ್ಪಷ್ಟ ವಿಷುವಲ್ ಇಂಡಿಕೇಟರ್‌ ಅನ್ನು ಒದಗಿಸುತ್ತೇವೆ (ಉದಾಹರಣೆಗೆ, ನಿಮ್ಮ ಸಾಧನದ ಮೇಲಿರುವ ಫ್ಲ್ಯಾಶ್ ಆಗುವ ಡಾಟ್‌ಗಳು ಅಥವಾ ಸ್ಕ್ರೀನ್‌ನಲ್ಲಿನ ಇಂಡಿಕೇಟರ್‌).

ಆಡಿಯೊ ರೆಕಾರ್ಡಿಂಗ್‌ಗಳನ್ನು ನಿಮ್ಮ Google ಖಾತೆಯ ಜೊತೆಗೆ ಸಂಗ್ರಹಿಸಿದಾಗ (ಉದಾಹರಣೆಗೆ, ಲಭ್ಯವಿರುವಲ್ಲಿ, ನೀವು Nest Aware ಗೆ ಸಬ್‌ಸ್ಕ್ರೈಬ್ ಮಾಡಿದಾಗ‌ ನಿಮ್ಮ Nest Cam ದೃಶ್ಯಾವಳಿಯ ಆಡಿಯೊ), ನೀವು ಯಾವುದೇ ಸಮಯದಲ್ಲಿ ನಿಮ್ಮ ರೆಕಾರ್ಡಿಂಗ್‌ಗಳನ್ನು ಪ್ರವೇಶಿಸಬಹುದು, ಪರಿಶೀಲಿಸಬಹುದು ಮತ್ತು ಅಳಿಸಬಹುದು.

ನೀವು ಅಥವಾ ನಿಮ್ಮ ಮನೆಯ ಸದಸ್ಯರು ನಮಗೆ ಸುಸ್ಪಷ್ಟವಾಗಿ ಅನುಮತಿ ನೀಡಿದರೆ, ನಮ್ಮ ಸಾಧನಗಳ ಜೊತೆಗೆ ಕಾರ್ಯನಿರ್ವಹಿಸುವ ಥರ್ಡ್ ಪಾರ್ಟಿ ಆ್ಯಪ್‌ಗಳು ಮತ್ತು ಸೇವೆಗಳೊಂದಿಗೆ ಮಾತ್ರ ನಾವು ನಿಮ್ಮ ಸಾಧನಗಳಿಂದ ಆಡಿಯೊ ರೆಕಾರ್ಡಿಂಗ್‌ಗಳನ್ನು ಹಂಚಿಕೊಳ್ಳುತ್ತೇವೆ.

ನನ್ನ ಸಂಗ್ರಹಿಸಿದ ಆಡಿಯೊ ರೆಕಾರ್ಡಿಂಗ್‌ಗಳನ್ನು ನಾನು ಹೇಗೆ ಪರಿಶೀಲಿಸಬಹುದು ಮತ್ತು ಅಳಿಸಬಹುದು?

ಸಂಗ್ರಹಿಸಿದ ಆಡಿಯೊ ರೆಕಾರ್ಡಿಂಗ್‌ಗಳನ್ನು ನೀವು Nest ಆ್ಯಪ್ ಮೂಲಕ (Nest Cam ರೆಕಾರ್ಡಿಂಗ್‌ನ ಸಂದರ್ಭದಲ್ಲಿ) ಅಥವಾ ನನ್ನ ಚಟುವಟಿಕೆ (Google Assistant ಜೊತೆಗಿನ ಸಂವಹನಕ್ಕಾಗಿ) ಪರಿಶೀಲಿಸಬಹುದು ಮತ್ತು ಅಳಿಸಬಹುದು. ಧ್ವನಿ ಆಜ್ಞೆಗಳು ನೀವು ಇದರೊಂದಿಗೆ ಸಹ ನಿಮ್ಮ Google Assistant ಚಟುವಟಿಕೆಯನ್ನು ಅಳಿಸಬಹುದು.

ಜಾಹೀರಾತು ವೈಯಕ್ತೀಕರಣಕ್ಕೆ ತಿಳಿಸಲು ನನ್ನ Assistant ಧ್ವನಿ ಪ್ರಶ್ನೆಗಳನ್ನು ಬಳಸಲಾಗಿದೆಯೇ?

