ಆನ್‌ಲೈನ್ ಪ್ರಪಂಚವನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತಿದ್ದೇವೆ.
ಎಲ್ಲರಿಗಾಗಿ ತಂತ್ರಜ್ಞಾನವನ್ನು ರಚಿಸುವುದು ಎಂದರೆ, ಅದನ್ನು ಬಳಸುವ ಎಲ್ಲರನ್ನೂ ರಕ್ಷಿಸುವುದು ಎಂದರ್ಥ. ನಮ್ಮ ಬಳಕೆದಾರರನ್ನು ರಕ್ಷಿಸುವ ಮತ್ತು ಉದ್ಯಮವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಗೌಪ್ಯತೆ ಹಾಗೂ ಭದ್ರತಾ ತಂತ್ರಜ್ಞಾನಗಳನ್ನು ನಿರ್ಮಿಸಲು ಮತ್ತು ಹಂಚಿಕೊಳ್ಳಲು ನಾವು ಬದ್ಧರಾಗಿದ್ದೇವೆ.
ಹೊಸ ಅಪಾಯಗಳು ಉದ್ಭವಿಸಿದಂತೆ ಮತ್ತು ಬಳಕೆದಾರರ ಅಗತ್ಯತೆಗಳು ವಿಕಸನಗೊಂಡಂತೆ, ನಮ್ಮ ಎಲ್ಲಾ ಉತ್ಪನ್ನಗಳಾದ್ಯಂತ ಪ್ರತಿ ಬಳಕೆದಾರರ ಖಾಸಗಿ ಮಾಹಿತಿಯನ್ನು, ಪ್ರತಿ ಅಪಾಯದ ಮಟ್ಟದಲ್ಲಿ ಸ್ವಯಂಚಾಲಿತವಾಗಿ ರಕ್ಷಿಸಲು ನಾವು ನಿರಂತರವಾಗಿ ನಾವೀನ್ಯಗೊಳಿಸುತ್ತಿದ್ದೇವೆ.
ಫೆಡರೇಟೆಡ್ ಲರ್ನಿಂಗ್
ಕಡಿಮೆ ಡೇಟಾವನ್ನು ಬಳಸಿ ಉಪಯುಕ್ತ ಪ್ರಾಡಕ್ಟ್‌ಗಳನ್ನು ನಿರ್ಮಿಸುವುದು
ಫೆಡರೇಟೆಡ್ ಲರ್ನಿಂಗ್ ಎನ್ನುವುದು Google ನಲ್ಲಿ ಮುಂಚೂಣಿ ಇರುವ ಡೇಟಾ ಕಡಿಮೆಗೊಳಿಸುವಿಕೆ ತಂತ್ರಜ್ಞಾನವಾಗಿದ್ದು, ಅದು ಮಷಿನ್ ಲರ್ನಿಂಗ್ (ML) ಬುದ್ಧಿವಂತಿಕೆಯನ್ನು ನಿಮ್ಮ ಸಾಧನಕ್ಕೆ ತರುತ್ತದೆ. ಈ ಹೊಸ ವಿಧಾನವು ML ಮಾಡೆಲ್‌ಗಳಿಗೆ ತರಬೇತಿ ನೀಡಲು ವಿವಿಧ ಸಾಧನಗಳಿಂದ ಅನಾಮಧೇಯಗೊಳಿಸಿದ ಮಾಹಿತಿಯನ್ನು ಸಂಯೋಜಿಸುತ್ತದೆ. ಫೆಡರೇಟೆಡ್ ಲರ್ನಿಂಗ್, ನಿಮ್ಮ ಸಾಧನದಲ್ಲಿ ಸಾಧ್ಯವಾದಷ್ಟು ವೈಯಕ್ತಿಕ ಮಾಹಿತಿಯನ್ನು ಇಟ್ಟುಕೊಳ್ಳುವ ಮೂಲಕ ನಿಮ್ಮ ಗೌಪ್ಯತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.
