ಕುಟುಂಬ-ಸ್ನೇಹಿ ಅನುಭವಗಳನ್ನು ನಿರ್ಮಿಸುವುದು.
ನಮ್ಮ ಹಲವು ಪ್ರಾಡಕ್ಟ್‌ಗಳಲ್ಲಿ ನಾವು – ಸ್ಮಾರ್ಟ್ ಫಿಲ್ಟರ್‌ಗಳು, ಸೈಟ್ ಬ್ಲಾಕರ್‌ಗಳು ಮತ್ತು ವಿಷಯ ರೇಟಿಂಗ್‌ಗಳಂತಹ – ವಿಶೇಷ ಫೀಚರ್‌ಗಳನ್ನು ನಿರ್ಮಿಸಿದ್ದೇವೆ. ನಿಮ್ಮ ಕುಟುಂಬದ ಪಾಲಿಗೆ ಅವು ಖುಷಿ ಕೊಡುವುದು ಶತಸಿದ್ಧ!.
ಮಕ್ಕಳಿಗೆ ಸಹಾಯ ಮಾಡುವ ವಿಷಯ
ಹೊಂದಿರುವ ಟ್ಯಾಬ್ಲೆಟ್ ಅನುಭವ.
-
ಮಕ್ಕಳ ಕುತೂಹಲವನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ
ಪ್ರಾಣಿಗಳೇ ಇರಲಿ ಅಥವಾ ಕಲಾ ಪ್ರಾಜೆಕ್ಟ್ಗಳೇ ಆಗಿರಲಿ, ಮಕ್ಕಳು ತಾವು ಪ್ರೀತಿಸುವ ಸಂಗತಿಗಳಲ್ಲಿ ಪರಿಣಿತರಾಗುತ್ತಾರೆ. ಇದಕ್ಕಾಗಿಯೇ, Kids Space ನಿಮ್ಮ ಮಗು ಆಯ್ಕೆಮಾಡುವ ಆಸಕ್ತಿಗಳನ್ನು ಆಧರಿಸಿ ಅವರಿಗಾಗಿ ಗುಣಮಟ್ಟದ ವಿಷಯವನ್ನು ಶಿಫಾರಸು ಮಾಡುತ್ತದೆ. ಶಿಫಾರಸು ಮಾಡಿದ ವಿಷಯದ ಜೊತೆಗೆ, ಮಕ್ಕಳು ಇತ್ತೀಚೆಗೆ ತಮ್ಮನ್ನು ಆಕರ್ಷಿಸಿದ ಸಂಗತಿಗಳನ್ನು ಹೊಸದಾದ ಮತ್ತು ತಲ್ಲೀನಗೊಳಿಸುವ ವಿಧಾನಗಳ ಮೂಲಕ ಎಕ್ಸ್‌ಪ್ಲೋರ್ ಮಾಡಬಹುದು. ಮಕ್ಕಳು ತಮ್ಮ ಸ್ವಂತ ಪಾತ್ರಗಳನ್ನು ರಚಿಸುವ ಮೂಲಕ ತಮ್ಮ ಅನುಭವವನ್ನು ಕಸ್ಟಮೈಸ್ ಸಹ ಮಾಡಬಹುದು.
