ಗೌಪ್ಯತೆ ಪರಿಕರಗಳು
ಎಲ್ಲವನ್ನೂ ನಿಮ್ಮನ್ನು ನಿಯಂತ್ರಣದಲ್ಲಿರಿಸುತ್ತವೆ.

ಗೌಪ್ಯತೆಯ ವಿಷಯ ಬಂದಾಗ, ಎಲ್ಲರಿಗೂ ಒಂದೇ ನಿಯಮ ಸೂಕ್ತವಾಗಿರುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಅದಕ್ಕಾಗಿಯೇ ನಾವು ನಿಯಂತ್ರಣಗಳನ್ನು ರಚಿಸಿದ್ದು, ಅವುಗಳನ್ನು ಸುಲಭವಾಗಿ ಬಳಸಬಹುದಾಗಿದೆ.ಹಾಗಾಗಿ ನಿಮಗೆ ಸೂಕ್ತವಾದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀವು ಆಯ್ಕೆ ಮಾಡಬಹುದು.

ನಿಮ್ಮ Google ಖಾತೆಯಲ್ಲಿ
ಯಾವ ಡೇಟಾ ಉಳಿಸಬೇಕು ಎಂಬುದನ್ನು ನಿಯಂತ್ರಿಸಿ

ಚಟುವಟಿಕೆ ನಿಯಂತ್ರಣಗಳು

ಯಾವ ಡೇಟಾವನ್ನು ಉಳಿಸಬೇಕು ಎಂಬುದನ್ನು ನಿಯಂತ್ರಿಸಿ

ಚಟುವಟಿಕೆ ನಿಯಂತ್ರಣಗಳನ್ನು ಬಳಸಿಕೊಂಡು, Google ಸೇವೆಗಳಾದ್ಯಂತ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸುವ ನಿಟ್ಟಿನಲ್ಲಿ ನಿಮ್ಮ ಖಾತೆಯೊಂದಿಗೆ ಯಾವ ಪ್ರಕಾರದ ಚಟುವಟಿಕೆಗಳು ಸಂಯೋಜಿತವಾಗಿರುತ್ತವೆ ಎಂಬುದನ್ನು ನೀವು ನಿರ್ಧರಿಸಬಹುದು. ನಿಮ್ಮ Search ಮತ್ತು ಬ್ರೌಸಿಂಗ್ ಚಟುವಟಿಕೆ, YouTube ಇತಿಹಾಸ, ಅಥವಾ ಸ್ಥಳ ಇತಿಹಾಸದಂತಹ ನಿರ್ದಿಷ್ಟ ಪ್ರಕಾರಗಳ ಡೇಟಾವನ್ನು ನಿಮ್ಮ ಖಾತೆಗೆ ಉಳಿಸುವುದಕ್ಕೆ ನೀವು ವಿರಾಮ ನೀಡಬಹುದು.

ಚಟುವಟಿಕೆ ನಿಯಂತ್ರಣಗಳಿಗೆ ಹೋಗಿ

ಸ್ವಯಂ-ಅಳಿಸಿ

ಸ್ವಯಂಚಾಲಿತವಾಗಿ ಅಳಿಸಲು ನಿಮ್ಮ ಡೇಟಾವನ್ನು ಹೊಂದಿಸಿ

ನಿಮಗೆ ಇನ್ನಷ್ಟು ಹೆಚ್ಚಿನ ನಿಯಂತ್ರಣಗಳನ್ನು ನೀಡಲು, ನಿಮ್ಮ ಚಟುವಟಿಕೆ ಡೇಟಾವನ್ನು ಎಲ್ಲಿಯವರೆಗೂ ಇಟ್ಟುಕೊಳ್ಳಲು ಬಯಸುತ್ತೀರಿ ಎಂಬುದಕ್ಕೆ ಸಮಯದ ಮಿತಿಯನ್ನು ಆಯ್ಕೆ ಮಾಡಿಕೊಳ್ಳಲು ಸ್ವಯಂ-ಅಳಿಸುವಿಕೆ ಸೆಟ್ಟಿಂಗ್‌ಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ. ನೀವು ಆಯ್ಕೆ ಮಾಡಿದ ಮಿತಿಗಿಂತ ಹಳೆಯದಾದ ಡೇಟಾವನ್ನು ನಿರಂತರವಾಗಿ ಮತ್ತು ಸ್ವಯಂಚಾಲಿತವಾಗಿ ಅಳಿಸಲಾಗುವುದು. ಇದನ್ನು ಹೊಂದಿಸಲು ಮತ್ತು ಮರೆತುಬಿಡಲು ಇದು ನಿಮಗೆ ಸುಲಭವಾಗಿಸುತ್ತದೆ. ಆದರೆ ನೀವು ಯಾವಾಗಲೂ, ಯಾವ ಸಮಯದಲ್ಲಿ ಬೇಕಾದರೂ ಈ ಸೆಟ್ಟಿಂಗ್‌ಗಳನ್ನು ಮತ್ತೆ ಅಪ್‌ಡೇಟ್ ಮಾಡಬಹುದು.

