ನಿಮ್ಮ ಎಲ್ಲಾ ಆನ್ಲೈನ್ ಖಾತೆಗಳಿಗೆ ಸೈನ್ ಇನ್ ಮಾಡಲು ಹೆಚ್ಚು ಸುರಕ್ಷಿತ ವಿಧಾನ.
ನಿಮ್ಮ ಎಲ್ಲಾ ಆನ್ಲೈನ್ ಖಾತೆಗಳಿಗೆ ಸೈನ್ ಇನ್ ಮಾಡುವುದು ಕಷ್ಟದ ಕೆಲಸವಾಗಬಾರದು. ನಿಮ್ಮ ಖಾತೆಯ ವೈಯಕ್ತಿಕ ಮಾಹಿತಿಯು ಅಸುರಕ್ಷಿತವಾಗಿರಬಹುದು ಎಂಬ ಚಿಂತೆ ಉಂಟುಮಾಡದೆ, ಅದು ತ್ವರಿತವಾದ ಮತ್ತು ಸುಲಭದ ಕೆಲಸವಾಗಬೇಕು.
ನೀವು ಇಷ್ಟಪಡುವ ಆ್ಯಪ್ಗಳು ಮತ್ತು ಸೇವೆಗಳಿಗೆ ನೀವು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಸೈನ್ ಇನ್ ಮಾಡುವುದಕ್ಕೆ ಸಹಾಯ ಮಾಡಲು ನಮ್ಮ ಬಿಲ್ಟ್-ಇನ್ ಪ್ರಮಾಣೀಕರಣ ಟೂಲ್ಗಳನ್ನು ವಿನ್ಯಾಸಗೊಳಿಸಲಾಗಿದೆ.
-
ಪಾಸ್ವರ್ಡ್ಗಳಿಲ್ಲದೆ, ಸರಳವಾದ ಮತ್ತು ಸುರಕ್ಷಿತವಾದ ಸೈನ್ ಇನ್
ಪಾಸ್ಕೀಗಳು ನಿಮ್ಮ ಸಾಧನದ ಸ್ಕ್ರೀನ್ ಲಾಕ್ ಅನ್ನು ಬಳಸಿಕೊಂಡು ಅತಿ ಸರಳವಾದ, ಅತ್ಯಂತ ಸುರಕ್ಷಿತವಾದ ಸೈನ್ ಇನ್ ಅನ್ನು ಒದಗಿಸುತ್ತವೆ, ಆದ್ದರಿಂದ ಸೈನ್ ಇನ್ ಮಾಡುವುದೆಂದರೆ ನಿಮ್ಮ ಫೋನ್ ಅನ್ನು ನೋಡುವುದು ಅಥವಾ ನಿಮ್ಮ ಫಿಂಗರ್ಪ್ರಿಂಟ್ ಅನ್ನು ಸ್ಕ್ಯಾನ್ ಮಾಡುವಷ್ಟೇ ಸುಲಭವಾಗಿದೆ. ಪಾಸ್ಕೀಗಳು ಉದ್ಯಮ ಮಾನದಂಡವಾಗಿದ್ದು, ಅವು ನಿಮ್ಮ ಎಲ್ಲಾ ಸಾಧನಗಳು ಮತ್ತು ಪ್ಲ್ಯಾಟ್ಫಾರ್ಮ್ಗಳಲ್ಲಿ ಕಾರ್ಯನಿರ್ವಹಿಸುತ್ತವೆ.
