ಎಲ್ಲರಿಗೂ ಸ್ವಭಾವತಃ ಖಾಸಗಿಯಾಗಿರುವಂತಹ ಉತ್ಪನ್ನಗಳನ್ನು ನಿರ್ಮಿಸುವುದು.
ವಿನ್ಯಾಸವು ಸ್ವಭಾವತಃ ಖಾಸಗಿಯಾಗಿರುವಂತಹ ಮತ್ತು ಎಲ್ಲರಿಗೂ ಸೂಕ್ತವಾಗಿರುವಂತಹ ಉತ್ಪನ್ನಗಳನ್ನು ನಾವು ನಿರ್ಮಿಸುತ್ತೇವೆ. ಇದರ ಅರ್ಥ, ನಾವು ಬಳಸುವ ಡೇಟಾ, ಅದನ್ನು ನಾವು ಹೇಗೆ ಬಳಸುತ್ತೇವೆ ಮತ್ತು ಸುರಕ್ಷಿತವಾಗಿರಿಸುತ್ತೇವೆ ಎಂಬುದರ ಕುರಿತು ವಿವೇಚನೆಯಿಂದ ಕೆಲಸ ಮಾಡುತ್ತೇವೆ.
ಈ ತತ್ವಗಳು ಡೇಟಾವನ್ನು ಖಾಸಗಿಯಾಗಿ, ಸುರಕ್ಷಿತವಾಗಿರಿಸಲು ನಮ್ಮ ಉತ್ಪನ್ನಗಳು, ನಮ್ಮ ಪ್ರಕ್ರಿಯೆಗಳು ಮತ್ತು ನಮ್ಮ ಜನರಿಗೆ ಮಾರ್ಗದರ್ಶನ ಒದಗಿಸುತ್ತವೆ ಮತ್ತು ನಿಮ್ಮ ಮಾಹಿತಿಯ ನಿಯಂತ್ರಣ ನಿಮ್ಮ ಕೈಯಲ್ಲೇ ಇರುವಂತೆ ಮಾಡುತ್ತವೆ.
ನಾವು ಎಂದಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಮಾರಾಟ ಮಾಡುವುದಿಲ್ಲ.
ನಿಮ್ಮ ಅಗತ್ಯದ ಕ್ಷಣಗಳಲ್ಲಿ Google ಉತ್ಪನ್ನಗಳು ಉಪಯುಕ್ತವಾಗಿರುವಂತೆ ಮಾಡಲು ನಾವು ಡೇಟಾವನ್ನು ಬಳಸುತ್ತೇವೆ. ಉದಾಹರಣೆಗೆ, ಸಮೀಪದಲ್ಲಿನ ರೆಸ್ಟೋರೆಂಟ್ ಹುಡುಕಲು ಅಥವಾ ಮನೆಗೆ ತಲುಪಲು ಇಂಧನ ದಕ್ಷತೆಯ ಮಾರ್ಗವನ್ನು ಹುಡುಕಲು ನಿಮಗೆ ಸಹಾಯ ಮಾಡುವುದು.
ಹೆಚ್ಚು ಸೂಕ್ತವಾದ ಆ್ಯಡ್‌ಗಳನ್ನು ಒದಗಿಸಲು ಸಹ ನಾವು ಡೇಟಾವನ್ನು ಬಳಸುತ್ತೇವೆ. ಉತ್ಪನ್ನಗಳನ್ನು ಎಲ್ಲರಿಗೂ ಉಚಿತವಾಗಿ ಒದಗಿಸುವುದನ್ನು ಈ ಆ್ಯಡ್‌ಗಳು ಸಾಧ್ಯವಾಗಿಸುತ್ತವೆಯಾದರೂ, ಆ್ಯಡ್‌ಗಳ ಉದ್ದೇಶಗಳಿಗಾಗಿಯೂ ಸೇರಿದಂತೆ ನಾವು ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದೂ ಮಾರಾಟ ಮಾಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುವುದು ಮುಖ್ಯವಾಗಿದೆ. ಇದನ್ನು ನಾವು ಮೀರುವಂತಿಲ್ಲ.
