ಫ್ಯಾಮಿಲಿ ಲಿಂಕ್ನಲ್ಲಿ ಡಿಜಿಟಲ್ ಮೂಲ ನಿಯಮಗಳನ್ನು
ಸೆಟ್ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಮಗುವಿನ ಖಾತೆಗಳು ಮತ್ತು ಸಾಧನಗಳು ಆನ್ಲೈನ್ನಲ್ಲಿ ಎಕ್ಸ್ಪ್ಲೋರ್ ಆಗುತ್ತಿರುವಾಗಲೇ ನಿರ್ವಹಿಸಲು ನಿಮಗೆ ಫ್ಯಾಮಿಲಿ ಲಿಂಕ್ ಸಹಾಯ ಮಾಡುತ್ತದೆ. ನೀವು ಆ್ಯಪ್ಗಳನ್ನು ನಿರ್ವಹಿಸಬಹುದು, ವೀಕ್ಷಣಾ ಅವಧಿಯ ಮೇಲೆ ಒಂದು ಕಣ್ಣಿಡಬಹುದು ಮತ್ತು ನಿಮ್ಮ ಕುಟುಂಬಕ್ಕೆ ಡಿಜಿಟಲ್ ಮೂಲ ನಿಯಮಗಳನ್ನು ಸೆಟ್ ಮಾಡಲು ಸಹಾಯ ಮಾಡುತ್ತದೆ.
-
ಆ್ಯಪ್ ಚಟುವಟಿಕೆ ವರದಿಗಳು
ಎಲ್ಲಾ ವೀಕ್ಷಣಾ ಅವಧಿಗಳನ್ನು ಸಮನಾಗಿ ರಚಿಸಲಾಗಿಲ್ಲ. ಇದು ನಿಮ್ಮ ಮಗು ಸಾಧನವನ್ನು ಪುಸ್ತಕ ಓದಲು, ವೀಡಿಯೊಗಳನ್ನು ವೀಕ್ಷಿಸಲು ಅಥವಾ ಆಟಗಳನ್ನು ಆಡಲು ಬಳಸುತ್ತಿದ್ದಾರೆಯೇ ಎಂಬುದನ್ನು ಅದು ಅವಲಂಬಿಸಿರಬಹುದು. ನಿಮ್ಮ ಮಗು ಹೆಚ್ಚಾಗಿ ಯಾವ ಆ್ಯಪ್ ಬಳಸುತ್ತಿದೆ ಎಂಬುದನ್ನು ಗಮನಿಸಲು ನೀವು Family Link ನ ಆ್ಯಪ್ ಚಟುವಟಿಕೆಯನ್ನು ಬಳಸಬಹುದು ಮತ್ತು ಅವರಿಗೆ ಯಾವುದಕ್ಕೆ ಪ್ರವೇಶ ನೀಡಬೇಕು ಅಥವಾ ನೀಡಬಾರದು ಎಂಬುದರ ಕುರಿತು ನಿರ್ಧಾರಗಳನ್ನು ಕೈಗೊಳ್ಳಬಹುದು.
-
ದೈನಂದಿನ ಪ್ರವೇಶವನ್ನು ಮಿತಿಗೊಳಿಸಿ
ನಿಮ್ಮ ಮಗುವಿಗೆ ಸರಿಯಾದ ವೀಕ್ಷಣಾ ಅವಧಿಯನ್ನು ನೀವು ನಿರ್ಧರಿಸಿ. ನಿಮ್ಮ ಮಗುವಿನ Android ಸಾಧನದಲ್ಲಿ ದೈನಂದಿನ ವೀಕ್ಷಣಾ ಅವಧಿಯ ಮಿತಿಯನ್ನು ಹೊಂದಿಸಲು, ಸಾಧನದ ಮಲಗುವ ಸಮಯವನ್ನು ಹೊಂದಿಸಲು ಮತ್ತು ದೂರದಿಂದಲೇ ನಿಮ್ಮ ಮಗುವಿನ Android ಅಥವಾ Chrome OS ಸಾಧನವನ್ನು ಲಾಕ್ ಮಾಡಲು Family Link ನಿಮಗೆ ಅನುಮತಿಸುತ್ತದೆ.
-
ಕಂಟೆಂಟ್ ಮತ್ತು ಖರೀದಿಗಳನ್ನು ನಿರ್ವಹಿಸಿ
Google Play ಸ್ಟೋರ್ ನಿಂದ ಆ್ಯಪ್ ಡೌನ್ಲೋಡ್ಗಳನ್ನು ಮತ್ತು ನಿಮ್ಮ ಮಗು ಮಾಡಬಯಸುವ ಅಪ್ಲಿಕೇಶನ್ನಲ್ಲಿನ ಖರೀದಿಗಳನ್ನು ಅನುಮತಿಸಿ ಅಥವಾ ನಿರಾಕರಿಸಿ.