ಇನ್ನಷ್ಟು ತಿಳಿಯಿರಿ -
ನಿಮ್ಮ ಎಲ್ಲಾ ಸಾಧನಗಳಾದ್ಯಂತ ಸುಲಭವಾಗಿ ಸೈನ್ ಇನ್ ಮಾಡಿ
ಪಾಸ್ಕೀಗಳನ್ನು ನೆನಪಿಡುವ ಅಥವಾ ಟೈಪ್ ಮಾಡುವ ಅಗತ್ಯವಿಲ್ಲ. ಅದರ ಬದಲಿಗೆ, ಪಾಸ್ವರ್ಡ್ ಬಳಸಿ ಸೈನ್ ಇನ್ ಮಾಡುವುದಕ್ಕಿಂತ ದುಪ್ಪಟ್ಟು ವೇಗದಲ್ಲಿ ಸೈನ್ ಇನ್ ಮಾಡಲು ನಿಮ್ಮ ಫಿಂಗರ್ಪ್ರಿಂಟ್, ಮುಖದ ಸ್ಕ್ಯಾನ್, ಪಿನ್ ಅಥವಾ ಇತರ ಸ್ಕ್ರೀನ್ ಲಾಕ್ ಅನ್ನು ನೀವು ಬಳಸುವಿರಿ. ಪಾಸ್ಕೀಗಳನ್ನು ನಿಮ್ಮ Google ಖಾತೆಯಲ್ಲಿ ಸಂಗ್ರಹಿಸುವ ಕಾರಣ, ಸಿಂಕ್ ಮಾಡಲಾದ ನಿಮ್ಮ ಎಲ್ಲಾ ಸಾಧನಗಳಾದ್ಯಂತ ಅವು ಲಭ್ಯವಿರುತ್ತವೆ.
-
ಮುಂದಿನ-ಜನರೇಶನ್ ಖಾತೆ ಸುರಕ್ಷತೆ
FIDO Alliance ಮತ್ತು W3C ಪ್ರಮಾಣಕಗಳನ್ನು ಆಧರಿಸಿರುವ ಪಾಸ್ಕೀಗಳು, ಭೌತಿಕ ಭದ್ರತಾ ಕೀಗಳ ತಳಹದಿಯಾಗಿರುವ ಅದೇ ಸಾರ್ವಜನಿಕ ಕೀ ಕ್ರಿಪ್ಟೋಗ್ರಾಫಿಕ್ ಪ್ರೊಟೊಕಾಲ್ಗಳ ಪ್ರಯೋಜನಗಳನ್ನು ವರ್ಧಿಸುತ್ತವೆ, ಮತ್ತು ಫಿಶಿಂಗ್, ಕ್ರೆಡೆನ್ಷಿಯಲ್ ಸ್ಟಫಿಂಗ್ ಮತ್ತು ದೂರದಿಂದಲೇ ಮಾಡಬಹುದಾದ ಇತರ ದಾಳಿಗಳ ವಿರುದ್ಧ ಅವುಗಳಿಗೆ ಪ್ರತಿರೋಧಕ ಶಕ್ತಿಯನ್ನು ಒದಗಿಸುತ್ತವೆ.
-
ನಿಮ್ಮ ಮೆಚ್ಚಿನ ಆ್ಯಪ್ಗಳು ಹಾಗೂ ಸೇವೆಗಳಿಗೆ ಸೈನ್ ಇನ್ ಮಾಡಲು ಹೆಚ್ಚು ಸುರಕ್ಷಿತ ವಿಧಾನ
ನಿಮ್ಮ ಎಲ್ಲಾ ಆನ್ಲೈನ್ ಖಾತೆಗಳಿಗೆ ನೀವು ಸೈನ್ ಇನ್ ಮಾಡುವಾಗ, ವೇಗ ಮತ್ತು ಸುರಕ್ಷತೆ - ಎರಡನ್ನೂ ನೀವು ಹೊಂದಿರಬೇಕು. ನಿಮ್ಮ ಸೈನ್ ಇನ್ ಮಾಹಿತಿಯನ್ನು ನಿಮ್ಮ Google ಖಾತೆಯ ಮೂಲಕ ಖಾಸಗಿ, ಸುರಕ್ಷಿತ ಮತ್ತು ಸುಭದ್ರವಾಗಿರಿಸಲಾಗಿದೆ ಎನ್ನುವುದನ್ನು ತಿಳಿದುಕೊಂಡು ನೀವು ಸಾವಿರಾರು ಆ್ಯಪ್ಗಳು ಹಾಗೂ ವೆಬ್ಸೈಟ್ಗಳಿಗೆ ಹೆಚ್ಚು ಸುರಕ್ಷಿತವಾಗಿ ಮತ್ತು ಸುಲಭವಾಗಿ ಸೈನ್ ಇನ್ ಮಾಡಬಹುದು.