ಸುಧಾರಿತ ರಕ್ಷಣಾ ಪ್ರೋಗ್ರಾಂ
ಅತಿ ಹೆಚ್ಚು ಅಗತ್ಯವಿರುವವರಿಗೆ Google ನ ಪ್ರಬಲ ಭದ್ರತೆ
ಪತ್ರಕರ್ತರು, ಚಳವಳಿಕಾರರು, ಪ್ರಮುಖ ಉದ್ಯಮಿಗಳು ಮತ್ತು ರಾಜಕೀಯ ಅಭಿಯಾನದ ತಂಡಗಳಂತಹ ಗುರಿಯಾಗಿಸಿಕೊಂಡು ಮಾಡಲಾಗುವ ಆನ್‌ಲೈನ್ ದಾಳಿಗಳ ಹೆಚ್ಚಿನ ಅಪಾಯದಲ್ಲಿರುವವರ ವೈಯಕ್ತಿಕ Google ಖಾತೆಗಳನ್ನು ಸುಧಾರಿತ ರಕ್ಷಣಾ ಪ್ರೋಗ್ರಾಂ ರಕ್ಷಿಸುತ್ತದೆ. ಈ ಪ್ರೋಗ್ರಾಂ, ಅನೇಕ ಪ್ರಕಾರದ ಬೆದರಿಕೆಗಳ ವಿರುದ್ಧ ಖಾತೆಗೆ ಸಮಗ್ರ ಸುರಕ್ಷತೆಯನ್ನು ಒದಗಿಸುತ್ತದೆ ಮತ್ತು ಹೊಸ ಹೊಸ ರಕ್ಷಣೆಗಳನ್ನು ನಿರಂತರವಾಗಿ ಸೇರಿಸಿಕೊಳ್ಳುತ್ತದೆ
ಇಂಟರ್ನೆಟ್
ಅನ್ನು ಸುರಕ್ಷಿತವಾಗಿರಿಸುವುದು.
Google ಪ್ರೊಡಕ್ಟ್‌ಗಳು ಮತ್ತು ಸೇವೆಗಳಲ್ಲದೆಯೇ, ಇಡೀ ಇಂಟರ್ನೆಟ್ ಸುರಕ್ಷತೆಯನ್ನು ಬಲಪಡಿಸುವ ಮೂಲಕ ನಮ್ಮ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಅವರನ್ನು ರಕ್ಷಿಸಲು ಬಯಸುತ್ತೇವೆ. ನಾವು ಪ್ರಪಂಚದ ಕೆಲವು ಅತ್ಯಾಧುನಿಕ ಗೌಪ್ಯತೆ ಮತ್ತು ಭದ್ರತಾ ತಂತ್ರಜ್ಞಾನಗಳನ್ನು ರಚಿಸುತ್ತೇವೆ ಮತ್ತು ಅವುಗಳಲ್ಲಿ ಹೆಚ್ಚಿನದನ್ನು ಇತರರು ಅಳವಡಿಸಿಕೊಳ್ಳಲು ಮುಕ್ತವಾಗಿ ಹಂಚಿಕೊಳ್ಳುತ್ತೇವೆ.
