Google ನಿಮ್ಮ ಡೇಟಾವನ್ನು ಹೇಗೆ ಸುರಕ್ಷಿತವಾಗಿರಿಸುತ್ತದೆ
ಹ್ಯಾಕಿಂಗ್‌ನಿಂದ ಪ್ರಾರಂಭಿಸಿ ಮಾಲ್‌ವೇರ್‌ವರೆಗೆ, ಬಳಕೆದಾರರ ಖಾತೆಗಳನ್ನು ಹೈಜಾಕ್ ಮಾಡಲು ಸೈಬರ್ ಅಪರಾಧಿಗಳು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಆದರೆ ಈ ಕಾರ್ಯದಲ್ಲಿ ಅವರಿಗೆ ಯಶಸ್ಸು ಸಿಗದಂತೆ Google ನ ಸ್ಟೀಫನ್ ಮಿಕ್‌ಲಿಟ್ಜ್ ಹಾಗೂ ಟಾಡೆಕ್ ಪಿಯೆಟ್ರಝೆಕ್ ಅವರು ನೋಡಿಕೊಳ್ಳುತ್ತಾರೆ.
ಪಿಯೆಟ್ರಝೆಕ್ ಅವರೇ, ನೀವು ಹಾಗೂ ನಿಮ್ಮ ತಂಡದವರು, ಬಳಕೆದಾರರ ಖಾತೆಯನ್ನು ಸುರಕ್ಷಿತವಾಗಿರಿಸುವ ಜವಾಬ್ದಾರಿಯನ್ನು ಹೊಂದಿರುವಿರಿ. ಹ್ಯಾಕರ್‌ಗಳು ಪ್ರವೇಶ ಪಡೆಯುವುದನ್ನು ನೀವು ಹೇಗೆ ತಡೆಯುವಿರಿ?
ಟಾಡೆಕ್ ಪಿಯೆಟ್ರಝೆಕ್, ಬಳಕೆದಾರರ ಖಾತೆಯ ಸುರಕ್ಷತೆಗಾಗಿ ಪ್ರಧಾನ ಸಾಫ್ಟ್‌ವೇರ್ ಇಂಜಿನಿಯರ್: ಮೊತ್ತಮೊದಲಿಗೆ, ಆರಂಭಿಕ ದಾಳಿಯನ್ನು ನಾವೆಲ್ಲರೂ ಗುರುತಿಸಲು ಸಾಧ್ಯವಾಗುವುದು ಮುಖ್ಯವಾಗಿದೆ. ಸಂದೇಹಾಸ್ಪದ ಚಟುವಟಿಕೆಯನ್ನು ಗುರುತಿಸಲು ನಾವು ನೂರಕ್ಕೂ ಹೆಚ್ಚು ವೇರಿಯೇಬಲ್‌ಗಳನ್ನು ಬಳಸುತ್ತೇವೆ. ಉದಾಹರಣೆಗೆ, ನೀವು ಜರ್ಮನಿಯಲ್ಲಿ ವಾಸಿಸುತ್ತಿರುವಿರಿ ಮತ್ತು ಬಹಳ ಅಪರೂಪವಾಗಿ ವಿದೇಶ ಪ್ರಯಾಣ ಮಾಡುತ್ತೀರಿ ಎಂದಾದರೆ, ಬೇರೊಂದು ದೇಶದಿಂದ ನಿಮ್ಮ ಖಾತೆಗೆ ಯಾರೋ ಪ್ರವೇಶ ಪಡೆಯಲು ಪ್ರಯತ್ನಿಸಿದಾಗ, ಅದು ಎಚ್ಚರಿಕೆಯ ಗಂಟೆಗಳನ್ನು ಮೊಳಗಿಸುತ್ತದೆ.