Google ಖಾತೆ ಬಳಸಿಕೊಂಡು ಸೈನ್ ಇನ್ ಮಾಡಿ ಎಂಬ ಫೀಚರ್ ಅನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯಿರಿ -
ಕೇವಲ ಒಂದೇ ಟ್ಯಾಪ್ನಲ್ಲಿ ಎಲ್ಲಿ ಬೇಕಾದರೂ ಸುರಕ್ಷಿತವಾಗಿ ಸೈನ್ ಇನ್ ಮಾಡಿ ಅಥವಾ ಸೈನ್ ಅಪ್ ಮಾಡಿ
Google ಖಾತೆ ಬಳಸಿಕೊಂಡು ಸೈನ್ ಇನ್ ಮಾಡಿ ಸೌಲಭ್ಯದ ಮೂಲಕ ಸೈನ್ ಅಪ್ ಮತ್ತು ಸೈನ್ ಇನ್ ಮಾಡುವ ಮೂಲಕ, ದುರುದ್ದೇಶ ಹೊಂದಿರುವ ಜನರು ನಿಮ್ಮ ಪಾಸ್ವರ್ಡ್ಗಳನ್ನು ಥರ್ಡ್-ಪಾರ್ಟಿ ಆ್ಯಪ್ಗಳಿಗಾಗಿ ಮತ್ತು ಸೇವೆಗಳಿಗಾಗಿ ಕದಿಯದಂತೆ ನೀವು ಸುರಕ್ಷಿತರಾಗಿರುತ್ತೀರಿ. ಒಂದು ವೇಳೆ ಆ್ಯಪ್ ಅಥವಾ ಸೇವೆಯು ಸುರಕ್ಷತೆಯ ಸಮಸ್ಯೆಯನ್ನು ಎದುರಿಸಿದರೂ ಸಹ, ಪ್ರತಿ ಲಾಗ್-ಇನ್ ಅನ್ನು ಅನನ್ಯವಾಗಿ ದೃಢೀಕರಿಸುವ ಮೂಲಕ, Google ಖಾತೆ ಬಳಸಿಕೊಂಡು ಸೈನ್ ಇನ್ ಮಾಡಿ ಸೌಲಭ್ಯವು ಮುಂದೆಯೂ ನೀವು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತದೆ.
-
ನಿಮ್ಮ ಖಾತೆಗಳು ಮತ್ತು ಸಂಪರ್ಕಗಳ ಮೇಲೆ ಹೆಚ್ಚಿನ ನಿಯಂತ್ರಣ
Google ಖಾತೆ ಬಳಸಿಕೊಂಡು ಸೈನ್ ಇನ್ ಮಾಡಿ ಸೌಲಭ್ಯ, ಲಿಂಕ್ ಮಾಡಲಾದ ಖಾತೆಗಳು ಮತ್ತು ನಿಮ್ಮ Google ಖಾತೆಯ ಜೊತೆಗಿನ ಇತರ ಥರ್ಡ್-ಪಾರ್ಟಿ ಕನೆಕ್ಷನ್ಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದನ್ನು ನಿರ್ವಹಿಸಿ. ನೀವು ಯಾವ ಡೇಟಾವನ್ನು ಹಂಚಿಕೊಳ್ಳಲು ಆಯ್ಕೆ ಮಾಡುತ್ತೀರಿ ಎಂಬುದನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಬಹುದು, ಅಪ್ಡೇಟ್ ಮಾಡಬಹುದು ಮತ್ತು ನಿರ್ವಹಿಸಬಹುದು, ಮತ್ತು ಇದರಿಂದ ನೀವು ವ್ಯವಸ್ಥಿತವಾಗಿರಬಹುದು ಮತ್ತು ಹೆಚ್ಚು ನಿಯಂತ್ರಣ ಪಡೆಯಬಹುದು.
