ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ನಿಮಗೆ ಸಹಾಯ ಮಾಡುವುದಕ್ಕಾಗಿ ಪರಿಕರಗಳು ಹಾಗೂ ಸಲಹೆಗಳು.
ಉದ್ಯಮದಲ್ಲಿಯೇ ಮುಂಚೂಣಿಯಲ್ಲಿರುವ ಭದ್ರತೆಯ ಸಹಾಯದಿಂದ ನಿಮ್ಮ ಗೌಪ್ಯತೆಯನ್ನು ಸ್ವಯಂಚಾಲಿತವಾಗಿ ರಕ್ಷಿಸುತ್ತೇವೆ. ನಿಮ್ಮ ಆನ್‌ಲೈನ್ ಭದ್ರತೆಯನ್ನು ನಿರ್ವಹಿಸಲು ಮತ್ತು ನಿಮಗಾಗಿ ಸರಿಯಾದ ಮಟ್ಟದ ರಕ್ಷಣೆಯನ್ನು ಆಯ್ಕೆಮಾಡಲು ನೀವು ತೆಗೆದುಕೊಳ್ಳಬಹುದಾದ ಕೆಲವು ಹೆಚ್ಚುವರಿ ಹಂತಗಳಿವೆ.
ಭದ್ರತಾ ಪರಿಶೀಲನೆ
ಭದ್ರತಾ ಪರಿಶೀಲನೆಗೆ ಒಳಪಡಿ
ನಿಮ್ಮ Google ಖಾತೆಯನ್ನು ರಕ್ಷಿಸಲು ಒಂದು ಸುಲಭ ಮಾರ್ಗವೆಂದರೆ ಭದ್ರತಾ ಪರಿಶೀಲನೆಗೆ ಒಳಪಡುವುದು. ನಿಮ್ಮ Google ಖಾತೆಯ ಸುರಕ್ಷತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸಹಾಯ ಮಾಡುವುದಕ್ಕಾಗಿ ಈ ಹಂತದಿಂದ-ಹಂತದವರೆಗಿನ ಪರಿಕರವು ನಿಮಗೆ ವೈಯಕ್ತಿಕಗೊಳಿಸಿದ ಮತ್ತು ಕ್ರಿಯಾತ್ಮಕ ಶಿಫಾರಸುಗಳನ್ನು ನೀಡುತ್ತದೆ.
2-ಹಂತದ ಪರಿಶೀಲನೆ
2-ಹಂತದ ಪರಿಶೀಲನೆಯ ಮೂಲಕ ಹ್ಯಾಕರ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
ನಿಮ್ಮ ಖಾತೆಗೆ ಲಾಗ್ ಇನ್ ಮಾಡಲು ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ನಮೂದಿಸಿದ ನಂತರವೂ ಎರಡನೆಯ ಅಂಶವೊಂದನ್ನು ನೀವು ಬಳಸುವ ಅಗತ್ಯತೆಯ ಮೂಲಕ 2-ಹಂತದ ಪರಿಶೀಲನೆಯು, ನಿಮ್ಮ ಖಾತೆಗೆ ಪ್ರವೇಶವನ್ನು ಹೊಂದಬಾರದಂತಹ ಯಾರನ್ನಾದರೂ ಹೊರಗಿಡುವಂತೆ ಸಹಾಯ ಮಾಡುತ್ತದೆ. ಉದ್ದೇಶಿತ ಆನ್‌ಲೈನ್ ದಾಳಿಯ ಅಪಾಯದಲ್ಲಿರುವ ಮತ್ತು ಇನ್ನೂ ಬಲವಾದ ರಕ್ಷಣೆಗಳ ಅಗತ್ಯವಿರುವವರಿಗೆ, ನಾವು ಸುಧಾರಿತ ರಕ್ಷಣಾ ಪ್ರೋಗ್ರಾಂ ಅನ್ನು ರಚಿಸಿದ್ದೇವೆ.
