ಭದ್ರತೆಯ ಕುರಿತು ನೀವು
ಎಂದಿಗೂ ಯೋಚಿಸಬೇಕಾಗಿಲ್ಲ.
Chrome ನ ಭದ್ರತಾ ಫೀಚರ್ಗಳು ಮಾಲ್ವೇರ್ ಮತ್ತು ಅಪಾಯಕಾರಿ ಸೈಟ್ಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ನಿಮ್ಮ ಬ್ರೌಸಿಂಗ್ ಅನುಭವದಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಿ.
ಡಿಫಾಲ್ಟ್ ಆಗಿ ಸುರಕ್ಷಿತವಾಗಿದೆ
ಡಿಫಾಲ್ಟ್ ಆಗಿ ಸುರಕ್ಷಿತವಾಗಿದೆ
Chrome ಡಿಫಾಲ್ಟ್ ಆಗಿ ಸುರಕ್ಷಿತವಾಗಿದೆ, ಇದು ನಿಮ್ಮ ಪಾಸ್ವರ್ಡ್ಗಳನ್ನು ಕದಿಯುವ ಅಥವಾ ನಿಮ್ಮ ಕಂಪ್ಯೂಟರ್ಗೆ ಹಾನಿಯುಂಟು ಮಾಡುವಂತಹ ಅಪಾಯಕಾರಿ ಮತ್ತು ಮೋಸಗೊಳಿಸುವ ಸೈಟ್ಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಸೈಟ್ ಪ್ರತ್ಯೇಕಿಸುವಿಕೆ, ಸ್ಯಾಂಡ್ಬಾಕ್ಸಿಂಗ್ ಮತ್ತು ಪ್ರೆಡಿಕ್ಟಿವ್ ಫಿಶಿಂಗ್ ವಿರುದ್ಧ ರಕ್ಷಣೆಗಳಂತಹ ಸುಧಾರಿತ ತಂತ್ರಜ್ಞಾನಗಳು ನಿಮ್ಮನ್ನು ಹಾಗೂ ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸುತ್ತವೆ.
ನೀವು ವೆಬ್ ಅನ್ನು ಬ್ರೌಸ್ ಮಾಡುವಾಗ ಪ್ರಬಲವಾದ ಮತ್ತು ಅನನ್ಯ ಪಾಸ್ವರ್ಡ್ಗಳು
ನೀವು ವೆಬ್ ಅನ್ನು ಬ್ರೌಸ್ ಮಾಡುವಾಗ ಪ್ರಬಲವಾದ ಮತ್ತು ಅನನ್ಯ ಪಾಸ್ವರ್ಡ್ಗಳು
ನಿಮ್ಮ ಡೇಟಾವನ್ನು ಹಲವು ಸೈಟ್ಗಳಿಗೆ ಬಹಿರಂಗಪಡಿಸಬಹುದಾದ ದುರ್ಬಲ ಮತ್ತು ಮರುಬಳಕೆ ಮಾಡಿದ ಪಾಸ್ವರ್ಡ್ಗಳಿಗೆ ವಿದಾಯ ಹೇಳಿ. Chrome ಪ್ರಬಲವಾದ ಮತ್ತು ಅನನ್ಯವಾದ ಪಾಸ್ವರ್ಡ್ಗಳನ್ನು ರಚಿಸಬಹುದು ಮತ್ತು ನಿಮ್ಮ ಲ್ಯಾಪ್ಟಾಪ್ ಅಥವಾ ಮೊಬೈಲ್ ಫೋನ್ನಲ್ಲಿ ವೆಬ್ ಬ್ರೌಸ್ ಮಾಡುವಾಗ ಅವುಗಳನ್ನು ನಿಮಗಾಗಿ ಸ್ವಯಂ-ಭರ್ತಿ ಮಾಡಬಹುದು. ನಿಮ್ಮ ರುಜುವಾತುಗಳು ಅಪಾಯಕ್ಕೀಡಾದರೆ, Chrome ನಿಮ್ಮನ್ನು ಎಚ್ಚರಿಸಬಹುದು.
