ಒನ್-ಸ್ಟಾಪ್ ನಿಯಂತ್ರಣ ಕೇಂದ್ರ: Google ಖಾತೆ
ಬಳಕೆದಾರರು Google ಜೊತೆಗೆ ಯಾವ ಡೇಟಾವನ್ನು ಹಂಚಿಕೊಳ್ಳಲು ಸಂತೋಷಪಡುತ್ತಾರೆ ಎಂಬುದನ್ನು ನಿರ್ಧರಿಸಲು ಅವರಿಗೆ ಅವಕಾಶ ಮಾಡಿಕೊಡುವ ಮತ್ತು ತಮ್ಮ ಬಳಿಯೇ ಉಳಿಸಿಕೊಳ್ಳಲು ಬಯಸುವ ಪರಿಕರಗಳನ್ನು ಅಭಿವೃದ್ಧಿಪಡಿಸಲು ಸ್ಟೀಫನ್ ಮಿಕ್‌ಲಿಟ್ಜ್ ಮತ್ತು ಜಾನ್ ಹ್ಯಾನೆಮನ್ ಅವರು ಹಲವು ವರ್ಷಗಳ ಕಾಲ ಶ್ರಮ ವಹಿಸಿದ್ದಾರೆ
ಸ್ಟೀಫನ್ ಮಿಕ್‌ಲಿಟ್ಜ್ ಅವರು Google ನಲ್ಲಿ ಕೆಲಸ ಮಾಡುತ್ತಿರುವುದಾಗಿ ಜನರಿಗೆ ಹೇಳಿದಾಗ, ಜನರು ಆಗಾಗ್ಗೆ ಅವರಿಗೆ “ನಿಮಗೆ ಇಷ್ಟು ಡೇಟಾ ಏಕೆ ಬೇಕು?” ಎಂಬ ಪ್ರಶ್ನೆಯನ್ನು ಕೇಳುತ್ತಾರೆ, ಅವರ ಉತ್ತರ: “ಡೇಟಾ ನಿಮಗೆ Google ಉತ್ಪನ್ನಗಳನ್ನು ಹೆಚ್ಚು ಸಹಾಯಕವಾಗುವಂತೆ ಮಾಡುತ್ತದೆ, ಉದಾಹರಣೆಗೆ ನಿಮ್ಮ ಹುಡುಕಾಟ ಫಲಿತಾಂಶಗಳನ್ನು ಸರಿಯಾದ ಭಾಷೆಯಲ್ಲಿ ಒದಗಿಸುವುದು ಅಥವಾ ಮನೆಯನ್ನು ತ್ವರಿತವಾಗಿ ತಲುಪಲು ಸೂಕ್ತ ಮಾರ್ಗವನ್ನು ಶಿಫಾರಸು ಮಾಡುವುದು. ಆದರೆ ನಿಮ್ಮ ಡೇಟಾವನ್ನು Google ಹೇಗೆ ಸಂಗ್ರಹಿಸುತ್ತದೆ ಮತ್ತು ನಮ್ಮ ಉತ್ಪನ್ನಗಳನ್ನು ನಿಮಗಾಗಿ ಸೂಕ್ತವಾಗಿಸಲು ನಾವು ಅದನ್ನು ಬಳಸುತ್ತೇವೆಯೇ ಎಂಬುದನ್ನು ನೀವು ಆಯ್ಕೆಮಾಡಬಹುದು ಎಂಬುದನ್ನು ನಾನು ಯಾವಾಗಲೂ ಸೂಚಿಸುತ್ತೇನೆ. ಜನರು ಸಾಮಾನ್ಯವಾಗಿ ನನ್ನನ್ನು ನಂಬುವ ಮೊದಲು ಅದನ್ನು ಸ್ವತಃ ನೋಡಲು ಬಯಸುತ್ತಾರೆ!”
