ನೀವು ನಿರ್ಮಿಸಿದ ಉತ್ಪನ್ನಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು.
ಜನರು ಉತ್ಪನ್ನಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಬಳಕೆದಾರರ ಅನುಭವದ ಸಂಶೋಧಕರು ಅಧ್ಯಯನ ಮಾಡುತ್ತಾರೆ. ಆರ್ನ್ ಡಿ ಬೂಜಿ ಅವರು ಬಳಕೆದಾರರ ಅನುಭವ ಮತ್ತು ಆನ್‌ಲೈನ್ ಗೌಪ್ಯತೆಯ ವಿಚಾರಗಳಲ್ಲಿ ವಿಶೇಷ ತಜ್ಞರಾಗಿದ್ದಾರೆ. ಸ್ಟೀಫನ್ ಮಿಕ್‌ಲಿಟ್ಜ್ ಅವರು ಗೌಪ್ಯತೆ ಹಾಗೂ ಸುರಕ್ಷತೆಯ ಡೈರೆಕ್ಟರ್ ಆಫ್ ಇಂಜಿನಿಯರಿಂಗ್ ಆಗಿದ್ದಾರೆ ಮತ್ತು ಗೌಪ್ಯತೆ ಹಾಗೂ ಸುರಕ್ಷತೆಯ ಪರಿಕರಗಳನ್ನು ನಿರ್ಮಿಸುವತ್ತ ಗಮನ ಕೇಂದ್ರೀಕರಿಸಿದ್ದಾರೆ.
ಆರ್ನ್ ಡಿ ಬೂಜಿ ಅವರೇ, Google ನಲ್ಲಿ ಬಳಕೆದಾರರ ಅನುಭವದ ಸಂಶೋಧಕರಾಗಿ, ಬಳಕೆದಾರರು ಗೌಪ್ಯತೆ ಹಾಗೂ ಸುರಕ್ಷತೆಯ ಪರಿಕರಗಳೊಂದಿಗೆ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ನೀವು ವಿಶ್ಲೇಷಿಸುತ್ತೀರಿ. ನೀವು ಏನು ಕಂಡುಕೊಂಡಿರಿ?
ಆರ್ನ್ ಡಿ ಬೂಜಿ, Google UX ರಿಸರ್ಚ್ ಮ್ಯಾನೇಜರ್: ಇದು ತಿಳಿದಿರುವ ವಿಷಯವೇ ಆಗಿರಬಹುದು, ಆದರೆ ಜನರು ಆನ್‌ಲೈನ್‌ನಲ್ಲಿ ಸುರಕ್ಷತೆ ಮತ್ತು ಸುಭದ್ರತೆಯ ಭಾವನೆಯನ್ನು ಬಯಸುತ್ತಾರೆ. ತಮ್ಮ ಡೇಟಾವನ್ನು ಗೌಪ್ಯವಾಗಿರಿಸಬೇಕೆಂದು ಅವರು ಬಯಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಇಂಟರ್ನೆಟ್‌ನ ಗಾತ್ರ ಮತ್ತು ಸಂಕೀರ್ಣತೆಯು ಹೆಚ್ಚಾಗಿದೆ, ತಾವು ಎಷ್ಟು ಸುರಕ್ಷಿತರಾಗಿದ್ದೇವೆ, ತಮ್ಮ ಗೌಪ್ಯತೆಗೆ ಸಾಕಷ್ಟು ರಕ್ಷಣೆ ಇದೆಯೇ ಎಂಬುದನ್ನು ಜನರು ಪ್ರಶ್ನಿಸುತ್ತಿದ್ದಾರೆ. ಇತ್ತೀಚೆಗೆ ನಾವೆಲ್ಲರೂ ಇಂಟರ್ನೆಟ್ ಅನ್ನು ಎಷ್ಟರಮಟ್ಟಿಗೆ ಬಳಸುತ್ತಿದ್ದೇವೆ, ಮತ್ತು ಡೇಟಾ ಸೋರಿಕೆ ಹಾಗೂ ಇತ್ಯಾದಿಗಳ ಕುರಿತು ನಾವು ಓದುತ್ತಿರುವ ಸುದ್ದಿಗಳನ್ನು ಪರಿಗಣಿಸಿದರೆ, ಇವು ಕೇಳಲು ಸೂಕ್ತವಾದ ಪ್ರಶ್ನೆಗಳೇ ಆಗಿವೆ.