-
ಶಿಫಾರಸು ಮಾಡಲಾದ ಆ್ಯಪ್ಗಳು, ಪುಸ್ತಕಗಳು ಮತ್ತು ವೀಡಿಯೊಗಳು
ಮಗುವೊಂದು Kids Space ಅನ್ನು ತೆರೆದಾಗ, ಅವರಿಗೆ ಗುಣಮಟ್ಟದ ವಿಷಯದ ಲೈಬ್ರರಿ ಕಾಣಿಸುತ್ತದೆ. ಮಕ್ಕಳು ಆಡುತ್ತಾ ಕಲಿಯುವ ಹೊಸ ವಿಧಾನಗಳನ್ನು ಕಂಡುಕೊಳ್ಳಲು ಆ್ಯಪ್ಗಳು, ಗೇಮ್‌ಗಳು, ಪುಸ್ತಕಗಳು ಮತ್ತು ವೀಡಿಯೊಗಳ ಶಿಫಾರಸುಗಳನ್ನು ಎಕ್ಸ್‌ಪ್ಲೋರ್ ಮಾಡಬಹುದು.†
-
ಪೋಷಕರ ನಿಯಂತ್ರಣಗಳ ಮೂಲಕ ಮಿತಿಗಳನ್ನು ಸೆಟ್ ಮಾಡುವುದು
ಫ್ಯಾಮಿಲಿ ಲಿಂಕ್ನಲ್ಲಿನ ಪೋಷಕರ ನಿಯಂತ್ರಣಗಳನ್ನು ಬಳಸಿಕೊಂಡು ನಿಮ್ಮ ಸ್ವಂತ ಸಾಧನದ ಮೂಲಕವೇ ವಿಷಯವನ್ನು ನಿರ್ವಹಿಸುವ, ವೀಕ್ಷಣಾ ಅವಧಿಯ ಮಿತಿಗಳನ್ನು ಸೆಟ್ ಮಾಡುವ ಮತ್ತು ಇನ್ನಷ್ಟು ಕ್ರಿಯೆಗಳನ್ನು ಮಾಡುವ ಮೂಲಕ ನಿಮ್ಮ ಮಗುವಿನ ಅನುಭವಗಳಿಗೆ ನೀವು ಮಾರ್ಗದರ್ಶನ ನೀಡಬಹುದು.
YouTube Kids
YouTube Kids ಮೂಲಕ ಕಲಿಕೆಯ ಮತ್ತು ಮೋಜಿನ ಜಗತ್ತನ್ನು ಅನ್ವೇಷಿಸಿ
ಆನ್‌ಲೈನ್ ವೀಡಿಯೊಗಳ ಮೂಲಕ ತಮ್ಮ ಆಸಕ್ತಿಗಳನ್ನು ಎಕ್ಸ್‌ಪ್ಲೋರ್ ಮಾಡಲು ಮಕ್ಕಳಿಗಾಗಿ ಸುರಕ್ಷಿತ ಪರಿಸರವನ್ನು ಒದಗಿಸಲು ನಾವು YouTube Kids ಅನ್ನು ರಚಿಸಿದ್ದೇವೆ. ನೀವು YouTube Kids ಆ್ಯಪ್ ಅನ್ನು ಡೌನ್‌ಲೋಡ್ ಮಾಡಿದರೂ, ವೆಬ್‌ನಲ್ಲಿ ನಮ್ಮ ಸೈಟ್‌ಗೆ ಭೇಟಿ ನೀಡಿದರೂ ಅಥವಾ ನಿಮ್ಮ ಸ್ಮಾರ್ಟ್ ಟಿವಿಯಲ್ಲಿ YouTube Kids ಅನ್ನು ವೀಕ್ಷಿಸಿದರೂ, ನಿಮ್ಮ ಎಲ್ಲಾ ಸಾಧನಗಳಾದ್ಯಂತ ನೀವು ವಿಭಿನ್ನ ವಿಷಯಗಳಿಗೆ ಸಂಬಂಧಿಸಿದ ಕುಟುಂಬ-ಸ್ನೇಹಿ ವೀಡಿಯೊಗಳನ್ನು ಹುಡುಕಬಹುದು.