"ನಾವು ಸೇವೆಯನ್ನು ವೈಯಕ್ತೀಕರಿಸಲು ಮತ್ತು ಲೇಔಟ್ ಅನ್ನು ಸ್ಪಷ್ಟವಾಗಿ ತಿಳಿಸಲು ಬಯಸುತ್ತೇವೆ."
ಜಾನ್ ಹ್ಯಾನೆಮನ್
ಮಿಕ್‌ಲಿಟ್ಜ್ ಅವರು 2007 ರಿಂದ Google ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮ್ಯೂನಿಕ್‌ನ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು ಮತ್ತು ಆನ್‌ಲೈನ್ ಭದ್ರತೆ ಮತ್ತು ಡೇಟಾ ಗೌಪ್ಯತೆಗೆ ಸಂಬಂಧಿಸಿದ ವಿಷಯಗಳ ಮೇಲೆ ತ್ವರಿತವಾಗಿ ಪ್ರಮುಖ ಪಾತ್ರ ವಹಿಸಿದರು. 2010 ರಿಂದ, ಮಿಕ್‌ಲಿಟ್ಜ್ ಅವರು ಆನ್‌ಲೈನ್ ಭದ್ರತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸಲು ಅಪಾಯಕ್ಕೀಡಾಗುವಂತಹ ಹಲವಾರು Google ಉತ್ಪನ್ನಗಳ ಜಾಗತಿಕ ಅಭಿವೃದ್ಧಿಯನ್ನು ಮುನ್ನಡೆಸಿದ್ದಾರೆ. 2008 ರಲ್ಲಿ ಜರ್ಮನಿಯಲ್ಲಿ ಈ ಇಲಾಖೆಯ ಪ್ರಧಾನ ಕಚೇರಿಯನ್ನು ಸ್ಥಾಪಿಸಲು ಇದು Google ನ ಕಡೆಯಿಂದ ಒಂದು ಉತ್ತಮ ಕ್ರಮವಾಗಿದೆ ಎಂದು ಅವರು ನಂಬುತ್ತಾರೆ. “ಗೌಪ್ಯತೆಯ ಬಗ್ಗೆ ಹೆಚ್ಚು ತೀವ್ರವಾಗಿ ಚರ್ಚಿಸಲ್ಪಡುವ ಸ್ಥಳದಲ್ಲಿರುವುದನ್ನು Google ಬಯಸಿದೆ,” ಎಂದು ಮಿಕ್‌ಲಿಟ್ಜ್ ನೆನಪಿಸಿಕೊಳ್ಳುತ್ತಾರೆ.
ಅಂದಿನಿಂದ, ಬಹಳಷ್ಟು ಸಂಭವಿಸಿದೆ. ಪ್ರಮುಖವಾಗಿ, 25ನೇ ಮೇ, 2018 ರಂದು ಯುರೋಪಿಯನ್ ಒಕ್ಕೂಟದ ಸಾಮಾನ್ಯ ಡೇಟಾ ಸಂರಕ್ಷಣಾ ನಿಯಮ (GDPR) ಜಾರಿಗೆ ಬಂದಿತು. GDPR, ವೈಯಕ್ತಿಕ ಡೇಟಾದ ಬಳಕೆ ಮತ್ತು ಸಂಗ್ರಹಣೆಯನ್ನು ನಿಯಂತ್ರಿಸುತ್ತದೆ. 2016 ರಲ್ಲಿ ಮಿಕ್‌ಲಿಟ್ಜ್ ಅವರು ಮತ್ತು ಅವರ ಸಹೋದ್ಯೋಗಿಗಳು ಕಾನೂನಿನ ಪದಗಳನ್ನು ಓದಿದ ಕ್ಷಣವನ್ನು ನೆನಪಿಸಿಕೊಂಡರು. “ನಾವು ನಿರ್ಮಿಸಿದ ಹಲವು ನಿಯಂತ್ರಣಗಳು ಮತ್ತು ಪರಿಕರಗಳು ಈಗಾಗಲೇ GDPR ಜೊತೆಗೆ ಉತ್ತಮವಾಗಿ ಜೋಡಿಸಲ್ಪಟ್ಟಿವೆ ಎಂಬುದು ಸ್ಪಷ್ಟವಾಗಿದೆ, ಆದರೆ ನಾವು ಇನ್ನೂ ಮಾಡಬೇಕಾದ ಕೆಲಸವಿದೆ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಈಗ, ಅವರು ನನ್ನನ್ನು ಕಾನ್ಫರೆನ್ಸ್ ಕೋಣೆಗೆ ಕರೆದುಕೊಂಡು ಹೋಗುತ್ತಾರೆ, ಅಲ್ಲಿ ಅವರು ತಮ್ಮ ಸಹೋದ್ಯೋಗಿ ಜಾನ್ ಹ್ಯಾನೆಮನ್ ಅವರನ್ನು ಭೇಟಿಯಾಗುತ್ತಾರೆ.
