ಜೀವನದ ನೆನಪುಗಳಿಗೆ ಸುರಕ್ಷಿತ ಮನೆ.

Google Photos, ಸ್ವಯಂಚಾಲಿತವಾಗಿ ವ್ಯವಸ್ಥಿತಗೊಳಿಸಿರುವ ಮತ್ತು ಸುಲಭವಾಗಿ ಹಂಚಿಕೊಳ್ಳುವ ಎಲ್ಲಾ ಫೋಟೋಗಳ ಮತ್ತು ವೀಡಿಯೊಗಳ ಆಗರವಾಗಿದೆ. ನಾವು ಸುಧಾರಿತ ಸುರಕ್ಷತೆಯ ಮೂಲಸೌಕರ್ಯ ಮತ್ತು ಬಳಸಲು ಸುಲಭವಾದ ಗೌಪ್ಯತೆಯ ನಿಯಂತ್ರಣಗಳ ಮೇಲೆ ಗಮನಹರಿಸುತ್ತೇವೆ. ಹೀಗೆ ನಿಮ್ಮ ನೆನಪಿನ ಕ್ಷಣಗಳನ್ನು ನೀವು ಸುರಕ್ಷಿತವಾಗಿ ಶೇಖರಿಸಬಹುದು ಮತ್ತು ಹಂಚಿಕೊಳ್ಳಬಹುದು.

Google Photos
ನಿಮ್ಮ ನೆನಪುಗಳನ್ನು ಸುರಕ್ಷಿತವಾಗಿಡಲು Google Photos ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತದೆ.
ನಿಮ್ಮ ನೆನಪುಗಳನ್ನು ಸುರಕ್ಷಿತವಾಗಿರಿಸುವುದು
ಗ್ರಾಹಕೀಕರಿಸಿದ ಡೇಟಾ ಕೇಂದ್ರಗಳಿಂದ ಹಿಡಿದು ಖಂಡಾಂತರ ಫೈಬರ್-ಆಪ್ಟಿಕ್ ಕೇಬಲ್‌ಗಳವರೆಗೆ ನಿಮ್ಮ ನೆನಪುಗಳನ್ನು ಸುರಕ್ಷಿತವಾಗಿಡುವುದಕ್ಕೆ ಸಹಾಯ ಮಾಡಲು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಸುಧಾರಿತ ಸುರಕ್ಷತೆಯ ಮೂಲಸೌಕರ್ಯಗಳಲ್ಲಿ ಒಂದನ್ನು ನಾವು ನಿರ್ವಹಿಸುತ್ತೇವೆ.

ಸುರಕ್ಷಿತ ಸಂಗ್ರಹಣೆ

Google ಸೇವೆಗಳನ್ನು ವಿಶ್ವದ ಸುಧಾರಿತ ಭದ್ರತಾ ಮೂಲಸೌಕರ್ಯವನ್ನು ಬಳಸಿಕೊಂಡು ನಿರಂತರವಾಗಿ ರಕ್ಷಿಸಲಾಗಿದೆ. ಈ ಅಂತರ್ನಿರ್ಮಿತ ಭದ್ರತೆಯು, ಆನ್‌ಲೈನ್ ಬೆದರಿಕೆಗಳನ್ನು ಪತ್ತೆಹಚ್ಚುತ್ತದೆ ಮತ್ತು ಅವುಗಳನ್ನು ತಡೆಯಲು ಸಹಾಯ ಮಾಡುತ್ತದೆ, ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿಯು ಸುರಕ್ಷಿತವಾಗಿರುತ್ತದೆ ಎಂದು ನೀವು ವಿಶ್ವಾಸವಿಡಬಹುದು.

ಡೇಟಾವನ್ನು ಜವಾಬ್ದಾರಿಯುತವಾಗಿ ಪರಿಗಣಿಸುವುದು
ಜನರು ವಿಭಿನ್ನ ಆ್ಯಪ್‌ಗಳು ಮತ್ತು ಸಾಧನಗಳಲ್ಲಿ ತಮ್ಮ ಫೋಟೋಗಳೊಂದಿಗೆ ಸಂವಹನ ನಡೆಸುತ್ತಾರೆ. ನೀವು ಸೆರೆಹಿಡಿಯುವ ಫೋಟೋಗಳ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲು ಸುಲಭವಾಗುವಂತೆ ನಾವು ಕೆಲಸ ಮಾಡುತ್ತಿರುವಾಗ, ಈ ಅನುಕೂಲಕರ ಕ್ಷಣಗಳನ್ನು Google Photos ಆ್ಯಪ್ ಮತ್ತು ವೆಬ್ ಅನುಭವವನ್ನು ಮೀರುವಂತೆ ಜವಾಬ್ದಾರಿಯುತವಾಗಿ ವಿಸ್ತಾರಗೊಳಿಸಬೇಕು.

