ಪಾವತಿಸಲು ಹೆಚ್ಚು ಸುರಕ್ಷಿತ ವಿಧಾನ
ಪ್ರತಿ ದಿನವೂ.
ಪ್ರತಿ ಪಾವತಿಯ ಸಂದರ್ಭದಲ್ಲಿ ಮತ್ತು ನಂತರದಲ್ಲಿ ನಿಮ್ಮನ್ನು ರಕ್ಷಿಸುವುದಕ್ಕಾಗಿ ಬಿಲ್ಟ್ ಇನ್ ಆಗಿರುವ ಸುರಕ್ಷತೆ, ನಿಮ್ಮ ಕಾರ್ಡ್ ಅನ್ನು ಸ್ವೈಪ್ ಮಾಡುವುದು ಅಥವಾ ನಗದಿನೊಂದಿಗೆ ಪಾವತಿಸುವುದಕ್ಕಿಂತ Google Pay ಬಳಸುವುದು ಸುರಕ್ಷಿತವಾಗಿರುತ್ತದೆ.
ನಿಮ್ಮ ಪಾವತಿಯ ಮಾಹಿತಿಯನ್ನು ಸುರಕ್ಷಿತವಾಗಿರಿಸಿ
ನಿಮ್ಮ ಪಾವತಿಯ ಮಾಹಿತಿಯನ್ನು ಸುರಕ್ಷಿತವಾಗಿರಿಸಿ
ಪಾವತಿಸಲು ನೀವು ಟ್ಯಾಪ್ ಮಾಡಿದಾಗ, ವ್ಯಾಪಾರಿಗೆ ನಿಮ್ಮ ನೈಜ ಕಾರ್ಡ್ ಸಂಖ್ಯೆಯ ಬದಲಾಗಿ Google Pay ವರ್ಚುವಲ್ ಖಾತೆ ಸಂಖ್ಯೆಯನ್ನು ಕಳುಹಿಸುತ್ತದೆ – ಹಾಗಾಗಿ ನಿಮ್ಮ ಪಾವತಿ ಮಾಹಿತಿಯು ಸುರಕ್ಷಿತವಾಗಿರುತ್ತದೆ.
ನೀವು ಪಾವತಿಸುವ ಮೊದಲು ಬಿಲ್ಟ್-ಇನ್ ಸುರಕ್ಷತೆ
ನೀವು ಪಾವತಿಸುವ ಮೊದಲು ಬಿಲ್ಟ್-ಇನ್ ಸುರಕ್ಷತೆ
Google Pay ನೊಂದಿಗೆ ಇನ್ನಷ್ಟು ಭದ್ರತಾ ಪದರವನ್ನು ಸೇರಿಸಲು ಪರದೆ ಲಾಕ್ ಅನ್ನು ಹೊಂದಿಸಿ. ಪಾವತಿಸಲು ಟ್ಯಾಪ್ ಮಾಡುವ ಮೊದಲು ನಿಮ್ಮ ಸಾಧನವನ್ನು ವೈಯಕ್ತಿಕ ಪಿನ್,* ಪ್ಯಾಟರ್ನ್, ಅಥವಾ ಫಿಂಗರ್ಪ್ರಿಂಟ್ನೊಂದಿಗೆ ಅನ್ಲಾಕ್ ಮಾಡಬೇಕಾಗುತ್ತದೆ – ಹಾಗಾಗಿ ನಿಮ್ಮ ಖರೀದಿಗಳು ಸುರಕ್ಷಿತವಾಗಿರುತ್ತವೆ.
*ರಾಷ್ಟ್ರವನ್ನು ಆಧರಿಸಿ ಅನ್ಲಾಕ್ ಅಗತ್ಯತೆಗಳು ಬದಲಾಗುತ್ತವೆ.
ಎಲ್ಲಿಂದಲಾದರೂ ನಿಮ್ಮ ಫೋನ್ ಅನ್ನು ಲಾಕ್ ಮಾಡಿ
ಎಲ್ಲಿಂದಲಾದರೂ ನಿಮ್ಮ ಫೋನ್ ಅನ್ನು ಲಾಕ್ ಮಾಡಿ
ನಿಮ್ಮ ಫೋನ್ ಎಂದಾದರೂ ಕಳೆದುಹೋದರೆ ಅಥವಾ ಕಳ್ಳತನವಾದರೆ, ರಹಸ್ಯವಾಗಿ ಅದನ್ನು ಲಾಕ್ ಮಾಡಲು, ನಿಮ್ಮ Google ಖಾತೆಯನ್ನು ಲಾಗ್ ಔಟ್ ಮಾಡಲು ಅಥವಾ ನಿಮ್ಮ ಡೇಟಾವನ್ನು ಅಳಿಸಲು ನೀವು Google Find My Device ಅನ್ನು ಬಳಸಬಹುದು. ಇದು ನಿಮ್ಮ ಪಾವತಿ ಮಾಹಿತಿಯನ್ನು ಸುರಕ್ಷಿತವಾಗಿರಿಸುತ್ತದೆ.
ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆ
ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆ
ನಿಮ್ಮ Google ಖಾತೆಯಲ್ಲಿ ಉಳಿಸಲಾಗಿರುವ ಪಾವತಿ ವಿಧಾನಗಳು Google ನ ಖಾಸಗಿ ಸರ್ವರ್ಗಳಲ್ಲಿ ಗೌಪ್ಯವಾಗಿ ಸಂಗ್ರಹವಾಗುತ್ತದೆ. ನೀವು ಆನ್ಲೈನ್ನಲ್ಲಿ ಪಾವತಿಸುವಾಗ, Google Pay ನಿಮ್ಮ ಡೇಟಾವನ್ನು ಎನ್ಕ್ರಿಪ್ಟ್ ಮಾಡುತ್ತದೆಯಾದ್ದರಿಂದ ನಿಮ್ಮ ಪಾವತಿಯು ಟ್ರಾನ್ಸಿಟ್ನಲ್ಲಿ ಸುರಕ್ಷಿತವಾಗಿರುತ್ತದೆ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಎಂದಿಗೂ ಮಾರಾಟ ಮಾಡುವುದಿಲ್ಲ
ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಮಾರುವುದಿಲ್ಲ. ನೀವು Google Pay ಮೂಲಕ ಪಾವತಿಸುವಾಗ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಥರ್ಡ್ ಪಾರ್ಟಿಗೆ ಮಾರಲಾಗುವುದಿಲ್ಲ.