ಮ್ಯೂನಿಕ್‌ನಲ್ಲಿ ಗೌಪ್ಯತೆ ಮತ್ತು
ಭದ್ರತಾ ಎಂಜಿನಿಯರಿಂಗ್
ಅನ್ನು ಎದುರಿಸುವುದು.

GSEC ಮ್ಯೂನಿಕ್‌, ಯುರೋಪಿನ ಹೃದಯ ಭಾಗದಲ್ಲಿರುವ Google ನ ಗೌಪ್ಯತೆ ಮತ್ತು ಭದ್ರತಾ ಎಂಜಿನಿಯರಿಂಗ್‌ನ ಜಾಗತಿಕ ಹಬ್ ಆಗಿದೆ. 2019 ರಲ್ಲಿ ಸ್ಥಾಪಿಸಲಾಯಿತು, ಜನರನ್ನು ಆನ್‌ಲೈನ್‌ನಲ್ಲಿ ಎಲ್ಲಾ ಕಡೆ ಸುರಕ್ಷಿತವಾಗಿರಿಸಲು ಮತ್ತು ಅವರ ಮಾಹಿತಿಯನ್ನು ಖಾಸಗಿಯಾಗಿರಿಸಲು ಮತ್ತು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ಉತ್ಪನ್ನಗಳು ಮತ್ತು ಟೂಲ್‌ಗಳನ್ನು ರಚಿಸಲು 300+ ಮೀಸಲು ಎಂಜಿನಿಯರ್‌ಗಳು ಇದರಲ್ಲಿ ಕೆಲಸ ಮಾಡುತ್ತಾರೆ.

GSEC ಮ್ಯೂನಿಕ್‌ನ ಉಪಕ್ರಮಗಳ ಕುರಿತ ವಿವರವಾದ ನೋಟ.

GSEC ಮ್ಯೂನಿಕ್, ಆನ್‌ಲೈನ್‌ನಲ್ಲಿ ಲಕ್ಷಾಂತರ ಜನರನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ಉತ್ಪನ್ನಗಳು ಮತ್ತು ಪರಿಕರಗಳನ್ನು ಅಭಿವೃದ್ಧಿಪಡಿಸುತ್ತದೆ. ಅತ್ಯುತ್ತಮ ದರ್ಜೆಯ ಗೌಪ್ಯತೆ ಮತ್ತು ಸುರಕ್ಷತೆಯನ್ನು ಎಲ್ಲರಿಗೂ ಸಮಾನವಾಗಿ ಲಭ್ಯವಾಗುವಂತೆ, ಈ ಬಳಸಲು ಸುಲಭವಾದ ನಿಯಂತ್ರಣಗಳು, ಬಿಲ್ಟ್-ಇನ್ ರಕ್ಷಣೆ ಮತ್ತು ಓಪನ್ ಸೋರ್ಸ್ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಲಾಗಿದೆ.

ಪಾಸ್‌ವರ್ಡ್ ನಿರ್ವಾಹಕ

ನಿಮ್ಮ ಪಾಸ್‌ವರ್ಡ್‌ಗಳನ್ನು ನಿರ್ವಹಿಸಲು ಸುರಕ್ಷಿತ ಮಾರ್ಗ

ನಮ್ಮ ಪಾಸ್‌ವರ್ಡ್ ನಿರ್ವಾಹಕವನ್ನು Chrome, Android ಮತ್ತು iOS ನಲ್ಲಿನ Chrome ನಲ್ಲಿ ನೇರವಾಗಿ ನಿರ್ಮಿಸಲಾಗಿದೆ, ನಿಮ್ಮ ಎಲ್ಲಾ ಖಾತೆಗಳನ್ನು ಆನ್‌ಲೈನ್‌ನಲ್ಲಿ ರಕ್ಷಿಸಲು ಸುರಕ್ಷಿತ ಮಾರ್ಗವಾಗಿದ್ದು ಇದು ನಿಮ್ಮ ಉಳಿಸಿದ ಪಾಸ್‌ವರ್ಡ್‌ಗಳನ್ನು Google ನ ಸ್ವಯಂಚಾಲಿತ ರಕ್ಷಣೆಗಳಿಂದ 24/7 ರಕ್ಷಿಸುತ್ತದೆ ಮತ್ತು ನೀವು ಸೈಟ್ ಅಥವಾ ಆ್ಯಪ್‌ವೊಂದರ ಉಳಿಸಿರುವ ಪಾಸ್‌ವರ್ಡ್ ಅಪಾಯಕ್ಕೀಡಾಗಿರುವುದು ನಮಗೆ ಕಂಡುಬಂದರೆ ನಾವು ನಿಮಗೆ ತಿಳಿಸುತ್ತೇವೆ. ಅಲ್ಲದೆ, ಹೊಸ ಸೈಟ್ ಅಥವಾ ಆ್ಯಪ್‌ಗೆ ಸೈನ್ ಅಪ್ ಮಾಡುವಾಗ, ಪಾಸ್‌ವರ್ಡ್ ನಿರ್ವಾಹಕ ಸ್ವಯಂಚಾಲಿತವಾಗಿ ಒಂದು ಅನನ್ಯ ಸಂಕೀರ್ಣ ಪಾಸ್‌ವರ್ಡ್ ಅನ್ನು ರಚಿಸಬಹುದು ಮತ್ತು ನಿಮ್ಮ ಮುಂದಿನ ಲಾಗಿನ್‌ನಲ್ಲಿ ಅದು ನಿಮಗಾಗಿ ಸ್ವಯಂಚಾಲಿತವಾಗಿ ಭರ್ತಿ ಮಾಡುತ್ತದೆ.