ಸ್ಟೀಫನ್ ಮಿಕ್‌ಲಿಟ್ಜ್, Google ನ ಗೌಪ್ಯತೆ ಹಾಗೂ ಸುರಕ್ಷತೆ ತಂಡದಲ್ಲಿ ಡೈರೆಕ್ಟರ್ ಆಫ್ ಇಂಜಿನಿಯರಿಂಗ್: ಆದ್ದರಿಂದ ನಾವು ಕೆಲವೊಮ್ಮೆ, ನೀವು ಕೊಟ್ಟಿರುವ ದೂರವಾಣಿ ಸಂಖ್ಯೆಯನ್ನು ಖಚಿತಪಡಿಸಲು, ಅಥವಾ ಖಾತೆದಾರರಾಗಿ ನಿಮಗೆ ಮಾತ್ರ ತಿಳಿದಿರುವ ಇತರ ಮಾಹಿತಿಯನ್ನು ಖಚಿತಪಡಿಸಲು ಹೇಳುತ್ತೇವೆ.
ಈ ರೀತಿಯ ದಾಳಿಗಳು ಎಷ್ಟು ಆಗಾಗ ಸಂಭವಿಸುತ್ತವೆ?
ಪಿಯೆಟ್ರಝೆಕ್: ಪ್ರತಿದಿನವೂ ನೂರಾರು ಸಾವಿರಾರು ಸೈಬರ್ ದಾಳಿಗಳನ್ನು ಪ್ರಾರಂಭಿಸಲಾಗುತ್ತದೆ. ನಮ್ಮ ಅತಿ ದೊಡ್ಡ ಸಮಸ್ಯೆ ಎಂದರೆ ಇಂಟರ್ನೆಟ್‌ನಲ್ಲಿ, ಹ್ಯಾಕ್ ಮಾಡಲಾದ ವೆಬ್‌ಸೈಟ್‌ಗಳಿಂದ ಕದಿಯಲಾದಂತಹ ಲೆಕ್ಕವಿಲ್ಲದಷ್ಟು ಬಳಕೆದಾರರ ಹೆಸರುಗಳು ಮತ್ತು ಪಾಸ್‌ವರ್ಡ್‌ಗಳ ಪಟ್ಟಿಗಳಿವೆ. ಅನೇಕ ಬಳಕೆದಾರರು ವಿವಿಧ ಖಾತೆಗಳಿಗೆ ಒಂದೇ ಪಾಸ್‌ವರ್ಡ್ ಅನ್ನು ಬಳಸುವ ಕಾರಣ, ಈ ಪಟ್ಟಿಗಳಲ್ಲಿ Google ಖಾತೆಯ ಲಾಗಿನ್ ಡೇಟಾ ಸಹ ಸೇರಿರುತ್ತದೆ.
ಈ ಪಟ್ಟಿಗಳು ಅತಿ ದೊಡ್ಡ ಸುರಕ್ಷತಾ ಬೆದರಿಕೆಗಳಾಗಿವೆಯೇ?
ಪಿಯೆಟ್ರಝೆಕ್: ಹೌದು, ಖಂಡಿತವಾಗಿ. ಇವು ಮತ್ತು ಕ್ಲಾಸಿಕ್ ಫಿಶಿಂಗ್ ದಾಳಿಗಳು ಸುರಕ್ಷತೆಗೆ ಬಲು ದೊಡ್ಡ ಬೆದರಿಕೆಗಳಾಗಿವೆ. ಖಾತೆಯ ಪಾಸ್‌ವರ್ಡ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿರುವ ಅಪರಾಧಿಗಳಿಂದ ಬಹುತೇಕ ಎಲ್ಲರೂ ಸಹ, ಇಮೇಲ್‌ಗಳನ್ನು ಸ್ವೀಕರಿಸಿರುತ್ತಾರೆ. ಸಹಜವಾಗಿಯೇ, ಅವರು ಯಶಸ್ವಿಯಾಗದಂತೆ ತಡೆಯಲು ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ನಿಮ್ಮ Gmail ಇನ್‌ಬಾಕ್ಸ್‌ಗೆ ಬರುತ್ತಿರುವ ಒಂದು ಇಮೇಲ್ ಸಂದೇಹಾಸ್ಪದವಾಗಿ ತೋರುತ್ತಿದೆ ಎಂದು ನಾವು ಭಾವಿಸಿದರೆ, ನೀವು ಗಮನವಿಟ್ಟು ಪರಿಶೀಲಿಸಲು ನಾವು ಅದನ್ನು ಒಂದು ಎಚ್ಚರಿಕೆಯೊಂದಿಗೆ ಗುರುತು ಮಾಡಬಹುದು ಅಥವಾ ಸ್ವಯಂಚಾಲಿತವಾಗಿ ಫಿಲ್ಟರ್ ಮಾಡಬಹುದು. ಫಿಶಿಂಗ್ ವೆಬ್‌ಸೈಟ್ ಎಂದು ನಮಗೆ ತಿಳಿದಿರುವ ಒಂದು ಸೈಟ್‌ಗೆ ನೀವು ಭೇಟಿ ನೀಡಲು ಪ್ರಯತ್ನಿಸುವಾಗಲೂ ಸಹ ನಮ್ಮ Chrome ಬ್ರೌಸರ್ ಎಚ್ಚರಿಕೆಗಳನ್ನು ಕಳುಹಿಸುತ್ತದೆ.
