ನಿಮ್ಮ ಡಿಜಿಟಲ್ ಜೀವನವನ್ನು,
Pixel ನಿಂದ ಸುರಕ್ಷಿತಗೊಳಿಸಲಾಗಿದೆ.
ನಿಮ್ಮ ಫೋನ್ ನಿಮ್ಮ ಡಿಜಿಟಲ್ ಜೀವನದ ಹೃದಯಭಾಗದಲ್ಲಿದೆ, ಇದರರ್ಥ ಸ್ವಲ್ಪ ಪ್ರಮಾಣದಲ್ಲಿ ನಿಮ್ಮ ತೀರಾ ವೈಯಕ್ತಿಕ ಮತ್ತು ಖಾಸಗಿ ಮಾಹಿತಿಯು ಇರುವ ಸ್ಥಳ ನಿಮ್ಮ ಫೋನ್ ಆಗಿದೆ. ಅದಕ್ಕಾಗಿಯೇ, ನಾವು Pixel ಫೋನ್ ಅನ್ನು ಭದ್ರತೆ ಮತ್ತು ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದ್ದೇವೆ.
Pixel ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸುತ್ತದೆ.
ವಿನ್ಯಾಸಕ್ಕೆ ಅನುಗುಣವಾದ ಭದ್ರತೆ
ನಿಮ್ಮ ಡೇಟಾವನ್ನು ಒಳಗೆ ಮತ್ತು ಹೊರಗೆ ಅನೇಕ ಲೇಯರ್‌ಗಳ ಭದ್ರತೆಯಿಂದ ರಕ್ಷಿಸಲಾಗಿದೆ.
ಪ್ರಮಾಣೀಕರಣ
ನಿಮ್ಮ ಫೋನ್‌ಗೆ ನಿಮಗೆ ಮಾತ್ರ ಪ್ರವೇಶವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಮಾಣೀಕರಣವು ಸಹಾಯ ಮಾಡುತ್ತದೆ.
Pixel ಇಂಟೆಲಿಜೆನ್ಸ್
ಸಾಧನದಲ್ಲಿನ ಇಂಟೆಲಿಜೆನ್ಸ್, ನಿಮ್ಮ ಡೇಟಾವನ್ನು ಇನ್ನಷ್ಟು ಖಾಸಗಿಯಾಗಿಡಲು ಸಹಾಯ ಮಾಡುತ್ತದೆ.
ರಕ್ಷಣೆ ಮತ್ತು ನಿಯಂತ್ರಣಗಳು
ನೀವು ಡೌನ್‌ಲೋಡ್ ಮಾಡುವ, ಬ್ರೌಸ್ ಮಾಡುವ ಮತ್ತು ಹಂಚಿಕೊಳ್ಳುವ ಕಂಟೆಂಟ್‌ಗಳಿಗೆ ಸಂಬಂಧಿಸಿದಂತೆ ಬಳಸಲು ಸುಲಭವಾದ ಗೌಪ್ಯತೆ ನಿಯಂತ್ರಣಗಳು ಮತ್ತು ಪೂರ್ವಭಾವಿ ಭದ್ರತೆ.
-
ವಿನ್ಯಾಸಕ್ಕೆ ಅನುಗುಣವಾದ ಭದ್ರತೆ
ನಿಮ್ಮ ಡೇಟಾವನ್ನು ಒಳಗೆ ಮತ್ತು ಹೊರಗೆ ಅನೇಕ ಲೇಯರ್‌ಗಳ ಭದ್ರತೆಯಿಂದ ರಕ್ಷಿಸಲಾಗಿದೆ.
-
ಪ್ರಮಾಣೀಕರಣ
ನಿಮ್ಮ ಫೋನ್‌ಗೆ ನಿಮಗೆ ಮಾತ್ರ ಪ್ರವೇಶವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಮಾಣೀಕರಣವು ಸಹಾಯ ಮಾಡುತ್ತದೆ.
-
Pixel ಇಂಟೆಲಿಜೆನ್ಸ್
ಸಾಧನದಲ್ಲಿನ ಇಂಟೆಲಿಜೆನ್ಸ್, ನಿಮ್ಮ ಡೇಟಾವನ್ನು ಇನ್ನಷ್ಟು ಖಾಸಗಿಯಾಗಿಡಲು ಸಹಾಯ ಮಾಡುತ್ತದೆ.
-
ರಕ್ಷಣೆ ಮತ್ತು ನಿಯಂತ್ರಣಗಳು
ನೀವು ಡೌನ್‌ಲೋಡ್ ಮಾಡುವ, ಬ್ರೌಸ್ ಮಾಡುವ ಮತ್ತು ಹಂಚಿಕೊಳ್ಳುವ ಕಂಟೆಂಟ್‌ಗಳಿಗೆ ಸಂಬಂಧಿಸಿದಂತೆ ಬಳಸಲು ಸುಲಭವಾದ ಗೌಪ್ಯತೆ ನಿಯಂತ್ರಣಗಳು ಮತ್ತು ಪೂರ್ವಭಾವಿ ಭದ್ರತೆ.
ನಿಮ್ಮ ಫೋನ್ ಮತ್ತು ಡೇಟಾವನ್ನು ಖಾಸಗಿಯಾಗಿ, ಸುರಕ್ಷಿತವಾಗಿ ಮತ್ತು ಭದ್ರವಾಗಿರಿಸುವುದಕ್ಕೆ ಸಹಾಯ ಮಾಡಲು ಒಟ್ಟಾಗಿ ಕೆಲಸ ಮಾಡುವಂತೆ ನಾವು Pixel ನ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ವಿನ್ಯಾಸಗೊಳಿಸಿದ್ದೇವೆ.
Titan™ M ಚಿಪ್
Titan™ M ಚಿಪ್
ಎಂಟರ್‌ಪ್ರೈಸ್-ಗ್ರೇಡ್ Titan M ಭದ್ರತಾ ಚಿಪ್ ಅನ್ನು ನಿಮ್ಮ ತೀರಾ ಸೂಕ್ಷ್ಮವಾದ ಡೇಟಾವನ್ನು ರಕ್ಷಿಸುವುದಕ್ಕೆ ಸಹಾಯ ಮಾಡಲು ಕಸ್ಟಮ್ ಆಗಿ ನಿರ್ಮಿಸಲಾಗಿದೆ. Google Cloud ಡೇಟಾ ಕೇಂದ್ರಗಳನ್ನು ರಕ್ಷಿಸಲು ನಾವು ಬಳಸುವ ಅದೇ ಚಿಪ್‌ನಿಂದ ಪಡೆಯಲಾಗಿದೆ, ಇದು ಪಾಸ್‌ಕೋಡ್ ರಕ್ಷಣೆ, ಎನ್‌ಕ್ರಿಪ್ಶನ್ ಮತ್ತು ಆ್ಯಪ್‌ಗಳಲ್ಲಿನ ಸುರಕ್ಷಿತ ವಹಿವಾಟುಗಳಂತಹ ನಿಮ್ಮ ತೀರಾ ಸೂಕ್ಷ್ಮ ಪ್ರಕ್ರಿಯೆಗಳು ಮತ್ತು ಮಾಹಿತಿಯನ್ನು ನಿರ್ವಹಿಸುತ್ತದೆ.