Google ತನ್ನ ಮೊದಲ ಡೇಟಾ ಗೌಪ್ಯತೆ ಪರಿಕರ, Google ಡ್ಯಾಶ್‌ಬೋರ್ಡ್ ಅನ್ನು 2009 ರಲ್ಲಿ ಪ್ರಾರಂಭಿಸಿತು. ಮಿಕ್‌ಲಿಟ್ಜ್ ಮತ್ತು ಅವರ ತಂಡಗಳು ಇದರ ಅಭಿವೃದ್ಧಿಯ ಜವಾಬ್ದಾರಿಯನ್ನು ವಹಿಸಿದ್ದಾರೆ. ಹಲವು ವರ್ಷಗಳಿಂದ, ಹೆಚ್ಚುವರಿ ಕಾರ್ಯಗಳನ್ನು ಸೇರಿಸಲಾಗಿದೆ. 2013 ರಿಂದ, ಬಳಕೆದಾರರು ತಮ್ಮ Google ಡಿಜಿಟಲ್ ಲೆಗಸಿಯನ್ನು ನಿಷ್ಕ್ರಿಯ ಖಾತೆ ನಿರ್ವಾಹಕದ ಮೂಲಕ ನಿರ್ವಹಿಸಲು ಸಾಧ್ಯವಾಯಿತು; 2014 ರಲ್ಲಿ, ಭದ್ರತಾ ಪರಿಶೀಲನೆಯನ್ನು ಸೇರಿಸಲಾಯಿತು, ನಂತರ 2015 ರಲ್ಲಿ ಗೌಪ್ಯತೆ ಪರಿಶೀಲನೆಯನ್ನು ಸೇರಿಸಲಾಯಿತು. ಈ ಹೊಸ ಪರಿಕರಗಳು ಬಳಕೆದಾರರಿಗೆ ಅವರ ಡೇಟಾ ಗೌಪ್ಯತೆ ಮತ್ತು ಭದ್ರತಾ ಸೆಟ್ಟಿಂಗ್‌ಗಳ ಕುರಿತಾಗಿ ಹಂತ ಹಂತವಾಗಿ ಪರಿಚಯ ಮಾಡಿಕೊಡುತ್ತವೆ.
