ಉತ್ತರಿಸಿದ ಪ್ರಶ್ನೆಗಳು.

ನಿಮ್ಮ ಆನ್‌ಲೈನ್ ಡೇಟಾದ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವುದು: ಅದು ಎಲ್ಲಿಂದ ಬರುತ್ತದೆ, ಅದನ್ನು ಯಾರೆಲ್ಲಾ ಪ್ರವೇಶಿಸಬಹುದು ಮತ್ತು ನಾವು ಅದನ್ನು ಹೇಗೆ ಉತ್ತಮವಾಗಿ ರಕ್ಷಿಸಬಹುದು. ತಜ್ಞರಿಂದ ಕೆಲವು ಉತ್ತರಗಳು

ಕೆಲವು ಮಾಹಿತಿ ಹಂಚಿಕೊಳ್ಳುವುದನ್ನು ನಾನು ತಡೆಯಬಹುದೇ?

ಮೈಕೆಲ್ ಲಿಟ್ಜರ್, ಜರ್ಮನ್ ಇಂಟರ್ನೆಟ್ ಸುರಕ್ಷತಾ ಉಪಕ್ರಮದ ವ್ಯವಸ್ಥಾಪಕ ನಿರ್ದೇಶಕರು Deutschland sicher im Netz (DsiN): “ನಾನು ಯಾವ ಡೇಟಾವನ್ನು ನಮೂದಿಸುತ್ತೇನೆ ಎಂಬುದನ್ನು ಆಯ್ಕೆಮಾಡಲು ನಾನು ಸ್ವತಂತ್ರನಾಗಿದ್ದೇನೆ. ಆದರೆ ನಾನು ವೆಬ್ ಬ್ರೌಸ್ ಮಾಡಲು ಆರಂಭಿಸಿದಾಗ ಉತ್ಪತ್ತಿಯಾಗುವ ತಾಂತ್ರಿಕ ಡೇಟಾದ ಮೇಲೆ ನನಗೆ ಸೀಮಿತ ಪ್ರಭಾವವಿದೆ. ನಾನು ಕುಕೀಗಳನ್ನು ತಿರಸ್ಕರಿಸಬಹುದು ಅಥವಾ ಅಳಿಸಬಹುದು. ಸೂಕ್ತವಾದ ಪ್ರೋಗ್ರಾಂಗಳ ಮೂಲಕ ನಾನು ನನ್ನ IP ವಿಳಾಸವನ್ನು ತುಲನಾತ್ಮಕವಾಗಿ ಸುಲಭವಾಗಿ ಮರೆಮಾಡಬಲ್ಲೆ. ನನ್ನ ಲಿವಿಂಗ್ ರೂಮ್‌ನಲ್ಲಿರುವ ಸ್ಮಾರ್ಟ್ ಸ್ಪೀಕರ್, ಸಕ್ರಿಯಗೊಳಿಸುವಿಕೆ ಕಮಾಂಡ್‌ಗಾಗಿ ಕಾಯುತ್ತಿರುವಾಗ ಅದು ನಿಷ್ಕ್ರಿಯವಾಗಿ ಆಲಿಸುವುದನ್ನು ನಾನು ಬಯಸದಿದ್ದರೆ, ಅದನ್ನು ಸ್ವಿಚ್ ಆಫ್ ಮಾಡುವ ಆಯ್ಕೆ ನನ್ನ ಬಳಿ ಯಾವಾಗಲೂ ಇರುತ್ತದೆ.”

ನನ್ನ ಡೇಟಾದ ಬಗ್ಗೆ ಯಾರು ನಿಜವಾಗಿಯೂ ಆಸಕ್ತಿ ಹೊಂದಿದ್ದಾರೆ ಮತ್ತು ಏಕೆ?