ಸಾಧನದಲ್ಲಿನ ಇಂಟೆಲಿಜೆನ್ಸ್
Google, ಮಷಿನ್ ಲರ್ನಿಂಗ್ (ML) ಅನ್ನು ಬಳಸುತ್ತಿದ್ದು, Pixel ಫೋನ್‌ಗಳು ಸೇರಿದಂತೆ ಹಲವು ವರ್ಷಗಳಿಂದ ನಮ್ಮ ಪ್ರಾಡಕ್ಟ್‌ಗಳನ್ನು ಹೆಚ್ಚು ಉಪಯುಕ್ತವಾಗುವಂತೆ ಮಾಡುತ್ತಿದೆ. ಸಾಧನದಲ್ಲಿನ ಇಂಟೆಲಿಜೆನ್ಸ್ ನಿಮ್ಮ ಫೋನ್‌ನಲ್ಲಿರುವ ML ಮಾಡೆಲ್‌ಗಳನ್ನು Now Playing ಮತ್ತು ರೆಕಾರ್ಡರ್ ಆ್ಯಪ್‌ನಂತಹ ಫೀಚರ್‌ಗಳನ್ನು ಬಲಪಡಿಸಲು ಬಳಸುತ್ತದೆ. ಇದು ನಿಮ್ಮ ಹೆಚ್ಚಿನ ಡೇಟಾವನ್ನು ನಿಮ್ಮ ಫೋನ್‌ನಲ್ಲಿ ಮತ್ತು ನಿಮಗೆ ಖಾಸಗಿಯಾಗಿರಿಸುತ್ತದೆ.
ನಿಮ್ಮ ಹೆಚ್ಚಿನ ಡೇಟಾವನ್ನು ನಿಮ್ಮ ಸಾಧನದಲ್ಲೇ ಉಳಿಸಿಕೊಳ್ಳುವಂತಹ ML ಅನ್ನು ಬಳಸುವ ಹೊಸ ಮಾರ್ಗಗಳನ್ನು ನಾವು ಕಂಡುಹಿಡಿಯುತ್ತಿದ್ದೇವೆ. ಈ ಮಾರ್ಗಗಳಲ್ಲಿ ಒಂದನ್ನು ಫೆಡರೇಟೆಡ್ ಲರ್ನಿಂಗ್ ಎಂದು ಕರೆಯಲಾಗುತ್ತದೆ. ಈ ಹೊಸ ವಿಧಾನವು ML ಮಾಡೆಲ್‌ಗಳಿಗೆ ತರಬೇತಿ ನೀಡಲು ವಿವಿಧ ಸಾಧನಗಳಲ್ಲಿನ ಅನಾಮಧೇಯ ಮಾಹಿತಿಯನ್ನು ಸಂಯೋಜಿಸುತ್ತದೆ, ಯಾರೊಬ್ಬರ ಬಗ್ಗೆ ಪ್ರತ್ಯೇಕವಾಗಿ ಕಲಿಯದೆ ಪ್ರತಿಯೊಬ್ಬರಿಂದಲೂ ಕಲಿಯಲು ನಮಗೆ ಸಹಾಯ ಮಾಡುತ್ತದೆ. ಫೆಡರೇಟೆಡ್ ಲರ್ನಿಂಗ್, ನಿಮ್ಮ ಗೌಪ್ಯತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ ಮತ್ತು Now Playing ನಂತಹ ಹೆಚ್ಚು ಸಹಾಯಕವಾದ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ರಚಿಸಲು ನಮಗೆ ಅನುಮತಿಸುತ್ತದೆ. ಇನ್ನಷ್ಟು ತಿಳಿಯಿರಿ
ಖಾತರಿಪಡಿಸಿದ ಮತ್ತು ಸ್ವಯಂಚಾಲಿತ ಅಪ್‌ಡೇಟ್‌ಗಳು
ನಿಮ್ಮ Pixel ಫೋನ್ ಕನಿಷ್ಠ ಮೂರು ವರ್ಷಗಳವರೆಗೆ ಇತ್ತೀಚಿನ OS ಮತ್ತು ಭದ್ರತಾ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಪಡೆಯುತ್ತದೆ.1 ಮತ್ತು Google ಆ್ಯಪ್‌ಗಳನ್ನು Google Play ಮೂಲಕ ಅಪ್‌ಡೇಟ್ ಮಾಡಬಹುದಾಗಿರುವುದರಿಂದ, ನಿಮ್ಮ ಮೆಚ್ಚಿನ ಆ್ಯಪ್‌ಗಳು ಸಿದ್ಧವಾದ ಕೂಡಲೇ ಅವುಗಳಲ್ಲಿ ಹೊಸ ಫೀಚರ್‌ಗಳು ಮತ್ತು ವರ್ಧಿತ ಸುರಕ್ಷತೆಗಳನ್ನು ನೀವು ಪಡೆಯುತ್ತೀರಿ.
ತಡೆರಹಿತ ಅಪ್‌ಡೇಟ್‌ಗಳೊಂದಿಗೆ ಮುಂದುವರಿಯಿರಿ
OS ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಲು ನಿಮ್ಮ ಫೋನ್ ಬಳಕೆಯನ್ನು ಅಡ್ಡಿಪಡಿಸುವ ಬದಲು, Pixel ಸ್ವಯಂಚಾಲಿತವಾಗಿ ಅಪ್‌ಡೇಟ್ ಅನ್ನು ಡೌನ್‌ಲೋಡ್ ಮಾಡುತ್ತದೆ ಮತ್ತು ಅದನ್ನು ಪಾರ್ಟಿಶನ್ ಎಂದು ಕರೆಯಲಾಗುವ ವಿಶೇಷ ವಿಭಾಗದ ಸಂಗ್ರಹಣೆಯಲ್ಲಿ ಪ್ರತ್ಯೇಕವಾಗಿ ಇನ್‌ಸ್ಟಾಲ್ ಮಾಡುತ್ತದೆ. ಇದು ಸಂಪೂರ್ಣವಾಗಿ ಹಿನ್ನೆಲೆಯಲ್ಲಿ ಸಂಭವಿಸುತ್ತದೆ, ಹೀಗಾಗಿ ನೀವು ಯಾವುದೇ ಅಡೆತಡೆಯಿಲ್ಲದೆ ನಿಮ್ಮ ಫೋನ್ ಬಳಕೆಯನ್ನು ಮುಂದುವರಿಸಬಹುದು. ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಿದ ಕೂಡಲೇ ಪ್ರಕ್ರಿಯೆ ಮುಗಿಯುತ್ತದೆ, ನೀವು ಮಾಡಬೇಕಾಗಿರುವುದು ಇಷ್ಟೇ ನಿಮ್ಮ ಫೋನ್ ಅನ್ನು ಮರುಪ್ರಾರಂಭಿಸಿ ಮತ್ತು ನೀವು OS ನ ಇತ್ತೀಚಿನ ಆವೃತ್ತಿಯನ್ನು ಹೊಂದಿರುತ್ತೀರಿ.
ವೆರಿಫೈಡ್ ಬೂಟ್
ನಿಮ್ಮ Pixel ಅನ್ನು ನೀವು ಪ್ರಾರಂಭಿಸಿದಾಗಲೆಲ್ಲಾ, Titan M ಮತ್ತು ವೆರಿಫೈಡ್ ಬೂಟ್ ನೀವು ಬಳಸುತ್ತಿರುವ OS Google ನಿಂದ ಬಂದಿದೆಯಾ ಮತ್ತು ಅದನ್ನು ಟ್ಯಾಂಪರ್ ಮಾಡಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು OS ನ ಇತ್ತೀಚಿನ ಆವೃತ್ತಿಯನ್ನು ಹೊಂದಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಲು Titan M ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ವೆರಿಫೈಡ್ ಬೂಟ್ ಪರಿಶೀಲಿಸುತ್ತದೆ ಮತ್ತು ನಿಮ್ಮ Pixel ಯಾವುದೇ ಹಳೆಯದನ್ನು ಬಳಸುವುದನ್ನು ನಿಲ್ಲಿಸುತ್ತದೆ. ತಿಳಿದಿರುವ ಸುರಕ್ಷತಾ ದೋಷಗಳನ್ನು ಹೊಂದಿರುವ OS ನ ಹಿಂದಿನ ಆವೃತ್ತಿಗಳನ್ನು ಲೋಡ್ ಮಾಡದಂತೆ ದಾಳಿಕೋರರನ್ನು ತಡೆಯಲು ಇದು ಸಹಾಯ ಮಾಡುತ್ತದೆ, ಇದರಿಂದ ನಿಮ್ಮ ಫೋನ್ ಸುರಕ್ಷಿತವಾಗಿರುತ್ತದೆ.