ನಿಮ್ಮ ಆಡಿಯೊ ರೆಕಾರ್ಡಿಂಗ್‌ಗಳನ್ನು ನಾವು ಜಾಹೀರಾತಿನಿಂದ ಪ್ರತ್ಯೇಕವಾಗಿರಿಸುತ್ತೇವೆ ಮತ್ತು ಅವುಗಳನ್ನು ಜಾಹೀರಾತು ವೈಯಕ್ತೀಕರಣಕ್ಕಾಗಿ ಬಳಸುವುದಿಲ್ಲ – ಆದರೆ ನಿಮ್ಮ Assistant ಜೊತೆಗೆ ನೀವು ಧ್ವನಿ ಮೂಲಕ ಸಂವಹನ ನಡೆಸಿದಾಗ, ಜಾಹೀರಾತು ವೈಯಕ್ತೀಕರಣಕ್ಕಾಗಿ ನಿಮ್ಮ ಆಸಕ್ತಿಗಳನ್ನು ತಿಳಿಸಲು ನಾವು ಆ ಸಂವಹನಗಳ ಪಠ್ಯವನ್ನು ಬಳಸಬಹುದು. ಜಾಹೀರಾತು ವೈಯಕ್ತೀಕರಣದಿಂದ ಸಂಪೂರ್ಣವಾಗಿ ಹೊರಗುಳಿಯುವುದನ್ನು ಒಳಗೊಂಡಂತೆ ನೀವು ನೋಡುವ ಜಾಹೀರಾತುಗಳನ್ನು, ನಿಯಂತ್ರಿಸಲು ನಿಮ್ಮ Google ಸೆಟ್ಟಿಂಗ್‌ಗಳನ್ನು ನೀವು ಯಾವಾಗ ಬೇಕಾದರೂ ಪರಿಶೀಲಿಸಬಹುದು. Google Assistant ಮತ್ತು ನಿಮಗೆ ಲಭ್ಯವಿರುವ ಆಯ್ಕೆಗಳ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.

ನನ್ನ ಆಡಿಯೊ ರೆಕಾರ್ಡಿಂಗ್‌ಗಳನ್ನು ಥರ್ಡ್-ಪಾರ್ಟಿ ಆ್ಯಪ್‌ಗಳು ಮತ್ತು ಸೇವೆಗಳ ಜೊತೆಗೆ ಹಂಚಿಕೊಂಡ ಉದಾಹರಣೆ ಏನು?

ಇದಕ್ಕೆ ಒಂದು ಉದಾಹರಣೆಯೆಂದರೆ, ನಿಮ್ಮ ಮನೆ ಭದ್ರತಾ ಸೇವೆಯ ಜೊತೆಗೆ Nest Cam ನಿಂದ ಆಡಿಯೊ ಕ್ಲಿಪ್‌ಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ನಾವು ನೀಡಬಹುದು, ಆದ್ದರಿಂದ ಅವುಗಳು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತವೆ.

ವಿಷುವಲ್ ಇಂಡಿಕೇಟರ್ ಇಲ್ಲದೆಯೇ ಆಡಿಯೊ ರೆಕಾರ್ಡಿಂಗ್‌ಗಳನ್ನು Google ಗೆ ಕಳುಹಿಸಿರುವ ಸಂದರ್ಭಗಳಿವೆಯೇ?

ಕೆಲವೊಮ್ಮೆ, ನಿಮ್ಮ Google Assistant ಕೋರಿಕೆಯನ್ನು ಸಾಧನದಲ್ಲಿ ಸ್ಥಳೀಯವಾಗಿ ಈಡೇರಿಸುವುದು ತ್ವರಿತವಾದ ಸಂದರ್ಭದಲ್ಲಿ, ವಿಷುವಲ್ ಇಂಡಿಕೇಟರ್ ಆಫ್ ಆಗಿ, ನಿಮ್ಮ ಕೋರಿಕೆಯು ಈಡೇರಿದ ನಂತರ ಮಾತ್ರ ನಿಮ್ಮ ಆಡಿಯೊ ರೆಕಾರ್ಡಿಂಗ್ ಅನ್ನು Google ಸರ್ವರ್‌ಗಳಿಗೆ ಕಳುಹಿಸಲಾಗುವುದು. ಈ ಸಂದರ್ಭಗಳಲ್ಲಿ, ಮೈಕ್ರೊಫೋನ್‌ ಸಕ್ರಿಯವಾಗಿದ್ದಾಗ ವಿಷುವಲ್ ಇಂಡಿಕೇಟರ್ ಕಾಣಿಸುತ್ತಿರುತ್ತದೆ, ಇದು Google ಸರ್ವರ್‌ಗಳಿಗೆ ಆಡಿಯೊ ಡೇಟಾ ಕಳುಹಿಸುವಾಗ ಪರಿಸ್ಥಿತಿ ಹೀಗಿರುವುದಿಲ್ಲ.