ಮೈಕೆಲ್ ಲಿಟ್ಜರ್, DsiN: “ಬಳಕೆದಾರರ ಡೇಟಾ ಕಂಪನಿಗಳಿಗೆ ಅತ್ಯಂತ ಮೌಲ್ಯಯುತವಾಗಿದೆ. ಅವರು ತಮ್ಮ ಉತ್ಪನ್ನಗಳನ್ನು ಸುಧಾರಿಸಲು ಅಥವಾ ಹೆಚ್ಚು ಉದ್ದೇಶಿತ ಜಾಹೀರಾತನ್ನು ಉತ್ಪಾದಿಸಲು, ತಮ್ಮ ಸೇವೆಗಳ ಬಳಕೆಯ ಸಮಯದಲ್ಲಿ ರಚಿಸಲಾದ ಡೇಟಾವನ್ನು ಸಂಗ್ರಹಿಸುತ್ತಾರೆ. ದುರದೃಷ್ಟವಶಾತ್, ಸೈಬರ್ ಅಪರಾಧಿಗಳು ಸಹ ಬಳಕೆದಾರರ ಡೇಟಾದ ಮೇಲೆ ಆಸಕ್ತಿ ಹೊಂದಿರುತ್ತಾರೆ, ಅವರು ಅದನ್ನು ವ್ಯಕ್ತಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಅಥವಾ ಅವರ ಬ್ಯಾಂಕ್ ಖಾತೆಗಳ ಮೇಲೆ ದಾಳಿ ಮಾಡುವುದಕ್ಕಾಗಿ ಬಳಸಲು ಪ್ರಯತ್ನಿಸಬಹುದು. ಪೊಲೀಸರಂತಹ ಕಾನೂನು ಜಾರಿ ಅಧಿಕಾರಿಗಳು ವೈಯಕ್ತಿಕ ಡೇಟಾ ಬಳಸುವುದನ್ನು ನಾವು ಮರೆಯಬಾರದು. ವ್ಯಕ್ತಿಯ ಬ್ರೌಸರ್ ಇತಿಹಾಸವನ್ನು ತನಿಖೆಯ ಭಾಗವಾಗಿ ವಿನಂತಿಸಬಹುದು, ಆದರೆ ನ್ಯಾಯಾಲಯದ ಆದೇಶ ಇದ್ದರೆ ಮಾತ್ರ ವಿನಂತಿಸಬಹುದು.”

ಅಪರಾಧಿಗಳು ನನ್ನ ಮಾಹಿತಿಗೆ ಹೇಗೆ ಪ್ರವೇಶ ಪಡೆಯುತ್ತಾರೆ?

ಸ್ಟೀಫನ್ ಮಿಕ್‌ಲಿಟ್ಜ್, Google ನ ಗೌಪ್ಯತೆ ಹಾಗೂ ಸುರಕ್ಷತೆ ತಂಡದಲ್ಲಿ ಡೈರೆಕ್ಟರ್ ಆಫ್ ಇಂಜಿನಿಯರಿಂಗ್: “ಬಳಕೆದಾರರ ಡೇಟಾವನ್ನು ಅಕ್ರಮವಾಗಿ ಪಡೆಯಲು ಬಳಸುವ ಎರಡು ಸಾಮಾನ್ಯ ವಿಧಾನಗಳೆಂದರೆ ಫಿಶಿಂಗ್ ಮತ್ತು ಹ್ಯಾಕಿಂಗ್. ಫಿಶಿಂಗ್, ಬಳಕೆದಾರರು ತಮ್ಮ ಡೇಟಾವನ್ನು ಸ್ವಯಂಪ್ರೇರಣೆಯಿಂದ ಒದಗಿಸುವಂತೆ ಮೋಸಗೊಳಿಸುವುದನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ಬಳಕೆದಾರರು ತಮ್ಮ ಖಾತೆಯ ಮಾಹಿತಿಯನ್ನು ಉತ್ತಮ ನಂಬಿಕೆಯಿಂದ ನಮೂದಿಸುವಂತಹ ನಕಲಿ ಬ್ಯಾಂಕಿಂಗ್ ವೆಬ್‌ಸೈಟ್ ಅನ್ನು ರಚಿಸುವುದು. ದಾಳಿಕೋರರು ಮಾಲ್‌ವೇರ್ ಬಳಸಿಕೊಂಡು ಖಾತೆಗೆ ಪ್ರವೇಶಿಸುವುದನ್ನು ಹ್ಯಾಕಿಂಗ್ ಎಂದು ಕರೆಯಲಾಗುತ್ತದೆ. ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಈ ಎರಡು ವಿಧಾನಗಳ ಸಂಯೋಜನೆಯನ್ನು ಬಳಸುತ್ತಾರೆ.”

ಸಹಾಯ ಮಾಡಿ, ನನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದೆ! ನಾನೇನು ಮಾಡಬೇಕು?