Pixel, ಬಿಲ್ಟ್-ಇನ್ ದೃಢೀಕರಣ ಭದ್ರತೆಯೊಂದಿಗೆ ಬರುತ್ತದೆ, ಅದು ಇತರರು ನಿಮ್ಮ ಫೋನ್ ಅನ್ನು ಪ್ರವೇಶಿಸದಂತೆ ತಡೆಯಲು ಸಹಾಯ ಮಾಡುತ್ತದೆ.
Pixel ಅನ್ನು ಅನ್‌ಲಾಕ್ ಮಾಡುವುದು
Pixel ಅನ್ನು ಅನ್‌ಲಾಕ್ ಮಾಡುವುದು
ನಿಮ್ಮ ಫೋನ್ ಅನ್‌ಲಾಕ್ ಮಾಡುವುದು ಸುಲಭವಾಗಿ, ವೇಗವಾಗಿ ಮತ್ತು ಸುರಕ್ಷಿತವಾಗಿರಬೇಕು. Pixel 4a ನಲ್ಲಿನ Pixel Imprint ನಂತಹ ಫೀಚರ್‌ಗಳು, ನಿಮ್ಮ ಫೋನ್‌ಗೆ ನಿಮಗೆ ಮಾತ್ರ ಪ್ರವೇಶವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ನಿಮ್ಮ ಮೆಚ್ಚಿನ ಆ್ಯಪ್‌ಗಳಲ್ಲಿ ಪಾವತಿಗಳನ್ನು ಸುರಕ್ಷಿತವಾಗಿ ಮಾಡಲು ಸಹ ಅವುಗಳು ನಿಮಗೆ ಅನುಮತಿಸುತ್ತವೆ. ನಿಮ್ಮ ಫಿಂಗರ್‌ಪ್ರಿಂಟ್ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಣೆ ಮಾಡಲಾಗಿದೆ ಮತ್ತು ಇದು ಎಂದೂ ನಿಮ್ಮ ಫೋನ್‌ನಿಂದ ಹೊರಗೆ ಹೋಗುವುದಿಲ್ಲ.
Pixel 4 ನಲ್ಲಿನ ಫೇಸ್ ಅನ್‌ಲಾಕ್, ನಿಮ್ಮ ಫೋನ್‌ನಲ್ಲಿ ಪ್ರಕ್ರಿಯೆಗೊಳಿಸಿದ ಮುಖ ಗುರುತಿಸುವಿಕೆಯನ್ನು ಬಳಸುತ್ತದೆ, ಹೀಗಾಗಿ ನಿಮ್ಮ ಮುಖ ಗುರುತಿಸುವಿಕೆ ಡೇಟಾವನ್ನು ಎಂದಿಗೂ ಕ್ಲೌಡ್‌ಗೆ ಅಪ್‌ಲೋಡ್ ಮಾಡಲಾಗುವುದಿಲ್ಲ ಅಥವಾ ಇತರ ಸೇವೆಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಮುಖದ ಚಿತ್ರಗಳನ್ನು ಎಂದಿಗೂ ಸಂಗ್ರಹಿಸಲಾಗುವುದಿಲ್ಲ ಅಥವಾ ಉಳಿಸಿಕೊಳ್ಳಲಾಗುವುದಿಲ್ಲ. ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು, ಅನ್‌ಲಾಕ್ ಮಾಡಲು ಬಳಸುವ ನಿಮ್ಮ ಮುಖ ಗುರುತಿಸುವಿಕೆ ಡೇಟಾವನ್ನು Pixel ನ Titan M ಭದ್ರತಾ ಚಿಪ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ ಮತ್ತು ಇದು ನಿಮ್ಮ ಉಳಿದ ಫೋನ್ ಅಥವಾ ಆಪರೇಟಿಂಗ್ ಸಿಸ್ಟಂನಲ್ಲಿ ಲಭ್ಯವಿರುವುದಿಲ್ಲ.
Find My Device
ನಿಮ್ಮ Pixel ಇಟ್ಟಿರುವ ಸ್ಥಳವನ್ನು ನೀವು ಮರೆತಿದ್ದರೆ, Find My Device ಸಹಾಯ ಮಾಡುತ್ತದೆ.2 ಯಾವುದೇ ಬ್ರೌಸರ್‌ನಲ್ಲಿ ಅಥವಾ ಯಾವುದೇ Android ಸಾಧನದಲ್ಲಿನ Find My Device ಆ್ಯಪ್‌ನಲ್ಲಿ ನಿಮ್ಮ Google ಖಾತೆಗೆ ಸೈನ್ ಇನ್ ಮಾಡುವ ಮೂಲಕ ನಿಮ್ಮ ಫೋನ್ ಅನ್ನು ನೀವು ಪತ್ತೆ ಮಾಡಬಹುದು ಮತ್ತು ಅದನ್ನು ರಿಂಗ್ ಮಾಡಬಹುದು.
Find My Device, ನಿಮ್ಮ ಫೋನ್ ಅನ್ನು ದೂರದಿಂದಲೇ ಲಾಕ್ ಮಾಡಲು ಅಥವಾ ಲಾಕ್ ಸ್ಕ್ರೀನ್ ಮೇಲೆ ಸಂದೇಶವನ್ನು ಪ್ರದರ್ಶಿಸಲು ಸಹ ಅನುಮತಿಸುತ್ತದೆ, ಇದರಿಂದಾಗಿ ಯಾರಿಗಾದರೂ ಅದು ದೊರೆತರೆ, ಯಾರನ್ನು ಸಂಪರ್ಕಿಸಬೇಕು ಎಂದು ಅವರಿಗೆ ತಿಳಿಯುತ್ತದೆ. ಅದು ಕಳೆದುಹೋಗಿದೆ ಎಂದು ನಿಮಗೆ ಅನಿಸಿದರೆ, ನಿಮ್ಮ ಎಲ್ಲಾ ಡೇಟಾವನ್ನು ದೂರದಿಂದಲೇ ಅಳಿಸಬಹುದು. ಇನ್ನಷ್ಟು ತಿಳಿಯಿರಿ
ಫ್ಯಾಕ್ಟರಿ ರೀಸೆಟ್ ರಕ್ಷಣೆ
ವರ್ಧಿತ ಕಳ್ಳತನ ವಿರೋಧಿ ರಕ್ಷಣೆಗಾಗಿ, ಪ್ರತಿ Pixel ಫ್ಯಾಕ್ಟರಿ ರೀಸೆಟ್ ರಕ್ಷಣೆಯೊಂದಿಗೆ ಬರುತ್ತದೆ. ನಿಮ್ಮ ಪಾಸ್‌ಕೋಡ್ ಅಥವಾ Google ಖಾತೆ ಪಾಸ್‌ವರ್ಡ್ ಇಲ್ಲದೆಯೇ ನಿಮ್ಮ ಫೋನ್ ಅನ್ನು ಯಾರಿಂದಲೂ ಮರುಸಕ್ರಿಯಗೊಳಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ನಿಮ್ಮ ಫೋನ್ ಅನ್ನು ನಾವು ಸುರಕ್ಷಿತವಾಗಿ ಮತ್ತು ಭದ್ರವಾಗಿರಿಸಿಕೊಳ್ಳುವ ಹಲವು ವಿಧಾನಗಳಲ್ಲಿ ಇದು ಒಂದು. ಇನ್ನಷ್ಟು ತಿಳಿಯಿರಿ
ಸಾಧನದಲ್ಲಿನ ಮಷಿನ್ ಲರ್ನಿಂಗ್ ಮತ್ತು AI ನಲ್ಲಿನ ನಮ್ಮ ಸುಧಾರಣೆಗಳು ನಿಮ್ಮ ಹೆಚ್ಚಿನ ಡೇಟಾವನ್ನು ನಿಮ್ಮ ಕೈಯಲ್ಲಿ ಇರಿಸಲು Pixel ಅನ್ನು ಹೆಚ್ಚು ಉಪಯುಕ್ತವಾಗುವಂತೆ ಮಾಡುತ್ತದೆ.
