ನಿಮ್ಮ ವೈಯಕ್ತಿಕ
ಮಾಹಿತಿಯನ್ನು ಖಾಸಗಿಯಾಗಿ, ಸುರಕ್ಷಿತವಾಗಿ ಮತ್ತು ಭದ್ರವಾಗಿರಿಸುತ್ತೇವೆ.
ಉದ್ಯಮದ ಮುಂಚೂಣಿಯಲ್ಲಿರುವ ಭದ್ರತಾ ಮೂಲಸೌಕರ್ಯಗಳು, ಜವಾಬ್ದಾರಿಯುತ ಡೇಟಾ ನಿರ್ವಹಣಾ ಅಭ್ಯಾಸಗಳು ಮತ್ತು ನಿಯಂತ್ರಣವನ್ನು ನಿಮ್ಮ ಕೈಯಲ್ಲಿ ಇರಿಸುವ ಬಳಸಲು ಸುಲಭವಾದ ಗೌಪ್ಯತೆ ಪರಿಕರಗಳ ಜೊತೆಗೆ ನಾವು Google ನಲ್ಲಿ ನಿಮ್ಮ ಗೌಪ್ಯತೆಯನ್ನು ಗೌರವಿಸುತ್ತೇವೆ ಮತ್ತು ರಕ್ಷಿಸುತ್ತೇವೆ.
ಈ ಪ್ರಪಂಚದ
ಅತಿ ಹೆಚ್ಚು ಸುಧಾರಿತ ಭದ್ರತೆಯ ಮೂಲಕ ಪ್ರಾರಂಭವಾಗುತ್ತದೆ.
Google ನಾದ್ಯಂತ ಇರುವ ಬಿಲ್ಟ್-ಇನ್ ಭದ್ರತೆಯ ಸಹಾಯದಿಂದ ನಿಮ್ಮ ಗೌಪ್ಯತೆಯನ್ನು ರಕ್ಷಿಸಲಾಗಿದೆ. ಬೆದರಿಕೆಗಳು ನಿಮ್ಮನ್ನು ತಲುಪುವ ಮೊದಲೇ ಅವುಗಳನ್ನು ಸ್ವಯಂಚಾಲಿತವಾಗಿ ಸ್ಥಗಿತಗೊಳಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ನಿಮ್ಮ ಡೇಟಾವನ್ನು ರವಾನಿಸುತ್ತಿರುವಾಗ ಸುಧಾರಿತ ಎನ್ಕ್ರಿಪ್ಶನ್ ಅದನ್ನು ಸುರಕ್ಷಿತವಾಗಿರಿಸುತ್ತದೆ
ಎನ್ಕ್ರಿಪ್ಶನ್ ನಮ್ಮ ಸೇವೆಗಳಿಗೆ ಉನ್ನತ ಮಟ್ಟದ ಭದ್ರತೆ ಮತ್ತು ಗೌಪ್ಯತೆಯನ್ನು ಒದಗಿಸುತ್ತದೆ. ನೀವು ಇಮೇಲ್ ಕಳುಹಿಸುವುದು, ವೀಡಿಯೊ ಹಂಚಿಕೊಳ್ಳುವುದು, ವೆಬ್ಸೈಟ್ಗೆ ಭೇಟಿ ನೀಡುವುದು ಅಥವಾ ನಿಮ್ಮ ಫೋಟೋಗಳನ್ನು ಸಂಗ್ರಹಿಸುವಂತಹ ಕಾರ್ಯಗಳನ್ನು ಮಾಡಿದಾಗ, ನಿಮ್ಮ ಡೇಟಾವು ನಿಮ್ಮ ಸಾಧನ, Google ಸೇವೆಗಳು ಮತ್ತು ನಮ್ಮ ಡೇಟಾ ಕೇಂದ್ರಗಳ ನಡುವೆ ರವಾನೆಯಾಗುತ್ತಿರುತ್ತದೆ. HTTPS ಮತ್ತು ವರ್ಗಾವಣೆ ಲೇಯರ್ ಭದ್ರತೆಯಂತಹ ಪ್ರಮುಖ ಎನ್ಕ್ರಿಪ್ಶನ್ ತಂತ್ರಜ್ಞಾನ ಸೇರಿದಂತೆ, ನಾವು ಈ ಡೇಟಾವನ್ನು ಬಹು ಲೇಯರ್ಗಳ ಭದ್ರತೆಯ ಮೂಲಕ ರಕ್ಷಿಸುತ್ತೇವೆ.