ಮಿಕ್‌ಲಿಟ್ಜ್: ಮೂಲಭೂತವಾಗಿ, ಎರಡು ರೀತಿಗಳ ಫಿಶಿಂಗ್‌ಗಳಿವೆ. ಸಾಧ್ಯವಾದಷ್ಟು ಲಾಗಿನ್ ಡೇಟಾವನ್ನು ಸಂಗ್ರಹಿಸಲು ಅಪರಾಧಿಗಳು ಬಳಸುವ ಸಮೂಹ ಇಮೇಲ್‌ಗಳು ಮತ್ತು “ಸ್ಪಿಯರ್ ಫಿಶಿಂಗ್”, ಇದರಲ್ಲಿ ಅವರು ನಿರ್ದಿಷ್ಟ ವ್ಯಕ್ತಿಯ ಖಾತೆಯನ್ನು ಗುರಿ ಮಾಡಿಕೊಳ್ಳುತ್ತಾರೆ. ಇವುಗಳು ಕೆಲವು ತಿಂಗಳುಗಳವರೆಗೆ ಸಾಗುವ ಸಾಕಷ್ಟು ಆಧುನಿಕ ಕಾರ್ಯಾಚರಣೆಗಳಾಗಿರಬಹುದು; ಈ ಸಮಯದಲ್ಲಿ ಅಪರಾಧಿಗಳು, ಗುರಿಯಾಗಿರುವ ವ್ಯಕ್ತಿಯ ಜೀವನವನ್ನು ವಿವರವಾಗಿ ಪರಿಶೀಲಿಸುತ್ತಾರೆ ಮತ್ತು ಬಹಳ ಗುರಿ ಮಾಡಿದ ದಾಳಿಯನ್ನು ಪ್ರಾರಂಭಿಸುತ್ತಾರೆ.
"ನಿಮ್ಮ Gmail ಇನ್‌ಬಾಕ್ಸ್‌ಗೆ ಬರುತ್ತಿರುವ ಒಂದು ಇಮೇಲ್ ಸಂದೇಹಾಸ್ಪದವಾಗಿ ತೋರುತ್ತಿದೆ ಎಂದು ನಾವು ಭಾವಿಸಿದರೆ, ನಾವು ಅದನ್ನು ಒಂದು ಎಚ್ಚರಿಕೆಯೊಂದಿಗೆ ಗುರುತು ಮಾಡಬಹುದು."
ಟಾಡೆಕ್ ಪಿಯೆಟ್ರಝೆಕ್
ಈ ರೀತಿಯ ದಾಳಿಗಳು ಯಶಸ್ವಿಯಾಗದ ಹಾಗೆ ತಡೆಯಲು Google ತನ್ನ ಬಳಕೆದಾರರಿಗೆ ಹೇಗೆ ಸಹಾಯ ಮಾಡುತ್ತಿದೆ?