ನಿಮ್ಮ ಎಲ್ಲಾ ಸಂಪರ್ಕಗಳನ್ನು ಈಗಲೇ ಪರಿಶೀಲಿಸಿ
-
ಸದೃಢ ಪಾಸ್ವರ್ಡ್ಗಳು, ಸುರಕ್ಷಿತವಾಗಿರಲು ನಿಮಗೆ ಸಹಾಯ ಮಾಡುತ್ತವೆ
ನಿಮ್ಮ ಆನ್ಲೈನ್ ಖಾತೆಗಳಿಗಾಗಿ ಸದೃಢ, ಅನನ್ಯ ಪಾಸ್ವರ್ಡ್ಗಳನ್ನು ಆಯ್ಕೆಮಾಡುವುದು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಖಾಸಗಿಯಾಗಿಡಲು ಒಂದು ಪ್ರಮುಖವಾದ ಹಂತವಾಗಿದೆ. ಆದರೆ ಬಹುತೇಕ ಜನರು ಅನೇಕ ಸೈಟ್ಗಳಾದ್ಯಂತ ಒಂದೇ, ದುರ್ಬಲ ಪಾಸ್ವರ್ಡ್ ಬಳಸುವುದಾಗಿ ಹೇಳುತ್ತಾರೆ, ಇದು ಆ ಖಾತೆಗಳು ಅಪಾಯಕ್ಕೀಡಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
-
Google ನ Password Manager, ನಿಮ್ಮ ಪಾಸ್ವರ್ಡ್ಗಳು ಹಾಗೂ ಪಾಸ್ಕೀಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ
ನೀವು ಸೇವ್ ಮಾಡಿರುವ ಪಾಸ್ವರ್ಡ್ಗಳು ಮತ್ತು ಪಾಸ್ಕೀಗಳನ್ನು ನಿರ್ವಹಿಸಿChrome ಮತ್ತು Android ನಲ್ಲಿ ಬಿಲ್ಟ್ ಇನ್ ಆಗಿರುವ Google ನ Password Manager, ನಿಮ್ಮ ಎಲ್ಲಾ ಆನ್ಲೈನ್ ಖಾತೆಗಳಿಗಾಗಿ ಪಾಸ್ವರ್ಡ್ಗಳನ್ನು ಸುರಕ್ಷಿತವಾಗಿ ಸಲಹೆ ಮಾಡುತ್ತದೆ, ಸೇವ್ ಮಾಡುತ್ತದೆ ಮತ್ತು ಭರ್ತಿ ಮಾಡುತ್ತದೆ. ಪಾಸ್ಕೀಗಳು ಪಾಸ್ವರ್ಡ್ಗಳ ಜೊತೆಗೆ ಕೆಲಸ ಮಾಡುತ್ತವೆ ಮತ್ತು ಇವೆಲ್ಲವನ್ನೂ ಒಂದೇ ಸ್ಥಳದಿಂದ ಆರಾಮವಾಗಿ ನಿರ್ವಹಿಸಬಹುದಾಗಿದೆ.