ಮುಖ ಗುಂಪು ಮಾಡುವಿಕೆ

ಮುಖ ಗುಂಪು ಮಾಡುವಿಕೆಯು ಸ್ವಯಂಚಾಲಿತವಾಗಿ ಒಂದೇ ರೀತಿಯ ಮುಖಗಳನ್ನು ಗುಂಪು ಮಾಡುತ್ತದೆ ಮತ್ತು ನಿಮ್ಮ ಫೋಟೋಗಳನ್ನು ಹುಡುಕಲು ಮತ್ತು ನಿರ್ವಹಿಸಲು ಸುಲಭವಾಗುವಂತೆ ಅವುಗಳನ್ನು ನಿಮಗಾಗಿ ವಿಂಗಡಿಸುತ್ತದೆ. ಮುಖದ ಗುಂಪುಗಳು ಮತ್ತು ಲೇಬಲ್‌ಗಳು ನಿಮಗೆ ಮಾತ್ರ ಗೋಚರಿಸುತ್ತವೆ. ಮುಖ ಗುಂಪು ಮಾಡುವಿಕೆ ಆನ್ ಅಥವಾ ಆಫ್ ಆಗಿದೆಯೆ ಎನ್ನುವುದನ್ನು ನೀವು ನಿಯಂತ್ರಿಸುತ್ತೀರಿ ಮತ್ತು ನೀವು ಅದನ್ನು ಆಫ್ ಮಾಡಿದರೆ, ಮುಖದ ಗುಂಪುಗಳನ್ನು ನಿಮ್ಮ ಖಾತೆಯಿಂದ ಅಳಿಸಲಾಗುತ್ತದೆ. ನಾವು ಸಾಮಾನ್ಯ ಉದ್ದೇಶದ ಮುಖ ಗುರುತಿಸುವಿಕೆಯ ತಂತ್ರಜ್ಞಾನವನ್ನು ನಾವು ವಾಣಿಜ್ಯಿಕವಾಗಿ ಒದಗಿಸುವುದಿಲ್ಲ. ಇನ್ನಷ್ಟು ತಿಳಿಯಿರಿ.

ನಿಮಗೆ ನಿಯಂತ್ರಣ ನೀಡಲಾಗುತ್ತಿದೆ
ಡೇಟಾವು Google Photos ಅನ್ನು ಹೆಚ್ಚು ಉಪಯುಕ್ತ ಮತ್ತು ಸೂಕ್ತವಾಗಿಸುತ್ತದೆ, ಆದರೆ ನಿಮ್ಮ ಅನುಭವದ ಮೇಲೆ ನೀವು ನಿಯಂತ್ರಣ ಸಾಧಿಸಲು ನಾವು ಸಹಾಯ ಮಾಡಲು ಬಯಸುತ್ತೇವೆ. ನಮ್ಮ ಪ್ರಾಡಕ್ಟ್‌ಗಳಲ್ಲಿ ಬಳಸಲು ಸುಲಭವಾದ ಪರಿಕರಗಳನ್ನು ನಾವು ನಿರ್ಮಿಸಿದ್ದೇವೆ, ಅದು ನಿಮಗೆ ನಿಯಂತ್ರಣ ನೀಡುತ್ತದೆ ಮತ್ತು ನಿಮಗೆ ಸೂಕ್ತವಾದ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಲು ಅವಕಾಶ ಮಾಡಿಕೊಡುತ್ತದೆ.

ಆಯ್ದ ಬ್ಯಾಕಪ್

ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು Google Photos ನಲ್ಲಿ ಬ್ಯಾಕಪ್ ಮಾಡಲು ನೀವು ಆಯ್ಕೆಮಾಡಬಹುದು ಅಥವಾ ನಿಮ್ಮ Google ಖಾತೆಯಲ್ಲಿ ಸಂಗ್ರಹಿಸಲು ಬಯಸುವ ಫೋಟೋಗಳನ್ನು ಮಾತ್ರ ನೀವು ಆಯ್ಕೆಮಾಡಬಹುದು.

