ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಇಂದಿನ ಮಕ್ಕಳು ಹಿಂದಿನ ತಲೆಮಾರಿನವರಂತೆ ಬೆಳೆದ ನಂತರ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿಲ್ಲ, ಬದಲಾಗಿ ತಂತ್ರಜ್ಞಾನದೊಂದಿಗೆ ಬೆಳೆಯುತ್ತಿದ್ದಾರೆ. ಆದ್ದರಿಂದ, ನಿಮ್ಮ ಕುಟುಂಬಕ್ಕೆ ಸೂಕ್ತವಾದ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಬಳಕೆಯ ಮಿತಿಗಳನ್ನು ಹೊಂದಿಸಲು ನಿಮಗೆ ಸಹಾಯ ಮಾಡಲು, ನಾವು ನೇರವಾಗಿ ತಜ್ಞರು ಮತ್ತು ಶಿಕ್ಷಕರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ.
ಫ್ಯಾಮಿಲಿ ಲಿಂಕ್
ಪೋಷಕರ ನಿಯಂತ್ರಣಗಳನ್ನು ಸೆಟಪ್ ಮಾಡಿ
ನಿಮ್ಮ ಮಗುವು ಆನ್‌ಲೈನ್‌ನಲ್ಲಿ ಎಕ್ಸ್‌ಪ್ಲೋರ್ ಮಾಡುವಾಗ ಅವರ ಖಾತೆ ಮತ್ತು ಸಾಧನಗಳನ್ನು ನಿರ್ವಹಿಸಲು ಫ್ಯಾಮಿಲಿ ಲಿಂಕ್ ನಿಮಗೆ ಸಹಾಯ ಮಾಡುತ್ತದೆ. ವೀಕ್ಷಣಾವಧಿಯ ಮಿತಿಗಳನ್ನು ಸೆಟ್ ಮಾಡಿ, ನಿಮ್ಮ ಮಗು ನೋಡಬಹುದಾದ ವಿಷಯವನ್ನು ನಿರ್ವಹಿಸಿ ಹಾಗೂ ಅವರು ಬಳಸುತ್ತಿರುವ ಸಾಧನದ ಸ್ಥಳವನ್ನು ತಿಳಿದುಕೊಳ್ಳಿ.
ಅನುಭವವನ್ನು ನಮ್ಮ ಪ್ರಾಡಕ್ಟ್‌ಗಳಾದ್ಯಂತ
ನಿರ್ಮಿಸುವುದು.
ಕುಟುಂಬ-ಸ್ನೇಹಿ ಅನುಭವಗಳು
ಕುಟುಂಬಗಳಿಗಾಗಿ ರಚಿಸಲಾದ ಫೀಚರ್‌ಗಳನ್ನು ಎಕ್ಸ್‌ಪ್ಲೋರ್ ಮಾಡಿ
ನಿಮ್ಮ ಕುಟುಂಬಕ್ಕೆ ಹೆಚ್ಚು ಆನಂದದಾಯಕವನ್ನಾಗಿ ಮಾಡುವ ಸಲುವಾಗಿ – Play ಸ್ಟೋರ್, Assistant, YouTube ಹಾಗೂ ಮುಂತಾದ ನಮ್ಮ ಹಲವಾರು ಪ್ರಾಡಕ್ಟ್‌ಗಳಲ್ಲಿ – ಸ್ಮಾರ್ಟ್ ಫಿಲ್ಟರ್‌ಗಳು, ಸೈಟ್ ಬ್ಲಾಕರ್‌ಗಳು ಮತ್ತು ವಿಷಯ ರೇಟಿಂಗ್‌ಗಳ ರೀತಿಯ ವಿಶೇಷ ಫೀಚರ್‌ಗಳನ್ನು ನಾವು ನಿರ್ಮಿಸುತ್ತೇವೆ.