Now Playing
Now Playing
ನಿಮ್ಮ Pixel, Now Playing ಫೀಚರ್ ಮೂಲಕ ನಿಮ್ಮ ಸುತ್ತ ಪ್ಲೇ ಆಗುತ್ತಿರುವ ಸಂಗೀತವನ್ನು ಗುರುತಿಸುತ್ತದೆ. ಇತರ ಹಾಡು-ಗುರುತಿಸುವಿಕೆ ಸೇವೆಗಳಿಗಿಂತ ಭಿನ್ನವಾಗಿ, ಎಲ್ಲಾ ಪ್ರಕ್ರಿಯೆಯು ನಿಮ್ಮ Pixel ನಲ್ಲಿಯೇ ನಡೆಯುತ್ತದೆ. ಹಾಡೊಂದು ಕೇಳಿಸಿದಾಗ, ನಿಮ್ಮ ಫೋನ್ ಕೆಲವೇ ಸೆಕೆಂಡ್‌ಗಳ ಸಂಗೀತವನ್ನು ಅದರ ಸಾಧನದಲ್ಲಿನ ಸಂಗೀತದ ಡೇಟಾಬೇಸ್‌ಗೆ ಹೋಲಿಸುತ್ತದೆ ಮತ್ತು ನಿಮ್ಮ ಫೋನ್‌ನಲ್ಲಿನ ಯಾವುದೇ ಆಡಿಯೊವನ್ನು ಬಿಡದೇ ಪ್ಲೇ ಆಗುತ್ತಿರುವ ಹಾಡನ್ನು ತ್ವರಿತವಾಗಿ ಗುರುತಿಸುತ್ತದೆ. Now Playing ಫೀಚರ್ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ಖಾಸಗಿಯಾಗಿದೆ.
Pixel 4 ನಲ್ಲಿ, Now Playing ಫೀಚರ್ ಫೆಡರೇಟೆಡ್ ಅನಾಲಿಟಿಕ್ಸ್ ಎಂಬ ಹೆಸರಿನ ಗೌಪ್ಯತೆ-ಸಂರಕ್ಷಿಸುವ ತಂತ್ರಜ್ಞಾನವನ್ನು ಬಳಸುತ್ತದೆ. ಯಾವ ವೈಯಕ್ತಿಕ ಫೋನ್‌ನಲ್ಲಿ ಯಾವ ಹಾಡುಗಳನ್ನು ಕೇಳಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸದೆ, ಪ್ರದೇಶದ ಪ್ರಕಾರ ಎಲ್ಲಾ Pixel ಫೋನ್‌ಗಳಲ್ಲಿ ಹೆಚ್ಚಾಗಿ ಗುರುತಿಸಲ್ಪಟ್ಟ ಹಾಡುಗಳನ್ನು ಇದು ಲೆಕ್ಕಾಚಾರ ಮಾಡುತ್ತದೆ. ಈ ಒಟ್ಟುಗೂಡಿಸಿದ ಡೇಟಾವನ್ನು ಬಳಸಿಕೊಂಡು, ಜನರು ಹೆಚ್ಚಾಗಿ ಕೇಳಲು ಬಯಸುವ ಹಾಡುಗಳನ್ನು ಇದು ಸಾಧನದಲ್ಲಿರುವ ಹಾಡಿನ ಡೇಟಾಬೇಸ್‌ನಲ್ಲಿ ಅಪ್‌ಡೇಟ್ ಮಾಡುತ್ತದೆ ಮತ್ತು ನೀವು ಏನನ್ನು ಕೇಳುತ್ತಿದ್ದೀರಿ ಎಂಬುದನ್ನು Google ಎಂದಿಗೂ ಗಮನಿಸುವುದಿಲ್ಲ. ಇನ್ನಷ್ಟು ತಿಳಿಯಿರಿ
Frequent Faces
ಈ Pixel ಫೀಚರ್, ನೀವು ಹೆಚ್ಚು ಫೋಟೋಗ್ರಾಫ್ ಮಾಡುವ ಜನರನ್ನು ನೆನಪಿಟ್ಟುಕೊಳ್ಳುತ್ತದೆ ಮತ್ತು ಅವರು ನಗುತ್ತಿರುವಾಗ ಮತ್ತು ಕಣ್ಣು ಮಿಟುಕಿಸದಿದ್ದಾಗ ಅವರ ಅತ್ಯುತ್ತಮ ಫೋಟೋಗಳನ್ನು ಕ್ಯಾಪ್ಚರ್ ಮಾಡುತ್ತದೆ. ಇದನ್ನು ಮಾಡಲು, ನಿಮ್ಮ Pixel ನಿಮ್ಮ ಫೋಟೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮುಖಗಳ ಬಗ್ಗೆ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಉಳಿಸುತ್ತದೆ. ಈ ಮಾಹಿತಿಯು ನೈಜ-ಪ್ರಪಂಚದ ಯಾವುದೇ ಗುರುತಿಗೆ ಸಂಬಂಧಿಸಿರುವುದಿಲ್ಲ. ಇದು ಸಂಪೂರ್ಣವಾಗಿ ನಿಮ್ಮ ಸಾಧನದಲ್ಲಿಯೇ ನಡೆಯುತ್ತದೆ ಮತ್ತು ಇದನ್ನು ಎಂದಿಗೂ Google ಗೆ ಅಪ್‌ಲೋಡ್ ಮಾಡಲಾಗುವುದಿಲ್ಲ, ನಿಮ್ಮ Google ಖಾತೆಯ ಜೊತೆಗೆ ಸಂಯೋಜಿತವಾಗಿರುವುದಿಲ್ಲ ಅಥವಾ ಇತರ ಆ್ಯಪ್‌ಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. Frequent Faces ಡೀಫಾಲ್ಟ್ ಆಗಿ ಆಫ್ ಆಗಿರುತ್ತದೆ ಮತ್ತು ಅದನ್ನು ನಿಷ್ಕ್ರಿಯಗೊಳಿಸಿದಾಗ Frequent Faces ನ ಎಲ್ಲಾ ಡೇಟಾವನ್ನು ಅಳಿಸಲಾಗುತ್ತದೆ.