ನಿಮ್ಮ ಖಾಸಗಿ ಮಾಹಿತಿಯನ್ನು ರಕ್ಷಿಸಲು ಪೂರ್ವಭಾವಿ ಭದ್ರತಾ ಎಚ್ಚರಿಕೆಗಳು ಸಹಾಯ ಮಾಡುತ್ತವೆ
ಅನುಮಾನಾಸ್ಪದವಾದ ಲಾಗಿನ್ ಅಥವಾ ದುರುದ್ದೇಶಪೂರಿತ ವೆಬ್ಸೈಟ್, ಫೈಲ್ ಅಥವಾ ಆ್ಯಪ್ನಂತಹ ನೀವು ತಿಳಿದಿರಲೇಬೇಕು ಎಂದು ಭಾವಿಸುವ ಏನನ್ನಾದರೂ ನಾವು ಪತ್ತೆಹಚ್ಚಿದರೆ, ಪೂರ್ವಭಾವಿಯಾಗಿ ನಿಮಗೆ ಸೂಚಿಸುತ್ತೇವೆ ಮತ್ತು ನಿಮ್ಮ ಉತ್ತಮ ರಕ್ಷಣೆಗಾಗಿ ಮಾರ್ಗದರ್ಶನವನ್ನು ನೀಡಿ ನಿಮಗೆ ಸಹಾಯ ಮಾಡುತ್ತೇವೆ. ನಿಮ್ಮ ಖಾತೆಯಲ್ಲಿ ಏನಾದರೂ ಅನುಮಾನಾಸ್ಪದ ಚಟುವಟಿಕೆಯನ್ನು ನಾವು ಪತ್ತೆಹಚ್ಚಿದಾಗ, ನಿಮ್ಮ ಇನ್ಬಾಕ್ಸ್ಗೆ ಅಥವಾ ಫೋನ್ಗೆ ಅಧಿಸೂಚನೆಯನ್ನು ಕಳುಹಿಸುತ್ತೇವೆ. ಇದರಿಂದ ನೀವು ನಿಮ್ಮ ಖಾತೆಯನ್ನು ಒಂದೇ ಕ್ಲಿಕ್ನಲ್ಲಿ ರಕ್ಷಿಸಿಕೊಳ್ಳಬಹುದು.
ಅಪಾಯಗಳನ್ನು ಸ್ವಯಂಚಾಲಿತವಾಗಿ ಪತ್ತೆಮಾಡಲಾಗುತ್ತದೆ ಮತ್ತು ನಿರ್ಬಂಧಿಸಲಾಗುತ್ತದೆ
Safe Browsing ನಿಮ್ಮದನ್ನು ಸೇರಿದಂತೆ, ಪ್ರತಿದಿನ 5 ಬಿಲಿಯನ್ ಸಾಧನಗಳನ್ನು ರಕ್ಷಿಸುತ್ತದೆ. ಎಲ್ಲರಿಗಾಗಿ ಇಂಟರ್ನೆಟ್ ಅನ್ನು ಸುರಕ್ಷಿತವಾಗಿರಿಸಲು, Apple ನ Safari ಮತ್ತು Mozilla ದ Firefox ಸೇರಿದಂತೆ, ಇತರ ಕಂಪನಿಗಳಿಗಾಗಿ ತಮ್ಮ ಬ್ರೌಸ್ರ್ಗಳಲ್ಲಿ ಬಳಸಲು ಈ ತಂತ್ರಜ್ಞಾನವನ್ನು ಉಚಿತವಾಗಿ ಲಭ್ಯವಾಗುವಂತೆ ರಚಿಸಿದ್ದೇವೆ. ಇದರಿಂದ ನೀವು Google ಮತ್ತು ಅದಕ್ಕೂ ಮಿಗಿಲಾಗಿ ಬ್ರೌಸ್ ಮಾಡುವಾಗ ನಿಮ್ಮನ್ನು ರಕ್ಷಿಸಲಾಗುತ್ತದೆ.
ನಿಯಂತ್ರಣವನ್ನು ನಿಮ್ಮ ಕೈಯಲ್ಲಿರಿಸುತ್ತವೆ.
