ಹಿನ್ನೆಲೆ ಪರಿಶೀಲನೆ

ಇಂಟರ್ನೆಟ್ ಅನ್ನು Google ಹೇಗೆ ಇನ್ನಷ್ಟು ಸುರಕ್ಷಿತಗೊಳಿಸುತ್ತಿದೆ ಎಂಬುದರ ತೆರೆಮರೆಯ ನೋಟ

ಮೂಲಸೌಕರ್ಯ

Google, ವಿಶ್ವದ ಅತಿ ದೊಡ್ಡ ಮತ್ತು ಸುರಕ್ಷಿತವಾದ ಕ್ಲೌಡ್ ಮೂಲಸೌಕರ್ಯವನ್ನು ಕಾರ್ಯನಿರ್ವಹಣೆ ಮಾಡುತ್ತದೆ. ಇದರ ಡೇಟಾ ಕೇಂದ್ರಗಳು ವಿಶ್ವದಾದ್ಯಂತ ಸ್ಥಾಪಿತವಾಗಿವೆ ಮತ್ತು ಅವುಗಳು ಜಲಾಂತರ್ಗಾಮಿ ಫೈಬರ್ ಆಪ್ಟಿಕ್ ಕೇಬಲ್‌ಗಳ ಮೂಲಕ ಸಂಪರ್ಕ ಹೊಂದಿವೆ. ಇಡೀ ಸಿಸ್ಟಂ ಅನ್ನು ಎಚ್ಚರಿಕೆಯಿಂದ ನಿರಂತರವಾಗಿ ನಿಗಾವಹಿಸಲಾಗುತ್ತದೆ.

Google Play Protect

ಪ್ರತಿ ದಿನ, ಮಾಲ್‌ವೇರ್ ಹಾಗೂ ವೈರಸ್‌ಗಳಿಗಾಗಿ ಸುಮಾರು 50 ಬಿಲಿಯನ್ Android ಆ್ಯಪ್‌ಗಳನ್ನು Play Protect ಪರಿಶೀಲಿಸುತ್ತದೆ. ಒಬ್ಬ ಪೂರೈಕೆದಾರರು Google Play Store ನಲ್ಲಿ ಆ್ಯಪ್‌ವೊಂದನ್ನು ಅಪ್‌ಲೋಡ್ ಮಾಡಲು ಪ್ರಯತ್ನಿಸಿದಾಗ ಮೊದಲ ಪರೀಕ್ಷೆ ನಡೆಯುತ್ತದೆ. ಬಳಕೆದಾರರು ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅಥವಾ ಅದನ್ನು ತಮ್ಮ ಸಾಧನದಲ್ಲಿ ಬಳಸಲು ಬಯಸಿದಾಗಲೂ ಸಹ Google Play Protect ಕಾರ್ಯ ನಿರ್ವಹಿಸುತ್ತದೆ. ಸೇವೆಯು ಸಂಭವನೀಯ ಹಾನಿಕಾರಕ ಆ್ಯಪ್ ಅನ್ನು ಗುರುತಿಸಿದಾಗ, ಬಳಕೆದಾರರನ್ನು Google ಎಚ್ಚರಿಸುತ್ತದೆ ಅಥವಾ ಸ್ವಯಂಚಾಲಿತವಾಗಿ ಆ್ಯಪ್ ಅನ್ನು ತೆಗೆದುಹಾಕುತ್ತದೆ. ಹೆಚ್ಚಿನ ಮಾಹಿತಿಗಾಗಿ android.com ಗೆ ಭೇಟಿ ಕೊಡಿ.

ಎನ್‌ಕ್ರಿಪ್ಶನ್

Gmail ಮೂಲಕ ಕಳುಹಿಸಲಾದ ಇಮೇಲ್‌ಗಳನ್ನು ಮತ್ತು ಬಳಕೆದಾರರು ಕ್ಲೌಡ್‌ನಲ್ಲಿ ಉಳಿಸುವ ಫೋಟೋಗ್ರಾಫ್‌ಗಳನ್ನು ರಕ್ಷಿಸಲು, Google, HTTPS ಹಾಗೂ ಟ್ರಾನ್ಸ್‌ಪೋರ್ಟ್ ಲೇಯರ್‌ನ ಭದ್ರತೆಯಂತಹ ವಿವಿಧ ಎನ್‌ಕ್ರಿಪ್ಶನ್ ತಂತ್ರಜ್ಞಾನಗಳನ್ನು ಬಳಸುತ್ತದೆ. Google ನ ಹುಡುಕಾಟ ಎಂಜಿನ್, HTTPS ಪ್ರೊಟೊಕಾಲ್ ಅನ್ನು ಪ್ರಮಾಣಿತ ಪ್ರೊಟೊಕಾಲ್ ಆಗಿ ಸಹ ಬಳಸುತ್ತದೆ.