ಸ್ಕ್ರೀನ್ ಆನ್ ಆಗಿರುವಿಕೆ
ನೀವು ಸ್ಕ್ರೀನ್ ಆನ್ ಆಗಿರುವಿಕೆ ಫೀಚರ್ ಬಳಸಿ ನಿಮ್ಮ ಸ್ಕ್ರೀನ್ ಅನ್ನು ನೋಡುತ್ತಿರುವಾಗ ಅದನ್ನು ಆನ್‌ನಲ್ಲಿ ಇರಿಸಿ. ಮಷಿನ್ ಲರ್ನಿಂಗ್ ಮಾಡೆಲ್‌ಗಳು ಮತ್ತು ಮುಂಭಾಗದ ಕ್ಯಾಮರಾವನ್ನು ಬಳಸುವುದರಿಂದ, ಯಾರೋ ಒಬ್ಬರು ಸ್ಕ್ರೀನ್ ಅನ್ನು ನೋಡುತ್ತಿದ್ದಾರೆ ಎಂಬುದನ್ನು ನಿಮ್ಮ ಫೋನ್‌ನ ಸ್ಕ್ರೀನ್ ಪತ್ತೆಹಚ್ಚಿದಾಗ, ಅದು ಸ್ಲೀಪ್ ಮೋಡ್‌ಗೆ ಹೋಗದಂತೆ ಸ್ಕ್ರೀನ್ ಆನ್ ಆಗಿರುವಿಕೆ ಫೀಚರ್ ತಡೆಯುತ್ತದೆ. ಈ ವಿಶ್ಲೇಷಣೆಯು ಸಾಧನದಲ್ಲಿಯೇ ನಡೆಯುತ್ತದೆ ಮತ್ತು ಯಾವುದೇ ಡೇಟಾವನ್ನು ಸಂಗ್ರಹಿಸಲಾಗುವುದಿಲ್ಲ, ಹಂಚಿಕೊಳ್ಳಲಾಗುವುದಿಲ್ಲ ಅಥವಾ Google ಗೆ ಕಳುಹಿಸಲಾಗುವುದಿಲ್ಲ. ಡಿಸ್‌ಪ್ಲೇ ಸೆಟ್ಟಿಂಗ್‌ಗಳಲ್ಲಿ ನೀವು ಯಾವಾಗ ಬೇಕಾದರೂ ಸ್ಕ್ರೀನ್ ಆನ್ ಆಗಿರುವಿಕೆ ಫೀಚರ್ ಅನ್ನು ಆನ್ ಅಥವಾ ಆಫ್ ಮಾಡಬಹುದು.
Motion Sense
Motion Sense
ಗೆಸ್ಚರ್‌ಗಳನ್ನು ಗುರುತಿಸಲು ಮತ್ತು ಸಮೀಪದಲ್ಲಿ ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸೋಲಿ ಎಂಬ ಹೆಸರಿನ ಮೋಷನ್ ಸೆನ್ಸಿಂಗ್ ರಾಡಾರ್ ಚಿಪ್ ಮತ್ತು ಅನನ್ಯ ಸಾಫ್ಟ್‌ವೇರ್ ಅಲ್ಗಾರಿದಮ್‌ಗಳನ್ನು Pixel 4 ಬಳಸುತ್ತದೆ. ನೀವು ಯಾವಾಗ ಬೇಕಾದರೂ Motion Sense3 ಅನ್ನು ಆನ್ ಅಥವಾ ಆಫ್ ಮಾಡಬಹುದು. ಸೆನ್ಸರ್‌ನ ಎಲ್ಲಾ ಡೇಟಾವನ್ನು ನಿಮ್ಮ Pixel ನಲ್ಲಿಯೇ ಪ್ರಕ್ರಿಯೆಗೊಳಿಸಲಾಗುತ್ತದೆ. ಇದನ್ನು ಎಂದಿಗೂ Google ಸೇವೆಗಳಲ್ಲಿ ಅಥವಾ ಇತರ ಆ್ಯಪ್‌ಗಳಲ್ಲಿ ಉಳಿಸಲಾಗುವುದಿಲ್ಲ ಅಥವಾ ಹಂಚಿಕೊಳ್ಳಲಾಗುವುದಿಲ್ಲ.
ಕರೆಮಾಡುವವರ ಐಡಿ ಮತ್ತು ಸ್ಪ್ಯಾಮ್ ರಕ್ಷಣೆ
ಅಪರಿಚಿತ ಸಂಖ್ಯೆಗಳಿಂದ ಬರುವ ಕೆಲವು ಕರೆಗಳು ಸ್ಕ್ಯಾಮ್‌ಗಳಾಗಿರಬಹುದು. ಅದಕ್ಕಾಗಿಯೇ, ಪ್ರತಿ Pixel ಕರೆ ಮಾಡುವವರ ಐಡಿ ಮತ್ತು ಸ್ಪ್ಯಾಮ್ ರಕ್ಷಣೆಯೊಂದಿಗೆ ಬರುತ್ತದೆ, ಆದ್ದರಿಂದ ನಿಮ್ಮ ಸಂಪರ್ಕಗಳಲ್ಲಿಲ್ಲದ ಕರೆ ಮಾಡುವವರು ಅಥವಾ ವ್ಯಾಪಾರಗಳ ಬಗ್ಗೆ ಮಾಹಿತಿಯನ್ನು ನೀವು ನೋಡಬಹುದು ಮತ್ತು ಸಂಭಾವ್ಯ ಸ್ಪ್ಯಾಮ್ ಕರೆ ಮಾಡುವವರ ಬಗ್ಗೆ ಎಚ್ಚರಿಕೆಗಳನ್ನು ಪಡೆಯಬಹುದು. ಇನ್ನಷ್ಟು ತಿಳಿಯಿರಿ
Messages ಗಾಗಿ ಪರಿಶೀಲಿಸಿದ ಎಸ್‌ಎಂಎಸ್ ಮತ್ತು ಸ್ಪ್ಯಾಮ್ ರಕ್ಷಣೆ
Messages ಗಾಗಿ ಪರಿಶೀಲಿಸಿದ ಎಸ್‌ಎಂಎಸ್, ನಿಮಗೆ ಸಂದೇಶ ಕಳುಹಿಸುವ ವ್ಯಾಪಾರದ ನಿಜವಾದ ಗುರುತನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿ ಸಂದೇಶವನ್ನು ಆಧರಿಸಿ ನಿರ್ದಿಷ್ಟ ವ್ಯಾಪಾರವು ಆ ಕಂಟೆಂಟ್ ಅನ್ನು ಕಳುಹಿಸಿದೆ ಎಂಬುದನ್ನು ಪರಿಶೀಲಿಸುವ ಮೂಲಕ ಈ ಫೀಚರ್ ಕಾರ್ಯನಿರ್ವಹಿಸುತ್ತದೆ. ಸಂದೇಶವನ್ನು ಪರಿಶೀಲಿಸಿದಾಗ – ನಿಮ್ಮ ಸಂದೇಶಗಳನ್ನು Google ಗೆ ಕಳುಹಿಸದೆ ಪರಿಶೀಲನೆ ಮಾಡಲಾಗಿರುತ್ತದೆ – ನೀವು ವ್ಯಾಪಾರದ ಹೆಸರು ಮತ್ತು ಲೋಗೊ ಜೊತೆಗೆ ಸಂದೇಶ ಥ್ರೆಡ್‌ನಲ್ಲಿ ಪರಿಶೀಲನೆ ಬ್ಯಾಡ್ಜ್ ಅನ್ನು ನೋಡುತ್ತೀರಿ.