ಬಲವಾದ ಮತ್ತು ಅನನ್ಯ ಪಾಸ್‌ವರ್ಡ್‌ಗಳನ್ನು ಬಳಸಿ
ಪ್ರತಿ ಖಾತೆಗೆ ಬಲವಾದ, ಅನನ್ಯ ಪಾಸ್‌ವರ್ಡ್ ಹೊಂದಿಸುವುದು ನಿಮ್ಮ ಗೌಪ್ಯತೆಯನ್ನು ಸುರಕ್ಷಿತವಾಗಿರಿಸಲು ನೀವು ತೆಗೆದುಕೊಳ್ಳಬಹುದಾದ ಅತ್ಯಂತ ಮಹತ್ವದ ವಿಧಾನಗಳಲ್ಲಿ ಒಂದಾಗಿದೆ. ನಿಮ್ಮ Google ಖಾತೆ, ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು ಮತ್ತು ವ್ಯಾಪಾರಿ ವೆಬ್‌ಸೈಟ್‌ಗಳಂತಹ ಬಹು ಖಾತೆಗಳಲ್ಲಿ ಲಾಗ್ ಇನ್ ಮಾಡಲು ಒಂದೇ ಪಾಸ್‌ವರ್ಡ್ ಬಳಸುವುದರಿಂದ ನಿಮ್ಮ ಭದ್ರತಾ ಅಪಾಯವು ಹೆಚ್ಚುತ್ತದೆ.
ನಿಮ್ಮೆಲ್ಲಾ ಪಾಸ್‌ವರ್ಡ್‌ಗಳನ್ನು ಟ್ರ್ಯಾಕ್ ಮಾಡುತ್ತಿರಿ
ನಿಮ್ಮ Google ಖಾತೆಯಲ್ಲಿಯೇ ನಿರ್ಮಿಸಲಾದಂತಹ ಪಾಸ್‌ವರ್ಡ್ ನಿರ್ವಾಹಕವು, ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿ ನೀವು ಬಳಸುವ ಪಾಸ್‌ವರ್ಡ್‌ಗಳನ್ನು ರಕ್ಷಿಸಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಖಾತೆಗಳಿಗೆ ಸುರಕ್ಷಿತವಾಗಿ ಮತ್ತು ಸುಲಭವಾಗಿ ಸೈನ್ ಇನ್ ಮಾಡುವುದಕ್ಕಾಗಿ ನಿಮ್ಮ ಎಲ್ಲಾ ಪಾಸ್‌ವರ್ಡ್‌ಗಳನ್ನು ರಚಿಸಲು, ನೆನಪಿಟ್ಟುಕೊಳ್ಳಲು ಮತ್ತು ಸುರಕ್ಷಿತವಾಗಿ ಸಂಗ್ರಹಿಸಲು Google ನ ಪಾಸ್‌ವರ್ಡ್ ನಿರ್ವಾಹಕ ನಿಮಗೆ ಸಹಾಯ ಮಾಡುತ್ತದೆ.
ಸುರಕ್ಷತಾ ಸಮಸ್ಯೆಗಳಿಗಾಗಿ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಿ
ತ್ವರಿತ ಪಾಸ್‌ವರ್ಡ್ ಪರೀಕ್ಷೆಯ ಮೂಲಕ ನಿಮ್ಮ ಎಲ್ಲಾ ಉಳಿಸಿದ ಪಾಸ್‌ವರ್ಡ್‌ಗಳ ಸಾಮರ್ಥ್ಯ ಮತ್ತು ಸುರಕ್ಷತೆಯನ್ನು ಪರಿಶೀಲಿಸಿ. ಥರ್ಡ್-ಪಾರ್ಟಿ ಸೈಟ್‌ಗಳು ಅಥವಾ ಖಾತೆಗಳಿಗಾಗಿ ನಿಮ್ಮ ಯಾವುದೇ ಉಳಿಸಿದ ಪಾಸ್‌ವರ್ಡ್‌ಗಳು ಅಪಾಯಕ್ಕೀಡಾಗಿವೆಯೇ ಎಂದು ತಿಳಿಯಿರಿ ಮತ್ತು ಅಗತ್ಯವಿದ್ದರೆ, ಅವುಗಳನ್ನು ಸುಲಭವಾಗಿ ಬದಲಾಯಿಸಿ.