Google Play
ನಿಮ್ಮ ಮಗುವಿಗಾಗಿ Google Play ನಲ್ಲಿನ "ಶಿಕ್ಷಕರು ಅನುಮೋದಿಸಿರುವ" ವಿಷಯ
ನಿಮ್ಮ ಮಗುವಿಗೆ ಸರಿಹೊಂದುವ ವಿಷಯವನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡಲು ನಾವು ದೇಶದೆಲ್ಲೆಡೆಯ ಶೈಕ್ಷಣಿಕ ತಜ್ಞರು ಮತ್ತು ಶಿಕ್ಷಕರ ಜೊತೆಗೂಡಿದ್ದೇವೆ. ಕಲಿಕೆಯನ್ನು ಸಮೃದ್ಧಗೊಳಿಸುವ ಮತ್ತು ಮನರಂಜಿಸುವ "ಶಿಕ್ಷಕರು ಅನುಮೋದಿಸಿದ" ಆ್ಯಪ್‌ಗಳನ್ನು ಹುಡುಕಲು Google Play ಸ್ಟೋರ್‌ನಲ್ಲಿನ ನಮ್ಮ ಮಕ್ಕಳ ಟ್ಯಾಬ್ ಅನ್ನು ಬ್ರೌಸ್ ಮಾಡಿ. ಆ್ಯಪ್ ವಿವರಗಳು ಪುಟದಲ್ಲಿ, ಶಿಕ್ಷಕರು ಆ್ಯಪ್‌ಗಳಿಗೆ ಹೆಚ್ಚಿನ ರೇಟಿಂಗ್ ಏಕೆ ನೀಡುತ್ತಾರೆ ಎಂಬುದನ್ನು ನೀವು ನೋಡಬಹುದು ಮತ್ತು ಆ್ಯಪ್ ವಯಸ್ಸಿಗೆ ಸೂಕ್ತವಾಗಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಷಯ ರೇಟಿಂಗ್‌ಗಳನ್ನು ಪರಿಶೀಲಿಸಬಹುದು. ಆ್ಯಪ್ ಜಾಹೀರಾತುಗಳನ್ನು ಒಳಗೊಂಡಿದೆಯೇ, ಆ್ಯಪ್‌ನಲ್ಲಿನ ಖರೀದಿಗಳನ್ನು ಅನುಮತಿಸುತ್ತದೆಯೇ ಅಥವಾ ಅದಕ್ಕೆ ಸಾಧನದ ಅನುಮತಿಗಳು ಬೇಕಾಗುತ್ತವೆಯೇ ಎಂಬುದನ್ನು ಸಹ ನೀವು ನೋಡಬಹುದು.
ನಮ್ಮ Play ಸ್ಟೋರ್‌ಗೆ ಸಂಬಂಧಿಸಿದ ಡೆವಲಪರ್ ಕಾರ್ಯನೀತಿಗಳ ಮೂಲಕ ಮಕ್ಕಳಿಗಾಗಿ ಆ್ಯಪ್‌ಗಳನ್ನು ನಿರ್ಮಿಸುವ ಡೆವಲಪರ್‌ಗಳು ಅತ್ಯುನ್ನತ ಮಾನದಂಡಗಳನ್ನು ಪಾಲಿಸುವಂತೆ ನಾವು ನೋಡಿಕೊಳ್ಳುತ್ತೇವೆ.
Google Assistant
Google Assistant ನ ಸಹಾಯದಿಂದ ಸಂಪೂರ್ಣ ಕುಟುಂಬಕ್ಕೆ ಆನಂದ
ಸಂಪೂರ್ಣ ಕುಟುಂಬ ಒಟ್ಟಾಗಿ ಆನಂದಿಸಬಹುದಾದ ಮನರಂಜನೆಯನ್ನು ಕಂಡುಕೊಳ್ಳುವುದನ್ನು ನಿಮ್ಮ Assistant ಸುಲಭಗೊಳಿಸುತ್ತದೆ. ನಮ್ಮ ಅಕ್ಷನ್ಸ್ ಫಾರ್ ಫ್ಯಾಮಿಲೀಸ್ ಪ್ರೋಗ್ರಾಮ್ ಎಂಬ ಕಾರ್ಯಕ್ರಮದ ಮೂಲಕ ರಚಿಸಲಾಗಿರುವ ಕುಟುಂಬ-ಸ್ನೇಹಿ ಗೇಮ್‌ಗಳು ಮತ್ತು ಚಟುವಟಿಕೆಗಳನ್ನು ಅನ್ವೇಷಿಸಿ, ಅಥವಾ ನಿಮಗೊಂದು ಕಥೆ ಹೇಳುವಂತೆ Assistant ಗೆ ಹೇಳುವ ಮೂಲಕ ಮಲಗುವ ಮೊದಲು ನಿಮ್ಮ ಮೆಚ್ಚಿನ ಕಥೆಗಳನ್ನು