ಆನ್‌ಲೈನ್ ​​ಜಗತ್ತಿನ ಚುರುಕಾದ, ಆತ್ಮವಿಶ್ವಾಸದಿಂದ ಕೂಡಿದ ಅನ್ವೇಷಕರಾಗಲು ಮಕ್ಕಳಿಗೆ ಸಹಾಯ ಮಾಡುವ ಕುರಿತು

ಆನ್‌ಲೈನ್‌‌ನಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಕ್ಕಳಿಗೆ ಕಲಿಸಲು, ಅವರು ಬುದ್ಧಿವಂತ ಮತ್ತು ಚತುರ ಡಿಜಿಟಲ್ ನಾಗರೀಕರಾಗಲು ಸಹಾಯ ಮಾಡಲು, ನಾವು ಸಂಪನ್ಮೂಲಗಳು ಮತ್ತು ಸಲಹೆಗಳನ್ನು ರಚಿಸಿದ್ದೇವೆ.

ಈ ಸಲಹೆಗಳು ಮತ್ತು ಸಂಪನ್ಮೂಲಗಳ ಮೂಲಕ ಆನ್‌ಲೈನ್‌ನಲ್ಲಿ ಬುದ್ಧಿವಂತ ಆಯ್ಕೆಗಳನ್ನು ಮಾಡಿ

 • ಇಂಟರ್ನೆಟ್ ಅದ್ಭುತ ವ್ಯಕ್ತಿಯಾಗಿರಿ ಪ್ರೋಗ್ರಾಂ ಮೂಲಕ ಬುದ್ಧಿವಂತ ಡಿಜಿಟಲ್ ನಾಗರಿಕರಾಗಲು ಮಕ್ಕಳಿಗೆ ಸಹಾಯ ಮಾಡುವುದು

  ಇಂಟರ್ನೆಟ್‌ನ ಲಾಭ ಪಡೆಯಬೇಕಾದರೆ, ಮಕ್ಕಳು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಈ ಪ್ರೋಗ್ರಾಂ ಮಕ್ಕಳ ಡಿಜಿಟಲ್ ಪೌರತ್ವ ಮತ್ತು ಸುರಕ್ಷತೆಯ ಮೂಲಭೂತ ಹಕ್ಕುಗಳನ್ನು ಕಲಿಸುತ್ತದೆ, ಇದರಿಂದಾಗಿ ಅವರು ಆನ್‌ಲೈನ್ ಜಗತ್ತನ್ನು ಆತ್ಮವಿಶ್ವಾಸದಿಂದ ಅನ್ವೇಷಿಸಬಹುದು. ಮಕ್ಕಳು ಇಂಟರ್ಲ್ಯಾಂಡ್ ಮೂಲಕ ಇಂಟರ್ನೆಟ್ ಅದ್ಭುತ ವ್ಯಕ್ತಿಯಾಗಿರಲು ತಮಗೆ ಬೇಕಾದ ರೀತಿಯಲ್ಲಿ ಆಟವಾಡಬಹುದು. ಇಂಟರ್ಲ್ಯಾಂಡ್ ಎಂಬುದು ಡಿಜಿಟಲ್ ಸುರಕ್ಷತೆಯ ಪ್ರಮುಖ ಪಾಠಗಳನ್ನು ನಾಲ್ಕು ಸವಾಲಿನ ಆಟಗಳೊಂದಿಗೆ ಅಭ್ಯಾಸ ಮಾಡುವ ಆನ್‌ಲೈನ್ ಸಾಹಸವಾಗಿದೆ.

  ಇಲ್ಲಿಯವರೆಗೆ, ನಾವು ಈ ಪ್ರೋಗ್ರಾಂ ಅನ್ನು ಅಮೆರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಜಾರಿಗೆ ತಂದಿದ್ದೇವೆ ಮತ್ತು ಇನ್ನಷ್ಟು ಮಾರುಕಟ್ಟೆಗಳಲ್ಲಿ ವಿಸ್ತರಿಸಲು ಯೋಜನೆ ರೂಪಿಸಿದ್ದೇವೆ. ಆನ್‌ಲೈನ್‌ನಲ್ಲಿ ಬುದ್ಧಿವಂತರಾಗಿರಲು ಮತ್ತು ಸುರಕ್ಷಿತವಾಗಿರಲು ಹದಿಹರೆಯದವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ, ಆನ್‌ಲೈನ್ ​​ಸುರಕ್ಷತಾ ರೋಡ್‌ಶೋನ ಭಾಗವಾಗಿ ನಾವು ಈ ಪಠ್ಯಕ್ರಮವನ್ನು ಅಮೆರಿಕಾದ ಶಾಲೆಗಳಿಗೆ ನೇರವಾಗಿ ತಲುಪಿಸಿದ್ದೇವೆ.