-
ನಿಮ್ಮ ಫೋನ್ ಕಳೆದುಕೊಂಡರೆ, ಅದನ್ನು ಲಾಕ್ ಮಾಡಿ
ನಿಮ್ಮ ಫೋನ್ ಎಂದಾದರೂ ಕಳೆದುಹೋದರೆ ಅಥವಾ ಕಳುವಾದರೆ, ನಿಮ್ಮ Google ಖಾತೆಗೆ ಭೇಟಿ ನೀಡಿ ಮತ್ತು “ನಿಮ್ಮ ಫೋನ್ ಹುಡುಕಿ” ಆಯ್ಕೆಮಾಡಬಹುದು. ಕೆಲವೇ ಕೆಲವು ತ್ವರಿತ ಹಂತಗಳಲ್ಲಿ ನಿಮ್ಮ ಡೇಟಾವನ್ನು ಸುರಕ್ಷಿತಗೊಳಿಸಬಹುದು. ನಿಮ್ಮದು Android ಸಾಧನವಿರಲಿ ಅಥವಾ iOS ಸಾಧನವೇ ಇರಲಿ, ಬೇರೆ ಯಾರೊಬ್ಬರೂ ನಿಮ್ಮ ಫೋನ್ ಅನ್ನು ಬಳಸಿಕೊಂಡು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು ಸಾಧ್ಯವಾಗದಂತೆ ನಿಮ್ಮ ಫೋನ್ ಅನ್ನು ನೀವು ದೂರದಿಂದಲೇ ಪತ್ತೆ ಮಾಡಿ, ಲಾಕ್ ಮಾಡಬಹುದು.
-
ಅಪ್ ಟು ಡೇಟ್ ಆಗಿರುವ ಸಾಫ್ಟ್ವೇರ್ ಅನ್ನು ನಿರ್ವಹಿಸಿ
ನೀವು ಯಾವಾಗಲೂ ಲಭ್ಯವಿರುವ ಇತ್ತೀಚಿನ ಆವೃತ್ತಿಗಳನ್ನು ಬಳಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನೀವು ಸಾಮಾನ್ಯವಾಗಿ ಬಳಸುವ ಸಾಫ್ಟ್ವೇರ್ ಪರಿಶೀಲಿಸಿ. Chrome ಬ್ರೌಸರ್ ಸೇರಿದಂತೆ, ಕೆಲವು ಸೇವೆಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗಬಹುದು. ಆದ್ದರಿಂದ ನೀವು ಇತ್ತೀಚಿನ ಭದ್ರತಾ ಫೀಚರ್ಗಳು ಮತ್ತು ಪರಿಹಾರಗಳನ್ನು ಹೊಂದಿರುತ್ತೀರಿ.