ನಿಮಗೆ ಸಂದೇಶಗಳನ್ನು ಕಳುಹಿಸುವ ವ್ಯಾಪಾರಗಳನ್ನು ಪರಿಶೀಲಿಸುವುದರ ಜೊತೆಗೆ, Messages ನಲ್ಲಿ ಸ್ಪ್ಯಾಮ್‌ನಿಂದ ನಿಮ್ಮನ್ನು ರಕ್ಷಿಸಲು ನಾವು ಕೆಲಸ ಮಾಡುತ್ತಿದ್ದೇವೆ. Messages ಗಾಗಿ ಸ್ಪ್ಯಾಮ್ ರಕ್ಷಣೆ ಮೂಲಕ, ನಾವು ಪತ್ತೆಹಚ್ಚಿದ ಅನುಮಾನಾಸ್ಪದ ಸ್ಪ್ಯಾಮ್ ಮತ್ತು ಅಸುರಕ್ಷಿತ ವೆಬ್‌ಸೈಟ್‌ಗಳ ಬಗ್ಗೆ ನಾವು ನಿಮಗೆ ಎಚ್ಚರಿಕೆ ನೀಡುತ್ತೇವೆ. Messages ನಲ್ಲಿ ಅನುಮಾನಾಸ್ಪದ ಸ್ಪ್ಯಾಮ್ ಎಚ್ಚರಿಕೆಯನ್ನು ನೀವು ನೋಡಿದರೆ, ಅದು ಸ್ಪ್ಯಾಮ್ ಹೌದೇ ಅಥವಾ ಅಲ್ಲವೇ ಎಂಬುದನ್ನು ನಮಗೆ ತಿಳಿಸುವ ಮೂಲಕ ನಮ್ಮ ಸ್ಪ್ಯಾಮ್ ಮಾಡೆಲ್‌ಗಳನ್ನು ಸುಧಾರಿಸಲು ನೀವು ನಮಗೆ ಸಹಾಯ ಮಾಡಬಹುದು. Messages ನಲ್ಲಿ ನೀವು ಯಾವಾಗ ಬೇಕಾದರೂ ಸ್ಪ್ಯಾಮ್ ಪಠ್ಯಗಳನ್ನು ವರದಿ ಮಾಡಬಹುದು ಮತ್ತು ಸಂಭಾಷಣೆಯನ್ನು ನಿರ್ಬಂಧಿಸಬಹುದು ಇದರಿಂದ ನೀವು ಭವಿಷ್ಯದ ಸಂದೇಶಗಳನ್ನು ಸ್ವೀಕರಿಸುವುದಿಲ್ಲ.
ಕಾಲ್ ಸ್ಕ್ರೀನ್
Pixel ಸಹ ಕಾಲ್ ಸ್ಕ್ರೀನ್ ಅನ್ನು ಹೊಂದಿದೆ,4 ಈ ಫೀಚರ್, ನೀವು ಕರೆಯನ್ನು ಸ್ವೀಕರಿಸುವ ಮೊದಲು ಯಾರು ಮತ್ತು ಏಕೆ ಕರೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚುವುದಕ್ಕೆ ನಿಮಗೆ ಸಹಾಯ ಮಾಡಲು Google Assistant ಅನ್ನು ಬಳಸುತ್ತದೆ. ಇದು ಸಮಯವನ್ನು ಉಳಿಸಲು ಮತ್ತು ಅನಗತ್ಯ ಕರೆಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು, ನಿಮ್ಮ ಕರೆಯ ಟ್ರಾನ್ಸ್‌ಕ್ರಿಪ್ಶನ್ ಸಂಪೂರ್ಣವಾಗಿ ನಿಮ್ಮ ಸಾಧನದಲ್ಲಿಯೇ ನಡೆಯುತ್ತದೆ. ಇನ್ನಷ್ಟು ತಿಳಿಯಿರಿ
Gboard
ಗ್ಲೈಡ್ ಟೈಪಿಂಗ್, ಧ್ವನಿ ಮತ್ತು ಗೆಸ್ಚರ್ ಸೇರಿದಂತೆ – ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ವಿಭಿನ್ನ ಮಾರ್ಗಗಳಲ್ಲಿ ಸಂವಹನ ನಡೆಸಲು Pixel ನ ಡೀಫಾಲ್ಟ್ ಕೀಬೋರ್ಡ್ ನಿಮಗೆ ಅನುಮತಿಸುತ್ತದೆ. ನೀವು 900+ ಭಾಷೆಗಳ ನಡುವೆ ಟಾಗಲ್ ಮಾಡಬಹುದು ಮತ್ತು ಆ್ಯಪ್‌ಗಳನ್ನು ಬದಲಾಯಿಸದೆ GIF ಗಳು, ಎಮೋಜಿಗಳು, ಸ್ಟಿಕ್ಕರ್‌ಗಳು ಮತ್ತು ಇತ್ಯಾದಿಗಳನ್ನು ಹಂಚಿಕೊಳ್ಳಬಹುದು. Gboard, ನೀವು ಟೈಪ್ ಮಾಡುವುದನ್ನು ಖಾಸಗಿಯಾಗಿರಿಸಲು, ಫೆಡರೇಟೆಡ್ ಲರ್ನಿಂಗ್ ಎಂಬ ಮಷಿನ್ ಲರ್ನಿಂಗ್ ವಿಧಾನವನ್ನು ಬಳಸುತ್ತದೆ. ನಿಮ್ಮ ಸಂದೇಶಗಳು ಸಾಧನದಲ್ಲಿಯೇ ಇರುವುದನ್ನು ಇದು ಖಾತ್ರಿಪಡಿಸುತ್ತದೆ. ಆದರೆ Gboard ನಲ್ಲಿ ಆಟೋಕರೆಕ್ಟ್, ಪದ ಸಲಹೆಗಳು ಮತ್ತು ಎಮೋಜಿ ಸಲಹೆಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಸುಧಾರಿಸಲು Google ಗೆ ಅವಕಾಶ ಮಾಡಿಕೊಡುತ್ತದೆ. ಇನ್ನಷ್ಟು ತಿಳಿಯಿರಿ
ಲೈವ್ ಕ್ಯಾಪ್ಶನ್
ಒಂದೇ ಟ್ಯಾಪ್‌ನಲ್ಲಿ, ಲೈವ್ ಕ್ಯಾಪ್ಶನ್5 ನಿಮ್ಮ ಫೋನ್‌ನಲ್ಲಿನ ಮಾಧ್ಯಮ ಮತ್ತು ಫೋನ್ ಕರೆಗಳನ್ನು ಸ್ವಯಂಚಾಲಿತವಾಗಿ ಟ್ರಾನ್ಸ್‌ಕ್ರೈಬ್ ಮಾಡುತ್ತದೆ. ನೀವು ಅದನ್ನು ಫೋನ್ ಕರೆಗಳಿಗಾಗಿ ಮತ್ತು ವೀಡಿಯೊಗಳು, ಪಾಡ್‌ಕಾಸ್ಟ್‌ಗಳು ಮತ್ತು ಆಡಿಯೊ ಸಂದೇಶಗಳಲ್ಲಿ ಬಳಸಬಹುದು - ನೀವೇ ರೆಕಾರ್ಡ್ ಮಾಡಿರುವ ವಿಷಯವನ್ನೂ ಸಹ ಬಳಸಬಹುದು. ನಿಮ್ಮ ಸಾಧನದಲ್ಲಿ ಲೈವ್ ಕ್ಯಾಪ್ಶನ್ ಕಾರ್ಯನಿರ್ವಹಿಸುತ್ತದೆ, ಹೀಗಾಗಿ ಮಾತುಗಳು ಪತ್ತೆಯಾದ ತಕ್ಷಣವೇ, ಕ್ಯಾಪ್ಶನ್‌ಗಳು ನಿಮ್ಮ ಸ್ಕ್ರೀನ್‌ನಲ್ಲಿ ಕಾಣಿಸುತ್ತವೆ. ಎಲ್ಲಾ ಡೇಟಾ ನಿಮ್ಮ ಫೋನ್‌ನಲ್ಲಿ ಉಳಿಯುತ್ತದೆ.
