ಎಲ್ಲರಿಗಾಗಿ ಕಾರ್ಯನಿರ್ವಹಿಸುವ ಗೌಪ್ಯತೆ ಮತ್ತು ಭದ್ರತೆಯನ್ನು ನಿರ್ಮಿಸಲಾಗುತ್ತಿದೆ

ಮ್ಯೂನಿಕ್‌ನಲ್ಲಿರುವ Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರವು ಗೌಪ್ಯತೆ ಹಾಗೂ ಸುರಕ್ಷತಾ ಎಂಜಿನಿಯರಿಂಗ್‌ನ ಜಾಗತಿಕ ಕೇಂದ್ರವಾಗಿದೆ. ಎಂಜಿನಿಯರ್‌ಗಳಾದ ವೀಲ್ಯಾಂಡ್ ಹಾಲ್‌ಫೆಲ್ಡರ್ ಮತ್ತು ಸ್ಟೀಫನ್ ಮಿಕ್‌ಲಿಟ್ಜ್ ಅವರು, Google ತನ್ನ ಉತ್ಪನ್ನಗಳಿಗೆ ಗೌಪ್ಯತೆ ಮತ್ತು ನಿಯಂತ್ರಣವನ್ನು ಹೇಗೆ ನಿರ್ಮಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ.

ವೀಲ್ಯಾಂಡ್ ಹಾಲ್‌ಫೆಲ್ಡರ್ ಅವರು Google ನ ಹೊಸ ಉದ್ಯೋಗದ ಒಪ್ಪಿಗೆ ಪತ್ರವನ್ನು ಸ್ವೀಕರಿಸಿದಾಗ, ಅವರು ಆಗಲೂ ಯುಎಸ್‌ನಲ್ಲಿ ವಾಸಿಸುತ್ತಿದ್ದರು. ಜರ್ಮನಿಯಿಂದ ಅವರು ಸಿಲಿಕಾನ್ ವ್ಯಾಲಿಗೆ ತೆರಳಿದರು ಮತ್ತು ಅವರು ಜರ್ಮನಿಯಲ್ಲಿ Mercedes-Benz ಸೇರಿದಂತೆ ವಿವಿಧ ಕಂಪನಿಗಳಲ್ಲಿ 12 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. 2008 ರಲ್ಲಿ ಎಲ್ಲವೂ ಬದಲಾಯಿತು. ಅವರ ಹೊಸ ಹುದ್ದೆ ಮತ್ತು ಉದ್ಯೋಗದಾತರ ಬಗ್ಗೆ ಹಾಲ್‌ಫೆಲ್ಡರ್ ಅವರ ಅಮೆರಿಕನ್ ಸ್ನೇಹಿತರು ಮತ್ತು ಸಹೋದ್ಯೋಗಿಗಳು ರೋಮಾಂಚನಗೊಂಡಿದ್ದರು. ಆದರೆ ಅವರ ಭವಿಷ್ಯದ ಕಾರ್ಯನಿರ್ವಹಣೆಯ ಸ್ಥಳವು ಕ್ಯಾಲಿಫೋರ್ನಿಯಾದ ಮೌಂಟೈನ್ ವ್ಯೂ ಆಗಿರಲಿಲ್ಲ – ಅದು ಜರ್ಮನಿಯ ಮ್ಯೂನಿಕ್ ಆಗಿತ್ತು. ಅಲ್ಲಿ, ಈ ವಿಷಯವು ಅವರನ್ನು ಸಾಕಷ್ಟು ನಿರುತ್ಸಾಹ ಎದುರಿಸುವಂತೆ ಮಾಡಿತು. ಅವರು “Google” ಎಂಬ ಹೆಸರು ಪ್ರಸ್ತಾಪಿಸಿದಾಗ ಸಾಮಾನ್ಯ ಶುಭಾಶಯ ಸಂದೇಶಗಳ ಜೊತೆಗೆ ಗಂಟಿಕ್ಕಿದ ಮುಖಭಾವಗಳು ಹಾಗೂ ಪ್ರಶ್ನಾರ್ಥಕ ನೋಟವನ್ನೂ ಸಹ ಸ್ವೀಕರಿಸಿದ್ದರು. ತಮ್ಮ ಡೇಟಾದ ವಿಷಯಕ್ಕೆ ಬಂದಾಗ ಯುರೋಪಿಯನ್ನರು ಮತ್ತು ವಿಶೇಷವಾಗಿ ಜರ್ಮನ್ನರು ಎಷ್ಟು ಸೂಕ್ಷ್ಮ ಎಂಬುದು ಹಾಲ್‌ಫೆಲ್ಡರ್ ಅವರಿಗೆ ತಿಳಿದಿತ್ತು.