ಕೇಳಿ. ನೀವು ಫಿಲ್ಟರ್‌ಗಳನ್ನು ಸೆಟಪ್ ಮಾಡಿದ ನಂತರ ಸಂಪೂರ್ಣ ಕುಟುಂಬ ಆನಂದಿಸಬಹುದಾದ ಸಂಗೀತವನ್ನು ಆಲಿಸಿ ಮತ್ತು ಅನ್‌ಪ್ಲಗ್ ಮಾಡಲು ಹಾಗೂ ಕುಟುಂಬದ ಜೊತೆಗಿನ ಸಮಯದ ಸಂಪೂರ್ಣ ಪ್ರಯೋಜನ ಪಡೆಯಲು ನಿಮ್ಮ ಸಾಧನದಲ್ಲಿನ ಸ್ಥಗಿತಕಾಲವನ್ನು ಬಳಸಿ. ನಮ್ಮ ಅಕ್ಷನ್ಸ್ ಫಾರ್ ಫ್ಯಾಮಿಲೀಸ್ ಪ್ರೋಗ್ರಾಮ್ ಚಟುವಟಿಕೆಗಳು ಕುಟುಂಬ ಸ್ನೇಹಿಯಾಗಿವೆಯೇ ಎಂಬುದನ್ನು ಮನುಷ್ಯ ವಿಮರ್ಶಕರು ಪರಿಶೀಲಿಸಿದ್ದಾರೆ, ಆದರೆ ಯಾವ ವ್ಯವಸ್ಥೆಯೂ ಪರಿಪೂರ್ಣವಾಗಿರುವುದಿಲ್ಲ. ಅನುಚಿತವಾದ ಕಂಟೆಂಟ್ ಒಳನುಸುಳಬಹುದಾದ ಕಾರಣ ನಮ್ಮ ರಕ್ಷಣಾ ಕ್ರಮಗಳನ್ನು ಸುಧಾರಿಸಲು ನಾವು ಯಾವಾಗಲೂ ಕಾರ್ಯಪ್ರವೃತ್ತರಾಗಿರುತ್ತೇವೆ.
Google Workspace
ತರಗತಿಗಳಿಗಾಗಿ ಹೆಚ್ಚು ಸುರಕ್ಷಿತವಾದ ಕಲಿಕೆಯ ಪರಿಸರವನ್ನು ನಿರ್ಮಿಸುವುದು
Google Workspace for Education ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಾಧನಗಳಾದ್ಯಂತ ಸುರಕ್ಷಿತವಾಗಿ ಸಂವಹನ ನಡೆಸಲು ಸಹಾಯ ಮಾಡುತ್ತದೆ. ಅದರ ಪ್ರಧಾನ ಸೇವೆಗಳಲ್ಲಿ ಜಾಹೀರಾತುಗಳಿರುವುದಿಲ್ಲ ಮತ್ತು ಕೇಂದ್ರೀಕೃತ ಜಾಹೀರಾತುಗಳನ್ನು ಒದಗಿಸಲು ಪ್ರಾಥಮಿಕ ಮತ್ತು ದ್ವಿತೀಯ ದರ್ಜೆಯ (K–12) ಶಾಲೆಗಳಲ್ಲಿನ ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಬಳಸುವುದಿಲ್ಲ. ಸೂಕ್ತ ಚಟುವಟಿಕೆಗಳಿಗೆ ಸಂಬಂಧಿಸಿದ ನೀತಿಗಳನ್ನು ಹೊಂದಿಸಲು ಆಡಳಿತಾಧಿಕಾರಿಗಳಿಗೆ ಸಹಾಯ ಮಾಡಲು ಮತ್ತು ತಮ್ಮ ಶಾಲೆಯ Google ಖಾತೆಗಳನ್ನು ಬಳಸುವ ವಿದ್ಯಾರ್ಥಿಗಳನ್ನು ರಕ್ಷಿಸಲು ಸಹಾಯ ಮಾಡುವ ಪರಿಕರಗಳನ್ನು ಸಹ ನಾವು ಒದಗಿಸುತ್ತೇವೆ. ತಮ್ಮ ವಿದ್ಯಾರ್ಥಿಗಳು ಬಳಸುವ Google Workspace for Education ಸೇವೆಗಳಿಗೆ ಸಂಬಂಧಿಸಿದಂತೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಾಲೆಗಳಿಗೆ ಅಗತ್ಯವಿರುವ ಪರಿಕರಗಳ ಮತ್ತು ಸಂಪನ್ಮೂಲಗಳನ್ನು ಒದಗಿಸಲು ನಾವು ಬದ್ಧರಾಗಿರುತ್ತೇವೆ.
