ಸಮತಲೋನವನ್ನು ಕಂಡುಕೊಳ್ಳುವುದು

ಸ್ಟೀಫನ್ ಸೋಮೋಗಿ ಅವರು Google ನಲ್ಲಿ ಭದ್ರತೆ ಮತ್ತು ಗೌಪ್ಯತೆ ಉತ್ಪನ್ನ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಾರೆ. ನಮ್ಮ ಆನ್‌ಲೈನ್ ನಡವಳಿಕೆಯ ಬಗ್ಗೆ ನಾವು ಹೆಚ್ಚು ವಿಮರ್ಶಾತ್ಮಕವಾಗಿ ಯೋಚಿಸುವುದನ್ನು ಆರಂಭಿಸಬೇಕು ಎಂದು ಅವರು ನಂಬುತ್ತಾರೆ

ಶ್ರೀ ಸೋಮೋಗಿ, ಇಲ್ಲಿ ಜರ್ಮನಿಯಲ್ಲಿ ನಾವು ಯಾವಾಗಲೂ ಕಾರ್‌ನಲ್ಲಿ ಸೀಟ್ ಬೆಲ್ಟ್ ಧರಿಸುತ್ತೇವೆ, ಎಲ್ಲಾ ರೀತಿಯ ವಿಮಾ ಯೋಜನೆಗಳನ್ನು ಹೊಂದಿರುತ್ತೇವೆ ಮತ್ತು ATM ನಲ್ಲಿ ಪಿನ್ ಪ್ಯಾಡ್ ಅನ್ನು ಕವರ್ ಮಾಡುತ್ತೇವೆ – ಹಾಗಾದರೆ ಇಂಟರ್ನೆಟ್‌ಗೆ ಬಂದಾಗ ನಾವು ಏಕೆ ಕಾಳಜಿ ವಹಿಸುವುದಿಲ್ಲ?

ಇದು ಕೇವಲ ಜರ್ಮನ್ ವಿದ್ಯಮಾನವಲ್ಲ; ಇದು ಜಾಗತಿಕವಾಗಿದೆ. ನೈಜವಾದ, ಗೋಚರಿಸುವ ಅಪಾಯಗಳನ್ನು ಎದುರಿಸಲು ಉತ್ತಮ ಸ್ಥಿತಿಯಲ್ಲಿರುವ ಮಾನವನ ಮನಸ್ಸೇ ಇದರ ಹಿಂದಿನ ಕಾರಣ. ಅದು ಇಂಟರ್ನೆಟ್‌ನಲ್ಲಿನ ಅಪಾಯಗಳಿಗೆ ಅನ್ವಯಿಸುವ ವಿಷಯವಲ್ಲ. ಅದಕ್ಕಾಗಿಯೇ Google ನಂತಹ ಟೆಕ್ ಕಂಪನಿಗಳು ತಮ್ಮ ಬಳಕೆದಾರರು ಸುರಕ್ಷಿತವಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ, ನಾವು ಅದನ್ನು ಸಾಧಿಸಲು ತೀವ್ರವಾಗಿ ಕೆಲಸ ಮಾಡುತ್ತಿದ್ದೇವೆ.

ನೀವು ಯಾವುದರ ಕುರಿತು ಕೆಲಸ ಮಾಡುತ್ತಿದ್ದೀರಿ?

ನಮ್ಮ ಬಳಕೆದಾರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾವು ಸಾಕಷ್ಟು ಸಮಯ ಮತ್ತು ಹಣವನ್ನು ಹೂಡಿಕೆ ಮಾಡಿದ್ದೇವೆ. ಉದಾಹರಣೆಗೆ, ನಾವು ಹಲವಾರು ಭದ್ರತಾ ಎಚ್ಚರಿಕೆಗಳನ್ನು ತೋರಿಸುತ್ತಿದ್ದೇವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ, ಇದು ಜನರು ಅವುಗಳನ್ನು ಸಾಕಷ್ಟು ಗಂಭೀರವಾಗಿ ಪರಿಗಣಿಸದಿರಲು ಕಾರಣವಾಯಿತು. ಪ್ರಶ್ನೆ ಎಂದರೆ: ಎಚ್ಚರಿಕೆಗಳ ಸರಿಯಾದ ಸಂಖ್ಯೆ ಯಾವುದು? ಸರಿಯಾದ ಸಮತೋಲನ ಕಂಡುಕೊಳ್ಳುವುದು ಸುಲಭವಲ್ಲ. ಸಾಮಾನ್ಯವಾಗಿ, ನಾವು ಮಾನವನ ನಡವಳಿಕೆಯನ್ನು ಕಡೆಗಣಿಸುತ್ತೇವೆ.

ನಿಮ್ಮ ಮಾತಿನ ಅರ್ಥವೇನು?