ಪಿಯೆಟ್ರಝೆಕ್: ಒಂದು ಉದಾಹರಣೆಯೆಂದರೆ ನಮ್ಮ 2-ಹಂತದ ಪರಿಶೀಲನೆ ವ್ಯವಸ್ಥೆ. ಹಲವಾರು ಬಳಕೆದಾರರು ತಮ್ಮ ಆನ್‌ಲೈನ್ ಬ್ಯಾಂಕ್ ಖಾತೆಗಳಿಂದಾಗಿ ಈ ರೀತಿಯ ವ್ಯವಸ್ಥೆಯ ಕುರಿತು ಪರಿಚಿತರಾಗಿದ್ದಾರೆ. ನೀವು ಹಣ ವರ್ಗಾಯಿಸಲು ಬಯಸುವಿರಾದರೆ, ಉದಾಹರಣೆಗೆ, ನಿಮ್ಮ ಪಾಸ್‌ವರ್ಡ್ ಹಾಗೂ ಪಠ್ಯ ಸಂದೇಶದ ಮೂಲಕ ಕಳುಹಿಸಲಾದ ಕೋಡ್ - ಇವೆರಡನ್ನೂ ನೀವು ನಮೂದಿಸಬೇಕಾಗಬಹುದು. ಹೆಚ್ಚಿನ ಪ್ರಮುಖ ಇಮೇಲ್ ಸೇವೆ ಒದಗಿಸುವವರಿಗಿಂತ ಮೊದಲೇ ಅಂದರೆ 2009 ರಲ್ಲಿ Google, ಎರಡು-ಅಂಶಗಳ ದೃಢೀಕರಣವನ್ನು ಪರಿಚಯಿಸಿತು. ಇದಲ್ಲದೆ, ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿರುವ Google ಬಳಕೆದಾರರು, ಸಂದೇಹಾಸ್ಪದ ಲಾಗಿನ್ ಪ್ರಯತ್ನಗಳ ವಿರುದ್ಧ ಇದೇ ಮಟ್ಟದ ಸುರಕ್ಷತೆಯ ಲಾಭವನ್ನು ಸ್ವಯಂಚಾಲಿತವಾಗಿ ಪಡೆಯುತ್ತಾರೆ.
ಮಿಕ್‌ಲಿಟ್ಜ್: ಎರಡು ಅಂಶಗಳ ದೃಢೀಕರಣವು ಉತ್ತಮ ವಿಧಾನವಾಗಿದೆ, ಆದರೆ ಪಠ್ಯ ಸಂದೇಶದ ಕೋಡ್‌ಗಳನ್ನು ಕೂಡಾ ತಿಳಿದುಕೊಳ್ಳಲು ಸಾಧ್ಯವಾಗಬಹುದು. ಉದಾಹರಣೆಗೆ, ಅಪರಾಧಿಗಳು ನಿಮ್ಮ ಮೊಬೈಲ್ ಸೇವೆ ಪೂರೈಕೆದಾರರನ್ನು ಸಂಪರ್ಕಿಸಿ, ತಮಗೆ ಎರಡನೆಯ SIM ಕಾರ್ಡ್ ರವಾನಿಸಲು ಪ್ರಯತ್ನಿಸಬಹುದು. ಬ್ಲೂಟೂತ್ ಟ್ರಾನ್ಸ್‌ಮಿಟರ್ ಅಥವಾ USB ಸ್ಟಿಕ್‌ನಂತಹ ಭೌತಿಕ ಸುರಕ್ಷತಾ ಟೋಕನ್‌ನ ಮೂಲಕ ದೃಢೀಕರಿಸುವುದು ಹೆಚ್ಚು ಸುರಕ್ಷಿತವಾಗಿರುತ್ತದೆ.
ಪಿಯೆಟ್ರಝೆಕ್: ಈ ಸಂಪನ್ಮೂಲವನ್ನು ನಮ್ಮ ಸುಧಾರಿತ ರಕ್ಷಣಾ ಪ್ರೋಗ್ರಾಂನ ಭಾಗವಾಗಿ ನಾವು ಬಳಸುತ್ತಿದ್ದೇವೆ.
ಹಾಗೆಂದರೇನು?