ಕಾಳಜಿಯಿಂದ ಹಂಚಿಕೊಳ್ಳಿ

ಒಳ್ಳೆಯ (ಮತ್ತು ಕೆಟ್ಟ) ಸುದ್ದಿ ಆನ್‌ಲೈನ್‌‌ನಲ್ಲಿ ವೇಗವಾಗಿ ಪಸರಿಸುತ್ತದೆ. ಕೆಲವೊಮ್ಮೆ ಮಕ್ಕಳು ಮತ್ತು ಹದಿಹರೆಯದವರು ಯಾವುದೇ ಮುಂದಾಲೋಚನೆ ಮಾಡದೆಯೇ ಹಾಗೂ ಭವಿಷ್ಯದ ಪರಿಣಾಮಗಳನ್ನು ಗಮನಿಸದೆಯೇ ಯಾವುದಾದರೂ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಬಹುದು. ಸೂಕ್ತ ಜನರೊಂದಿಗೆ ಸೂಕ್ತವಾದ ರೀತಿಯಲ್ಲಿ ಹಂಚಿಕೊಳ್ಳುವುದು ಹೇಗೆ ಎಂಬುದರ ಅರಿವು ಮೂಡಿಸುವ ಸಲಹೆಗಳನ್ನು ಅವರಿಗಾಗಿ ನಾವು ರಚಿಸಿದ್ದೇವೆ.

 • ಅವರ ಡಿಜಿಟಲ್ ಹೆಜ್ಜೆಗುರುತಿನ ಕುರಿತು ಅವರಿಗೆ ತಿಳಿಸಿ

  ನಿಮ್ಮ ಮಕ್ಕಳ ಜೊತೆಗೆ ಸೇರಿ, ನಿಮಗಾಗಿ ಅಥವಾ ಅವರು ಪ್ರೀತಿಸುವ ಸಂಗೀತಗಾರರನ್ನು ಆನ್‌ಲೈನ್‌ನಲ್ಲಿ ಹುಡುಕಿ ಮತ್ತು ನೀವು ಕಂಡುಕೊಳ್ಳುವ ಮಾಹಿತಿಯ ಕುರಿತು ಮಾತನಾಡಿ. ನೀವು ಮುಂಚಿತವಾಗಿ ಫಲಿತಾಂಶಗಳನ್ನು ಪರಿಶೀಲಿಸಲು ಬಯಸಬಹುದು. ಈ ಫಲಿತಾಂಶಗಳಿಂದ ಇತರೆ ವ್ಯಕ್ತಿಗಳು ನಿಮ್ಮನ್ನು ಕುರಿತು ಏನು ತಿಳಿದುಕೊಳ್ಳಬಹುದು ಮತ್ತು ನೀವು ಆನ್‌ಲೈನ್‌ನಲ್ಲಿ ಡಿಜಿಟಲ್ ಹೆಜ್ಜೆಗುರುತುಗಳನ್ನು ಹೇಗೆ ಬೆಳೆಸುತ್ತೀರಿ ಎಂಬುದರ ಬಗ್ಗೆ ಮಾತನಾಡಿ.

 • ಸಾಮಾಜಿಕ ಹೋಲಿಕೆಗಳನ್ನು ತಗ್ಗಿಸಲು ಸಹಾಯ ಮಾಡಿ

  ಆನ್‌ಲೈನ್‌ನಲ್ಲಿ ಸ್ನೇಹಿತರು ಹಂಚಿಕೊಳ್ಳುವ ಸಂಗತಿಗಳು ಇಡೀ ಕಥೆಯ ಒಂದು ಭಾಗವಷ್ಟೇ, ಮತ್ತು ಇದು ಸಾಮಾನ್ಯ ಮುಖ್ಯಾಂಶಗಳಾಗಿರುತ್ತವೆ ಎಂಬುದು ನಿಮ್ಮ ಮಗುವಿಗೆ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಪ್ರತಿಯೊಬ್ಬರೂ ಸಹ ಹಂಚಿಕೊಳ್ಳಲಾಗದ ನೀರಸ, ದುಃಖ ಅಥವಾ ಮುಜುಗರದ ಕ್ಷಣಗಳನ್ನು ಹೊಂದಿದ್ದಾರೆಂದು ಅವರಿಗೆ ನೆನಪಿಸಿ.