ಬಳಕೆದಾರರು ಇಮೇಲ್‌ನಲ್ಲಿನ ಲಿಂಕ್ ಮೇಲೆ ಕ್ಲಿಕ್ ಮಾಡಲು ಅಥವಾ ಯೋಚಿಸದೆ ತಮ್ಮ ಡೇಟಾವನ್ನು ಹಂಚಿಕೊಳ್ಳಲು ಸಕ್ರಿಯ ನಿರ್ಧಾರ ತೆಗೆದುಕೊಂಡರೆ, ನೀವು ಆ ಕುರಿತು ಹೆಚ್ಚಿನದನ್ನು ಮಾಡಲಾಗುವುದಿಲ್ಲ. ಹೆಚ್ಚಿನ ದಾಳಿಗಳು ಮಾನವನ ನಂಬುವ ಗುಣವನ್ನು ಅವಲಂಬಿಸಿವೆ.

"ಇತರ ಜನರನ್ನು ನಂಬುವ ಸಹಜ ಒಲವನ್ನು ನಾವು ಹೊಂದಿದ್ದೇವೆ. ಅಪರಾಧಿಗಳಿಗೆ ಅದು ತಿಳಿದಿದೆ."

ಸ್ಟೀಫನ್ ಸೋಮೋಗಿ

ಫಲಿತಾಂಶವೇನು?

ಇತರ ಜನರನ್ನು ನಂಬುವ ಸಹಜ ಒಲವನ್ನು ನಾವು ಹೊಂದಿದ್ದೇವೆ. ಅಪರಾಧಿಗಳಿಗೆ ಅದು ತಿಳಿದಿದೆ. ಅದಕ್ಕಾಗಿಯೇ ಅವರು ಕೆಲವೊಮ್ಮೆ ನಮಗೆ ತಿಳಿದಿರದ ಇಮೇಲ್ ವಿಳಾಸದಿಂದ ಇಮೇಲ್ ಬಂದರೂ ಅದನ್ನು ನಂಬುವಂತೆ ಮಾಡಿ ನಮ್ಮನ್ನು ಮೋಸಗೊಳಿಸಲು ಅವರಿಗೆ ಸಾಧ್ಯವಾಗುತ್ತದೆ. ಅಥವಾ ಅವರು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಾರೆ. ಎರಡೂ ಸಂದರ್ಭಗಳಲ್ಲಿ, ಪರಿಣಾಮಗಳು ಒಂದೇ ಆಗಿವೆ – ನಾವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ.

ನೀವು ಒಂದು ಉದಾಹರಣೆ ನೀಡಬಹುದೇ?

ನಿಮ್ಮ ಮೆಚ್ಚಿನ ಟಿವಿ ಸರಣಿಯ ಹೊಸ ಎಪಿಸೋಡ್‌ಗಳನ್ನು ವೀಕ್ಷಿಸಲು ನೀವು ಬಳಸಲು ಯೋಜಿಸಿರುವ ವೀಡಿಯೊ ಸ್ಟ್ರೀಮಿಂಗ್ ಸೇವೆಯನ್ನು ನಿರ್ಬಂಧಿಸಲಾಗುತ್ತದೆ ಎಂದು ಹೇಳುವ ಸಂದೇಶವನ್ನು ನಿಮ್ಮ ಇನ್‌ಬಾಕ್ಸ್‌ನಲ್ಲಿ ಪಡೆಯುತ್ತೀರಿ ಎಂದು ಊಹಿಸಿ. ಅದು ಸಂಭವಿಸದಂತೆ ತಡೆಯಲು, ನೀವು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಬ್ಯಾಂಕ್ ವಿವರಗಳನ್ನು ದೃಢೀಕರಿಸಬೇಕು. ಅಂತಹ ಸಂದರ್ಭದಲ್ಲಿ, ಅನೇಕ ಜನರು ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಆ ಸೂಚನೆಗಳನ್ನು ಅನುಸರಿಸುತ್ತಾರೆ. ತದನಂತರ ದುಷ್ಕರ್ಮಿಯು ಅವರ ಬ್ಯಾಂಕ್ ಖಾತೆಗೆ ಪ್ರವೇಶವನ್ನು ಪಡೆಯುತ್ತಾನೆ.

ಹಾಗಾದರೆ ಆಕ್ರಮಣಕಾರರು ಯಾವಾಗಲೂ ಬಳಕೆದಾರರು ಯೋಚಿಸದೆ ಪ್ರತಿಕ್ರಿಯಿಸುವಂತೆ ಮಾಡಲು ಪ್ರಯತ್ನಿಸುತ್ತಾರೆಯೇ?