GSEC ಮ್ಯೂನಿಕ್‌ ಹಿಂದಿರುವ
ಜನರನ್ನು ಭೇಟಿ ಮಾಡಿ.

ಮ್ಯೂನಿಕ್ ಮೂಲದ ಆದರೆ ಜರ್ಮನಿಯಿಂದ ಮತ್ತು ಅದರಾಚೆ ಬಂದಿರುವ, GSEC ಮ್ಯೂನಿಕ್‌ನ 300+ ಎಂಜಿನಿಯರ್‌ಗಳು ಇಡೀ ವಿಶ್ವಕ್ಕೆ ಸುರಕ್ಷಿತ ಇಂಟರ್‌ನೆಟ್ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ.

ವರ್ನರ್ ಅನ್ಟರ್ಹೋಫರ್ ಫೋಟೋ

"ಬಳಕೆದಾರರು ತಮಗೆ ಆರಾಮದಾಯಕವೆಂದು ಭಾವಿಸುವ ಡೇಟಾ ಸಂಗ್ರಹಣೆಯ ಮಟ್ಟವನ್ನು ಆಯ್ಕೆಮಾಡಬಹುದು ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ – ಮತ್ತು ಅವರು ಹಾಗೆ ಮಾಡಲು ಬಯಸಿದರೆ, ಡೇಟಾವನ್ನು ಅಳಿಸಲು ಅವರಿಗೆ ಟೂಲ್‌ಗಳನ್ನು ನೀಡುತ್ತೇವೆ."

Werner Unterhofer

TECHNICAL PROGRAM MANAGER

ಜಾನ್-ಫಿಲಿಪ್ ವೆಬರ್

“ಗೌಪ್ಯತೆ ಮತ್ತು ಭದ್ರತೆ ಅತ್ಯಗತ್ಯವಾಗಿವೆ ಮತ್ತು ಅತ್ಯಂತ ವೈಯಕ್ತಿಕವಾಗಿವೆ; ಮತ್ತು ಎರಡನ್ನೂ ಸುಲಭವಾಗಿ ಪಡೆಯಲು ಸಾಧ್ಯವಾಗಬೇಕು.”

Jan-Philipp Weber

SOFTWARE ENGINEER

ಎಲಿಸ್ ಬೆಲ್ಲಾಮಿ

“ಬಳಕೆದಾರರು Google ಜೊತೆಗೆ ಹಂಚಿಕೊಳ್ಳಲು ಸೂಕ್ತವಾಗಿರುವ ಡೇಟಾವನ್ನು ನಿರ್ಧರಿಸಲು ಮತ್ತು ಆ ಡೇಟಾ ಎಷ್ಟು ಸಮಯದವರೆಗೆ ಸಹಾಯಕವಾಗಿದೆಯೆಂದು ಪರಿಗಣಿಸುತ್ತಾರೆಂದು ನಿರ್ಧರಿಸಲು ನಿಯಂತ್ರಣಗಳನ್ನು ನೀಡುವ ಗುರಿ ಹೊಂದಿದ್ದೇವೆ. ಅರ್ಥಗರ್ಭಿತ ವಿನ್ಯಾಸಗಳು ಬಳಕೆದಾರರು ತಮ್ಮ ಡೇಟಾ ಮತ್ತು ಗೌಪ್ಯತೆ ಆದ್ಯತೆಗಳನ್ನು ಹುಡುಕುವುದನ್ನು, ಬಳಸುವುದನ್ನು ಮತ್ತು ನಿರ್ವಹಿಸುವುದನ್ನು ಸರಳವಾಗಿಸುತ್ತದೆ.”