 • ಏನನ್ನು ಹಂಚಿಕೊಳ್ಳಬೇಕು ಎಂಬುದರ ಕುರಿತು ಕುಟುಂಬದ ನಿಯಮಗಳನ್ನು ರಚಿಸಿ

  ಫೋಟೋಗಳು ಅಥವಾ ಖಾಸಗಿ ಮಾಹಿತಿಯಂತಹ ಸಂಗತಿಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬಾರದು ಎಂಬುದರ ಕುರಿತು ನಿಮ್ಮ ಕುಟುಂಬಕ್ಕೆ ಸ್ಪಷ್ಟ ನಿರೀಕ್ಷೆಗಳನ್ನು ಹೊಂದಿಸಿ. ಒಟ್ಟಿಗೆ ಕೆಲವು ಫೋಟೋಗಳನ್ನು ತೆಗೆದುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಮತ್ತು ಜವಾಬ್ದಾರಿಯುತ ಹಂಚಿಕೆ ಎಂದರೇನು ಎಂಬುದರ ಕುರಿತು ಮುಕ್ತವಾಗಿ ಮಾತನಾಡಿ. ಉದಾಹರಣೆಗೆ, ನಿಮ್ಮ ಮಗು ಫೋಟೋಗಳನ್ನು ಹಂಚಿಕೊಳ್ಳುವುದಕ್ಕೂ ಮೊದಲು, ತಮ್ಮನ್ನು ಕುರಿತು ಅಷ್ಟೇ ಅಲ್ಲ, ಇತರರ ಬಗ್ಗೆಯೂ ಚಿಂತಿಸಬೇಕೆಂದು ತಿಳಿಸಿ ಹೇಳಿ. ಅವರಿಗೆ ಖಚಿತತೆ ಇಲ್ಲದಿದ್ದರೆ ಅನುಮತಿಯನ್ನು ಕೇಳುವಂತೆ ನೆನಪಿಸಿ.

 • ಮಿತಿಮೀರಿದ ಹಂಚಿಕೆಯ ಬಗ್ಗೆ ಅವರಿಗೆ ತಿಳಿಸಿ

  ಮಿತಿಮೀರಿದ ಹಂಚಿಕೆ ಅಂದರೆ, ಹಂಚಿದ ವಿಷಯಗಳನ್ನು ಹಿಂತೆಗೆದುಕೊಳ್ಳುವಿಕೆ, ಅಥವಾ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸರಿಪಡಿಸುವಿಕೆಯ ಕುರಿತು ಪರಿಹಾರಗಳಿಗಾಗಿ ಚಿಂತನೆ ನಡೆಸಿ. ಅದು ಸಂಭವಿಸಿದಲ್ಲಿ, ಅಂತಹ ವಿಷಯವನ್ನು ಸಮಗ್ರವಾಗಿ ಅವಲೋಕಿಸಿ. ಕೆಲವು ಮುಜುಗರದ ಕ್ಷಣಗಳು ಗಂಭೀರವಾಗಿರುತ್ತವೆ, ಆದರೆ ಇತರೆಗಳು ಕೇವಲ ಉತ್ತಮ ಕಲಿಕೆಯ ಕ್ಷಣಗಳಾಗಿರುತ್ತವೆ.

ನಕಲಿ ವಿಷಯಗಳಿಗೆ ಮೋಸ ಹೋಗಬೇಡಿ

ಆನ್‌ಲೈನ್‌‌ನಲ್ಲಿನ ವ್ಯಕ್ತಿಗಳು ಮತ್ತು ಸಂದರ್ಭಗಳು ಅಲ್ಲಿ ಕಾಣಿಸುವಂತಿರುವುದಿಲ್ಲ ಎಂಬ ಅರಿವನ್ನು ನಿಮ್ಮ ಮಕ್ಕಳಲ್ಲಿ ಮೂಡಿಸಲು ಸಹಾಯ ಮಾಡುವುದು ಬಹಳ ಮುಖ್ಯ. ಅವರಿಗೆ ಮೂಲ ಮತ್ತು ನಕಲಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ನೀವು ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ಉಪಯುಕ್ತ ಮಾರ್ಗದರ್ಶನವೊಂದನ್ನು ನಾವು ಅಭಿವೃದ್ಧಿಪಡಿಸಿದ್ದೇವೆ.

 • ಸೋಗುಹಾಕುವಿಕೆಯ ಕುರಿತು ವಿವರಿಸಿ

  ಯಾರಾದರೂ ಅವರ ಪಾಸ್‌ವರ್ಡ್‌ಗಳು ಅಥವಾ ಖಾಸಗಿ ಡೇಟಾವನ್ನು ಹಿಡಿದಿಡಲು ಏಕೆ ಬಯಸಬಹುದು ಎಂಬುದನ್ನು ಅವರಿಗೆ ವಿವರಿಸಿ. ಈ ಮಾಹಿತಿಯನ್ನು ಬಳಸಿಕೊಂಡು, ಯಾರಾದರೂ ಅವರ ಖಾತೆಯನ್ನು ಬಳಸಬಹುದು ಮತ್ತು ಅವರಂತೆ ನಟಿಸಬಹುದು.

