ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದು
ಈ ಪ್ರಪಂಚದ
ಅತಿ ಹೆಚ್ಚು ಸುಧಾರಿತ ಭದ್ರತೆಯ ಜೊತೆಗೆ ಪ್ರಾರಂಭವಾಗುತ್ತದೆ.

ಎಲ್ಲಾ Google ಉತ್ಪನ್ನಗಳನ್ನು ಪ್ರಪಂಚದ ಅತ್ಯಾಧುನಿಕ ಭದ್ರತಾ ಮೂಲಸೌಕರ್ಯಗಳ ಪೈಕಿ ಒಂದರಿಂದ ನಿರಂತರವಾಗಿ ರಕ್ಷಿಸಲಾಗುತ್ತದೆ. ಈ ಬಿಲ್ಟ್-ಇನ್ ಭದ್ರತೆಯು, ಆನ್‌ಲೈನ್ ​​ಬೆದರಿಕೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುತ್ತದೆ ಮತ್ತು ತಡೆಯುತ್ತದೆ. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿಯು ಸುರಕ್ಷಿತವಾಗಿದೆಯೆಂದು ನೀವು ವಿಶ್ವಾಸವಿಡಬಹುದು.


ನಿರಂತರವಾಗಿ
ಅಪ್‌ಡೇಟ್ ಮಾಡಿದ ಭದ್ರತೆಯ ಜೊತೆಗೆ ನಿಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸುವುದು.

ಎನ್‌ಕ್ರಿಪ್ಷನ್‌‌

ಡೇಟಾವನ್ನು ರವಾನೆ ಮಾಡುವಾಗ ಎನ್‌ಕ್ರಿಪ್ಶನ್‌ ಅದನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿ ಇರಿಸುತ್ತದೆ

ಎನ್‌ಕ್ರಿಪ್ಶನ್‌ ನಮ್ಮ ಸೇವೆಗಳಿಗೆ ಉನ್ನತ ಮಟ್ಟದ ಭದ್ರತೆ ಮತ್ತು ಗೌಪ್ಯತೆಯನ್ನು ಒದಗಿಸುತ್ತದೆ. ನೀವು ಇಮೇಲ್ ಕಳುಹಿಸುವುದು, ವೀಡಿಯೊ ಹಂಚಿಕೊಳ್ಳುವುದು, ವೆಬ್‌ಸೈಟ್‌ಗೆ ಭೇಟಿ ನೀಡುವುದು ಅಥವಾ ನಿಮ್ಮ ಫೋಟೋಗಳನ್ನು ಸಂಗ್ರಹಿಸುವಂತಹ ಕಾರ್ಯಗಳನ್ನು ಮಾಡಿದಾಗ, ನೀವು ರಚಿಸುವ ಡೇಟಾವು ನಿಮ್ಮ ಸಾಧನ, Google ಸೇವೆಗಳು ಮತ್ತು ನಮ್ಮ ಡೇಟಾ ಕೇಂದ್ರಗಳ ನಡುವೆ ಚಲಿಸುತ್ತದೆ. HTTPS ಮತ್ತು ವರ್ಗಾವಣೆ ಲೇಯರ್ ಭದ್ರತೆಯಂತಹ ಪ್ರಮುಖ ಎನ್‌ಕ್ರಿಪ್ಶನ್‌ ತಂತ್ರಜ್ಞಾನ ಸೇರಿದಂತೆ, ನಾವು ಈ ಡೇಟಾವನ್ನು ಬಹು ಲೇಯರ್‌ಗಳ ಭದ್ರತೆಯ ಮೂಲಕ ರಕ್ಷಿಸುತ್ತೇವೆ.