ನಿಮ್ಮ ಚಟುವಟಿಕೆಯನ್ನು ಸ್ವಯಂ-ಅಳಿಸಿ

ನನ್ನ ಚಟುವಟಿಕೆ

ನಿಮ್ಮ ಖಾತೆಯಿಂದ ಯಾವ ಸಮಯದಲ್ಲಾದರೂ ಡೇಟಾವನ್ನು ಡಿಲೀಟ್ ಮಾಡಿ

ನನ್ನ ಚಟುವಟಿಕೆ ಎಂಬುದು ನೀವು ನಮ್ಮ ಸೇವೆಗಳನ್ನು ಬಳಸಿಕೊಂಡು ಹುಡುಕಿದ, ನೋಡಿದ ಮತ್ತು ವೀಕ್ಷಿಸಿದ ಎಲ್ಲಾ ಸಂಗತಿಗಳನ್ನು ಒಳಗೊಂಡ ಕೇಂದ್ರ ಸ್ಥಳವಾಗಿದೆ. ನಿಮ್ಮ ಕಳೆದ ಆನ್‌ಲೈನ್ ಚಟುವಟಿಕೆಯನ್ನು ಸುಲಭವಾಗಿ ಮರುಪಡೆಯುವಂತೆ ಮಾಡಲು, ನಾವು ನಿಮಗೆ ವಿಷಯ, ದಿನಾಂಕ ಮತ್ತು ಉತ್ಪನ್ನದ ಮೂಲಕ ಹುಡುಕಲು ಉಪಕರಣಗಳನ್ನು ನೀಡುತ್ತೇವೆ. ನಿಮ್ಮ ಖಾತೆಯೊಂದಿಗೆ ನೀವು ಸಂಯೋಜಿಸಲು ಬಯಸದ ಸಂಪೂರ್ಣ ವಿಷಯಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳನ್ನು ನೀವು ಶಾಶ್ವತವಾಗಿ ಅಳಿಸಬಹುದು.

ನನ್ನ ಚಟುವಟಿಕೆಗೆ ಹೋಗಿ
ನಿಮಗೆ ಸೂಕ್ತವಾಗುವ ಗೌಪ್ಯತೆ
ಸೆಟ್ಟಿಂಗ್‌ಗಳನ್ನು
ಆಯ್ಕೆ ಮಾಡಿ.

ಗೌಪ್ಯತೆ ಪರಿಶೀಲನೆ

ಗೌಪ್ಯತೆಯನ್ನು ಪರಿಶೀಲಿಸಿ

ಕೆಲವೇ ನಿಮಿಷಗಳಲ್ಲಿ, ನಿಮ್ಮ Google ಖಾತೆಗೆ ಉಳಿಸಲಾಗುವ ಡೇಟಾ ಪ್ರಕಾರಗಳನ್ನು ನೀವು ಆಯ್ಕೆ ಮಾಡಬಹುದು, ಸ್ನೇಹಿತರ ಜೊತೆ ಹಂಚಿಕೊಳ್ಳುವಂತಹ ಅಥವಾ ಸಾರ್ವಜನಿಕಗೊಳಿಸುವ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದು, ಮತ್ತು ನಾವು ನಿಮಗೆ ತೋರಿಸಲು ಬಯಸುವ ಜಾಹೀರಾತುಗಳ ಪ್ರಕಾರಗಳನ್ನು ಸರಿಹೊಂದಿಸಬಹುದು. ನೀವು ಬಯಸಿದಾಗಲೆಲ್ಲಾ ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು ಮತ್ತು ನಿಯಮಿತ ಜ್ಞಾಪನೆಗಳನ್ನು ಕಳುಹಿಸುವಂತೆ ಕೂಡ ಆಯ್ಕೆ ಮಾಡಬಹುದು.