ಖಾತೆ ಸೆಟ್ಟಿಂಗ್ಗಳನ್ನು ನಿರ್ವಹಿಸಿ
ನಿಮ್ಮ ಮಗುವಿನ ಖಾತೆಯನ್ನು ನಿರ್ವಹಿಸಲಾಗುತ್ತಿದೆ ಮತ್ತು ಭದ್ರಪಡಿಸಲಾಗುತ್ತಿದೆ
ಫ್ಯಾಮಿಲಿ ಲಿಂಕ್ ಸೆಟ್ಟಿಂಗ್ಗಳಲ್ಲಿ ನಿಮ್ಮ ಮಗುವಿನ ಚಟುವಟಿಕೆ ನಿಯಂತ್ರಣಗಳನ್ನು ಪ್ರವೇಶಿಸಿ. ನಿಮ್ಮ ಮಗು ತಮ್ಮ ಪಾಸ್ವರ್ಡ್ ಮರೆತಾಗ, ಒಬ್ಬ ಪೋಷಕರಾಗಿ ನೀವು ಅದನ್ನು ಬದಲಾಯಿಸಲು ಅಥವಾ ರೀಸೆಟ್ ಮಾಡಲು ಸಹಾಯ ಮಾಡಬಹುದು. ನಿಮ್ಮ ಮಗುವಿನ ವೈಯಕ್ತಿಕ ಮಾಹಿತಿಯನ್ನು ಸಹ ನೀವು ಎಡಿಟ್ ಮಾಡಬಹುದು ಅಥವಾ ಅಗತ್ಯವೆನಿಸಿದರೆ, ಅವರ ಖಾತೆಯನ್ನು ಕೂಡ ಅಳಿಸಿಹಾಕಬಹುದು. ನಿಮ್ಮ ಅನುಮತಿಯಿಲ್ಲದೆ ಅವರು ತಮ್ಮ ಖಾತೆಗೆ ಅಥವಾ ಸಾಧನಕ್ಕೆ ಇನ್ನೊಂದು ಪ್ರೊಫೈಲ್ ಅನ್ನು ಸೇರಿಸಲಾಗುವುದಿಲ್ಲ. ಅಂತಿಮವಾಗಿ, ಅವರ Android ಸಾಧನದ ಸ್ಥಳವನ್ನು ನೋಡಲು ಪರಿಶೀಲಿಸಬಹುದು (ಎಲ್ಲಿಯವರೆಗೂ ಸಾಧನವು ಆನ್ ಆಗಿರುವುದೋ, ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದೋ ಮತ್ತು ಇತ್ತೀಚೆಗೆ ಸಕ್ರಿಯವಾಗಿರುವುದೋ).
ನಿಮ್ಮ ಕುಟುಂಬದ ಡಿಜಿಟಲ್ ಮೂಲ ನಿಯಮಗಳ ಪ್ರಕಾರ ಯೋಚಿಸಲು ನಮ್ಮ ಕುಟುಂಬ ಗೈಡ್ ಅನ್ನು ಪರಿಶೀಲಿಸಿ. ನಿಮ್ಮ ಮಗುವಿನೊಂದಿಗೆ ತಂತ್ರಜ್ಞಾನದ ಬಗೆಗಿನ ಸಂಭಾಷಣೆಗಳನ್ನು ಉಲ್ಲಸಿತಗೊಳಿಸಲು ಇರುವ ಸಲಹೆಗಳೊಂದಿಗೆ, ನೀವು ಮತ್ತು ನಿಮ್ಮ ಕುಟುಂಬ ಇನ್ನಷ್ಟು ವಿಶ್ವಾಸದೊಂದಿಗೆ ಜೊತೆಯಾಗಿ ಡಿಜಿಟಲ್ ಪ್ರಪಂಚವನ್ನು ನ್ಯಾವಿಗೇಟ್ ಮಾಡಬಹುದು.