-
ನಿಮ್ಮ ಫೋನ್ನಿಂದ ಸಂಭವನೀಯ ಹಾನಿಕಾರಕ ಆ್ಯಪ್ಗಳನ್ನು ನಿರ್ಬಂಧಿಸಿ
Android ಗಾಗಿ Google ನ ಬಿಲ್ಟ್-ಇನ್ ಮಾಲ್ವೇರ್ ರಕ್ಷಣೆಯ Google Play Protect ನೊಂದಿಗೆ ನಿಮ್ಮ ಸಾಧನದ ಕಾಳಜಿ ವಹಿಸುತ್ತೇವೆ, ಆದರೆ ನಿಮಗೆ ವಿಶ್ವಾಸವಿರುವ ಮೂಲದಿಂದ ನಿಮ್ಮ ಮೊಬೈಲ್ ಆ್ಯಪ್ಗಳನ್ನು ನೀವು ಯಾವಾಗಲೂ ಡೌನ್‌ಲೋಡ್ ಮಾಡಬೇಕು. ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು, ನಿಮ್ಮ ಆ್ಯಪ್ಗಳನ್ನು ಪರಿಶೀಲಿಸಿ ಮತ್ತು ನೀವು ಬಳಸದಿರುವುದನ್ನು ಅಳಿಸಿ, ಆ್ಯಪ್ ಸ್ವಯಂ- ಅಪ್ಡೇಟ್ಗಳನ್ನು ಸಕ್ರಿಯಗೊಳಿಸಿ ಹಾಗೂ ನಿಮ್ಮ ಸ್ಥಳ ಮತ್ತು ಫೋಟೋಗಳಂತಹ ಸೂಕ್ಷ್ಮ ಡೇಟಾಗೆ ಆ್ಯಪ್ ಪ್ರವೇಶವನ್ನು ಸೀಮಿತಗೊಳಿಸಿ.
-
ಸ್ಕ್ರೀನ್ ಲಾಕ್ ಬಳಸಿ
ನೀವು ನಿಮ್ಮ ಕಂಪ್ಯೂಟರ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಅಥವಾ ಫೋನ್ ಅನ್ನು ಬಳಸದೇ ಇರುವಾಗ, ಇತರರು ನಿಮ್ಮ ಸಾಧನವನ್ನು ಪ್ರವೇಶಿಸದಂತೆ ನಿಮ್ಮ ಸ್ಕ್ರೀನ್ ಅನ್ನು ಲಾಕ್ ಮಾಡಿ. ಹೆಚ್ಚುವರಿ ಸುರಕ್ಷತೆಗಾಗಿ, ನಿಮ್ಮ ಸಾಧನವು ನಿದ್ರಾವಸ್ಥೆಗೆ ಹೋದಾಗ, ಅದು ಸ್ವಯಂಚಾಲಿತವಾಗಿ ಲಾಕ್ ಆಗುವಂತೆ ಹೊಂದಿಸಿ.
-
ಸುರಕ್ಷಿತ ನೆಟ್ವರ್ಕ್ಗಳನ್ನು ಬಳಸಿ
ಸಾರ್ವಜನಿಕ ಅಥವಾ ಉಚಿತ ವೈಫೈಯನ್ನು ಬಳಸಲು ಪಾಸ್ವರ್ಡ್ನ ಅಗತ್ಯವಿದ್ದರೂ ಸಹ ಅವುಗಳ ಬಗ್ಗೆ ಜಾಗರೂಕರಾಗಿರಿ. ಈ ನೆಟ್ವರ್ಕ್ಗಳು ಎನ್ಕ್ರಿಪ್ಟ್ ಆಗದೇ ಇರಬಹುದು, ಆದ್ದರಿಂದ ನೀವು ಸಾರ್ವಜನಿಕ ನೆಟ್ವರ್ಕ್ಗೆ ಕನೆಕ್ಟ್ ಮಾಡಿದಾಗ, ಅದರ ಸುತ್ತಮುತ್ತಲಿನ ಯಾರಿಗಾದರೂ ನೀವು ಭೇಟಿ ನೀಡುವ ವೆಬ್ಸೈಟ್ಗಳು ಮತ್ತು ಸೈಟ್ಗಳಲ್ಲಿ ನೀವು ಟೈಪ್ ಮಾಡುವ ಮಾಹಿತಿಯಂತಹ ನಿಮ್ಮ ಇಂಟರ್ನೆಟ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ. ಸಾರ್ವಜನಿಕ ಅಥವಾ ಉಚಿತ ವೈಫೈ ನಿಮ್ಮ ಏಕೈಕ ಆಯ್ಕೆಯಾಗಿದ್ದರೆ, ಸೈಟ್ ಒಂದಕ್ಕೆ ನಿಮ್ಮ ಕನೆಕ್ಷನ್ ಸುರಕ್ಷಿತವಾಗಿದೆಯೇ ಎಂಬುದನ್ನು Chrome ಬ್ರೌಸರ್ ವಿಳಾಸ ಪಟ್ಟಿಯಲ್ಲಿ ತಿಳಿಸುತ್ತದೆ.