ಡೇಟಾ ವಿನಂತಿಗಳ ಪರಿಶೀಲಿಸುವಿಕೆ

ಗುಪ್ತಚರ ಅಥವಾ ಇತರ ಸರ್ಕಾರಿ ಏಜೆನ್ಸಿಗಳಿಗೆ ಬಳಕೆದಾರರ ಡೇಟಾಕ್ಕೆ ನೇರ ಪ್ರವೇಶಪಡೆಯುವಿಕೆಯನ್ನು Google ನೀಡುವುದಿಲ್ಲ. ವಿಶ್ವದ ಪ್ರತಿಯೊಂದು ದೇಶಕ್ಕೆ ಇದು ಸತ್ಯವಾಗಿರುವ ರೀತಿಯಲ್ಲಿಯೇ ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿಗೂ ಸತ್ಯವೇ. ಒಂದು ವೇಳೆ ಪ್ರಾಧಿಕಾರವೊಂದು ಬಳಕೆದಾರರ ಡೇಟಾಕ್ಕೆ ಪ್ರವೇಶಪಡೆಯಲು ವಿನಂತಿಸಿದರೆ, ಆ ಮನವಿಯನ್ನು Google ಸೂಕ್ಷ್ಮವಾಗಿ ಪರಿಶೀಲಿಸುತ್ತದೆ ಮತ್ತು ಉತ್ತಮ ಕಾರಣ ಇಲ್ಲದಿದ್ದರೆ ಪ್ರವೇಶಪಡೆಯುವಿಕೆಯನ್ನು ನೀಡುವುದಿಲ್ಲ. Google, ಹಲವಾರು ವರ್ಷಗಳಿಂದ ಪಾರದರ್ಶಕತೆ ವರದಿಗಳನ್ನು ಪ್ರಕಟಿಸುತ್ತಿದ್ದು, ಅದು ಡೇಟಾದ ವಿನಂತಿಗಳನ್ನು ಒಳಗೊಂಡಿದೆ. ವರದಿಗಳನ್ನು ಓದಲು transparencyreport.google.com ಗೆ ಭೇಟಿ ಕೊಡಿ.

ಸುರಕ್ಷಿತ ಸರ್ಫಿಂಗ್

Google ಸುರಕ್ಷಿತ ಬ್ರೌಸಿಂಗ್ ತಂತ್ರಜ್ಞಾನವು ಅಪಾಯಕಾರಿ ಸೈಟ್‌ಗಳು ಹಾಗೂ ದುರುದ್ದೇಶಪ್ರೇರಿತ ವ್ಯಕ್ತಿಗಳಿಂದ ಬಳಕೆದಾರರನ್ನು ರಕ್ಷಿಸುತ್ತದೆ. ಅದರ ಕೇಂದ್ರಭಾಗದಲ್ಲಿ ಅನುಮಾನಾಸ್ಪದ ವೆಬ್‌ಸೈಟ್‌ಗಳ ವಿಳಾಸಗಳನ್ನು ಒಳಗೊಂಡಿರುವ ಡೇಟಾಬೇಸ್ ಇದೆ. ಬಳಕೆದಾರರು ಈ ಸೈಟ್‌ಗಳಲ್ಲಿ ಒಂದು ಸೈಟ್‌ಗೆ ಭೇಟಿ ಕೊಡಲು ಪ್ರಯತ್ನಿಸಿದರೆ, ಆತ ಅಥವಾ ಆಕೆ ಎಚ್ಚರಿಕೆಯನ್ನು ಸ್ವೀಕರಿಸುತ್ತಾರೆ. ಹೊಸದಾಗಿ ಅಭಿವೃದ್ಧಿಪಡಿಸಿದ ಫಿಶಿಂಗ್ ತಂತ್ರಗಳ ವಿರುದ್ಧ ಕಾರ್ಯನಿರ್ವಹಿಸಲು ಕೃತಕ ಬುದ್ಧಿಮತ್ತೆಯನ್ನು ಸಹ Google ಬಳಸುತ್ತದೆ. ಇನ್ನಷ್ಟು ಓದಲು safebrowsing.google.com ಗೆ ಭೇಟಿ ಕೊಡಿ.