 • ಫಿಶಿಂಗ್ ಪ್ರಯತ್ನಗಳನ್ನು ಗುರುತಿಸಲು ಅವರಿಗೆ ಸಹಾಯ ಮಾಡಿ

  ನಿಮ್ಮ ಮಕ್ಕಳು ತಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವಂತೆ ಜನರು ಅವರನ್ನು ಮೋಸಗೊಳಿಸಲು ಪ್ರಯತ್ನಿಸಬಹುದು ಎಂದು ಅವರಿಗೆ ತಿಳಿದಿರುವುದಿಲ್ಲ. ಅಪರಿಚಿತ ವ್ಯಕ್ತಿಗಳು ಖಾತೆಯ ಮಾಹಿತಿಯನ್ನು ಕೇಳುವ ಅಥವಾ ವಿಚಿತ್ರವಾದ ಲಗತ್ತುಗಳಿರುವ ಸಂದೇಶದ ಲಿಂಕ್ ಅಥವಾ ಇಮೇಲ್ ಕಳುಹಿಸಿದರೆ, ನಿಮ್ಮ ಗಮನಕ್ಕೆ ತರುವಂತೆ ಅವರಿಗೆ ತಿಳಿಸಿ.

 • ವಂಚನೆಗಳನ್ನು ಗುರುತಿಸಲು ಅವರಿಗೆ ಸಹಾಯ ಮಾಡಿ

  ಸ್ನೇಹಿತರು ಕಳುಹಿಸಿರುವಂತೆ ತೋರುವ ಮೋಸಗೊಳಿಸುವ ಸಂಗತಿಗಳ ಕುರಿತು ನಿಮ್ಮ ಮಕ್ಕಳಿಗೆ ತಿಳಿಸಿ. ಬುದ್ಧಿವಂತ ವಯಸ್ಕರು ಸಹ ಮೂರ್ಖರಾಗುತ್ತಾರೆ! ಅಂತಹ ಸಂದೇಶವು ಕಾಣಿಸಿಕೊಂಡಲ್ಲಿ, ಅವರು ನಿಮ್ಮೊಂದಿಗೆ ಪರಿಶೀಲಿಸಲು ಅವಕಾಶ ನೀಡಿ. ಅವರ ಕಳವಳಗಳಿಗೆ ಪ್ರತಿಕ್ರಿಯೆ ನೀಡಿದರೆ, ಪರಸ್ಪರ ನಂಬಿಕೆಯನ್ನು ಬೆಳೆಸಲು ಗಂಭೀರವಾಗಿ ಸಹಾಯ ಮಾಡುತ್ತದೆ.

 • ಭದ್ರತಾ ಸುಳಿವುಗಳನ್ನು ಒಟ್ಟಿಗೆ ಹುಡುಕಿ

  ವೆಬ್‌ಸೈಟ್‌ಗೆ ಒಟ್ಟಿಗೆ ಭೇಟಿ ಮಾಡಿ ಮತ್ತು ಭದ್ರತೆಯ ಚಿಹ್ನೆಗಳನ್ನು ನೋಡಿ. URL ಮುಂದೆ ಪ್ಯಾಡ್‌ಲಾಕ್ ಇದೆಯೇ ಅಥವಾ ಅದು https ನೊಂದಿಗೆ ಪ್ರಾರಂಭವಾಗುತ್ತದೆಯೇ, ಹೀಗಿದ್ದರೆ ಅದು ಸುರಕ್ಷಿತವಾಗಿದೆ ಎಂದರ್ಥವೇ? URL ಮತ್ತು ಸೈಟ್ ಹೆಸರು ಹೊಂದಾಣಿಕೆಯಾಗುತ್ತಿದೆಯೇ? ಅವರು ಸೈಟ್‌ಗೆ ಪ್ರವೇಶಿಸಿದಾಗ ಹುಡುಕಬೇಕಾದ ಚಿಹ್ನೆಗಳನ್ನು ಗುರುತಿಸಲು ಅವರಿಗೆ ಸಹಾಯ ಮಾಡಿ.

ನಿಮ್ಮ ರಹಸ್ಯಗಳನ್ನು ಸುರಕ್ಷಿತಗೊಳಿಸಿ

ವೈಯಕ್ತಿಕ ಗೌಪ್ಯತೆ ಮತ್ತು ಭದ್ರತೆಗಳು ಆಫ್‌ಲೈನ್‌‌ನಲ್ಲಿ ಎಷ್ಟು ಮುಖ್ಯವೋ, ಆನ್‌ಲೈನ್‌‌ನಲ್ಲಿದ್ದಾಗ ಕೂಡ ಅಷ್ಟೇ ಮುಖ್ಯ. ಮಕ್ಕಳು ತಮ್ಮ ಸಾಧನಗಳು, ಸಾಮಾಜಿಕ ವರ್ಚಸ್ಸು ಮತ್ತು ಸಂಬಂಧಗಳಿಗೆ ಹಾನಿಯಾಗದ ರೀತಿಯಲ್ಲಿ ತಮ್ಮ ಮೌಲ್ಯಯುತ ಮಾಹಿತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನಿಮ್ಮ ಮಕ್ಕಳಿಗೆ ಅರ್ಥ ಮಾಡಿಸುವುದು ತುಂಬಾ ಮುಖ್ಯವಾಗಿರುತ್ತದೆ.