ವಿಶೇಷವಾದ ಅಭಿರುಚಿಯಿಂದ ಮಾಡಿರುವ ಅಲಂಕಾರ ಮತ್ತು ಫ್ಲೋರ್‌ನಿಂದ ಸೀಲಿಂಗ್‌ವರೆಗಿನ ಕಿಟಿಕಿಗಳಿಂದಾಗಿ ರೆಸ್ಟೋರೆಂಟ್ ರೀತಿಯ ಅನುಭವ ಕೊಡುವ ಮ್ಯೂನಿಕ್ ಕಚೇರಿಯ ಕ್ಯಾಂಟೀನ್‌ನಲ್ಲಿ Google ನ ಎಂಜಿನಿಯರಿಂಗ್ ಕೇಂದ್ರದ ಸೈಟ್ ಲೀಡ್ ಆಗಿರುವ ಹಾಲ್‌ಫೆಲ್ಡರ್ ಅವರು ಕುಳಿತಿರುತ್ತಾರೆ. ಕೊಠಡಿಯಲ್ಲಿ ನಡೆಯುವ ಸಾಮಾನ್ಯ ಮಾತುಕತೆಗಳಿಂದ ಆಗಿರುವ ಸಂಭಾಷಣೆಯ ತುಣುಕುಗಳಿಂದ ಸ್ಪಷ್ಟವಾಗಿರುವುದೇನೆಂದರೆ, ಇಂಗ್ಲೀಷ್ ಎಂಬುದು ಮ್ಯೂನಿಕ್‌ನ “ಗೂಗ್ಲರ್‌ಗಳ” ಲಿಂಗುವಾ ಫ್ರಾಂಕಾ ಆಗಿದೆ. ಸಿಲಿಕಾನ್ ವ್ಯಾಲಿಯ ಪ್ರಭಾವ ಇಲ್ಲಿಗೇ ಮುಗಿಯುವುದಿಲ್ಲ – ಇಟ್ಟಿಗೆಗಳಿಂದ ನಿರ್ಮಿತವಾಗಿರುವ ಕಟ್ಟಡವು, 2016ರಲ್ಲಿ ಪ್ರಾರಂಭವಾಗಿದ್ದು, ಫಿಟ್‌ನೆಸ್ ಸ್ಟುಡಿಯೊ, ಕಾಫಿ ಬಾರ್, ಬಿಲಿಯರ್ಡ್ ರೂಂ ಮತ್ತು ಲೈಬ್ರರಿಯನ್ನು ಒಳಗೊಂಡಿದೆ. ಈ ಶಾಖೆಯಲ್ಲಿ ವಿಶ್ವದೆಲ್ಲೆಡೆಯಿಂದ ಬಂದಿರುವ ಸುಮಾರು 750 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ಬಹುತೇಕರು ಸಾಫ್ಟ್‌ವೇರ್ ಡೆವಲಪರ್‌ಗಳಾಗಿದ್ದಾರೆ. ಮೌಂಟೈನ್ ವ್ಯೂನಲ್ಲಿರುವ Google ನ ಮುಖ್ಯ ಕಚೇರಿಯ ಸಹೋದ್ಯೋಗಿಗಳೊಂದಿಗೆ ಮುಸ್ಸಂಜೆಯ ನಂತರವೇ ವೀಡಿಯೊ ಕಾನ್ಫರೆನ್ಸ್‌ಗಳು ಸಾಧ್ಯವಾಗುವುದರಿಂದ, ಅವರ ಕೆಲಸದ ಸಮಯವು ಆಗಾಗ ಸಂಜೆಯವರೆಗೂ ವಿಸ್ತರಣೆಯಾಗುತ್ತದೆ.