ಪಿಯೆಟ್ರಝೆಕ್: 2017 ರಲ್ಲಿ Google, ಸುಧಾರಿತ ರಕ್ಷಣಾ ಪ್ರೋಗ್ರಾಂ ಅನ್ನು ಪರಿಚಯಿಸಿತು; ಹ್ಯಾಕ್ ಆಗುವ ಅಪಾಯ ಹೆಚ್ಚಾಗಿರುವಂತಹ ವ್ಯಕ್ತಿಗಳು, ಉದಾಹರಣೆಗೆ ಮಾಧ್ಯಮ ವರದಿಗಾರರು, CEO ಗಳು, ರಾಜಕೀಯ ಭಿನ್ನಮತೀಯರು ಮತ್ತು ರಾಜಕಾರಣಿಗಳು ಮುಂತಾದ ಜನರ ಬಳಕೆಗೆ ಇದನ್ನು ಉದ್ದೇಶಿಸಲಾಗಿತ್ತು.
ಮಿಕ್‌ಲಿಟ್ಜ್: ನಮ್ಮ ಭೌತಿಕ ಸುರಕ್ಷತಾ ಕೀ ಮಾತ್ರವಲ್ಲದೆ, ಥರ್ಡ್-ಪಾರ್ಟಿ ಆ್ಯಪ್‌ಗಳ ಮೂಲಕ ಡೇಟಾಗೆ ಪ್ರವೇಶ ಪಡೆಯುವುದನ್ನು ಸಹ ನಾವು ಸೀಮಿತಗೊಳಿಸುತ್ತೇವೆ; ಇದರಲ್ಲಿ ಬಳಕೆದಾರರು ತಮ್ಮ ಕೀ ಕಳೆದುಕೊಂಡರೆ, ಹೆಚ್ಚುವರಿ ಹಂತಗಳ ಮೂಲಕ ಅವರು ತಮ್ಮ ಗುರುತನ್ನು ದೃಢೀಕರಿಸಬೇಕಾಗುತ್ತದೆ.
ಒಂದು ಬೃಹತ್ ಸೈಬರ್ ದಾಳಿಯ ಕುರಿತು ಮತ್ತು ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸಿದಿರಿ ಎಂಬ ಕುರಿತು ಹೇಳಬಲ್ಲಿರಾ?
ಪಿಯೆಟ್ರಝೆಕ್: ಅಂತಹ ಒಂದು ದಾಳಿಯು 2017 ರ ಆರಂಭದಲ್ಲಿ ನಡೆಯಿತು. ಹ್ಯಾಕರ್‌ಗಳು, ಜನರ Google ಖಾತೆಗಳಿಗೆ ಪ್ರವೇಶ ಪಡೆಯಲು ಮತ್ತು ಆ ಬಳಕೆದಾರರ ಕಾಂಟ್ಯಾಕ್ಟ್‌ಗಳಿಗೆ ನಕಲಿ ಇಮೇಲ್‌ಗಳನ್ನು ಕಳುಹಿಸಲು ಒಂದು ದುರುದ್ದೇಶಪೂರಿತ ಪ್ರೋಗ್ರಾಂ ಅನ್ನು ರಚಿಸಿದರು. ಈ ಇಮೇಲ್‌ಗಳಲ್ಲಿ, ಒಂದು ನಕಲಿ Google ಡಾಕ್ಯುಮೆಂಟ್‌ಗೆ ಪ್ರವೇಶ ಒದಗಿಸುವಂತೆ ಸ್ವೀಕೃತಿದಾರರನ್ನು ಕೇಳಲಾಗಿತ್ತು. ಆ ಕೆಲಸವನ್ನು ಮಾಡಿದವರು, ಮಾಲ್‌ವೇರ್‌ಗೂ ಪ್ರವೇಶ ಒದಗಿಸಿದ ಹಾಗಾಯಿತು ಮತ್ತು ಅದೇ ನಕಲಿ ಇಮೇಲ್ ಅನ್ನು ಸ್ವಯಂಚಾಲಿತವಾಗಿ ತಮ್ಮದೇ ಕಾಂಟ್ಯಾಕ್ಟ್‌ಗಳಿಗೂ ಕಳುಹಿಸಿದ ಹಾಗಾಯಿತು. ವೈರಸ್ ವೇಗವಾಗಿ ಹರಡಲು ಪ್ರಾರಂಭವಾಯಿತು. ಇಂತಹ ಸನ್ನಿವೇಶಗಳಲ್ಲಿ ನಮ್ಮ ಬಳಿ ತುರ್ತು ಮಾರ್ಗೋಪಾಯಗಳಿವೆ.