ನಿಮ್ಮ Google ಖಾತೆಗೆ ಯಾವ ಡೇಟಾ ಉಳಿಸಬೇಕು ಎಂಬುದನ್ನು ನಿಯಂತ್ರಿಸಿ
ಗೌಪ್ಯತೆಯ ವಿಷಯ ಬಂದಾಗ, ಒಂದೇ ನಿಯಮ ಎಲ್ಲರಿಗೂ ಸೂಕ್ತವಾಗಿರುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಅದಕ್ಕಾಗಿಯೇ ನಿಮಗೆ ಸೂಕ್ತವಾದ ಗೌಪ್ಯತೆ ಸೆಟ್ಟಿಂಗ್ಗಳನ್ನು ಆಯ್ಕೆಮಾಡಲು ನಿಮಗೆ ಸಹಾಯ ಮಾಡುತ್ತೇವೆ. ನಿಮ್ಮ ಡೇಟಾವನ್ನು ಉಳಿಸಲು, ಅಳಿಸಲು ಅಥವಾ ಸ್ವಯಂ-ಅಳಿಸಲು ನೀವು ಬಯಸುತ್ತೀರಿ ಎಂದಾದರೆ, ಅದನ್ನು ಮಾಡಲು ನಿಮಗೆ ಸಾಧನಗಳನ್ನು ನೀಡುತ್ತೇವೆ.
ಜವಾಬ್ದಾರಿಯುತ ಡೇಟಾ ನಿರ್ವಹಣಾ ವಿಧಾನಗಳು ಮೂಲಕ ರಕ್ಷಿಸಲಾಗುತ್ತದೆ.
ನೀವು ಪ್ರತಿದಿನ ಬಳಸುವ ಉತ್ಪನ್ನಗಳು ಮತ್ತು ಸೇವೆಗಳನ್ನು ಹೆಚ್ಚು ಸಹಾಯಕವಾಗಿಸಲು ಡೇಟಾ ಪ್ರಮುಖ ಪಾತ್ರ ವಹಿಸುತ್ತದೆ. ಆ ಡೇಟಾವನ್ನು ಜವಾಬ್ದಾರಿಯುತವಾಗಿ ಪರಿಗಣಿಸಲು ಮತ್ತು ಕಟ್ಟುನಿಟ್ಟಾದ ಪ್ರೊಟೊಕಾಲ್ಗಳನ್ನು ಹಾಗೂ ನವೀನ ಗೌಪ್ಯತೆ ತಂತ್ರಜ್ಞಾನಗಳ ಜೊತೆಗೆ ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಬದ್ಧರಾಗಿದ್ದೇವೆ.
ಹೆಚ್ಚಿನ ಮಾರ್ಗಗಳನ್ನು ಎಕ್ಸ್ಪ್ಲೋರ್ ಮಾಡಿ.
-
ಬಿಲ್ಟ್-ಇನ್ ಭದ್ರತೆನಮ್ಮ ಸ್ವಯಂಚಾಲಿತ ಭದ್ರತಾ ಸಂರಕ್ಷಣೆಗಳ ಕುರಿತು ಇನ್ನಷ್ಟು ತಿಳಿಯಿರಿ.
-
ಗೌಪ್ಯತಾ ನಿಯಂತ್ರಣಗಳುನಿಮಗೆ ಸೂಕ್ತವಾಗಿರುವಂತಹ ಗೌಪ್ಯತೆ ಸೆಟ್ಟಿಂಗ್ಗಳನ್ನು ಆಯ್ಕೆಮಾಡಿಕೊಳ್ಳಿ.
-
ಡೇಟಾ ನಿರ್ವಹಣಾ ಅಭ್ಯಾಸಗಳುಜವಾಬ್ದಾರಿಯುತ ಡೇಟಾ ನಿರ್ವಹಣಾ ಅಭ್ಯಾಸಗಳ ಮೂಲಕ ನಾವು ನಿಮ್ಮ ಗೌಪ್ಯತೆಯನ್ನು ಹೇಗೆ ಗೌರವಿಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
-
ಭದ್ರತಾ ಸಲಹೆಗಳುಆನ್ಲೈನ್ನಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುವ ತ್ವರಿತ ಸಲಹೆಗಳು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಅನ್ವೇಷಿಸಿ.
-
ಜಾಹೀರಾತುಗಳು ಮತ್ತು ಡೇಟಾನಮ್ಮ ಪ್ಲ್ಯಾಟ್ಫಾರ್ಮ್ಗಳಲ್ಲಿ ನಿಮಗೆ ಕಾಣಿಸುವ ಜಾಹೀರಾತುಗಳ ಕುರಿತು ಇನ್ನಷ್ಟು ತಿಳಿಯಿರಿ.