ಇಂಟರ್ನೆಟ್ ಅನ್ನು ಎಲ್ಲರಿಗಾಗಿ ಸುರಕ್ಷಿತವಾಗಿಸಲು Google ಪ್ರತಿದಿನ ಕೆಲಸ ಮಾಡುತ್ತದೆ
ಜನರು, ವ್ಯಾಪಾರಗಳು ಮತ್ತು ಸರ್ಕಾರಗಳನ್ನು ರಕ್ಷಿಸಿ
ಸೆಕ್ಯುರಿಟಿಯು ನಮ್ಮ ಉತ್ಪನ್ನ ತಂತ್ರದ ಮೂಲಾಧಾರವಾಗಿದೆ. ಅದಕ್ಕಾಗಿಯೇ ನಮ್ಮ ಎಲ್ಲಾ ಉತ್ಪನ್ನಗಳು ಡೀಫಾಲ್ಟ್ ಆಗಿ ಸುರಕ್ಷಿತವಾಗಿರಿಸುವ ಅಂತರ್ನಿರ್ಮಿತ ರಕ್ಷಣೆಗಳನ್ನು ಹೊಂದಿವೆ.
ಇನ್ನಷ್ಟು ತಿಳಿಯಿರಿಸೈಬರ್ಸೆಕ್ಯೂರಿಟಿಯ ಅಪಾಯಗಳನ್ನು ಪರಿಹರಿಸಲು ಸಮಾಜವನ್ನು ಸಬಲೀಕರಿಸಿ
ಓಪನ್ ಸೋರ್ಸ್ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ನಾವು ಸಮಾಜಗಳಿಗೆ ಅಧಿಕಾರ ನೀಡುತ್ತೇವೆ ಮತ್ತು ಇಕೊಸಿಸ್ಟಂಗಳನ್ನು ಸುರಕ್ಷಿತವಾಗಿಡಲು ಉದ್ಯಮದ ಜೊತೆಗೆ ನಮ್ಮ ಜ್ಞಾನ ಮತ್ತು ಪರಿಣತಿಯನ್ನು ಪಾರದರ್ಶಕವಾಗಿ ಹಂಚಿಕೊಳ್ಳುತ್ತೇವೆ.
ಇನ್ನಷ್ಟು ತಿಳಿಯಿರಿಭವಿಷ್ಯದ ತಂತ್ರಜ್ಞಾನಗಳನ್ನು ಸುಧಾರಿಸಿ
ಮುಂದಿನ ಪೀಳಿಗೆಯ ಸೈಬರ್ ಬೆದರಿಕೆಗಳಿಂದ ಸಮಾಜಗಳನ್ನು ರಕ್ಷಿಸಲು ನಾವು ಬಯಸುತ್ತೇವೆ. ನಮ್ಮ AI ಪರಿಣತಿಯನ್ನು ನಿರ್ಮಿಸುವ ಮೂಲಕ, ಭದ್ರತಾ ಆವಿಷ್ಕಾರದ ಗಡಿಗಳನ್ನು ಮುಂದೆ ತಳ್ಳಲು ನಾವು ಮುಂದಿನ ವೇವ್ ಆರ್ಕಿಟೆಕ್ಚರ್ಗಳನ್ನು ವಿನ್ಯಾಸಗೊಳಿಸುತ್ತಿದ್ದೇವೆ.
ಇನ್ನಷ್ಟು ತಿಳಿಯಿರಿನಮ್ಮ ಉತ್ಪನ್ನ ಅಭಿವೃದ್ಧಿ ಮತ್ತು ಕ್ಲೌಡ್ ಮೂಲಸೌಕರ್ಯದ ಪ್ರತಿಯೊಂದು ಹಂತಕ್ಕೂ ನಾವು ಸುಧಾರಿತ ಸೆಕ್ಯುರಿಟಿಯನ್ನು ನಿರ್ಮಿಸುತ್ತೇವೆ. ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಮತ್ತು ಇಂಟರ್ನೆಟ್ ಅನ್ನು ಸುರಕ್ಷಿತವಾಗಿ ಆ್ಯಕ್ಸೆಸ್ ಮಾಡಲು ಸಹಾಯ ಮಾಡುವಾಗ ತಮ್ಮ IT ಸೆಕ್ಯುರಿಟಿಯನ್ನು ಆಧುನೀಕರಿಸಲು ಮತ್ತು ಬಲಪಡಿಸಲು ಇದು ಸಂಸ್ಥೆಗಳಿಗೆ ಅವಕಾಶ ನೀಡುತ್ತದೆ.