 • ಭೇದಿಸಲು ಕಷ್ಟವಾಗುವ ಪಾಸ್‌ವರ್ಡ್‌ಗಳನ್ನು ರಚಿಸಿ

  ಒಂದು ಸ್ಮರಣೀಯ ನುಡಿಗಟ್ಟನ್ನು ಪ್ರಬಲ ಪಾಸ್‌ವರ್ಡ್ ಆಗಿ ಬದಲಿಸುವ ಕುರಿತು ಅವರಿಗೆ ಕಲಿಸಿ. ಕನಿಷ್ಠ ಎಂಟು ಮಿಶ್ರ-ಅಕ್ಷರಗಳನ್ನು ಬಳಸಿ ಮತ್ತು ಅವುಗಳಲ್ಲಿ ಕೆಲವನ್ನು ಸಂಕೇತಗಳಾಗಿ ಹಾಗೂ ಸಂಖ್ಯೆಗಳಾಗಿ ಬದಲಾಯಿಸಿ. ಉದಾಹರಣೆಗೆ, “My younger sister is named Ann” ಎಂಬುದು myL$1Nan ಆಗುತ್ತದೆ. ದುರ್ಬಲ ಪಾಸ್‌ವರ್ಡ್ ಕುರಿತು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿ. ಅಂದರೆ, ನಿಮ್ಮ ಸ್ವಂತದ ವಿಳಾಸ, ಜನ್ಮದಿನ, 123456 ಅಥವಾ “password” ರೀತಿಯ ಪಾಸ್‌ವರ್ಡ್‌ಗಳನ್ನು ಯಾರೂ ಬೇಕಾದರೂ ಸುಲಭವಾಗಿ ಊಹಿಸಬಹುದು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು.

 • ಅವರ ಖಾಸಗಿ ಮಾಹಿತಿಯನ್ನು ಖಾಸಗಿಯಾಗಿಯೇ ಇರಿಸಿ

  ಅವರು ಯಾವ ಮಾಹಿತಿಯನ್ನು ಖಾಸಗಿಯಾಗಿ ಇರಿಸಿಕೊಳ್ಳಬೇಕು ಎಂಬುದರ ಕುರಿತು ಚರ್ಚಿಸಿ – ಅಂದರೆ, ಅವರ ಮನೆಯ ವಿಳಾಸ, ಪಾಸ್‌ವರ್ಡ್‌ಗಳು ಮತ್ತು ಶಾಲೆಯ ಮಾಹಿತಿ. ಈ ರೀತಿಯ ಮಾಹಿತಿಯನ್ನೇನಾದರೂ ಕೇಳಿದರೆ, ನಿಮ್ಮ ಗಮನಕ್ಕೆ ತರುವಂತೆ ಅವರನ್ನು ಪ್ರೋತ್ಸಾಹಿಸಿ.

 • ಉತ್ತಮ ಪಾಸ್‌ವರ್ಡ್ ಅನ್ನು ರಕ್ಷಿಸಿಕೊಳ್ಳುವುದರ ಕುರಿತು ಕಲಿಸಿ

  ಎಲ್ಲಿಯಾದರೂ ತಮ್ಮ ಪಾಸ್‌ವರ್ಡ್ ನಮೂದಿಸುವುದಕ್ಕೂ ಮೊದಲು ಎರಡು ಬಾರಿ ಯೋಚಿಸುವಂತೆ, ಹಾಗೆಯೇ ಅದು ಸೂಕ್ತ ಆ್ಯಪ್ ಅಥವಾ ಸೈಟ್ ಆಗಿದೆಯೇ ಎಂಬುದನ್ನು ಎರಡುಬಾರಿ ಪರಿಶೀಲಿಸುವಂತೆ ಅವರಿಗೆ ತಿಳಿಸಿ ಹೇಳಿ. ಸಂದೇಹ ಬಂದಾಗ, ಅವರು ಯಾವುದೇ ಮಾಹಿತಿಯನ್ನು ನಮೂದಿಸುವುದಕ್ಕೂ ಮೊದಲು ನಿಮ್ಮನ್ನು ಸಂಪರ್ಕಿಸಿ ಸಲಹೆಯನ್ನು ಪಡೆದುಕೊಳ್ಳಬೇಕು. ಇದರ ಜೊತೆಗೆ, ವಿವಿಧ ಆ್ಯಪ್‌ಗಳು ಮತ್ತು ಸೈಟ್‌ಗಳಿಗೆ ಬೇರೆ ಬೇರೆ ಪಾಸ್‌ವರ್ಡ್‌ಗಳನ್ನು ಹೊಂದಿರಲು ಅವರನ್ನು ಪ್ರೋತ್ಸಾಹಿಸಿ. ಅವರು ಒಂದು ಮುಖ್ಯ ಪಾಸ್‌ವರ್ಡ್ ಹೊಂದಿರಬಹುದು, ಮತ್ತು ಪ್ರತಿಯೊಂದು ಆ್ಯಪ್‌ಗೂ ಕೆಲವು ಅಕ್ಷರಗಳನ್ನು ಸೇರಿಸಿ ಪಾಸ್‌ವರ್ಡ್ ರಚಿಸಿಕೊಳ್ಳಬಹುದು.