ಮೈಕೆಲ್ ಲಿಟ್ಜರ್, DsiN: “ಮೊದಲಿಗೆ, ನಾನು ಖಾತೆ ಪೂರೈಕೆದಾರರನ್ನು ಸಂಪರ್ಕಿಸುತ್ತೇನೆ ಮತ್ತು ನನ್ನ ಪಾಸ್‌ವರ್ಡ್ ಅನ್ನು ಬದಲಾಯಿಸುತ್ತೇನೆ. ಬ್ಯಾಂಕ್ ಖಾತೆಗಳಂತಹ ಅತ್ಯಂತ ಸೂಕ್ಷ್ಮ ಖಾತೆಗಳಿದ್ದಲ್ಲಿ, ತಾತ್ಕಾಲಿಕ ನಿರ್ಬಂಧವನ್ನು ಅನ್ವಯಿಸುವುದು ಸಹ ಬುದ್ಧಿವಂತಿಕೆ ಆಗಿರಬಹುದು. ಖಾತೆ ಮರುಸ್ಥಾಪಿಸುವುದನ್ನು ಸುಲಭಗೊಳಿಸಲು, ಕಂಪನಿಯು ನಿಮ್ಮನ್ನು ಸಂಪರ್ಕಿಸಲು ಬಳಸಬಹುದಾದ ಪರ್ಯಾಯ ಇಮೇಲ್ ವಿಳಾಸ ಅಥವಾ ಸೆಲ್ ಫೋನ್ ಸಂಖ್ಯೆಯನ್ನು ಒದಗಿಸುವುದು ಸಹಾಯ ಮಾಡುತ್ತದೆ. ಒಮ್ಮೆ ನಾನು ಖಾತೆಯನ್ನು ರಿಕವರ್ ಮಾಡಿದ ನಂತರ, ಹಾನಿಯನ್ನು ಕಂಡುಹಿಡಿಯಲು ನಾನು ಕೆಲವು ಪರಿಕರಗಳನ್ನು ಬಳಸುತ್ತೇನೆ. ನಾನು ಪೊಲೀಸರ ಬಳಿ ವರದಿ ಸಲ್ಲಿಸುತ್ತೇನೆ, ಅದೇನೇ ಇದ್ದರೂ ಈ ಅಪರಾಧದಲ್ಲಿ ನಾನೇ ಬಲಿಪಶುವಲ್ಲವೇ.”

PC ಗಿಂತ ಸ್ಮಾರ್ಟ್‌ಫೋನ್ ಮೇಲಿನ ದಾಳಿಗಳಿಗೆ ನಾನು ಹೆಚ್ಚು ದುರ್ಬಲನಾಗಿದ್ದೇನೆಯೇ?

ಮಾರ್ಕ್ ರಿಷರ್, Google ನಲ್ಲಿ ಇಂಟರ್ನೆಟ್ ಭದ್ರತೆಗಾಗಿ ಉತ್ಪನ್ನ ನಿರ್ವಹಣೆಯ ನಿರ್ದೇಶಕರು: “ಸ್ಮಾರ್ಟ್‌ಫೋನ್‌ಗಳು, ಈ ಹಿಂದೆ PC ಗಳಿಗೆ ಸಮಸ್ಯೆಗಳನ್ನು ಉಂಟುಮಾಡಿದ ಅನೇಕ ಬೆದರಿಕೆಗಳ ವಿರುದ್ಧ ಬಿಲ್ಟ್-ಇನ್ ರಕ್ಷಣೆಯನ್ನು ಹೊಂದಿವೆ. ಸ್ಮಾರ್ಟ್‌ಫೋನ್‌ಗಳಿಗಾಗಿ ಆಪರೇಟಿಂಗ್ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸುವಾಗ, ಹಿಂದೆ ಉಂಟಾದ ಅಹಿತಕರ ಅನುಭವದ ವಿರುದ್ಧ ಹೋರಾಡುವ ಸಂಯೋಜನೆಯನ್ನು ರಚಿಸಲು Google ನಂತಹ ಕಂಪನಿಗಳಿಗೆ ಸಾಧ್ಯವಾಯಿತು. ಆದರೆ, ಸ್ಕ್ರೀನ್ ಲಾಕ್ ಅನ್ನು ಯಾವಾಗಲೂ ಸಕ್ರಿಯಗೊಳಿಸಲು ನಾನು ಬಳಕೆದಾರರಿಗೆ ಬಲವಾಗಿ ಸಲಹೆ ನೀಡುತ್ತೇನೆ. ಹೆಚ್ಚಿನ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ವಿರಳವಾಗಿ ಮನೆಯಲ್ಲಿ ಬಿಟ್ಟು ಹೋಗುತ್ತಾರೆ, ಇದು ಕಳ್ಳರ ಕೈಗೆ ಅವುಗಳು ಸಿಕ್ಕಿ ಹಾಕಿಕೊಳ್ಳುವುದಕ್ಕೆ ಸುಲಭವಾಗಿಸುತ್ತದೆ.”