ಹೌದು. ಆದರೆ ಜನರು ಅಜ್ಞಾನ ಅಥವಾ ಅತಿಯಾದ ಆತ್ಮವಿಶ್ವಾಸದಿಂದ ಭದ್ರತಾ ಎಚ್ಚರಿಕೆಗಳನ್ನು ನಿರ್ಲಕ್ಷಿಸುವ ಅನೇಕ ಪ್ರಕರಣಗಳೂ ಇವೆ. ಅದಕ್ಕಾಗಿಯೇ, ಭದ್ರತಾ ಎಚ್ಚರಿಕೆಗಳ ವಿಷಯ ಬಂದಾಗ ನಾವು ನೀಡುವ ಮಾರ್ಗದರ್ಶನವನ್ನು ಹೆಚ್ಚು ಸರಳವಾಗಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಬಳಕೆದಾರರು ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂದು ನಾವು ನಿರ್ದೇಶಿಸಲು ಬಯಸುವುದಿಲ್ಲ, ಆದರೆ ವಿಷಯಗಳು ಅಪಾಯಕಾರಿಯಾಗಬಹುದು ಎಂಬುದನ್ನು ಅವರಿಗೆ ತಿಳಿಸಿಕೊಡಲು ಬಯಸುತ್ತೇವೆ. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಗೆ ಅಗತ್ಯವಿರುವ ಎಲ್ಲಾ ವಿಷಯಗಳನ್ನು ಅವರಿಗೆ ಒದಗಿಸಲು ನಾವು ಬಯಸುತ್ತೇವೆ – ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ.

ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು ಈಗ ಜನರ ಏಕೈಕ ಪ್ರವೇಶದ ಸ್ಥಳವಾಗಿ ಉಳಿದಿಲ್ಲ. ಇತರ ಸಾಧನಗಳಿಗೂ ಭದ್ರತಾ ಅಗತ್ಯತೆಗಳು ಒಂದೇ ಆಗಿವೆಯೇ?

ಅದು ನಮಗೆ ದೊಡ್ಡ ಸವಾಲನ್ನು ನೀಡುತ್ತಿದೆ. ಆನ್‌ಲೈನ್ ಭದ್ರತೆಗೆ ಯಾವಾಗಲೂ ಡೇಟಾ ಎನ್‌ಕ್ರಿಪ್ಶನ್‌ನ ಹೆಚ್ಚುವರಿ ವಿನಿಮಯದ ಅಗತ್ಯವಿದೆ, ಉದಾಹರಣೆಗೆ. ಡೆಸ್ಕ್‌ಟಾಪ್ ಕಂಪ್ಯೂಟರ್‌ನಲ್ಲಿ ಅದು ಅಪ್ರಸ್ತುತವಾಗುತ್ತದೆ, ಆದರೆ ಸ್ಮಾರ್ಟ್‌ಫೋನ್‌ನಲ್ಲಿ ಪ್ರಸ್ತುತವಾಗಿರಬಹುದು, ಅದಕ್ಕೆ ಕಾರಣ ಡೇಟಾ ಪರಿಮಾಣದ ಪರಿಗಣನೆಯಾಗಿರಬಹುದು. ಇದರರ್ಥ ನಾವು ಅಗತ್ಯಕ್ಕಿಂತ ಹೆಚ್ಚಿನ ಡೇಟಾವನ್ನು ಬಳಸದಂತಹ ಭದ್ರತಾ ಕ್ರಮಗಳನ್ನು ನಿರ್ಮಿಸಬೇಕು. ಮೊಬೈಲ್ ಸಾಧನಗಳಲ್ಲಿ ವರ್ಗಾವಣೆಯಾದ ಡೇಟಾದ ಪ್ರಮಾಣವನ್ನು ಕಡಿಮೆ ಮಾಡಲು ನಾವು ದೊಡ್ಡ ಪ್ರಯತ್ನವನ್ನು ಮಾಡಿದ್ದೇವೆ ಮತ್ತು ಇದೀಗ ಅದು ಈ ಮೊದಲಿಗಿಂತ ಕಾಲು ಭಾಗವಾಗಿದೆ. ಅಷ್ಟೇ ಅಲ್ಲದೇ, ಗ್ರಾಹಕರು ತಮ್ಮ ಡೇಟಾ ಪರಿಮಾಣವನ್ನು ಬಳಸುವುದನ್ನು ತಪ್ಪಿಸಲು ಭದ್ರತಾ ಸೆಟ್ಟಿಂಗ್‌ಗಳನ್ನು ಸ್ವಿಚ್ ಆಫ್ ಮಾಡಲು ನಾವು ಬಯಸುವುದಿಲ್ಲ. ಇಲ್ಲಿ ಮಾನವನ ನಡವಳಿಕೆಯು ಮತ್ತೆ ಕಾರ್ಯರೂಪಕ್ಕೆ ಬರುತ್ತದೆ.