 • ಕುಚೇಷ್ಟೆಗಳನ್ನು ತಪ್ಪಿಸಲು ಅವರಿಗೆ ಸಹಾಯ ಮಾಡಿ

  ತಮ್ಮ ಪಾಸ್‌ವರ್ಡ್‌ಗಳನ್ನು ಖಾಸಗಿಯಾಗಿರಿಸಿಕೊಳ್ಳುವ ಮೂಲಕ ನಕಲಿ ಅಥವಾ ಮುಜುಗರದ ಸಂದೇಶಗಳನ್ನು ಕಳುಹಿಸುವ ಸಲುವಾಗಿ ಇತರೆ ವ್ಯಕ್ತಿಗಳು ಅವರ ಖಾತೆಗಳಿಗೆ ಪ್ರವೇಶಿಸದಂತೆ ತಡೆಯಲು ಅವರಿಗೆ ಸಹಾಯ ಮಾಡುತ್ತದೆ ಎಂದು ಅವರಿಗೆ ನೆನಪಿಸಿ.

ದಯವೇ ಧರ್ಮದ ಮೂಲ

ಸಕಾರಾತ್ಮಕತೆ ಅಥವಾ ಋಣಾತ್ಮಕತೆಯನ್ನು ಹರಡಲು ಬಳಸಬಹುದಾದ ಒಂದು ಪ್ರಬಲ ವರ್ಧಕ ಇಂಟರ್ನೆಟ್ ಆಗಿದೆ. "ಇತರರು ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ನೀವು ಬಯಸುತ್ತೀರೋ, ಹಾಗೆಯೇ ನೀವು ಇತರರೊಂದಿಗೆ ನಡೆದುಕೊಳ್ಳಿ" ಎಂಬ ಸಿದ್ಧಾಂತವನ್ನು ನಿಮ್ಮ ಮಕ್ಕಳ ಆನ್‌ಲೈನ್‌ ಕ್ರಿಯೆಗಳಿಗೆ ಅನ್ವಯಿಸುವ ಮೂಲಕ, ಅವರು ನೈತಿಕವಾಗಿ ಉತ್ತಮವಾದ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಸಹಾಯ ಮಾಡಿ. ಇದರಿಂದ ಇತರರಿಗೆ ಸಕಾರಾತ್ಮಕ ಪ್ರಭಾವ ಬೀರುವುದು ಮತ್ತು ಬೆದರಿಸುವ ನಡವಳಿಕೆಯನ್ನು ನಿವಾರಿಸುವುದು ಸಾಧ್ಯವಾಗುತ್ತದೆ.

 • ಆನ್‌ಲೈನ್ ನಿಂದನೆಯ ಬಗೆಗೆ ಸಂಭಾಷಣೆಯನ್ನು ರಚಿಸಿ

  ಇತರರಿಗೆ ಉದ್ದೇಶಪೂರ್ವಕವಾಗಿ ನೋವುಂಟುಮಾಡಲು ಜನರು ಆನ್‌ಲೈನ್ ​​ಉಪಕರಣಗಳನ್ನು ಬಳಸುವ ಕುರಿತು ಅಥವಾ ಆನ್‌ಲೈನ್ ​​ಕಿರುಕುಳದ ಬಗ್ಗೆ ಮಾತನಾಡಿ. ನಿಮ್ಮ ಮಕ್ಕಳು ಅದನ್ನು ನೋಡಿದರೆ ಅಥವಾ ಅವರ ಅನುಭವಕ್ಕೆ ಬಂದರೆ ಯಾರನ್ನು ಸಂಪರ್ಕಿಸಬೇಕೆಂದು ನಿರ್ಧರಿಸಿ. ಅವರು ಅಥವಾ ಅವರ ಸ್ನೇಹಿತರಿಗೆ ಈ ರೀತಿಯ ಆನ್‌ಲೈನ್ ಅನ್ಯಾಯದ ಅನುಭವವಾಗಿದೆಯೇ ಎಂದು ಕೇಳಿ. ನೀವು ಕೇಳಬಹುದಾದ ಕೆಲವು ಪ್ರಶ್ನೆಗಳೆಂದರೆ: ಇದರ ಪರಿಣಾಮವೇನಾಯಿತು? ಅದು ಹೇಗೆ ಅನಿಸಿತು? ಯಾರ ಬಳಿಯಾದರೂ ಸಾಮಾನ್ಯ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಅದನ್ನು ತಡೆಯಲು ಸಹಾಯ ಮಾಡುವ ಅಧಿಕಾರವನ್ನು ನೀವು ಹೊಂದಿದ್ದೀರಾ?