Elyse Bellamy

INTERACTION DESIGNER

ಜೋಕೆನ್ ಐಸಿಂಗರ್

“ಬಳಕೆದಾರರು ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲದೇ ತಮ್ಮ ಆನ್‌ಲೈನ್ ಗೌಪ್ಯತೆ ಮತ್ತು ಸುರಕ್ಷತೆಯನ್ನು ನಿಯಂತ್ರಿಸಬೇಕೆಂದು ನಾವು ಬಯಸುತ್ತೇವೆ. ಬಳಕೆದಾರರು ಇಂಟರ್ನೆಟ್ ಬ್ರೌಸ್ ಮಾಡಲು ಬಯಸುತ್ತಾರೆ ಮತ್ತು ಅವರು ಬ್ರೌಸ್ ಮಾಡಿದಾಗ ನಾವು ಅವರಿಗೆ ಸುರಕ್ಷಿತ ಮತ್ತು ಸಮಂಜಸವಾದ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಒದಗಿಸಬೇಕು.”

Jochen Eisinger

DIRECTOR OF ENGINEERING

ಆಡ್ರೆ ಆ್ಯನ್

“ಮಾಹಿತಿ ಮೂಲಗಳು ಅಥವಾ ತಾಂತ್ರಿಕ ಕೌಶಲ್ಯಗಳೇನೇ ಇದ್ದರೂ ಪ್ರತಿಯೊಬ್ಬರಿಗೂ ಖಾಸಗಿತನದ ಹಕ್ಕಿದೆ. ಪ್ರತಿಯೊಬ್ಬರೂ ತಮಗೆ ಸೂಕ್ತವಾದುದನ್ನು ಮತ್ತು ಆ ಕ್ಷಣದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ಆಯ್ಕೆಮಾಡಲು ಅನುವು ಮಾಡಿಕೊಡುವ ಪರಿಕರಗಳನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ.”

Audrey An

PRODUCT MANAGER

ಸಬಿನೆ ಬೊರ್ಸೆ

“ಜನರು ತಮ್ಮ ಅನುಭವದ ನಿಯಂತ್ರಣವನ್ನು ಅನುಭವಿಸುತ್ತಿರುವಾಗ ಸುರಕ್ಷಿತವಾಗಿ ಇಂಟರ್ನೆಟ್ ಬ್ರೌಸ್ ಮಾಡಲು ಸಾಧ್ಯವಾಗಬೇಕು. ಬಲವಾದ ಡೀಫಾಲ್ಟ್ ರಕ್ಷಣೆಗಳು ಮತ್ತು ಬಳಸಲು ಸುಲಭವಾದ ಗೌಪ್ಯತೆ ಮತ್ತು ಭದ್ರತಾ ಸೆಟ್ಟಿಂಗ್‌ಗಳು ಆನ್‌ಲೈನ್‌ನಲ್ಲಿ ಬಳಕೆದಾರರ ಸುರಕ್ಷತೆ ಮತ್ತು ನಮ್ಮ ದೈನಂದಿನ ಮಹತ್ವಾಕಾಂಕ್ಷೆಯ ಮೂಲಾಧಾರಗಳಾಗಿವೆ.”

Sabine Borsay

PRODUCT MANAGER

Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರದಲ್ಲಿ ತೆರೆಮರೆಯ ನೋಟಗಳು.

ಇಂಟರ್ನೆಟ್ ಸುರಕ್ಷತೆಯ ಕುರಿತು ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳಲು ನಾವು ಪ್ರಪಂಚದಾದ್ಯಂತದ ಬಳಕೆದಾರರ ಜೊತೆಗೆ ಮಾತನಾಡುತ್ತೇವೆ. ಆನ್‌ಲೈನ್‌ನಲ್ಲಿ ಸುರಕ್ಷತೆಯನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು, ಮುಂದಿನ ಪೀಳಿಗೆಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಮ್ಮ ಎಂಜಿನಿಯರ್‌ಗಳ ತಂಡಗಳಿಗೆ ಸ್ಥಳ, ಸ್ಫೂರ್ತಿ ಮತ್ತು ಬೆಂಬಲವನ್ನು ನೀಡುತ್ತೇವೆ.

ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು

ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.