ಸುರಕ್ಷಿತ ವೈ-ಫೈ ಕನೆಕ್ಷನ್ಗಳನ್ನು ಬಳಸುವ ಪ್ರಾಮುಖ್ಯತೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ನಿಮ್ಮ ಸ್ವಂತ ವೈ-ಫೈ ನೆಟ್ವರ್ಕ್ ಅನ್ನು ಹೇಗೆ ಸುರಕ್ಷಿತಗೊಳಿಸುವುದು ಎಂಬುದರ ಕುರಿತು ಸಲಹೆಗಳಿಗಾಗಿ ಈ ವೀಡಿಯೊವನ್ನು ವೀಕ್ಷಿಸಿ.
-
ಸೂಕ್ಷ್ಮ ಮಾಹಿತಿಯನ್ನು ನಮೂದಿಸುವ ಮೊದಲು ನಿಮ್ಮ ಕನೆಕ್ಷನ್ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಿ
ನೀವು ವೆಬ್ ಬ್ರೌಸ್ ಮಾಡುತ್ತಿರುವಾಗ – ಮತ್ತು ವಿಶೇಷವಾಗಿ ಪಾಸ್‌ವರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಗಳಂತಹ ಸೂಕ್ಷ್ಮ ಮಾಹಿತಿಯನ್ನು ನಮೂದಿಸುವುದಿದ್ದರೆ – ನೀವು ಭೇಟಿ ನೀಡುವ ಸೈಟ್ಗಳ ಕನೆಕ್ಷನ್ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾವುದೇ ಕನೆಕ್ಷನ್ನ ಡೀಫಾಲ್ಟ್ ಸ್ಥಿತಿ ಸುರಕ್ಷಿತವಾಗಿದೆ. ಕನೆಕ್ಷನ್ ಸುರಕ್ಷಿತವಾಗಿಲ್ಲದಿದ್ದರೆ, ವಿಳಾಸ ಪಟ್ಟಿಯಲ್ಲಿ Chrome ಬ್ರೌಸರ್ ಕೆಂಪು ಬಣ್ಣದ ಸುರಕ್ಷಿತವಲ್ಲ ಎಂಬ ಚಿಪ್ ಅನ್ನು ಪ್ರದರ್ಶಿಸುತ್ತದೆ. ನೀವು ಭೇಟಿ ನೀಡುವ ವೆಬ್ಸೈಟ್ಗಳೊಂದಿಗೆ ನಿಮ್ಮ ಬ್ರೌಸರ್ ಅಥವಾ ಆ್ಯಪ್ಗಳನ್ನು ಸುರಕ್ಷಿತವಾಗಿ ಕನೆಕ್ಟ್ ಮಾಡುವ ಮೂಲಕ ನಿಮ್ಮ ಬ್ರೌಸಿಂಗ್ ಅನ್ನು ಸುರಕ್ಷಿತವಾಗಿರಿಸಲು HTTPS ಸಹಾಯ ಮಾಡುತ್ತದೆ.
-
Google ಸ್ಥಳ ನಿಖರತೆ
ಸ್ಥಳ ಸೇವೆಗಳನ್ನು ಸುಧಾರಿಸಲು Google ಸ್ಥಳ ನಿಖರತೆಯು ವೈರ್ಲೆಸ್ ಪ್ರವೇಶ ಬಿಂದುಗಳು ಮತ್ತು GPS, ಸೆಲ್ ಟವರ್ ಮತ್ತು ಸೆನ್ಸರ್ ಡೇಟಾದಿಂದ ಸಾರ್ವಜನಿಕವಾಗಿ ಪ್ರಸಾರವಾದ ವೈ-ಫೈ ಡೇಟಾವನ್ನು ಬಳಸುತ್ತದೆ. ನಿಮ್ಮ ವೈ-ಫೈ ಪ್ರವೇಶ ಬಿಂದುವನ್ನು ಸಂಗ್ರಹಿಸುವುದರಿಂದ ಹೇಗೆ ಹೊರಗುಳಿಯಬೇಕು ಎಂಬುದರ ಕುರಿತು ಸೂಚನೆಗಳಿಗಾಗಿ, ಇಲ್ಲಿ ಇನ್ನಷ್ಟು ತಿಳಿಯಿರಿ.