 • ನಿಮ್ಮ ಕುಟುಂಬದ ಮೌಲ್ಯಗಳನ್ನು ಆನ್‌ಲೈನ್‌ನಲ್ಲಿ ನಿರೂಪಿಸಿ

  ಅವರು ಆನ್‌ಲೈನ್‌ನಲ್ಲಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ಸ್ಪಷ್ಟವಾಗಿರಿ. ಇತರರನ್ನು ಹೇಗೆ ಗೌರವದಿಂದ ಕಾಣಬೇಕು ಎಂದು ಅವರು ಬಯಸುತ್ತಾರೋ ಮತ್ತು ಅವರನ್ನು ಮುಖತಃ ಭೇಟಿ ಮಾಡಿದಾಗ ಹೇಗೆ ಗೌರವದಿಂದ ಕಾಣುತ್ತೀರೋ, ಅದೇ ರೀತಿಯಲ್ಲಿ ಆನ್‌ಲೈನ್‌ನಲ್ಲಿಯೂ ವರ್ತಿಸಬೇಕೆಂದು ಬಯಸುತ್ತಾರೆ. ಈ ರೀತಿಯ ಧನಾತ್ಮಕ ಸಂವಹನವನ್ನು ಪ್ರಾರಂಭಿಸಲು ಆನ್‌ಲೈನ್ ಉತ್ತಮ ಸ್ಥಳವಾಗಿದೆ.

 • ಒಬ್ಬರ ಮಾತುಗಳ ಹಿಂದಿರುವ ಅರ್ಥದ ಬಗ್ಗೆ ಮಾತನಾಡಿ ಮತ್ತು ಸಕಾರಾತ್ಮಕತೆಯನ್ನು ಪ್ರೋತ್ಸಾಹಿಸಿ

  ಧ್ವನಿಯ ಮಟ್ಟದ ಬಗ್ಗೆ ಮಾತನಾಡಿ ಮತ್ತು ಆನ್‌ಲೈನ್‌ನಲ್ಲಿ ಯಾರ ಮಾತನ್ನಾದರೂ ತಪ್ಪಾಗಿ ಅರ್ಥೈಸುವುದು ಸುಲಭ ಎಂದು ನಿಮ್ಮ ಮಕ್ಕಳಿಗೆ ನೆನಪಿಸಿ. ಒಬ್ಬರ ಮಾತಿನ ಅರ್ಥದ ಬಗ್ಗೆ ಅವರಿಗೆ ಅಸ್ಪಷ್ಟತೆಯಿದ್ದರೆ, ಒಳ್ಳೆಯ ಉದ್ದೇಶವನ್ನು ಹೊಂದಿರಲು ಹಾಗೂ ನೇರವಾಗಿ ಸ್ನೇಹಿತರೊಂದಿಗೆ ಮಾತನಾಡಲು ಪ್ರೋತ್ಸಾಹಿಸಿ. ಆನ್‌ಲೈನ್‌ನಲ್ಲಿ ಸಕಾರಾತ್ಮಕ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಎಷ್ಟು ಒಳ್ಳೆಯದನಿಸುತ್ತದೆ ಎಂಬುದರ ಕುರಿತು ಮಾತನಾಡಿ. ನಿಮ್ಮ ಸ್ವಂತ ಆ್ಯಪ್‌ಗಳಲ್ಲಿ ಒಂದನ್ನು ಬಳಸಿಕೊಂಡು, ಒಟ್ಟಿಗೆ ಸಕಾರಾತ್ಮಕ ಕಾಮೆಂಟ್ ಅಥವಾ ಸಂದೇಶವನ್ನು ಕಳುಹಿಸುವುದನ್ನು ಪರಿಗಣಿಸಿ.

ಸಂದೇಹ ಬಂದಾಗ, ಮಾತನಾಡಿ

ಯಾವುದೇ ಮತ್ತು ಎಲ್ಲಾ ಪ್ರಕಾರದ ಅನಿರೀಕ್ಷಿತ ಡಿಜಿಟಲ್ ಸನ್ನಿವೇಶಗಳಿಗೆ ಅನ್ವಯವಾಗುವ ಒಂದು ಪಾಠವೇನೆಂದರೆ: ನಿಮ್ಮ ಮಕ್ಕಳಿಗೆ ಪ್ರಶ್ನಾರ್ಹವಾಗಿ ಏನೇ ಕಂಡುಬಂದರೂ, ಅವರು ಅದರ ಕುರಿತು ತಮ್ಮ ನಂಬುಗೆಯ ಪ್ರಾಪ್ತ ವಯಸ್ಕರೊಂದಿಗೆ ಮನಬಿಚ್ಚಿ ಮಾತನಾಡುವಂತಿರಬೇಕು. ಎಲ್ಲದನ್ನೂ ಮನಬಿಚ್ಚಿ ಮಾತನಾಡುವ ಮುಕ್ತ ವಾತಾವರಣವನ್ನು ನಿಮ್ಮ ಮನೆಯಲ್ಲಿ ನೀವು ಕಲ್ಪಿಸಿಕೊಡಬೇಕು.