ಅವರ ಡೇಟಾವನ್ನು ಹೇಗೆ ಬಳಸಲಾಗಿದೆ ಎಂಬ ವಿಷಯ ಬಂದಾಗ, ಸಮಗ್ರ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಹೊಂದಿರುವುದು ಬಳಕೆದಾರರ ಮುಖ್ಯ ಗುರಿಯಾಗಿರುತ್ತದೆ

ಇಷ್ಟೆಲ್ಲಾ ಇದ್ದರೂ, Google ನ ಮ್ಯೂನಿಕ್ ಕಾರ್ಯಾಚರಣೆಯು ಈಗಲೂ ಜರ್ಮನ್ ರೀತಿಯ ಅನುಭವ ನೀಡುತ್ತಿದೆ – ಲೋಕಲ್ ಸಬ್‌ವೇ ನಿಲ್ದಾಣದಂತೆ ಕಾಣಿಸಲಿ ಎಂದು ವಿನ್ಯಾಸಗೊಳಿಸಲಾಗಿರುವ ಕಾನ್ಫರೆನ್ಸ್ ರೂಮ್‌ಗಳು, ಅಥವಾ ಕ್ಲಾಸಿಕ್ ಬೆವೇರಿಯನ್ ಮರದ ಫಲಕಗಳಿಂದ ನಿರ್ಮಿಸಲಾಗಿರುವ ರೂಮ್‌ಗಳಂತಹ ಹಲವು ಲಘುವಾದ ವಿವರಗಳಿಂದಾಗಿ ಇದು ಭಾಗಶಃ ಸಾಧ್ಯವಾಗಿದೆ. ಆದರೆ, ಹಾಲ್‌ಫೆಲ್ಡರ್ ಅವರಿಗೆ, ಇಲ್ಲಿ ಎಲ್ಲಕ್ಕಿಂತ ಹೆಚ್ಚು ಜರ್ಮನ್ ಎನಿಸುವ ಸಂಗತಿ ಎಂದರೆ, ಅವರು ಹೆಮ್ಮೆಯಿಂದ ಹೇಳಿಕೊಳ್ಳುವ “ನಮ್ಮ ಸ್ಥಳೀಯ ಪ್ರಯೋಜನ”. ಅದೆಂದರೆ: ಅವರ ಮ್ಯೂನಿಕ್ ಎಂಜಿನಿಯರ್‌ಗಳು. “ಮ್ಯೂನಿಕ್‌ನಲ್ಲಿ,” ಹಾಲ್‌ಫೆಲ್ಡರ್ ಅವರು ಹೀಗೆ ವಿವರಿಸುತ್ತಾರೆ, “ಡೇಟಾ ಗೌಪ್ಯತೆ ಕ್ಷೇತ್ರದಲ್ಲಿ Google ಗಾಗಿ – ಹಾಗೂ ವಿಶ್ವದ ಎಲ್ಲಾ ಬಳಕೆದಾರರಿಗೆ – ನಾವು ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ನಿರ್ಮಿಸುತ್ತೇವೆ.” ಬಳಕೆದಾರರ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬ ವಿಷಯ ಬಂದಾಗ, ಬಳಕೆದಾರರು ಸಂಪೂರ್ಣ ಪಾರದರ್ಶಕತೆ ಹಾಗೂ ನಿಯಂತ್ರಣ ಹೊಂದಿರಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ. ಮತ್ತು ಇದರ ಬಗ್ಗೆ ಕೆಲಸ ಮಾಡಲು ಜರ್ಮನಿ ಸೂಕ್ತ ಸ್ಥಳವಾಗಿದೆ.