ಮತ್ತು ಗೌಪ್ಯತೆ ಹಾಗೂ ಸುರಕ್ಷತೆಯ ವಿಷಯಕ್ಕೆ ಬಂದಾಗ ಜನರು ಆನ್‌ಲೈನ್‌ನಲ್ಲಿ ವಾಸ್ತವವಾಗಿ ಹೇಗೆ ವರ್ತಿಸುತ್ತಾರೆ?
ಡಿ ಬೂಜಿ: ಕಳೆದ ಒಂದೆರಡು ವರ್ಷಗಳಲ್ಲಿ, ಜಗತ್ತಿನಾದ್ಯಂತ ಹಲವು ದೇಶಗಳ ಜನರೊಂದಿಗೆ ನಾವು ಅಧ್ಯಯನಗಳನ್ನು ನಡೆಸಿದ್ದೇವೆ, ಮತ್ತು ಗೌಪ್ಯತೆಯು ನಿಜಕ್ಕೂ ಮುಖ್ಯ ವಿಚಾರ ಎಂದು ಅವರೆಲ್ಲರೂ ಹೇಳುತ್ತಾರೆ. ಇಲ್ಲಿಯವರೆಗಿನ ಮಾಹಿತಿಯ ಅನುಸಾರ, ವಾಸ್ತವ ಏನೆಂದರೆ, ಗೌಪ್ಯತೆಯ ಮಾಹಿತಿಯನ್ನು ಓದಲು ಅಥವಾ ತಮ್ಮ ಗೌಪ್ಯತೆಯ ಸೆಟ್ಟಿಂಗ್‌ಗಳನ್ನು ಹೊಂದಾಣಿಕೆ ಮಾಡಲು ಜನರು ತುಂಬಾ ಸಮಯ ವ್ಯಯಿಸುವುದಿಲ್ಲ. ಅಪರಿಚಿತ ವೆಬ್‌ಸೈಟ್‌ಗಳಲ್ಲಿ ತಮ್ಮ ಸಂಪರ್ಕ ವಿವರಗಳನ್ನು ನಮೂದಿಸುವ ಮೊದಲು – ಉದಾಹರಣೆಗೆ, ಒಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ – ಜನರು ಒಂದಿಷ್ಟೂ ಹಿಂಜರಿಯುವುದಿಲ್ಲ ಎಂಬುದನ್ನು ಇತರ ಅಧ್ಯಯನಗಳು ತೋರಿಸಿಕೊಟ್ಟಿವೆ. ಆದ್ದರಿಂದ ನಾವು ಡೇಟಾವನ್ನು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಸಂಪೂರ್ಣ ಸ್ಪಷ್ಟತೆಯನ್ನು ಹೊಂದಿರುವುದು ಮತ್ತು ಜನರಿಗೆ ಉಪಯುಕ್ತವಾದ ರೀತಿಯಲ್ಲಿ ಅವರ ಆನ್‌ಲೈನ್ ಅನುಭವವನ್ನು ನಿರ್ವಹಿಸುವುದಕ್ಕಾಗಿ, ಬಳಸಲು ಸುಲಭವಾದ ನಿಯಂತ್ರಣಗಳನ್ನು ಒದಗಿಸುವುದು Google ನಂತಹ ಕಂಪನಿಗಳ ಹೊಣೆಗಾರಿಕೆಯಾಗುತ್ತದೆ.
"ಜನರಿಗೆ ಅರ್ಥವಾಗುವ ಹಾಗೆ ವಿವರಿಸುವುದು ನಮ್ಮ ಕೆಲಸವಾಗಿದೆ."
ಆರ್ನ್ ಡಿ ಬೂಜಿ
ಸ್ಟೀಫನ್ ಮಿಕ್‌ಲಿಟ್ಜ್ ಅವರೇ, ಡೇಟಾ ಗೌಪ್ಯತೆ ಹಾಗೂ ಸುರಕ್ಷತೆಯ ಜವಾಬ್ದಾರಿ ಹೊಂದಿರುವವರಾಗಿ ನೀವು ಇದರಿಂದ ಯಾವ ತೀರ್ಮಾನಕ್ಕೆ ಬಂದಿರಿ?