ಯಾವಾಗಲೂ ಅಪ್ ಟು ಡೇಟ್ ಆಗಿರಿ
ಪ್ರತಿ ಆರು ವಾರಗಳಿಗೊಮ್ಮೆ Chrome ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತಿರುತ್ತದೆ. ಇದರಿಂದ ನೀವು ಯಾವಾಗಲೂ ಇತ್ತೀಚಿನ ಭದ್ರತಾ ಫೀಚರ್ಗಳು ಮತ್ತು ದೋಷ ಪರಿಹಾರಗಳನ್ನು ಪಡೆಯುತ್ತೀರಿ. ಮತ್ತು ಪ್ರಮುಖ ಭದ್ರತಾ ಬಗ್ಗಳಿಗಾಗಿ, ನಾವು 24 ಗಂಟೆಗಳ ಒಳಗೆ ಪರಿಹಾರವನ್ನು ನೀಡುತ್ತೇವೆ – ನೀವು ಏನು ಮಾಡುವುದೂ ಬೇಕಿಲ್ಲ.
ಅದೃಶ್ಯ ಮೋಡ್
ಅದೃಶ್ಯ ಮೋಡ್
ಸಾಧನವನ್ನು ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಜೊತೆ ಹಂಚಿಕೊಂಡಾಗ, ಅದೃಶ್ಯ ಮೋಡ್ ನಿಮಗೆ ಮನಸ್ಸಿನ ಶಾಂತಿಯನ್ನು ನೀಡುತ್ತದೆ. ಅದೃಶ್ಯ ಮೋಡ್ನಲ್ಲಿ ಬ್ರೌಸ್ ಮಾಡಿ ಮತ್ತು ನೀವು ಅವುಗಳನ್ನು ಮುಚ್ಚಿದ ನಂತರ ನಿಮ್ಮ ಅದೃಶ್ಯ ವಿಂಡೋಗಳಿಂದ ನಿಮ್ಮ ಬ್ರೌಸಿಂಗ್ ಇತಿಹಾಸವನ್ನು Chrome ನಿಂದ ಅಳಿಸಲಾಗುತ್ತದೆ.
ಸುರಕ್ಷತೆಯ ಪರಿಶೀಲನೆ
ನಿಮ್ಮ ಬ್ರೌಸಿಂಗ್ ಅನುಭವದ ಒಟ್ಟಾರೆ ಭದ್ರತೆ ಮತ್ತು ಗೌಪ್ಯತೆಯನ್ನು Chrome ನ ಸುರಕ್ಷತಾ ಪರಿಶೀಲನೆಯು ದೃಢೀಕರಿಸಬಹುದು. Chrome ನಲ್ಲಿ ಉಳಿಸಲಾದ ಯಾವುದೇ ಪಾಸ್ವರ್ಡ್ಗಳು ಹೊಂದಾಣಿಕೆಯಾಗಿದ್ದರೆ, ಅಪಾಯಕಾರಿ ವಿಸ್ತರಣೆಗಳನ್ನು ಫ್ಲ್ಯಾಗ್ ಮಾಡುತ್ತದೆ ಮತ್ತು ನಿಮ್ಮ ಭದ್ರತಾ ರಕ್ಷಣೆಗಳು ಅಪ್ ಟು ಡೇಟ್ ಆಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.
ಗೌಪ್ಯತೆ ನಿಯಂತ್ರಣಗಳು
ವೈಯಕ್ತಿಕಗೊಳಿಸಿದ ಫೀಡ್ನಿಂದ ಅನುಕೂಲಕರ ಪಾಸ್ವರ್ಡ್ ನಿರ್ವಹಣೆಯಿಂದ ಸೂಕ್ತವಾದ ಹುಡುಕಾಟದ ಫಲಿತಾಂಶಗಳವರೆಗೆ, ನಿಮ್ಮ Chrome ಅನುಭವವನ್ನು ನಿಮಗಾಗಿ ಸರಿಹೊಂದುವಂತೆ ಮಾಡಬಹುದು. ನಿಮ್ಮ ಸ್ಥಳ ಅಥವಾ ಕ್ಯಾಮರಾ ಪ್ರವೇಶದಂತಹ ವೆಬ್ಸೈಟ್ ಅನುಮತಿಗಳನ್ನು ನಿಯಂತ್ರಿಸುವುದು ಸೇರಿದಂತೆ, ಸಿಂಕ್ ಮತ್ತು Chrome ನ ಗೌಪ್ಯತಾ ನಿಯಂತ್ರಣಗಳ ಜೊತೆಗೆ ನಿಮ್ಮ ಅನುಭವವನ್ನು ಕಸ್ಟಮೈಸ್ ಮಾಡಿ.
ಇನ್ನಷ್ಟು ತಿಳಿಯಿರಿ.