ಡೈರೆಕ್ಟರ್ ಆಫ್ ಎಂಜಿನಿಯರಿಂಗ್ ಆಗಿರುವ ಸ್ಟೀಫನ್ ಮಿಕ್‌ಲಿಟ್ಜ್ ಅವರು ಜಾಗತಿಕವಾಗಿ Google ನ ಉತ್ಪನ್ನಗಳ ಡೇಟಾ ಗೌಪ್ಯತೆ ಮಾನದಂಡಗಳಿಗೆ ಜವಾಬ್ದಾರರಾಗಿದ್ದಾರೆ, ಅವರು ಮ್ಯೂನಿಕ್‌ ಕಚೇರಿಯಲ್ಲಿಯೂ ಸಹ ಕಾರ್ಯನಿರ್ವಹಿಸುತ್ತಾರೆ. 2007 ರಲ್ಲಿ ತಂಡವನ್ನು ಸೇರಿರುವ ಅವರು, ಒಬ್ಬ ನೈಜ ಮ್ಯೂನಿಕ್‌ ಗೂಗ್ಲರ್ ಆಗಿದ್ದಾರೆ. ಮಿಕ್‌ಲಿಟ್ಜ್ ಮತ್ತು ಅವರ ತಂಡವು ಮೂಲ ನನ್ನ ಖಾತೆ ಸೇವೆಯನ್ನು ಅಭಿವೃದ್ಧಿಪಡಿಸಿದೆ, ನಂತರದಲ್ಲಿ ಅದು [Google ಖಾತೆ] ಆಯಿತು (https://myaccount.google.com/){:target="_blank" rel="noopener noreferrer"}. Google ನೊಂದಿಗೆ ಖಾತೆ ಹೊಂದಿರುವ ಯಾರು ಬೇಕಾದರೂ ಈ ಡಿಜಿಟಲ್ ಕಾಕ್‌ಪಿಟ್ ಅನ್ನು ಬಳಸಬಹುದು, ಅದೇ ರೀತಿಯಲ್ಲಿ ಸುಮ್ಮನೆ Google ನ ಹುಡುಕಾಟ ಎಂಜಿನ್ ಅಥವಾ YouTube ಬಳಸುವವರು ಸಹ ಇದನ್ನು ಬಳಸಬಹುದು. ಸೆಟ್ಟಿಂಗ್‌ಗಳನ್ನು ಸುಲಭವಾಗಿ ನಿರ್ವಹಿಸಲು Google ಖಾತೆಯು ಅನುಮತಿಸುತ್ತದೆ. ಬಾಹ್ಯ ದಾಳಿ ವಿರುದ್ಧ ಎಷ್ಟು ಸಮರ್ಪಕವಾಗಿ ಅವರ ಡೇಟಾವನ್ನು ರಕ್ಷಿಸಲಾಗಿದೆ ಎಂಬುದನ್ನು ನೋಡಲು ಬಳಕೆದಾರರು [ಭದ್ರತಾ ಪರಿಶೀಲನೆಯನ್ನು] ಸಹ ಇದನ್ನು ರನ್ ಮಾಡಬಹುದು (https://myaccount.google.com/security-checkup){:target="_blank" rel="noopener noreferrer"}, ಮತ್ತು Google ನ ಸರ್ವರ್‌ಗಳಲ್ಲಿ ಯಾವ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಯಾವುದನ್ನು ಸಂಗ್ರಹಿಸಬಾರದು ಎಂಬುದನ್ನು ನಿರ್ಧರಿಸಲು ಗೌಪ್ಯತೆ ಪರಿಶೀಲನೆ ಬಳಸಬಹುದು.

“ಮ್ಯೂನಿಕ್‌ನಲ್ಲಿ ಡೇಟಾ ಗೌಪ್ಯತೆ ಕ್ಷೇತ್ರದಲ್ಲಿ Google ಗಾಗಿ – ಹಾಗೂ ವಿಶ್ವದ ಎಲ್ಲಾ ಬಳಕೆದಾರರಿಗೆ – ನಾವು ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ನಿರ್ಮಿಸುತ್ತೇವೆ.”