ಲೋಪದೋಷಗಳ ಅಂತ್ಯಗೊಳಿಸುವಿಕೆ

ಪ್ರತಿ ವರ್ಷ, ಸಂಶೋಧನಾ ಪ್ರಾಜೆಕ್ಟ್‌ಗಳು – ಮತ್ತು “ದೋಷ ಪತ್ತೆಹಚ್ಚಿದವರಿಗೆ ರಿವಾರ್ಡ್‍ಗಳ” ಮೇಲೆ Google ಮಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಹೂಡಿಕೆ ಮಾಡುತ್ತದೆ. ಇವು ಅಡಗಿರುವ ಭದ್ರತಾ ಲೋಪದೋಷಗಳನ್ನು ಗುರುತಿಸಲು ಕಂಪನಿಗೆ ಸಹಾಯ ಮಾಡುವ IT ಪರಿಣತ ವ್ಯಕ್ತಿಗೆ ನೀಡುವ ಬಹುಮಾನಗಳಾಗಿವೆ. ಉರುಗ್ವೆಯ 18 ವರ್ಷದ ಎಝೆಕೀಲ್ ಪೆರೀರಾ ಅಂತಹ ಒಬ್ಬ ನಿಪುಣರಾಗಿದ್ದು, ಇಂತಹ ಲೋಪಗಳನ್ನು ಸರಿಪಡಿಸಲು Google ಗೆ ಸಹಾಯ ಮಾಡಿದ್ದಾರೆ. ಕಳೆದ ವರ್ಷ, ಬಹು ಮುಖ್ಯವಾದ ಆವಿಷ್ಕಾರಕ್ಕೆ ಅವರು $36,337 ಬಹುಮಾನವನ್ನು ಸ್ವೀಕರಿಸಿದ್ದಾರೆ.

Project Zero

ಹ್ಯಾಕರ್‌ಗಳು ಮತ್ತು ಡೇಟಾ ಕದಿಯುವವರು ಭದ್ರತಾ ಲೋಪಗಳನ್ನು ಕಂಡುಹಿಡಿಯುವ ಮೊದಲೇ ಅವುಗಳನ್ನು ಅಂತ್ಯಗೊಳಿಸಲು Google ನ ತಜ್ಞ ಭದ್ರತಾ ತಂಡವು ಶ್ರಮಿಸುತ್ತಿದೆ. ತಜ್ಞರು ಈ ಲೋಪಗಳನ್ನು “ಶೂನ್ಯ-ದಿನ ದುರ್ಬಲತೆಗಳು” ಎಂದು ಕರೆಯುತ್ತಾರೆ, ಹಾಗಾಗಿ ಈ ತಂಡಕ್ಕೆ Project Zero ಎಂಬ ಹೆಸರು ಇಡಲಾಗಿದೆ. ಈ ತಂಡವು ನಿರ್ದಿಷ್ಟವಾಗಿ Google ಸೇವೆಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿಲ್ಲ, ಪ್ರತಿಸ್ಪರ್ಧಿಗಳ ಸೇವೆಗಳಲ್ಲಿರುವ ದೌರ್ಬಲ್ಯಗಳನ್ನು ಸಹ ಇದು ಗಮನಿಸುತ್ತದೆ, ಹಾಗಾಗಿ ಇದು ಅವರಿಗೆ ಮಾಹಿತಿ ನೀಡಬಹುದು ಮತ್ತು ಅವರ ಬಳಕೆದಾರರನ್ನೂ ಸಹ ರಕ್ಷಿಸಲು ಸಹಾಯ ಮಾಡಬಹುದು. Project Zero ದ ಕಾರ್ಯನಿರ್ವಹಣೆ ಕುರಿತು ಹೆಚ್ಚಿನ ಮಾಹಿತಿಗಾಗಿ googleprojectzero.blogspot.com ಗೆ ಭೇಟಿ ಕೊಡಿ.