ನಾವು ಯಾವ ಡೇಟಾವನ್ನು ಸಂಗ್ರಹಿಸುತ್ತೇವೆ ಮತ್ತು ಅದನ್ನು ಏಕೆ ಸಂಗ್ರಹಿಸುತ್ತೇವೆ ಎಂಬುದರ ಕುರಿತು ನಾವು ಪಾರದರ್ಶಕವಾಗಿದ್ದೇವೆ.
ನಾವು ಯಾವ ಡೇಟಾವನ್ನು ಸಂಗ್ರಹಿಸುತ್ತೇವೆ, ಅದನ್ನು ಹೇಗೆ ಮತ್ತು ಏಕೆ ಬಳಸುತ್ತೇವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ಪಾರದರ್ಶಕತೆಯು ಮುಖ್ಯ ವಿಚಾರವಾಗಿದೆ, ಆದ್ದರಿಂದ ಈ ಮಾಹಿತಿಯನ್ನು ಹುಡುಕುವುದು ಮತ್ತು ಅರ್ಥಮಾಡಿಕೊಳ್ಳುವುದನ್ನು ನಾವು ಸುಲಭವಾಗಿಸುತ್ತೇವೆ. ಈ ರೀತಿ, ನೀವು Google ಉತ್ಪನ್ನಗಳನ್ನು ಹೇಗೆ ಬಳಸುತ್ತೀರಿ ಎಂಬ ಕುರಿತು ನೀವು ಮಾಹಿತಿಯುತವಾದ ನಿರ್ಧಾರಗಳನ್ನು ಕೈಗೊಳ್ಳಬಹುದು.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ನಿಯಂತ್ರಿಸುವುದನ್ನು ನಾವು ಸುಲಭಗೊಳಿಸುತ್ತೇವೆ .
ಇದರ ಆರ್ಥ, ನಿಮಗೆ ಸೂಕ್ತವಾದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀವು ಸುಲಭವಾಗಿ ಆಯ್ಕೆ ಮಾಡಬಹುದು ಮತ್ತು ನೀವು Google ನೊಂದಿಗೆ ಹಂಚಿಕೊಂಡಿರುವ ವೈಯಕ್ತಿಕ ಮಾಹಿತಿಯನ್ನು ಯಾವಾಗ ಬೇಕಾದರೂ ನಿಯಂತ್ರಿಸಬಹುದು - ನಿಮ್ಮ ಡೇಟಾವನ್ನು ಪರಿಶೀಲಿಸುವುದು, ಅದನ್ನು ಡೌನ್‍ಲೋಡ್ ಮಾಡುವುದು ಮತ್ತು ನೀವು ಬಯಸಿದರೆ, ಬೇರೊಂದು ಸೇವೆಗೆ ವರ್ಗಾಯಿಸುವುದು ಅಥವಾ ಅದನ್ನು ಸಂಪೂರ್ಣವಾಗಿ ಅಳಿಸುವುದು ಇದರಲ್ಲಿ ಒಳಗೊಂಡಿದೆ.
ನಿಮ್ಮ ಗೌಪ್ಯತೆಯನ್ನು ಇನ್ನಷ್ಟು ಸುರಕ್ಷಿತವಾಗಿರಿಸಲು ನಾವು ಬಳಸುವ ಡೇಟಾವನ್ನು ಕಡಿಮೆಗೊಳಿಸುತ್ತೇವೆ .