ನನ್ನ ಪಾಸ್‌ವರ್ಡ್ ಎಷ್ಟು ಸಂಕೀರ್ಣವಾಗಿರಬೇಕು?

ಮೈಕೆಲ್ ಲಿಟ್ಜರ್, DsiN: “ಬಲವಾದ ಪಾಸ್‌ವರ್ಡ್, ನಿಮಗೆ ನಿಘಂಟಿನಲ್ಲಿ ಕಾಣಿಸುವ ಪದವಾಗಿರಬಾರದು ಮತ್ತು ಇದು ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳ ಸಂಯೋಜನೆಯನ್ನು ಹೊಂದಿರಬೇಕು. ನಮ್ಮ ತರಬೇತಿ ಕೋರ್ಸ್‌ಗಳಲ್ಲಿ, ನೆನಪಿಡಲು ಸುಲಭವಾಗಿರುವ ಬಲಿಷ್ಠವಾದ ಪಾಸ್‌ವರ್ಡ್‌ಗಳನ್ನು ರಚಿಸಲು ಸರಳ ತಂತ್ರಗಳನ್ನು ನಾವು ಭಾಗವಹಿಸುವವರಿಗೆ ಕಲಿಸುತ್ತೇವೆ. ಒಂದು ಮೂಲಭೂತ ವಿಧಾನ ಇಲ್ಲಿದೆ: ನಾನು ‘ನನ್ನ ಸ್ನೇಹಿತ ವಾಲ್ಟರ್ ಅವರು 1996 ರಲ್ಲಿ ಜನಿಸಿದರು!’ ಎಂಬ ರೀತಿಯ ವಾಕ್ಯವನ್ನು ಯೋಚಿಸುತ್ತೇನೆ, ನಂತರ ಎಲ್ಲಾ ಮೊದಲ ಅಕ್ಷರಗಳು ಮತ್ತು ಸಂಖ್ಯೆಗಳನ್ನು ನಾನು ಜೋಡಿಸುತ್ತೇನೆ: ನಸ್ನೇವಾಅ1996ರಜ! ಇನ್ನೊಂದು ವಿಧಾನವನ್ನು ನಾವು ಮೂರು ಪದಗಳ ನಿಯಮ ಎಂದು ಕರೆಯುತ್ತೇವೆ: ನನ್ನ ಜೀವನದಲ್ಲಿ ಸ್ಮರಣೀಯ ಘಟನೆಯನ್ನು ಸಂಕ್ಷಿಪ್ತಗೊಳಿಸುವ ಮೂರು ಪದಗಳ ಬಗ್ಗೆ ನಾನು ಯೋಚಿಸುತ್ತೇನೆ. ಉದಾಹರಣೆಗೆ, ‘ಶ್ರೀಮತಿಕಾರ್ನೀವಲ್1994’ ಎಂಬುದು 1994 ರಲ್ಲಿ ಕಾರ್ನೀವಲ್‌ನಲ್ಲಿ ತಮ್ಮ ಪತ್ನಿಯನ್ನು ಭೇಟಿಯಾದವರೊಬ್ಬರ ಪಾಸ್‌ವರ್ಡ್ ಆಗಿರಬಹುದು.”

ಪಾಸ್‌ವರ್ಡ್ ನಿರ್ವಾಹಕ ಎಷ್ಟು ಉಪಯುಕ್ತವಾಗಿದೆ?