ವೀಲ್ಯಾಂಡ್ ಹಾಲ್‌ಫೆಲ್ಡರ್

“ಇಂತಹ ಎಲ್ಲಾ ರೀತಿಯ ಪ್ರಶ್ನೆಗಳಿಗಾಗಿ ಕೇಂದ್ರೀಯ ಹಬ್ ಅನ್ನು ರಚಿಸುವುದು ಯೋಜನೆಯಾಗಿತ್ತು,” ಎನ್ನುತ್ತಾರೆ ಮಿಕ್‌ಲಿಟ್ಜ್. “ಉತ್ತರಗಳನ್ನು ಎಲ್ಲಾ ಸೆಟ್ಟಿಂಗ್ ಕಾನ್ಫಿಗರೇಶನ್ ಆಯ್ಕೆಗಳೊಂದಿಗೆ ಒಟ್ಟಿಗೆ ಎರಡು ಪುಟಗಳಲ್ಲಿ ಸೇರಿಸಲು ನಾವು ಬಯಸಿದ್ದೆವು – ಆದರೆ ಬಳಕೆದಾರರಿಗೆ ಅದು ಹೆಚ್ಚೆನಿಸಬಾರದು ಎಂಬ ಕಾರಣಕ್ಕೆ ಅತ್ಯಂತ ಪ್ರಮುಖ ಹಂತಗಳ ಮೇಲೆ ಗಮನಹರಿಸಲಾಯಿತು.” Google ನ ಸಿಬ್ಬಂದಿ ಅಡುಗೆ ಮನೆಗಳಲ್ಲಿ ಒಂದಾಗಿರುವ “ಮೈಕ್ರೊಕಿಚನ್‌ಗಳು” ಎಂದು ಕರೆಯಲಾಗುವ ಅಡುಗೆ ಮನೆಯಲ್ಲಿ ಆರು ಅಡಿ ಎತ್ತರದ ಫ್ರಿಜ್ ಇದ್ದು, ಅದರ ತುಂಬಾ ಪಾನೀಯಗಳನ್ನು ಇರಿಸಲಾಗಿದೆ, ಮಿಕ್‌ಲಿಟ್ಜ್ ಅವರು ಇದೀಗ ತಾನೇ ಅಲ್ಲಿಂದ ಒಂದು ಕಾಫಿ ತಂದುಕೊಂಡಿದ್ದಾರೆ. ಗಾಜಿನ ಬಾಗಿಲುಗಳು ಮೇಲಿನ ಎರಡು ಸಾಲುಗಳ ಸ್ಪಷ್ಟ ನೋಟವನ್ನು ಒದಗಿಸುತ್ತವೆ, ಆ ಸಾಲುಗಳು ಮಿನರಲ್ ವಾಟರ್ ಬಾಟಲ್‌ಗಳಿಂದ ಭರ್ತಿಯಾಗಿವೆ. ಫ್ರಿಜ್‌ನ ಉಳಿದ ಸಾಮಗ್ರಿಗಳು ಮಂಜುಗಡ್ಡೆ ಹನಿಗಳಿಂದ ಆವೃತವಾದ ಗಾಜಿನ ಹಿಂದೆ ಮರೆಯಾಗಿವೆ. ಮೊದಲಿಗೆ ಹೊಳೆಯುವ ಜ್ಯೂಸ್‌ಗಳು, ನಂತರ ಸಾಮಾನ್ಯ ಜ್ಯೂಸ್‌ಗಳು, ಆಮೇಲೆ ಅಂತಿಮವಾಗಿ ಐಸ್ಡ್ ಟೀಗಳು ಮತ್ತು ಕೆಳಗಿನ ಶೆಲ್ಫ್‌ಗಳಲ್ಲಿ ಅನಾರೋಗ್ಯಕಾರಿ ಫಿಝ್ಝಿ ಪಾನೀಯಗಳು ಇರುತ್ತವೆ. “ನಾವು ಎಂಜಿನಿಯರ್‌ಗಳು ಯಾವುದೇ ಅವಕಾಶವನ್ನು ಬಿಟ್ಟುಕೊಡಲು ಬಯಸುವುದಿಲ್ಲ” ಎನ್ನುತ್ತಾರೆ ಮಿಕ್‌ಲಿಟ್ಜ್.

ವೀಲ್ಯಾಂಡ್ ಹಾಲ್‌ಫೆಲ್ಡರ್ (ಬಲ) ಅವರು Google ಜರ್ಮನಿಯ ಎಂಜಿನಿಯರಿಂಗ್‌ನ ಉಪಾಧ್ಯಕ್ಷರಾಗಿದ್ದಾರೆ. ಅವರ ಸಹೋದ್ಯೋಗಿ, ಸ್ಟೀಫನ್ ಮಿಕ್‌ಲಿಟ್ಜ್ ಅವರು 2010 ರಿಂದ Google ನ ಜಾಗತಿಕ ಗೌಪ್ಯತೆ ಮತ್ತು ಭದ್ರತೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದು, ಕಂಪನಿಯು ಡೇಟಾವನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಂಡುಕೊಳ್ಳಲು ಯಾರಾದರೂ ಆಸಕ್ತಿ ತೋರಿಸಿದರೆ, ಅವರಿಗೆ ಮಾಹಿತಿ ನೀಡಲು ಇವರನ್ನು ಸೂಕ್ತ ವ್ಯಕ್ತಿಗಳನ್ನಾಗಿಸಿದೆ.