ಫಿಶಿಂಗ್ ಪ್ರಯತ್ನಗಳನ್ನು ತಡೆಯಿರಿ
ಸ್ಕ್ಯಾಮರ್‌ಗಳು ನಿಮ್ಮನ್ನು ಹೇಗೆ ತಲುಪಬಹುದು ಎಂದು ತಿಳಿಯಿರಿ
ಸ್ಕ್ಯಾಮರ್‌ಗಳು ತಮ್ಮ ಸ್ಕ್ಯಾಮ್‌ಗಳನ್ನು ಕಾನೂನುಬದ್ಧ ಸಂದೇಶಗಳಂತೆ ಮರೆಮಾಚುವ ಮೂಲಕ ಸದಾಶಯ ಲಾಭವನ್ನು ಪಡೆಯಬಹುದು. ಇಮೇಲ್‌ಗಳ ಜೊತೆಗೆ, ಸ್ಕ್ಯಾಮರ್‌ಗಳು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳಲು ಪಠ್ಯ ಸಂದೇಶಗಳು, ಸ್ವಯಂಚಾಲಿತ ಕರೆಗಳು ಮತ್ತು ದುರುದ್ದೇಶಪೂರಿತ ವೆಬ್‌ಸೈಟ್‌ಗಳನ್ನು ಸಹ ಬಳಸಬಹುದು.
ಅನುಮಾನಾಸ್ಪದ URLಗಳು ಮತ್ತು ಲಿಂಕ್‌ಗಳನ್ನು ಯಾವಾಗಲೂ ಮೌಲ್ಯೀಕರಿಸಿ
ಪಾಸ್‌ವರ್ಡ್ ಅಥವಾ ಬ್ಯಾಂಕ್ ವಿವರಗಳಂತಹ ಮಹತ್ವದ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಬಹಿರಂಗಪಡಿಸಲು ನಿಮ್ಮನ್ನು ಮೋಸಗೊಳಿಸುವ ಪ್ರಯತ್ನ ಫಿಶಿಂಗ್ ಆಗಿದೆ. ಇದು ನಕಲಿ ಲಾಗಿನ್ ಪುಟದಂತಹ ಹಲವು ರೂಪಗಳನ್ನು ತೆಗೆದುಕೊಳ್ಳಬಹುದು. ಫಿಶಿಂಗ್‌ಗೆ ಬಲಿಯಾಗುವುದನ್ನು ತಡೆಗಟ್ಟಲು, ಪ್ರಶ್ನಾರ್ಹ ಲಿಂಕ್‌ಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ; ವೆಬ್‌ಸೈಟ್ ಅಥವಾ ಆ್ಯಪ್ ನ್ಯಾಯಸಮ್ಮತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಲಿಂಕ್ ಮೇಲೆ ಹೋವರ್ ಮಾಡಿ ಅಥವಾ ಮೊಬೈಲ್‌ನಲ್ಲಿ ಪಠ್ಯವನ್ನು ದೀರ್ಘಕಾಲ ಒತ್ತಿಹಿಡಿಯುವ ಮೂಲಕ URL ಅನ್ನು ಎರಡು ಬಾರಿ ಪರಿಶೀಲಿಸಿ ಮತ್ತು URL “https” ಮೂಲಕ ಪ್ರಾರಂಭವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.