ಮಿಕ್‌ಲಿಟ್ಜ್: ಬಳಕೆದಾರರಿಗೆ ತಮ್ಮದೇ ಡೇಟಾದ ಮೇಲೆ ನಿಯಂತ್ರಣ ಒದಗಿಸುವ ಸೇವೆಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುವುದೇ ನಮ್ಮ ಗುರಿಯಾಗಿದೆ. ಜನರಿಗೆ ಸಮಸ್ಯೆ ಉದ್ಭವಿಸುವವರೆಗೆ - ಉದಾಹರಣೆಗೆ, ಅವರ ಖಾತೆ ಹ್ಯಾಕ್ ಆಗುವುದು, ಅಥವಾ ಏನೋ ಕೆಟ್ಟ ಘಟನೆ ಸಂಭವಿಸಿದ ಕುರಿತು ಸುದ್ದಿಪತ್ರಿಕೆಗಳಲ್ಲಿ ಓದುವವರೆಗೆ ಜನರು ಡೇಟಾ ಗೌಪ್ಯತೆ ಹಾಗೂ ಸುರಕ್ಷತೆಯಂತಹ ವಿಷಯಗಳ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸುವುದಿಲ್ಲ. ಮುಖ್ಯ ವಿಚಾರ ಏನೆಂದರೆ, ಅಂತಹ ಸಮಯದಲ್ಲಿ ತಮ್ಮ ಆನ್‌ಲೈನ್ ಚಟುವಟಿಕೆಯನ್ನು ಪರಿಶೀಲಿಸುವುದು ಹೇಗೆ ಮತ್ತು ಅಗತ್ಯವಿದ್ದರೆ ತಮ್ಮ ಪಾಸ್‌ವರ್ಡ್‌ಗಳನ್ನು ಬದಲಾಯಿಸುವುದು ಹೇಗೆ ಎಂದು ಜನರಿಗೆ ತಿಳಿದಿರಬೇಕು.
ಡಿ ಬೂಜಿ: ವಾಸ್ತವ ಏನೆಂದರೆ, ಯಾರೂ ಸಹ ಬೆಳಗ್ಗೆ ಎದ್ದು, “ನನ್ನ [Google ಖಾತೆ] (https://myaccount.google.com/){:target="_blank" rel="noopener noreferrer"} ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಾನು ಈಗಲೇ ಪರಿಶೀಲಿಸುವುದು ಒಳ್ಳೆಯದು” ಎಂದು ಯಾರೂ ಯೋಚಿಸುವುದಿಲ್ಲ. ಅದು ಹಾಗೆ ಕೆಲಸ ಮಾಡುವುದಿಲ್ಲ. ಡೇಟಾ ಗೌಪ್ಯತೆ ಹಾಗೂ ಸುರಕ್ಷತೆಯ ವಿಚಾರಗಳನ್ನು ನಮ್ಮಲ್ಲಿ ಹೆಚ್ಚಿನವರು ಮುಂದೂಡುತ್ತಲೇ ಇರುತ್ತೇವೆ. ಇದರಿಂದಾಗಿ, ಜನರು ತಮ್ಮ ಸೆಟ್ಟಿಂಗ್‌ಗಳನ್ನು ನಿಯಮಿತವಾಗಿ ಪರಿಶೀಲಿಸಬೇಕೆಂದು ಇತ್ತೀಚಿನ ವರ್ಷಗಳಲ್ಲಿ ನಾವು ಪ್ರಾಂಪ್ಟ್ ಮಾಡುತ್ತಾ ಇದ್ದೇವೆ.
ಹಾಗಾದರೆ, ಉತ್ತಮ ಉತ್ಪನ್ನಗಳನ್ನು ನಿರ್ಮಿಸಲು ನಿಮಗೆ ಸಹಾಯ ಮಾಡುವ ಒಳನೋಟಗಳನ್ನು ನೀವು ವಾಸ್ತವದಲ್ಲಿ ಹೇಗೆ ಪಡೆದುಕೊಳ್ಳುವಿರಿ?