HTTPS ಎನ್‌ಕ್ರಿಪ್ಶನ್
ಸುಧಾರಿತ ಎನ್‌ಕ್ರಿಪ್ಶನ್ ಜೊತೆಗೆ ವೆಬ್‌ನಾದ್ಯಂತ ಸೈಟ್‌ಗಳನ್ನು ಸುರಕ್ಷಿತಗೊಳಿಸಲು ಸಹಾಯ ಮಾಡಲಾಗುತ್ತಿದೆ
HTTPS ಎನ್‌ಕ್ರಿಪ್ಶನ್ ಆಧರಿಸಿದ ನಮ್ಮ ಸೇವೆಗಳು, ನೀವು ಸೈಟ್‌ಗಳಿಗೆ ಸುರಕ್ಷಿತವಾಗಿ ಕನೆಕ್ಟ್ ಮಾಡಿ, ಅವುಗಳಲ್ಲಿ ಕ್ರೆಡಿಟ್ ಕಾರ್ಡ್ ಸಂಖ್ಯೆಗಳಂತಹ ನಿಮ್ಮ ಖಾಸಗಿ ಮಾಹಿತಿಯನ್ನು ನಮೂದಿಸುವುದನ್ನು ಹಾಗೂ ಯಾರೊಬ್ಬರೂ ನಿಮ್ಮ ಆ ಮಾಹಿತಿಗೆ ತಡೆಯೊಡ್ಡದಂತೆ ಖಚಿತಪಡಿಸುತ್ತವೆ. ನಮ್ಮ ಸೈಟ್‌ಗಳು ಮತ್ತು ಸೇವೆಗಳು ಡಿಫಾಲ್ಟ್ ಆಗಿ ಆಧುನಿಕ HTTPS ಅನ್ನು ಒದಗಿಸುತ್ತವೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಹೂಡಿಕೆಯನ್ನು ಮುಂದುವರಿಸುತ್ತೇವೆ ಮತ್ತು ಎಲ್ಲಾ ಡೆವಲಪರ್‌ಗಳಿಗೆ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಉಳಿದ ವೆಬ್‌ಗಳು HTTPS ಗೆ ವರ್ಗಾವಣೆಯಾಗಲು ಸಹಾಯ ಮಾಡುತ್ತೇವೆ.
ಭೇದ ತೋರಿಸುವ ಗೌಪ್ಯತೆ
ಅನನ್ಯ ಗೌಪ್ಯತೆ ಒಂದು ಸುಧಾರಿತ ಅನಾಮಧೇಯಗೊಳಿಸುವ ತಂತ್ರಜ್ಞಾನವಾಗಿದ್ದು, ಇದು ನಮ್ಮ ಬಳಕೆದಾರರ ಅನಾಮಧೇಯತೆಗೆ ಧಕ್ಕೆಯಾಗದಂತೆ ಡೇಟಾದಿಂದ ಒಳನೋಟಗಳನ್ನು ಪಡೆಯಲು ಅನುಮತಿಸುತ್ತದೆ. ಪ್ರಪಂಚದಲ್ಲಿನ ಅತಿದೊಡ್ಡ ಅನನ್ಯ ಗೌಪ್ಯತೆ ಅಲ್ಗಾರಿದಮ್‌ಗಳ ಲೈಬ್ರರಿಯನ್ನು ನಿರ್ಮಿಸಲು ನಾವು ಒಂದು ದಶಕಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದೇವೆ ಹಾಗೂ ಅದೇ ಗೌಪ್ಯತೆ ರಕ್ಷಣೆಗಳನ್ನು ತಮ್ಮ ಡೇಟಾಗೆ ಸುಲಭವಾಗಿ ಅನ್ವಯಿಸುವುದಕ್ಕಾಗಿ ಸಂಸ್ಥೆಗಳಿಗೆ ಸಹಾಯ ಮಾಡಲು ನಾವು ಲೈಬ್ರರಿಯನ್ನು ಓಪನ್ ಸೋರ್ಸ್ ಮಾಡಿದ್ದೇವೆ.
.
ಅನುಭವಿ ಎಂಜಿನಿಯರ್‌ಗಳ ತಂಡದ ನೇತೃತ್ವದಲ್ಲಿ, Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರವು Google ನ ಇಂಟರ್ನೆಟ್ ಸುರಕ್ಷತಾ ಕಾರ್ಯಕ್ಕಾಗಿ ಜಾಗತಿಕ ಹಬ್ ಆಗಿದೆ. ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ, ಪರಿಹಾರಗಳನ್ನು ಅಭಿವೃದ್ಧಿಪಡಿಸುವ, ಇತರರೊಂದಿಗೆ ಪಾಲುದಾರಿಕೆ ಮಾಡುವ ಮತ್ತು ಎಲ್ಲೆಡೆಯಲ್ಲೂ ಬಳಕೆದಾರರನ್ನು ಸಬಲೀಕರಿಸುವ ಮೂಲಕ ನಾವು ಎಲ್ಲರಿಗೂ ಉತ್ತಮವಾದ, ಸುರಕ್ಷಿತವಾದ ಇಂಟರ್ನೆಟ್ ಅನ್ನು ನಿರ್ಮಿಸಬಹುದು.