ಇತರ IT ಪೂರೈಕೆದಾರರಿಗೆ ಸಹಾಯ ಹಸ್ತ

Google ವ್ಯಾಪ್ತಿಯ ಹೊರಗಡೆಯೂ ಸಹ, ಇಂಟರ್ನೆಟ್ ಅನ್ನು ಸುರಕ್ಷಿತವಾಗಿರಿಸುವ ಪ್ರಯತ್ನದ ಭಾಗವಾಗಿ Google ತನ್ನ ಭದ್ರತಾ ತಂತ್ರಜ್ಞಾನಗಳು ಇತರ ಕಂಪನಿಗಳಿಗೆ ಶುಲ್ಕವಿಲ್ಲದೇ ದೊರೆಯುವಂತಾಗಲು ನಿರಂತರವಾಗಿ ಶ್ರಮಿಸುತ್ತಿದೆ. ಉದಾಹರಣೆಗೆ, ಇತರ ಕಂಪನಿಗಳ ಡೆವಲಪರ್‌ಗಳು ದೌರ್ಬಲ್ಯಗಳನ್ನು ಹುಡುಕಲು ಕ್ಲೌಡ್ ಭದ್ರತಾ ಸ್ಕ್ಯಾನರ್ ಅನ್ನು ಬಳಸಬಹುದು. ಮತ್ತು Google ನ ಸುರಕ್ಷಿತ ಬ್ರೌಸಿಂಗ್ ತಂತ್ರಜ್ಞಾನವನ್ನು Apple ನ Safari ಬ್ರೌಸರ್ ಮತ್ತು Mozilla Firefox ಗಳು ಬಳಸುತ್ತಿವೆ.

ಸ್ಪ್ಯಾಮ್‍ನಿಂದ ರಕ್ಷಣೆಗಾಗಿ AI ಗೆ ಧನ್ಯವಾದಗಳು

Gmail ಬಳಕೆದಾರರನ್ನು ಸ್ಪ್ಯಾಮ್‌ನಿಂದ ರಕ್ಷಿಸಲು Google, ಮಷಿನ್ ಲರ್ನಿಂಗ್ ಅನ್ನು ಬಳಸುತ್ತದೆ. ನ್ಯೂರಲ್ ನೆಟ್‌ವರ್ಕ್‌ಗಳು ಬಿಲಿಯನ್‌ಗಟ್ಟಲೆ ಅಪೇಕ್ಷಿಸದ ಅಥವಾ ಬೇಕಾಗಿರದ ಇಮೇಲ್‌ಗಳನ್ನು ವಿಶ್ಲೇಷಿಸುತ್ತದೆ ಹಾಗೂ ಅವುಗಳು ಸ್ಪ್ಯಾಮ್ ಅನ್ನು ಪತ್ತೆಹಚ್ಚಲು ಅನುಮತಿಸುವ ವಿನ್ಯಾಸಗಳನ್ನು ಗುರುತಿಸುತ್ತದೆ. ಈ ವಿಧಾನವು ಯಶಸ್ವಿಯಾಗಿರುವುದು ಸಾಬೀತಾಗಿದೆ. ಈಗ, ಸಾವಿರದಲ್ಲಿ ಒಂದಕ್ಕಿಂತ ಕಡಿಮೆ ಸ್ಪ್ಯಾಮ್ ಇಮೇಲ್‌ಗಳು ಬಳಕೆದಾರರ ಇನ್‌ಬಾಕ್ಸ್‌ಗಳಲ್ಲಿ ಕೊನೆಯಾಗುತ್ತವೆ – ಮತ್ತು ಆ ಸಂಖ್ಯೆಯು ಪ್ರತಿ ದಿನ ಕಡಿಮೆಯಾಗುತ್ತಿದೆ!

ಇಲ್ಲಿ ಇನ್ನಷ್ಟು ಹುಡುಕಿ:

safety.google

ಉದಾಹರಣೆಗಳು: ರಾಬರ್ಟ್ ಸ್ಯಾಮುಯೆಲ್ ಹ್ಯಾನ್ಸನ್

ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು

ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.

ಇನ್ನಷ್ಟು ತಿಳಿಯಿರಿ