Drive, Gmail, ಮತ್ತು Photos ನಂತಹ ಆ್ಯಪ್‍ಗಳಲ್ಲಿ ನೀವು ರಚಿಸುವ ಮತ್ತು ಸಂಗ್ರಹಿಸುವ ಕಂಟೆಂಟ್ ಅನ್ನು ನಾವು ಜಾಹೀರಾತಿನ ಉದ್ದೇಶಗಳಿಗೆ ಎಂದೂ ಬಳಸುವುದಿಲ್ಲ, ಮತ್ತು ಆ್ಯಡ್‌ಗಳನ್ನು ನಿಮಗೆ ಸೂಕ್ತವಾಗಿಸಲು ಆರೋಗ್ಯ, ಜನಾಂಗ, ಧರ್ಮ ಅಥವಾ ಲೈಂಗಿಕ ಅಭಿರುಚಿಯಂತಹ ಸೂಕ್ಷ್ಮವಾದ ಮಾಹಿತಿಯನ್ನು ಎಂದೂ ಬಳಸಿಕೊಳ್ಳುವುದಿಲ್ಲ.
ನೀವು Google ಖಾತೆಗೆ ಸೈನ್ ಅಪ್ ಮಾಡುವಾಗ, ಸ್ವಯಂ-ಅಳಿಸುವಿಕೆ ಕಂಟ್ರೋಲ್‌ಗಳನ್ನು ನಾವು ಡೀಫಾಲ್ಟ್ ಮಾಡಿದ್ದೇವೆ, ಇದರಿಂದ ನಿಮ್ಮ Google ಖಾತೆಯೊಂದಿಗೆ ಸಂಯೋಜಿತವಾದ ನಿಮ್ಮ ಆನ್‍ಲೈನ್ ಚಟುವಟಿಕೆಯ ಡೇಟಾ, ಉದಾಹರಣೆಗೆ ನೀವು ಹುಡುಕಿದ ಮತ್ತು ವೀಕ್ಷಿಸಿದ ಸಂಗತಿಗಳನ್ನು ನಾವು ನಿಯಮಿತವಾಗಿ ಅಳಿಸಲು ಸಾಧ್ಯವಾಗುತ್ತದೆ.
ಡೀಫಾಲ್ಟ್ ಆಗಿ ಸುರಕ್ಷಿತವಾಗಿರುವ ಉತ್ಪನ್ನಗಳನ್ನು ನಿರ್ಮಿಸುವ ಮೂಲಕ ನಾವು ನಿಮ್ಮನ್ನು ರಕ್ಷಿಸುತ್ತೇವೆ.
ನಮ್ಮ ಉತ್ಪನ್ನಗಳನ್ನು ನೀವು ಬಳಸಿದಾಗ, ನಮ್ಮ ಮೇಲೆ ನಂಬಿಕೆಯಿಟ್ಟು ನಿಮ್ಮ ಡೇಟಾವನ್ನು ನಮ್ಮ ಕೈಗೊಪ್ಪಿಸುತ್ತೀರಿ, ಆದ್ದರಿಂದ ಅದನ್ನು ಸಮರ್ಪಕವಾಗಿ ನಿರ್ವಹಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ, ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸುವುದಕ್ಕಾಗಿ, ಪ್ರಪಂಚದಲ್ಲಿ ಅತ್ಯಂತ ಸುಧಾರಿತ ಸುರಕ್ಷತಾ ಮೂಲಸೌಕರ್ಯಗಳನ್ನು ನಾವು ಬಳಸುತ್ತೇವೆ.
ನಮ್ಮ ಉತ್ಪನ್ನಗಳು ಡೀಫಾಲ್ಟ್ ಆಗಿ ಸುರಕ್ಷಿತವಾಗಿರುವ ಹಾಗೆ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸುವ ಕೆಟ್ಟ ಜನರ ಹಾಗೆ, ವಿಕಸನ ಹೊಂದುತ್ತಿರುವ ಆನ್‍ಲೈನ್ ಬೆದರಿಕೆಗಳು ನಿಮ್ಮನ್ನು ತಲುಪುವ ಮೊದಲೇ ಅವುಗಳನ್ನು ಪತ್ತೆಹಚ್ಚಲು ಮತ್ತು ನಿಮ್ಮನ್ನು ಸುರಕ್ಷಿತವಾಗಿರಿಸಲು ನಮ್ಮ ಸುರಕ್ಷತಾ ಕ್ರಮಗಳನ್ನು ನಿರಂತರವಾಗಿ ಬಲಪಡಿಸುತ್ತೇವೆ.