ಹೋಮ್ ಸೆನ್ಸರ್‌ಗಳು

ನಿಮ್ಮ ಮನೆ ಪರಿಸರದ ಕುರಿತ ಮಾಹಿತಿಯನ್ನು ಪತ್ತೆ ಹಚ್ಚುವ ಮತ್ತು ಮನೆಯಲ್ಲಿನ ಚಲನವಲನ ಹಾಗೂ ಯಾರಾದರೂ ಇದ್ದಾರೆಯೇ ಎಂಬುದನ್ನು ತಿಳಿಸುವ, ಆಂಬಿಯೆಂಟ್ ಲೈಟ್, ತಾಪಮಾನ, ತೇವಾಂಶವನ್ನು ಕಂಡು ಹಿಡಿಯುವ, ಒಳಗೆ ಏನು ಜರುಗುತ್ತಿದೆ ಎಂಬುದರ ಕುರಿತ ಸೆನ್ಸರ್‌ಗಳನ್ನು ನಮ್ಮ ಕೆಲವು ಸಾಧನಗಳು ಒಳಗೊಂಡಿರುತ್ತವೆ. ನಿಮ್ಮ ಮನೆಯು ನಿಮ್ಮ ಉತ್ತಮ ಕಾಳಜಿ ವಹಿಸಲು ಸಹಾಯ ಮಾಡುವುದು, ನೀವು ಮನೆಯಿಂದ ಹೊರಗಿರುವಾಗ ನಿಮ್ಮ Nest Learning Thermostat, ಲಭ್ಯವಿರುವಲ್ಲಿ, ತನ್ನನ್ನು ತಾನೇ ಕಡಿಮೆಗೊಳಿಸಿದಾಗ ಹಾಗೂ ನಿಮ್ಮ ಸಾಧನಗಳು ಮತ್ತು ಸೇವೆಗಳನ್ನು ಉತ್ತಮಗೊಳಿಸಲು ನಮಗೆ ಸಹಾಯ ಮಾಡುವಂತಹ ವಿವಿಧ ಉದ್ದೇಶಗಳನ್ನು ಈ ಸೆನ್ಸರ್‌ಗಳು ಪೂರೈಸುತ್ತವೆ.

ಈ ಪರಿಸರ ಮತ್ತು ಚಟುವಟಿಕೆ ಪತ್ತೆಹಚ್ಚುವ ಸೆನ್ಸರ್‌ಗಳೊಂದಿಗಿನ ನಮ್ಮ ಎಲ್ಲಾ ಕನೆಕ್ಟ್ ಆಗಿರುವ ಮನೆ ಸಾಧನಗಳಿಗಾಗಿ, ನಾವು ನಿಮಗೆ ಈ ಕೆಳಗಿನವುಗಳ ಕುರಿತು ಬದ್ಧರಾಗಿದ್ದೇವೆ:

ನಿಮ್ಮ ಮನೆಯ ಪರಿಸರದಿಂದ ಸಂಗ್ರಹಿಸಲಾದ ಸೆನ್ಸರ್ ರೀಡಿಂಗ್‌ಗಳು ನಮ್ಮ ಸಾಧನಗಳು ಮತ್ತು ಸೇವೆಗಳಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತೇವೆ. ಅದಕ್ಕಾಗಿಯೇ ನಾವು ಈ ನಮ್ಮ ಸಾಧನಗಳಲ್ಲಿನ ಸೆನ್ಸರ್‌ಗಳಿಗೆ ಮಾರ್ಗಸೂಚಿ ಅನ್ನು ಪ್ರಕಟಿಸಿದ್ದೇವೆ.

ನೀವು ಅಥವಾ ನಿಮ್ಮ ಮನೆಯ ಸದಸ್ಯರು ನಮಗೆ ಸುಸ್ಪಷ್ಟವಾಗಿ ಅನುಮತಿ ನೀಡಿದರೆ, ನಮ್ಮ ಸಾಧನಗಳ ಜೊತೆಗೆ ಕಾರ್ಯನಿರ್ವಹಿಸುವ ಥರ್ಡ್ ಪಾರ್ಟಿ ಆ್ಯಪ್‌ಗಳು ಮತ್ತು ಸೇವೆಗಳೊಂದಿಗೆ ಮಾತ್ರ ನಾವು ನಿಮ್ಮ ಸಾಧನದ ಸೆನ್ಸಾರ್ ಡೇಟಾವನ್ನು ಹಂಚಿಕೊಳ್ಳುತ್ತೇವೆ.