ಮಿಕ್‌ಲಿಟ್ಜ್: ಈ ನಿರ್ದಿಷ್ಟ ಪ್ರಕರಣದಲ್ಲಿ, Gmail ನಲ್ಲಿ ಈ ಇಮೇಲ್‌ಗಳ ವಿತರಣೆಯನ್ನು ನಾವು ನಿರ್ಬಂಧಿಸಿದೆವು, ಪ್ರೋಗ್ರಾಂಗೆ ನೀಡಲಾದ ಪ್ರವೇಶವನ್ನು ಹಿಂಪಡೆದೆವು ಮತ್ತು ಖಾತೆಗಳನ್ನು ಸುರಕ್ಷಿತಗೊಳಿಸಿದೆವು. ಮಾತ್ರವಲ್ಲದೆ, ಭವಿಷ್ಯದಲ್ಲಿ ಇಂತಹ ದಾಳಿಗಳನ್ನು ನಡೆಸಲು ಕಠಿಣವಾಗುವ ಹಾಗೆ ನಾವು ವ್ಯವಸ್ಥಿತ ರಕ್ಷಣಾ ಕ್ರಮಗಳನ್ನು ಸಹ ಸೇರಿಸಿದೆವು. Google ಖಾತೆಗಳು ಸತತವಾಗಿ ದಾಳಿಗೆ ಒಳಗಾಗುತ್ತಾ ಇರುತ್ತವೆ ಮತ್ತು ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಅತ್ಯಂತ ಪರಿಣಾಮಕಾರಿ ರಕ್ಷಣೆಯನ್ನು ಒದಗಿಸುತ್ತವೆ. ನಮ್ಮ ಬಳಕೆದಾರರ Google ಖಾತೆಯಲ್ಲದೆ ಇತರ ವಿಧಾನಗಳ ಮೂಲಕ ನಾವು ಅವರನ್ನು ಸಂಪರ್ಕಿಸಲು ಸಾಧ್ಯವಾಗುವುದನ್ನು ಇದು ಅವಲಂಬಿಸಿದೆ – ಅಂದರೆ ಎರಡನೆಯ ಇಮೇಲ್ ಅಥವಾ ಮೊಬೈಲ್ ಫೋನ್ ಸಂಖ್ಯೆ.
"ನಿಜ ಹೇಳಬೇಕೆಂದರೆ, ಸಾಮಾನ್ಯವಾಗಿ, ಕೆಲವೊಂದು ಮೂಲಭೂತ ನಿಯಮಗಳನ್ನು ಪಾಲಿಸಿದರೆ ಸಾಕಾಗುತ್ತದೆ."
ಸ್ಟೀಫನ್ ಮಿಕ್‌ಲಿಟ್ಜ್
ಸಾಮಾನ್ಯ ಬಳಕೆದಾರರಿಗೆ ಸುರಕ್ಷತೆಯು ಎಷ್ಟು ಮುಖ್ಯವಾಗಿದೆ?