ಹಾಲ್‌ಫೆಲ್ಡರ್ ಮತ್ತು ಮಿಕ್‌ಲಿಟ್ಜ್ ಅವರ ಪ್ರಕಾರ, ಆನ್‌ಲೈನ್ ದಾಳಿಗಳಿಂದ ತನ್ನ ಬಳಕೆದಾರರ ಡೇಟಾವನ್ನು ರಕ್ಷಿಸಲು ಉದ್ಯಮದ ಬೇರೆ ಯಾವುದೇ ಕಂಪನಿಯು ಇಷ್ಟೆಲ್ಲ ಕೆಲಸ ಮಾಡುತ್ತಿಲ್ಲ ಮತ್ತು Google ನ ಸರ್ವರ್ ಮೂಲಸೌಕರ್ಯವು ವಿಶ್ವದ ಅತ್ಯಂತ ಸುರಕ್ಷಿತವಾದ ಸರ್ವರ್ ಮೂಲಸೌಕರ್ಯಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಿರುವುದು ನಿಜ. ಭದ್ರತಾ ವ್ಯವಸ್ಥೆಯು ಸಂಕೀರ್ಣವಾಗಿದೆ ಮತ್ತು ಬಹು ಹಂತಗಳನ್ನು ಒಳಗೊಂಡಿದೆ. ವಿಶ್ವದಾದ್ಯಂತ ಇರುವ ಡೇಟಾಕೇಂದ್ರಗಳಲ್ಲಿ ಡೇಟಾವನ್ನು ಎನ್‌ಕ್ರಿಪ್ಟೆಡ್ ರೂಪದಲ್ಲಿ ಸಂಗ್ರಹಿಸಲಾಗಿದೆ – ಈ ಸೌಲಭ್ಯಗಳು ಗರಿಷ್ಠ ಭದ್ರತೆಯ ಕಾರಾಗೃಹಗಳನ್ನು ಹೋಲುತ್ತವೆ. “ನಮ್ಮ ಯಾವುದಾದರೂ ಒಂದು ಬಯೋಮೆಟ್ರಿಕ್ ಮೂಲಕ ರಕ್ಷಿಸಲಾದ ಡೇಟಾ ಕೇಂದ್ರಗಳಲ್ಲಿ ಇರುವ ಯಾರಾದರೂ ನಿಮ್ಮ ಇಮೇಲ್‌ಗಳನ್ನು ಒಳಗೊಂಡಿರುವ ಹಾರ್ಡ್ ಡ್ರೈವ್ ಸಂಪರ್ಕಕ್ಕೆ ಬಂದರೂ ಸಹ ಅದನ್ನು ಅವರು ಏನೂ ಮಾಡಲು ಸಾಧ್ಯವಾಗುವುದಿಲ್ಲ,” ಎನ್ನುತ್ತಾರೆ ಹಾಲ್‌ಫೆಲ್ಡರ್. “ಅದರಲ್ಲಿರುವ ಎಲ್ಲಾ ಮಾಹಿತಿಯನ್ನು ವಿವಿಧ ಡೇಟಾ ಕೇಂದ್ರಗಳಾದ್ಯಂತ ವಿತರಿಸಲಾಗಿದೆ – ಮತ್ತು ಅದು ಎನ್‌ಕ್ರಿಪ್ಟ್ ಆಗಿರುತ್ತದೆ.” ಜೊತೆಗೆ, ಈ ಎಲ್ಲಾ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಒಂದು ವೇಳೆ Google ನ ಇಂಟರ್‌ಫೇಸ್‌ಗಳು ಅಥವಾ ಉತ್ಪನ್ನಗಳಲ್ಲಿ ದೌರ್ಬಲ್ಯವನ್ನು ಹ್ಯಾಕರ್‌ಗಳು ಕಂಡುಹಿಡಿದರೆ, ಆ ಮಾಹಿತಿಗೆ ಪ್ರತಿಯಾಗಿ ಕಂಪನಿಯು ದೊಡ್ಡ ಬಹುಮಾನಗಳನ್ನು ನೀಡುತ್ತದೆ. ಹಾಗಾಗಿಯೇ ಭದ್ರತಾ ದುರ್ಬಲತೆಯನ್ನು ಬಳಸಿಕೊಳ್ಳುವುದಕ್ಕಿಂತ ಅದನ್ನು ವರದಿ ಮಾಡುವುದು ಭಾವೀ ಸೈಬರ್‌ಕ್ರಿಮಿನಲ್‌ಗಳಿಗೆ ಹೆಚ್ಚು ಉಪಯುಕ್ತವಾಗುತ್ತದೆ.