-
ಹಾನಿಕಾರಕ ಕಂಟೆಂಟ್ ವಿರುದ್ಧ ಹೋರಾಡುವುದು
ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಾನೂನುಬಾಹಿರ ಮತ್ತು ಹಾನಿಕಾರಕ ಕಂಟೆಂಟ್ ಅನ್ನು ಪತ್ತೆ ಮಾಡುವ ಮತ್ತು ತೆಗೆದುಹಾಕುವ ಮೂಲಕ ನಾವು ದುರುಪಯೋಗವನ್ನು ತಡೆಯುತ್ತೇವೆ ಮತ್ತು ಬಳಕೆದಾರರನ್ನು, ವಿಶೇಷವಾಗಿ ಮಕ್ಕಳನ್ನು ರಕ್ಷಿಸುತ್ತೇವೆ. ಮೋಸಗೊಳಿಸುವ ಆ್ಯಡ್ಗಳು, ತಪ್ಪು ಮಾಹಿತಿ, ದ್ವೇಷ, ಸ್ಕ್ಯಾಮ್ಗಳು ಮತ್ತು ಮಕ್ಕಳ ಸುರಕ್ಷತೆ ಸೇರಿದಂತೆ, ನಾವು ಇದನ್ನು ಹಾನಿಯ ವರ್ಗಗಳಾದ್ಯಂತ ಮಾಡುತ್ತೇವೆ.
ಬಳಕೆದಾರರ ರಕ್ಷಣೆಗೆ ಆದ್ಯತೆ ನೀಡುವ ಜಾಗತಿಕ ಮಾನದಂಡಗಳನ್ನು ಮುನ್ನಡೆಸಲು, ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ಹಾಗೂ ಇಂಟರ್ನೆಟ್ ಅನ್ನು ಎಲ್ಲರಿಗಾಗಿ ಮುಕ್ತವಾಗಿ ಮತ್ತು ಸುರಕ್ಷಿತವಾಗಿರಿಸಲು ಬೆದರಿಕೆ ಗುಪ್ತಚರವನ್ನು ಹಂಚಿಕೊಳ್ಳಲು ನಾವು ಸೈಬರ್ ಸೆಕ್ಯುರಿಟಿ ನಾಯಕರು, ಸರ್ಕಾರಗಳು ಮತ್ತು ಸೆಕ್ಯುರಿಟಿ ಸಮುದಾಯಗಳ ಜೊತೆಗೆ ಪಾಲುದಾರರಾಗುತ್ತಿದ್ದೇವೆ.
-
ಸೈಬರ್ ವರ್ಕ್ಫೋರ್ಸ್ ಅನ್ನು ಬಲಪಡಿಸುವುದು
ಅನುಭವ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆಯೇ — ಸೈಬರ್ಸೆಕ್ಯುರಿಟಿಯಲ್ಲಿ ಇನ್ನಷ್ಟು ವೃತ್ತಿಗಳನ್ನು ಪ್ರಾರಂಭಿಸುವುದಕ್ಕೆ ಸಹಾಯ ಮಾಡಲು ನಮ್ಮ ಪರಿಣತಿಯನ್ನು ಹಂಚಿಕೊಳ್ಳುವ ಮೂಲಕ, ವೃತ್ತಿ ಮಾರ್ಗಗಳನ್ನು ವಿಸ್ತರಿಸುವ ಹಾಗೂ ಬಲವಾದ ಉದ್ಯಮ ಮತ್ತು ಸರ್ಕಾರಿ ಪಾಲುದಾರಿಕೆಗಳನ್ನು ರೂಪಿಸುವ ಮೂಲಕ ನಾವು ಸೈಬರ್ ವರ್ಕ್ಫೋರ್ಸ್ ಅನ್ನು ಸಬಲೀಕರಿಸುತ್ತಿದ್ದೇವೆ — ಮತ್ತು ಎಲ್ಲರಿಗೂ ಸುರಕ್ಷಿತ ಜಗತ್ತನ್ನು ನಿರ್ಮಿಸುತ್ತೇವೆ.