ಸೋಗು ಹಾಕುವವರ ಬಗ್ಗೆ ಜಾಗರೂಕರಾಗಿರಿ
ಸ್ಕ್ಯಾಮರ್‌ಗಳು, ಸರ್ಕಾರದ ಅಥವಾ ನಾನ್‍ಪ್ರಾಫಿಟ್ ರೀತಿಯ ನ್ಯಾಯಸಮ್ಮತ ಸಂಸ್ಥೆಗಳಾಗಿ ತಮ್ಮನ್ನು ತಾವು ತೋರಿಸಿಕೊಳ್ಳಬಹುದು. ಅಧಿಕೃತ ಸಂಪನ್ಮೂಲವೆಂದು ಕ್ಲೇಮ್ ಮಾಡುತ್ತಿರುವ ಯಾರೊಬ್ಬರಿಂದಲೂ ಸಂದೇಶಗಳನ್ನು ಓದುವುದಕ್ಕೂ ಮೊದಲು ದಯವಿಟ್ಟು ಯಾವಾಗಲೂ ಜಾಗರೂಕತೆಯಿಂದ ಮುಂದುವರೆಯಿರಿ. ನಿಮಗೆ ಗೊತ್ತಿರುವ ಯಾರಾದರೂ ನಿಮಗೆ ಇಮೇಲ್ ಕಳುಹಿಸಿದ್ದರೂ ಸಂದೇಶವು ಅಸಹಜವಾಗಿದ್ದರೆ, ಅವರ ಖಾತೆ ಹ್ಯಾಕ್ ಆಗಿರಬಹುದು. ಇಮೇಲ್ ನ್ಯಾಯಸಮ್ಮತವಾಗಿದೆ ಎಂಬುದನ್ನು ಖಚಿತಪಡಿಸದೆ ಸಂದೇಶಕ್ಕೆ ಪ್ರತ್ಯುತ್ತರಿಸಬೇಡಿ ಅಥವಾ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಹಣಕ್ಕಾಗಿ ತುರ್ತು ವಿನಂತಿಗಳು, ವಿದೇಶದಲ್ಲಿ ಸಿಲುಕಿಕೊಂಡಿರುವ ಕುರಿತಾದ ಅಳುವ ಕಥೆಗಳು ಅಥವಾ ತಮ್ಮ ಫೋನ್ ಕಳೆದುಹೋಗಿದೆ ಮತ್ತು ಅದಕ್ಕೆ ಕರೆ ಮಾಡಲಾಗದು ಎಂದು ಕ್ಲೇಮ್ ಮಾಡುತ್ತಿರುವ ವ್ಯಕ್ತಿ ಮುಂತಾದವುಗಳ ಕುರಿತು ಗಮನವಿಟ್ಟಿರಿ.
ಇಮೇಲ್ ಸ್ಕ್ಯಾಮ್‌ಗಳು ಅಥವಾ ವೈಯಕ್ತಿಕ ಮಾಹಿತಿಗಾಗಿ ವಿನಂತಿಗಳ ಕುರಿತು ಎಚ್ಚರವಹಿಸಿ
ಅಪರಿಚಿತರಿಂದ ಸಂದೇಶಗಳು ಅನುಮಾನಾಸ್ಪದವಾಗಿರಬಹುದು ಮತ್ತು ನಿಮ್ಮ ಬ್ಯಾಂಕಿನಿಂದ ಎಂಬಂತೆ ನೀವು ವಿಶ್ವಾಸವಿಡುವ ಯಾರೋ ಒಬ್ಬರ ಸಂವಹನವೂ ಸಹ ಸೋಗು ಹಾಕುವಿಕೆಯಾಗಿರಬಹುದು. ವೈಯಕ್ತಿಕ ಮಾಹಿತಿಯನ್ನು ಕೇಳುವ ಅನುಮಾನಾಸ್ಪದ ಇಮೇಲ್‌ಗಳು, ತ್ವರಿತ ಸಂದೇಶಗಳು ಅಥವಾ ಪಾಪ್-ಅಪ್ ವಿಂಡೋಗಳಿಗೆ ಪ್ರತ್ಯುತ್ತರಿಸಬೇಡಿ. ಅನುಮಾನಾಸ್ಪದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ ಅಥವಾ ಪ್ರಶ್ನಾರ್ಹ ಫಾರ್ಮ್‌ಗಳು ಅಥವಾ ಸಮೀಕ್ಷೆಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ನಮೂದಿಸಬೇಡಿ. ಲಾಭರಹಿತ ಸಂಸ್ಥೆಗಳು ದೇಣಿಗೆ ಕೇಳಿದರೆ, ನಿಮಗೆ ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಬದಲಾಗಿ ದೇಣಿಗೆ ನೀಡಲು ಸಂಸ್ಥೆಯ ವೆಬ್‌ಸೈಟ್‌ಗೆ ನೇರವಾಗಿ ಹೋಗಿ.