ನಾನು ಎಲ್ಲಾ ಭದ್ರತಾ ಸಲಹೆಗಳನ್ನು ಅನುಸರಿಸುತ್ತೇನೆ ಮತ್ತು ನನ್ನ ವೈಯಕ್ತಿಕ ಡೇಟಾದ ಜೊತೆಗೆ ಜಾಗರೂಕನಾಗಿರುತ್ತೇನೆ ಎಂದು ಭಾವಿಸೋಣ. ಇದರರ್ಥ ನಾನು ಬಾಹ್ಯ ಆ್ಯಂಟಿ-ವೈರಸ್ ಪ್ರೋಗ್ರಾಂ ಇಲ್ಲದೆ ಮಾಡಬಹುದೇ?

ಇದನ್ನು ಈ ರೀತಿ ಇರಿಸಿ: ನಿಮ್ಮ ಸಿಸ್ಟಮ್ ಅನ್ನು ನೀವು ನಿರಂತರವಾಗಿ ಅಪ್‌ಡೇಟ್ ಮಾಡಿದರೆ, ನೀವು ಒಳ್ಳೆಯ ರಕ್ಷಣೆ ಹೊಂದಿದ್ದೀರಿ ಎಂದರ್ಥ. ಆದರೆ ಅದು ಯಾವಾಗಲೂ ಹಾಗೇ ಇರುವುದಿಲ್ಲ. ಈ ಹಿಂದೆ, ಈ ಸಮಸ್ಯೆ ಬಂದಾಗ ಅನೇಕ ಕಂಪನಿಗಳು ಸಾಕಷ್ಟು ಸಮರ್ಪಕ ಜ್ಞಾನವನ್ನು ಹೊಂದಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಆ ಪರಿಸ್ಥಿತಿಯು ತಂಬಾ ಸುಧಾರಿಸಿದೆ ಮತ್ತು ಅಪಾಯವನ್ನು ಬಹಳಷ್ಟು ಕಡಿಮೆ ಮಾಡಲಾಗಿದೆ.

ಭವಿಷ್ಯದ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ. ನಿಮ್ಮ ಮುಂದಿನ ಉದ್ದೇಶವೇನು?

ನಾವು HTTPS ಅನ್ನು ವೆಬ್‌ನಾದ್ಯಂತದ ಸ್ಟ್ಯಾಂಡರ್ಡ್ ಪ್ರೊಟೊಕಾಲ್ ಆಗಿ ಮಾಡಲು ಬಯಸುತ್ತೇವೆ, ಇದರಿಂದಾಗಿ ಕನೆಕ್ಷನ್‌ಗಳು ಯಾವಾಗಲೂ ಎನ್‌ಕ್ರಿಪ್ಟ್ ಆಗುತ್ತವೆ. ನಮ್ಮ ಅನೇಕ ಸೇವೆಗಳಲ್ಲಿ ಡೇಟಾವನ್ನು ವರ್ಗಾಯಿಸಲು ನಾವು ಈಗಾಗಲೇ ಸುರಕ್ಷಿತ HTTPS ಎನ್‌ಕ್ರಿಪ್ಶನ್ ಅನ್ನು ಬಳಸುತ್ತಿದ್ದೇವೆ, ಉದಾಹರಣೆಗೆ Google Search ಮತ್ತು Gmail.

ಹಾಗಾದರೆ ಎಲ್ಲಾ ಆನ್‌ಲೈನ್ ಡೇಟಾವನ್ನು ಸುರಕ್ಷಿತವಾಗಿ ವರ್ಗಾಯಿಸಲು ನೀವು ಬಯಸುತ್ತೀರಾ?

ಹೌದು. ಇಲ್ಲಿಯವರೆಗೆ, ಸುರಕ್ಷಿತ ಕನೆಕ್ಷನ್‌ಗಳನ್ನು ವಿಳಾಸ ಪಟ್ಟಿಯಲ್ಲಿ ಗುರುತಿಸಲಾಗಿದೆ. ಭವಿಷ್ಯದಲ್ಲಿ ಅಸುರಕ್ಷಿತ ಕನೆಕ್ಷನ್‌ಗಳನ್ನು ಫ್ಲ್ಯಾಗ್ ಮಾಡಲು ಸಾಧ್ಯವಾಗುವಂತೆ ನಾವು ಅದನ್ನು ತಿರುಗಿಸಲು ಬಯಸುತ್ತೇವೆ.

ಫೋಟೋಗ್ರಾಫ್‌ಗಳು: ಫೆಲಿಕ್ಸ್ ಬ್ರಾಗೆಮನ್

ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು

ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.

ಇನ್ನಷ್ಟು ತಿಳಿಯಿರಿ