ಸುರಕ್ಷಿತ ಹಂಚಿಕೊಳ್ಳುವಿಕೆ
ಇದು ಒಂದೇ ಫೋಟೋ ಆಗಿರಲಿ ಅಥವಾ ಸಂಪೂರ್ಣ ಆಲ್ಬಂ ಆಗಿರಲಿ, ನಿಮ್ಮ ನೆನಪುಗಳನ್ನು ಯಾರ ಜೊತೆಗೆಲ್ಲಾ ಹಂಚಿಕೊಳ್ಳಬಹುದೆಂದು ನೀವು ನಿಯಂತ್ರಿಸುತ್ತೀರಿ. ಸುಲಭ ಮತ್ತು ಸುರಕ್ಷಿತ ನಿಯಂತ್ರಣಗಳು ನಿಮ್ಮ ಕಂಟೆಂಟ್ ಅನ್ನು ನಿರ್ದಿಷ್ಟ ಜನರೊಂದಿಗೆ ಹಂಚಿಕೊಳ್ಳಲು ನಿಮಗೆ ಅನುಮತಿಸುತ್ತವೆ ಅಥವಾ ಅದನ್ನು ಹೆಚ್ಚು ವಿಶಾಲವಾಗಿ ಹಂಚಿಕೊಳ್ಳಲು ನೀವು ಹಂಚಿಕೊಳ್ಳಬಹುದಾದ ಲಿಂಕ್ ಅನ್ನು ಬಳಸಬಹುದು.

ಆಲ್ಬಮ್ ಹಂಚಿಕೊಳ್ಳುವಿಕೆ

ನೀವು ಆಲ್ಬಮ್ ಅನ್ನು ಹಂಚಿಕೊಂಡಾಗ, ನಿರ್ದಿಷ್ಟ ವ್ಯಕ್ತಿ ಅಥವಾ ಜನರೊಂದಿಗೆ ಅವರ Google ಖಾತೆಯ ಮೂಲಕ ಹಂಚಿಕೊಳ್ಳುವುದು ಡೀಫಾಲ್ಟ್ ಆಯ್ಕೆಯಾಗಿರುತ್ತದೆ. ಆಲ್ಬಮ್‌ನಲ್ಲಿ ಯಾರನ್ನು ಸೇರಿಸಬೇಕು ಎಂಬುದರ ಕುರಿತು ಇದು ನಿಮಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ಲಿಂಕ್ ಮೂಲಕ ಹಂಚಿಕೊಳ್ಳುವ ಆಯ್ಕೆಯೂ ನಿಮಗಿದೆ, ಇದು Google Photos ಬಳಸದ ಅಥವಾ Google ಖಾತೆಯನ್ನು ಹೊಂದಿರದ ಜನರೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುವುದನ್ನು ಸುಲಭಗೊಳಿಸುತ್ತದೆ. ನಿಮ್ಮ ಆಲ್ಬಮ್‌ಗಳ ಹಂಚಿಕೊಳ್ಳುವಿಕೆ ಸೆಟ್ಟಿಂಗ್‌ಗಳನ್ನು ನೀವು ಯಾವಾಗ ಬೇಕಾದರೂ ಅಪ್‌ಡೇಟ್ ಮಾಡಬಹುದು ಮತ್ತು ಪ್ರತಿ ಆಲ್ಬಮ್‌ಗೆ ಯಾರು ಪ್ರವೇಶವನ್ನು ಹೊಂದಿದ್ದಾರೆ ಎಂಬುದನ್ನು ನಿಯಂತ್ರಿಸಬಹುದು.

Google Photos ನಲ್ಲಿ ಉಚಿತ ಸಂಗ್ರಹಣೆಯನ್ನು ಬಳಸಿ ನಿಮ್ಮ ಫೋಟೋಗಳನ್ನು ರಕ್ಷಿಸಿ.
Google Photos
ಎಕ್ಸ್‌ಪ್ಲೋರ್ ಮಾಡಿ.
ನಾವು ತಯಾರಿಸುವ ಪ್ರತಿಯೊಂದು ಪ್ರೊಡಕ್ಟ್‌ನಲ್ಲೂ
ಸುರಕ್ಷತೆಯನ್ನು ಹೇಗೆ ನಿರ್ಮಿಸಲಾಗಿದೆ ಎಂದು ತಿಳಿಯಿರಿ.