ಫೈಲ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು ಎರಡು ಬಾರಿ ಪರಿಶೀಲಿಸಿ
ಸೋಂಕು ತಗುಲಿದ ಡಾಕ್ಯುಮೆಂಟ್‌ಗಳು ಹಾಗೂ PDF ಲಗತ್ತುಗಳ ಮೂಲಕ ಕೆಲವು ಅತ್ಯಾಧುನಿಕ ಫಿಶಿಂಗ್ ದಾಳಿಗಳು ಸಂಭವಿಸಬಹುದು. ನಿಮಗೆ ಅನುಮಾನಾಸ್ಪದ ಲಗತ್ತೊಂದು ಕಂಡುಬಂದಲ್ಲಿ, ಅದನ್ನು ತೆರೆಯಲು Chrome ಅಥವಾ Google Drive ಬಳಸಿ. ನಾವು ಫೈಲ್ ಅನ್ನು ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡುತ್ತೇವೆ ಮತ್ತು ವೈರಸ್ ಅನ್ನು ಪತ್ತೆಹಚ್ಚಿದರೆ, ನಿಮಗೆ ಎಚ್ಚರಿಸುತ್ತೇವೆ.
ಹೆಚ್ಚಿನ ಮಾರ್ಗಗಳನ್ನು ಎಕ್ಸ್‌ಪ್ಲೋರ್ ಮಾಡಿ
-
ಬಿಲ್ಟ್-ಇನ್ ಭದ್ರತೆನಮ್ಮ ಸ್ವಯಂಚಾಲಿತ ಭದ್ರತಾ ಸಂರಕ್ಷಣೆಗಳ ಕುರಿತು ಇನ್ನಷ್ಟು ತಿಳಿಯಿರಿ.
-
ಗೌಪ್ಯತಾ ನಿಯಂತ್ರಣಗಳುನಿಮಗೆ ಸೂಕ್ತವಾಗಿರುವಂತಹ ಗೌಪ್ಯತೆ ಸೆಟ್ಟಿಂಗ್ಗಳನ್ನು ಆಯ್ಕೆಮಾಡಿಕೊಳ್ಳಿ.
-
ಡೇಟಾ ನಿರ್ವಹಣಾ ಅಭ್ಯಾಸಗಳುಜವಾಬ್ದಾರಿಯುತ ಡೇಟಾ ನಿರ್ವಹಣಾ ಅಭ್ಯಾಸಗಳ ಮೂಲಕ ನಾವು ನಿಮ್ಮ ಗೌಪ್ಯತೆಯನ್ನು ಹೇಗೆ ಗೌರವಿಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
-
ಜಾಹೀರಾತುಗಳು ಮತ್ತು ಡೇಟಾನಮ್ಮ ಪ್ಲ್ಯಾಟ್ಫಾರ್ಮ್ಗಳಲ್ಲಿ ನಿಮಗೆ ಕಾಣಿಸುವ ಜಾಹೀರಾತುಗಳ ಕುರಿತು ಇನ್ನಷ್ಟು ತಿಳಿಯಿರಿ.