ನನ್ನ ಮನೆಯಿಂದ ಪರಿಸರ ಮತ್ತು ಚಟುವಟಿಕೆ ಪತ್ತೆಹಚ್ಚುವ ಸೆನ್ಸರ್‌ನಿಂದ ಡೇಟಾವನ್ನು Google ಏಕೆ ಸಂಗ್ರಹಿಸುತ್ತದೆ ಮತ್ತು ಅದನ್ನು ಹೇಗೆ ಬಳಸಲಾಗುತ್ತದೆ?

ನಮ್ಮ ಸಾಧನಗಳು ಪರಿಸರ ಮತ್ತು ಚಟುವಟಿಕೆ ಸೆನ್ಸರ್‌ಗಳನ್ನು ಒಳಗೊಂಡಿರುತ್ತವೆ, ಇವು ನಿಮ್ಮ ಮನೆಯ ಪರಿಸರದ ಬಗ್ಗೆ ಮತ್ತು ಅಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ, ಉದಾಹರಣೆಗೆ ಯಾವುದೇ ಚಲನೆ, ಯಾರಾದರೂ ಮನೆಯಲ್ಲಿ ಇದ್ದಾರೋ ಅಥವಾ ಇಲ್ಲವೋ ಎಂಬುದನ್ನು ಹಾಗೂ ಸಾಕಷ್ಟು ಬೆಳಕು, ತಾಪಮಾನ ಮತ್ತು ತೇವಾಂಶದ ಕುರಿತು ಮಾಹಿತಿಯನ್ನು ಪತ್ತೆ ಹಚ್ಚುತ್ತವೆ. Google ಗೆ ದಿನನಿತ್ಯ ಕಳುಹಿಸಲಾಗುವ ಈ ಸೆನ್ಸರ್‌ಗಳ ಡೇಟಾವನ್ನು ಹಲವಾರು ರೀತಿಯಲ್ಲಿ ಬಳಸಲಾಗುತ್ತದೆ. ನಿಮ್ಮ ಮನೆ ನಿಮ್ಮ ಕುರಿತು ಇನ್ನಷ್ಟು ಕಾಳಜಿ ಮಾಡಲು ಸಹಾಯ ಮಾಡುತ್ತದೆ, ನಿಮ್ಮ ಸಾಧನಗಳು ಹಾಗೂ ಸೇವೆಗಳು ಇನ್ನಷ್ಟು ಪರಿಣಾಮಕಾರಿಯಾಗಿರಲು ಸಹಾಯ ಮಾಡುತ್ತದೆ ಹಾಗೂ ನಿಮಗೆ ಸದಾಕಾಲ ಮಾಹಿತಿ ನೀಡುತ್ತಿರುತ್ತದೆ. ಉದಾಹರಣೆಗೆ:

  • ನಿಮ್ಮ Nest Learning Thermostat ನಲ್ಲಿನ ತಾಪಮಾನ ಮತ್ತು ತೇವಾಂಶ ಸೆನ್ಸರ್‌ಗಳು, ಲಭ್ಯವಿರುವಲ್ಲಿ, ವಿದ್ಯುತ್ ಅನ್ನು ಉಳಿಸುವುದರ ಜೊತೆಗೆ ನಿಮ್ಮ ಮನೆ ಆರಾಮದಾಯಕವಾಗಿರಲು ಸಹಾಯ ಮಾಡುತ್ತವೆ.
  • ನೀವು ಹೊರಟಾಗ ಮತ್ತು ನೀವು ಹಿಂತಿರುಗಿದಾಗ ನಿಮ್ಮ ಮನೆಯಲ್ಲಿ Nest ಸಾಧನಗಳ ನಡವಳಿಕೆಯನ್ನು ಸ್ವಯಂಚಾಲಿತವಾಗಿ ಬದಲಿಸಲು ಮನೆಯೊಳಗೆ/ಮನೆ ಹೊರಗಿರುವಾಗ ಬೆಂಬಲವು ನಿಮ್ಮ ಮನೆಯಲ್ಲಿ ಅನೇಕ Nest ಸಾಧನಗಳಲ್ಲಿ ಚಟುವಟಿಕೆ ಪತ್ತೆಹಚ್ಚುವ ಸೆನ್ಸರ್ ಅನ್ನು ಬಳಸುತ್ತದೆ.
  • ನೇರ ಸೂರ್ಯನ ಬೆಳಕು, ಥರ್ಮೋಸ್ಟಾಟ್‌ಗಳು ಇರುವುದಕ್ಕಿಂತಲೂ ಬೆಚ್ಚಗಿರುತ್ತದೆ ಎಂದು ಪತ್ತೆಹಚ್ಚಲು ನಮ್ಮ ಗ್ರಾಹಕರಲ್ಲಿನ ಥರ್ಮೋಸ್ಟಾಟ್‌ಗಳಿಂದ ಒಟ್ಟುಗೂಡಿಸಲ್ಪಟ್ಟ ಆಂಬಿಯೆಂಟ್ ಲೈಟ್ ಮತ್ತು ತಾಪಮಾನ ಸೆನ್ಸರ್ ಡೇಟಾವನ್ನು ನಾವು ಬಳಸಿದ್ದೇವೆ, ಆದ್ದರಿಂದ ನಾವು Sunblock, ಅನ್ನು ಪರಿಚಯಿಸಿದ್ದೇವೆ.
  • ನಮ್ಮ ಸಾಧನಗಳು ಮತ್ತು ಸೇವೆಗಳ ಸಮಸ್ಯೆಗಳನ್ನು ನಿವಾರಿಸಲು ಮತ್ತು ಕಾರ್ಯಕ್ಷಮತೆ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯನ್ನು ಸುಧಾರಿಸಲು, – ಉದಾಹರಣೆಗೆ, ಹವಾಮಾನ ಪರಿಸ್ಥಿತಿಗಳು ಬ್ಯಾಟರಿ ಬಾಳಿಕೆ ಮೇಲೆ ಉಂಟು ಮಾಡುವ ಪರಿಣಾಮವನ್ನು ಅಳೆಯಲು ನಮ್ಮ ಸಾಧನಗಳಿಂದ ನಾವು ತಾಪಮಾನ ಮತ್ತು ತೇವಾಂಶ ಡೇಟಾವನ್ನು ಬಳಸುತ್ತೇವೆ.
  • ನಿಮಗೆ ಆಸಕ್ತಿ ಇರಬಹುದಾದ ಸಂಪರ್ಕಿತ ಮನೆಯ ಸೇವೆಗಳಾದ ಎನರ್ಜಿ ಮತ್ತು ಮನೆ ಸುರಕ್ಷತೆ ಪ್ರೋಗ್ರಾಂಗಳನ್ನು ಒಳಗೊಂಡಂತೆ, ಲಭ್ಯವಿರುವಲ್ಲಿ, ನಿಮಗೆ ಅಪ್‌ಡೇಟ್‌ಗಳ ಮಾಹಿತಿಯನ್ನು ನೀಡಲು ನಾವು ಸೆನ್ಸರ್ ಡೇಟಾವನ್ನು ಸಹ ಬಳಸಬಹುದು – Google ನಿಂದ ಪ್ರಚಾರ ಇಮೇಲ್‌ಗಳನ್ನು ಸ್ವೀಕರಿಸುವುದನ್ನು ನೀವು ಬಯಸುತ್ತೀರೋ ಇಲ್ಲವೋ ಎಂಬ ನಿಮ್ಮ ಆಯ್ಕೆಯನ್ನು ನಾವು ಯಾವಾಗಲೂ ಗೌರವಿಸುತ್ತೇವೆ.
  • ಜಾಹೀರಾತು ವೈಯಕ್ತೀಕರಣಕ್ಕಾಗಿ ನಾವು ಪರಿಸರ ಮತ್ತು ಚಟುವಟಿಕೆ ಸೆನ್ಸರ್ ಡೇಟಾವನ್ನು ಬಳಸುವುದಿಲ್ಲ. ಉದಾಹರಣೆಗೆ, ನಿಮ್ಮ Nest Hub (2ನೇ ತಲೆಮಾರು) ನಿಂದ ನಾವು ನಿದ್ರೆಯ ಡೇಟಾವನ್ನು, ಇದು ಲಭ್ಯವಿರುವಲ್ಲಿ, ಜಾಹೀರಾತು ವೈಯಕ್ತೀಕರಣಕ್ಕಾಗಿ ಬಳಸುವುದಿಲ್ಲ. (ನಿಮ್ಮ ಕನೆಕ್ಟ್ ಮಾಡಿದ ಮನೆಯ ಸಾಧನಗಳಿಗೆ ಸಂಬಂಧಿಸಿದ ಕೆಲವು ವಿನಂತಿಗಳನ್ನು ಪೂರೈಸಲು ನೆನಪಿಡಿ - ಉದಾಹರಣೆಗೆ, “Ok Google, ಒಳಗೆ ತಾಪಮಾನ ಏನಿದೆ?” - ನಿಮ್ಮ Assistant ಸೆನ್ಸರ್ ರೀಡಿಂಗ್ ಅನ್ನು ಪಡೆಯಬಹುದು. Google Assistant ಮತ್ತು ನಿಮಗೆ ಲಭ್ಯವಿರುವ ಆಯ್ಕೆಗಳ ಕುರಿತು ಇಲ್ಲಿ.)
  • ಇನ್ನಷ್ಟು ತಿಳಿಯಿರಿ
  • ನಿಮ್ಮ ಖಾತೆಯನ್ನು ನೀವು ಅಳಿಸಿದಾಗ, ನಮ್ಮ ಇರಿಸಿಕೊಳ್ಳುವಿಕೆ ಕಾರ್ಯನೀತಿ.
  • ಯಲ್ಲಿ ವಿವರಿಸಿದಂತೆ ಈ ಸೆನ್ಸರ್ ಡೇಟಾವನ್ನು ಅಳಿಸಲಾಗುವುದು