Chromebook ಗಳು
ತರಗತಿಗಳನ್ನು ಸುರಕ್ಷಿತವಾಗಿಸುವುದು
ಲಕ್ಷಾಂತರ ವಿದ್ಯಾರ್ಥಿಗಳು ತರಗತಿಗಳಲ್ಲಿ Chromebook ಗಳು – Google ಲ್ಯಾಪ್‌ಟಾಪ್‌ಗಳನ್ನು – ಬಳಸುತ್ತಾರೆ. ಆಡಳಿತಾಧಿಕಾರಿಗಳು ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಸಾಧ್ಯವಾದಷ್ಟು ಹೆಚ್ಚು ಅಥವಾ ಸಾಧ್ಯವಾದಷ್ಟು ಕಡಿಮೆ ಕಾರ್ಯಚಟುವಟಿಕೆ ಅಥವಾ ಪ್ರವೇಶವನ್ನು ಒದಗಿಸಲು ಗುಂಪು ಸೆಟ್ಟಿಂಗ್‌ಗಳನ್ನು ನಿರ್ವಹಿಸಬಹುದು. ನಮ್ಮ ಗೌಪ್ಯತೆ ಮತ್ತು ಸುರಕ್ಷತೆಯ ವೈಶಿಷ್ಟ್ಯಗಳು ಮಗುವಿನ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡುತ್ತವೆ ಮತ್ತು ಯುಎಸ್‌ನ K-12 ಶಾಲೆಗಳು ಮತ್ತು ಇತರೆ ದೇಶಗಳಲ್ಲಿನ ಅನೇಕ ಶಾಲೆಗಳಲ್ಲಿ Chromebook ಗಳನ್ನು ಉನ್ನತ ಆಯ್ಕೆಯನ್ನಾಗಿ ಮಾಡಲು ಸಹಾಯ ಮಾಡಿವೆ.
* Google Kids Space ಗೆ ನಿಮ್ಮ ಮಗುವಿನ Google ಖಾತೆಯ ಅಗತ್ಯವಿದೆ. ಪೋಷಕರ ನಿಯಂತ್ರಣಗಳಿಗಾಗಿ, ಬೆಂಬಲಿತ Android, Chromebook ಅಥವಾ iOS ಸಾಧನಗಳಲ್ಲಿ Family Link ಆ್ಯಪ್ನ ಅಗತ್ಯವಿದೆ.
† ಪುಸ್ತಕಗಳು ಮತ್ತು ವೀಡಿಯೊ ವಿಷಯ ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲ ವೀಡಿಯೊ ವಿಷಯವು YouTube Kids ಆ್ಯಪ್ನ ಲಭ್ಯತೆಗೆ ಒಳಪಟ್ಟಿದೆ. Books ವಿಷಯಕ್ಕೆ Play ooks ಆ್ಯಪ್ನ ಅಗತ್ಯವಿದೆ. ಆ್ಯಪ್ಗಳು, ಪುಸ್ತಕಗಳು ಮತ್ತು ವೀಡಿಯೊ ವಿಷಯವು ಸೂಚನೆಯಿಲ್ಲದೆಯೇ ಬದಲಾಗಬಹುದು. Google Kids Space ನಲ್ಲಿ Google Assistant ಲಭ್ಯವಿಲ್ಲ.