ಭದ್ರತಾ ಎಚ್ಚರಿಕೆಗಳು

ನಿಮ್ಮ ಖಾಸಗಿ ಮಾಹಿತಿಯನ್ನು ರಕ್ಷಿಸಲು ಪೂರ್ವಭಾವಿ ಭದ್ರತಾ ಎಚ್ಚರಿಕೆಗಳು ಸಹಾಯ ಮಾಡುತ್ತವೆ

ಅನುಮಾನಾಸ್ಪದವಾದ ಲಾಗಿನ್ ಅಥವಾ ದುರುದ್ದೇಶಪೂರಿತ ವೆಬ್‌ಸೈಟ್, ಫೈಲ್ ಅಥವಾ ಆ್ಯಪ್‌ನಂತಹ ನೀವು ತಿಳಿದಿರಲೇಬೇಕು ಎಂದು ಭಾವಿಸುವ ಏನನ್ನಾದರೂ ನಾವು ಪತ್ತೆಹಚ್ಚಿದರೆ, ಪೂರ್ವಭಾವಿಯಾಗಿ ನಿಮಗೆ ಸೂಚಿಸುತ್ತೇವೆ ಮತ್ತು ನಿಮ್ಮ ಭದ್ರತೆಯನ್ನು ಹೆಚ್ಚಿಸಲು ಮಾರ್ಗದರ್ಶನವನ್ನು ನೀಡಿ ನಿಮಗೆ ಸಹಾಯ ಮಾಡುತ್ತೇವೆ. ಉದಾಹರಣೆಗೆ, Gmail ನಲ್ಲಿ, ನಿಮ್ಮ ಭದ್ರತೆಯನ್ನು ಅಪಾಯದಲ್ಲಿರಿಸಬಹುದಾದ ಲಗತ್ತೊಂದನ್ನು ನೀವು ಡೌನ್‌ಲೋಡ್‌ ಮಾಡುವ ಮೊದಲು ಅಥವಾ ನಿಮಗೆ ಸಂಬಂಧಿಸದ ಸಾಧನದಿಂದ ನಿಮ್ಮ ಖಾತೆಗೆ ಯಾರಾದರೂ ಪ್ರವೇಶಿಸಿದರೆ ನಾವು ನಿಮ್ಮನ್ನು ಎಚ್ಚರಿಸುತ್ತೇವೆ. ನಿಮ್ಮ ಖಾತೆಯಲ್ಲಿ ಏನಾದರೂ ಅನುಮಾನಾಸ್ಪದ ಚಟುವಟಿಕೆಯನ್ನು ನಾವು ಪತ್ತೆಹಚ್ಚಿದಾಗ, ನಿಮ್ಮ ಇನ್‌ಬಾಕ್ಸ್‌ಗೆ ಅಥವಾ ಫೋನ್‌ಗೆ ಅಧಿಸೂಚನೆಯೊಂದನ್ನು ಕಳುಹಿಸುತ್ತೇವೆ, ಇದರಿಂದ ನೀವು ನಿಮ್ಮ ಖಾತೆಯನ್ನು ಒಂದೇ ಕ್ಲಿಕ್‌ನಲ್ಲಿ ರಕ್ಷಿಸಿಕೊಳ್ಳಬಹುದು.

ಕಳಪೆಯಾದ ಜಾಹೀರಾತನ್ನು ನಿರ್ಬಂಧಿಸಲಾಗುತ್ತಿದೆ

ದುರುದ್ದೇಶಪೂರಿತ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳು ನಿಮ್ಮನ್ನು ತಲುಪುವ ಮೊದಲೇ ನಿರ್ಬಂಧಿಸುವುದು

ಮಾಲ್‌ವೇರ್‌ ಹೊಂದಿರುವ, ನೀವು ನೋಡಲು ಬಯಸುವ ವಿಷಯವನ್ನು ಮರೆಮಾಡುವ, ನಕಲಿ ಉತ್ಪನ್ನಗಳನ್ನು ಪ್ರಚಾರ ಮಾಡುವ ಅಥವಾ ಅನ್ಯಥಾ ನಮ್ಮ ಜಾಹೀರಾತು ನೀತಿಗಳನ್ನು ಉಲ್ಲಂಘಿಸುವ ಜಾಹೀರಾತುಗಳಿಂದ ನಿಮ್ಮ ಭದ್ರತೆ ಮತ್ತು ಆನ್‌ಲೈನ್‌ ಅನುಭವದ ಮೇಲೆ ಪರಿಣಾಮಗಳಾಗಿರಬಹುದು. ನಾವು ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಲೈವ್ ವಿಮರ್ಶಕರು ಹಾಗೂ ಅತ್ಯಾಧುನಿಕ ಸಾಫ್ಟ್‌ವೇರ್‌ ಸಂಯೋಜನೆಯ ಮೂಲಕ – ಸರಾಸರಿ, ಸೆಕೆಂಡಿಗೆ 100 ರಂತೆ – ಪ್ರತಿ ವರ್ಷ ನಾವು ಕೋಟ್ಯಾಂತರ ಕಳಪೆ ಗುಣಮಟ್ಟದ ಜಾಹೀರಾತುಗಳನ್ನು ನಿರ್ಬಂಧಿಸುತ್ತೇವೆ. ಆಕ್ಷೇಪಾರ್ಹ ಜಾಹೀರಾತುಗಳನ್ನು ವರದಿ ಮಾಡಲು ಮತ್ತು ನೀವು ನೋಡಲು ಬಯಸುವ ಜಾಹೀರಾತುಗಳ ಪ್ರಕಾರಗಳನ್ನು ನಿಯಂತ್ರಿಸಲು, ನಾವು ನಿಮಗೆ ಪರಿಕರಗಳನ್ನು ಸಹ ನೀಡುತ್ತೇವೆ. ಮತ್ತು ಎಲ್ಲರಿಗೂ ಇಂಟರ್ನೆಟ್ ಅನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವುದಕ್ಕಾಗಿ ನಾವು ಸಕ್ರಿಯವಾಗಿ ನಮ್ಮ ಒಳನೋಟಗಳನ್ನು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಪ್ರಕಟಿಸುತ್ತೇವೆ.