ನಾವು ಸುಧಾರಿತ ಗೌಪ್ಯತೆ ತಂತ್ರಜ್ಞಾನಗಳನ್ನು ನಿರ್ಮಿಸುತ್ತೇವೆ ಹಾಗೂ ಅವುಗಳನ್ನು ಇತರರ ಜೊತೆ ಹಂಚಿಕೊಳ್ಳುತ್ತೇವೆ.
ಇಂಟರ್ನೆಟ್ ಅನ್ನು ಮುಕ್ತವಾಗಿರಿಸುವುದು, ಖಾಸಗಿಯಾಗಿರಿಸುವುದು ಮತ್ತು ಸುರಕ್ಷಿತವಾಗಿರಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನಿಮ್ಮ ಆನ್‍ಲೈನ್ ಸುರಕ್ಷತೆಯು Google ಗೆ ಸೀಮಿತವಾಗಿರಬಾರದು - ಅದು ಸಂಪೂರ್ಣ ಇಂಟರ್ನೆಟ್‌ಗೆ ವಿಸ್ತರಿಸಬೇಕು. ಆದ್ದರಿಂದ ನಾವು ಗೌಪ್ಯತೆ ತಂತ್ರಜ್ಞಾನಗಳನ್ನು ಅನ್ವೇಷಿಸುವುದನ್ನು ಮತ್ತು ಅವುಗಳನ್ನು ವ್ಯಾಪಕವಾಗಿ ಲಭ್ಯಗೊಳಿಸುವುದನ್ನು ಮುಂದುವರಿಸುತ್ತೇವೆ. ನಾವು ಕಲಿತ ಸಂಗತಿಗಳು, ಅನುಭವಗಳು ಮತ್ತು ಟೂಲ್‍ಗಳನ್ನು ನಮ್ಮ ಪಾಲುದಾರರು, ಸಂಸ್ಥೆಗಳು ಮತ್ತು ಪ್ರತಿಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತೇವೆ ಏಕೆಂದರೆ ಇಂಟರ್ನೆಟ್ ಅನ್ನು ಸುರಕ್ಷಿತವಾಗಿರಿಸಲು ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕು.
Google ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಎಕ್ಸ್‌ಪ್ಲೋರ್ ಮಾಡಿ.
-
ನಮ್ಮ ಪ್ರೊಡಕ್ಟ್ಗಳಲ್ಲಿGoogle ನ ಎಲ್ಲಾ ಪ್ರೊಡಕ್ಟ್ಗಳಲ್ಲೂ ನಿಮ್ಮ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ.
-
ಸುರಕ್ಷತೆ ಮತ್ತು ಗೌಪ್ಯತೆGoogle ಹೇಗೆ ನಿಮ್ಮ ಖಾಸಗಿ ಮಾಹಿತಿಯನ್ನು ರಕ್ಷಿಸುತ್ತದೆ ಹಾಗೂ ನಿಮ್ಮನ್ನು ನಿಯಂತ್ರಣದಲ್ಲಿರಿಸುತ್ತದೆ ಎಂಬುದನ್ನು ತಿಳಿಯಿರಿ.
-
ಕುಟುಂಬದ ಸುರಕ್ಷತೆನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸರಿಯಾಗಿದೆ ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ Google ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.
-
ನಾಯಕತ್ವGoogle ಹೊಸ ಸುರಕ್ಷತಾ ತಂತ್ರಜ್ಞಾನಗಳನ್ನು ಹೇಗೆ ಹುಟ್ಟುಹಾಕುತ್ತದೆ ಹಾಗೂ ಉದ್ಯಮದೊಂದಿಗೆ ಹೇಗೆ ಸಹಕರಿಸುತ್ತದೆ ಎಂಬುದನ್ನು ಎಕ್ಸ್‌ಪ್ಲೋರ್ ಮಾಡಿ.