 • ಅವರು ಆನ್‌ಲೈನ್‌ನಲ್ಲಿ ಏನು ಮಾಡುತ್ತಾರೆ ಎಂಬುದನ್ನು ಚರ್ಚಿಸಿ

  ನಿಮ್ಮ ಕುಟುಂಬವು ತಂತ್ರಜ್ಞಾನವನ್ನು ಹೇಗೆ ಬಳಸುತ್ತದೆ ಎಂಬುದರ ಬಗ್ಗೆ ಮಾತನಾಡಲು ಸಮಯವನ್ನು ಮೀಸಲಿಡಿ. ನಿಮ್ಮ ಮಗು ಹೆಚ್ಚಾಗಿ ಬಳಸುವ ಮತ್ತು ಪ್ರವಾಸಕ್ಕಾಗಿ ಕೇಳಿಕೊಳ್ಳುವ ಆ್ಯಪ್‌ಗಳ ಕುರಿತು ಆಸಕ್ತಿಯನ್ನು ತೋರಿಸಿ. ಅವರು ತಮ್ಮ ಆ್ಯಪ್‌ಗಳನ್ನು ಹೇಗೆ ಬಳಸುತ್ತಾರೆ ಮತ್ತು ಅವುಗಳ ಕುರಿತು ಯಾವ ಸಂಗತಿಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಕಂಡುಕೊಳ್ಳಿ.

 • ಕಾಲಾನಂತರದಲ್ಲಿ ಬದಲಾಗಬಹುದಾದ ಮಿತಿಗಳನ್ನು ಹೊಂದಿಸಿ

  ನಿಮ್ಮ ಮಗುವಿನ ಖಾತೆಯಲ್ಲಿ ವಿಷಯ ಫಿಲ್ಟರ್‌ಗಳು ಮತ್ತು ಸಮಯ ಮಿತಿಗಳಂತಹ ನಿಯಮಗಳನ್ನು ಹೊಂದಿಸಿ, ಹಾಗೂ ನಿಮ್ಮ ಮಕ್ಕಳು ದೊಡ್ಡವರಾದಂತೆ ಈ ನಿಯಮಗಳೂ ಬದಲಾಗಬಹುದು ಎಂದು ಅವರಿಗೆ ತಿಳಿಸಿ. ಸೆಟ್ಟಿಂಗ್‌ಗಳು ಕಾಲಕ್ರಮೇಣ ಬದಲಾಗಬೇಕು. ಸುಮ್ಮನೆ “ಹೊಂದಿಸಿ ಮತ್ತು ಮರೆತುಬಿಡಬೇಡಿ”.

 • ಕಷ್ಟದಲ್ಲಿ ನೆರವಾಗುವ ವ್ಯಕ್ತಿಗಳನ್ನು ಗುರುತಿಸಲು ಅವರಿಗೆ ಸಹಾಯ ಮಾಡಿ

  ಅವರಿಗೆ ಆನ್‌ಲೈನ್ ಸಂಗತಿಗಳು ಅಹಿತಕರವೆಂಬ ಭಾವನೆ ವ್ಯಕ್ತವಾದರೆ ಆ ಕುರಿತು ತಮ್ಮ ಆತಂಕವನ್ನು ಹಂಚಿಕೊಳ್ಳಲು ಮೂರು ವಿಶ್ವಾಸಾರ್ಹ ವ್ಯಕ್ತಿಗಳನ್ನು ಗುರುತಿಸಿ. ವಿಶ್ವಾಸಾರ್ಹ ವ್ಯಕ್ತಿಯು ಅವರು ನೋಡಿರುವುದನ್ನು ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತಾರೆ ಮತ್ತು ಭವಿಷ್ಯದಲ್ಲಿ ಈ ರೀತಿಯ ವಿಷಯಗಳು ಅವರ ಕಣ್ಣಿಗೆ ಬೀಳದಂತೆ ತಡೆಯುತ್ತಾರೆ.

 • ಆನ್‌ಲೈನ್‌ನಲ್ಲಿ ಗುಣಮಟ್ಟದ ಸಮಯಕ್ಕೆ ಬೆಂಬಲ ನೀಡಿ

  ಸೃಜನಶೀಲತೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಕಲಿಸುವ ಆಟಗಳು ಮತ್ತು ಆ್ಯಪ್‌ಗಳ ಬಳಕೆಯಲ್ಲಿ ತೊಡಗಿಸಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿ.

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.