2015 ರಲ್ಲಿ, ನನ್ನ ಖಾತೆಯನ್ನು ಪ್ರಾರಂಭಿಸಲಾಯಿತು, ಇದು ಎಲ್ಲಾ Google ಸೇವೆಗಳನ್ನು ಒಟ್ಟುಗೂಡಿಸಿತು. ಮೊಟ್ಟಮೊದಲ ಬಾರಿಗೆ, ಬಳಕೆದಾರರು ತಮ್ಮ ಒನ್-ಸ್ಟಾಪ್ ನಿಯಂತ್ರಣ ಕೇಂದ್ರವನ್ನು ಪಡೆದುಕೊಂಡರು, ಅದು ಯಾವ ವೈಯಕ್ತಿಕ ಡೇಟಾವನ್ನು Google ಉಳಿಸಿಕೊಳ್ಳುತ್ತಿದೆ ಎಂಬುದನ್ನು ನೋಡಲು, ಅವರು ಯಾವ ಮಾಹಿತಿಯನ್ನು ಅಳಿಸಬೇಕೆಂಬುದರ ಬಗ್ಗೆ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಡೇಟಾವನ್ನು ಉಳಿಸುವ ಮತ್ತು ಆನ್‌ಲೈನ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡುವ ಕಾರ್ಯಗಳನ್ನು ಸ್ವಿಚ್ ಆಫ್ ಮಾಡಲು ಅವಕಾಶ ಮಾಡಿಕೊಟ್ಟಿತು. ಬಳಕೆದಾರರು ವೈಯಕ್ತಿಕಗೊಳಿಸಿದ ಜಾಹೀರಾತುಗಳ ಆಯ್ಕೆಯಿಂದ ಹೊರಗುಳಿಯಬಹುದು. ನನ್ನ ಖಾತೆಯನ್ನು ಅದರ ಪ್ರಾರಂಭದ ಕ್ಷಣದಿಂದ ನಿರಂತರವಾಗಿ ವಿಸ್ತರಿಸಲಾಗಿದೆ ಮತ್ತು ಸುಧಾರಿಸಲಾಗಿದೆ.
"ಪ್ರತಿಯೊಬ್ಬ ಬಳಕೆದಾರರು Google ಗೆ ಯಾವ ಮಾಹಿತಿಯನ್ನು ಇರಿಸಿಕೊಳ್ಳಲು ಅನುಮತಿಸಲಾಗಿದೆ ಎಂಬುದನ್ನು ಆಯ್ಕೆಮಾಡುವುದು ನಮಗೆ ಮುಖ್ಯವಾಗಿದೆ."
ಸ್ಟೀಫನ್ ಮಿಕ್‌ಲಿಟ್ಜ್
ಜೂನ್ 2018 ರಲ್ಲಿ, ಸೇವೆಯನ್ನು ನವೀಕರಿಸಲಾಯಿತು ಮತ್ತು ನನ್ನ ಖಾತೆ Google ಖಾತೆ ಆಯಿತು. ಸ್ಟೀಫನ್ ಮಿಕ್‌ಲಿಟ್ಜ್ ಜೊತೆಗೆ, ಉತ್ಪನ್ನ ನಿರ್ವಾಹಕರಾದ ಜಾನ್ ಹ್ಯಾನೆಮನ್ ಮರುಪ್ರಾರಂಭದ ಜವಾಬ್ದಾರಿಯನ್ನು ವಹಿಸಿದ್ದರು. ಹ್ಯಾನೆಮನ್ ಅವರು ಕಂಪ್ಯೂಟರ್ ಸೈನ್ಸ್‌ನಲ್ಲಿ PhD ಪಡೆದಿದ್ದಾರೆ ಮತ್ತು 2013 ರಿಂದ Google ನ ಮ್ಯೂನಿಕ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನನ್ನ ಖಾತೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದರು ಮತ್ತು ಇಂದಿಗೂ Google ಖಾತೆಯ ಜವಾಬ್ದಾರಿಯನ್ನು ವಹಿಸಿದ್ದಾರೆ. ಅವರ ಸಹೋದ್ಯೋಗಿಗಳು ಅವರಿಗೆ “ಮಿಸ್ಟರ್ Google ಅಕೌಂಟ್” ಎಂಬ ಅಡ್ಡಹೆಸರನ್ನು ಸಹ ನೀಡಿದ್ದಾರೆ.