ನೀವು ಪ್ರತಿ ದಿನ ಬಳಸುವ
ಆ್ಯಪ್‌ಗಳಿಂದ ಹಿಡಿದು
ನಿಮ್ಮ ಗೌಪ್ಯತೆಯನ್ನು ನಿಯಂತ್ರಿಸಿ.

ಅದೃಶ್ಯ ಮೋಡ್

Chrome, Search, YouTube, ಮತ್ತು Maps ನಲ್ಲಿ ಅದೃಶ್ಯ ಮೋಡ್ ಆನ್ ಮಾಡಿ

Chrome ನಲ್ಲಿ ಮೊದಲ ಬಾರಿಗೆ ಪ್ರಾರಂಭವಾಗಿದ್ದ ಅದೃಶ್ಯ ಮೋಡ್, ಅಂದಿನಿಂದ ನಮ್ಮ ಅತ್ಯಂತ ಜನಪ್ರಿಯ ಆ್ಯಪ್‌ಗಳಲ್ಲಿ ಲಭ್ಯವಿದೆ. ಇದನ್ನು ಸುಲಭವಾಗಿ ಆನ್ ಅಥವಾ ಆಫ್ ಮಾಡಲು, YouTube, iOS ನಲ್ಲಿನ Search ಮತ್ತು Maps ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರದಿಂದ ಟ್ಯಾಪ್ ಮಾಡಿ. Maps ಮತ್ತು YouTube ನಲ್ಲಿ ನೀವು ಅದೃಶ್ಯ ಮೋಡ್ ಆನ್ ಮಾಡಿದಾಗ, ನೀವು ಹುಡುಕುವ ಸ್ಥಳಗಳು ಅಥವಾ ನೀವು ವೀಕ್ಷಿಸುವ ವೀಡಿಯೋಗಳಂತಹ ಚಟುವಟಿಕೆಯು ನಿಮ್ಮ Google ಖಾತೆಯಲ್ಲಿ ಉಳಿದುಕೊಳ್ಳುವುದಿಲ್ಲ. ಒಮ್ಮೆ ನೀವು ಎಲ್ಲಾ ಅದೃಶ್ಯ ವಿಂಡೋಗಳನ್ನು ಮುಚ್ಚಿದಾಗ ನಿಮ್ಮ ಅದೃಶ್ಯ ಸೆಶನ್‌ನ ಬ್ರೌಸಿಂಗ್ ಇತಿಹಾಸ ಮತ್ತು ಕುಕಿಗಳನ್ನು Chrome ನಿಂದ ಅಳಿಸಲಾಗುವುದು.

ಇದರಲ್ಲಿರುವ ನಿಮ್ಮ ಡೇಟಾ

ನಿಮ್ಮ ಆ್ಯಪ್‌ಗಳಿಂದ ನಿಮ್ಮ ಡೇಟಾವನ್ನು ನಿಯಂತ್ರಿಸಿ

ನೀವು ಪ್ರತಿ ದಿನ ಬಳಸುವ Google ಸೇವೆಗಳಲ್ಲಿ ನಿಮ್ಮ ಡೇಟಾ ಕುರಿತು ನೇರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಾವು ನಿಮಗಾಗಿ ಸುಲಭಗೊಳಿಸಿದ್ದೇವೆ. ಉದಾಹರಣೆಗೆ, Search ನಿಂದ ಹೊರಹೋಗದೇ, ನಿಮ್ಮ ಇತ್ತೀಚಿನ ಹುಡುಕಾಟ ಚಟುವಟಿಕೆಯನ್ನು ಪರಿಶೀಲಿಸಬಹುದು ಮತ್ತು ಅಳಿಸಬಹುದು. ನಿಮ್ಮ Google ಖಾತೆಯಿಂದ ಸೂಕ್ತ ಗೌಪ್ಯತಾ ನಿಯಂತ್ರಣಗಳಿಗೆ ತ್ವರಿತ ಪ್ರವೇಶ ಪಡೆಯಿರಿ ಮತ್ತು ನಿಮ್ಮ ಡೇಟಾದೊಂದಿಗೆ Search ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ. ನೀವು ಈ ನಿಯಂತ್ರಣಗಳನ್ನು Search, Maps, ಮತ್ತು Google Assistant ನಲ್ಲಿ ಪ್ರವೇಶಿಸಬಹುದು.

ಇನ್ನಷ್ಟು ವಿಧಾನಗಳನ್ನು ಎಕ್ಸ್‌ಪ್ಲೋರ್ ಮಾಡಿ, ನಾವು
ನಿಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸುವ ಇನ್ನಷ್ಟು ವಿಧಾನಗಳು