ನನ್ನ ಸೆನ್ಸರ್ ಡೇಟಾವನ್ನು ಥರ್ಡ್-ಪಾರ್ಟಿ ಆ್ಯಪ್‌ಗಳು ಮತ್ತು ಸೇವೆಗಳ ಜೊತೆಗೆ ಹಂಚಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆ ಏನು?

ಇದಕ್ಕೆ ಒಂದು ಉದಾಹರಣೆಯೆಂದರೆ ರಶ್ ಅವರ್ ರಿವಾರ್ಡ್ಸ್ ನಂತಹ ಎನರ್ಜಿ ಉಳಿಸುವ ಪ್ರೋಗ್ರಾಂಗಳು ಮತ್ತು ಸೇವೆಗಳಿಂದ, ಇವುಗಳು ಲಭ್ಯವಿರುವಲ್ಲಿ, ಪ್ರಯೋಜನ ಪಡೆಯಲು ನೀವು ಯುಟಿಲಿಟಿ ಕಂಪನಿಗಳ ಜೊತೆಗೆ ಡೇಟಾವನ್ನು ಹಂಚಿಕೊಳ್ಳವುದನ್ನು ಆಯ್ಕೆ ಮಾಡಬಹುದು.

ವೈಫೈ ಡೇಟಾ

Google Wifi ಸಾಧನಗಳು, ಇವುಗಳು ಲಭ್ಯವಿರುವಲ್ಲಿ, ರೂಟರ್ ಸಿಸ್ಟಂಗಳಾಗಿದ್ದು, ಪೂರ್ಣ-ಮನೆ ವೈ-ಫೈ ಮೆಶ್ ನೆಟ್‌ವರ್ಕ್ ರಚಿಸಲು ಅವು ನಿಮ್ಮ ಮೋಡೆಮ್ ಮತ್ತು ಇಂಟರ್ನೆಟ್ ಸೇವೆ ಪೂರೈಕೆದಾರರೊಂದಿಗೆ ಕಾರ್ಯನಿರ್ವಹಿಸುತ್ತವೆ. ನಿಮ್ಮ ವೈ-ಫೈ ಕವರೇಜ್ ಮತ್ತು ಅನುಭವವನ್ನು ಒದಗಿಸಲು ಮತ್ತು ಸುಧಾರಿಸಲು, ಈ ಸಾಧನಗಳು ನಿಮ್ಮ ನೆಟ್‌ವರ್ಕ್ ಕಾರ್ಯಕ್ಷಮತೆಯ ಕುರಿತು ಡೇಟಾವನ್ನು ಬಳಸುತ್ತವೆ (ಉದಾಹರಣೆಗೆ, ನೆಟ್‌ವರ್ಕ್ ವೇಗ ಮತ್ತು ಬ್ಯಾಂಡ್‌ವಿಡ್ತ್ ಬಳಕೆ). ಯಾವ ಸಾಧನಗಳನ್ನು ಕನೆಕ್ಟ್ ಮಾಡಲಾಗಿದೆ ಮತ್ತು ಅವುಗಳು ಎಷ್ಟು ಬ್ಯಾಂಡ್‌ವಿಡ್ತ್ ಬಳಸುತ್ತವೆ ಎಂಬುದನ್ನು ನೋಡಲು ಸಹ ಇದು ನಿಮ್ಮನ್ನು ಅನುಮತಿಸುತ್ತದೆ.

Google ವೈ-ಫೈ ಸಾಧನಗಳಿಗಾಗಿ ನಾವು ಈ ಕೆಳಗಿನವುಗಳ ಕುರಿತು ನಿಮಗೆ ಬದ್ಧರಾಗಿರುತ್ತೇವೆ:

ನೀವು ಭೇಟಿ ನೀಡುವ ವೆಬ್‌ಸೈಟ್‌ಗಳನ್ನು Google WiFi ಸಾಧನಗಳು ಟ್ರ್ಯಾಕ್ ಮಾಡುವುದಿಲ್ಲ ಅಥವಾ ನಿಮ್ಮ ವೈ-ಫೈ ನೆಟ್‌ವರ್ಕ್‌ನಲ್ಲಿನ ಟ್ರಾಫಿಕ್ ವಿಷಯವನ್ನು ಮೇಲ್ವಿಚಾರಣೆ ಮಾಡುವುದಿಲ್ಲ.