ಹ್ಯಾನೆಮನ್ ಅವರು Google ಖಾತೆಯ ಹೊಸ ವಿನ್ಯಾಸವನ್ನು ತಮ್ಮ ಸ್ಮಾರ್ಟ್‌ಫೋನ್ ಬಳಸಿಕೊಂಡು ವಿವರಿಸುತ್ತಾರೆ. “ನಾವು ಸೇವೆಯನ್ನು ವೈಯಕ್ತೀಕರಿಸಲು ಮತ್ತು ಲೇಔಟ್ ಅನ್ನು ಸ್ಪಷ್ಟವಾಗಿಸಲು, ವಿಶೇಷವಾಗಿ ಚಿಕ್ಕ ಸ್ಕ್ರೀನ್ ಇರುವ ಮೊಬೈಲ್ ಸಾಧನಗಳಲ್ಲಿ ಬಳಸುವಾಗ ಅದನ್ನು ಸಾಧ್ಯವಾಗಿಸಲು ಬಯಸುತ್ತೇವೆ.” ಸ್ಟೀಫನ್ ಮಿಕ್‌ಲಿಟ್ಜ್ ಅವರು ತಮ್ಮದೇ ಸ್ಮಾರ್ಟ್‌ಫೋನ್ ಎತ್ತಿಕೊಂಡು ಆ್ಯಪ್ ಅನ್ನು ತೆರೆಯುತ್ತಾರೆ. “ನಾನು ಸೇವೆಯನ್ನು ರನ್ ಮಾಡುವಾಗ, ಸಾಫ್ಟ್‌ವೇರ್ ನನಗೆ ಭದ್ರತಾ ಪರಿಶೀಲನೆ ಮಾಡುವ ಆಯ್ಕೆಯನ್ನು ನೀಡುತ್ತದೆ, ಉದಾಹರಣೆಗೆ,” ಎಂದು ಅವರು ವಿವರಿಸುತ್ತಾರೆ. “ನನ್ನ Google ಖಾತೆಯ ಸುರಕ್ಷತೆಯನ್ನು ನಾನು ಹೇಗೆ ಸುಧಾರಿಸಬಹುದು ಎಂಬುದಕ್ಕೆ Google ಬಳಿ ಯಾವುದಾರೂ ಸಲಹೆಗಳಿವೆಯೇ ಎಂಬುದನ್ನು ನಾನು ಇಲ್ಲಿ ತಕ್ಷಣವೇ ನೋಡಬಹುದು.”
ಮಿಕ್‌ಲಿಟ್ಜ್ ಮತ್ತು ಹ್ಯಾನೆಮನ್ ಅವರ ಉತ್ಪನ್ನದ ಅಭಿವೃದ್ಧಿ ಕಾರ್ಯವು Google ಸಮೀಕ್ಷೆಗಳಲ್ಲಿ ವಿಶ್ವದಾದ್ಯಂತ ಜನರು ಹೇಗೆ ವೈಯಕ್ತಿಕ ಸೇವೆಗಳನ್ನು ಬಳಸುತ್ತಾರೆ ಮತ್ತು ಅವರ ಸಾಮಾನ್ಯ ವರ್ತನೆಗಳು ಯಾವುದು ಎಂಬುದನ್ನು ಆಧರಿಸಿದೆ. “ನಿರ್ದಿಷ್ಟವಾಗಿ ಜರ್ಮನ್ನರು ಮತ್ತು ಯುರೋಪಿಯನ್ನರು ತಮ್ಮ ವೈಯಕ್ತಿಕ ಡೇಟಾದ ಬಳಕೆಗೆ ಬಂದಾಗ ಅಮೆರಿಕನ್ನರಿಗಿಂತ ಹೆಚ್ಚಾಗಿ ಸಂದೇಹಪಡುತ್ತಾರೆ,” ಎಂದು ಹ್ಯಾನೆಮನ್ ಹೇಳುತ್ತಾರೆ. “ಅದು ಸಹಜವಾಗಿ ನಮ್ಮ ಇತಿಹಾಸಕ್ಕೆ ಸಂಬಂಧಿಸಿದ್ದಾಗಿದೆ.” ಎಲ್ಲಾ ಬಳಕೆದಾರರು ತಮ್ಮ ಡೇಟಾವನ್ನು ಸಂಗ್ರಹಿಸುವುದನ್ನು ವಿರೋಧಿಸುವುದಿಲ್ಲ. “ಕೆಲವರಿಗೆ ತಾವು ವಿಮಾನ ನಿಲ್ದಾಣಕ್ಕೆ ಹೋಗುವ ಸಮಯವಾಗಿದೆ ಎಂದು ತಮ್ಮ ಸ್ಮಾರ್ಟ್‌ಫೋನ್ ನೆನಪಿಸಿದಾಗ, ಅದು ತುಂಬಾ ಪ್ರಾಯೋಗಿಕವಾಗಿದೆ ಎಂದು ಅಂದುಕೊಳ್ಳುತ್ತಾರೆ,” ಎಂದು ಹ್ಯಾನೆಮನ್ ಹೇಳುತ್ತಾರೆ. “ಇತರ ಜನರು ಆಟೋಕಂಪ್ಲೀಟ್ ವೈಶಿಷ್ಟ್ಯವನ್ನು ಪ್ರಶಂಸಿಸುತ್ತಾರೆ, ಇದು ಹುಡುಕಾಟ ಪದದ ಉಳಿದ ಭಾಗವನ್ನು ಊಹಿಸಲು ಹುಡುಕಾಟ ಎಂಜಿನ್‌ಗೆ ಅನುವು ಮಾಡಿಕೊಡುತ್ತದೆ. ನಮ್ಮ ಉತ್ಪನ್ನಗಳನ್ನು ಜನರಿಗೆ ಸರಿಹೊಂದುವಂತೆ ಮಾಡುವುದಕ್ಕೆ ಅವರ ಡೇಟಾವನ್ನು ಬಳಸಲು ಅವರು ನಮಗೆ ಅವಕಾಶ ಮಾಡಿಕೊಟ್ಟಾಗ ಮಾತ್ರ ಈ ವೈಶಿಷ್ಟ್ಯಗಳು ಮತ್ತು ಇತರ ಹಲವು ವೈಶಿಷ್ಟ್ಯಗಳು ಕಾರ್ಯನಿರ್ವಹಿಸಲು ಸಾಧ್ಯ.
ಗೌಪ್ಯತೆಯ ವಿಷಯ ಬಂದಾಗ, ಸ್ಟೀಫನ್ ಮಿಕ್‌ಲಿಟ್ಜ್ ಅವರು ಒಂದೇ, ಏಕರೂಪದ ಪರಿಹಾರವು ಎಂದಿಗೂ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಪ್ರತಿಯೊಬ್ಬರೂ ಪ್ರತ್ಯೇಕ ವ್ಯಕ್ತಿ ಆಗಿರುತ್ತಾರೆ ಮತ್ತು ಬಳಕೆದಾರರ ಅಗತ್ಯತೆಗಳು ಕಾಲಾನಂತರದಲ್ಲಿ ಬದಲಾಗುತ್ತವೆ ಎಂಬ ಅಂಶಕ್ಕೆ ಇದು ಭಾಗಶಃ ಕಾರಣವಾಗಿದೆ. “ಪ್ರತಿಯೊಬ್ಬ ಬಳಕೆದಾರರೂ Google ಗೆ ಯಾವ ಮಾಹಿತಿಯನ್ನು ಇರಿಸಿಕೊಳ್ಳಲು ಅನುಮತಿಸಲಾಗಿದೆ ಎಂಬುದನ್ನು ಆಯ್ಕೆಮಾಡುವುದು ನಮಗೆ ಮುಖ್ಯವಾಗಿದೆ. ಅದನ್ನು ಸಾಧ್ಯವಾಗಿಸಲು ನಾವು ನಿರಂತರವಾಗಿ ನಮ್ಮ ಪರಿಕರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ.”
ಫೋಟೋಗ್ರಾಫ್‌ಗಳು: ಕಾನ್ನಿ ಮಿರ್‌ಬಾಕ್
ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು
ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.
ಇನ್ನಷ್ಟು ತಿಳಿಯಿರಿ