-
Mandiant Threat Intelligence
ಪ್ರಪಂಚದ ಅತಿದೊಡ್ಡ ಸಂಸ್ಥೆಗಳ ಜೊತೆಗೆ ಸೈಬರ್ಸೆಕ್ಯುರಿಟಿಯ ಮುಂಚೂಣಿಯಲ್ಲಿ ಪಡೆದ ನೈಜ-ಸಮಯದ, ಇನ್-ಡೆಪ್ತ್ ಥ್ರೆಟ್ ಇಂಟೆಲ್ ಅನ್ನು Mandiant ತರುತ್ತದೆ. Google ಕ್ಲೌಡ್ ಸೆಕ್ಯುರಿಟಿಯೊಂದಿಗೆ ಸಂಯೋಜಿಸಲಾಗಿದ್ದು, ನಾವು ಉದ್ಯಮಗಳು ಮತ್ತು ಸಾರ್ವಜನಿಕ ವಲಯದ ಏಜೆನ್ಸಿಗಳು ಸೆಕ್ಯುರಿಟಿಯ ಲೈಫ್ಸೈಕಲ್ನ ಉದ್ದಕ್ಕೂ ಸುರಕ್ಷಿತವಾಗಿರಲು ಸಹಾಯ ಮಾಡುತ್ತೇವೆ.
AI, ಹಾರ್ಡ್ವೇರ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ಗಾಗಿ ಅಂತರಾಷ್ಟ್ರೀಯ ಮಾನದಂಡಗಳನ್ನು ಚಾಲನೆ ಮಾಡುವ ಜೊತೆಗೆ ಅವರ ಗೌಪ್ಯತೆಯನ್ನು ರಕ್ಷಿಸುವ ಮೂಲಕ ದುರ್ಬಲ ಬಳಕೆದಾರರನ್ನು ಆನ್ಲೈನ್ ದಾಳಿಗಳಿಂದ ರಕ್ಷಿಸಲು ನಾವು ಕೆಲಸ ಮಾಡುತ್ತೇವೆ.
-
ವಿಶ್ವಾಸಾರ್ಹ ಹಾರ್ಡ್ವೇರ್
ಅತಿ ಪ್ರಬಲವಾದ ಖಾತೆ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಸೆಕ್ಯುರಿಟಿ ಕೀಗಳು ಸಾರ್ವಜನಿಕ ಕೀ ಕ್ರಿಪ್ಟೊಗ್ರಫಿಯನ್ನು ಬಳಸುತ್ತವೆ. Titan ಸೆಕ್ಯುರಿಟಿ ಕೀಗಳನ್ನು ಫಿಶಿಂಗ್ ಅನ್ನು ತಡೆಗಟ್ಟಲು ವಿನ್ಯಾಸಗೊಳಿಸಲಾದ ಹಾರ್ಡ್ವೇರ್ ಚಿಪ್ ಜೊತೆ ನಿರ್ಮಿಸಲಾಗಿದೆ ಹಾಗೂ ಫರ್ಮ್ವೇರ್ ಮತ್ತು ರಹಸ್ಯ ಕೀ ವಸ್ತುಗಳನ್ನು ಹೊರತೆಗೆಯುವ ಗುರಿಯನ್ನು ಹೊಂದಿದೆ.
-
Google ವಿಶ್ವಾಸ ಸೇವೆಗಳು
GTS ಎಂಬುದು ಕನೆಕ್ಷನ್ಗಳನ್ನು ದೃಢೀಕರಿಸಲು ಮತ್ತು ಎನ್ಕ್ರಿಪ್ಟ್ ಮಾಡಲು Google ನ ಭೌಗೋಳಿಕವಾಗಿ ವಿತರಿಸಲಾದ ಮೂಲಸೌಕರ್ಯದ ಸಹಾಯದೊಂದಿಗೆ ನಿರ್ಮಿಸಲಾದ ಉಚಿತ ಪ್ರಮಾಣಪತ್ರ ಪ್ರಾಧಿಕಾರವಾಗಿದೆ. Google ನಮ್ಮ ಸ್ವಂತ ಸೈಟ್ಗಳನ್ನು GTS ಮೂಲಕ ಸುರಕ್ಷಿತಗೊಳಿಸುತ್ತದೆ ಹಾಗೂ ಈಗ ಅದೇ ತಂತ್ರಜ್ಞಾನವನ್ನು ಬಳಸಲು ಎಲ್ಲಾ ವೆಬ್ಸೈಟ್ಗಳಿಗೆ ಒದಗಿಸುತ್ತದೆ.
ಸೈಬರ್ ಸೆಕ್ಯುರಿಟಿಯು ತಂಡದ ಕ್ರೀಡೆಯಾಗಿದೆ ಮತ್ತು ನಾವು ಒಟ್ಟಿಗೆ ಕೆಲಸ ಮಾಡಿದಾಗ, ನಾವು ಆವಿಷ್ಕಾರಗಳನ್ನು ಉತ್ತೇಜಿಸಬಹುದು ಮತ್ತು ಈ ಸಂಕೀರ್ಣ, ವೇಗವಾಗಿ ವಿಕಸಿಸುವ ಲ್ಯಾಂಡ್ಸ್ಕೇಪ್ನಲ್ಲಿ ಎಲ್ಲರಿಗೂ ಪ್ರಯೋಜನವನ್ನು ನೀಡುವ ಅತ್ಯುತ್ತಮ ಅಭ್ಯಾಸಗಳನ್ನು ಮುನ್ನಡೆಸಬಹುದು.
ನಮ್ಮ ತಂಡಗಳು ಪ್ರಪಂಚದಾದ್ಯಂತ ಗೌಪ್ಯತೆ, ಸೆಕ್ಯುರಿಟಿ, ಕಂಟೆಂಟ್ ಜವಾಬ್ದಾರಿ ಮತ್ತು ಕುಟುಂಬದ ಸುರಕ್ಷತೆಯಾದ್ಯಂತ ಕಾರ್ಯನಿರ್ವಹಿಸುತ್ತವೆ. ಅನುಭವಿ ಇಂಜಿನಿಯರ್ಗಳು, ನೀತಿ ತಜ್ಞರು ಮತ್ತು ವಿಷಯ ತಜ್ಞರ ನೇತೃತ್ವದಲ್ಲಿ ನಮ್ಮ GSEC ಗಳು ಈ ಕೆಲಸಕ್ಕೆ ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತವೆ.
ನಮ್ಮ ಜಾಗತಿಕ ಸಮುದಾಯವು ನಮ್ಮ ಉತ್ಪನ್ನಗಳನ್ನು ಅವರು ಉದ್ದೇಶಿಸಿರುವ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಮತ್ತು ಇಂಟರ್ನೆಟ್ ಅನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು Bug Hunter ಗಳು ಅದರ ಅಡಿಯಲ್ಲಿ ಇಣುಕಿ ನೋಡುತ್ತಾರೆ.
ಸರ್ಕಾರಗಳು, ನಿರ್ಣಾಯಕ ಮೂಲಸೌಕರ್ಯ, ಉದ್ಯಮಗಳು ಮತ್ತು ಸಣ್ಣ ವ್ಯಾಪಾರಗಳ ಸೆಕ್ಯುರಿಟಿ ಮತ್ತು ಡಿಜಿಟಲ್ ಪರಿವರ್ತನೆಯನ್ನು ಬೆಂಬಲಿಸಲು ನಾವು ಪ್ರಪಂಚದ ಪ್ರಮುಖ ಸೆಕ್ಯುರಿಟಿ ಸಲಹಾ ತಂಡವನ್ನು ನಿಯೋಜಿಸುತ್ತೇವೆ.
ಸಹಾಯ ಮಾಡುವ ಮಾರ್ಗಗಳನ್ನು ಎಕ್ಸ್ಪ್ಲೋರ್ ಮಾಡಿ.
-
ನಮ್ಮ ಪ್ರೊಡಕ್ಟ್ಗಳಲ್ಲಿGoogle ನ ಎಲ್ಲಾ ಪ್ರೊಡಕ್ಟ್ಗಳಲ್ಲೂ ನಿಮ್ಮ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ.
-
ಸುರಕ್ಷತೆ ಮತ್ತು ಗೌಪ್ಯತೆGoogle ಹೇಗೆ ನಿಮ್ಮ ಖಾಸಗಿ ಮಾಹಿತಿಯನ್ನು ರಕ್ಷಿಸುತ್ತದೆ ಹಾಗೂ ನಿಮ್ಮನ್ನು ನಿಯಂತ್ರಣದಲ್ಲಿರಿಸುತ್ತದೆ ಎಂಬುದನ್ನು ತಿಳಿಯಿರಿ.
-
ಕುಟುಂಬದ ಸುರಕ್ಷತೆನಿಮ್ಮ ಕುಟುಂಬಕ್ಕೆ ಆನ್ಲೈನ್ನಲ್ಲಿ ಯಾವುದು ಸರಿಯಾಗಿದೆ ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ Google ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.