ನಿಮ್ಮ ವೈ-ಫೈ ನೆಟ್‌ವರ್ಕ್ ಕಾರ್ಯಕ್ಷಮತೆಯ ಡೇಟಾವನ್ನು ನಾವು ಜಾಹೀರಾತಿನಿಂದ ಪ್ರತ್ಯೇಕವಾಗಿರಿಸುತ್ತೇವೆ ಮತ್ತು ಜಾಹೀರಾತು ವೈಯಕ್ತೀಕರಣಕ್ಕಾಗಿ ಅದನ್ನು ಬಳಸುವುದಿಲ್ಲ.

ನೀವು ಅಥವಾ ನಿಮ್ಮ ವೈ-ಫೈ ನೆಟ್‌ವರ್ಕ್‌ನ ನಿರ್ವಾಹಕರು ನಮಗೆ ಅನುಮತಿ ನೀಡಿದರೆ, ನಿಮ್ಮ Google Wi-Fi ನಿಂದ ಥರ್ಡ್ ಪಾರ್ಟಿ ಆ್ಯಪ್‌ಗಳು ಮತ್ತು ನಮ್ಮ ಕನೆಕ್ಟ್ ಮಾಡಿದ ಮನೆಯ ಸಾಧನಗಳ ಜೊತೆಗೆ ಕೆಲಸ ಮಾಡುವ ಸೇವೆಗಳೊಂದಿಗೆ ಮಾತ್ರ ನಾವು ವೈ-ಫೈ ನೆಟ್‌ವರ್ಕ್ ಕಾರ್ಯಕ್ಷಮತೆ ಡೇಟಾವನ್ನು ಹಂಚಿಕೊಳ್ಳುತ್ತೇವೆ.

ನನ್ನ Google WiFi ರೂಟರ್‌ನಿಂದ ಡೇಟಾವನ್ನು Google ಗೆ ಏಕೆ ಕಳುಹಿಸಲಾಗಿದೆ ಮತ್ತು ಅದನ್ನು ಹೇಗೆ ಬಳಸಲಾಗುತ್ತದೆ?

ನೀವು ಹೊಂದಿರುವ ಕನೆಕ್ಟ್ ಮಾಡಿರುವ ಸಾಧನಗಳ ವಿಧಗಳು ಮತ್ತು ಅವುಗಳ ನೆಟ್‌ವರ್ಕ್ ಬಳಕೆಯ ಕುರಿತ ಮಾಹಿತಿಯನ್ನು Google Wifi ಇಲ್ಲಿ ವಿವರಿಸಿರುವಂತೆ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ. ಇಲ್ಲಿವಿವರಿಸಿದ ಕ್ಲೌಡ್ ಸೇವೆಗಳು, ವೈಫೈ ಪಾಯಿಂಟ್ ಅಂಕಿಅಂಶಗಳು ಮತ್ತು ಆ್ಯಪ್ ಅಂಕಿಅಂಶಗಳ ಡೇಟಾವನ್ನು (ಇದನ್ನು ನಾವು “ವೈ-ಫೈ ನೆಟ್‌ವರ್ಕ್ ಕಾರ್ಯಕ್ಷಮತೆ ಡೇಟಾ” ಎಂದು ಉಲ್ಲೇಖಿಸುತ್ತೇವೆ) ಜಾಹೀರಾತು ವೈಯಕ್ತೀಕರಣಕ್ಕಾಗಿ ಬಳಸಲಾಗುವುದಿಲ್ಲ. ನಿಮ್ಮ ಇಂಟರ್ನೆಟ್ ಕನೆಕ್ಟಿವಿಟಿಯನ್ನು ಸುಧಾರಿಸಲು ಹೆಚ್ಚುವರಿ ವೈಫೈ ಪಾಯಿಂಟ್‌ನಂತಹ ನಿಮಗೆ ಸಹಾಯ ಮಾಡಬಹುದೆಂದು ನಾವು ಭಾವಿಸುವ, ಕನೆಕ್ಟ್ ಮಾಡಿದ ಮನೆ ಸಾಧನಗಳು ಮತ್ತು ಸೇವೆಗಳು ಸೇರಿದಂತೆ, Google ಸೇವೆಗಳ ಅಪ್‌ಡೇಟ್‌ಗಳ ಕುರಿತು ನಿಮಗೆ ತಿಳಿಸಲು ನಾವು ಈ ಡೇಟಾವನ್ನು ಬಳಸಬಹುದು. ಇಲ್ಲಿ.