ಪಿಯೆಟ್ರಝೆಕ್: ಹೆಚ್ಚಿನ ಜನರಿಗೆ ಇದು ಬಹಳ ಮುಖ್ಯವಾಗಿರುತ್ತದೆ, ಆದರೆ ಅಗತ್ಯವಾದ ಸುರಕ್ಷತಾ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಪ್ರಯಾಸಕರವಾಗಬಹುದು. ಉದಾಹರಣೆಗೆ, ಜನರು ಅನೇಕ ಖಾತೆಗಳಿಗೆ ಹೆಚ್ಚಾಗಿ ಒಂದೇ ಪಾಸ್‌ವರ್ಡ್ ಏಕೆ ಬಳಸುತ್ತಾರೆ ಎಂಬುದನ್ನು ಇದು ವಿವರಿಸುತ್ತದೆ – ಇದು ನೀವು ಮಾಡಬಹುದಾದ ಅತ್ಯಂತ ದೊಡ್ಡ ತಪ್ಪು. ಬಳಕೆದಾರರು ಕನಿಷ್ಠ ಪ್ರಯತ್ನದೊಂದಿಗೆ ತಮ್ಮ ಖಾತೆಗಳನ್ನು ಹೇಗೆ ಸುರಕ್ಷಿತವಾಗಿರಿಸಬಹುದು ಎನ್ನುವುದನ್ನು ವಿವರಿಸುವುದು ನಮ್ಮ ಕೆಲಸವಾಗಿದೆ. ಅದಕ್ಕಾಗಿಯೇ ನಾವು Google ಖಾತೆಯಲ್ಲಿ ಭದ್ರತಾ ಪರಿಶೀಲನೆ ಕಾರ್ಯಾಚರಣೆಯನ್ನು ಒದಗಿಸುತ್ತಿದ್ದೇವೆ, ಇದರಿಂದ ಬಳಕೆದಾರರು ಸುಲಭವಾಗಿ ತಮ್ಮ ಸೆಟ್ಟಿಂಗ್‌ಗಳನ್ನು ಪರಿಶೀಲಿಸಬಹುದು.
ಮಿಕ್‌ಲಿಟ್ಜ್: ನಿಜ ಹೇಳಬೇಕೆಂದರೆ, ಸಾಮಾನ್ಯವಾಗಿ, ಕೆಲವೊಂದು ಮೂಲಭೂತ ನಿಯಮಗಳನ್ನು ಪಾಲಿಸಿದರೆ ಸಾಕಾಗುತ್ತದೆ.
ಮತ್ತೆ ಆ ನಿಯಮಗಳು ಯಾವುವು?
ಮಿಕ್‌ಲಿಟ್ಜ್: ಹಲವು ಸೇವೆಗಳಲ್ಲಿ ಒಂದೇ ಪಾಸ್‌ವರ್ಡ್ ಬಳಸಬೇಡಿ, ಸುರಕ್ಷತಾ ಅಪ್‌ಡೇಟ್‌ಗಳನ್ನು ಇನ್‌ಸ್ಟಾಲ್ ಮಾಡಿ ಮತ್ತು ಸಂದೇಹಾಸ್ಪದ ಸಾಫ್ಟ್‌ವೇರ್‌ಗಳನ್ನು ದೂರವಿಡಿ. ನಿಮ್ಮನ್ನು ಇತರ ವಿಧಾನಗಳಲ್ಲಿ ಸಂಪರ್ಕಿಸಲು ಸಾಧ್ಯವಾಗುವ ಹಾಗೆ, ದೂರವಾಣಿ ಸಂಖ್ಯೆ ಅಥವಾ ಪರ್ಯಾಯ ಇಮೇಲ್ ವಿಳಾಸವನ್ನು ಒದಗಿಸಿ. ಮತ್ತು ಅನಧಿಕೃತ ವ್ಯಕ್ತಿಗಳು ನಿಮ್ಮ ಫೋನ್‌ಗೆ ಸುಲಭವಾಗಿ ಪ್ರವೇಶ ಪಡೆಯುವುದನ್ನು ತಡೆಯಲು, ಫೋನ್‌ನ ಸ್ಕ್ರೀನ್ ಲಾಕ್ ಅನ್ನು ಸಕ್ರಿಯಗೊಳಿಸಿ. ಈ ಹಂತಗಳೇ ಉತ್ತಮ ಆರಂಭಿಕ ಕ್ರಮಗಳಾಗಿವೆ.
ಫೋಟೋಗಳು: ಕಾನ್ನಿ ಮಿರ್‌ಬಾಕ್
ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು
ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.
ಇನ್ನಷ್ಟು ತಿಳಿಯಿರಿ