ಅತ್ಯುತ್ತಮ ಫೋಟೋ
ಅತ್ಯುತ್ತಮ ಫೋಟೋ ಫೀಚರ್ ಆನ್ ಮಾಡಿದಾಗ, ಬೆಳಕು, ಅಭಿವ್ಯಕ್ತಿಗಳು ಮತ್ತು ಸಂಯೋಜನೆಯಂತಹ ಗುಣಗಳ ಆಧಾರದ ಮೇಲೆ ಸಾಧನದಲ್ಲಿನ ಕಂಪ್ಯೂಟರ್ ವಿಷನ್ ಮಾಡೆಲ್ ನಿಮ್ಮ ಫೋಟೋಗಳಲ್ಲಿನ ಉತ್ತಮ ಫ್ರೇಮ್‌ಗಳನ್ನು ಗುರುತಿಸುತ್ತದೆ. ನಂತರ ಅತ್ಯುತ್ತಮ ಫೋಟೋ ಫೀಚರ್ ನಿಮಗೆ ಉತ್ತಮ ಚಿತ್ರಗಳನ್ನು ಶಿಫಾರಸು ಮಾಡುತ್ತದೆ. ಇದೆಲ್ಲವೂ ನಿಮ್ಮ ಫೋನ್‌ನಲ್ಲಿಯೇ ನಡೆಯುತ್ತದೆ ಮತ್ತು ನೀವು ಯಾವುದೇ ಪರ್ಯಾಯ ಫೋಟೋಗಳನ್ನು ಉಳಿಸಲು ಆಯ್ಕೆಮಾಡದ ಹೊರತು ಅವುಗಳನ್ನು ಕ್ಲೌಡ್‌ಗೆ ಅಪ್‌ಲೋಡ್ ಮಾಡಲಾಗುವುದಿಲ್ಲ.
Google Assistant6
ನಿಮ್ಮ ಧ್ವನಿಯನ್ನು ಬಳಸಿ ಹೆಚ್ಚಿನ ಪ್ರಯೋಜನವನ್ನು ಪಡೆಯಲು Google Assistant ನಿಮಗೆ ಸಹಾಯ ಮಾಡುತ್ತದೆ. ನಿಮ್ಮ Pixel ನ Google Assistant ಅನ್ನು ಸಕ್ರಿಯಗೊಳಿಸುವವರೆಗೆ, ಉದಾಹರಣೆಗೆ ನೀವು “Ok Google” ಎಂದು ಹೇಳುವವರೆಗೆ ಅದು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ನಿರೀಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಅದು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿರುವಾಗ, Google Assistant ನೀವು ಏನನ್ನು ಹೇಳುತ್ತಿರುವಿರಿ ಎಂಬುದನ್ನು Google ಅಥವಾ ಬೇರೆಯವರಿಗೆ ಕಳುಹಿಸುವುದಿಲ್ಲ.
Pixel, ನಿಮ್ಮ ಡೇಟಾವನ್ನು ರಕ್ಷಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನೀವು ಹಂಚಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ವಿವರವಾದ ನಿಯಂತ್ರಣಗಳನ್ನು ನೀಡುತ್ತದೆ.
Google Play Protect
Google Play Protect
Google Play ಸ್ಟೋರ್‌ನಲ್ಲಿರುವ ಎಲ್ಲಾ ಆ್ಯಪ್‌ಗಳು ಅನುಮೋದನೆ ಪಡೆಯುವ ಮೊದಲು ಕಠಿಣ ಭದ್ರತಾ ಪರೀಕ್ಷೆಗೆ ಒಳಗಾಗುತ್ತವೆ. ನಮ್ಮ ಮಷಿನ್ ಲರ್ನಿಂಗ್ ಸಿಸ್ಟಂ ಪ್ರತಿದಿನ 100 ಬಿಲಿಯನ್ ಆ್ಯಪ್‌ಗಳನ್ನು ಸ್ಕ್ಯಾನ್ ಮಾಡುತ್ತದೆ, ನಿಮ್ಮ ಸಾಧನ, ಡೇಟಾ ಮತ್ತು ಆ್ಯಪ್‌ಗಳನ್ನು ಮಾಲ್‌ವೇರ್‌ನಿಂದ ಸುರಕ್ಷಿತವಾಗಿರಿಸಲು ನಿರಂತರವಾಗಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಆ್ಯಪ್‌ಗಳನ್ನು ನೀವು ಎಲ್ಲಿಂದ ಡೌನ್‌ಲೋಡ್ ಮಾಡುತ್ತಿದ್ದೀರಿ ಎಂಬುದನ್ನು ಲೆಕ್ಕಿಸದೇ – ಅವುಗಳನ್ನು ಡೌನ್‌ಲೋಡ್ ಆಗುವ ಮೊದಲು, ಡೌನ್‌ಲೋಡ್ ಆಗುವ ಸಮಯದಲ್ಲಿ ಮತ್ತು ಡೌನ್‌ಲೋಡ್‌ನ ನಂತರ ಸ್ಕ್ಯಾನ್ ಮಾಡುತ್ತದೆ. ಇನ್ನಷ್ಟು ತಿಳಿಯಿರಿ
ಸುರಕ್ಷಿತ ಬ್ರೌಸಿಂಗ್
ನೀವು ಅಪಾಯಕಾರಿ ಸೈಟ್‌ಗಳಿಗೆ ನ್ಯಾವಿಗೇಟ್ ಮಾಡಲು ಅಥವಾ ಅಪಾಯಕಾರಿ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸಿದಾಗಲೆಲ್ಲಾ, ನಿಮಗೆ ಎಚ್ಚರಿಕೆಗಳನ್ನು ತೋರಿಸುವ ಮೂಲಕ ನಿಮ್ಮ Pixel ಅನ್ನು ಫಿಶಿಂಗ್ ದಾಳಿಯಿಂದ ರಕ್ಷಿಸಲು Google ನ ಸುರಕ್ಷಿತ ಬ್ರೌಸಿಂಗ್ ತಂತ್ರಜ್ಞಾನವು ಸಹಾಯ ಮಾಡುತ್ತದೆ. ಸುರಕ್ಷಿತ ಬ್ರೌಸಿಂಗ್, ವೆಬ್‌ಮಾಸ್ಟರ್‌ಗಳಿಗೆ ತಮ್ಮ ವೆಬ್‌ಸೈಟ್‌ಗಳು ದುರುದ್ದೇಶಪೂರಿತ ದಾಳಿಕೋರರ ಜೊತೆಗೆ ರಾಜಿ ಮಾಡಿಕೊಂಡಾಗ ತಿಳಿಸುತ್ತದೆ ಮತ್ತು ಸಮಸ್ಯೆಯನ್ನು ಪತ್ತೆಹಚ್ಚಲು ಮತ್ತು ಪರಿಹರಿಸಲು ಅವರಿಗೆ ಸಹಾಯ ಮಾಡುತ್ತದೆ.
ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದರ ಜೊತೆಗೆ ನಿಮ್ಮನ್ನು ಸುರಕ್ಷಿತವಾಗಿರಿಸಲು ಸುರಕ್ಷಿತ ಬ್ರೌಸಿಂಗ್ ಅನ್ನು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಸಾಧನದಲ್ಲಿ ಫ್ಲ್ಯಾಗ್ ಮಾಡಿದ ಸೈಟ್‌ಗಳ ಪಟ್ಟಿಯನ್ನು ಇದು ಸಂಗ್ರಹಿಸುತ್ತದೆ. ಪಟ್ಟಿಯಲ್ಲಿರುವ ಸೈಟ್‌ಗೆ ನೀವು ಭೇಟಿ ನೀಡಿದರೆ, ನಿಮ್ಮ ಬ್ರೌಸರ್ Google ಗೆ ಸೈಟ್ URL ನ ಭಾಗಶಃ ನಕಲನ್ನು ಕಳುಹಿಸುತ್ತದೆ ಇದರಿಂದ ನಾವು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ನೀವು ಹಂಚಿಕೊಳ್ಳುವ ಮಾಹಿತಿಯಿಂದ ನೀವು ನಿಜವಾಗಿಯೂ ಯಾವ ಸೈಟ್‌ಗೆ ಭೇಟಿ ನೀಡಿದ್ದೀರಿ ಎಂಬುದು Google ಗೆ ತಿಳಿಯುವುದಿಲ್ಲ. ಇನ್ನಷ್ಟು ತಿಳಿಯಿರಿe
ಅನುಮತಿಗಳು
ನಿಮ್ಮ ಫೋಟೋಗಳು ಅಥವಾ ಸ್ಥಳದಂತಹ ಸೂಕ್ಷ್ಮ ಡೇಟಾವನ್ನು ಪ್ರವೇಶಿಸುವ ಮೊದಲು, ನೀವು ಡೌನ್‌ಲೋಡ್ ಮಾಡಿದ ಆ್ಯಪ್‌ಗಳು ನಿಮ್ಮ ಅನುಮತಿಯನ್ನು ಪಡೆಯಬೇಕಾಗುತ್ತದೆ. ಅನುಮತಿ ವಿನಂತಿಗಳನ್ನು ಸಂದರ್ಭೋಚಿತವಾಗಿ ವಿನ್ಯಾಸಗೊಳಿಸಲಾಗಿದೆ, ಆದ್ದರಿಂದ ಆ ಕ್ಷಣದಲ್ಲಿ ನಿಮಗೆ ಅಗತ್ಯವಾಗುವವರೆಗೂ ನೀವು ಅವುಗಳನ್ನು ಪಡೆಯುವುದಿಲ್ಲ. ನೀವು ಎಂದಾದರೂ ನಿಮ್ಮ ಮನಸ್ಸನ್ನು ಬದಲಾಯಿಸಿದರೆ, ನೀವು ಸೆಟ್ಟಿಂಗ್‌ಗಳಲ್ಲಿ ಯಾವಾಗ ಬೇಕಾದರೂ ಅನುಮತಿಗಳನ್ನು ಆಫ್ ಮಾಡಬಹುದು. ನಿಮ್ಮ ಸ್ಥಳದ ಡೇಟಾಗೆ ಸಂಬಂಧಿಸಿದಂತೆ, ಹಿನ್ನೆಲೆಯಲ್ಲಿ ನಿಮ್ಮ ಸ್ಥಳವನ್ನು ಪ್ರವೇಶಿಸುವುದಕ್ಕೆ ನಿರ್ದಿಷ್ಟ ಆ್ಯಪ್‌ಗಳಿಗೆ ಅನುಮತಿ ನೀಡಲು ನೀವು ಹೆಚ್ಚುವರಿ ನಿಯಂತ್ರಣಗಳನ್ನು ಹೊಂದಿದ್ದೀರಿ, ಆ್ಯಪ್ ಬಳಸುವಾಗ ಮಾತ್ರ ನಿಮ್ಮ ಸ್ಥಳಕ್ಕೆ ಪ್ರವೇಶಿಸಬಹುದು ಅಥವಾ ಯಾವುದೇ ಪ್ರವೇಶವಿಲ್ಲ.
Google ಖಾತೆ ಸೆಟ್ಟಿಂಗ್‌ಗಳು
Google ಪ್ರಾಡಕ್ಟ್‌ಗಳು ಮತ್ತು ಸೇವೆಗಳಾದ YouTube, Search ಮತ್ತು Google Maps ನಿಮ್ಮ ಚಟುವಟಿಕೆಯ ಡೇಟಾವನ್ನು ಹೆಚ್ಚು ಉಪಯುಕ್ತವಾಗಿಸಲು ಮತ್ತು ಸೂಕ್ತವಾಗಿಸಲು ಬಳಸುತ್ತವೆ. ಆದರೆ ಈ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲಿನ ನಿಯಂತ್ರಣವು ನಿಮಗೆ ಸೇರಿದ ವೈಯಕ್ತಿಕ ಆಯ್ಕೆಯಾಗಿದೆ. ನಾವು ಯಾವ ಡೇಟಾವನ್ನು ಸಂಗ್ರಹಿಸುತ್ತೇವೆ, ಅದನ್ನು ಹೇಗೆ ಮತ್ತು ಏಕೆ ಬಳಸುತ್ತೇವೆ ಎಂಬುದರ ಕುರಿತಾದ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ನಿಮ್ಮ Google ಖಾತೆಯಲ್ಲಿ ಬಳಸಲು ಸುಲಭವಾಗುವ ಡೇಟಾ ನಿಯಂತ್ರಣಗಳನ್ನು ನಾವು ನಿರ್ಮಿಸಿದ್ದೇವೆ, ಆದ್ದರಿಂದ ನಿಮಗೆ ಸೂಕ್ತವಾದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀವು ಆಯ್ಕೆಮಾಡಬಹುದು. ಇನ್ನಷ್ಟು ತಿಳಿಯಿರಿ
Pixel ಶಾಪಿಂಗ್ ಮಾಡಿ.
1 ಈ ಸಾಧನವು ಯುನೈಟೆಡ್ ಸ್ಟೇಟ್ಸ್ನ Google Store ನಲ್ಲಿ ಮೊದಲು ಲಭ್ಯವಾದಾಗಿನಿಂದ ಕನಿಷ್ಠ 3 ವರ್ಷಗಳವರೆಗೆ Android ಆವೃತ್ತಿಯು ಅಪ್‌ಡೇಟ್ ಆಗುತ್ತದೆ. ವಿವರಗಳಿಗಾಗಿ g.co/pixel/updates ವೀಕ್ಷಿಸಿ.
2 ಸ್ಥಳವನ್ನು ಆನ್ ಮಾಡುವ ಅಗತ್ಯವಿರುತ್ತದೆ: https://support.google.com/android/answer/6160491?hl=en.
3 ಯುನೈಟೆಡ್ ಸ್ಟೇಟ್ಸ್, ಕೆನಡಾ, ಸಿಂಗಾಪೂರ್, ಆಸ್ಟ್ರೇಲಿಯಾ, ಜಪಾನ್, ತೈವಾನ್ ಮತ್ತು ಹೆಚ್ಚಿನ ಯುರೋಪಿಯನ್ ದೇಶಗಳಲ್ಲಿ Motion Sense ಕ್ರಿಯಾತ್ಮಕವಾಗಿದೆ. ಎಲ್ಲಾ ಫೋನ್ ಫೀಚರ್‌ಗಳನ್ನು Motion Sense ನಿಯಂತ್ರಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ g.co/pixel/motionsense. ನೋಡಿ
4 ಎಲ್ಲಾ ಭಾಷೆಗಳಲ್ಲಿ ಅಥವಾ ದೇಶಗಳಲ್ಲಿ ಲಭ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ, g.co/help/callscreen. ನೋಡಿ
5 ಇಂಗ್ಲಿಷ್ ಮಾತ್ರ. ಲೈವ್ ಕ್ಯಾಪ್ಶನ್ನ ನಿಖರತೆಯು ಆಡಿಯೊ ಸೋರ್ಸ್ನ ಗುಣಮಟ್ಟ ಮತ್ತು ಸ್ಪಷ್ಟತೆಯನ್ನು ಅವಲಂಬಿಸಿರುತ್ತದೆ. ಸಂಗೀತಕ್ಕೆ ಅನ್ವಯಿಸುವುದಿಲ್ಲ ಮತ್ತು ಎಲ್ಲಾ ಮಾಧ್ಯಮ ಆ್ಯಪ್‌ಗಳಲ್ಲಿ ಲಭ್ಯವಿಲ್ಲ.
6 ಇಂಗ್ಲಿಷ್ ಮಾತ್ರ. ದೇಶ ಮತ್ತು ಭಾಷೆಯ ಲಭ್ಯತೆ ಮತ್ತು Google ಖಾತೆಯ ಅಗತ್ಯತೆಗಳಿಗಾಗಿ g.co/pixelassistant/languages ನೋಡಿ.