ಡಿ ಬೂಜಿ: ಆಯ್ಕೆಗಳ ಸಂಪೂರ್ಣ ಶ್ರೇಣಿಯೇ ಲಭ್ಯವಿದೆ. Google ಖಾತೆಯಂತಹ ಅಪ್ಲಿಕೇಶನ್ ಅನ್ನು ಜನರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ವಿಶ್ಲೇಷಿಸಲು ಆನ್‌ಲೈನ್ ಸಮೀಕ್ಷೆಗಳು ಉತ್ತಮ ಮಾರ್ಗಗಳಾಗಿವೆ. ಅಭಿಪ್ರಾಯಗಳು ಮತ್ತು ಭಾವನೆಗಳನ್ನು ತಿಳಿದುಕೊಳ್ಳಲು ನೀವು ಬಯಸುವಿರಾದರೆ, ಪ್ರತ್ಯೇಕ ಸಂದರ್ಶನಗಳಿಂದ ಹೆಚ್ಚು ಪ್ರತಿಕ್ರಿಯೆ ಸಿಗುತ್ತದೆ. ಸಾಂಸ್ಕೃತಿಕ ವ್ಯತ್ಯಾಸಗಳ ಕುರಿತು ಹೆಚ್ಚು ತಿಳಿಯಲು, ನಾವು ಜಗತ್ತಿನಾದ್ಯಂತ ಸಮೀಕ್ಷೆಗಳನ್ನು ನಡೆಸುತ್ತೇವೆ - ರಸ್ತೆಯಲ್ಲಿ, ಮಾರ್ಕೆಟ್ ರಿಸರ್ಚ್ ಸ್ಟುಡಿಯೋಗಳಲ್ಲಿ, ಅಥವಾ ಬಳಕೆದಾರರ ಮನೆಗಳಲ್ಲೂ ಸಹ. ಕೊನೆಯದು ಹೆಚ್ಚು ಆಸಕ್ತಿದಾಯಕವಾಗಿರುತ್ತದೆ, ಏಕೆಂದರೆ ಅಲ್ಲಿ ಜನರಿಗೆ ತಮ್ಮದೇ ಸಾಧನಗಳು ಹಾಗೂ ಡೇಟಾ ಲಭ್ಯವಿರುತ್ತವೆ, ಇದರಿಂದ ಬಳಕೆದಾರರ ವರ್ತನೆ ಹೆಚ್ಚು ನೈಜವಾಗಿರುತ್ತದೆ.
ನಮಗೇನಾದರೂ ಉದಾಹರಣೆ ಕೊಡಬಲ್ಲಿರಾ?
ಡಿ ಬೂಜಿ: ಒಮ್ಮೆ ನನ್ನ ಸಹೋದ್ಯೋಗಿಗಳು, ಒಬ್ಬ ಮಹಿಳೆಯ Google ಖಾತೆಯ ಕುರಿತು ಮಾತನಾಡಲು, ಜಪಾನ್‌ನಲ್ಲಿ ಆಕೆಯ ಮನೆಗೆ ಭೇಟಿ ನೀಡಿದರು. ಆಕೆಗೆ ಸೇವೆಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ, ಮತ್ತು ಆಕೆ ಅದನ್ನು ತೆರೆದಾಗ, ತನಗರಿವಿಲ್ಲದೆಯೇ ಮಾನಿಟರ್ ನಮಗೆ ಕಾಣದ ಹಾಗೆ ತಿರುಗಿಸಿಕೊಂಡರು. ಆದರೆ, Google ಖಾತೆ ಹೇಗೆ ಕೆಲಸ ಮಾಡುತ್ತದೆ, ಆಕೆ ಮಾಹಿತಿಯನ್ನು ಹೇಗೆ ಅಳಿಸಬಹುದು ಮತ್ತು ಡೇಟಾವನ್ನು Google ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಬಹುದು ಎಂಬುದನ್ನು ತಿಳಿದು ಆಕೆಗೆ ಆಶ್ಚರ್ಯವಾಯಿತು.
ಸ್ಟೀಫನ್ ಮಿಕ್‌ಲಿಟ್ಜ್, ನೀವು ಸಹ ಇಂತಹ ಸಂದರ್ಶನಗಳನ್ನು ನೋಡಿದ್ದೀರಾ?
ಮಿಕ್‌ಲಿಟ್ಜ್: ಹೌದು! ಉದಾಹರಣೆಗೆ, ಇದೀಗ Google ಖಾತೆ ಆಗಿರುವ ಉತ್ಪನ್ನದ ಮೂಲಮಾದರಿಯನ್ನು ತಯಾರಿಸುವಾಗ, ನಾವು ಅದನ್ನು ಪರೀಕ್ಷಿಸಲು ಬಯಸಿದೆವು ಮತ್ತು ಜನರ ಪ್ರತಿಕ್ರಿಯೆ ತಿಳಿಯಲು ಬಯಸಿದೆವು. ಮೊದಲ ಭಾಗೀದಾರರು ಪುಟವನ್ನು ತೆರೆದರು ಮತ್ತು ಬಹಳ ಹೊತ್ತಿನವರೆಗೆ ಏನನ್ನೂ ಮಾಡದೆ ಸ್ಕ್ರೀನ್ ಅನ್ನು ದಿಟ್ಟಿಸಿ ನೋಡುತ್ತಾ ಕುಳಿತರು. ನಂತರ, ಎರಡನೆಯ ಭಾಗೀದಾರರು ಬಂದರು ಮತ್ತು ಅದೇ ರೀತಿ ಪ್ರತಿಕ್ರಿಯಿಸಿದರು. ನಾನು ಅಂದುಕೊಂಡೆ, “ಸರಿ, ಇದು ನಾನು ಭಾವಿಸಿದ ಹಾಗೆ ಕೆಲಸ ಮಾಡುತ್ತಿಲ್ಲ.” ಜನರಿಗೆ Google Dashboard ಅರ್ಥವಾಗಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿ ತಿಳಿಯಿತು.