-
ಸ್ವಯಂಚಾಲಿತ ಪಾಸ್ವರ್ಡ್ ಎಚ್ಚರಿಕೆಗಳು ನಿಮ್ಮ ಪಾಸ್ವರ್ಡ್ಗಳನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತವೆ
ಪ್ರತಿ ದಿನ, ಹೊಸ ಡೇಟಾ ಉಲ್ಲಂಘನೆಗಳು ಲಕ್ಷಾಂತರ ಬಳಕೆದಾರರ ಹೆಸರುಗಳು ಮತ್ತು ಪಾಸ್ವರ್ಡ್ಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತವೆ. ಪಾಸ್ವರ್ಡ್ಗಳು ಅಪಾಯಕ್ಕೀಡಾಗಿವೆಯೇ ಎಂಬುದನ್ನು Google ಮೌಲ್ಯಮಾಪನ ಮಾಡುತ್ತದೆ, ಹಾಗಾಗಿ ನೀವು ಉಳಿಸಿರುವ ಯಾವುದೇ ಪಾಸ್ವರ್ಡ್ಗಳು ಡೇಟಾ ಉಲ್ಲಂಘನೆಗೆ ಒಳಪಟ್ಟಿರುವುದು ಕಂಡುಬಂದರೆ, ನಾವು ಸ್ವಯಂಚಾಲಿತವಾಗಿ ನಿಮ್ಮನ್ನು ಎಚ್ಚರಿಸುತ್ತೇವೆ.
ಪಾಸ್ವರ್ಡ್ ಪರೀಕ್ಷೆ ಮಾಡುವ ಮೂಲಕ ನಿಮ್ಮ ಎಲ್ಲಾ ಆನ್ಲೈನ್ ಖಾತೆಗಳನ್ನು ಸುರಕ್ಷಿತವಾಗಿರಿಸಿ. ನಿಮ್ಮ ಪಾಸ್ವರ್ಡ್ಗಳ ದೃಢತೆಯನ್ನು ಪರೀಕ್ಷಿಸಿ, ನೀವು ಅವುಗಳಲ್ಲಿ ಯಾವುದನ್ನಾದರೂ ಒಂದಕ್ಕಿಂತ ಹೆಚ್ಚು ಬಾರಿ ಬಳಸಿದ್ದೀರಾ ಎಂದು ಪರಿಶೀಲಿಸಿ ಮತ್ತು ಅವುಗಳಲ್ಲಿ ಯಾವುದಾದರೂ ಬಹಿರಂಗವಾಗಿದೆಯೇ ಎಂದು ತಿಳಿದುಕೊಳ್ಳಿ.
ಸಹಾಯ ಮಾಡುವ ಮಾರ್ಗಗಳನ್ನು ಎಕ್ಸ್ಪ್ಲೋರ್ ಮಾಡಿ.
-
ಗೌಪ್ಯತಾ ನಿಯಂತ್ರಣಗಳುನಿಮಗೆ ಸೂಕ್ತವಾಗಿರುವಂತಹ ಗೌಪ್ಯತೆ ಸೆಟ್ಟಿಂಗ್ಗಳನ್ನು ಆಯ್ಕೆಮಾಡಿಕೊಳ್ಳಿ.
-
ಡೇಟಾ ನಿರ್ವಹಣಾ ಅಭ್ಯಾಸಗಳುಜವಾಬ್ದಾರಿಯುತ ಡೇಟಾ ನಿರ್ವಹಣಾ ಅಭ್ಯಾಸಗಳ ಮೂಲಕ ನಾವು ನಿಮ್ಮ ಗೌಪ್ಯತೆಯನ್ನು ಹೇಗೆ ಗೌರವಿಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
-
ಭದ್ರತಾ ಸಲಹೆಗಳುಆನ್ಲೈನ್ನಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುವ ತ್ವರಿತ ಸಲಹೆಗಳು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಅನ್ವೇಷಿಸಿ.
-
ಜಾಹೀರಾತುಗಳು ಮತ್ತು ಡೇಟಾನಮ್ಮ ಪ್ಲ್ಯಾಟ್ಫಾರ್ಮ್ಗಳಲ್ಲಿ ನಿಮಗೆ ಕಾಣಿಸುವ ಜಾಹೀರಾತುಗಳ ಕುರಿತು ಇನ್ನಷ್ಟು ತಿಳಿಯಿರಿ.