“ಗೌಪ್ಯತೆ ಮತ್ತು ಭದ್ರತೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗಾಗಿ ಕೇಂದ್ರೀಯ ಹಬ್ ಅನ್ನು ರಚಿಸುವುದು ಯೋಜನೆಯಾಗಿತ್ತು”.

ಸ್ಟೀಫನ್ ಮಿಕ್‌ಲಿಟ್ಜ್

ಹಾಲ್‌ಫೆಲ್ಡರ್ ಮತ್ತು ಮಿಕ್‌ಲಿಟ್ಜ್ ಜೊತೆಗಿನ ಸಂಭಾಷಣೆಯಿಂದ ತೆಗೆದುಕೊಳ್ಳಬೇಕಾದ ಎರಡು ನಿರ್ದಿಷ್ಟವಾದ ಪ್ರಮುಖ ಸಂದೇಶಗಳಿವೆ. ಮೊದಲನೆಯದಾಗಿ, ಯಾರೇ ಆದರೂ ಇಮೇಲ್ ಖಾತೆಯನ್ನು ಸೆಟಪ್ ಮಾಡಿದರೆ ಅಥವಾ Google ನೊಂದಿಗಿನ ಕ್ಲೌಡ್‌ಗೆ ಫೋಟೋಗಳನ್ನು ಅಪ್‌ಲೋಡ್ ಮಾಡಿದರೆ, ಅವರ ಎಲ್ಲಾ ಸಂದೇಶಗಳು ಹಾಗೂ ಚಿತ್ರಗಳು ಸಾಧ್ಯವಾದಷ್ಟು ಸುರಕ್ಷಿತವಾಗಿರುತ್ತವೆ ಎಂಬುದನ್ನು ಅವರು ತಿಳಿದಿರಬೇಕು. ಎರಡನೆಯದು, ವೆಬ್ ಹುಡುಕಾಟ ಮಾಡಲು ಅಥವಾ ಸರ್ಫ್ ಮಾಡಲು Google ಬಳಸುವ ಯಾರೇ ಆದರೂ ತಮ್ಮ ಯಾವ ಡೇಟಾವನ್ನು ಸಂಗ್ರಹಿಸಲು ಮತ್ತು ಬಳಸಲು Google ಗೆ ಅನುಮತಿಸಲಾಗಿದೆ ಎಂಬುದನ್ನು ಅವರಾಗಿಯೇ ನಿರ್ಧರಿಸಬಹುದು. “ವೈಯಕ್ತಿಕವಾಗಿ, ನನ್ನ ಸೆಲ್ ಫೋನ್ ನನಗೆ ಟ್ರಾಫಿಕ್ ಅಪ್‌ಡೇಟ್‌ಗಳನ್ನು ನೀಡಿದಾಗ ಮತ್ತು ಆ ಬಗ್ಗೆ ಹೇಳಿದಾಗ ನಾನು ಅದನ್ನು ಶ್ಲಾಘಿಸುತ್ತೇನೆ, ಉದಾಹರಣೆಗೆ, ಒಂದು ವೇಳೆ ವಿಮಾನ ಪ್ರಯಾಣ ಮಾಡಬೇಕು ಎಂದು ನಾನು ಬಯಸಿದರೆ ಈಗಲೇ ನಾನು ಹೊರಡಬೇಕು ಯಾಕೆಂದರೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ,” ಎಂದು ಹಾಲ್‌ಫೆಲ್ಡರ್ ಹೇಳುತ್ತಾರೆ. “ಆದರೆ ಈ ಫಂಕ್ಷನ್ ಅನ್ನು ಆನ್ ಮಾಡಬೇಕೋ ಬೇಡವೋ ಎಂಬುದನ್ನು ಪ್ರತಿಯೊಬ್ಬರೂ ತಾವಾಗಿಯೇ ನಿರ್ಧರಿಸಬಹುದು.”