ಮೇಲ್ಭಾಗದಲ್ಲಿ Google ಕ್ಲೌಡ್ ಲೋಗೋ ಹೊಂದಿರುವ ಡೇಟಾ ಸರ್ವರ್‌ಗಳ ಟವರ್

ಕ್ಲೌಡ್ ಭದ್ರತೆ

ನಮ್ಮ ಕ್ಲೌಡ್ ಅಡಿವ್ಯವಸ್ಥೆಯು ಡೇಟಾವನ್ನು 24/7 ರಕ್ಷಿಸುತ್ತದೆ

ಕಸ್ಟಮ್ ವಿನ್ಯಾಸಗೊಳಿಸಿದ ಡೇಟಾ ಕೇಂದ್ರಗಳಿಂದ ಹಿಡಿದು ಖಂಡಗಳ ನಡುವೆ ಡೇಟಾವನ್ನು ವರ್ಗಾಯಿಸುವ ಸಮುದ್ರದೊಳಗಿನ ಕೇಬಲ್‌ಗಳವರೆಗೆ, ಪ್ರಪಂಚದ ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕ್ಲೌಡ್ ಅಡಿವ್ಯವಸ್ಥೆಗಳಲ್ಲಿ ಒಂದನ್ನು ನಾವು ನಿರ್ವಹಿಸುತ್ತೇವೆ. ನಿಮ್ಮ ಡೇಟಾವನ್ನು ರಕ್ಷಿಸಲು ಮತ್ತು ನಿಮಗೆ ಇದರ ಅಗತ್ಯವಿರುವಾಗ ಲಭ್ಯವಾಗುವಂತೆ ಮಾಡಲು, ಅದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಮತ್ತು ಅಡಚಣೆಯ ಸಂದರ್ಭದಲ್ಲಿ, ಪ್ಲ್ಯಾಟ್‌ಫಾರ್ಮ್ ಸೇವೆಗಳನ್ನು ಸ್ವಯಂಚಾಲಿತವಾಗಿ ಮತ್ತು ತ್ವರಿತವಾಗಿ ಒಂದು ಸೌಲಭ್ಯದಿಂದ ಇನ್ನೊಂದಕ್ಕೆ ವರ್ಗಾಯಿಸಬಹುದು, ಇದರಿಂದ ಅವುಗಳು ಯಾವುದೇ ಅಡಚಣೆಯಿಲ್ಲದೆ ಮುಂದುವರಿಯಬಹುದು.

ದೃಢೀಕರಣ ಪರಿಕರಗಳು

ನಿಮ್ಮ ಎಲ್ಲಾ ಆನ್‌ಲೈನ್ ಖಾತೆಗಳಿಗೆ ಸೈನ್ ಇನ್ ಮಾಡಲು ಹೆಚ್ಚು ಸುರಕ್ಷಿತ ವಿಧಾನ

ಆನ್‌ಲೈನ್ ಖಾತೆಗಳು ಅಮೂಲ್ಯವಾದ, ವೈಯಕ್ತಿಕಗೊಳಿಸಿದ ಸೇವೆಗಳಿಗೆ ಆ್ಯಕ್ಸೆಸ್ ಒದಗಿಸುತ್ತವೆ, ಆದರೆ ಅವುಗಳಿಗೆ ಸೈನ್ ಇನ್ ಮಾಡುವುದು ಇಂದಿನ ಪ್ರಮುಖ ಭದ್ರತಾ ಅಪಾಯಗಳಿಗೂ ಎಡೆಮಾಡಿಕೊಡುತ್ತದೆ. ಪ್ರತಿದಿನ, ಡೇಟಾ ಉಲ್ಲಂಘನೆಗಳ ಕಾರಣ ಮಿಲಿಯನ್‍ಗಟ್ಟಲೆ ಪಾಸ್‌ವರ್ಡ್‌ಗಳು ಬಹಿರಂಗಗೊಳ್ಳುತ್ತವೆ, ಇದು ನಿಮ್ಮ ಖಾಸಗಿ ಮಾಹಿತಿಯನ್ನು ಅಪಾಯಕ್ಕೆ ಒಡ್ಡಬಹುದು.

ನೀವು ಇಷ್ಟಪಡುವ ಆ್ಯಪ್‌ಗಳು ಮತ್ತು ಸೇವೆಗಳಿಗೆ ನೀವು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಸೈನ್ ಇನ್ ಮಾಡುವುದಕ್ಕೆ ಸಹಾಯ ಮಾಡಲು ನಮ್ಮ ಬಿಲ್ಟ್-ಇನ್ ಪ್ರಮಾಣೀಕರಣ ಟೂಲ್‍ಗಳನ್ನು ವಿನ್ಯಾಸಗೊಳಿಸಲಾಗಿದೆ.


ನೀವು ಪ್ರತಿದಿನ ಬಳಸುವ ಉತ್ಪನ್ನಗಳನ್ನು ನಾವು ಸುರಕ್ಷಿತವಾಗಿರಿಸುತ್ತೇವೆ.
ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು
ಸಹಾಯ ಮಾಡುವ ಮಾರ್ಗಗಳನ್ನು ಎಕ್ಸ್‌ಪ್ಲೋರ್ ಮಾಡಿ.