"UX ಸಂಶೋಧನೆಯು ಡೆವಲಪ್ಮೆಂಟ್ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ."
ಸ್ಟೀಫನ್ ಮಿಕ್‌ಲಿಟ್ಜ್
ಇದರ ಪರಿಣಾಮವಾಗಿ ನೀವು ಬಳಕೆದಾರರ ಇಂಟರ್‌ಫೇಸ್ ಅನ್ನು ಮತ್ತೊಮ್ಮೆ ನಿರ್ಮಿಸಿದಿರಾ?
ಮಿಕ್‌ಲಿಟ್ಜ್: ಹಲವು ಬಾರಿ! ಉತ್ಪನ್ನಕ್ಕೆ ಜನರು ಸುಲಭವಾಗಿ ಪ್ರವೇಶ ಪಡೆಯಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗುವವರೆಗೆ ನಾವು ಪ್ರಯತ್ನಿಸುತ್ತಲೇ ಇದ್ದೆವು.
ಹಾಗಾದರೆ UX ಸಂಶೋಧನೆಯು, ಸೇವೆಯಲ್ಲಿ ನಿಜವಾದ ಸುಧಾರಣೆಗಳನ್ನು ಮಾಡಲು ನಿಮಗೆ ನೆರವಾಗಿದೆಯೇ?
ಮಿಕ್‌ಲಿಟ್ಜ್: ಡೆವಲಪ್ಮೆಂಟ್ ಪ್ರಕ್ರಿಯೆಯಲ್ಲಿ ಇದು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಉದಾಹರಣೆಗೆ, ಇದೀಗ Google ಖಾತೆಯ ಭಾಗವಾಗಿರುವ ನಿಷ್ಕ್ರಿಯ ಖಾತೆ ನಿರ್ವಾಹಕ ಸಂಬಂಧಿತ ಕೆಲಸವನ್ನು ನಾವು ಮಾಡುತ್ತಿದ್ದಾಗ, ಈ ವಿಚಾರ ಸಾಬೀತಾಯಿತು. ಬಳಕೆದಾರರು ನಿರ್ದಿಷ್ಟ ಅವಧಿಯವರೆಗೆ ನಿಷ್ಕ್ರಿಯರಾಗಿದ್ದರೆ ಅವರ ಡೇಟಾವನ್ನು ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ಇದು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಈ ಉತ್ಪನ್ನ ಸಂಪೂರ್ಣವಾಗಿ ಹೊಸದಾಗಿತ್ತು; ಇಂತಹ ಉತ್ಪನ್ನವನ್ನು ನಮ್ಮ ಯಾವುದೇ ಪ್ರತಿಸ್ಪರ್ಧಿಗಳು ಪರಿಚಯಿಸಿರಲಿಲ್ಲ. ಹಾಗಾಗಿ ನಾವು ಒಂದು ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದೆವು, ಪರೀಕ್ಷಿಸಿದೆವು ಮತ್ತು ಎರಡನೆಯ ಮೂಲಮಾದರಿಯನ್ನು ನಿರ್ಮಿಸಿದೆವು. ನಮ್ಮ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದ ಒಂದು ಉತ್ಪನ್ನವನ್ನು ನಿರ್ಮಿಸುವವರೆಗೂ ಆ ಪ್ರಕ್ರಿಯೆಯನ್ನು ನಾವು ಹಲವು ಬಾರಿ ಪುನರಾವರ್ತಿಸಿದೆವು.
ನಿಮ್ಮ ಸಂಶೋಧನೆಯು ದೃಢವಾದ ಬದಲಾವಣೆಗಳಿಗೆ ಕಾರಣವಾದಾಗ ತೃಪ್ತಿಯಾಗುತ್ತದೆಯಲ್ಲವೇ.
ಡಿ ಬೂಜಿ: ಇದುವೇ ಈ ಕೆಲಸದ ಅತ್ಯುತ್ತಮ ಅಂಶ. ಬಳಕೆದಾರರ ಅವಶ್ಯಕತೆಗಳನ್ನು ಗುರುತಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಫೋಟೋಗ್ರಾಫ್‌ಗಳು: ಕಾನ್ನಿ ಮಿರ್‌ಬಾಕ್
ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು
ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.
ಇನ್ನಷ್ಟು ತಿಳಿಯಿರಿ