-
ನಿಯಂತ್ರಿಸಿದ ಖಾತೆಯ ಮೂಲಕ ನಿಮ್ಮ ಮಗು Google Assistant ಅನ್ನು ಪ್ರವೇಶಿಸಲು ಅನುಮತಿಸಿ
Family Link ಮೂಲಕ ನಿರ್ವಹಿಸಲ್ಪಟ್ಟ ತಮ್ಮ ಸ್ವಂತ ಖಾತೆಯನ್ನು ಬಳಸಿಕೊಂಡು Assistant ಅನ್ನು-ಸಕ್ರಿಯಗೊಳಿಸಿದ ಸಾಧನಗಳಿಗೆ ಮಕ್ಕಳು ಲಾಗ್ ಇನ್ ಮಾಡಬಹುದು. ಅವರು ತಮ್ಮ ಸ್ವಂತದ ವೈಯಕ್ತೀಕರಿಸಿದ ಅಸಿಸ್ಟೆಂಟ್ ಅನುಭವವನ್ನು ಪಡೆಯುತ್ತಾರೆ ಮತ್ತು ಕುಟುಂಬಗಳಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಆಟಗಳು, ಚಟುವಟಿಕೆಗಳು ಮತ್ತು ಕಥೆಗಳಿಗೆ ಪ್ರವೇಶಿಸುತ್ತಾರೆ. ವಹಿವಾಟುಗಳನ್ನು ನಡೆಸದಂತೆ ಮಕ್ಕಳಿಗೆ ನಿರ್ಬಂಧ ಹೇರಲಾಗುತ್ತದೆ ಮತ್ತು ತಮ್ಮ ಮಕ್ಕಳು Assistant ನಲ್ಲಿ ಮೂರನೇ ವ್ಯಕ್ತಿಯ ಅನುಭವಗಳಿಗೆ ಪ್ರವೇಶಿಸಬೇಕೇ, ಬೇಡವೇ ಎಂಬುದನ್ನು ಪೋಷಕರು ನಿರ್ಧರಿಸಬಹುದು.
-
Chrome ಮೂಲಕ ವೆಬ್ಸೈಟ್ಗಳಿಗೆ ನಿಮ್ಮ ಮಗುವಿನ ಪ್ರವೇಶವನ್ನು ನಿರ್ವಹಿಸಿ
ನಿಮ್ಮ ಮಗು ತಮ್ಮ Android ಅಥವಾ Chrome OS ಸಾಧನದಲ್ಲಿ Chrome ಬ್ರೌಸರ್ ಬಳಸುತ್ತಿರುವಾಗ ಅವರು ನಿರ್ದಿಷ್ಟ ವೆಬ್ಸೈಟ್ಗಳಿಗೆ ಪ್ರವೇಶಿಸುವ ಸಾಧ್ಯತೆಗಳನ್ನು ನೀವು ನಿರ್ವಹಿಸಬಹುದು. ನಿಮಗೆ ಸೂಕ್ತವೆನಿಸುವ ವೆಬ್ಸೈಟ್ಗಳಿಗೆ ಮಾತ್ರವೇ ನಿಮ್ಮ ಮಗುವಿನ ಪ್ರವೇಶವನ್ನು ಸೀಮಿತಗೊಳಿಸಬಹುದು ಮತ್ತು ಅವರು ಭೇಟಿ ನೀಡಬಾರದೆಂದು ನೀವು ಬಯಸುವ ನಿರ್ದಿಷ್ಟ ಸೈಟ್ಗಳನ್ನು ನಿರ್ಬಂಧಿಸಬಹುದು.
-
Search ನಲ್ಲಿನ ಅಶ್ಲೀಲ ಫಲಿತಾಂಶಗಳನ್ನು ಫಿಲ್ಟರ್ ಮಾಡಿ
ಹೆಚ್ಚುವರಿ ಸುರಕ್ಷತಾ ಪದರಕ್ಕಾಗಿ, ಪೋರ್ನೋಗ್ರಫಿಯಂತಹ ಅತ್ಯಂತ ಅಶ್ಲೀಲ ಫಲಿತಾಂಶಗಳನ್ನು ಫಿಲ್ಟರ್ ಮಾಡಲು ಸಹಾಯ ಮಾಡಲು, ನೀವು SafeSearch ಅನ್ನು ಆನ್ ಮಾಡಬಹುದು. Family Link ಮೂಲಕ ನಿರ್ವಹಿಸುವ ಖಾತೆಗಳನ್ನು ಹೊಂದಿರುವ 13 ವರ್ಷಕ್ಕಿಂತ ಕೆಳಗಿನ (ಅಥವಾ ನಿಮ್ಮ ದೇಶದಲ್ಲಿ ಅನ್ವಯವಾಗುವ ವಯಸ್ಸು) ಸೈನ್-ಇನ್ ಮಾಡಿದ ಬಳಕೆದಾರರಿಗೆ ಸುರಕ್ಷಿತ ಹುಡುಕಾಟವು ಡೀಫಾಲ್ಟ್ ಆಗಿ ಸಕ್ರಿಯಗೊಂಡಿರುತ್ತದೆ. ಇದನ್ನು ಆಫ್ ಮಾಡಲು ಅಥವಾ ಎಲ್ಲವನ್ನೂ ಒಟ್ಟಾಗಿ Search ಅನ್ನು ನಿರ್ಬಂಧಿಸಲು ಕೂಡ ಪೋಷಕರು ಆಯ್ಕೆಯನ್ನು ಹೊಂದಿರುತ್ತಾರೆ.