ವಿವರಿಸಿದಂತೆ ಈ ಡೇಟಾ ಸಂಗ್ರಹಣೆಯ ಕೆಲವು ಭಾಗಗಳಿಂದ ನೀವು ಹೊರಗುಳಿಯಬಹುದು ನೀವು ಭೇಟಿ ನೀಡುವ ವೆಬ್‌ಸೈಟ್‌ಗಳನ್ನು Google Wifi ಟ್ರ್ಯಾಕ್ ಮಾಡುವುದಿಲ್ಲ ಮತ್ತು ನಿಮ್ಮ ವೈ-ಫೈ ನೆಟ್‌ವರ್ಕ್‌ನ ವಿಷಯದ ಟ್ರಾಫಿಕ್‌ ಮೇಲೆ ಅದು ನಿಗಾ ವಹಿಸುವುದಿಲ್ಲ. Google Wifi ನಿಮ್ಮ ಡೀಫಾಲ್ಟ್ DNS ಪೂರೈಕೆದಾರರನ್ನು “ಸ್ವಯಂಚಾಲಿತ” ಎಂದು ಹೊಂದಿಸುತ್ತದೆ, ಕೆಲವು ನಿಬಂಧನೆಗಳನ್ನು ಪೂರೈಸಿದರೆ Google ಸಾರ್ವಜನಿಕ DNS ಅಥವಾ ನಿಮ್ಮ ಇಂಟರ್ನೆಟ್ ಸೇವೆ ಪೂರೈಕೆದಾರರ (ISP) DNS ಅನ್ನು ಅದು ಬಳಸುತ್ತದೆ. Google ಸಾರ್ವಜನಿಕ DNS ಏನನ್ನು ಸಂಗ್ರಹಿಸುತ್ತದೆ ಎಂಬುದರ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ನೀವು ಯಾವ ಸಮಯದಲ್ಲಿ ಬೇಕಾದರೂ Google Home ಆ್ಯಪ್‌ನ ಸುಧಾರಿತ ನೆಟ್‌ವರ್ಕ್ ಸೆಟ್ಟಿಂಗ್‌ಗಳು ಇಲ್ಲಿ ನಿಮ್ಮ DNS ಪೂರೈಕೆದಾರರನ್ನು ನೀವು ಬದಲಾಯಿಸಬಹುದು.

ನನ್ನ ವೈ-ಫೈ ನೆಟ್‌ವರ್ಕ್ ಕಾರ್ಯಕ್ಷಮತೆಯ ಡೇಟಾವನ್ನು ಥರ್ಡ್-ಪಾರ್ಟಿ ಆ್ಯಪ್‌ಗಳು ಮತ್ತು ಸೇವೆಗಳ ಜೊತೆಗೆ ಹಂಚಿಕೊಂಡ ಉದಾಹರಣೆ ಏನು?

ಇದಕ್ಕೆ ಒಂದು ಉದಾಹರಣೆಯೆಂದರೆ, ನಿಮ್ಮ ವೈ-ಫೈ ನೆಟ್‌ವರ್ಕ್ ಕಾರ್ಯಕ್ಷಮತೆಯ ಡೇಟಾವನ್ನು ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರ ಜೊತೆಗೆ ಹಂಚಿಕೊಳ್ಳಲು ನಿಮಗೆ ಸಾಧ್ಯವಾಗಬಹುದು, ಆದ್ದರಿಂದ ನಿಮ್ಮ ವೈ-ಫೈ ಅಥವಾ ಇಂಟರ್ನೆಟ್ ಕನೆಕ್ಟಿವಿಟಿ ಸಮಸ್ಯೆಗಳನ್ನು ನಿವಾರಿಸಲು ಅವರು ನಿಮಗೆ ಸಹಾಯ ಮಾಡಬಹುದು.

Nest
Google Store ನಲ್ಲಿ
Nest ಗಾಗಿ ಶಾಪಿಂಗ್ ಮಾಡಿ.
ನಾವು ತಯಾರಿಸುವ ಪ್ರತಿಯೊಂದು ಪ್ರೊಡಕ್ಟ್‌ನಲ್ಲೂ
ಸುರಕ್ಷತೆಯನ್ನು ಹೇಗೆ ನಿರ್ಮಿಸಲಾಗಿದೆ ಎಂದು ತಿಳಿಯಿರಿ.