ತಾಡೆಕ್ ಪಿಯೆಟ್ರಝೆಕ್, ಬಳಕೆದಾರರ ಖಾತೆಯ ಸುರಕ್ಷತೆಗಾಗಿ ಪ್ರಧಾನ ಸಾಫ್ಟ್‌ವೇರ್ ಇಂಜಿನಿಯರ್: “ಬಹಳಷ್ಟು ಜನರು ಒಂದೇ ಪಾಸ್‌ವರ್ಡ್ ಅನ್ನು ಅನೇಕ ಖಾತೆಗಳಿಗೆ ಬಳಸುತ್ತಾರೆ ಏಕೆಂದರೆ ಅವರು ಒಂದೇ ಬಾರಿಗೆ ಹಲವಾರು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳಲು ಬಯಸುವುದಿಲ್ಲ. ಆದರೆ, ದಾಳಿಕೋರರಿಗೆ ಈ ಪಾಸ್‌ವರ್ಡ್ ಬಗ್ಗೆ ಗೊತ್ತಾದರೆ, ಅದು ತಕ್ಷಣವೇ ಹಲವಾರು ಇತರ ಖಾತೆಗಳನ್ನು ಅಪಾಯಕ್ಕೆ ಈಡಾಗಿಸುತ್ತದೆ. ಅದಕ್ಕಾಗಿಯೇ, ನಾವು ಬಳಕೆದಾರರಿಗೆ ತಮ್ಮ ಪಾಸ್‌ವರ್ಡ್‌ಗಳನ್ನು ಎಂದಿಗೂ ಮರುಬಳಕೆ ಮಾಡದಂತೆ ಸಲಹೆ ನೀಡುತ್ತೇವೆ. ಸ್ಕ್ಯಾಮರ್‌ಗಳಿಂದ ನಿರ್ಮಿಸಲಾದ ವೆಬ್‌ಸೈಟ್‌ನಲ್ಲಿ ಬಳಕೆದಾರರು ಆಕಸ್ಮಿಕವಾಗಿ ಪಾಸ್‌ವರ್ಡ್ ಅನ್ನು ನಮೂದಿಸುವುದು ಸಹ ಸಾಮಾನ್ಯವಾಗಿದೆ – ವಿಶೇಷವಾಗಿ ಅವರು ಈ ಪಾಸ್‌ವರ್ಡ್ ಅನ್ನು ಆಗಾಗ ಬಳಸುತ್ತಿದ್ದರೆ ಹೀಗಾಗಬಹುದು. ಪಾಸ್‌ವರ್ಡ್ ನಿರ್ವಾಹಕವು ಈ ಎರಡೂ ಸಮಸ್ಯೆಗಳನ್ನು ಪರಿಹರಿಸುತ್ತದೆ. ಮೊದಲನೆಯದಾಗಿ, ಇದು ನಿಮ್ಮ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವನ್ನು ತೆಗೆದುಹಾಕುತ್ತದೆ, ಹೀಗಾಗಿ ನೀವು ಅವುಗಳನ್ನು ಮರುಬಳಕೆ ಮಾಡುವಂತೆ ಪ್ರಚೋದಿಸುವುದಿಲ್ಲ. ಎರಡನೆಯದಾಗಿ, ಪಾಸ್‌ವರ್ಡ್ ನಿರ್ವಾಹಕ ಸರಿಯಾದ ಪಾಸ್‌ವರ್ಡ್ ಅನ್ನು ಸರಿಯಾದ ಖಾತೆಗೆ ಮಾತ್ರ ಬಳಸುತ್ತದೆ; ಮನುಷ್ಯರಂತೆ, ಇದು ಮೋಸದ ಸೈಟ್‌ಗಳಿಗೆ ಬೀಳುವುದಿಲ್ಲ. ಆದರೆ, ಗೌರವಾನ್ವಿತ ಕಂಪನಿಗಳ ಪಾಸ್‌ವರ್ಡ್ ನಿರ್ವಾಹಕವನ್ನು ಮಾತ್ರ ಬಳಸುವುದು ಮುಖ್ಯವಾಗಿದೆ, ಉದಾಹರಣೆಗೆ Dashlane, Keeper Password Manager ಅಥವಾ Google ನ Chrome ಬ್ರೌಸರ್‌ನಲ್ಲಿ ಸಂಯೋಜಿತವಾಗಿರುವ ಪಾಸ್‌ವರ್ಡ್ ನಿರ್ವಾಹಕ.”

ಆರ್ಟ್‌ವರ್ಕ್: ಜಾನ್ ವಾನ್ ಹಾಲೆಬೆನ್; ಪೋರ್ಟ್ರೇಟ್‌ಗಳು: DsiN/ಥಾಮಸ್ ರಫಲ್‌ಜಿಕ್, ಕಾನ್ನಿ ಮಿರ್‌ಬ್ಯಾಕ್ (3)

ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು

ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.

ಇನ್ನಷ್ಟು ತಿಳಿಯಿರಿ