Google Chrome gingerbread hearts: ಮ್ಯೂನಿಕ್‌ನ Google ಸೈಟ್‌ನಲ್ಲಿನ ರೂಮ್‌ಗಳು ತಮಾಷೆಯ, ವ್ಯಂಗ್ಯದ ಭಾವವನ್ನು ಹೊಂದಿವೆ.

Google ತನ್ನ ಬಹುತೇಕ ಹಣವನ್ನು ಗಳಿಸುವ ಜಾಹಿರಾತುಗಳ ವಿಷಯದಲ್ಲೂ ಕೂಡ ಇದೇ ನಿಜವಾಗಿದೆ. ಜಾಹೀರಾತುಗಳನ್ನು ನಿಮಗೆ ಸೂಕ್ತವೆನಿಸುವಂತೆ ಮಾಡಲು ಡೇಟಾ ಸಹಾಯ ಮಾಡಬಹುದು -- ಹಾಗಾಗಿ ಒಂದು ವೇಳೆ ನೀವು ಹೊಸ ಬೂದುಬಣ್ಣದ ಸೋಫಾಕ್ಕಾಗಿ ಹುಡುಕಾಡುತ್ತಿದ್ದರೆ, ಆ ಅಗತ್ಯವನ್ನು ಪೂರೈಸುವಂತಹ ಜಾಹೀರಾತುಗಳನ್ನು ನೀವು ನೋಡುತ್ತೀರಿ. ಕೆಲವರು ಇದನ್ನು ಉಪಯುಕ್ತ ಎಂದು ಭಾವಿಸುತ್ತಾರೆ, ಇತರರು ಇದನ್ನು ಕಿರಿಕಿರಿ ಎಂದುಕೊಳ್ಳುತ್ತಾರೆ. ಈ ಜಾಹೀರಾತು ವೈಯಕ್ತೀಕರಣ ವೈಶಿಷ್ಟ್ಯವನ್ನು ಸುಲಭವಾಗಿ ಸ್ವಿಚ್ ಆಫ್ ಮಾಡಲು ಸಾಧ್ಯ ಎಂದು ಮಿಕ್‌ಲಿಟ್ಜ್ ವಿವರಿಸಿದ್ದಾರೆ. “ಹೌದು, Google ಖಾತೆಯ ಮೂಲಕ,” ಎಂಬುದನ್ನು ಹೇಳಿದ್ದಾರೆ. ಬಳಕೆದಾರರು ಈ ವೈಶಿಷ್ಟ್ಯವನ್ನು ಆಫ್ ಮಾಡಿದರೂ ಸಹ ಅವರು ಜಾಹೀರಾತುಗಳನ್ನು ನೋಡುತ್ತಾರೆ, ಆದರೆ ಇನ್ನು ಮುಂದೆ ಅವರ ಆಸಕ್ತಿಗೆ ತಕ್ಕಂತೆ ಅವುಗಳನ್ನು ರೂಪಿಸುವುದಿಲ್ಲ. “ನಮ್ಮ ಬಳಕೆದಾರರಿಗೆ ಜಾಹೀರಾತು ಹೆಚ್ಚು ಸೂಕ್ತವೆನಿಸುವಂತೆ ಮಾಡಲು ನಾವು ಡೇಟಾವನ್ನು ಬಳಸುತ್ತೇವೆ,” ಎಂದು ಹಾಲ್‌ಫೆಲ್ಡರ್ ದನಿಗೂಡಿಸಿದ್ದಾರೆ. “ಆದರೆ ನಾವು ಯಾವುದೇ ವೈಯಕ್ತಿಕ ಡೇಟಾವನ್ನು ಮಾರಾಟ ಮಾಡುವುದಿಲ್ಲ.”

ಫೋಟೋಗ್ರಾಫ್‌ಗಳು: ಮಿರ್ಜಿಕ್ & ಜರಿಷ್

ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು

ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.

ಇನ್ನಷ್ಟು ತಿಳಿಯಿರಿ